ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕರ್ನಾಟಕ

Bengaluru Traffic: ಬೆಂಗಳೂರಲ್ಲಿ ‌ಇನ್ನು ಟ್ರಾಫಿಕ್‌ ನಿಯಮ ಉಲ್ಲಂಘಿಸಿದ್ರೆ ಜೋಕೆ, ಎಫ್‌ಐಆರ್‌ ಬೀಳಬಹುದು!

ಇನ್ನು ಟ್ರಾಫಿಕ್‌ ನಿಯಮ ಉಲ್ಲಂಘಿಸಿದ್ರೆ ಜೋಕೆ, ಎಫ್‌ಐಆರ್‌ ಬೀಳಬಹುದು!

ಸಿಗ್ನಲ್ ಜಂಪ್ ಮಾಡುವುದು ಮತ್ತು ಏಕಮಾರ್ಗ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ಚಲಿಸುವುದು ಬೆಂಗಳೂರಿನಲ್ಲಿ ಸಾಮಾನ್ಯ ಎನ್ನುವ ಸ್ಥಿತಿ ನಿರ್ಮಾಣವಾಗಿರುವ ಕಾರಣ ಇಲಾಖೆ ಕಠಿಣ ಕ್ರಮ ಜಾರಿಗೆ ಮುಂದಾಗಿದೆ. ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್)ಯ ಸೆಕ್ಷನ್‌ 285 (ಸಾರ್ವಜನಿಕ ಮಾರ್ಗದಲ್ಲಿ ಅಪಾಯ ಅಥವಾ ಅಡ್ಡಿ ಉಂಟುಮಾಡುವುದು) ಅಡಿಯಲ್ಲಿ ನಿಯಮ ಉಲ್ಲಂಘಿಸುವವರ ವಿರುದ್ಧ ಪ್ರಕರಣ ದಾಖಲಾಗಲಿದೆ.

ವಿಪ್ರ ಬಿಸಿನೆಸ್‌ ಫೋರಂ ನೂತನ ಪದಾಧಿಕಾರಿಗಳ ನೇಮಕ; ಅಧ್ಯಕ್ಷ ಆನಂದ್‌, ಗೌರವಾಧ್ಯಕ್ಷ ಕೆ.ರಾಧಾಕೃಷ್ಣ ಹೊಳ್ಳ ಆಯ್ಕೆ

ವಿಪ್ರ ಬಿಸಿನೆಸ್‌ ಫೋರಂ ನೂತನ ಪದಾಧಿಕಾರಿಗಳ ನೇಮಕ

ಕಳೆದ ಏಳು ವರ್ಷಗಳಿಂದ ಸಕ್ರಿಯವಾಗಿರುವ, ವ್ಯಾಪಾರ ಮತ್ತು ಉದ್ಯಮ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿರುವ ವಿಪ್ರ ಬಿಸಿನೆಸ್ ಫೋರಂನ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ಸಂಸ್ಥೆಯ ವಾರ್ಷಿಕ ಮಹಾಸಭೆಯಲ್ಲಿ ನಡೆದಿದೆ. ಸಂಘಟನೆಯಡಿ ಕಾರ್ಯನಿರ್ವಹಿಸುತ್ತಿರುವ ಆತ್ರೇಯ, ಅಗಸ್ತ್ಯ, ಭಾರದ್ವಾಜ, ವಸಿಷ್ಠ ಮತ್ತು ಕಾಶ್ಯಪ ವಾಹಿನಿಗಳ ಸದಸ್ಯರು ಭಾಗವಹಿಸಿದ್ದರು.

Makar Sankranti 2026: ಈ ವರ್ಷ ಮಕರ ಸಂಕ್ರಾಂತಿ ಜನವರಿ 14ಕ್ಕಾ ಅಥವಾ 15ಕ್ಕಾ? ಉತ್ತರ ಇಲ್ಲಿದೆ

ಈ ವರ್ಷ ಮಕರ ಸಂಕ್ರಾಂತಿ ಜನವರಿ 14ಕ್ಕಾ ಅಥವಾ 15ಕ್ಕಾ? ಉತ್ತರ ಇಲ್ಲಿದೆ

ಮಕರ ಸಂಕ್ರಾಂತಿಯ ಶುಭ ಸಮಯ ಜನವರಿ 15ರಂದು ಸೂರ್ಯೋದಯದ ನಂತರ ಇರುತ್ತದೆ. ನಿರ್ಣಯ ಸಿಂಧು ಪ್ರಕಾರ ಈ ಬಾರಿ ಮಕರ ಸಂಕ್ರಾಂತಿಯ ಶುಭ ಸಮಯ ಜನವರಿ 15 ರಂದು. ಏಕೆಂದರೆ ಸೂರ್ಯ ಹಿಂದಿನ ಮಧ್ಯಾಹ್ನ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಆದ್ದರಿಂದ, ಜನವರಿ 15 ರ ಗುರುವಾರದಂದು ಮಕರ ಸಂಕ್ರಾಂತಿಯನ್ನು ಆಚರಿಸುವುದು ಶಾಸ್ತ್ರಗಳ ಪ್ರಕಾರ ಸರಿಯಾದುದು.

