ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಕರ್ನಾಟಕ
ED Raid: ಕಾಂಗ್ರೆಸ್‌ ನಾಯಕಿ ಕುಸುಮಾಗೆ ಇಡಿ ಶಾಕ್‌; ಬೆಂಗಳೂರಿನ ಮನೆಯಲ್ಲಿ ಶೋಧ

ಕಾಂಗ್ರೆಸ್‌ ನಾಯಕಿ ಕುಸುಮಾಗೆ ಇಡಿ ಶಾಕ್‌; ದಾಖಲೆ ಪರಿಶೀಲನೆ

ED Raid: ಕುಸುಮಾ ಅವರ ಸಹೋದರನ ಜತೆ ಕಾಂಗ್ರೆಸ್‌ ಶಾಸಕ ವಿರೇಂದ್ರ ಪಪ್ಪಿ ವ್ಯವಹಾರ ಹೊಂದಿರುವ ಹಿನ್ನೆಲೆಯಲ್ಲಿ ಇಡಿ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ. ಕುಸುಮಾ ಹನುಮಂತರಾಯಪ್ಪ ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿಯಾಗಿದ್ದಾರೆ.

M.Chinnaswamy Stadium: ಚಿನ್ನಸ್ವಾಮಿಯಲ್ಲಿ ಮತ್ತೆ ಕ್ರಿಕೆಟ್‌ ಪಂದ್ಯ ನಡೆಸಲು 17 ಷರತ್ತು!

ಚಿನ್ನಸ್ವಾಮಿಯಲ್ಲಿ ಮತ್ತೆ ಕ್ರಿಕೆಟ್‌ ಪಂದ್ಯ ನಡೆಸಲು 17 ಷರತ್ತು!

ಕೆಲ ದಿನಗಳ ಹಿಂದೆ ಪೊಲೀಸ್‌ ಇಲಾಖೆ ಕ್ರೀಡಾಂಗಣದ ಪರಿಶೀಲನೆ ನಡೆಸಿದ್ದು, ಹಲವು ಲೋಪಗಳನ್ನು ಪತ್ತೆ ಹಚ್ಚಿದೆ. ಈ ಬಗ್ಗೆ ಕೆಎಸ್‌ಸಿಎಗೆ ಪತ್ರ ಬರೆದಿರುವ ಇಲಾಖೆ, ಪಾರ್ಕಿಂಗ್‌, ವೈದ್ಯಕೀಯ ಹಾಗೂ ಭದ್ರತಾ ವ್ಯವಸ್ಥೆಗಳನ್ನು ಸರಿಪಡಿಸುವಂತೆ ಸೂಚಿಸಿ, ಅದಕ್ಕೆ 15 ಇನಗಳ ಗಡುವು ನೀಡಿದೆ ಎಂದು ತಿಳಿದು ಬಂದಿದೆ.

Kalaburagi News: ಹೈದರಾಬಾದ್‌ನಲ್ಲಿ ಕಲಬುರಗಿ ಮೂಲದ ಐವರ ಸಾವು ಪ್ರಕರಣ; ಸ್ವಗ್ರಾಮ ತಲುಪಿದ ಮೃತದೇಹಗಳು

ಹೈದರಾಬಾದ್‌ನಲ್ಲಿ ಐವರ ನಿಗೂಢ ಸಾವು; ಸ್ವಗ್ರಾಮ ತಲುಪಿದ ಮೃತದೇಹಗಳು

Five members found dead: ಮೃತರೆಲ್ಲರೂ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ರಂಜೋಳ ಗ್ರಾಮದವರು. ಆರ್ಥಿಕ ಸಮಸ್ಯೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಹೈದರಾಬಾದ್‌ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸದ್ಯ ಮೃತರ ಸ್ವಗ್ರಾಮದಲ್ಲಿ ಅಂತ್ಯಸಂಸ್ಕಾರಕ್ಕೆ ಗ್ರಾಮಸ್ಥರು ನಿರ್ಧಾರ ಮಾಡಿದ್ದಾರೆ.

Sameer M D: ವಿಚಾರಣೆಗಾಗಿ ಧರ್ಮಸ್ಥಳಕ್ಕೆ ಬರಲು ಸಾಧ್ಯವಿಲ್ಲ; ಪೊಲೀಸರಿಗೆ ಸಮೀರ್‌ ಪತ್ರ, ಮತ್ತೊಂದು  ದೂರು ದಾಖಲು

ವಿಚಾರಣೆಗಾಗಿ ಧರ್ಮಸ್ಥಳಕ್ಕೆ ಬರಲು ಸಾಧ್ಯವಿಲ್ಲ; ಪೊಲೀಸರಿಗೆ ಸಮೀರ್‌ ಪತ್ರ!

