Asha Raghu: ಕನ್ನಡ ಸಾಹಿತಿ, ಪ್ರಕಾಶಕಿ ಆಶಾ ರಘು ಇನ್ನಿಲ್ಲ
ಆಶಾ ರಘು ಅವರು ಕನ್ನಡ ಕಾದಂಬರಿಕಾರರಾಗಿದ್ದರಲ್ಲದೆ ರಂಗಭೂಮಿ, ಕಿರುತೆರೆ, ಬೆಳ್ಳಿತೆರೆಗಳಲ್ಲಿಯೂ ಕಲಾವಿದೆಯಾಗಿ, ಸಂಭಾಷಣೆಕಾರರಾಗಿ, ಸಹಾಯಕ ನಿರ್ದೇಶಕರಾಗಿ ಕೂಡ ಕಾರ್ಯ ನಿರ್ವಹಿಸಿದ್ದಾರೆ. ಇತ್ತೀಚೆಗೆ ಉಪಾಸನಾ ಎಂಬ ಪ್ರಕಾಶನವನ್ನೂ ಆರಂಭಿಸಿ ಯುವ ಲೇಖಕ/ಕಿಯರ ಪುಸ್ತಕಗಳನ್ನು ಪ್ರಕಟಿಸಿದ್ದರು. ಅವರ ಪತಿ ಖ್ಯಾತ ಆಹಾರ ತಜ್ಞ, ಲೇಖಕ ಕೆ.ಸಿ. ರಘು ಎರಡು ವರ್ಷ ಹಿಂದೆ ಮೃತಪಟ್ಟಿದ್ದರು.