ಉತ್ತರಾಖಂಡದಲ್ಲಿ ಕಾಡಾನೆಗಳೊಂದಿಗೆ ಪರಾರಿಯಾದ ಸಾಕಾನೆಗಳು!
Kumki Elephants: ಕರ್ನಾಟಕದಿಂದ ಉತ್ತರಾಖಂಡಕ್ಕೆ ಹಸ್ತಾಂತರಿಸಲಾಗಿದ್ದ 2 ಕುಮ್ಕಿ ಹೆಣ್ಣಾನೆಗಳು ಕಾಡಾನೆ ಹಿಂದಿನೊಂದಿಗೆ ಪರಾರಿಯಾಗಿರುವ ಘಟನೆ ನಡೆದಿದೆ. ಉತ್ತರಾಖಂಡದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದಲ್ಲಿ ಅಪರೂಪದ ವಿದ್ಯಾಮಾನ ಜರುಗಿದೆ. ಕಾಡು ಗಸ್ತು ತಿರುಗುವ ಉದ್ದೇಶದಿಂದ ಇಲ್ಲಿಗೆ ಕರ್ನಾಟಕದಿಂದ 2 ಹೆಣ್ಣಾನೆಗಳನ್ನು ಕರೆತರಲಾಗಿತ್ತು. ಇದೀಗ ಇವು ʼಓಡಿ ಹೋಗಿದ್ದುʼ ಪತ್ತೆ ಹಚ್ಚಲು ಕಾರ್ಯಾಚರಣೆ ನಡೆಯುತ್ತಿದೆ.