ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

Gudibande News: ಆಧುನಿಕತೆ, ನಗರೀಕರಣ ಹೆಸರಿನಲ್ಲಿ ಪರಿಸರ ನಾಶ ಸರಿಯಲ್ಲ: ನ್ಯಾ.ಪ್ರೇಮ್ ಕುಮಾರ್

ಆಧುನಿಕತೆ, ನಗರೀಕರಣ ಹೆಸರಿನಲ್ಲಿ ಪರಿಸರ ನಾಶ ಸರಿಯಲ್ಲ

ಪ್ರಪಂಚ ದಿನೇ ದಿನೇ ವೇಗವಾಗಿ ಬೆಳೆಯುತ್ತಿದೆ. ಈ ಹಿಂದೆ ಸಾಕಷ್ಟು ಅರಣ್ಯ ಪ್ರದೇಶವನ್ನು ನಾವು ಕಾಣುತ್ತಿದ್ದೆವು. ಇದೀಗ ಎಲ್ಲಿ ನೋಡಿದರೂ ಕಟ್ಟಡಗಳು ಕಾಣಿಸುತ್ತವೆ. ಪರಿಸರ ನಾಶದಿಂದ ಈಗಾಗಲೇ ನಾವು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಈಗಲಾದರೂ ನಾವು ಎಚ್ಚೆತ್ತುಕೊಂಡು ಪರಿಸರ ಕಾಪಾಡುವ ಕಾರ್ಯಕ್ಕೆ ಮುಂದಾಗಬೇಕು.

World Environment Day: ಕಾಂಗ್ರೆಸ್ ಸರ್ಕಾರದ ವಿರುದ್ಧ ಸೀಕಲ್ ರಾಮಚಂದ್ರಗೌಡ ವಾಗ್ದಾಳಿ; ಜಂಗಮಕೋಟೆ ರೈತರ ಹೋರಾಟಕ್ಕೆ ಬಿಜೆಪಿ ಬೆಂಬಲ

ಕಾಂಗ್ರೆಸ್ ಸರ್ಕಾರದ ವಿರುದ್ಧ ಸೀಕಲ್ ರಾಮಚಂದ್ರಗೌಡ ವಾಗ್ದಾಳಿ

ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದ್ದು, ಪ್ರತಿಯೊಂದು ಮನೆಯಲ್ಲೂ ಕನಿಷ್ಠ ಒಂದು ಗಿಡವನ್ನು ನೆಟ್ಟು ಬೆಳೆಸುವ ಮೂಲಕ ಪರಿಸರ ಉಳಿವಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ಬಿಜೆಪಿ ಬೂತ್ ಮಟ್ಟದ ಅಧ್ಯಕ್ಷರ ತಾಯಂದಿರ ಹೆಸರಿನಲ್ಲಿ ಗಿಡಗಳನ್ನು ನೆಡುವ ಮೂಲಕ ಪರಿಸರ ಜಾಗೃತಿ ಮೂಡಿಸಲಾಯಿತು.

MLA KH Puttaswamy Gowda: ರೈತನಿಗೆ ಆಸರೆಯಾಗಿ ನಿಲ್ಲಬೇಕು ಎಂಬ ಉದ್ದೇಶದಿಂದ ಇಂದು ಫಲಾನುಭವಿಗಳ ಬೃಹತ್ ಸಮಾವೇಶ : ಶಾಸಕ ಪುಟ್ಟಸ್ವಾಮಿಗೌಡ

ರೈತನಿಗೆ ಆಸರೆಯಾಗಿ ನಿಲ್ಲಬೇಕು ಎಂಬ ಉದ್ದೇಶದಿಂದ ಇಂದು ಸಮಾವೇಶ

ಕೃಷಿ ಚಟುವಟಿಕೆಗಳಿಗೆ ನೆರವಾಗಲು ಸರ್ಕಾರದ ಸಹಾಯಧನದಲ್ಲಿ ಕೃಷಿ ಇಲಾಖಾ ವತಿಯಿಂದ ಟ್ರ‍್ಯಾಕ್ಟರ್, ಉಳಿಮೆ ಯಂತ್ರ,ಕಳೆ ನಾಶಕ ಯಂತ್ರ,ರೈತರ ಬೆಳೆಗಳಿಗೆ ನೆರವಾಗಲು ಹನಿ ನೀರಾವರಿ ಉಪಕರಣಗಳು, ಗಂಗಾ ಕಲ್ಯಾಣ ಯೋಜನೆಯಡಿ ಕೊರೆದ ಕೊಳವೆ ಬಾವಿಗಳಿಂದ ನೀರೆತ್ತಲು ಪಂಪು ಮೋಟಾರು, ಕೇಬಲ್, ಪೈಪು ,ವಿದ್ಯುತ್ ಉಪಕರಣಗಳನ್ನು ನೀಡಲಾಗುತ್ತಿದೆ. ಇದರ ಜೊತೆಗೆ ಕೃಷಿ ಹೊಂಡ ನಿರ್ಮಿಸಿಕೊಳ್ಳಲು ಸಹಾಯಧನ ನೀಡಲಾಗುತ್ತಿದೆ

