ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಂಚನಬಲೆ ಸದಾಶಿವ ನೆರವು
ಶಿಕ್ಷಣವೇ ಎಲ್ಲಾ ವಿಮೋಚನೆಗಳ ಅಸ್ತ್ರ ಎಂದು ಭಾವಿಸಿರುವ ಬೆರಳೆಣಿಕೆಯ ಸಮಾಜ ಸೇವಕರಲ್ಲಿ ಒಬ್ಬರಾಗಿರುವ ಮಂಚನಬಲೆಯ ಸಮಾಜ ಸೇವಕ ಡಾ.ಎಂ.ವಿ.ಸದಾಶಿವ ಅವರು ಕ್ಷೇತ್ರದ ಹತ್ತಾರು ಶಾಲೆಗಳಿಗೆ ನೆರವಿನ ಹಸ್ತ ಚಾಚಿದ್ದಾರೆ.ಇದೀಗ ಪುಟ್ಟತಿಮ್ಮನಹಳ್ಳಿ ಶಾಲೆಗೆ ೫ ಸಾವಿರ ನಗದು ಸಹಾಯ ಮಾಡುವ ಮೂಲಕ ಮತ್ತೊಮ್ಮೆ ಶಿಕ್ಷಣಕ್ಕಾಗಿ ಪ್ರೋತ್ಸಾಹಿಸುವ ತಮ್ಮ ಸೇವಾ ಕಾರ್ಯವನ್ನು ಮುಂದು ವರಿಸಿದ್ದಾರೆ