ಹಾವೇರಿ ಜಿಲ್ಲೆಯಲ್ಲಿ ಸಡಗರ ಸಂಭ್ರಮದಿಂದ ಹೋಳಿ ಆಚರಣೆ
Haveri News: ಹಾವೇರಿ ಸೇರಿದಂತೆ ಜಿಲ್ಲೆಯ ಬಹುತೇಕ ಹಳ್ಳಿ, ನಗರಗಳಲ್ಲಿ ಹೋಳಿ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಬುಧವಾರ ಬೆಳಿಗ್ಗೆಯೇ ನಗರದ ವಿವಿಧ ಗಲ್ಲಿ, ಓಣಿಗಳಲ್ಲಿ ಹೋಳಿ ಹಬ್ಬವು ತುಂಬಾ ಸಡಗರ ಸಂಭ್ರಮದಿಂದ ಜರುಗಿತು.
ಶಾಸಕರಾಗಿ, ಸಂಸದರಾಗಿ ಸಿಎಂ ಆಗಿ ದೊಡ್ಡ ಸ್ಥಾನಕ್ಕೆ ಹೋದವರು ಇಲ್ಲಿಗೆ ಬಂದು ಬುಡುಬುಡುಕೆ, ಬಣ್ಣ ಬಣ್ಣದ ಮಾತುಗಳನ್ನಾಡುತ್ತಾರೆ. ನಾಳೆ ಕೆಲಸ ಮಾಡುತ್ತೇವೆ ಎಂಬುದು ಶತೃತ್ವ, ಇವತ್ತೇ ಕೆಲಸ ಮಾಡುತ್ತೇವೆ ಎಂಬುದು ಮಿತ್ರತ್ವ. ನಾಳೆ ಯಾರು ಇರುತ್ತಾರೋ ಇರುವುದಿಲ್ಲವೋ ಗೊತ್ತಿಲ್ಲ. ಅಧಿಕಾರ ಇದ್ದಾಗ ನಾವು ಏನು ಮಾಡಿದೆವು ಎಂಬುದು ಮುಖ್ಯ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
HD Kumaraswamy: ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ಕ್ಷೇತ್ರದ ಅಭಿವೃದ್ಧಿಗೆ ಸಂಶೋಧನೆ, ಉತ್ಪಾದನೆ ಹಾಗೂ ಉದ್ಯೋಗ ಸೃಷ್ಟಿಗೆ ಒತ್ತು ನೀಡಲಾಗುವುದು. ಸಾರಿಗೆ ಕ್ಷೇತ್ರದಲ್ಲಿ ಇಂಗಾಲ ಹೊರಸೂಸುವಿಕೆಯನ್ನು ಶೂನ್ಯಮಟ್ಟಕ್ಕೆ ಇಳಿಸಿ ಪರಿಸರ ಪೂರಕ ಸಾರಿಗೆ ವ್ಯವಸ್ಥೆ ರೂಪಿಸುವ ದೃಢ ಸಂಕಲ್ಪವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಹೊಂದಿದ್ದಾರೆ. ಅವರ ಕನಸು ನನಸು ಮಾಡುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಕೆಎಎಸ್ ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, 1:3 ಅನುಪಾತದಲ್ಲಿ ಸಂದರ್ಶನಕ್ಕೆ ಅರ್ಹತೆ ಪಡೆದ ಅಭ್ಯರ್ಥಿಗಳ ಪಟ್ಟಿಯನ್ನು ಕೆಪಿಎಸ್ಸಿ ಸೋಮವಾರ ಪ್ರಕಟಿಸಿತ್ತು. ಆದರೆ, ಈ ಪಟ್ಟಿಯಲ್ಲಿ ಗೋಲ್ಮಾಲ್ ನಡೆದಿದೆ ಎಂಬ ಆರೋಪಿಸಿರುವ ಅಭ್ಯರ್ಥಿಗಳು, ಸೂಕ್ತ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
B Sriramulu: ರಾಜ್ಯ ಸರ್ಕಾರ ಅಧಿಕಾರಕ್ಕೆ ಬರುವುದಕ್ಕಿಂತ ಮೊದಲು ನೀಡಿದ ಭರವಸೆಗಳನ್ನು, ಆಶ್ವಾಸನೆಗಳನ್ನು ಜಾರಿ ಮಾಡಲಿಲ್ಲ. ಒಂದು ವರ್ಷದಲ್ಲಿ ಒಂದು ಲಕ್ಷ ಹುದ್ದೆ ಭರ್ತಿ ಮಾಡುತ್ತೇವೆ ಅಂತ ಹೇಳಿದ್ದರು. ಆದರೆ ಇಷ್ಟು ಸಮಯವಾದರೂ ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳಲಿಲ್ಲ. ರಾಜ್ಯದಲ್ಲಿ ಸುಮಾರು 2.85 ಲಕ್ಷ ಹುದ್ದೆ ಖಾಲಿ ಇದೆ. ಈ ಬಗ್ಗೆ ಕ್ರಮ ಕೈಗೊಳ್ಳದೆ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಆರೋಪಿಸಿದ್ದಾರೆ.
