ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

ಚುನಾವಣಾ ಕರ್ತವ್ಯದಲ್ಲಿ ಪಾರದರ್ಶಕತೆ, ತಟಸ್ಥತೆ ಕಾಪಾಡಿ: ಚುನಾವಣಾ ವೀಕ್ಷಕ ಡಾ. ಪಿ.ಸಿ. ಜಾಫರ್

ಚುನಾವಣಾ ಕರ್ತವ್ಯದಲ್ಲಿ ಪಾರದರ್ಶಕತೆ, ತಟಸ್ಥತೆ ಕಾಪಾಡಿ

ಚುನಾವಣಾ ಪ್ರಕ್ರಿಯೆಯ ಪ್ರತಿಯೊಂದು ಹಂತವೂ ಮಹತ್ವದ್ದಾಗಿದ್ದು, ಮತದಾನದಿಂದ ಹಿಡಿದು ಮತ ಎಣಿಕೆಯವರೆಗೆ ಅಧಿಕಾರಿಗಳು ಮತ್ತು ಸಿಬ್ಬಂದಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು.  ಚುನಾವಣಾ ಆಯೋಗದ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಮುಕ್ತ, ನ್ಯಾಯಸಮ್ಮತ ಹಾಗೂ ಪಾರದರ್ಶಕ ಚುನಾವಣೆ ನಡೆಸಲು ಎಲ್ಲರೂ ನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ತಿಳಿಸಿದರು.

ಕೈಗಾರಿಕಾ ಪ್ರದೇಶ ಅಭಿವೃದ್ಧಿ: ರೈತರ ಅಹವಾಲು ಆಲಿಸಿದ ಜಿಲ್ಲಾಧಿಕಾರಿ

ಕೈಗಾರಿಕಾ ಪ್ರದೇಶ ಅಭಿವೃದ್ಧಿ: ರೈತರ ಅಹವಾಲು ಆಲಿಸಿದ ಜಿಲ್ಲಾಧಿಕಾರಿ

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ನಡೆದ ಸಭೆಯಲ್ಲಿ ಬಡಗವಾರ ಹಳ್ಳಿ, ಮೈಕಳಸೊನ್ನೆನಹಳ್ಳಿ, ಕೊಂಗತಿಮ್ಮನಹಳ್ಳಿ, ಕಾಗತಿ ಹಾಗೂ ಕನಿಶೆಟ್ಟಿಹಳ್ಳಿ ಗ್ರಾಮಗಳ ವ್ಯಾಪ್ತಿಯ ರೈತರು ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು.

MAHE ಮಣಿಪಾಲ್‌ನಲ್ಲಿ ನಡೆದ ನೇಚರ್ ಕಾನ್ಫರೆನ್ಸ್ ಇಂಡಿಯಾ 2026ರಲ್ಲಿ ಸಾಂಕ್ರಾಮಿಕ ರೋಗಗಳ ಅಪಾಯಗಳ ಮೇಲೆ ವೈಜ್ಞಾನಿಕ ಗಮನ ಕೇಂದ್ರೀಕರಣ

MAHE ಮಣಿಪಾಲ್‌ನಲ್ಲಿ ನಡೆದ ನೇಚರ್ ಕಾನ್ಫರೆನ್ಸ್ ಇಂಡಿಯಾ 2026

ಮೂರು ದಿನಗಳ ನೇಚರ್ ಸಮ್ಮೇಳನವು ಆಂಟಿಮೈಕ್ರೊಬಿಯಲ್ ಪ್ರತಿರೋಧ, ಕ್ಷಯರೋಗದ ಪತ್ತೆ, ಲಸಿಕೆಗಳು, ಹವಾಮಾನಕ್ಕೆ ಸಂಬಂಧಿಸಿದ ರೋಗಗಳು ಮತ್ತು ಸಾಂಕ್ರಾಮಿಕ ರೋಗಗಳ ಸಿದ್ಧತೆಯಂತಹ ವಿಷಯಗಳನ್ನು ಚರ್ಚಿಸಲು ಜಾಗತಿಕ ಮಟ್ಟದ ಪ್ರಮುಖ ಸಂಶೋಧಕರನ್ನು ಮಣಿಪಾಲ್‌ಗೆ ಕರೆ ತಂದಿತು.