Dharmasthala Case: ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಆರೋಪ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ಯೂಟ್ಯೂಬರ್ ಸಮೀರ್‌ಗೆ ಮಂಗಳೂರಿನ ಜಿಲ್ಲಾ ಸತ್ರ ನ್ಯಾಯಾಲಯವು ಗುರುವಾರ ನಿರೀಕ್ಷಣಾ ಜಾಮೀನು ನೀಡಿತ್ತು. ಇದೀಗ ಸಮೀರ್‌ ವಿರುದ್ಧ ಚಿಕ್ಕಮಗಳೂರಿನ ಕಡೂರು ತಾಲೂಕಿನ ಪೊಲೀಸ್ ಠಾಣೆಯಲ್ಲಿ ಮತ್ತೊಂದು ದೂರು ದಾಖಲಾಗಿದೆ.

Mahesh Shetty Timarodi: ಮಹೇಶ್‌ ಶೆಟ್ಟಿ ತಿಮರೋಡಿ ಜಾಮೀನು ಭವಿಷ್ಯ ನಾಳೆ ನಿರ್ಧಾರ

ಮಹೇಶ್‌ ಶೆಟ್ಟಿ ತಿಮರೋಡಿ ಜಾಮೀನು ಭವಿಷ್ಯ ನಾಳೆ ನಿರ್ಧಾರ

Mahesh Shetty Timarodi: ಬಿ.ಎಲ್.ಸಂತೋಷ್ ವಿರುದ್ಧದ ಅವಹೇಳನಕಾರಿ ಹೇಳಿಕೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗದ ಕಾರಣ ಉಜಿರೆಯ ಮನೆಯಿಂದ ಮಹೇಶ್‌ ಶೆಟ್ಟಿ ಅವರನ್ನು ಬಂಧಿಸಲಾಗಿತ್ತು. ಇವರ ಜಾಮೀನು ಅರ್ಜಿ ವಿಚಾರಣೆ ನಾಳೆ (ಆ.23) ಬ್ರಹ್ಮಾವರ ಕೋರ್ಟ್‌ನಲ್ಲಿ ನಡೆಯಲಿದೆ.

K. C. Veerendra Puppy: ಕಾಂಗ್ರೆಸ್ ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ಹಾಗೂ ಸಹೋದರರ ನಿವಾಸದ ಮೇಲೆ ಇಡಿ ದಾಳಿ

ಕಾಂಗ್ರೆಸ್ ಶಾಸಕ ಕೆ.ಸಿ ವೀರೇಂದ್ರ ಹಾಗೂ ಸಹೋದರರ ನಿವಾಸದ ಮೇಲೆ ಇಡಿ ದಾಳಿ

ED raid: ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಪಟ್ಟಣದಲ್ಲಿರುವ 4 ಮನೆಗಳ ಮೇಲೆ ಇಡಿ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ. ಕೆ.ಸಿ. ವೀರೇಂದ್ರ, ಕೆ.ಸಿ. ನಾಗರಾಜ, ಕೆ.ಸಿ. ತಿಪ್ಪೇಸ್ವಾಮಿ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿ, ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.

'POP' Ganesh idols: ಪಿಒಪಿ ಗಣೇಶನ ಮೂರ್ತಿ ತಯಾರಿಸಿದ್ರೆ ಕ್ರಿಮಿನಲ್‌ ಕೇಸ್‌ ಪಕ್ಕಾ! BBMP ಖಡಕ್‌ ಎಚ್ಚರಿಕೆ

ಪಿಒಪಿ ಗಣೇಶನ ಮೂರ್ತಿ ಮಾರಾಟ ಮಾಡಿದ್ರೆ ಕ್ರಿಮಿನಲ್‌ ಕೇಸ್‌!