ಶೃಂಗೇರಿ ಕ್ಷೇತ್ರದಲ್ಲಿ ಜೆಜೆಎಂ ಎಂಬುದು ಜಲಜೀವನ್ ಕಮಿಷನ್ ಆಗಿದೆ. 150 ಕೋಟಿ ರೂ.ಗಿಂತ ಹೆಚ್ಚು ಹಣವನ್ನು ಕೇಂದ್ರ ಸರಕಾರ ಕೊಟ್ಟಿದ್ದರೂ ಒಂದೇ ಒಂದು ಮನೆಗೆ ನೀರು ಲಭಿಸಿಲ್ಲ. ಹಿಂದೆ ಕರೀಂಲಾಲ್ ತೆಲಗಿ ಮೂಲಕ ಸ್ಟ್ಯಾಂಪ್ ಪೇಪರ್ ಹಗರಣ ನಡೆದಿತ್ತು. ಇಲ್ಲಿ ಅದನ್ನೂ ಮೀರಿದ ಹಗರಣ ನಡೆದಿದೆ ಎಂದು ಬಿಜೆಪಿ ಮಾಜಿ ಸಚಿವ ಡಿ.ಎನ್. ಜೀವರಾಜ್ ಆರೋಪಿಸಿದ್ದಾರೆ.
ಮೂರು ವರ್ಷಗಳ ಕಾಲ ₹6 ಕೋಟಿ ಬಂಡವಾಳವನ್ನು ಒದಗಿಸುವ ಮೂಲಕ ಉದ್ಯಮದ ಬೆಳವಣಿಗೆಯಂತೆ ಕ್ರೀಡಾ ಪ್ರಗತಿಗೆ ಶಿಸ್ತುಬದ್ಧ ವ್ಯವಸ್ಥೆಗಳು ಮತ್ತು ಸೂಕ್ತ ಕಾರ್ಯಕ್ಷಮತೆಯ ಅಗತ್ಯತೆ ಇದೆ ಎಂದು ಫೌಂಡೇಶನ್ನ ಬಲವಾಗಿ ನಂಬಿದೆ. ಈ ನಿಟ್ಟಿನಲ್ಲಿ ದೀರ್ಘಾವಧಿಯ ಬಂಡವಾಳದ ನೀಡುವ ಮೂಲಕ ಕ್ರೀಡಾಪ್ರಗತಿಯನ್ನು ಸಾಧಿಸಲು ಫೌಂಡೇಷನ್ ತನ್ನನ್ನು ತೊಡಗಿಸಿಕೊಂಡಿದೆ.
KV Prabhakar: ಪತ್ರಕರ್ತರಾಗುವವರು ಪೂರ್ವಗ್ರಹ ಮುಕ್ತ ಮಗುವಿನ ಮನಸ್ಸಿನಿಂದ ಸಾಮಾಜಿಕ ವ್ಯವಸ್ಥೆಯನ್ನು, ಸಾಮಾಜಿಕ ತಾರತಮ್ಯಗಳನ್ನು "ಇರುವುದನ್ನು ಇರುವ ಹಾಗೆ ಗಮನಿಸಬೇಕು". ಹೀಗಾದಾಗ ಮಾತ್ರ ಸಾಮಾಜಿಕ ಸಮಸ್ಯೆಗಳು ಮತ್ತು ಈ ಸಮಸ್ಯೆಗಳಿಗೆ ಕಾರಣವಾದ ಸಂಗತಿಗಳ ಬಗ್ಗೆ ಸ್ಪಷ್ಟ ಗ್ರಹಿಕೆ ಬರುತ್ತದೆ. ಈ ಸ್ಪಷ್ಟತೆಯೇ ಪರಿಣಾಮಕಾರಿ ಪತ್ರಕರ್ತನನ್ನು ರೂಪಿಸುತ್ತದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ತಿಳಿಸಿದ್ದಾರೆ.