K M Suresh: ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆ : ಗುಬ್ಬಿಯಲ್ಲಿ ಮತದಾರರ ಸಭೆ

ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆ : ಗುಬ್ಬಿಯಲ್ಲಿ ಮತದಾರರ ಸಭೆ

ಜೆಡಿಎಸ್(JDS) ಮುಖಂಡ ಬಿ.ಎಸ್.ನಾಗರಾಜು ಮಾತನಾಡಿ ಶೇಕಡಾ 50 ಕ್ಕೂ ಅಧಿಕ ಮತಗಳು ಶಿಕ್ಷಕದ್ದಾಗಿದೆ. ಕಾಂಗ್ರೆಸ್ ದುರಾಡಳಿತ ಜನರಿಗೆ ಬೇಸರ ತಂದಿದೆ. ಗ್ಯಾರಂಟಿ ಹೆಸರಿನಲ್ಲಿ ಮೂಗಿಗೆ ತುಪ್ಪ ಸವರಿ ಅಭಿವೃದ್ದಿ ವಿಚಾರದಲ್ಲಿ ಶೂನ್ಯ ತೋರಿದೆ. ಹಿಂದಿನ ಬಾಗಿಲಲ್ಲಿ ಲೂಟಿ ಮಾಡುವ ಈ ಕಾಂಗ್ರೆಸ್ ಸರ್ಕಾರ ವೈಫಲ್ಯ ಈ ಚುನಾವಣೆಯಲ್ಲಿ ಮತದಾರರು ತೋರಲಿದ್ದಾರೆ ಎಂದರು.

VAO Exam Answer Key 2026: ಗ್ರಾಮ ಆಡಳಿತಾಧಿಕಾರಿ ಹುದ್ದೆ ಪರೀಕ್ಷೆಯ ಪರಿಷ್ಕೃತ ಕೀ ಉತ್ತರ ಪ್ರಕಟಿಸಿದ ಕೆಇಎ

ಗ್ರಾಮ ಆಡಳಿತಾಧಿಕಾರಿ ಹುದ್ದೆ ಪರೀಕ್ಷೆಯ ಪರಿಷ್ಕೃತ ಕೀ ಉತ್ತರ ಪ್ರಕಟ

KEA Exam: ಈ ಹಿಂದೆ ಪ್ರಕಟಿಸಿದ್ದ ಕೀ ಉತ್ತರಗಳಿಗೆ ಬಂದ ಆಕ್ಷೇಪಣೆಗಳನ್ನು ವಿಷಯ ತಜ್ಞರು ಪರಿಶೀಲಿಸಿದ ನಂತರ ಎರಡೂ ಪತ್ರಿಕೆಗಳ ಪರಿಷ್ಕೃತ ಕೀ ಉತ್ತರಗಳನ್ನು ಶುಕ್ರವಾರ ಕೆಇಎ ಪ್ರಕಟಿಸಿದೆ. ಉಳಿಕೆ ಮೂಲ ವೃಂದದ 505 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿಗಾಗಿ ಅ.04ರಂದು ರಾಜ್ಯದ ಒಟ್ಟು 1,037 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು.

Government jobs: ಕುಟುಂಬಕ್ಕೊಂದು ಸರ್ಕಾರಿ ಉದ್ಯೋಗ, ಸೇವಾವಧಿ 10-15 ವರ್ಷ ಮಾತ್ರ; ಹೊಸ ಪ್ಲ್ಯಾನ್‌ ಬಿಚ್ಚಿಟ್ಟ ಎಚ್‌ಡಿಕೆ

ಸರ್ಕಾರಿ ನೌಕರಿ ಅವಧಿ 10-15 ವರ್ಷ ಮಾತ್ರ; ಕುಟುಂಬಕ್ಕೊಂದು ಸರ್ಕಾರಿ ಉದ್ಯೋಗ

ಕೆಪಿಎಸ್​​ಸಿ ಹಗರಣ ಸಂಬಂಧ ವಿಜಯನಗರದ ಬಂಟರ ಸಂಘದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಅಭ್ಯರ್ಥಿಗಳೊಂದಿಗೆ ಕೇಂದ್ರ ಸಚಿವ ಎಚ್‌.ಡಿ.ಕುಮಾರಸವಾಮಿ ಅವರು ಶುಕ್ರವಾರ ಸಂವಾದ ನಡೆಸಿದ್ದಾರೆ. ಈ ವೇಳೆ ನಿರುದ್ಯೋಗ ಸಮಸ್ಯೆ ನಿವಾರಣೆಗೆ ತಮ್ಮ ಹೊಸ ಚಿಂತನೆ ಬಗ್ಗೆ ಹಂಚಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಅಧಿಕಾರಕ್ಕೆ ಬಂದರೆ ಈ ಯೋಜನೆ ಅನುಷ್ಠಾನಕ್ಕೆ ತರುವ ಉದ್ದೇಶ ಹೊಂದಿದ್ದೇನೆ ಎಂದು ಹೇಳಿದ್ದಾರೆ.

