ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕರ್ನಾಟಕ

Lakkundi Treasure: ಲಕ್ಕುಂಡಿಯಲ್ಲಿ ಉತ್ಖನನ ವೇಳೆ ತ್ರಿಮುಖ ನಾಗಶಿಲೆ, ನಿಜವಾದ ಹಾವು ಪ್ರತ್ಯಕ್ಷ!

ಲಕ್ಕುಂಡಿಯಲ್ಲಿ ಉತ್ಖನನ ವೇಳೆ ತ್ರಿಮುಖ ನಾಗಶಿಲೆ, ನಿಜವಾದ ಹಾವು ಪ್ರತ್ಯಕ್ಷ!

ಉತ್ಖನನದ ಗುಂಡಿಯಲ್ಲಿ ಕಪ್ಪು ಬಳಪದ ಕಲ್ಲಿನಲ್ಲಿ ಕೆತ್ತಲಾದ ಐತಿಹಾಸಿಕ 'ತ್ರಿಮುಖ ನಾಗಶಿಲೆ' ದೊರೆತಿದೆ. ಈ ಶೋಧನೆಯು ಜನಪದ ನಂಬಿಕೆಗಳಿಗೆ ಮರುಜೀವ ನೀಡಿದೆ. ಗ್ರಾಮೀಣ ಭಾಗದಲ್ಲಿ ತ್ರಿಮುಖ, ಪಂಚಮುಖ ಅಥವಾ ಸಪ್ತಮುಖ ನಾಗಶಿಲೆಗಳಿರುವ ಕಡೆ ನಿಧಿ ಇರುತ್ತದೆ ಎಂಬ ಬಲವಾದ ನಂಬಿಕೆಯಿದೆ.

Kyasanur Forest Disease: ಮಂಗನ ಕಾಯಿಲೆಗೆ ಮೊದಲ ಬಲಿ, ಮಲೆನಾಡಿನಲ್ಲಿ ಹೆಚ್ಚಿದ ಆತಂಕ

ಮಂಗನ ಕಾಯಿಲೆಗೆ ಮೊದಲ ಬಲಿ, ಮಲೆನಾಡಿನಲ್ಲಿ ಹೆಚ್ಚಿದ ಆತಂಕ

ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ ಕೆಎಫ್​ಡಿಯಿಂದಾಗಿ ಒಬ್ಬ ಯುವಕನ ಸಾವು ಸಂಭವಿಸಿದೆ. ಇದು ನೆರೆಯ ಜಿಲ್ಲೆಯಾದ ಚಿಕ್ಕಮಗಳೂರಿನ ಜನರಲ್ಲೂ ಆತಂಕ ಇಮ್ಮಡಿಗೊಳಿಸಿದೆ. ರೋಗ ಹರಡದಂತೆ ತಡೆಯಲು ಆರೋಗ್ಯ ಇಲಾಖೆ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದೆ. ಸುಮಾರು 595ಕ್ಕೂ ಹೆಚ್ಚು ಜನರ ರಕ್ತದ ಮಾದರಿಯನ್ನು ಸಂಗ್ರಹಿಸಿ ಶಿವಮೊಗ್ಗದ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

Karnataka Weather: ರಾಜ್ಯದಲ್ಲಿ ಒಣಹವೆ, ರಾಜಧಾನಿಯಲ್ಲಿ ಕವಿದ ಮಂಜು

ರಾಜ್ಯದಲ್ಲಿ ಒಣಹವೆ, ರಾಜಧಾನಿಯಲ್ಲಿ ಕವಿದ ಮಂಜು

ಇಂದು ಬೆಂಗಳೂರಿನ ತಾಪಮಾನ ಕನಿಷ್ಠ 17°C ಇದ್ದು, ಗರಿಷ್ಠ 30°C ಇರಲಿದ್ದು, ಬೆಳಗ್ಗೆ ಮೋಡ ಕವಿದ ವಾತಾವರಣವಿರಲಿದೆ. ಕರಾವಳಿ ಮತ್ತು ಉತ್ತರ ಒಳನಾಡುಗಳಲ್ಲಿ ತೀವ್ರ ಚಳಿಯ (cold) ಜೊತೆಗೆ ಒಣ ಹವೆ (dry weather) ಇರಲಿದ್ದು, ದಕ್ಷಿಣ ಒಳನಾಡಿನಲ್ಲಿಯೂ ಶುಷ್ಕ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Assault Case: ಮದುವೆ ರಿಸೆಪ್ಷನ್‌ಗೆ ತೆರಳುತ್ತಿದ್ದ ವರನಿಗೆ ಚೂರಿಯಿಂದ ಇರಿತ; ವಧುವಿನ ಹಳೆ ಲವರ್‌ ಕೃತ್ಯ?