Bengaluru News: ಬೆಂಗಳೂರಿನಲ್ಲಿ ಬಾಂಗ್ಲಾದೇಶಕ್ಕೆ ಜೈಕಾರ ಹಾಕಿದ ಮಹಿಳೆ ಬಂಧನ

ಬೆಂಗಳೂರಿನಲ್ಲಿ ಬಾಂಗ್ಲಾದೇಶಕ್ಕೆ ಜೈಕಾರ ಹಾಕಿದ ಮಹಿಳೆ ಬಂಧನ

ಪಶ್ಚಿಮ ಬಂಗಾಳದ ಮೂಲದ ಸರ್ಬಾನು ಖಾತುನ್ ಎಂಬ ಮಹಿಳೆ ಜೈ ಬಾಂಗ್ಲಾ ಘೋಷಣೆ ಕೂಗಿದ್ದಾಳೆ. ಅಕ್ರಮ ವಲಸಿಗರ ತೆರವು ಕಾರ್ಯಾಚರಣೆ ಮಾಡುವಾಗ ಇಂಥದ್ದೊಂದು ಘಟನೆ ನಡೆದಿದೆ. ಬೆಂಗಳೂರಿನ ಹೆಬ್ಬಗೋಡಿ ಠಾಣೆಯ ಪೊಲೀಸರು ದೇಶವಿರೋಧಿ ಘೋಷಣೆ ಕೂಗಿದ ಮಹಿಳೆಯನ್ನು ಬಂಧಿಸಿದ್ದಾರೆ.

Self Harming: ಶಾಲೆಗೆ ಹೋಗು ಎಂದದ್ದಕ್ಕೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ

ಶಾಲೆಗೆ ಹೋಗು ಎಂದದ್ದಕ್ಕೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ

ಬಾಲಕ ಜಗದೀಶನ ತಾಯಿಯ ಕುಟುಂಬ ಅಯ್ಯಪ್ಪ ಮಾಲೆ ಹಾಕಿದ್ದರು. ಈ ಸಂಬಂಧ ಅಲ್ಲಿಗೆ ಹೋಗಿ ಜಗದೀಶ್ ವಾಪಸ್ ಬಂದಿದ್ದ. ನಂತರ ಶಾಲೆಗೆ ಹೋಗಲು ನಿರಾಕರಿಸಿದ್ದ. ಇದರಿಂದ ತಂದೆ ಬುದ್ದಿವಾದ ಹೇಳಿದ್ದಕ್ಕೆ ಶಾಲೆಗೆ ತೆರಳಿದ್ದ ಬಾಲಕ ಗೆಳೆಯನ ಜೊತೆಗೆ ಮನೆಗೆ ವಾಪಸ್ ಬರುವಾಗ ಗೆಳೆಯನನ್ನು ಕಳಿಸಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Lakkundi Gold Treasure: ಲಕ್ಕುಂಡಿಯಲ್ಲಿ ಸಿಕ್ಕ ನಿಧಿಯಲ್ಲಿ ಒಂದು ಪಾಲು ಕುಟುಂಬಕ್ಕೆ! ನಮಗೆ ಆ ಜಾಗ ಬೇಡ ಎಂದು ಕುಟುಂಬ!

ಸಿಕ್ಕ ನಿಧಿಯಲ್ಲಿ ಒಂದು ಪಾಲು ಕುಟುಂಬಕ್ಕೆ! ನಮಗೆ ಆ ಜಾಗ ಬೇಡ ಎಂದು ಕುಟುಂಬ!

ರಿತ್ತಿ ಕುಟುಂಬದ ಸದಸ್ಯರಿಗೆ, ನಿಧಿ ಪತ್ತೆಯಾದ ಬಳಿಕ ಆ ಜಾಗದಲ್ಲಿ ಅನಾಹುತಗಳು ಸಂಭವಿಸುವ ಭಯ ಕಾಡುತ್ತಿದೆ. “ಆ ಜಾಗದಿಂದ ದೊಡ್ಡ ಸರ್ಪ ಎದ್ದಿದೆ. ಒಂದಲ್ಲ ಒಂದು ದಿನ ಕಚ್ಚಬಹುದು ಎಂಬ ಆತಂಕ ನಮ್ಮನ್ನು ಕಾಡುತ್ತಿದೆ. ನಮಗೆ ಒಬ್ಬನೇ ಮಗ ಇದ್ದಾನೆ. ಅವನ ಭವಿಷ್ಯ ನಮಗೆ ಮುಖ್ಯ. ಹೀಗಾಗಿ ಆ ಜಾಗ ನಮಗೆ ಬೇಡ” ಎಂದು ಕುಟುಂಬಸ್ಥರು ಹೇಳಿದ್ದಾರೆ.