ವಿದ್ಯಾರ್ಥಿಗಳು ಮೌಲ್ಯಗಳೊಂದಿಗೆ ಎಂದಿಗೂ ರಾಜಿಯಾಗಬೇಡಿ: ಡಾ. ವಿಷ್ಣು ಭರತ್ ಆಲಂಪಲ್ಲಿ

ವಿದ್ಯಾರ್ಥಿಗಳು ಮೌಲ್ಯಗಳೊಂದಿಗೆ ಎಂದಿಗೂ ರಾಜೀಯಾಗಬೇಡಿ

ಎಪಿಎಸ್(APS) ಸಮೂಹ ಸಂಸ್ಥೆಗಳ ಅಧ್ಯಕ್ಷ ಸಿ.ಎ ಡಾ. ವಿಷ್ಣು ಭರತ್ ಆಲಂಪಲ್ಲಿ ಮಾತನಾಡಿ, ಶಿಕ್ಷಣ ಕೇವಲ ಜ್ಞಾನವನ್ನಷ್ಟೇ ಅಲ್ಲದೆ ಪ್ರತಿಭೆ, ಶಿಸ್ತು ಮತ್ತು ವ್ಯಕ್ತಿತ್ವವನ್ನು ಬೆಳೆಸಬೇಕು. ಸಾಧನೆಗೆ ಎಂದೂ ಮಿತಿ ವಿಧಿಸಬಾರದು. ತಾತ್ಕಾಲಿಕ ಯಶಸ್ಸಿಗಾಗಿ ನಿಮ್ಮ ಮೌಲ್ಯಗಳೊಂದಿಗೆ ಎಂದಿಗೂ ರಾಜಿ ಮಾಡಿ ಕೊಳ್ಳಬೇಡಿ. ಪ್ರಾಮಾಣಿಕತೆ, ನೈತಿಕತೆ ಮತ್ತು ಉತ್ತಮ ವ್ಯಕ್ತಿತ್ವವೇ ಶಾಶ್ವತ ಸಾಧನೆಯ ಅಡಿಪಾಯಗಳು ಎಂದರು

ರಾಮ ಮಂದಿರ ವೃತ್ತದಲ್ಲಿ ರೈತರ ಆಕ್ರೋಶ, ರಸ್ತೆ ಪಕ್ಕದಲ್ಲಿ ಪ್ರತಿಭಟನೆಗೆ ಅನುವು: ಹೋರಾಟದ ಟೆಂಟ್ ತೆರವು: 9 ಜನರ ವಶಕ್ಕೆ

ಹೋರಾಟದ ಟೆಂಟ್ ತೆರವು: 9 ಜನರ ವಶಕ್ಕೆ

ಕಳೆದ ನಾಲ್ಕು ದಿನಗಳಿಂದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಹಾಕಲಾಗಿದ್ದ ಹೋರಾಟದ ಟೆಂಟ್‌ ನ್ನು ಪೊಲೀಸರು ಶುಕ್ರವಾರ ರಾತ್ರಿ ತೆರವುಗೊಳಿಸಿದರು. ಇದರಿಂದ ಆಕ್ರೋಶಗೊಂಡ ರೈತರು ಪೊಲೀಸರ ಕ್ರಮವನ್ನು ಖಂಡಿಸಿದರು. ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಶಾಂತಿಯುತ ವಾಗಿ ಹೋರಾಟ ನಡೆಸುತ್ತಿದ್ದರೂ ಟೆಂಟ್ ತೆರವುಗೊಳಿಸಿ ಹೋರಾಟಗಾರರನ್ನು ವಶಕ್ಕೆ ಪಡೆದಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದೇಶವನ್ನು ಅಭದ್ರಗೊಳಿಸಲು ಕರ್ನಾಟಕ ಕಾಂಗ್ರೆಸ್ ಸರಕಾರದಿಂದ ಫಂಡಿಂಗ್: ಎಚ್.ಡಿ.ಕುಮಾರಸ್ವಾಮಿ ಆರೋಪ