ಮದುವೆ ರಿಸೆಪ್ಷನ್‌ಗೆ ತೆರಳುತ್ತಿದ್ದ ವರನಿಗೆ ಚೂರಿಯಿಂದ ಇರಿತ‌, ಹಲ್ಲೆ

6 ತಿಂಗಳ ಹಿಂದೆ ನಯನ ಎನ್ನುವ ಯುವತಿಯೊಂದಿಗೆ ರವೀಶನ ಮದುವೆ ನಿಶ್ಚಯವಾಗಿತ್ತು. ಅದರಂತೆ ನಿನ್ನೆ (ಜನವರಿ 29) ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದ ವೆಂಕಟೇಶ್ವರ್ ಮಹಲ್‌ನಲ್ಲಿ ಆರತಕ್ಷತೆ ಆಯೋಜಿಸಲಾಗಿತ್ತು. ಹೀಗಾಗಿ ವರ ರವೀಶ್, ಕುಣಗಳ್ಳಿ ಗ್ರಾಮದಿಂದ ಕಾರಿನಲ್ಲಿ ಹೋಗುವ ವೇಳೆ ಸಿನಿಮೀಯ ರೀತಿಯಲ್ಲಿ ದುಷ್ಕರ್ಮಿಗಳು ಅಡ್ಡಹಾಕಿ ಹಲ್ಲೆ ಮಾಡಿದ್ದಾರೆ.

Contractors strike: ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಮುಂದಾದ ಗುತ್ತಿಗೆದಾರರು, ಡೆಡ್‌ಲೈನ್‌ ಫಿಕ್ಸ್‌

ಬಾಕಿ ಪಾವತಿಸದ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಮುಂದಾದ ಗುತ್ತಿಗೆದಾರರು

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಆರ್.ಮಂಜುನಾಥ್, ‘ರಾಜ್ಯ ಸರ್ಕಾರದ ನಿರ್ಲಕ್ಷ್ಯದ ಬಗ್ಗೆ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಅವರಿಗೆ ಪತ್ರ ಬರೆಯುತ್ತೇವೆ. ಆ ಮೂಲಕ ನಮ್ಮನ್ನು ಕೆಣಕಬೇಡಿ ಎಂದು ಮುಖ್ಯಮಂತ್ರಿಗಳಿಗೆ ಎಚ್ಚರಿಕೆ ನೀಡುತ್ತೇವೆ’ ಎಂದು ಹೇಳಿದ್ದಾರೆ.

ಹಿಂದೂ ಸಮಾಜದ ಸಂಸ್ಕೃತಿ ಹಾಗೂ ಪರಂಪರೆಯ ಜಾಗೃತಿಗಾಗಿ : ಫೆ.೧ರಂದು ಶಿಡ್ಲಘಟ್ಟದಲ್ಲಿ ಬೃಹತ್ ಹಿಂದೂ ಸಮಾಜೋತ್ಸವ

ಫೆ.೧ರಂದು ಶಿಡ್ಲಘಟ್ಟದಲ್ಲಿ ಬೃಹತ್ ಹಿಂದೂ ಸಮಾಜೋತ್ಸವ

ಹಿಂದೂ ಸಮಾಜೋತ್ಸವ ಆಯೋಜನಾ ಸಮಿತಿ ಶಿಡ್ಲಘಟ್ಟ ತಾಲ್ಲೂಕು ಅಧ್ಯಕ್ಷ ಹಾಗೂ ವೆಂಕಟೇಶ್ವರ ಚಿತ್ರಮಂದಿರದ ಮಾಲೀಕರಾದ ಪ್ರಕಾಶ್ ಮಾತನಾಡಿ, ಇದು ಯಾವುದೇ ರಾಜಕೀಯ ಪಕ್ಷ ಅಥವಾ ನಿರ್ದಿಷ್ಟ ಜಾತಿಗೆ ಸೀಮಿತವಾದ ಕಾರ್ಯಕ್ರಮವಲ್ಲ. ಸನಾತನ ಧರ್ಮದ ಉಳಿವು, ಧಾರ್ಮಿಕ ಮೌಲ್ಯ ಗಳ ಸಂರಕ್ಷಣೆ ಹಾಗೂ ಅವುಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ಪ್ರತಿಯೊಬ್ಬ ಹಿಂದೂ ಬಾಂಧವರ ಮೇಲಿದೆ.

ವಸತಿ ನಿಲಯಗಳಲ್ಲಿನ ಮಕ್ಕಳ ಸುರಕ್ಷತೆಗೆ ಕಟ್ಟುನಿಟ್ಟಿನ ಕ್ರಮ ವಹಿಸುವುದು ಅತ್ಯಗತ್ಯ : ಹಿರಿಯ ಮಕ್ಕಳ ಪೊಲೀಸ್ ಕಲ್ಯಾಣಾಧಿಕಾರಿ ಆರ್. ಪ್ರಕಾಶ್ ತಾಕೀತು

