ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕರ್ನಾಟಕ

ಮಕ್ಕಳಿಗೆ ಜೀವನ ಮೌಲ್ಯದ ಜೊತೆಗೆ, ನಮ್ಮ ಸಂಪ್ರದಾಯ ಕಲಿಸುವ ಜವಾಬ್ದಾರಿಯೂ ಶಿಕ್ಷಕರದ್ದೇ: ಕೈಲಾಸ ಮಠದ ಶ್ರೀ ಜಯೇಂದ್ರ ಪುರಿ ಮಹಾಸ್ವಾಮೀಜಿ

ನಮ್ಮ ಸಂಪ್ರದಾಯ ಕಲಿಸುವ ಜವಾಬ್ದಾರಿಯೂ ಶಿಕ್ಷಕರದ್ದೇ

ಶಿಕ್ಷಣವು ಕೇವಲ ಮಕ್ಕಳ ಶೈಕ್ಷಣಿಕ ಪಯಣ ಮಾತ್ರವಲ್ಲ ಜೀವನದ ಪಾಠವನ್ನು ಕಲಿಸಿಕೊಡುತ್ತದೆ. ಈ ಪಾಠ ಅವರ ಜೀವನದುದ್ದಕ್ಕೂ ಜೊತೆಯಾಗಿರುತ್ತದೆ. ಮಕ್ಕಳ ಮುಗ್ಧ ಮನಸ್ಸುಗಳನ್ನು ಮೌಲ್ಯಯುತ ವಾಗಿ ರೂಪಿಸುವುದರ ಜೊತೆಗೆ ಅವರಲ್ಲಿ ಸಾಮಾಜಿಕ ಮೌಲ್ಯಗಳನ್ನೂ ತುಂಬುವ ಶಿಕ್ಷಕರನ್ನು ಗೌರವಿ ಸುವುದರಲ್ಲಿ ನಮ್ಮ ನಂಬಿಕೆಯ ಪ್ರತೀಕವಾಗಿ ಈ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ

ಇವಿ ಮೂಲಸೌಕರ್ಯ ವ್ಯವಸ್ಥೆ ಬಲಪಡಿಸಿಕೊಂಡ ಟಾಟಾ ಮೋಟಾರ್ಸ್: ಎಲೆಕ್ಟ್ರಿಕ್ ಎಸ್‌ಸಿವಿಗಳಿಗೆ ಈಗ 25,000 ಸಾರ್ವಜನಿಕ ಚಾರ್ಜರ್‌ ಗಳು ಲಭ್ಯ

ಎಲೆಕ್ಟ್ರಿಕ್ ಎಸ್‌ಸಿವಿಗಳಿಗೆ ಈಗ 25,000 ಸಾರ್ವಜನಿಕ ಚಾರ್ಜರ್‌ ಗಳು ಲಭ್ಯ

ಚಾರ್ಜಿಂಗ್ ಮೂಲಸೌಕರ್ಯದ ವಿಸ್ತರಣೆಯನ್ನು ಇನ್ನಷ್ಟು ವೇಗಗೊಳಿಸಲು, ಟಾಟಾ ಮೋಟಾರ್ಸ್ ಸಂಸ್ಥೆಯು 13 ಪ್ರಮುಖ ಚಾರ್ಜಿಂಗ್ ಪಾಯಿಂಟ್ ಆಪರೇಟರ್‌ಗಳ (ಸಿಪಿಒ) ಜೊತೆಗೆ ಮುಂದಿನ 12 ತಿಂಗಳಲ್ಲಿ 25,000 ಹೆಚ್ಚುವರಿ ಸಾರ್ವಜನಿಕ ಚಾರ್ಜರ್‌ಗಳನ್ನು ಸ್ಥಾಪಿಸಲು ಮತ್ತು ನಿರ್ವಹಿಸಲು ಒಡಂಬಡಿಕೆಗೆ (ಎಂಒಯು) ಸಹಿ ಹಾಕಿದೆ.