ದೇಶವನ್ನು ಅಭದ್ರಗೊಳಿಸಲು ಕರ್ನಾಟಕ ಕಾಂಗ್ರೆಸ್ ಸರಕಾರ ಫಂಡಿಂಗ್

H.D. Kumaraswamy: ನವದೆಹಲಿಯಲ್ಲಿ ನಡೆಯುತ್ತಿರುವ ರಾಷ್ಟ್ರ ವಿರೋಧಿ ಹೋರಾಟಗಳಿಗೆ ಕಾಂಗ್ರೆಸ್‌ನಿಂದ ನೆರವು ಸಿಗುತ್ತಿದೆ ಎಂಬುದನ್ನು ಸ್ವತಃ ರಾಜ್ಯದ ಗೃಹ ಸಚಿವ ಪ್ರಿಯಾಂಕ ಖರ್ಗೆ ಅವರೇ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಗುರುವಾರ ಖರ್ಗೆ ನೀಡಿರುವ ಹೇಳಿಕೆಯೇ ಇದಕ್ಕೆ ಸಾಕ್ಷಿ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

Chikkaballapur News: ಸಾದಲಿ ಪಶು ಆಹಾರ ಘಟಕದ ವಿರುದ್ಧ ಕೋಲಾರ, ಚಿಕ್ಕಬಳ್ಳಾಪುರ ರೈತರಿಂದ ಅ.17ರಂದು ಬೃಹತ್ ಪ್ರತಿಭಟನೆ

ಕೋಲಾರ, ಚಿಕ್ಕಬಳ್ಳಾಪುರ ರೈತರಿಂದ ಅ.17ರಂದು ಬೃಹತ್ ಪ್ರತಿಭಟನೆ

ಸಾದಲಿ ಸಮೀಪ ಪಶು ಆಹಾರ ಘಟಕ ಸ್ಥಾಪಿಸಲು ನಾಲ್ಕು ವರ್ಷಗಳ ಹಿಂದೆ ಕೋಚಿಮುಲ್ ಮುಂದಾಗಿದ್ದಾಗ ಕೆಎಂಎಫ್ ಅನುಮತಿ ನೀಡಿರಲಿಲ್ಲ. ಬಳಿಕ ಎರಡೂ ಜಿಲ್ಲೆಗಳ ಆಡಳಿತ ಮಂಡಳಿಗಳ ಗಮನಕ್ಕೆ ತಾರದೆ, ಕೋಚಿಮುಲ್ ಒಡೆತನದ 26 ಎಕರೆ ಜಮೀನನ್ನು ಆಂಧ್ರಪ್ರದೇಶದ ಖಾಸಗಿ ಸಂಸ್ಥೆಯೊAದಕ್ಕೆ ಪಿಪಿಪಿ ಮಾದರಿಯಲ್ಲಿ ನಿರ್ವಹಣೆಗೆ ನೀಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬರದ ಆತಂಕದ ನಡುವೆ ಹಾವೇರಿಗೆ ಮಳೆರಾಯನ ಸಿಂಚನ; ರೈತರಲ್ಲಿ ಹೊಸ ನಿರೀಕ್ಷೆ ಮೂಡಿಸಿದ ಗುಡುಗು ಸಹಿತ ಮಳೆ

ಬರದ ಆತಂಕದ ನಡುವೆ ಹಾವೇರಿಗೆ ಮಳೆರಾಯನ ಸಿಂಚನ!

Haveri News: ಹಾವೇರಿ ನಗರ ಸೇರಿದಂತೆ ಜಿಲ್ಲೆಯ ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಶುಕ್ರವಾರ ಸಂಜೆ ಮಳೆ ಸುರಿದಿದೆ. ಬರದ ಆತಂಕ ಹಾಗೂ ಮಳೆಯ ನಿರೀಕ್ಷೆಯಲ್ಲಿದ್ದ ಹಾವೇರಿ ಜಿಲ್ಲೆಯ ಜನತೆಗೆ ಮಳೆರಾಯ ತಂಪಿನ ಸಿಂಚನ ನೀಡಿದ್ದಾನೆ.

ಕ್ರೀಡಾ ಮನೋಭಾವ ಬೆಳೆಸಿಕೊಳ್ಳಿ, ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿ: ಟಿಪಿಒ ಹನುಮಂತರಾಯಪ್ಪ

ಕ್ರೀಡಾ ಮನೋಭಾವ ಬೆಳೆಸಿಕೊಳ್ಳಿ, ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿ

ಗುಡಿಬಂಡೆ ತಾಲೂಕಿನಲ್ಲಿ ಎರಡನೇ ಬಾರಿಗೆ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿ ಆಯೋಜಿಸಿ ರುವುದು ಸಂತಸದ ವಿಚಾರವಾಗಿದೆ. ಜಿಲ್ಲೆಯ ಆರು ತಾಲೂಕುಗಳಿಂದ ಆಗಮಿಸಿರುವ ಬಾಲಕ ಮತ್ತು ಬಾಲಕಿಯರು ಪಂದ್ಯಾವಳಿಯಲ್ಲಿ ಉತ್ಸಾಹದಿಂದ ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬೇಕು.