ರಾಜ್ಯಸಭೆ ಚುನಾವಣೆ; ಕಾಂಗ್ರೆಸ್‌ನ ಪವನ್ ಖೇರಾ, ಮನ್ಸೂರ್ ಅಲಿಖಾನ್ ನಾಮಪತ್ರ ಸಲ್ಲಿಕೆ

ರಾಜ್ಯಸಭೆ ಚುನಾವಣೆ; ಪವನ್ ಖೇರಾ, ಮನ್ಸೂರ್ ಅಲಿಖಾನ್ ನಾಮಪತ್ರ ಸಲ್ಲಿಕೆ

ರಾಜ್ಯಸಭೆ ಹಾಗೂ ವಿಧಾನ ಪರಿಷತ್‌ ಚುನಾವಣೆಗೆ ಸ್ಪರ್ಧಿಸುವವರು ನಾಮಪತ್ರ ಸಲ್ಲಿಸಲು ಜೂನ್ 8 ಕೊನೆಯ ದಿನವಾಗಿದೆ. ಜೂ.18ರಂದು ಚುನಾವಣೆ ನಡೆಯಲಿದ್ದು, ಅಂದೇ ಮತದಾನವಾಗಿ ಫಲಿತಾಂಶ ಪ್ರಕಟವಾಗಲಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ಪಿಎಚ್‌ಡಿ ಆಮಿಷ ತೋರಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ; ಧಾರವಾಡ ವಿವಿ ಪ್ರೊಫೆಸರ್‌ ವಿರುದ್ಧ ಗಂಭೀರ ಆರೋಪ

ವಿದ್ಯಾರ್ಥಿನಿ ಮೇಲೆ ಧಾರವಾಡ ವಿವಿ ಪ್ರೊಫೆಸರ್‌ ಲೈಂಗಿಕ ದೌರ್ಜನ್ಯ

Dharwad university professor Case: ಧಾರವಾಡ ವಿವಿ ಸಸ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ದೇವರಾಜ ತಂಗುದೊರೈ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಪಿಎಚ್‌ಡಿ ಕೊಡಿಸುವ ಆಮಿಷ ತೋರಿ ವಿದ್ಯಾರ್ಥಿನಿ ಮೇಲೆ ಪ್ರೊಫೆಸರ್‌ ನಿರಂತರ ಲೈಂಗಿಕ ದೌರ್ಜನ್ಯ ಎಸಗಿದ್ದು, ಇತರ ವಿದ್ಯಾರ್ಥಿಗಳಿಗೂ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

Krishna Byre Gowda: ಕಂದಾಯ ಖಾತೆಯಲ್ಲೇ ಕೃಷ್ಣಬೈರೇಗೌಡರನ್ನು ಮುಂದುವರೆಸಲು ಕೃಷಿಕ ಸಮಾಜ ಒತ್ತಾಯ

ಕಂದಾಯ ಖಾತೆಯಲ್ಲೇ ಕೃಷ್ಣಬೈರೇಗೌಡರನ್ನು ಮುಂದುವರೆಸಲು ಒತ್ತಾಯ

ಬಹಳ ವರ್ಷಗಳಿಂದ ಕುಂಠಿತಗೊಂಡಿದ್ದ, ಫೌತಿ ಖಾತೆ, ಪಿ.ನಂಬರ್ ದುರಸ್ತಿ, ಕಂದಾಯ ಗ್ರಾಮ, ಗ್ರಾಮ ಠಾಣೆಗಳ ರಚನೆ, ಬಹಳ ಮುಖ್ಯವಾಗಿ,ರೈತರ ದಾಖಲೆಗಳ ಡಿಜಿಟಲೀಕರಣ ಮುಂತಾದ ಕಾರ್ಯಗಳನ್ನು ಬಹಳ ವ್ಯವಸ್ಥಿತವಾಗಿ ಮಾಡಿರುವುದರಿಂದ ರೈತ ಸಮುದಾಯಕ್ಕೆ ಅನುಕೂಲ ವಾಗಿತ್ತು. ತಮ್ಮ ದಾಖಲೆ ಗಳಿಗಾಗಿ ರೈತರು ಕಚೇರಿಗೆ ಅಲೆಯುವುದನ್ನು ತಪ್ಪಿಸಿ ಬೆರಳ ತುದಿಯಲ್ಲೇ ಎಲ್ಲಾ ದಾಖೆಗಳು ಸಿಗುವಂತೆ ಮಾಡುವಲ್ಲಿ ಕೃಷ್ಣ ಬೈರೇಗೌಡರು ಪ್ರಗತಿ ಸಾಧಿಸಿದ್ದರು.