BBMP issues guidelines to Ganeshotsava: ಬೆಂಗಳೂರು ನಗರದಲ್ಲಿ ಕೇವಲ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಮಾತ್ರ ಪೂಜಿಸಬೇಕಾಗಿ ಸೂಚನೆ ನೀಡಲಾಗಿದೆ. ಪ್ಲಾಸ್ಟರ್ ಆಫ್ ಪ್ಯಾರೀಸ್ ವಸ್ತುಗಳನ್ನು ಬಳಸಿ ಗಣೇಶ ಮೂರ್ತಿಗಳನ್ನು ತಯಾರಿಸಿದ್ದಲ್ಲಿ ಸಂಬಂಧಪಟ್ಟವರ ಮೇಲೆ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಲಾಗುತ್ತದೆ ಎಂದು ಬಿಬಿಎಂಪಿ ಎಚ್ಚರಿಕೆ ನೀಡಿದೆ.

Traffic fines: ವಾಹನ ಸವಾರರಿಗೆ ಗುಡ್‌ನ್ಯೂಸ್‌.... ಗೂಡ್‌ನ್ಯೂಸ್‌! ಟ್ರಾಫಿಕ್‌ ದಂಡದಲ್ಲಿ ಮತ್ತೆ ಶೇ.50 ಡಿಸ್ಕೌಂಟ್‌

ಟ್ರಾಫಿಕ್‌ ದಂಡದಲ್ಲಿ ಮತ್ತೆ ಶೇ.50 ಡಿಸ್ಕೌಂಟ್‌

ರಾಜ್ಯಾದ್ಯಂತ ಎಲ್ಲಾ ಸಂಚಾರ ಇ-ಚಲನ್‌ ದಂಡಗಳ ಮೇಲೆ 50%ರಿಯಾಯಿತಿ ನೀಡಲು ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ನಾಳೆಯಿಂದ ಸೆ.12 ವರೆಗೆ ಎಲ್ಲಾ ಸಂಚಾರ ಇ-ಚಲನ್‌ ದಂಡಗಳ ಮೇಲೆ ಶೇ.50 ರಿಯಾಯಿತಿ ನೀಡಿದ್ದು, ವಾಹನ ಚಾಲಕರು ಮತ್ತ ಮಾಲೀಕರು ಈ ಸೀಮಿತ ಅವಧಿಯ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಳ್ಳುವಂತೆ ಸರ್ಕಾರ ಮನವಿ ಮಾಡಿದೆ.

Karnataka Weather: ಇಂದು ಕರಾವಳಿ ಜತೆಗೆ ಈ ಜಿಲ್ಲೆಗಳಲ್ಲೂ ಸುರಿಯಲಿದೆ ಮಳೆ

ಇಂದು ಕರಾವಳಿ ಜತೆಗೆ ಈ ಜಿಲ್ಲೆಗಳಲ್ಲೂ ಸುರಿಯಲಿದೆ ಮಳೆ

Karnataka Rains: ರಾಜ್ಯದ ವಿವಿಧ ಕಡೆಗಳಲ್ಲಿ ಇಂದು ಕೂಡ ಸಾಧಾರಣ ಮಳೆಯಾಗಲಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬಾಗಲಕೋಟೆ, ಬೆಳಗಾವಿ, ಬೀದರ್‌, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳ ಕೆಲವೆಡೆ ಸಣ್ಣ ಪ್ರಮಾಣದಲ್ಲಿ ವರ್ಷಧಾರೆಯಾಗಲಿದೆ.

Micro Finance: ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡವರ ಕುಟುಂಬಕ್ಕೆ 5 ಲಕ್ಷ ಪರಿಹಾರ- CM ಸಿದ್ಧರಾಮಯ್ಯ ಘೋಷಣೆ

ಮೈಕ್ರೋ ಫೈನಾನ್ಸ್ ಕಿರುಕುಳ: ಆತ್ಮಹತ್ಯೆ ಮಾಡಿಕೊಂಡವರಿಗೆ 5 ಲಕ್ಷ ಪರಿಹಾರ

Microfinance harassment:ಮೈಕ್ರೋ ಫೈನಾನ್ಸಿಯರ್ ಗಳ ಕಾಟದಿಂದ ಮೃತಪಟ್ಟ , ಆತ್ಮಹತ್ಯೆ ಮಾಡಿಕೊಂಡ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ಕೊಡಲಾಗುವುದು ಎಂದು ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, ಸಂತ್ರಸ್ತ ಕುಟುಂಬಸ್ಥರಿಂದ ಸರ್ಕಾರದಿಂದ 5 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

Gauribidanur News: ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿಯ ಹರಿಕಾರ : ಜಿ.ಕೆ.ಹೊನ್ನಯ್ಯ,

ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿಯ ಹರಿಕಾರ

ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜಿ.ಕೆ.ಹೊನ್ನಯ್ಯ, ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿಯ ಹರಿಕಾರ ಹಾಗೂ ಹಿಂದುಳಿದ ವರ್ಗಗಳ ಬಾಳಿಗೆ ಬೆಳಕಾಗಿದ್ದರು. ಸಮಾಜದ ಎಲ್ಲಾ ಸಮುದಾಯಗಳು ಯಾವ ರೀತಿಯಾಗಿ ಬದುಕುತ್ತಿದ್ದಾರೆ ಎಂದು ಗುರುತಿಸಿ,  ಅವರಿಗೆ ಹೊಸ ಯೋಜನೆಗಳನ್ನು ರೂಪಿಸಿದ್ದರು.

Chinthamani News: ಎಲ್ಲಿಯೂ ಕಾಣದ ರ‍್ಯಾಂಪ್ ವ್ಯವಸ್ಥೆ ; ಅಸಡ್ಡೆ ಪ್ರಶ್ನಿಸಿ ಮುಖಂಡ ಕಿರಣ್ ನಾಯಕ್ ಆಕ್ರೋಶ

ಎಲ್ಲಿಯೂ ಕಾಣದ ರ‍್ಯಾಂಪ್ ವ್ಯವಸ್ಥೆ

ಸರ್ಕಾರಿ ಕಚೇರಿಗಳಲ್ಲಿ ಅಂಗವಿಕಲರ ಅನುಕೂಲಕ್ಕಾಗಿ ರ‍್ಯಾಂಪ್ ವ್ಯವಸ್ಥೆ ಇರಬೇಕು. ಇದರಿಂದಾಗಿ ದೈಹಿಕ ನ್ಯೂನತೆಯಿಂದ ಕೂಡಿದ ಅಂಗವಿಕಲರು ಸರಾಗವಾಗಿ ಕಚೇರಿಗಳನ್ನು ತಲುಪಲು ಸಾಧ್ಯ ವಾಗುತ್ತದೆ. ಆದರೆ,ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ಈ ಸೌಲಭ್ಯವೇ ಇಲ್ಲ.ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ಕೇವಲ ಚುನಾವಣೆ ಸಂದರ್ಭದಲ್ಲಿ ಮಾತ್ರ ರ‍್ಯಾಂಪ್ ವ್ಯವಸ್ಥೆ ಚಾಲ್ತಿಗೆ ಬರುತ್ತದೆ.

Chikkaballapur News: ಆಹಾರ ಉದ್ದಿಮೆದಾರರೆಲ್ಲರೂ  ಸುರಕ್ಷತೆ ಸಲುವಾಗಿ ಪರವಾನಗಿ ಕಡ್ಡಾಯ : ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ

ಆಹಾರ ಉದ್ದಿಮೆದಾರರೆಲ್ಲರೂ  ಸುರಕ್ಷತೆ ಸಲುವಾಗಿ ಪರವಾನಗಿ ಕಡ್ಡಾಯ

ಜಿಲ್ಲೆಯ ಎಲ್ಲಾ ಹೋಟೆಲ್ ಗಳು, ರೆಸ್ಟೋರೆಂಟ್ ಗಳು, ಬೇಕರಿಗಳು, ಕೇಟರರ್ಸ್ ಹಾಗೂ ಬೀದಿಬದಿ ಆಹಾರ ಉದ್ದಿಮೆದಾರರು ಅಂಕಿತಾಧಿಕಾರಿಗಳ ಕಚೇರಿ, ಆಹಾರ ಸುರಕ್ಷತೆ ಮತ್ತು ಔಷಧಿ ಆಡಳಿತ ವತಿಯಿಂದ ನೋಂದಣಿ, ವ್ಯಾಪಾರ ಪರವಾನಗಿ ಹಾಗೂ ಟ್ರೇಡ್ ಪಡೆಯುವುದು ಕಡ್ಡಾಯ ವಾಗಿರುತ್ತದೆ ಹಾಗೂ ಕಾಲಕಾಲಕ್ಕೆ ನವೀಕರಣ ಮಾಡಿಕೊಳ್ಳಬೇಕು.