Dr Mohan Alva: ಆರ್ಥಿಕ, ಶೈಕ್ಷಣಿಕ ಅಸಮಾನತೆ ನಿವಾರಣೆ ತುರ್ತು ಅಗತ್ಯ: ಡಾ. ಮೋಹನ್ ಆಳ್ವ

ಆರ್ಥಿಕ, ಶೈಕ್ಷಣಿಕ ಅಸಮಾನತೆ ನಿವಾರಣೆ ತುರ್ತು ಅಗತ್ಯ: ಡಾ. ಮೋಹನ್ ಆಳ್ವ

ಆರೋಗ್ಯ ಕ್ಷೇತ್ರ ವ್ಯಾಪಾರದ ಕೇಂದ್ರವಾಗುತ್ತಿರುವುದು ಕಳವಳಕಾರಿ ಸಂಗತಿ. ಚಿಕಿತ್ಸೆಯ ಹೆಸರಿನಲ್ಲಿ ಜನರಿಂದ ಅಪಾರ ಹಣ ವಸೂಲಿ ಮಾಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಮುದ್ದೇನಹಳ್ಳಿಯ ಸತ್ಯಸಾಯಿ ಆಸ್ಪತ್ರೆಯಲ್ಲಿ ಬಡವರಿಗೆ ಉಚಿತ ಆರೋಗ್ಯ ಸೇವೆ ಒದಗಿಸುತ್ತಿರುವುದು ಮಹತ್ವದ ಕಾರ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

INS Samarthak: ಕಾರವಾರದಲ್ಲಿ ಮೊದಲ ಸ್ವದೇಶಿ ನಿರ್ಮಿತ ಬಹುಪಯೋಗಿ ಯುದ್ಧನೌಕೆ ʼಐಎನ್ಎಸ್ ಸಮರ್ಥಕ್ʼ ಲೋಕಾರ್ಪಣೆ ಮಾಡಿದ ಉಪರಾಷ್ಟ್ರಪತಿ

ಕಾರವಾರದಲ್ಲಿ ಬಹುಪಯೋಗಿ ಯುದ್ಧನೌಕೆ ʼಐಎನ್ಎಸ್ ಸಮರ್ಥಕ್ʼ ಲೋಕಾರ್ಪಣೆ

INS Kadamba Naval Base, Karwar: ಐಎನ್ಎಸ್ ಸಮರ್ಥಕ್ ಮುಂಬರುವ ಪೀಳಿಗೆಯ ಆಯುಧಗಳು, ಸೆನ್ಸಾರ್‌ಗಳು ಮತ್ತು ಮಾನವರಹಿತ ವ್ಯವಸ್ಥೆಗಳ ಪರೀಕ್ಷೆಗಳಿಗೆ ಬೆಂಬಲ ನೀಡಲಿದೆ. ಇದು ಸಶಕ್ತ, ತಂತ್ರಜ್ಞಾನ ಆಧಾರಿತ ಮತ್ತು ಆತ್ಮನಿರ್ಭರ ಭಾರತೀಯ ನೌಕಾಪಡೆಯತ್ತ ಒಂದು ಪ್ರಮುಖ ಮೈಲುಗಲ್ಲಾಗಿದೆ.

K M Suresh: ಚಿಂತಾಮಣಿ ನ್ಯಾಯಾಲಯದಲ್ಲಿ ವಕೀಲರನ್ನು ಭೇಟಿ ಮಾಡಿ ಬೆಂಬಲಕ್ಕೆ ಮನವಿ

ಪದವೀಧರ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಪರ ಜೆ.ಕೆ. ಕೃಷ್ಣಾರೆಡ್ಡಿ ಪ್ರಚಾರ

ಆಗ್ನೇಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಎನ್‌ಡಿಎ ಅಭ್ಯರ್ಥಿ ಕೆ.ಎಂ. ಸುರೇಶ್(K M Suresh) ಪರ ಮಾಜಿ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ(EX MLA J K Krishna Reddy) ಹಾಗೂ ಜೆಡಿಎಸ್–ಬಿಜೆಪಿ ಕಾರ್ಯಕರ್ತರು ಚಿಂತಾಮಣಿ ನ್ಯಾಯಾಲಯದ ವಕೀಲರನ್ನು ಭೇಟಿ ಮಾಡಿ ಬೆಂಬಲ ಕೋರಿದರು.