Gauribidanur News: ತೀರ್ಥಶಾಲೆಯಲ್ಲಿ ಡಾ.ಮಾಸ್ತಿ ಮತ್ತು ಡಾ.ಎಚ್.ನರಸಿಂಹಯ್ಯ ಜಯಂತಿ

ತೀರ್ಥಶಾಲೆಯಲ್ಲಿ ಡಾ.ಮಾಸ್ತಿ ಮತ್ತು ಡಾ.ಎಚ್.ನರಸಿಂಹಯ್ಯ ಜಯಂತಿ

ಡಾ.ಹೆಚ್.ನರಸಿಂಹಯ್ಯನವರ ಸರಳ ಮತ್ತು ಆದರ್ಶ ಜೀವನದ ಮೌಲ್ಯಗಳನ್ನು ನಾವು ಅಳವಡಿಸಿ ಕೊಳ್ಳಬೇಕು. ಸಾಹಿತ್ಯ ವಿಜ್ಞಾನ, ಶಿಕ್ಷಣ ಮತ್ತು ಲಲಿತ ಕಲೆಗಳಿಗೆ ಇವರು ನೀಡಿರುವ ಕೊಡುಗೆ ಅನನ್ಯವಾಗಿದೆ. ಪ್ರತಿಯೊಂದು ಶಾಲಾ ಕಾಲೇಜು, ಸರ್ಕಾರಿ ಕಚೇರಿ ಮತ್ತುಸಂಘ ಸಂಸ್ಥೆಗಳಲ್ಲಿ ಇವರ ಹುಟ್ಟುಹಬ್ಬವನ್ನು ರಾಜ್ಯಮಟ್ಟದಲ್ಲಿ ಆಚರಿಸಬೇಕೆಂದು ಸರ್ಕಾರಕ್ಕೆ ವಿನಂತಿಸಿದರು.

Chikkaballapur News: ಶಿಸ್ತು, ಸಂಯಮಗಳೇ ವಿದ್ಯಾರ್ಥಿ ಜೀವನದ ಯಶಸ್ಸಿಗೆ ಭದ್ರ ಬುನಾದಿ : ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ವಿ.ವೆಂಕಟೇಶ್ ಅಭಿಮತ

ಶಿಸ್ತು, ಸಂಯಮಗಳೇ ವಿದ್ಯಾರ್ಥಿ ಜೀವನದ ಯಶಸ್ಸಿಗೆ ಭದ್ರ ಬುನಾದಿ

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಕ್ಷೇತ್ರದತ್ತ ಹೆಚ್ಚಿನ ಗಮನ ಹರಿಸು ವುದರ ಜೊತೆಗೆ ಪರ್ಯಾಯ ಅವಕಾಶಗಳನ್ನೂ ಸದುಪಯೋಗಪಡಿಸಿಕೊಳ್ಳಬೇಕು. ಕೇವಲ ಪದವಿ ಪಡೆದರೆ ಸಾಕಾಗುವುದಿಲ್ಲ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ತಮ್ಮ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಬೇಕು. ಸಾಧನೆ ಮಾಡುವ ಮೂಲಕ ಕಾಲೇಜು ಹಾಗೂ ಜಿಲ್ಲೆಯ ಹೆಸರನ್ನು ಉಜ್ವಲ ಗೊಳಿಸಬೇಕು

Haveri Rains: ಹಾವೇರಿ ಜಿಲ್ಲೆಯಲ್ಲಿ ಮುಂಗಾರು ಮಳೆ ಅಬ್ಬರ; ಹಲವಡೆ ಸಂಚಾರಕ್ಕೆ ಅಡ್ಡಿ, ಮನೆಗಳಿಗೆ ನೀರು ನುಗ್ಗಿ ಹಾನಿ

ಹಾವೇರಿಯಲ್ಲಿ ಮುಂಗಾರು ಮಳೆ ಅಬ್ಬರ; ಹಲವಡೆ ಸಂಚಾರಕ್ಕೆ ಅಡ್ಡಿ

Haveri News: ಹಾವೇರಿ ಜಿಲ್ಲೆಯ ಹಲವೆಡೆ ಶನಿವಾರ ಭಾರಿ ಮಳೆಯಾಗಿದೆ. ಅಗಡಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಅಡ್ಡಲಾಗಿ ಹರಿಯುವ ಹಳ್ಳವು ಭಾರೀ ಮಳೆಗೆ ತುಂಬಿ ಹರಿದ ಹಿನ್ನೆಲೆ ವಾಹನ ಸಂಚಾರಕ್ಕೆ ಸ್ಥಗಿತಗೊಂಡಿತ್ತು. ಇನ್ನು ಗ್ರಾಮದಲ್ಲಿ ಮನೆಗಳಿಗೆ‌ ನೀರು ನುಗ್ಗಿ ಸಾಕಷ್ಟು ಅವಾಂತರ ಸೃಷ್ಟಿಸಿದೆ.