Basanagouda Patil Yatnal: ದಲಿತ ಮಹಿಳೆಯರಿಗೆ ಅಪಮಾನ ಆರೋಪ; ಶಾಸಕ ಯತ್ನಾಳ್ ವಿರುದ್ಧ ಅಟ್ರಾಸಿಟಿ ಕೇಸ್‌

ದಲಿತ ಮಹಿಳೆಯರಿಗೆ ಅಪಮಾನ; ಶಾಸಕ ಯತ್ನಾಳ್ ವಿರುದ್ಧ ಎಫ್‌ಐಆರ್‌

Basanagouda Patil Yatnal: ಸನಾತನ ಧರ್ಮದವರು ಮಾತ್ರ ಚಾಮುಂಡಿಗೆ ಪೂಜಿಸಬೇಕು. ಸಾಮಾನ್ಯ ದಲಿತ ಮಹಿಳೆಗೂ ಯತ್ನಾಳ್ ಅವಕಾಶ ಇಲ್ಲ ಅಂತ ಶಾಸಕ ಯತ್ನಾಳ್‌ ಹೇಳಿಕೆ ನೀಡಿದ್ದಾರೆ. ದಲಿತ ಮಹಿಳೆಯರಿಗೆ ಅಪಮಾನ ಮಾಡಿರುವ ಶಾಸಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರು ದಾಖಲಾಗಿದ್ದರಿಂದ ಯತ್ನಾಳ್‌ ವಿರುದ್ಧ ಕೇಸ್‌ ದಾಖಲಾಗಿದೆ.

ಇವಿ ಮೂಲಸೌಕರ್ಯ ವ್ಯವಸ್ಥೆ ಬಲಪಡಿಸಿಕೊಂಡ ಟಾಟಾ ಮೋಟಾರ್ಸ್: ಎಲೆಕ್ಟ್ರಿಕ್ ಎಸ್‌ಸಿವಿಗಳಿಗೆ ಈಗ 25,000 ಸಾರ್ವಜನಿಕ ಚಾರ್ಜರ್‌ ಗಳು ಲಭ್ಯ

ಎಲೆಕ್ಟ್ರಿಕ್ ಎಸ್‌ಸಿವಿಗಳಿಗೆ ಈಗ 25,000 ಸಾರ್ವಜನಿಕ ಚಾರ್ಜರ್‌ ಗಳು ಲಭ್ಯ

ಚಾರ್ಜಿಂಗ್ ಮೂಲಸೌಕರ್ಯದ ವಿಸ್ತರಣೆಯನ್ನು ಇನ್ನಷ್ಟು ವೇಗಗೊಳಿಸಲು, ಟಾಟಾ ಮೋಟಾರ್ಸ್ ಸಂಸ್ಥೆಯು 13 ಪ್ರಮುಖ ಚಾರ್ಜಿಂಗ್ ಪಾಯಿಂಟ್ ಆಪರೇಟರ್‌ಗಳ (ಸಿಪಿಒ) ಜೊತೆಗೆ ಮುಂದಿನ 12 ತಿಂಗಳಲ್ಲಿ 25,000 ಹೆಚ್ಚುವರಿ ಸಾರ್ವಜನಿಕ ಚಾರ್ಜರ್‌ಗಳನ್ನು ಸ್ಥಾಪಿಸಲು ಮತ್ತು ನಿರ್ವಹಿಸಲು ಒಡಂಬಡಿಕೆಗೆ (ಎಂಒಯು) ಸಹಿ ಹಾಕಿದೆ.

PES PU College: ವಿರಿಂಚಿ ದಿ ಕ್ರಿಯೇಟರ್‌ ಅಂತರ ಕಾಲೇಜು ಸ್ಪರ್ಧೆ; ಪಿಇಎಸ್‌ ಪಿಯು ಕಾಲೇಜಿಗೆ ಪ್ರಥಮ ಸ್ಥಾನ