ವಸತಿ ನಿಲಯಗಳಲ್ಲಿನ ಮಕ್ಕಳ ಸುರಕ್ಷತೆಗೆ ಕ್ರಮ ವಹಿಸುವುದು ಅತ್ಯಗತ್ಯ

ಸರಕಾರಿ ಅಥವಾ ಖಾಸಗಿ ವಸತಿ ನಿಲಯಗಳಲ್ಲಿನ ಮಕ್ಕಳ ಸುರಕ್ಷತೆಗೆ ಸಂಬಂಧ ಪಟ್ಟಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮವಹಿಸುವುದು ಅತ್ಯಗತ್ಯ ತಪ್ಪಿದ್ದಲ್ಲಿ ಕಾನೂನು ರೀತ್ಯ ಕ್ರಮ ಜರುಗಿಸಲಾಗುವುದು ಎಂದು ಹಿರಿಯ ಮಕ್ಕಳ ಪೊಲೀಸ್ ಕಲ್ಯಾಣಾಧಿಕಾರಿ ಆರ್. ಪ್ರಕಾಶ್ ವಸತಿ ನಿಲಯ ಅಧಿಕಾರಿಗಳಿಗೆ ತಾಕೀತು ಮಾಡಿದರು.

ವಿವೇಕವಾಣಿ ಇಂದಿಗೂ ಜೀವಂತವಾಗಿದೆ : ಪಿಡಿಜೆ ರಾಮಲಿಂಗೇಗೌಡ

ವಿವೇಕವಾಣಿ ಇಂದಿಗೂ ಜೀವಂತವಾಗಿದೆ : ಪಿಡಿಜೆ ರಾಮಲಿಂಗೇಗೌಡ

ಸ್ವಾಮಿ ವಿವೇಕಾನಂದರ ಆದರ್ಶಗಳು ಧೈರ್ಯ, ಆತ್ಮವಿಶ್ವಾಸ,ಶಿಸ್ತು,ಸೇವಾಭಾವನೆ ಹಾಗೂ ರಾಷ್ಟ್ರಭಕ್ತಿ ಯನ್ನು ಯುವಜನರಲ್ಲಿ ಬೆಳೆಸುತ್ತವೆ ಅವರು ಶಿಕ್ಷಣವನ್ನು ಕೇವಲ ಉದ್ಯೋಗ ಪಡೆ ಯುವ ಸಾಧನವಾಗಿ ನೋಡಲಿಲ್ಲ ಮನುಷ್ಯನಲ್ಲಿನ ಶ್ರೇಷ್ಠತೆಯನ್ನು ಹೊರತರುವ ಪ್ರಕ್ರಿಯೆಯೇ ನಿಜವಾದ ಶಿಕ್ಷಣ ಎಂದು ನಂಬಿದ್ದರು.ಆದ್ದರಿಂದ ಯುವಜನರು ಆಧುನಿಕ ಜ್ಞಾನ, ತಾಂತ್ರಿಕ ಕೌಶಲ್ಯಗಳ ಜೊತೆಗೆ ನೈತಿಕ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು

ಪ್ಲಾಸ್ಟಿಕ್ ತ್ಯಾಜ್ಯ ಮರುಬಳಕೆ ಕುರಿತು ಆಯೋಜಿಸಿದ್ದ ಮೆಗಾ ಜಾಗೃತಿ ಮೇಳ ಯಶಸ್ವಿ

ಪ್ಲಾಸ್ಟಿಕ್ ತ್ಯಾಜ್ಯ ಮರುಬಳಕೆ: ಮೆಗಾ ಜಾಗೃತಿ ಮೇಳ ಯಶಸ್ವಿ

ಮಕ್ಕಳಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯಗಳ ಮರುಬಳಕೆ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಮೆಗಾ ಜಾಗೃತಿ ಮೇಳವನ್ನು ಆಯೋಜಿಸಲಾಗಿತ್ತು. ಇಂದು ಸಾಕಷ್ಟು ಪ್ಲಾಸ್ಟಿಕ್‌ ಉತ್ಪಾದನೆಯಾಗುತ್ತಿದ್ದು, ಅದರ ಸಂಸ್ಕರಣೆ ಸವಾಲಿನ ಕೆಲಸವಾಗಿದೆ. ಇಂದಿನ ಮಕ್ಕಳಿಗೆ ಪ್ಲಾಸ್ಟಿಕ್‌ ಕಡಿಮೆ ಬಳಕೆ, ಮರುಬಳಕೆ ಬಗ್ಗೆ ಜಾಗೃತಿ ಮೂಡಿಸಿದರೆ ಮಾತ್ರ ನಮ್ಮ ಮುಂದಿನ ಪೀಳಿಗೆ ಈ ಭೂಮಿಯನ್ನು ಆರೋಗ್ಯವಾಗಿಡಲು ಸಾಧ್ಯ