MLA B.Z.Zameer Ahmed Khan: ಜಮೀರ್ ಅಹ್ಮದ್ ಖಾನ್ ಅವರಿಗೆ ಡಿಸಿಎಂ ಹುದ್ದೆ ಸೇರಿ: ಐವರಿಗೆ ಸಚಿವ ಸ್ಥಾನ ನೀಡಲು ಆಗ್ರಹ

ಜಮೀರ್ ಅವರಿಗೆ ಡಿಸಿಎಂ ಹುದ್ದೆ ಸೇರಿ: ಐವರಿಗೆ ಸಚಿವ ಸ್ಥಾನ ನೀಡಲು ಆಗ್ರಹ

ನಗರದ ಜಾಮಿಯಾ ಮಸೀದಿ ಎದುರು ಮುಸ್ಲಿಂ ಸಮುದಾಯದ ಮುಖಂಡರು ಹಾಗೂ ಬಾಂಧವರು, ನೂತನ ಸಚಿವ ಸಂಪುಟದ ಮೊದಲ ಪಟ್ಟಿಯಲ್ಲಿ ಕೇವಲ ಒಬ್ಬ ಮುಸ್ಲಿಂ ಶಾಸಕರಿಗೆ ಮಾತ್ರ ಸ್ಥಾನ ನೀಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಜಮೀರ್ ಅಹ್ಮದ್ ಖಾನ್, ವಿಧಾನ ಪರಿಷತ್ ಸದಸ್ಯ ನಸೀರ್ ಅಹ್ಮದ್ ಸೇರಿದಂತೆ ಒಟ್ಟು ಐದು ಮುಸ್ಲಿಂ ಪ್ರತಿನಿಧಿಗಳಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.

Calling off the Hunger Strike: ನಿರಾಹಾರ ಉಪವಾಸ ಸತ್ಯಾಗ್ರಹ ನಿರತ ರೈತರ ಮನವೊಲಿಕೆ ಮಾಡಿದ ಜಿಲ್ಲಾಧಿಕಾರಿ

ಹಾಲು ಕುಡಿಸುವ ಮೂಲಕ ಉಪವಾಸ ಸತ್ಯಾಗ್ರಹ ವಾಪಸ್ಸು ಮಾಡುವಲ್ಲಿ ಸಫಲ

ಜಿಲ್ಲಾಡಳಿತ ಭವನದ ಎದುರು ಕೆಐಎಡಿಬಿಗೆ ಭೂಮಿ ಕೊಡಲು ಸಿದ್ಧವಿರುವ 13 ಹಳ್ಳಿಗಳ ರೈತರು ಕಳೆದ 77 ದಿನಗಳಿಂದ ಪ್ರತಿಭಟನೆ ನಡೆಸುತ್ತಾ ಸರಕಾರದ ನಡೆ ಕಾಯುತ್ತಾ ಕೂತಿದ್ದರು. ಜಿಲ್ಲಾಡಳಿತವು ನಮ್ಮ ಹೋರಾಟವನ್ನು ಗಂಭೀರವಾಗಿ ಪರಿಗಣಿಸಿಲ್ಲ, ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ ಎಂದು ಬೇಸರಿಸಿ ಶುಕ್ರವಾರದಿಂದ ನಿರಾಹಾರ ಉಪವಾಸ ಕೈಗೊಂಡಿದ್ದರು.

ಬಕ್ರೀದ್‌ ಹಬ್ಬದ ವೇಳೆ ಗಲಾಟೆ ಪ್ರಕರಣ; ಬಿಜೆಪಿ ಶಾಸಕ ಶರಣು ಸಲಗರ್‌ಗೆ ಜಾಮೀನು ರಹಿತ ವಾರಂಟ್

ಬಿಜೆಪಿ ಶಾಸಕ ಶರಣು ಸಲಗರ್‌ಗೆ ಜಾಮೀನು ರಹಿತ ವಾರಂಟ್

MLA Sharanu Salagar: ಗೋಹತ್ಯೆ ವಿಚಾರ ನಡೆದ ಗಲಾಟೆ ಪ್ರಕರಣವನ್ನು ತನಿಖೆ ನಡೆಸಿರುವ ಪೊಲೀಸರು ಈಗಾಗಲೇ ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ವಿಚಾರಣೆಗೆ ಶಾಸಕ ಸಲಗರ್ ಗೈರಾಗಿದ್ದ ಹಿನ್ನೆಲೆ ಬೆಂಗಳೂರಿನ 42ನೇ ಎಸಿಜೆಎಂ ಕೋರ್ಟ್‌ ಜಾಮೀನು ರಹಿತ ವಾರಂಟ್ ಹೊರಡಿಸಿದೆ.