Gold Silver Rate Today: ಇದೀಗ ಭಾರತದಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ಕಂಡು ಬರುತ್ತಿದೆ. ಬುಧವಾರ (ಮಾರ್ಚ್ 4) ಬೆಂಗಳೂರಿನಲ್ಲಿ 22 ಕ್ಯಾರಟ್ನ 1 ಗ್ರಾಂ ಚಿನ್ನಕ್ಕೆ 285 ರುಪಾಯಿ ಇಳಿಕೆಯಾಗಿ 15,080 ರುಪಾಯಿಗೆ ಬಂದು ತಲುಪಿದೆ. ಇನ್ನು 24 ಕ್ಯಾರಟ್ನ 1 ಗ್ರಾಂ ಚಿನ್ನ 311 ರುಪಾಯಿ ಕಡಿಮೆಯಾಗಿದ್ದು, 16,451 ರುಪಾಯಿ ಇದೆ.
ವ್ಯಾಪಾರ ಮಾಡುತ್ತಿದ್ದ ವೇಳೆ ಚಂದ್ರಶೇಖರ್ಗೆ ಯುವಕರು ಬಂದು ಹಲ್ಲೆ ನಡೆಸಿದ್ದಾರೆ. ಮನೆಗೆ ನುಗ್ಗಿ ಹೊಡೆಯುತ್ತೇವೆ ಎಂದು ಕೂಡ ಚಂದ್ರಶೇಖರಗೆ ಬೆದರಿಕೆ ಹಾಕಿದ್ದಾರೆ. ಹೀಗಾಗಿ ಭಯಭೀತನಾಗಿ ಚಂದ್ರಶೇಖರ, ಈ ಯುವಕರಿಂದ ಜೀವ ಭಯವಿದೆ ಎಂದು ತಡರಾತ್ರಿ ಗಂಗಾವತಿ ನಗರ ಪೊಲೀಸ್ ಠಾಣೆಗೆ ದೂರು ನೀಡಲು ಬಂದಿದ್ದು, ಈ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.
ಸೋಮವಾರದಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೈದ್ಯರು, ಅಧಿಕಾರಿ ನೌಕರರ ಪ್ರಮುಖ ಬೇಡಿಕೆಗಳ ಬಗ್ಗೆ ಚರ್ಚಿಸಲು ಸಚಿವ ದಿನೇಶ್ ಗುಂಡೂರಾವ್ ಅವರ ಅಧ್ಯಕ್ಷತೆಯಲ್ಲಿ ವಿಕಾಸಸೌಧದಲ್ಲಿ ಸಭೆ ನಡೆಯಿತು.ಆದರೆ ಸಚಿವರು ಹಾಗೂ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ನಮ್ಮ ಬೇಡಿಕೆಗಳನ್ನು ಈಡೇರಿಸುವ ಸ್ಪಷ್ಟವಾದಂತ ಭರವಸೆಯನ್ನು ನೀಡಿಲ್ಲ ಎಂದು ವೈದ್ಯರ ಸಂಘಟನೆ ಹೇಳಿದೆ.
ಬೆಂಗಳೂರಿನ HSR ಲೇಔಟ್ ಠಾಣೆ ವ್ಯಾಪ್ತಿಯ ಎಳ್ಳುಕುಂಟೆ ಬಳಿ ಹಲವು ವರ್ಷಗಳ ಇತಿಹಾಸ ಹೊಂದಿರುವ ದೇವಸ್ಥಾನ ಇದೆ. ಇಲ್ಲಿ ಪ್ರತಿ ವರ್ಷ ಬಸವೇಶ್ವರ ಜಾತ್ರೆ ಮಹೋತ್ಸವ ಮಾಡುತ್ತಾರೆ. ದೇವಸ್ಥಾನಕ್ಕೆ ಅಟ್ಯಾಚ್ ಆಗಿರುವ ಅಪಾರ್ಟ್ಮೆಂಟ್ ಕೆಳಗಡೆ ನಿಧಿ ಅಡಗಿದೆ ಎನ್ನುವ ಗಾಳಿಸುದ್ದಿ ಇದೀಗ ನಿಧಿಚೋರರಲ್ಲಿ ಸಂಚಲನ ಮೂಡಿಸಿದೆ.