ಎನ್‌ಎನಬಿಎಲ್‌ ಮಾನ್ಯತೆ ಪಡೆದುಕೊಂಡ ಹ್ಯಾಪಿಯೆಸ್ಟ್‌ ಡಯಾಗ್ನೋಸ್ಟಿಕ್ಸ್‌

ಎನ್‌ಎನಬಿಎಲ್‌ ಮಾನ್ಯತೆ ಪಡೆದುಕೊಂಡ ಹ್ಯಾಪಿಯೆಸ್ಟ್‌ ಡಯಾಗ್ನೋಸ್ಟಿಕ್ಸ್‌

ಹ್ಯಾಪಿಯೆಸ್ಟ್ ಹೆಲ್ತ್‌ನ ಘಟಕವಾದ ಹ್ಯಾಪಿಯೆಸ್ಟ್ ಡಯಾಗ್ನೋಸ್ಟಿಕ್ಸ್ ಪ್ರಾರಂಭ ಗೊಂಡ ಎರಡೇ ವರ್ಷದಲ್ಲಿ ಈ ಮಾನ್ಯತೆ ಸಿಕ್ಕಿರುವುದು ಶ್ಲಾಘನಾರ್ಹ. ಮಾನ್ಯತೆ ಸಿಗುವ ಮೊದಲು ಸಹ ಎನ್‌ಎಬಿಎಲ್‌ ಅವರ ಮಾರ್ಗಸೂಚಿಗಳ ಪ್ರಕಾರವೇ ಸೇವೆ ನೀಡುತ್ತಿದ್ದೆವು. ಇದೀಗ ಇನ್ನಷ್ಟು ಗುಣಮಟ್ಟದ ಹಾಗೂ ಅತ್ಯಾಧುನಿಕ ಡಯಾಗ್ನಾಸ್ಟಿಕ್‌ ಸೇವೆ ನೀಡಲು ಸಹಕಾರಿಯಾಗಲಿದೆ

ರಾಜ್ಯ ಸರ್ಕಾರಿ ನೌಕರರು ಈ ದಿನಗಳಂದು ಖಾದಿ ಬಟ್ಟೆ ಧರಿಸುವುದು ಕಡ್ಡಾಯ; ಮುಖ್ಯ ಕಾರ್ಯದರ್ಶಿ ಆದೇಶ

ರಾಜ್ಯ ಸರ್ಕಾರಿ ನೌಕರರು ಖಾದಿ ಬಟ್ಟೆ ಧರಿಸುವುದು ಕಡ್ಡಾಯ

Dress code for government employees: 77ನೇ ಗಣರಾಜ್ಯೋತ್ಸವದ ಶುಭಸಂದರ್ಭದಲ್ಲಿ ಸಾರ್ವಜನಿಕ ಸೇವೆಯನ್ನು ದೇಶದ ಸ್ವಾತಂತ್ರ್ಯ ಹೋರಾಟದೊಂದಿಗೆ ಮರುಸಂಪರ್ಕಗೊಳಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ಖಾದಿ ಬಳಕೆಯನ್ನು ಉತ್ತೇಜಿಸಲು ಈ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಈ ಬಗ್ಗೆ ಮುಖ್ಯ ಕಾರ್ಯದರ್ಶಿ ಮಹತ್ವದ ಸುತ್ತೋಲೆ ಹೊರಡಿಸಿದ್ದಾರೆ.

ರೋಟರಿಯಿಂದ ಸಿಂಬಯೋಸಿಸ್ ಇಂಟರ್ನ್ಯಾಷನಲ್ ಯೂನಿವರ್ಸಿಟಿ(ಎಸ್.ಐ.ಯು)ಯಲ್ಲಿ ಹೊಸ ಶಾಂತಿ ಕೇಂದ್ರ ಉದ್ಘಾಟನೆ

ರೋಟರಿಯ ಒಂದು ವರ್ಷದ ಸ್ನಾತಕೋತ್ತರ ಡಿಪ್ಲೊಮಾ ಕಾರ್ಯಕ್ರಮ

ರೋಟರಿ ಹಾಗೂ ಸಿಂಬಯೋಸಿಸ್ ಎರಡೂ ಹೊಂದಿರುವ ತತ್ವಗಳು, ಧ್ಯೇಯೋದ್ದೇಶ, ದೂರ ದೃಷ್ಟಿ ಮತ್ತು ಪರಿಣಿತಿಯ ಸಂಯೋಜನೆಯಾದ ಈ ಕೇಂದ್ರವು ಪುಣೆಯಲ್ಲಿನ ಸಿಂಬಯೋಸಿಸ್'ನ ಸುಂದರ 400+ ಎಕರೆ ವಿಸ್ತೀರ್ಣದ ಲವಲೆ ಕ್ಯಾಂಪಸ್'ನಲ್ಲಿದೆ. ಇದು ಶಾಂತಿ ಮತ್ತು ಅಭಿವೃದ್ಧಿ ಅಧ್ಯಯನಗಳಲ್ಲಿ ಪೂರ್ಣ ಹಣಕಾಸು ಪಾವತಿಸಿದ ಒಂದು ವರ್ಷದ ಸ್ನಾತಕೋತ್ತರ ಡಿಪ್ಲೊಮಾ ಕಾರ್ಯಕ್ರಮವನ್ನು ನೀಡುತ್ತದೆ.