ಕಾಪು ಮಾರಿ ಗುಡಿ: ಬ್ರಹ್ಮ ಕಲಶೋತ್ಸವದ ಹಿಂದಿನ ಶಕ್ತಿ ಡಾ. ಪ್ರಕಾಶ್‌ ಶೆಟ್ಟಿ

ಕಾಪು ಮಾರಿ ಗುಡಿ: ಬ್ರಹ್ಮ ಕಲಶೋತ್ಸವದ ಹಿಂದಿನ ಶಕ್ತಿ ಡಾ. ಪ್ರಕಾಶ್‌ ಶೆಟ್ಟಿ

ಕಾಪು ಹೊಸ ಮಾರಿಗುಡಿಯ ಬೇರುಗಳು 17ನೆಯ ಶತಮಾನಕ್ಕೆ ಕರೆದೊಯ್ಯುತ್ತವೆ. ವಿಜಯನಗರ ಸಾಮ್ರಾಜ್ಯದ ಅಂಗವಾಗಿದ್ದ ಕೇಳಾಡಿ ನಾಯಕ ಮನೆತನದ ಅರಸ ಬಸಪ್ಪ ನಾಯಕ ಕ್ರಿ.ಶ. 1743ರಲ್ಲಿ ಕಾಪು ಸಮುದ್ರ ತೀರದಲ್ಲಿ ಮನೋಹರಗಢ ಎಂಬ ಕೋಟೆ ಮತ್ತು ಮಳ್ಳೂರಿನಲ್ಲಿ ಸೇನಾ ಕೋಟೆ ನಿರ್ಮಿಸಿದ. ಈ ಸೇನೆಯ ಜತೆ ಮಾರಿ ದೇವಿ ಕಾಪುವಿಗೆ ಬಂದಳೆಂಬ ನಂಬಿಕೆ ಇರುವುದರಿಂದ ಆಕೆ ದಂಡಿನ ಮಾರಿ ಎಂದೇ ಪ್ರಸಿದ್ಧಿ.

Pravasi Prapancha: ಜಗಮಗಿಸುತಿಹುದು ಕಾಪು ಶ್ರೀ ಮಾರಿ ಗುಡಿ

ಭಕ್ತರ ಕೈ ಬೀಸಿ ಕರೆಯುತ್ತಿದೆ ಕಾಪು ಶ್ರೀ ಮಾರಿ ಗುಡಿ

Kaup Mari Gudi: ಕರ್ನಾಟಕದ ಕರಾವಳಿಯಲ್ಲಿ ದೇವಾಲಯಗಳ ಕೊರತೆಯಿಲ್ಲ. ಆದರೆ ಕೆಲವೊಮ್ಮೆ ಒಂದು ದೇವಾಲಯ ಕೇವಲ ಆರಾಧನೆಯ ಕೇಂದ್ರವಾಗಿ ಉಳಿಯದೆ, ಒಂದು ಸಮುದಾಯದ ಒಗ್ಗಟ್ಟು, ಭಕ್ತಿ, ಸಂಘಟನಾ ಶಕ್ತಿ ಮತ್ತು ನಾಯಕತ್ವದ ಪ್ರತೀಕವಾಗಿ ರೂಪುಗೊಳ್ಳುತ್ತದೆ. ಕಾಪು ಶ್ರೀ ಹೊಸ ಮಾರಿಗುಡಿ ಅಂಥ ಒಂದು ಅಪರೂಪದ ಉದಾಹರಣೆ. ಐದು ಶತಮಾನಗಳ ಸಂಪ್ರದಾಯವನ್ನು ಹೊತ್ತ ಈ ಪವಿತ್ರ ಕ್ಷೇತ್ರ ಇಂದು ₹99 ಕೋಟಿ ವೆಚ್ಚದ ಭವ್ಯ ಶಿಲಾಮಂದಿರವಾಗಿ ಪುನರ್ಜನ್ಮ ಪಡೆದಿದೆ. ಕಳೆದ ವರ್ಷ ಇಲ್ಲಿ ಜರುಗಿದ ಬ್ರಹ್ಮಕಲಶೋತ್ಸವ ಮಹಾಕಾರ್ಯದ ಹಿಂದಿರುವ ಶಕ್ತಿ ಸಾವಿರಾರು ಭಕ್ತರ ಭಕ್ತಿಯಾಗಿದ್ದರೆ, ಅದಕ್ಕೆ ದಿಕ್ಕು ನೀಡಿದ ನಾಯಕತ್ವ ಡಾ. ಪ್ರಕಾಶ್ ಶೆಟ್ಟಿ ಬಂಜಾರ ಅವರದು.