Namma Metro: ಬೆಂಗಳೂರಿನ ಕ್ರಿಕೆಟ್‌ ಪ್ರೇಮಿಗಳಿಗೆ ಸಿಹಿಸುದ್ದಿ; ನಾಳೆ IND vs WI ಟಿ-20 ಪಂದ್ಯ ಹಿನ್ನೆಲೆ ಮಧ್ಯರಾತ್ರಿವರೆಗೆ ಮೆಟ್ರೋ ಸೇವೆ ವಿಸ್ತರಣೆ

ಬೆಂಗಳೂರಿನಲ್ಲಿ ನಾಳೆ IND vs WI ಟಿ-20 ಪಂದ್ಯ; ಮೆಟ್ರೋ ಸೇವೆ ವಿಸ್ತರಣೆ

IND vs WI 5th T20I: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾರತ ಮತ್ತು ವೆಸ್ಟ್‌ ಇಂಡೀಸ್‌ ತಂಡಗಳ ನಡುವೆ 5ನೇ T20 ಕ್ರಿಕೆಟ್ ಪಂದ್ಯ ನಡೆಯುವ ಹಿನ್ನೆಲೆಯಲ್ಲಿ ಅ.17 ರಂದು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್, ತನ್ನ ಪ್ರಯಾಣಿಕರಿಗೆ ಸುರಕ್ಷಿತ ಮತ್ತು ಅನುಕೂಲಕರ ಪ್ರಯಾಣಕ್ಕೆ ಮೆಟ್ರೋ ಸೇವೆಗಳನ್ನು ಮಧ್ಯರಾತ್ರಿವರೆಗೆ ವಿಸ್ತರಿಸಿದೆ.

ಕೌಟುಂಬಿಕ ಕಲಹ; ಕುಡಿದ ಮತ್ತಿನಲ್ಲಿ ಪತ್ನಿ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ ಪತಿ!

ಕುಡಿದ ಮತ್ತಿನಲ್ಲಿ ಪತ್ನಿ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ ಪತಿ

ಕುಡಿದ ಮತ್ತಿನಲ್ಲಿ ಪತಿಯು ಪತ್ನಿ ಜತೆ ಜಗಳವಾಡಿದ್ದಾನೆ. ಈ ವೇಳೆ ಇಬ್ಬರ ನಡುವಿನ ಗಲಾಟೆ ತೀವ್ರಗೊಂಡು, ಆಕ್ರೋಶಗೊಂಡ ಪತಿ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಇದರಿಂದ ಹೆಂಡತಿ ಗಂಭೀರವಾಗಿ ಗಾಯಗೊಂಡು ತೀವ್ರ ರಕ್ತಸ್ರಾವದಿಂದ ನರಳಾಡುತ್ತಿದ್ದರು. ಅವರನ್ನು ಅಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

ವಿಜಯನಗರ ಶಾಸಕ- ಜಿಲ್ಲಾ ಉಸ್ತುವಾರಿ ಸಚಿವರ ನಡುವೆ ಸಮನ್ವಯ ಕೊರತೆಯಿಂದ ಅಭಿವೃದ್ಧಿ ಕಾರ್ಯ ಸ್ಥಗಿತ: ಆನಂದ್ ಸಿಂಗ್ ಕಿಡಿ

ವಿಜಯನಗರ ಶಾಸಕ-ಜಿಲ್ಲಾ ಉಸ್ತುವಾರಿ ಸಚಿವರ ನಡುವೆ ಸಮನ್ವಯ ಕೊರತೆ

Anand Singh: ಶಾಸಕ ಗವಿಯಪ್ಪ ಅವರ ಸ್ವಪ್ರತಿಷ್ಠೆಯಿಂದ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಆಗುತ್ತಿಲ್ಲ. ಸಕ್ಕರೆ ಕಾರ್ಖಾನೆ ಬಗ್ಗೆ ಕೇವಲ ಭರವಸೆ ನೀಡುತ್ತಿದ್ದಾರೆ. ಕಳೆದ ಮೂರು ವರ್ಷದಿಂದ ಈ ಬಗ್ಗೆ ಯಾವುದೇ ಕಾರ್ಯ ನಡೆಸದೇ ಕೇವಲ ಮಾಡುವುದಾಗಿಯೇ ಭರವಸೆ ನೀಡುತ್ತಿದ್ದಾರೆ ಹೊರತು ಯಾವುದೇ ಕಾರ್ಯವಾಗುತ್ತಿಲ್ಲ ಎಂದು ಮಾಜಿ ಸಚಿವ ಆನಂದ್ ಸಿಂಗ್ ಆರೋಪಿಸಿದ್ದಾರೆ.