ಸಿಎಂ ಪುತ್ರ ಯತೀಂದ್ರ ಆಡಳಿತದಲ್ಲಿ ಹಸ್ತಕ್ಷೇಪ ಮಾಡ್ತಾರಾ? ಅಚ್ಚರಿಯ ಹೇಳಿಕೆ ನೀಡಿದ ಡಿ.ಕೆ. ಶಿವಕುಮಾರ್‌

ಆಡಳಿತದಲ್ಲಿ ಯತೀಂದ್ರ ಹಸ್ತಕ್ಷೇಪ ನೋಡಿಲ್ಲ: ಡಿ.ಕೆ. ಶಿವಕುಮಾರ್‌

DK Shivakumar: ಆಡಳಿತದಲ್ಲಿ ಎಂಎಲ್‌ಸಿ ಯತೀಂದ್ರ ಅವರ ಹಸ್ತಕ್ಷೇಪ ವಿಚಾರದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಿ.ಕೆ. ಶಿವಕುಮಾರ್‌, ಕಾರ್ಯಕರ್ತರು ಬಂದು ಮನವಿ ಕೊಟ್ಟಾಗ ಅಧಿಕಾರಿಗಳಿಗೆ ಕರೆ ಮಾಡಿ ಮನವಿ ಮಾಡಿಕೊಂಡಿರುತ್ತಾರೆ. ಕಾರ್ಯಕರ್ತರಿಗೆ ಒಳ್ಳೆಯದಾಗಲಿ ಎಂದು ಕೇಳುವುದರಲ್ಲಿ ತಪ್ಪೇನಿಲ್ಲ. ನನ್ನ ಬಳಿ ಎಲ್ಲ ಇಲಾಖೆಗೆ ಸಂಬಂಧಿಸಿದಂತೆ ಮನವಿ ನೀಡುತ್ತಾರೆ. ನಾನು ಎಲ್ಲ ಇಲಾಖೆ ಜತೆ ಮಾತನಾಡುತ್ತೇನೆ. ಆಡಳಿತದಲ್ಲಿ ಹಸ್ತಕ್ಷೇಪ ಮಾಡಬಾರದು. ಅವರು ಆಡಳಿತ ವಿಚಾರದಲ್ಲಿ ಯಾವ ಹಸ್ತಕ್ಷೇಪ ಮಾಡುವುದನ್ನು ನಾನು ನೋಡಿಲ್ಲ ಎಂದು ಅವರು ತಿಳಿಸಿದ್ದಾರೆ.

ಥೈರಾಯ್ಡ್‌ನ ಮೌನ ಅಸ್ವಸ್ಥತೆಗಳು ಭಾರತೀಯ ಮಹಿಳೆಯರಲ್ಲಿ ಫಲವಂತಿಕೆಯ ಹಾದಿ ತಪ್ಪಿಸುತ್ತಿವೆ, ವೈದ್ಯರ ಎಚ್ಚರಿಕೆ

ಥೈರಾಯ್ಡ್‌ನ ಅಸ್ವಸ್ಥತೆಗಳು ಮಹಿಳೆಯರಲ್ಲಿ ಫಲವಂತಿಕೆಯ ಹಾದಿ ತಪ್ಪಿಸುತ್ತಿವೆ

ಅಂಡೋತ್ಪತ್ತಿ, ಋತು ಚಕ್ರಗಳು, ಚಯಾಪಚಯ ಮತ್ತು ಭ್ರೂಣದ ಆರಂಭಿಕ ಬೆಳವಣಿಗೆಯನ್ನು ನಿಯಂತ್ರಿಸುವಲ್ಲಿ ಥೈರಾಯ್ಡ್ ಗ್ರಂಥಿಯು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಆದರೂ, ಮಹಿಳೆ ಯರು ಗರ್ಭ ಧರಿಸಲು ಕಷ್ಟ ಅನುಭವಿಸುವ ತನಕ ಮತ್ತು ಆಗಾಗ ಗರ್ಭಪಾತಗಳಾಗುವ ತನಕ ಥೈರಾಯ್ಡ್‌ನ ಸೂಕ್ಷ್ಮ ಅಸಮತೋಲನಗಳು ಬಹುತೇಕ ಪತ್ತೆಯೇ ಆಗುವುದಿಲ್ಲ

Koragajja Movie: ಕೊಚ್ಚಿಯಲ್ಲಿ ʼಕೊರಗಜ್ಜʼ ಚಿತ್ರದ ಪ್ರಚಾರಕ್ಕೆ ಅಡ್ಡಿ; ನಟ ಮಮ್ಮುಟ್ಟಿ ಟೀಂ ವಿರುದ್ಧ ಭಾರಿ ಆಕ್ರೋಶ