ಮನೆ ಸಮೀಪದ ಹೋಟೆಲ್ಗೆ ರಾತ್ರಿ ದೋಸೆ ತಿನ್ನಲು ಶಶಿ ಅವರು ಹೋಗಿದ್ದರು. ಅದೇ ವೇಳೆ ಮಂಜುನಾಥ ಸಹ ಹೋಟೆಲ್ಗೆ ಹೋಗಿದ್ದ. ದೋಸೆ ತಿನ್ನುವಾಗ ಆಕಸ್ಮಿಕವಾಗಿ ಮಂಜುನಾಥ್ ಕಾಲನ್ನು ಶಶಿ ತುಳಿದಿದ್ದಾನೆ. ಈ ವಿಚಾರಕ್ಕೆ ಜಗಳವಾಗಿ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಡ್ಯಾಗರ್ನಿಂದ ಶಶಿಗೆ ಇರಿಯಲಾಗಿದೆ.
ಯತೀಂದ್ರರ ತತ್ವ ಸಿದ್ಧಾಂತವನ್ನು ಕೇವಲ ಜಯಂತಿಗೆ ಸೀಮಿತವಾಗದೆ , ನಾವುಗಳು ಪ್ರತಿ ದಿನ ಅವರ ಆಧ್ಯಾತ್ಮಿಕ ಜೀವನದ ಆದರ್ಶಗಳನ್ನು ಪಾಲಿಸಬೇಕು. ಅದೇ ರೀತಿಯಾಗಿ ಮಾ.14ರಂದು ಕೈವಾರ ತಾತಯ್ಯನವರ 300ನೇ ಜಯಂತೋತ್ಸವವನ್ನು ಸಮಾಜದ ಎಲ್ಲಾ ಸಮುದಾಯ ದವರು ಒಗ್ಗೂಡಿ ಪಟ್ಟಣದಲ್ಲಿ ವಿಜೃಂಭಣೆಯಿಂದ ಆಚರಿಸಲು ಕರೆ ನೀಡಿದರು.
ಬಾಗೇಪಲ್ಲಿ, ಗುಡಿಬಂಡೆ ಹಾಗೂ ಚೇಳೂರು ತಾಲ್ಲೂಕಿನ ಬಲಿಜ ಸಮುದಾಯದ ಎಸ್.ಎಸ್.ಎಲ್.ಸಿ.ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು 2024-25ನೇ ಸಾಲಿನಲ್ಲಿ ಶೇಕಡಾ 60% ರಷ್ಟು ಅಂಕಗಳನ್ನು ಗಳಿಸಿದವರಿಗೆ ಪ್ರತಿಭಾ ಪುರಸ್ಕಾರ ಏರ್ಪಡಿಸಲಾಗಿದೆ. ನಮ್ಮ ಸಮುದಾಯದ ಮಕ್ಕಳು ಹಾಗೂ ಪೋಷಕರು ದಿನಾಂಕ ಮಾ.7ರ ಶನಿವಾರದ ಒಳಗೆ ಬಲಿಜ ಸಮುದಾಯದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಏರ್ಪಡಿಸಲಾಗಿದೆ
ದೈಹಿಕ ವೈಖಲ್ಯ ಇರುವವರಲ್ಲೂ ಕೌಶಲ್ಯವಿರುತ್ತದೆ ಅವರಿಗೆ ಸೂಕ್ತ ತರಬೇತಿ ನೀಡಿದರೆ, ತಮ್ಮ ಸ್ವಪ್ರಯತ್ನದಿಂದಲೇ ಆರ್ಥಿಕವಾಗಿ ಸ್ವಾವಲಂಬಿಗಳಾಗಬಹುದು, ಇದಕ್ಕೆ ಅವರಿಗೂ ಸೂಕ್ತ ಕೌಶಲ್ಯ ತರಬೇತಿ ನೀಡುವುದು ಅನಿವಾರ್ಯ, ಹೀಗಾಗಿ ಕೌಶಲ್ಯ ಮಂಡಳಿಯ ಸಹಯೋಗದಲ್ಲಿ ಬೆಂಗಳೂರಿನಲ್ಲಿ ಆಸಕ್ತ ವಿಕಲಚೇತರಿಗೆ ಎಫ್& ಬಿ ಸರ್ವಿಸಸ್, ಹಾಸ್ಪೆಟಾಲಿಸಿ ಆಪರೇಷನ್ಸ್, ಕಸ್ಟಮರ್ ಸರ್ವಿಸ್, ಸಾಫ್ಟ್ ಸ್ಕಿಲ್ಸ್ ಸೇರಿದಂತೆ ಹಲವು ರೀತಿಯ ತರಬೇತಿ ನೀಡಲಾಗುತ್ತಿದೆ.