ಹಾವೇರಿಯಲ್ಲಿ ಭಾರಿ ಮಳೆಗೆ ನೆಲಕ್ಕುರುಳಿದ ಮರ, ವಿದ್ಯುತ್ ಕಂಬಗಳು
Haveri Rain: ಹಾವೇರಿಯ ಶಹರದ ಶಿವಾಜಿ ನಗರದಲ್ಲಿ ತೆಂಗಿನ ಮರ ಬಿದ್ದ ಹಿನ್ನೆಲೆ ನಾಲ್ಕು ವಿದ್ಯುತ್ ಕಂಬಗಳು ಉರುಳಿ, ಹಲವು ಬೈಕ್ಗಳು ಜಖಂಗೊಂಡಿವೆ. ಬಿರುಗಾಳಿ, ಗುಡುಗು ಸಹಿತ ಆಲಿಕಲ್ಲು ಮಳೆಯಿಂದ ಹಾವೇರಿಯಿಂದ ಗುತ್ತಲ ಕಡೆಗೆ ಹೋಗುವ ರಾಜ್ಯ ಹೆದ್ದಾರಿಯಲ್ಲಿ ನಾಲ್ಕೈದು ದೊಡ್ಡ ಮರಗಳು ಉರುಳಿದ್ದರಿಂದ ಮೂರು ಗಂಟೆಗಳ ಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.