GBA Elections: ಕೊನೆಗೂ ಜಿಬಿಎ ಚುನಾವಣೆಗೆ ಡೆಡ್‌ಲೈನ್‌ ಫಿಕ್ಸ್‌ ಮಾಡಿದ ಸುಪ್ರೀಂ ಕೋರ್ಟ್‌

ಕೊನೆಗೂ ಜಿಬಿಎ ಚುನಾವಣೆಗೆ ಡೆಡ್‌ಲೈನ್‌ ಫಿಕ್ಸ್‌ ಮಾಡಿದ ಸುಪ್ರೀಂ ಕೋರ್ಟ್‌

ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ) ಅಡಿಯಲ್ಲಿ ರಚನೆಯಾಗಲಿರುವ ಐದು ಮಹಾನಗರ ಪಾಲಿಕೆಗಳ ವಾರ್ಡ್‌ಗಳ ಮರುವಿಂಗಡಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ಅದರ ಅಂತಿಮ ಅಧಿಸೂಚನೆಯನ್ನು ಹೊರಡಿಸಲು ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ 2026ರ ಫೆಬ್ರವರಿ 20ರವರೆಗೆ ಕಾಲಾವಕಾಶ ನೀಡಿದೆ. ಇದು ಕರ್ನಾಟಕ ರಾಜ್ಯ ಸರ್ಕಾರಕ್ಕೆ ನೀಡಲಾದ ಕೊನೆಯ ಅವಕಾಶವಾಗಿದೆ ಎಂದು ಕೋರ್ಟ್ ತಿಳಿಸಿದೆ.

Lalbagh Flower Show: ನಾಳೆಯಿಂದ ಲಾಲ್​​ಬಾಗ್​ನಲ್ಲಿ ಗಣರಾಜ್ಯೋತ್ಸವ ಫ್ಲವರ್ ಶೋ: ಈ ಬಾರಿ ʼತೇಜಸ್ವಿ ವಿಸ್ಮಯʼ! ಟಿಕೆಟ್​ ದರವೆಷ್ಟು?

ನಾಳೆಯಿಂದ ಲಾಲ್​​ಬಾಗ್​ನಲ್ಲಿ ʼತೇಜಸ್ವಿʼ ಫ್ಲವರ್ ಶೋ! ಟಿಕೆಟ್​ ದರವೆಷ್ಟು?

ತೋಟಗಾರಿಕೆ ಇಲಾಖೆಯಿಂದ ಆಯೋಜಿಸುತ್ತಿರುವ 219ನೇ ಪ್ರದರ್ಶನ ಇದಾಗಿದೆ. ಖ್ಯಾತ ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಬದುಕು-ಬರಹ ಕುರಿತ 'ತೇಜಸ್ವಿ ವಿಸ್ಮಯ' ವಿಷಯವನ್ನಾಧರಿಸಿದ ಈ ಪ್ರದರ್ಶನದಲ್ಲಿ ಗಾಜಿನ ಮನೆಯಲ್ಲಿ ಪೂರ್ಣಚಂದ್ರ ತೇಜಸ್ವಿಯವರ ನೆಚ್ಚಿನ ಕಾಡನ್ನು ನಿರ್ಮಿಸಲಾಗುತ್ತಿದೆ. ಈ ಬಾರಿಯ ಫಲಪುಷ್ಪ ಪ್ರದರ್ಶನದಲ್ಲಿ ಹತ್ತು-ಹಲವು ಆಕರ್ಷಣೆಗಳಿದ್ದು, ಒಟ್ಟಾರೆ 3 ಕೋಟಿ ರೂ.ಗೂ ಅಧಿಕ ಹಣ ಖರ್ಚು ಮಾಡಲಾಗುತ್ತಿದೆ.

Mallikarjun Kharge: ಗಂಟೆ ಬಾರಿಸಿದರೆ ದೇವರು ಪ್ರಸನ್ನ ಆಗಲ್ಲ: ಮೋದಿ ಸೋಮನಾಥ ದೇಗುಲ ಭೇಟಿಗೆ ಖರ್ಗೆ ವ್ಯಂಗ್ಯ

ಗಂಟೆ ಬಾರಿಸಿದರೆ ದೇವರು ಪ್ರಸನ್ನ ಆಗಲ್ಲ: ಮೋದಿಗೆ ಖರ್ಗೆ ವ್ಯಂಗ್ಯ

ಸೋಮನಾಥ ದೇವಸ್ಥಾನಕ್ಕೆ ಸಾವಿರ ವರ್ಷ ಆಯ್ತು ಎಂದು ಈಗ ಮೋದಿಗೆ ಆ ದೇವಾಲಯ ನೆನಪಾಗಿದೆ. ಈ ಮುಂಚೆ ಏಕೆ ಈ ದೇವಸ್ಥಾನ ನೆನಪಾಗಲಿಲ್ಲ? ಮುಂಬರುವ ಹಲವು ರಾಜ್ಯಗಳ ಚುನಾವಣೆ ದೃಷ್ಟಿಯಿಂದ ಮೋದಿ ಈ ರೀತಿ ಮಾಡುತ್ತಿದ್ದಾರೆ. ದೇವರು ನಿಮ್ಮ ಕೆಲಸಗಳಿಂದ ಪ್ರಸನ್ನವಾಗುತ್ತಾನೆಯೇ ಹೊರತು ಗುಡಿಗೆ ಹೋಗಿ ಗಂಟೆ ಬಾರಿಸಿದರೆ ದೇವರು ಪ್ರಸನ್ನ ಆಗಲ್ಲ ಎಂದು ಖರ್ಗೆ ಹೇಳಿದ್ದಾರೆ.