ಅಂತರ ಕಾಲೇಜು ಸ್ಪರ್ಧೆ; ಪಿಇಎಸ್‌ ಪಿಯು ಕಾಲೇಜಿಗೆ ಪ್ರಥಮ ಸ್ಥಾನ

PES University: ಪಿಇಎಸ್‌ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ʼವಿರಿಂಚಿ ದಿ ಕ್ರಿಯೇಟರ್‌ 2025ʼ (Virinchi 2025) ಅಂತರ ಕಾಲೇಜು ಸ್ಪರ್ಧೆಯಲ್ಲಿ 630 ಅಂಕ ಪಡೆದು ಪಿಇಎಸ್‌ ಪ್ರಥಮ ಸ್ಥಾನವನ್ನು ಪಡೆದುಕೊಂಡು ರೋಲಿಂಗ್‌ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. 220 ಅಂಕ ಪಡೆದ ಜ್ಯೋತಿ ನಿವಾಸ್‌ ಪಿಯು ಕಾಲೇಜು ಪ್ರಥಮ ರನ್ನರ್‌ ಅಪ್‌ ಹಾಗೂ 180 ಅಂಕ ಪಡೆದ ಆರ್‌.ಎನ್‌.ಎಸ್‌. ಪಿಯು ಕಾಲೇಜು ದ್ವಿತೀಯ ರನ್ನರ್‌ ಅಪ್‌ ಸ್ಥಾನ ಪಡೆದಿದೆ.

Bank Robbery: ಭೀಮಾತೀರದ ಎಸ್‌ಬಿಐ ಬ್ಯಾಂಕ್‌ಗೆ ಕನ್ನ; ಪಿಸ್ತೂಲ್, ಚಾಕು ತೋರಿಸಿ ಮುಸುಕುಧಾರಿಗಳಿಂದ ದರೋಡೆ

ಚಡಚಣ ಎಸ್‌ಬಿಐ ಶಾಖೆಯಲ್ಲಿ ದರೋಡೆ; ಪಿಸ್ತೂಲ್, ಚಾಕು ತೋರಿಸಿ ಕೃತ್ಯ

Chadchan News: ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಮಂಗಳವಾರ ಸಂಜೆ ದರೋಡೆ ನಡೆದಿದೆ. ಸ್ಥಳಕ್ಕೆ ಚಡಚಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಳ್ಳತನವಾದ ನಗದು ಎಷ್ಟು? ಕೃತ್ಯ ಹೇಗಾಯಿತು? ಎಂಬಿತ್ಯಾದಿ ವಿವರ ತನಿಖೆ ಬಳಿಕವೇ ಗೊತ್ತಾಗಲಿದೆ.

ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿಗೆ ಗುಡ್‌ ನ್ಯೂಸ್‌; ಶೀಘ್ರವೇ ಬಡ್ತಿ

ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿಗೆ ಗುಡ್‌ ನ್ಯೂಸ್‌; ಶೀಘ್ರವೇ ಬಡ್ತಿ

Laxmi Hebbalkar: ಪದವಿ ಪಡೆದಿರುವ ಹಾಗೂ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕಗಳಿಸಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಬೇರೆ ಬೇರೆ ಹಂತದಲ್ಲಿರುವ ಸಿಬ್ಬಂದಿಗೆ ಒಂದು ಬಾರಿ ಬಡ್ತಿ ನಿಯಮದಡಿ ಮೇಲ್ವಿಚಾರಕ ಹುದ್ದೆಗೆ ಬಡ್ತಿ ನೀಡಲಾಗುವುದು. ಇದಕ್ಕಾಗಿ 400 ಜನರ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ತಿಳಿಸಿದ್ದಾರೆ.

Yaduveer wadiyar: ಜಾತ್ಯತೀತ ಪದದ ದುರ್ಬಳಕೆ ಆಗುತ್ತಿದೆ, ಹಿಂದೂ ಸಮಾಜ ಒಡೆಯಲಾಗುತ್ತಿದೆ: ಯದುವೀರ್ ಒಡೆಯರ್‌