ರಾಜ್ಯಕ್ಕೆ 2ನೇ ಮಹಿಳಾ ರಾಜ್ಯಪಾಲರ ನೇಮಕ; ಕರ್ನಾಟಕದ ಪಾಲಿಗೆ ಇಂದು ಮಹತ್ವದ ದಿನ ಎಂದ ಸಿಎಂ ಡಿಕೆಶಿ

ರಾಜ್ಯದ 2ನೇ ಮಹಿಳಾ ರಾಜ್ಯಪಾಲರಿಗೆ ಶುಭ ಕೋರಿದ ಸಿಎಂ ಡಿ.ಕೆ. ಶಿವಕುಮಾರ್‌

CM DK Shivakumar: ಈ ಮೊದಲು ಕರ್ನಾಟಕದ ಮೊದಲ ಮಹಿಳಾ ರಾಜ್ಯಪಾಲರಾಗಿದ್ದ ರಮಾದೇವಿಯವರೊಂದಿಗೆ ಕೆಲಸ ಮಾಡಿದ್ದೇವೆ. ಈಗ ಡಾ. ಸುಧಾ ಯಾದವ್ ಅವರೊಂದಿಗೆ ಕೆಲಸ ಮಾಡುವ ಅವಕಾಶ ಒದಗಿದೆ. ಹೊಸ ಉತ್ಸಾಹದೊಂದಿಗೆ ಒಟ್ಟಾಗಿ ಕೆಲಸ ಮಾಡೋಣ. ಜನ್ಮದಿನದಂದೇ ಅವರು ರಾಜ್ಯಪಾಲರಾಗಿ ಪ್ರಮಾಣ ವಚನ ಸ್ವೀಕರಿಸಿರುವುದು ವಿಶೇಷ ಎಂದು ಸಿಎಂ ಡಿ.ಕೆ. ಶಿವಕುಮಾರ್ ಶುಭ ಕೋರಿದ್ದಾರೆ.

Mangaluru News: ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ; ಮಂಗಳೂರಿನ ಚರ್ಚ್‌ ಫಾದರ್‌ ವಿರುದ್ಧ ಪೋಕ್ಸೊ ಕೇಸ್‌ ದಾಖಲು

ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ; ಚರ್ಚ್‌ ಫಾದರ್‌ ವಿರುದ್ಧ ಕೇಸ್‌

ಅಪ್ರಾಪ್ತ ವಯಸ್ಸಿನ ಬಾಲಕನು ಮಂಗಳೂರಿನ ವೆಲೆನ್ಸಿಯಾದಲ್ಲಿರುವ ಚರ್ಚ್‌ಗೆ ಪ್ರಾರ್ಥನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಕೃತ್ಯ ನಡೆದಿದೆ. ಚರ್ಚ್‌ನ ಫಾದರ್ ಅವರು ಲೈಂಗಿಕ ದುರುದ್ದೇಶದಿಂದ ಬಾಲಕನಿಗೆ ಚಾಕಲೇಟ್ ನೀಡಿ ಪುಸಲಾಯಿಸಿ, ಅನುಚಿತವಾಗಿ ವರ್ತಿಸುತ್ತಿದ್ದರು ಎಂಬ ಆರೋಪ ಕೇಳಿಬಂದಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.

ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಹಿಂದೆ ಆ ಇಬ್ಬರು ಸಚಿವರ ಕೈವಾಡ: ಎಚ್‌.ಡಿ.ಕುಮಾರಸ್ವಾಮಿ

ಸ್ಟಿಂಗ್ ಆಪರೇಷನ್ ಹಿಂದೆ ಆ ಇಬ್ಬರು ಸಚಿವರ ಕೈವಾಡ: ಎಚ್‌ಡಿಕೆ

Karnataka sting operation: ಕುಮಾರಸ್ವಾಮಿಯವರೇ ಸ್ಟಿಂಗ್ ವಿಡಿಯೊ ಮಾಡಿಸಿರಬಹುದು ಎಂಬ ಜಮೀರ್ ಅಹ್ಮದ್ ಆರೋಪಕ್ಕೆ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಪ್ರಿಯಾಂಕ್ ಖರ್ಗೆ ಅವರ ಇತ್ತೀಚಿನ ನಡವಳಿಕೆಗಳನ್ನು ಗಮನಿಸಿದರೆ, ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಕಾಂಗ್ರೆಸ್ ಒಳಗೆಯೇ ದೊಡ್ಡ ಸಂಚು ನಡೆದಿರುವುದು ಸ್ಪಷ್ಟವಾಗುತ್ತದೆ ಎಂದು ಎಚ್‌ಡಿಕೆ ಹೇಳಿದ್ದಾರೆ.