ರಾಮಲಿಂಗಾರೆಡ್ಡಿ ರಾಜೀನಾಮೆ ವಾಪಸ್ ಪಡೆದಿದ್ದಾರೆ: ರಣದೀಪ್ ಸುರ್ಜೆವಾಲ

ರಾಮಲಿಂಗಾರೆಡ್ಡಿ ರಾಜೀನಾಮೆ ವಾಪಸ್ ಪಡೆದಿದ್ದಾರೆ: ರಣದೀಪ್ ಸುರ್ಜೆವಾಲ

Ramalinga Reddy's resignation: ರಾಮಲಿಂಗಾರೆಡ್ಡಿ ಅವರ ರಾಜೀನಾಮೆ ವಿಚಾರ ತಿಳಿಯುತ್ತಿದ್ದಂತೆ ಬಿ.ಕೆ.ಹರಿಪ್ರಸಾದ್‌, ಸಿಎಂ ಡಿ.ಕೆ.ಶಿವಕುಮಾರ್‌, ಸಿದ್ದರಾಮಯ್ಯ ಹಾಗೂ ನಾನು ಅವರ ಜತೆ ಮಾತನಾಡಿದ್ದೇವೆ. ಈಗಾಗಲೇ ರಾಜೀನಾಮೆ ವಾಪಸ್‌ ಪಡೆದಿದ್ದಾರೆ ಎಂದು ರಣದೀಪ್ ಸಿಂಗ್ ಸುರ್ಜೆವಾಲ ಸ್ಪಷ್ಟನೆ ನೀಡಿದ್ದಾರೆ.

ಬೀದರ್‌ನಲ್ಲೊಬ್ಬ ವಿಕೃತ ಕಾಮಿ; ಆಸ್ಪತ್ರೆಯ ಶವಾಗಾರದಲ್ಲಿ ಮೃತ ಮಹಿಳೆಯರ ಫೋಟೊ ಕ್ಲಿಕ್ಕಿಸುತ್ತಿದ್ದ ಮುನೀರ್ ಅಹ್ಮದ್ ಅರೆಸ್ಟ್‌

ಮೃತ ಮಹಿಳೆಯರ ಫೋಟೊ ಕ್ಲಿಕ್ಕಿಸುತ್ತಿದ್ದ ವಿಕೃತ ಕಾಮಿ ಅರೆಸ್ಟ್

Crime News: ಬೀದರ್‌ನ ಬ್ರಿಮ್ಸ್ ಬೋಧನಾ ಆಸ್ಪತ್ರೆಯ ಶವಾಗಾರದೊಳಗೆ ಮೃತ ಮಹಿಳೆಯರ ಫೋಟೊವನ್ನು ತನ್ನ ಫೋನ್‌ನಲ್ಲಿ ರಹಸ್ಯವಾಗಿ ತೆಗೆಯುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತನನ್ನು ಮುನೀರ್ ಅಹ್ಮದ್ ಎಂದು ಗುರುತಿಸಲಾಗಿದೆ. ಈತ ಆಸ್ಪತ್ರೆಯಲ್ಲಿ ಅಟೆಂಡರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದ.

KCET Results 2026: ಸಿಇಟಿ ಫಲಿತಾಂಶ; ಎಂಜಿನಿಯರಿಂಗ್‌ ವಿಭಾಗದಲ್ಲಿ ತನಿಷಾ ಕಾರ್ತಿಕ್ ಪ್ರಥಮ ಸ್ಥಾನ; ಟಾಪರ್ಸ್‌ ಪಟ್ಟಿ ಇಲ್ಲಿದೆ

ಸಿಇಟಿ 2026 ಫಲಿತಾಂಶ; ಟಾಪರ್ಸ್‌ ಪಟ್ಟಿ ಇಲ್ಲಿದೆ ನೋಡಿ

ಉನ್ನತ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಅವರು ಸಿಇಟಿ ಫಲಿತಾಂಶ ಪ್ರಕಟಿಸಿದ್ದಾರೆ. ಎಂಜಿನಿಯರಿಂಗ್, ಫಾರ್ಮಸಿ, ಕೃಷಿ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಸಿಇಟಿ ರ‍್ಯಾಂಕ್ ಪ್ರಮುಖವಾಗಿದೆ. ಇನ್ನು ಈ ಬಾರಿ ಯಾವ ವಿಭಾಗದಲ್ಲಿ ಯಾರು ಟಾಪರ್ಸ್‌ ಆಗಿದ್ದಾರೆ ಎಂಬ ಮಾಹಿತಿ ಇಲ್ಲಿದೆ.