ಜಾತ್ಯತೀತ ಪದದ ದುರ್ಬಳಕೆ ಆಗುತ್ತಿದೆ, ಹಿಂದೂ ಸಮಾಜ ಒಡೆಯಲಾಗುತ್ತಿದೆ

Mysuru Dasara: ಸ್ವಾತಂತ್ರ್ಯದ ಬಳಿಕ ಭಾರತೀಯತೆ, ಸ್ವದೇಶಿ ದೃಷ್ಟಿಯಲ್ಲಿ ದೇಶವನ್ನು ಪುನರ್‌ ನಿರ್ಮಾಣ ಮಾಡಲು ಅವಕಾಶವಿತ್ತು. ಆದರೆ, ಬ್ರಿಟಿಷರ ಆಲೋಚನೆಗಳು ಇನ್ನೂ ದೇಶದಲ್ಲಿ ಉಳಿದಿವೆ. ಅದನ್ನು ನಾವು ಎದುರಿಸಬೇಕಾಗಿದೆ ಎಂದು ಸಂಸದ ಹಾಗೂ ರಾಜ ವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದ್ದಾರೆ.

DK Shivakumar: ಮೊದಲ ಬಾರಿಗೆ ರಾಜ್ಯದಲ್ಲಿ ಭೂಸ್ವಾಧೀನ, ಪುನಶ್ಚೇತನ ಹಾಗೂ ಪರಿಹಾರ ಪ್ರಾಧಿಕಾರ ರಚಿಸಲು ತೀರ್ಮಾನ: ಡಿಕೆಶಿ

ಮುಳುಗಡೆಯಾಗುವ ಪ್ರತಿ ಎಕರೆ ಭೂಮಿಗೆ 30-40 ಲಕ್ಷ ಪರಿಹಾರ ನಿಗದಿ: ಡಿಕೆಶಿ

DK Shivakumar: ನ್ಯಾಯಯುತ ಪರಿಹಾರ, ಭೂಸ್ವಾಧೀನ ಪಾರದರ್ಶಕತೆ ಹಕ್ಕು ಕಾಯ್ದೆಯ ಸೆಕ್ಷನ್ 51ರ ಅಡಿಯಲ್ಲಿ ಭೂಸ್ವಾಧೀನ, ಪುನಶ್ಚೇತನ ಹಾಗೂ ಪರಿಹಾರ ಪ್ರಾಧಿಕಾರ ರಚಿಸಲು ಅವಕಾಶವಿದೆ. ಹೀಗಾಗಿ ರಾಜ್ಯ ಸರ್ಕಾರ ಮೊದಲ ಬಾರಿಗೆ ಈ ಪ್ರಾಧಿಕಾರವನ್ನು ರಚಿಸಲಿದೆ. ಮುಖ್ಯನ್ಯಾಯಮೂರ್ತಿಗಳು ನೇಮಕ ಮಾಡುವ ನ್ಯಾಯಾಧೀಶರ ನೇತೃತ್ವದಲ್ಲಿ ಈ ಪ್ರಾಧಿಕಾರವನ್ನು ರಚಿಸಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

Bear Attack: ಟೊಮೇಟೊ ತೋಟದಲ್ಲಿ ಕರಡಿ ದಾಳಿ; ಇಬ್ಬರು ರೈತರಿಗೆ ಗಂಭೀರ ಗಾಯ

ಟೊಮೇಟೊ ತೋಟದಲ್ಲಿ ಕರಡಿ ದಾಳಿ; ಇಬ್ಬರು ರೈತರಿಗೆ ಗಂಭೀರ ಗಾಯ

Chikkaballapur News: ಚಿಕ್ಕಬಳ್ಳಾಪುರ ತಾಲೂಕಿನ ಗುರುಕುಲ ನಾಗೇನಹಳ್ಳಿ ಗ್ರಾಮದಲ್ಲಿ ಕರಡಿ ದಾಳಿ ನಡೆಸಿದ್ದು, ಇಬ್ಬುರ ರೈತರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಪೊಲೀಸರು, ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Cabinet Meeting: ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3; ನೀರಾವರಿ ಜಮೀನಿಗೆ 40 ಲಕ್ಷ, ಒಣಭೂಮಿಗೆ 30 ಲಕ್ಷ ಪರಿಹಾರ ನೀಡಲು ಸಚಿವ ಸಂಪುಟ ನಿರ್ಣಯ

