KRS ಬಳಿ ನಡೆಯಬೇಕಿದ್ದ ಕಾವೇರಿ ಆರತಿ ಕಾರ್ಯಕ್ರಮ ಮುಂದೂಡಿಕೆ
ಕೆಆರ್ಎಸ್ ಅಣೆಕಟ್ಟಿನ (KRS) ಬಳಿ ಆಯೋಜಿಸಲಾಗಿದ್ದಕಾವೇರಿ ಆರತಿ ಕಾರ್ಯಕ್ರಮದ ದಿನಾಂಕ ಮುಂದೂಡಲಾಗಿದೆ. ಈ ಹಿಂದೆ ನಿಗದಿಯಾಗಿದ್ದ ವೇಳಾಪಟ್ಟಿಯ ಪ್ರಕಾರ ಅ.11 ರಿಂದ ಈ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆರಂಭವಾಗಬೇಕಿತ್ತು. ಆದರೆ ಇದೀಗ ಇದೇ ತಿಂಗಳ 18 ಕ್ಕೆ ಮುಂದೂಡಲಾಗಿದೆ.