Chikkaballapur News: ಮಕ್ಕಳು ಓದಿನ ವಿಚಾರದಲ್ಲಿ ಹೆತ್ತವರಿಗೆ ತಲೆನೋವಾಗಬಾರದು : ಧ್ಯಾನೋಪಾಸಕ ಅನಂತ ಭಟ್

ಮಕ್ಕಳು ಓದಿನ ವಿಚಾರದಲ್ಲಿ ಹೆತ್ತವರಿಗೆ ತಲೆನೋವಾಗಬಾರದು

ವಿದ್ಯಾಭ್ಯಾಸದ ಅವಧಿಯಲ್ಲಿ ವಿದ್ಯಾರ್ಥಿ ಮನಸ್ಸಿನಲ್ಲಿ ಶರಣಾಗತ ಭಾವ, ಭಾವಶುದ್ಧಿ ಮತ್ತು ಅರ್ಪಣಾ ಭಾವ ಇದ್ದಲ್ಲಿ ಯಶಸ್ಸು ಖಚಿತವಾಗುತ್ತದೆ. ಉತ್ತಮ ಅಂಕಗಳನ್ನು ಪಡೆದು ಬ್ರೈಟ್ ಶಾಲೆಗೆ ಗೌರವ ತರುತ್ತೇನೆ ಎಂಬ ಸಂಕಲ್ಪದೊಂದಿಗೆ ವಿದ್ಯಾರ್ಥಿಗಳು ಮುಂದುವರಿಯಬೇಕು. ಅಂಕಗಳೇ ವಿದ್ಯಾರ್ಥಿ ಜೀವನದ ಅಂತಿಮ ಸತ್ಯವಲ್ಲ.

ರಾಗಿ ಮತ್ತು ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಲು ಆಗ್ರಹಿಸಿ ಪ್ರತಿಭಟನೆ : ಜಿಲ್ಲಾಧಿಕಾರಿಗಳಿಂದ ಮನವಿ ಸ್ವೀಕಾರ, ಕ್ರಮ ವಹಿಸುವ ಭರವಸೆ

ಎ.ಕೆ.ಆರ್.ಎಸ್ ರೈತ ಸಂಘದಿಂದ ಪ್ರತಿಭಟನೆ

ನೀರಾವರಿ ಆದರೆ ಒಂದು ಎಕರೆಗೆ ಸರಾಸರಿ 40 ಕ್ವಿಂಟಾಲ್ ಮೆಕ್ಕೇಜೋಳ ಬೆಳೆದರೆ, ಮಳೆಯಾಶ್ರಿತ ಕುಷ್ಕಿಯಲ್ಲಿ 25 ಕ್ವಿಂಟಾಲ್ ಬೆಳೆಯುತ್ತಾರೆ. ಈ ಬಾರಿ ಉತ್ತಮ ಮಳೆಯಾದ ಕಾರಣ ಜಿಲ್ಲೆಯಲ್ಲಿ ಒಂದು ಲಕ್ಷ 1 ಟನ್ ಜೋಳ ಉತ್ಪಾದನೆ ಆಗಿದೆ.ಈ ಹೊತ್ತಲ್ಲಿ ಸಿದ್ಧರಾಮಯ್ಯ ಸರಕಾರ ಜೋಳಕ್ಕೆ ಬೆಂಬಲ ಬೆಲೆ ಘೋಷಣೆ ಮಾಡಿದ್ದು ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಜಿಲ್ಲೆಯಲ್ಲಿ 10 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಇಷ್ಟೊಂದು ಉತ್ತಮ ಫಸಲು ಬಂದಿದೆ.

ಬೆಂಗಳೂರಿನ ಜೈಲಿನಲ್ಲಿದ್ದ ಮಗನಿಗೆ ಕೊಡಲು ಖಾಸಗಿ ಭಾಗದಲ್ಲಿ ಮೊಬೈಲ್‌ ಕೊಂಡೊಯ್ದ ತಾಯಿ!

ಜೈಲಿನಲ್ಲಿದ್ದ ಮಗನಿಗೆ ಖಾಸಗಿ ಭಾಗದಲ್ಲಿ ಮೊಬೈಲ್‌ ಕೊಂಡೊಯ್ದ ತಾಯಿ!

Bangalore Central Jail: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಘಟನೆ ನಡೆದಿದೆ. ಜೈಲಿನಲ್ಲಿದ್ದ ಮಗನನ್ನು ನೋಡಲು ತಾಯಿ ಹೋಗಿದ್ದ ವೇಳೆ ಖಾಸಗಿ ಭಾಗದಲ್ಲಿ ಮೊಬೈಲ್​ ಇಟ್ಟುಕೊಂಡು ಹೋಗಿರುವುದು ಪತ್ತೆಯಾಗಿದೆ. ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್​​ ಠಾಣೆಯಲ್ಲಿ ಕೇಸ್‌ ದಾಖಲಾಗಿದೆ.