ಯುಕೆಪಿ ಹಂತ-3; ರೈತರ ಜಮೀನಿಗೆ 3 ವರ್ಷದಲ್ಲಿ ಪರಿಹಾರ ಎಂದ ಸಿಎಂ

Upper Krishna Project-3: ಯುಕೆಪಿ ಹಂತ-3 ಯೋಜನೆಗೆ ರೈತರಿಂದ ಸ್ವಾಧೀನಪಡಿಸಿಕೊಳ್ಳುವ ನೀರಾವರಿ ಜಮೀನಿಗೆ ಎಕರೆಯೊಂದಕ್ಕೆ 40 ಲಕ್ಷ ರೂ, ಖುಷ್ಕಿ ಒಣಭೂಮಿಯ ಎಕರೆಯೊಂದಕ್ಕೆ 30 ಲಕ್ಷ ಪರಿಹಾರವನ್ನು ನೀಡಬೇಕೆಂದು ಸಚಿವ ಸಂಪುಟ ತೀರ್ಮಾನಿಸಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

Arasayyana Prema Prasanga Movie: ಮಹಾಂತೇಶ್ ಹಿರೇಮಠ ಅಭಿನಯದ ʼಅರಸಯ್ಯನ ಪ್ರೇಮ ಪ್ರಸಂಗʼ ಚಿತ್ರದ ʼಪೋಸ್ಟ್ ಕಾರ್ಡ್ʼ ಸಾಂಗ್‌ ಔಟ್‌

ʼಅರಸಯ್ಯನ ಪ್ರೇಮ ಪ್ರಸಂಗʼ ಚಿತ್ರದ ʼಪೋಸ್ಟ್ ಕಾರ್ಡ್ʼ ಸಾಂಗ್‌ ಔಟ್‌

Arasayyana Prema Prasanga Movie: ʼಫ್ರೆಂಚ್ ಬಿರಿಯಾನಿʼ ಖ್ಯಾತಿಯ ಮಹಾಂತೇಶ್ ಹಿರೇಮಠ ನಾಯಕನಾಗಿ ನಟಿಸಿರುವ ಗ್ರಾಮೀಣ ಸೊಗಡಿನ ಕಾಮಿಡಿ ಕಥಾಹಂದರ ಹೊಂದಿರುವ ʼಅರಸಯ್ಯನ ಪ್ರೇಮ ಪ್ರಸಂಗʼ ಚಿತ್ರಕ್ಕಾಗಿ ವಿಕ್ರಮ್ ವಸಿಷ್ಠ ಅವರು ಬರೆದಿರುವ,‌ ನಿತಿನ್ ರಾಜರಾಮ್ ಶಾಸ್ತ್ರಿ ಹಾಗೂ ʼಜೋಗಿʼ ಸುನಿತಾ ಅವರು ಹಾಡಿರುವ ಮತ್ತು ಪ್ರವೀಣ್ - ಪ್ರದೀಪ್ ಸಂಗೀತ ನೀಡಿರುವ ʼಪೋಸ್ಟ್ ಕಾರ್ಡ್ʼ ಹಾಡು ಬಿಡುಗಡೆಯಾಗಿದೆ.

Ajit Hanamakkanavar: ಸರ್ಕಾರಿ ಕಚೇರಿಯಲ್ಲಿ ದೇವರಿಗೆ ಜಾಗ ಇಲ್ಲಾಂದ್ರೆ, ದೇವಸ್ಥಾನಗಳಲ್ಲಿ ಸರ್ಕಾರಕ್ಕೇನು ಕೆಲಸ?: ಅಜಿತ್ ಹನುಮಕ್ಕನವರ್

ಕಚೇರಿಯಲ್ಲಿ ದೇವರಿಗೆ ಜಾಗ ಇಲ್ಲಾಂದ್ರೆ, ದೇಗುಲಗಳಲ್ಲಿ ಸರ್ಕಾರಕ್ಕೇನು ಕೆಲಸ?