Sudha Murty: ಲೋಥಲ್‌ನಿಂದ ಉತ್ಖನನ ಮಾಡಲಾದ ಸಾಂಪ್ರದಾಯಿಕ ಕಲಾಕೃತಿಗಳ ಚಿತ್ರ ಹಂಚಿಕೊಂಡ ಸುಧಾಮೂರ್ತಿ

ಪುರಾತನ ಕಿಲಾದಲ್ಲಿ ಸುಧಾಮೂರ್ತಿ

ಯಾವುದೇ ಪ್ರದೇಶಕ್ಕೆ ಹೋಗಬೇಕಾದರೂ ಲೇಖಕಿ, ಇನ್ಫೋಸಿಸ್‌ ಫೌಂಡೇಶನ್‌ನ ಸ್ಥಾಪಕ ಅಧ್ಯಕ್ಷೆ ಸುಧಾ ಮೂರ್ತಿ ಸಾಕಷ್ಟು ಅಧ್ಯಯನ ಮಾಡುತ್ತಾರೆ. ಇತ್ತೀಚೆಗೆ ಇವರು ಸಿಂಧೂ ಕಣಿವೆ ನಾಗರಿಕತೆಯ ಪ್ರಮುಖ ನಗರವಾದ ಲೋಥಲ್‌ನಿಂದ ಉತ್ಖನನ ಮಾಡಲಾದ ಸಾಂಪ್ರದಾಯಿಕ ಕಲಾಕೃತಿಗಳನ್ನು ನೋಡಲು ದೆಹಲಿಯ ಪುರಾತನ ಕಿಲಾಕ್ಕೆ ಭೇಟಿ ನೀಡಿದರು.

ಅಡಕೆ ಬೆಳೆಗಾರರ ಸಂಕಷ್ಟ; ಜೋಶಿ ನೇತೃತ್ವದಲ್ಲಿ ರಾಜ್ಯ ಸಂಸದರ ತಂಡದಿಂದ ಕೇಂದ್ರ ಕೃಷಿ ಸಚಿವರ ಭೇಟಿ

ಅಡಕೆ ಬೆಳೆಗಾರರ ಸಂಕಷ್ಟ; ಜೋಶಿ ನೇತೃತ್ವದಲ್ಲಿ ಕೇಂದ್ರ ಕೃಷಿ ಸಚಿವರ ಭೇಟಿ

Pralhad Joshi: ಅಡಕೆ ಬೆಳೆಗಾರರು ಪ್ರಸ್ತುತ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ ನೇತೃತ್ವದಲ್ಲಿ ರಾಜ್ಯ ಸಂಸದರ ತಂಡ ಗುರುವಾರ ಕೇಂದ್ರ ಕೃಷಿ ಸಚಿವ ಶಿವರಾಜ್‌ ಸಿಂಗ್‌ ಚವ್ಹಾಣ್‌ ಅವರನ್ನು ಭೇಟಿ ಮಾಡಿ ಮಹತ್ವದ ಚರ್ಚೆ ನಡೆಸಿದೆ.

ರಕ್ತದಾನ ಮಾಡುವುದು ಸಂಜೀವಿನಿಗೆ ಸಮಾನ: ಪ್ರಾಂಶುಪಾಲ ಇಂತಿಯಾಜ್ ಅಭಿಮತ

ರಕ್ತದಾನ ಮಾಡುವುದು ಸಂಜೀವಿನಿಗೆ ಸಮಾನ

ರಕ್ತದಾನ ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರು ತ್ತದೆ. ದೇಶದಲ್ಲಿ ಪ್ರತಿವರ್ಷ ೪೧ ದಶಲಕ್ಷ ಯುನಿಟ್ ರಕ್ತದ ಕೊರತೆ ಎದುರಾಗುತ್ತಿದೆ. ಸಮಯ ಕ್ಕೆ ಸರಿಯಾಗಿ ರಕ್ತ ಸಿಗದೆ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು, ಅಪಘಾತದ ಗಾಯಾಳು ಗಳು ಮೃತಪಡುತ್ತಿದ್ದಾರೆ. ಅಮೂಲ್ಯವದ ಜೀವಗಳನ್ನು ಉಳಿಸಲು ರಕ್ತದಾನ ಮಾಡುವುದು ಅತಿ ಅಗತ್ಯವಾಗಿದ್ದು, ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಬೇಕು

CN Ashwath Narayan: ಹಿಂದೂಗಳ ಹಬ್ಬಕ್ಕೆ ಕಾಂಗ್ರೆಸ್‌ ಸರ್ಕಾರದಿಂದ ಅಡ್ಡಿ: ಅಶ್ವತ್ಥ ನಾರಾಯಣ್‌ ಆಕ್ರೋಶ