ರಿಯಲ್‌ಮಿ 16 ಪ್ರೊ ಸರಣಿ ಬಿಡುಗಡೆ: ಆಕರ್ಷಕ ಬೆಲೆ ಹಾಗೂ ಅತ್ಯಾಧುನಿಕ ಟೆಕ್ನಾಲಜಿ ಒಳಗೊಂಡ ಸ್ಮಾರ್ಟ್‌ ಫೋನ್‌

ಮೊದಲ ಬಾರಿಗೆ 200MP ಲೂಮಾಕಲರ್ ಪೋರ್ಟ್ರೇಟ್ ಕ್ಯಾಮೆರಾ ಅಳವಡಿಕೆ

ರಿಯಲ್‌ಮಿ ಇಂಡಿಯಾ ಇದರೊಂದಿಗೆ ಪ್ರೀಮಿಯಂ ಮಿಡ್-ರೇಂಜ್ ವಿಭಾಗದಲ್ಲಿ ತನ್ನ ಮಾನದಂಡ ವನ್ನು ಇನ್ನಷ್ಟು ಬಲಪಡಿಸಿಕೊಂಡಿದೆ. ರಿಯಲ್‌ ಮಿ 16 ಪ್ರೊ+ ಮತ್ತು ಎಲ್ಲ ಅಗತ್ಯಗಳನ್ನು ಪೂರೈಸುವ ರಿಯಲ್‌ ಮಿ 16 ಪ್ರೊ ಮಾದರಿಗಳನ್ನು ಒಳಗೊಂಡಿ ರುವ ಈ ಸರಣಿ, ಪರ್ಫಾರ್ಮೆನ್ಸ್‌ ಮತ್ತು ಡಿಸೈನ್‌ ಅಲ್ಲಿ ಮಾಸ್ಟರ್‌ಕ್ರಾಫ್ಟ್ ಶ್ರೇಷ್ಠತೆಯನ್ನು ಹೊಂದಿ ದೆ.

ಧಾರವಾಡದಲ್ಲಿ ಕಿಡ್ನ್ಯಾಪ್‌ ಆಗಿದ್ದ ಇಬ್ಬರು ಮಕ್ಕಳು ದಾಂಡೇಲಿಯಲ್ಲಿ ಪತ್ತೆ; ಬೈಕ್​​ನಲ್ಲೇ ಕೂರಿಸಿಕೊಂಡು ಪರಾರಿಯಾಗಿದ್ದ ಕಳ್ಳ!

ಧಾರವಾಡದಲ್ಲಿ ಕಿಡ್ನ್ಯಾಪ್‌ ಆಗಿದ್ದ ಇಬ್ಬರು ಮಕ್ಕಳು ದಾಂಡೇಲಿಯಲ್ಲಿ ಪತ್ತೆ!

Dharwad children Kidnap case: ಪೊಲೀಸರು ಹುಡುಕಾಟದಲ್ಲಿದ್ದಾಗ, ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಬಳಿ ಆರೋಪಿಯ ಬೈಕ್ ಅಪಘಾತವಾಗಿತ್ತು. ಬೈಕ್ ಮೇಲೆ ಒಬ್ಬ ವ್ಯಕ್ತಿ ಹಾಗೂ ಇಬ್ಬರು ಮಕ್ಕಳಿದ್ದ ಬಗ್ಗೆ ಮಾಹಿತಿ ಸಿಕ್ಕಿತ್ತು. ಇದೇ ವೇಳೆ ದಾಂಡೇಲಿ ಪೊಲೀಸರು ವ್ಯಕ್ತಿಯ ವಿಚಾರಣೆ ನಡೆಸಿದಾಗ ಆತ ಧಾರವಾಡದವನು ಎನ್ನುವುದು ಖಚಿತವಾಗಿದೆ. ಈ ವೇಳೆ ಆರೋಪಿಯನ್ನು ಬಂಧಿಸಿ, ಮಕ್ಕಳನ್ನು ರಕ್ಷಿಸಲಾಗಿದೆ.

ಕಿಡ್ನಿ ಕಸಿಗೆ ರೊಬೋಟಿಕ್‌ ಶಸ್ತ್ರಚಿಕಿತ್ಸೆ : ಸ್ಪರ್ಶ್‌ ಆಸ್ಪತ್ರೆಯಲ್ಲಿ 75 ವರ್ಷದ ತಾಯಿಯಿಂದ ಮಗನಿಗೆ ಮರುಜೀವ