ನಾಳೆ ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತ ವಾಹನ ನಿಲುಗಡೆ ನಿರ್ಬಂಧ

ನಾಳೆ ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತ ವಾಹನ ನಿಲುಗಡೆ ನಿರ್ಬಂಧ

India vs WI 5th T20: ಸುಗಮ ಸಂಚಾರ ದಟ್ಟಣೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಕ್ರೀಡಾಂಗಣದ ಸುತ್ತಮುತ್ತಲಿನ ದಟ್ಟಣೆಯನ್ನು ತಪ್ಪಿಸಲು ಸಂಚಾರ ಪೊಲೀಸರು ಪಾರ್ಕಿಂಗ್ ನಿರ್ಬಂಧಗಳು, ಗೊತ್ತುಪಡಿಸಿದ ಪಾರ್ಕಿಂಗ್ ಸೌಲಭ್ಯಗಳು ಮತ್ತು ನಿರ್ದಿಷ್ಟ ಪ್ರವೇಶ ಮತ್ತು ನಿರ್ಗಮನ ವ್ಯವಸ್ಥೆಗಳನ್ನು ಘೋಷಿಸಿದ್ದಾರೆ.

ಕರ್ನಾಟಕದ ನೂತನ ರಾಜ್ಯಪಾಲರಾಗಿ ಡಾ.ಸುಧಾ ಯಾದವ್ ಪ್ರಮಾಣ ವಚನ ಸ್ವೀಕಾರ; ಯಾರಿವರು, ಹಿನ್ನೆಲೆಯೇನು?

ಕರ್ನಾಟಕದ ನೂತನ ರಾಜ್ಯಪಾಲರಾಗಿ ಡಾ.ಸುಧಾ ಯಾದವ್ ಪ್ರಮಾಣ ವಚನ ಸ್ವೀಕಾರ

ಕರ್ನಾಟಕದ ನೂತನ ರಾಜ್ಯಪಾಲರಾಗಿ ಡಾ. ಸುಧಾ ಯಾದವ್ ಅವರು ಶುಕ್ರವಾರ ಪ್ರಮಾಣವಚನ ಸ್ವೀಕರಿಸಿದರು. ಬೆಂಗಳೂರಿನ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾದ ವಿಭು ಬಖ್ರು ಅವರು ನೂತನ ರಾಜ್ಯಪಾಲರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣವಚನ ಬೋಧಿಸಿದರು. ​

40 ಮಿಲಿಯನ್ ಅಮೆರಿಕನ್‌ ಡಾಲರ್ ಹೂಡಿಕೆ: ಹೊಸ್ಕೋಟೆ ಉತ್ಪಾದನಾ ಘಟಕ ಆರಂಭಿಸಿದ ಗೋಪಾಲನ್ ಏರೋಸ್ಪೇಸ್

40 ಮಿಲಿಯನ್ ಅಮೆರಿಕನ್‌ ಡಾಲರ್ ಹೂಡಿಕೆ: ಹೊಸ್ಕೋಟೆ ಉತ್ಪಾದನಾ ಘಟಕ ಆರಂಭ

ಗೋಪಾಲನ್ ಎಂಟರ್‌ಪ್ರೈಸಸ್‌ನ ಅಂಗಸಂಸ್ಥೆಯಾದ ಗೋಪಾಲನ್ ಏರೋಸ್ಪೇಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (GAIPL), ಬೆಂಗಳೂರಿನ ಹೊಸ್ಕೋಟೆಯಲ್ಲಿರುವ ತನ್ನ ಉತ್ಪಾ ದನಾ ಘಟಕದಲ್ಲಿ ಇಂದು ಹೊಸ ಉತ್ಪಾದನಾ ಸಾಲನ್ನು ಆರಂಭಿಸಿದೆ. ಈ ಕ್ರಮವು ಏರೋಸ್ಪೇಸ್, ರಕ್ಷಣಾ ಮತ್ತು ಬಾಹ್ಯಾಕಾಶ ಕ್ಷೇತ್ರಗಳಲ್ಲಿ ಉನ್ನತ ಮೌಲ್ಯದ ಉತ್ಪಾದನಾ ಕಾರ್ಯಕ್ರಮಗಳನ್ನು ಕೈಗೊಳ್ಳುವ ಕಂಪನಿಯ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸಲಿದೆ.

Loading...