ಕೊಚ್ಚಿಯಲ್ಲಿ ಕನ್ನಡದ ʼಕೊರಗಜ್ಜʼ ಪ್ರಚಾರಕ್ಕೆ ಅಡ್ಡಿ; ಭಾರಿ ಆಕ್ರೋಶ

ಕೊರಗಜ್ಜ ಚಿತ್ರತಂಡದಿಂದ ಕೊಚ್ಚಿಯ ಪಂಚತಾರ ಹೋಟೆಲ್‌ನಲ್ಲಿ ಜನವರಿ 24ರಂದು ರಾತ್ರಿ 8ಕ್ಕೆ ಅದ್ಧೂರಿ ಪತ್ರಿಕಾಗೋಷ್ಠಿ ಹಾಗೂ ಭೋಜನಕೂಟ ಆಯೋಜಿಸಲಾಗಿತ್ತು. ಆದರೆ, ಪ್ರೆಸ್ ಮೀಟ್‌ನ ಮುಂಚಿನ ದಿನ ತಡರಾತ್ರಿ ಚಿತ್ರತಂಡಕ್ಕೆ ಮಲಯಾಳಂ ʻಛಾತಪಾಚʼ ಚಿತ್ರತಂಡದ ಪಿಆರ್‌ಒ ಕರೆ ಮಾಡಿ ಕಾರ್ಯಕ್ರಮವನ್ನು ರದ್ದುಗೊಳಿಸುವಂತೆ ಅಥವಾ ಮುಂದೂಡುವಂತೆ ದಿಢೀರ್ ಆಗಿ ತಿಳಿಸಿದ್ದರು ಎನ್ನಲಾಗಿದೆ. ಇದರಿಂದ ಕೊರಗಜ್ಜ ಚಿತ್ರತಂಡ ಅಸಮಾಧಾನ ಹೊರಹಾಕಿದೆ.

Govt Doctors: ಸರ್ಕಾರಿ ವೈದ್ಯರು ಖಾಸಗಿ ಆಸ್ಪತ್ರೆಗಳ ಒಳರೋಗಿಗಳಿಗೆ ಚಿಕಿತ್ಸೆ ನೀಡುವುದಕ್ಕೆ ನಿಷೇಧ: ಸಚಿವ ದಿನೇಶ್‌ ಗುಂಡೂರಾವ್‌

ಸರ್ಕಾರಿ ವೈದ್ಯರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವುದಕ್ಕೆ ನಿಷೇಧ

Govt Doctors private practice: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ವೈದ್ಯರ ಖಾಸಗಿ ಪ್ರಾಕ್ಟೀಸ್‌ ಕುರಿತು ಸರ್ಕಾರದ ನಿಲುವು ಮತ್ತು ಕೈಗೊಂಡಿರುವ ಕ್ರಮಗಳ ಬಗ್ಗೆ ಅಧಿವೇಶನದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌ ಅವರು ಪ್ರತಿಕ್ರಿಯಿಸಿದ್ದಾರೆ.

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ನಾಳೆ ಕರೆಂಟ್‌ ಇರಲ್ಲ

ಬೆಂಗಳೂರಿನ ಈ ಪ್ರದೇಶಗಳಲ್ಲಿ ನಾಳೆ ಕರೆಂಟ್‌ ಇರಲ್ಲ

BESCOM News: ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಾಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಕೆಂಗೇರಿ ವಿಭಾಗದ 220/66/11 ಕೆ.ವಿ ಸೋಮನಹಳ್ಳಿ ಉಪಕೇಂದ್ರ ವ್ಯಾಪ್ತಿಯ ಹಲವೆಡೆ ಜ.30ರಂದು ಶುಕ್ರವಾರ ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

ಜ.31ರಂದು ತಡಸ ಗಾಯತ್ರಿ ಮಾತಾ ದೇಗುಲದ 26ನೇ ವಾರ್ಷಿಕೋತ್ಸವ

ಜ.31ರಂದು ತಡಸ ಗಾಯತ್ರಿ ಮಾತಾ ದೇಗುಲದ 26ನೇ ವಾರ್ಷಿಕೋತ್ಸವ

Shri Gayatri Tapobhoomi's 26th anniversary: ಹಾವೇರಿಯ ಜಿಲ್ಲೆ ಶಿಗ್ಗಾಂವಿ ತಾಲೂಕಿನ ತಡಸ ಗ್ರಾಮದ ಶ್ರೀ ಗಾಯತ್ರೀ ತಪೋಭೂಮಿಯ 26ನೇ ವಾರ್ಷಿಕೋತ್ಸವ ಜ.31ರಂದು ನಡೆಯಲಿದೆ. ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಗಾಯತ್ರಿ ಮಾತಾ ದೇಗುಲದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

Robbery Case: ನಂಬಿಸಿ ಮನೆ ದೋಚಿದ ನೇಪಾಳಿ ಗ್ಯಾಂಗ್‌, 18 ಕೋಟಿ ರೂ. ಲೂಟಿ!