ಕಿಡ್ನಿ ಕಸಿಗೆ ರೊಬೋಟಿಕ್‌ ಶಸ್ತ್ರಚಿಕಿತ್ಸೆ

ಸ್ಪರ್ಶ್‌ಗೆ ಬರುವುದಕ್ಕು ಮುನ್ನ ಹಲವಾರು ತಜ್ಞರ ಸಲಹೆ ಪಡೆದಿದ್ದ ಅವರು ಯಶವಂತಪುರ ಆಸ್ಪತ್ರೆ ಯಲ್ಲಿ ಹಿರಿಯ ಸಮಾಲೋಚಕ ಮೂತ್ರಪಿಂಡ ರೋಗಗಳ ತಜ್ಞ ವೈದ್ಯ ಮತ್ತು ಕಸಿ ವೈದ್ಯ ಡಾ.ಅರುಣ್‌ ಕುಮಾರ್‌ ಅವರಲ್ಲಿ ವಿವರವಾದ ಪರೀಕ್ಷೆಗೊಳಪಟ್ಟಾಗ ಕಿಡ್ನಿ ಕಸಿ ಮಾಡಿಸಿ ಕೊಳ್ಳುವುದು ಉತ್ತಮ ಎಂಬ ನಿರ್ಧಾರಕ್ಕೆ ಬರಲಾಯಿತು. ಆದರೆ ಕಿಡ್ನಿ ದಾನ ಮಾಡಲು ಮುಂದೆ ಬಂದಿದ್ದ ಅವರ ತಾಯಿಯ ವಯಸ್ಸು 75 ಆಗಿದ್ದರಿಂದ ಅವರ ಮೂತ್ರಪಿಂಡವನ್ನು ತೆಗೆಯುವುದು ವೈದ್ಯರಿಗೆ ಬಹುದೊಡ್ಡ ಸವಾಲಾಗಿತ್ತು

ಭಾರತೀಯ ದ್ವಿಚಕ್ರ ವಾಹನ ಸವಾರರಿಗೆ ಮೆಕ್ಯಾನಿಕ್-ಪರೀಕ್ಷಿತ ಅಸಲಿ ಬಿಡಿಭಾಗಗಳ ಬಿಡುಗಡೆ ಮಾಡಿದ ಪಾರ್ಟ್ನರ್

ದ್ವಿಚಕ್ರ ಸವಾರರಿಗೆ ಮೆಕ್ಯಾನಿಕ್-ಪರೀಕ್ಷಿತ ಅಸಲಿ ಬಿಡಿಭಾಗಗಳ ಬಿಡುಗಡೆ

ಕಳೆದ ಎರಡು ವರ್ಷಗಳಲ್ಲಿ, ಪಾರ್ಟ್ನರ್ ಭಾರತದ ಅತಿದೊಡ್ಡ ಡೈರೆಕ್ಟ್-ಟು-ಮೆಕ್ಯಾನಿಕ್ ವಿತರಣಾ ವೇದಿಕೆಗಳಲ್ಲಿ ಒಂದನ್ನು ನಿರ್ಮಿಸಿದೆ, 50+ ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ ಮತ್ತು ಪಾರ್ಟ್ನರ್ ಅಪ್ಲಿಕೇಶನ್ ಮೂಲಕ 50,000 ಕ್ಕೂ ಹೆಚ್ಚು ಮೆಕ್ಯಾನಿಕ್ಗಳಿಗೆ ಸೇವೆ ಸಲ್ಲಿಸುತ್ತಿದೆ, ಬಹು-ಬ್ರಾಂಡ್ ಬಿಡಿ ಭಾಗಗಳು ಮತ್ತು ಲೂಬ್ರಿಕಂಟ್ಗಳನ್ನು ತಲುಪಿಸುತ್ತದೆ

ಅಮೇಜಾನ್ ಪೇ ಇಂದ ಭಾರತದಲ್ಲಿ ಹಣಕಾಸು ಸೇವೆಗಳ ಪೋರ್ಟ್‌ಫೋಲಿಯೊ ವಿಸ್ತರಣೆ

'ಫಿಕ್ಸೆಡ್ ಡೆಪಾಸಿಟ್' ಸೌಲಭ್ಯ ಆರಂಭ

ಗ್ರಾಹಕರು ಈಗ ಅಮೇಜಾನ್ ಪೇಯಲ್ಲಿ ಕೇವಲ 1,000 ರೂಪಾಯಿಗಳಿಂದ ಸ್ಥಿರ ಠೇವಣಿಗಳನ್ನು ಪ್ರಾರಂಭಿಸಬಹುದು. ವಿಶೇಷವೆಂದರೆ, ಪ್ರತಿಯೊಂದು ಸಂಸ್ಥೆಯಲ್ಲೂ ಪ್ರತ್ಯೇಕ ಉಳಿತಾಯ ಖಾತೆ ಗಳನ್ನು ತೆರೆಯುವ ಅಗತ್ಯವಿಲ್ಲದೆಯೇ ವಿವಿಧ ಪಾಲುದಾರ ಸಂಸ್ಥೆಗಳ ಆಯ್ಕೆಗಳನ್ನು ಪಡೆಯ ಬಹುದು. ಈ ಪಾಲುದಾರ ಸಂಸ್ಥೆಗಳು ವಾರ್ಷಿಕವಾಗಿ ಗರಿಷ್ಠ ಶೇ. 8 ರವರೆಗೆ ಬಡ್ಡಿ ದರವನ್ನು ನೀಡುತ್ತಿವೆ.