KSP Recruitment 2026: ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್‌ನ್ಯೂಸ್‌; ಬರೋಬ್ಬರಿ 3,991 ಸಿವಿಲ್‌ ಪೊಲೀಸ್‌ ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

3,991 ಸಿವಿಲ್‌ ಪೊಲೀಸ್‌ ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

Job Guide: ಕರ್ನಾಟಕ ರಾಜ್ಯ ಪೊಲೀಸ್‌ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್‌ ಕಾನ್ಸ್‌ಟೇಬಲ್‌ (ಸಿವಿಲ್‌) ಹುದ್ದೆಗಳ ಭರ್ತಿಗೆ ಅರ್ಜಿ ಅಹ್ವಾನಿಸಲಾಗಿದೆ. ಒಟ್ಟು 3,991 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ದ್ವಿತೀಯ ಪಿಯುಸಿ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್‌ ಮೂಲಕ ಅಪ್ಲೈ ಮಾಡಬೇಕಿದ್ದು, ಕೊನೆಯ ದಿನ ಜುಲೈ 3.

ಯಾವುದೇ ಕಾರಣಕ್ಕೂ ರಾಮಲಿಂಗಾರೆಡ್ಡಿ ರಾಜೀನಾಮೆ ಅಂಗೀಕರಿಸಲ್ಲ: ಡಿ.ಕೆ. ಶಿವಕುಮಾರ್‌

ಯಾವುದೇ ಕಾರಣಕ್ಕೂ ರಾಮಲಿಂಗಾರೆಡ್ಡಿ ರಾಜೀನಾಮೆ ಅಂಗೀಕರಿಸಲ್ಲ: ಡಿಕೆಶಿ

CM DK Shivakumar: ರಾಮಲಿಂಗಾರೆಡ್ಡಿ ಅವರು ನನ್ನ ಸ್ನೇಹಿತರು, ಅವರೊಂದಿಗೆ ಮಾತನಾಡಿದ್ದು, ಎಲ್ಲಾ ಸಮಸ್ಯೆ ಬಗೆಹರಿಸಲಾಗಿದೆ. ಯಾವುದೇ ಕಾರಣಕ್ಕೂ ಅವರ ರಾಜೀನಾಮೆ ಅಂಗೀಕರಿಸುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

Bengaluru Child Death: ಬೆಂಗಳೂರಿನಲ್ಲಿ ಹೀನ ಕೃತ್ಯ; ಮಗಳು ಕಪ್ಪಾಗಿದ್ದಾಳೆ ಎಂದು ಲವರ್‌ ಜತೆ ಸೇರಿ ಉಸಿರುಗಟ್ಟಿಸಿ ಕೊಂದ ತಾಯಿ!

ಮಗು ಕಪ್ಪಾಗಿದೆ ಎಂದು ಲವರ್‌ ಜತೆ ಸೇರಿ ಉಸಿರುಗಟ್ಟಿಸಿ ಕೊಂದ ತಾಯಿ!

ಬೆಂಗಳೂರಿನ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮಗು ಸಾವು ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದೆ. ಪ್ರಿಯಕರನ ಜತೆ ಬಾಳಲು ಅಡ್ಡಿಯಾಗಿದ್ದಾಳೆ ಮತ್ತು ಕಪ್ಪಾಗಿದ್ದಾಳೆ ಎಂದು ಮಗಳನ್ನು ತಾಯಿ ಮತ್ತು ಆಕೆಯ ಪ್ರಿಯಕರ ಸೇರಿ ಕೊಲೆ ಮಾಡಿದ್ದಾಳೆ ಎಂಬ ಆರೋಪ ಕೇಳಿಬಂದಿದೆ.

MLA Bhimanna Naik: ನಾನು ಯಾವುದೇ ಸಂದರ್ಭದಲ್ಲೂ ಸ್ಥಾನಕ್ಕಾಗಿ ಹಠ ಹಿಡಿದವನಲ್ಲ: ಶಾಸಕ ಭೀಮಣ್ಣ ನಾಯ್ಕ್