ತೆರಿಗೆ ಹಣವನ್ನು ರಾಜ್ಯ ಸರ್ಕಾರ ಲೂಟಿ ಮಾಡುತ್ತಿದೆ: ಅಶ್ವತ್ಥ ನಾರಾಯಣ್‌

ಹಿಂದೂ ಸಮಾಜದ ಯಾವುದೇ ಹಬ್ಬಗಳು ಬಂದಾಗ ನಮ್ಮ ಭಾವನೆಗಳಿಗೆ ಧಕ್ಕೆ ಬರುವ ರೀತಿಯಲ್ಲಿ ಕಾಂಗ್ರೆಸ್ ಸರ್ಕಾರ ನಡೆದುಕೊಳ್ಳುತ್ತಿರುವುದು ಇದು ಒಂದೇ ಬಾರಿ ಅಲ್ಲ. ರಾಮ ಜನ್ಮಭೂಮಿಯಲ್ಲಿ ರಾಮಮಂದಿರ ನಿರ್ಮಾಣವಾಗಿ ಉದ್ಘಾಟನೆಯ ಸಂದರ್ಭದಲ್ಲೂ ಮನಬಂದಂತೆ ಮಾತನಾಡಿದ್ದರು. ಸನಾತನ ಧರ್ಮದ ವಿರುದ್ಧವಾಗಿ ಮಾತನಾಡಿದ್ದರು. ಗಣೇಶ ಚತುರ್ಥಿ ಸಂದರ್ಭದಲ್ಲಿ ಗಣೇಶನ ವಿಗ್ರಹವನ್ನೇ ಬಂಧಿಸಿರುವುದನ್ನು ನಾವು ನೋಡಿದ್ದೇವೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ. ಸಿ.ಎನ್. ಅಶ್ವತ್ಥ ನಾರಾಯಣ್ ಟೀಕಿಸಿದ್ದಾರೆ.

ʼಐದೇ ನಿಮಿಷದಲ್ಲಿ ಆಟೋ ಅಥವಾ ಪಡೆಯಿರಿ 50 ರೂ.ʼ ಆಫರ್‌ ನೀಡಿ ವಂಚನೆ; ರ‍್ಯಾಪಿಡೋಗೆ 10 ಲಕ್ಷ ರೂ. ದಂಡ

ಆಫರ್‌ ನೀಡಿ ಗ್ರಾಹಕರಿಗೆ ವಂಚನೆ; ರ‍್ಯಾಪಿಡೋಗೆ 10 ಲಕ್ಷ ರೂ. ದಂಡ

Pralhad Joshi: ರ‍್ಯಾಪಿಡೋ ಖಾಸಗಿ ಸಾರಿಗೆ ಸಂಸ್ಥೆ ದೇಶದ 120ಕ್ಕೂ ಹೆಚ್ಚು ನಗರಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ʼಐದೇ ನಿಮಿಷದಲ್ಲಿ ಆಟೋ ಅಥವಾ ಪಡೆಯಿರಿ 50 ರೂ.ʼ ಆಫರ್ ನೀಡಿ ಗ್ರಾಹಕರನ್ನು ಮೋಸಗೊಳಿಸುತ್ತಿತ್ತು. ದೇಶಾದ್ಯಂತ ಆಯಾ ಪ್ರಾದೇಶಿಕ ಭಾಷೆಗಳಲ್ಲಿ 18 ತಿಂಗಳಿಂದ ದಾರಿ ತಪ್ಪಿಸುವ ಜಾಹೀರಾತು ಬಿತ್ತರಿಸುತ್ತಿದೆ. ಆದರೆ ತಕ್ಕಂತೆ ಸೇವೆ ಒದಗಿಸಿಲ್ಲ. ಈ ಬಗ್ಗೆ ಗ್ರಾಹಕ ಇಲಾಖೆಗೆ ಅತ್ಯಧಿಕ ದೂರುಗಳು ಬಂದಿದ್ದವು. ಇದೀಗ 10 ಲಕ್ಷ ರೂ. ದಂಡ ವಿಧಿಸಲಾಗಿದೆ.