KEA Recruitment Exam: ವಿವಿಧ ಇಲಾಖೆಗಳ ನೇಮಕಾತಿ ಪರೀಕ್ಷೆ ಕೀ ಉತ್ತರ ಪ್ರಕಟಿಸಿದ ಕೆಇಎ

ವಿವಿಧ ಇಲಾಖೆಗಳ ನೇಮಕಾತಿ ಪರೀಕ್ಷೆ ಕೀ ಉತ್ತರ ಪ್ರಕಟ

KEA Exam Answer Key released: ರಾಜ್ಯದ ತಾಂತ್ರಿಕ ಶಿಕ್ಷಣ, ಬಿಡಿಎ, ಬೆಂಗಳೂರು ಜಲಮಂಡಳಿ, ಕೆಎಸ್‌ಡಿಎಲ್, ಕೃಷಿ ಮಾರಾಟ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳ ನೇಮಕಾತಿಗೆ ಜನವರಿ 10 ಮತ್ತು 11ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗಿತ್ತು. ಈ ಪರೀಕ್ಷೆಯ ಕೀ ಉತ್ತರಗಳನ್ನು ಕೆಇಎ ಪ್ರಕಟಿಸಿದೆ.

Bengaluru Power Cut: ನಾಳೆ ಬೆಂಗಳೂರಿನ ಬಾಣಸವಾಡಿ, ಹೊರಮಾವು ಸೇರಿ ಹಲವೆಡೆ ವಿದ್ಯುತ್‌ ವ್ಯತ್ಯಯ

ನಾಳೆ ಬೆಂಗಳೂರಿನ ಬಾಣಸವಾಡಿ ಸೇರಿ ಹಲವೆಡೆ ವಿದ್ಯುತ್‌ ವ್ಯತ್ಯಯ

BESCOM News: 66/11 ಕೆ.ವಿ. ಬಾಣಸವಾಡಿಯ ಉಪಕೇಂದ್ರದ 66 ಕೆ.ವಿ. ಲೈನ್‌ನಲ್ಲಿ ತುರ್ತು ನಿರ್ವಾಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಹಲವೆಡೆ ಜ.13ರಂದು ಮಂಗಳವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಈ ಕುರಿತ ವಿವರ ಇಲ್ಲಿದೆ.

ನಿಲ್ಲಿಸಿದ್ದ ಸ್ಕೂಟರ್ ಆಕ್ಸಿಲರೇಟರ್ ತಿರುಗಿಸಿದ ಬಾಲಕ; ಶಾಲೆಯ ಮುಂದೆ ಭೀಕರ ಅಪಘಾತದ ದೃಶ್ಯ ವೈರಲ್!

ಸ್ಕೂಟಿ ಎಂಜಿನ್ ಅನ್ನು ಆಕಸ್ಮಿಕವಾಗಿ ವೇಗಗೊಳಿಸಿದ ಬಾಲಕ: ಭಯಾನಕ ವಿಡಿಯೊ

Viral Video: ಜೋಧ್ ಪುರದ ವ್ಯಕ್ತಿಯೊಬ್ಬರು ತಮ್ಮ ಮಕ್ಕಳನ್ನು ಶಾಲೆಗೆ ಬೀಡಲು ಸ್ಕೂಟರ್ ನಲ್ಲಿ ತೆರಳಿದ್ದುಈ ಸಂದರ್ಭದಲ್ಲಿ ಬಾಲಕನೊಬ್ಬ ಸ್ಕೂಟರ್‌ನ ಆಕ್ಸಿಲರೇಟರ್ ವೇಗಗೊಳಿಸಿದ್ದರಿಂದ ಆಯ ತಪ್ಪಿ ಬಿದ್ದಿರುವ ಘಟನೆ ನಡೆದಿದೆ. ಸದ್ಯ ಈ ಭಯಾನಕ ವಿಡಿಯೊ‌ ವೈರಲ್ ಆಗಿದೆ.

ಮಹಾತ್ಮ ಗಾಂಧಿ ಕ್ರೀಡಾಂಗಣಕ್ಕೆ ಸಚಿವ ಪರಮೇಶ್ವರ್ ಹೆಸರು ವಿರೋಧಿಸಿ ಬಿಜೆಪಿ ಪ್ರತಿಭಟನೆ

ತುಮಕೂರಿನ ಮಹಾತ್ಮ ಗಾಂಧಿ ಕ್ರೀಡಾಂಗಣಕ್ಕೆ ಸಚಿವ ಪರಮೇಶ್ವರ್ ಹೆಸರು

ಹಾಳಾಗಿದ್ದ ಮಹಾತ್ಮ ಗಾಂಧಿ ಕ್ರೀಡಾಂಗಣವನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ಸುಮಾರು 50 ಕೋಟಿ ರೂ. ವೆಚ್ಚದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣದಂತೆ ನಿರ್ಮಾಣ ಮಾಡಲು ಶಾಸಕ ಜಿ.ಬಿ.ಜ್ಯೋತಿಗಣೇಶ್ ಕಾಳಜಿ ವಹಿಸಿದ್ದರು. ಆದರೆ, ಏನೂ ಮಾಡದ ಸಚಿವ ಡಾ.ಪರಮೇಶ್ವರ್ ಅವರು ತಮ್ಮ ಹೆಸರು ಹಾಕಿಕೊಂಡು, ಪ್ರಚಾರ ಪಡೆಯುತ್ತಿದ್ದಾರೆ ಎಂದು ಬಿಜೆಪಿ ಮುಖಂಡರು ಟೀಕಿಸಿದ್ದಾರೆ.

