ಜನಸಂಘ, ಪುರಂದರ, ಕನಕದಾಸರ ನೆನೆದ ಮೋದಿ, ನವ ಸಂಕಲ್ಪ ಪಾಲನೆಗೆ ಕರೆ
Narendra Modi Udupi visit: ಕನ್ನಡದಲ್ಲೇ ಭಾಷಣ ಆರಂಭಿಸಿದ ಪಿಎಂ ನರೇಂದ್ರ ಮೋದಿ, ʼಇಂದು ನನಗೆ ಉಡುಪಿ ಶ್ರೀಕೃಷ್ಣ ಮತ್ತು ಮಧ್ವಾಚಾರ್ಯರ ಆಶೀರ್ವಾದ ಸಿಕ್ಕಿದೆ. ಉಡುಪಿ ಮಠದಲ್ಲಿ ಲಕ್ಷ ಕಂಠ ಗೀತಾ ಪಠಣ ನಡೆದಿದೆ. ಇದರಲ್ಲಿ ಭಾಗಿಯಾಗಿದ್ದು ನನ್ನ ಪರಮ ಸೌಭಾಗ್ಯ. ಉಡುಪಿಗೆ ಬರುವುದೆಂದರೆ ನನಗೆ ಬಹಳ ಸಂತಸದ ವಿಚಾರʼ ಎಂದು ನುಡಿದರು. ಪುತ್ತಿಗೆ ಶ್ರೀಗಳಿಂದ ʼಭಾರತ ಭಾಗ್ಯ ವಿಧಾತʼ ಬಿರುದನ್ನು ಅವರು ಸ್ವೀಕರಿಸಿದರು.