Gauribidanur News: ಅಂಬೇಡ್ಕರ್ ಸಹಾಯ ಹಸ್ತ ಯೋಜನೆ ಸದ್ವಿನಿಯೋಗಪಡಿಸಿಕೊಳ್ಳಿ : ಕಾರ್ಮಿಕ ನಿರೀಕ್ಷಕ ಟಿ.ಬಿ.ಸತೀಶ್

ಅಂಬೇಡ್ಕರ್ ಸಹಾಯ ಹಸ್ತ ಯೋಜನೆ ಸದ್ವಿನಿಯೋಗಪಡಿಸಿಕೊಳ್ಳಿ

ಅಸಂಘಟಿತ ಕಾರ್ಮಿಕ ಭದ್ರತಾ ಮಂಡಳಿಯಿಂದ ಅಂಬೇಡ್ಕರ್ ಸಹಾಯ ಹಸ್ತ ಯೋಜನೆಯಡಿ ಅಸಂಘಟಿತ ಕಾರ್ಮಿಕರಿಗಾಗಿ ಉಚಿತ ನೋಂದಣಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಇದರಲ್ಲಿ 91 ವಿವಿಧ ಬಗೆಯ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರನ್ನು ಗುರುತಿಸಿ ಅಂತಹವರಿಗೆ ಈ ಗುರುತಿನ ಚೀಟಿಯನ್ನು ನೀಡಲಾಗುವುದು, ಎಲ್ಲಾ ಅಸಂಘಟಿತ ಕಾರ್ಮಿಕರು ಗುರುತಿನ ಚೀಟಿ ಪಡೆದು, ಸರ್ಕಾರದ ಸೌಲಭ್ಯಗಳನ್ನು ಪಡೆಯಬೇಕು

Chikkaballapur News: ಚೌದರಿ ಗಾರ್ಮೆಂಟ್ಸ್ ನಿರ್ವಾಹಕರ ವಿರುದ್ಧ ಮಹಿಳಾ ಕಾರ್ಮಿಕರು ಜಟಾಪಟಿ

ಚೌದರಿ ಗಾರ್ಮೆಂಟ್ಸ್ ನಿರ್ವಾಹಕರ ವಿರುದ್ಧ ಮಹಿಳಾ ಕಾರ್ಮಿಕರು ಜಟಾಪಟಿ

ಚೌದರಿ ಗಾರ್ಮೆಂಟ್ಸ್ ಕನ್ನಡ ಚಿತ್ರರಂಗದ ಖ್ಯಾತಿ ನಟಿ ಹಾಗೂ ಮಾಜಿ ಸಂಸದೆ ರಮ್ಯಾಗೆ ಸೇರಿದ ಗಾರ್ಮೆಂಟ್ಸ್ ಆಗಿದೆ ಎನ್ನಲಾಗಿದ್ದು ಹೊಸದಾಗಿ ಬಂದಿರುವ ಕೆಲ ಗಾರ್ಮೆಂಟ್ಸ್ನ ಗ್ರೂಪ್ ಮುಖ್ಯಸ್ಥ ಹರಿ ಪ್ರಸಾದ್ ಕಾರ್ಮಿಕರ ವಿರೋಧಿ ನೀತಿ ಅನುಸರಿಸುತ್ತಿರುವುದನ್ನು ಖಂಡಿಸಿ ಕಾರ್ಮಿಕರು ತಿರುಗಿ ಬಿದ್ದು ತಮ್ಮ ಶಕ್ತಿಯ ಬಿಸಿ ಮುಟ್ಟಿಸಿದರು.

DK Shivakumar: ನವೆಂಬರ್ 1ರ ವೇಳೆಗೆ ವಾರ್ಡ್ ಮರುವಿಂಗಡಣೆ ಪ್ರಕ್ರಿಯೆ: ಡಿ.ಕೆ. ಶಿವಕುಮಾರ್

ನವೆಂಬರ್ 1ರ ವೇಳೆಗೆ ವಾರ್ಡ್ ಮರುವಿಂಗಡಣೆ ಪ್ರಕ್ರಿಯೆ: ಡಿಕೆಶಿ

ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ 2024ರ ಜಾರಿ ವಿಚಾರವಾಗಿ ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಟಿ.ಎನ್. ಜವರಾಯಿ ಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್‌, ಪಾಲಿಕೆ ಚುನಾವಣೆಗೆ ಸಿದ್ಧತೆ ಬಗ್ಗೆ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗಿದೆ. ನವೆಂಬರ್ 1ರ ವೇಳೆಗೆ ವಾರ್ಡ್ ಮರುವಿಂಗಡಣೆ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದ್ದಾರೆ.

