ಉಡುಪಿಯಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಹರೀಶ್ ರಾಯ್ ಅಂತ್ಯಕ್ರಿಯೆ
Harish Rai funeral: ಉಡುಪಿಯಲ್ಲಿ ಹುಟ್ಟಿ ಬೆಳೆದಿದ್ದ ಹರೀಶ್ ರಾಯ್ ಅವರು ಬಳಿಕ ಅಲ್ಲಿಂದ ಮುಂಬಯಿಗೆ ಓಡಿಹೋಗಿದ್ದರು. ನಂತರ ಬೆಂಗಳೂರಿಗೆ ಬಂದು ಕನ್ನಡ ಚಿತ್ರೋದ್ಯಮಕ್ಕೆ ಸೇರಿಕೊಂಡಿದ್ದರು. ಹರೀಶ್ ಅವರ ಬಂಧುಬಾಧವರು ಇಲ್ಲಿದ್ದಾರೆ. ನಿನ್ನೆ ರಾತ್ರಿ ಅವರ ಪಾರ್ಥಿವ ಶರೀರವನ್ನು ಉಡುಪಿಗೆ ಕೊಂಡೊಯ್ಯಲಾಗಿತ್ತು. ಇಂದು ಉಡುಪಿಯಲ್ಲಿ ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಕ್ರಿಯೆಯ ವಿಧಿವಿಧಾನಗಳು ನೆರವೇರಿತು.