ನಂಬಿಸಿ ಮನೆ ದೋಚಿದ ನೇಪಾಳಿ ಗ್ಯಾಂಗ್‌, 18 ಕೋಟಿ ರೂ. ಲೂಟಿ!

20 ದಿನದ ಹಿಂದೆ ನೇಪಾಳಿ ಮೂಲದವರು ಎನ್ನಲಾದ ದಿನೇಶ್ ಹಾಗೂ ಕಮಲಾ ದಂಪತಿಯನ್ನು ಕೆಲಸಕ್ಕೆ ಎಂದು ಸೇರಿಸಿಕೊಳ್ಳಲಾಗಿತ್ತು. ಆಧಾರ್‌ ಕಾರ್ಡ್‌ ಕೇಳಿದಾಗ ಹಳೆ ಮನೆಯಲ್ಲಿದೆ. ಕೊಡುತ್ತೇವೆ ಎಂದು ನಂಬಿಸಿದ್ದರು. 20 ದಿನದಲ್ಲಿ ಮನೆಯವರ ನಂಬಿಕೆ ಗಳಿಸಿದ್ದ ಈ ಖತರ್ನಾಕ್ ದಂಪತಿ, ಲಾಕರ್​ಗಳನ್ನು ಒಡೆದು ಕೋಟ್ಯಂತರ ಮೌಲ್ವದ ಸೊತ್ತು ದೋಚಿ ಪರಾರಿಯಾಗಿದ್ದಾರೆ.

ಪರಿಸರ ವ್ಯವಸ್ಥೆಯ ನೇತೃತ್ವದ ಉದ್ಯೋಗ ಸೃಷ್ಟಿ ತಂತ್ರದೊಂದಿಗೆ ಕರ್ನಾಟಕದ ಉಪಸ್ಥಿತಿ ಬಲಪಡಿಸುವ ವಾಧ್ವಾನಿ ಫೌಂಡೇಶನ್

ಉದ್ಯೋಗ ಸೃಷ್ಟಿ ತಂತ್ರದೊಂದಿಗೆ ವಾಧ್ವಾನಿ ಫೌಂಡೇಶನ್

ಫೌಂಡೇಶನ್ ರಾಷ್ಟ್ರೀಯ ಮಟ್ಟದಲ್ಲಿ ವಿಸ್ತರಿಸುತ್ತಿದ್ದಂತೆ, ಸ್ಥಳೀಯ ಆರ್ಥಿಕತೆಗಳಿಗೆ ಹತ್ತಿರವಾಗಿ ಅನುಷ್ಠಾನಗೊಳ್ಳದ ಹೊರತು, ತಲುಪುವಿಕೆ ಮತ್ತು ದಾಖಲಾತಿಗಳು ಸ್ವಯಂಚಾಲಿತವಾಗಿ ಉದ್ಯೋಗ ಗಳು, ನಿಯೋಜನೆಗಳು ಮತ್ತು ಉದ್ಯಮ ಬೆಳವಣಿಗೆಗೆ ಕಾರಣವಾಗುವುದಿಲ್ಲ ಎಂದು ನಾವು ಅರಿತು ಕೊಂಡಿದ್ದೇವೆ. ಈ ಕಾರಣದಿಂದಾಗಿ, 2026 ರಲ್ಲಿ, ಫೌಂಡೇಶನ್ ಕೇಂದ್ರ ನೇತೃತ್ವದ ಮಾದರಿಯಿಂದ ಪರಿಸರ ವ್ಯವಸ್ಥೆ-ನೇತೃತ್ವದ, ರಾಜ್ಯ-ಆಧಾರಿತ ಅನುಷ್ಠಾನ ವಿಧಾನಕ್ಕೆ ಮರುಸಮತೋಲನಗೊಳ್ಳುತ್ತಿದೆ.

ಹಲವು ಯುವತಿಯರೊಂದಿಗೆ ರಾಸಲೀಲೆ ವಿಡಿಯೊ ವೈರಲ್‌; ಕೊಡಗಿನ ಮುಸ್ಲಿಂ ಯುವಕ ಆರೆಸ್ಟ್‌

ಯುವತಿಯರೊಂದಿಗೆ ರಾಸಲೀಲೆ ವಿಡಿಯೊ ವೈರಲ್‌; ಮುಸ್ಲಿಂ ಯುವಕ ಆರೆಸ್ಟ್‌

ಕೊಡಗಿನ ಆರೋಪಿ ಯುವಕನು ವಿವಿಧ ಯುವತಿಯರೊಂದಿಗೆ ಕಾಮಕೇಳಿ ನಡೆಸಿ, ಖಾಸಗಿ ಕ್ಷಣಗಳನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾನೆ. ಈ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಈ ಬಗ್ಗೆ ಜಿಲ್ಲೆಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಸದ್ಯ ಯುವಕನನ್ನು ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Double Decker Flyover: ಬೆಂಗಳೂರಿನ ಮೊದಲ ಡಬಲ್  ಡೆಕ್ಕರ್‌ ಫ್ಲೈಓವರ್‌ ಸದ್ಯವೇ ಸಂಚಾರಮುಕ್ತ