Bagepally News: ಕಾರಣವಿಲ್ಲದೆ ನೌಕರರ ವಜಾ : ಗಾರ್ಮೆಂಟ್ ಫ್ಯಾಕ್ಟರಿ ಕಾರ್ಮಿಕರಿಂದ ಪ್ರತಿಭಟನೆ

ಗಾರ್ಮೆಂಟ್ ಫ್ಯಾಕ್ಟರಿ ಕಾರ್ಮಿಕರಿಂದ ಪ್ರತಿಭಟನೆ

ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿರುವ ಕಾರ್ಮಿಕರನ್ನು ಏಕಾಏಕಿ ಯಾವುದೇ ಸ್ಪಷ್ಟ ಕಾರಣ ವಿಲ್ಲದೆ ಮತ್ತು ನೋಟೀಸ್ ನೀಡದೇ ಕೆಲಸದಿಂದ ತೆಗೆದು ಹಾಕಲಾಗಿದೆ. ಯಾವುದೇ ಕಾರ್ಮಿಕನನ್ನು ಕೆಲಸದಿಂದ ತೆಗೆಯಬೇಕಾದರೆ ಹಲವಾರು ನಿಯಮ ನಿಬಂಧನೆಗಳಿರುತ್ತವೆ. ಆದರೆ ಇ-ಫ್ಯಾಕ್ಟರಿಯಲ್ಲಿ ನಿಯಮ ಗಳನ್ನು ಗಾಳಿಗೆ ತೂರಲಾಗಿದೆ.

DK Shivakumar: ಬೆಂಗಳೂರು ಕಸ ವಿಲೇವಾರಿಗೆ 33 ಪ್ಯಾಕೇಜ್‌ಗಳಾಗಿ ಟೆಂಡರ್: ಡಿ.ಕೆ. ಶಿವಕುಮಾರ್

ಬೆಂಗಳೂರು ಕಸ ವಿಲೇವಾರಿಗೆ 33 ಪ್ಯಾಕೇಜ್‌ಗಳಾಗಿ ಟೆಂಡರ್: ಡಿಕೆಶಿ

ಬೆಂಗಳೂರು ನಗರದ ಕಸ ವಿಲೇವಾರಿಗೆ 28 ವಿಧಾನಸಭಾ ಕ್ಷೇತ್ರಗಳಲ್ಲಿ 33 ಪ್ಯಾಕೇಜ್‌ಗಳಾಗಿ ವಿಂಗಡಿಸಿ ಟೆಂಡರ್ ಕರೆಯಲಾಗಿದೆ. ನಾಲ್ಕು ಜಾಗಗಳಲ್ಲಿ ತ್ಯಾಜ್ಯದಿಂದ ಗ್ಯಾಸ್, ವಿದ್ಯುತ್ ಉತ್ಪಾದಿಸುವ ಯೋಜನೆ ರೂಪಿಸಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

DK Suresh: ನಂದಿನಿ ಉತ್ಪನ್ನಗಳ ಮಾರುಕಟ್ಟೆ ವಿಸ್ತರಣೆ ನಮ್ಮ ಗುರಿ: ಡಿ.ಕೆ. ಸುರೇಶ್

ನಂದಿನಿ ಉತ್ಪನ್ನಗಳ ಮಾರುಕಟ್ಟೆ ವಿಸ್ತರಣೆಗೆ ಕ್ರಮ: ಡಿ.ಕೆ. ಸುರೇಶ್

Nandini Products: ಮಹಾರಾಷ್ಟ್ರದ ವಿರಾರ್‌ನಲ್ಲಿರುವ ಅಮುಲ್ ಡೈರಿ ಘಟಕಕ್ಕೆ ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಗುರುವಾರ ಭೇಟಿ ನೀಡಿತು. ಈ ವೇಳೆ ಮಾತನಾಡಿದ ಡಿ.ಕೆ. ಸುರೇಶ್, ದೇಶ ಹಾಗೂ ವಿದೇಶಗಳಲ್ಲಿ ನಂದಿನಿ ಉತ್ಪನ್ನಗಳಿಗೆ ಮಾರುಕಟ್ಟೆ ವಿಸ್ತರಣೆ ನಮ್ಮ ಗುರಿ. ಈ ನಿಟ್ಟಿನಲ್ಲಿ ನಾವು ಕಾರ್ಯೋನ್ಮುಖರಾಗಿದ್ದೇವೆ ಎಂದು ತಿಳಿಸಿದ್ದಾರೆ.

Loading...