ನಾನು ಯಾವುದೇ ಸಂದರ್ಭದಲ್ಲೂ ಸ್ಥಾನಕ್ಕಾಗಿ ಹಠ ಹಿಡಿದವನಲ್ಲ

ಕಳೆದ ಐದು ವರ್ಷಗಳಲ್ಲಿ ಮೂರ್ನಾಲ್ಕು ಚುನಾವಣೆಗಳನ್ನು ಎದುರಿಸಿದ್ದೇವೆ. ಪ್ರತಿಯೊಂದು ಚುನಾವಣೆಯಲ್ಲೂ ಪಕ್ಷದ ಬಲವರ್ಧನೆಗಾಗಿ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ. ಲೋಕಸಭಾ ಚುನಾವಣೆ ಹಾಗೂ ವಿಧಾನಸಭಾ ಚುನಾವಣೆಗಳ ಸಂದರ್ಭದಲ್ಲಿ ಪಕ್ಷದ ವರಿಷ್ಠರು ಮತ್ತು ರಾಜ್ಯ ಅಧ್ಯಕ್ಷರ ಸೂಚನೆಯಂತೆ ಎಲ್ಲರೊಂದಿಗೆ ಚರ್ಚಿಸಿ, ಒಮ್ಮತದ ನಿರ್ಧಾರಗಳ ಮೂಲಕ ಕೆಲಸ ಮಾಡಲಾಗಿದೆ.

ಹಕ್ಕಿ ಡಿಕ್ಕಿ: ಬೆಂಗಳೂರು-ಮುಂಬೈ ಇಂಡಿಗೋ ವಿಮಾನ ಒಂದು ಗಂಟೆಗೂ ಹೆಚ್ಚು ಕಾಲ ವಿಳಂಬ

ಬೆಂಗಳೂರು-ಮುಂಬೈ ಇಂಡಿಗೋ ವಿಮಾನ ವಿಳಂಬ

Bird Strike: ಬೆಂಗಳೂರು-ಮುಂಬೈ ಇಂಡಿಗೋ ವಿಮಾನ ಟೇಕಾಫ್ ಆದಾಗ ಹಕ್ಕಿ ಡಿಕ್ಕಿ ಹೊಡೆದ ಘಟನೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರಿನಲ್ಲಿ ನಡೆದಿದೆ. ಹೀಗಾಗಿ ಪೈಲಟ್ ಮತ್ತೆ ವಿಮಾನ ನಿಲ್ದಾಣಕ್ಕೆ ಮರಳಬೇಕಾಯಿತು. ಪರಿಣಾಮ ವಿಮಾನ ಒಂದು ಗಂಟೆಗೂ ಹೆಚ್ಚು ಕಾಲ ವಿಳಂಬವಾಯಿತು.

ಯುಜಿಸಿಇಟಿ ಫಲಿತಾಂಶ ಪ್ರಕಟ; ರಿಸಲ್ಟ್‌ ಚೆಕ್‌ ಮಾಡಲು ಈ ಲಿಂಕ್‌ ಕ್ಲಿಕ್‌ ಮಾಡಿ

ಯುಜಿಸಿಇಟಿ ಫಲಿತಾಂಶ ಪ್ರಕಟ

UGCET Result: 2026 ನೇ ಸಾಲಿನ ಯುಜಿಸಿಟಿ ಫಲಿತಾಂಶ ಇಂದು (ಜೂನ್‌ 6) ಪ್ರಕಟವಾಗಿದೆ. ಸಚಿವ ಡಾ.ಶರಣಪ್ರಕಾಶ ಪಾಟೀಲ ಮಧ್ಯಾಹ್ನ 12 ಗಂಟೆಗೆ ಸುದ್ದಿಗೋಷ್ಠಿ ನಡೆಸಿ ಅಧಿಕೃತವಾಗಿ ಫಲಿತಾಂಶ ಪ್ರಕಟಿಸಿದರು. ಮಧ್ಯಾಹ್ನ 2 ಗಂಟೆಯಿಂದ ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಆನ್‌ಲೈನ್ ಮೂಲಕ ವೀಕ್ಷಿಸಲು ಅವಕಾಶ ದೊರೆಯಲಿದೆ.

ವಿಶ್ವ ಪರಿಸರ ದಿನ; ಕರ್ನಾಟಕ ಮತ್ತು ಕೇರಳ ವಲಯದ ಸಿಆರ್‌ಪಿಎಫ್ ವತಿಯಿಂದ ಸಸಿ ನೆಡುವ ಅಭಿಯಾನ

ಕರ್ನಾಟಕ ಮತ್ತು ಕೇರಳ ವಲಯದ ಸಿಆರ್‌ಪಿಎಫ್ ವತಿಯಿಂದ ಸಸಿ ನೆಡುವ ಅಭಿಯಾನ

ವಿಶ್ವ ಪರಿಸರ ದಿನದ ಅಂಗವಾಗಿ, ಕರ್ನಾಟಕ ಮತ್ತು ಕೇರಳ ವಲಯದ, ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF), ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸಲು ಸಿಆರ್‌ಪಿಎಫ್‌ ವಲಯದ ಅಡಿಯಲ್ಲಿ ಬರುವ ಎಲ್ಲಾ ಘಟಕಗಳಲ್ಲಿ ಸಸಿ ನೆಡುವ ಅಭಿಯಾನವನ್ನು ನಡೆಸಲಾಗಿದೆ.

Loading...