ಬೆಂಗಳೂರಿನ ಮೊದಲ ಡಬಲ್ ಡೆಕ್ಕರ್‌ ಫ್ಲೈಓವರ್‌ ಸದ್ಯವೇ ಸಂಚಾರಮುಕ್ತ

ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಬಿಟಿಎಂ ಲೇಔಟ್, ಎಚ್‌ಎಸ್‌ಆರ್ ಲೇಔಟ್ ಮತ್ತು ಬೆಳ್ಳಂದೂರುವರೆಗಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲಿದೆ.‌ 2024ರಲ್ಲಿ ಫ್ಲೈಓವರ್‌ನ ಒಂದು ಬದಿಯ ಭಾಗ ತೆರೆದಿತ್ತು. ಆದರೆ ಅಸ್ತಿತ್ವದಲ್ಲಿರುವ ರಸ್ತೆ ಮಾರ್ಗದ ಮೇಲೆ 42 ಮೀಟರ್ ಉಕ್ಕಿನ ಸೇತುವೆಯನ್ನು ಅಳವಡಿಸಿದ್ದರಿಂದ ಒಂದು ಭಾಗ ವಿಳಂಬವಾಗಿತ್ತು. ಕಾರ್ಮಿಕರು ಈಗ ಕಾಂಕ್ರೀಟ್ ಚಪ್ಪಡಿ ಹಾಕುವ ಕೆಲಸವನ್ನು ಪೂರ್ಣಗೊಳಿಸುತ್ತಿದ್ದಾರೆ.

ಜನವರಿ 31ರಂದು ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ‘ಭಾಸ್ಕರ ಪರ್ವ’ ಕಾರ್ಯಕ್ರಮ

ಜ. 31ರಂದು ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ‘ಭಾಸ್ಕರ ಪರ್ವ’ ಕಾರ್ಯಕ್ರಮ

ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಉಜಿರೆಯ ಎಸ್‌ಡಿಎಂ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ಜನವರಿ 31ರಂದು ಬೆಳಗ್ಗೆ 10 ಗಂಟೆಗೆ ‘ಭಾಸ್ಕರ ಪರ್ವ – ಮಾಧ್ಯಮ ಗುರುವಿಗೆ ಅಭಿನಂದನೆ’ ಕಾರ್ಯಕ್ರಮ ನೆರವೇರಲಿದೆ. ಎಸ್‌ಡಿಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಭಾಸ್ಕರ ಹೆಗಡೆ ಅವರು ನಿವೃತ್ತರಾಗುತ್ತಿರುವ ಹಿನ್ನೆಲೆಯಲ್ಲಿ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

KJ George: ರಾಜೀನಾಮೆಗೆ ಮುಂದಾಗಿದ್ದ ಇಂಧನ ಸಚಿವ? ಸದನದಲ್ಲಿ ಕೆಜೆ ಜಾರ್ಜ್ ಹೇಳಿದ್ದೇನು?‌

ರಾಜೀನಾಮೆಗೆ ಮುಂದಾಗಿದ್ದರೇ ಕೆಜೆ ಜಾರ್ಜ್?‌ ಇಂಧನ ಸಚಿವರು ಏನಂದ್ರು?

ಇಂದು ನಡೆದ ವಿಶೇಷ ಅಧಿವೇಶದಲ್ಲಿ ಇಂಧನ ಸಚಿವ ಕೆಜೆ ಜಾರ್ಜ್​ ರಾಜೀನಾಮೆ ವದಂತಿ ವಿಚಾರವನ್ನ ವಿಪಕ್ಷ ನಾಯಕರು ಪ್ರಸ್ತಾಪ ಮಾಡಿದ್ದಾರೆ. ಇಲಾಖೆಯಲ್ಲಿ ಸಿಎಂ ಪುತ್ರನ ಹಸ್ತಕ್ಷೇಪಕ್ಕೆ ಬೇಸತ್ತು ಕೆಜೆ ಜಾರ್ಜ್ ಅವರು ರಾಜೀನಾಮೆ ಕೊಟ್ಟಿದ್ದಾರೆ ಎಂಬ ಸುದ್ದಿ ಬರುತ್ತಿದೆ. ಅದಕ್ಕಾಗಿ ಜಾರ್ಜ್ ಅವರೇ ಸ್ಪಷ್ಟೀಕರಣ ಕೊಡಬೇಕು ಎಂದು ಬಿಜೆಪಿ ಶಾಸಕ ಸುನಿಲ್ ಕುಮಾರ್ ಒತ್ತಾಯಿಸಿದ್ದು, ಜಾರ್ಜ್‌ ಸ್ಪಷ್ಟನೆ ನೀಡಿದ್ದಾರೆ.

Loading...