ಪಿಇಎಸ್‌ ವಿವಿಯಲ್ಲಿ ಮಹಿಳಾ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌; ದೇಶದ ಅಗ್ರ 16 ವಿವಿಗಳ ಕ್ರೀಡಾಪಟುಗಳು ಭಾಗಿ

ಪಿಇಎಸ್‌ ವಿವಿಯಲ್ಲಿ ಮಹಿಳಾ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌

PES University: ಬೆಂಗಳೂರಿನ ಪಿಇಎಸ್‌ ವಿಶ್ವವಿದ್ಯಾಲಯ ವತಿಯಿಂದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳಾ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ ಹಮ್ಮಿಕೊಳ್ಳಲಾಗಿತ್ತು. ದೇಶದ ಅಗ್ರ 16 ವಿಶ್ವವಿದ್ಯಾಲಯಗಳು ಹಾಗೂ ಉನ್ನತ ಶ್ರೇಯಾಂಕಿತ ಕ್ರೀಡಾಪಟುಗಳು ಸೇರಿದಂತೆ 90ಕ್ಕೂ ಹೆಚ್ಚು ಮಹಿಳಾ ಆಟಗಾರರು ಭಾಗವಹಿಸಿದ್ದರು.

ನಯನಾ ಮೋಟಮ್ಮಗೆ ಅಶ್ಲೀಲ ಕಮೆಂಟ್‌ ಮಾಡಿದವ ಅರೆಸ್ಟ್‌; ಬಟ್ಟೆ ಬಗ್ಗೆ ಮಾತನಾಡಿದ್ದಕ್ಕೆ ಶಾಸಕಿ ಕಿಡಿ

ನಯನಾ ಮೋಟಮ್ಮಗೆ ಅಶ್ಲೀಲ ಕಮೆಂಟ್‌ ಮಾಡಿದ ಯುವಕ ಅರೆಸ್ಟ್‌

Congress MLA Nayana Motamma: ರಾಜಕೀಯಕ್ಕೆ ಪ್ರವೇಶ ಮಾಡುವ ಮುನ್ನ ಹೇಗಿದ್ದೆ ಅದೇ ರೀತಿ ಈಗಲೂ ಇರಲು ಪ್ರಯತ್ನ ಮಾಡುತ್ತೇನೆ. ನಾನು ನನ್ನ ಜೀವನವನ್ನು ಪಾರದರ್ಶಕವಾಗಿ ನಡೆಸಬೇಕು. ರಾಜಕೀಯವಾಗಿ ಯಾವುದೇ ಮುಚ್ಚುಮರೆ ಇರಬಾರದು. ಆದರೆ, ಪರ್ಸನಲ್ ಆಗಿ ಟಾರ್ಗೆಟ್ ಮಾಡಿ ಕಾಮೆಂಟ್ ‌ಮಾಡುತ್ತಾರೆ ಎಂದು ಶಾಸಕಿ ನಯನಾ ಮೋಟಮ್ಮ ಕಿಡಿಕಾರಿದ್ದಾರೆ.

10 ವರ್ಷಗಳಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಅಸಮಾನತೆ ಹೋಗಿ ಸಮಾನತೆ ಬರಲಿದೆ: ಸಿಎಂ ಸಿದ್ದರಾಮಯ್ಯ

ರಾಜಕಾರಣಕ್ಕಾಗಿ ಸುಳ್ಳನ್ನು ಹೇಳುವ ವಿರೋಧ ಪಕ್ಷಗಳು: ಸಿಎಂ ಸಿದ್ದರಾಮಯ್ಯ

CM Siddaramaiah: ವಿರೋಧಪಕ್ಷದವರು ರಾಜಕಾರಣಕ್ಕಾಗಿ ಸುಳ್ಳನ್ನೇ ಹೇಳುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ಮೂಲಸೌಕರ್ಯ ಕಾಮಗಾರಿಗಳಿಗೆ ಸರ್ಕಾರದಲ್ಲಿ ಅನುದಾನವಿಲ್ಲ ಎಂದು ಎಲ್ಲೆಡೆ ಅಪಪ್ರಚಾರ ಮಾಡುತ್ತಿದ್ದಾರೆ. ಸರ್ಕಾರ ದಿವಾಳಿಯಾಗಿದ್ದರೆ ಜೇವರ್ಗಿ ಮತಕ್ಷೇತ್ರ ಒಂದರಲ್ಲಿ 906 ಕೋಟಿಗಳನ್ನು ವೆಚ್ಚ ಮಾಡಲಾಗುತ್ತಿರಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

Loading...