Mysuru Dasara 2025: ಪರಿವರ್ತನಾ ಟ್ರಸ್ಟ್‌ ವತಿಯಿಂದ ಬೆಂಗಳೂರಿನಲ್ಲಿ ಸೋಮವಾರ ಆಯೋಜಿಸಿದ್ದ ಮೈಸೂರು ದಸರಾ ಕುರಿತ ವಿಚಾರಗೋಷ್ಠಿಯಲ್ಲಿ ಪತ್ರಕರ್ತ ಅಜಿತ್ ಹನುಮಕ್ಕನವರ್ ಅವರು ಮಾತನಾಡಿದ್ದಾರೆ. ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಆಚರಣೆಗಳು ಸೇರಿ ಎಲ್ಲವನ್ನೂ ಕೆಲವರು ಪ್ರಶ್ನೆ ಮಾಡುತ್ತಾರೆ. ಇದು ವಾಕ್‌ ಸ್ವಾತಂತ್ರ್ಯದ ಹೆಸರಿನಲ್ಲಿ ಅಂಟಿಸಿಕೊಂಡಿರುವ ಹೊಸ ವ್ಯಾಧಿಯಾಗಿದೆ ಎಂದು ಅವರು ಟೀಕಿಸಿದ್ದಾರೆ.

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಸೆ.18ರಂದು ಕರೆಂಟ್‌ ಇರಲ್ಲ

ಬೆಂಗಳೂರಿನ ಈ ಪ್ರದೇಶಗಳಲ್ಲಿ ಸೆ.18ರಂದು ಕರೆಂಟ್‌ ಇರಲ್ಲ

Bengaluru Power Cut: ಕೆಪಿಟಿಸಿಎಲ್‌ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಸಾರಕ್ಕಿ ಉಪಕೇಂದ್ರ ವ್ಯಾಪ್ತಿಯ ಹಲವೆಡೆ ಸೆ.18ರಂದು ಗುರುವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಈ ಕುರಿತ ವಿವರ ಇಲ್ಲಿದೆ.

K.Y.Nanjegowda: ಮಾಲೂರು ಶಾಸಕ ಕೆ.ವೈ.ನಂಜೇಗೌಡ ಆಯ್ಕೆ ಅಸಿಂಧು; ಮರು ಎಣಿಕೆಗೆ ಹೈಕೋರ್ಟ್ ಆದೇಶ

ಮಾಲೂರು ಶಾಸಕ ಕೆ.ವೈ.ನಂಜೇಗೌಡ ಆಯ್ಕೆ ಅಸಿಂಧುಗೊಳಿಸಿದ ಹೈಕೋರ್ಟ್!

Malur Assembly election results: ಮಾಲೂರು ಶಾಸಕ ನಂಜೇಗೌಡ ಆಯ್ಕೆ ಅಸಿಂಧು ಕೋರಿ ಬಿಜೆಪಿ ಪರಾಜಿತ ಅಭ್ಯರ್ಥಿ ಮಂಜುನಾಥಗೌಡ ಅರ್ಜಿ ಸಲ್ಲಿಸಿದ್ದರು. ವಿಧಾನಸಭೆ ಚುನಾವಣೆ ಮತ ಎಣಿಕೆ ವೇಳೆ ಲೋಪವಾಗಿದೆ. ಹೀಗಾಗಿ ಶಾಸಕರ ಆಯ್ಕೆ ಅಸಿಂಧುಗೊಳಿಸಲು ಮನವಿ ಮಾಡಲಾಗಿತ್ತು. ಅರ್ಜಿ ವಿಚಾರಣೆ ನಡೆಸಿರುವ ಹೈಕೋರ್ಟ್‌, 4 ವಾರಗಳಲ್ಲಿ ಹೈಕೋರ್ಟ್ ಮರು ಮತ ಎಣಿಕೆ ನಡೆಸಲು ಆದೇಶ ನೀಡಿದೆ.

ಬಂಡೆಕಲ್ಲಿಗೆ ಡೈನಾಮೈಟ್: ಜಿಲ್ಲಾಡಳಿತಕ್ಕೆ ನೋ ಸೆಂಟಿಮೆಂಟ್

ಬಂಡೆಕಲ್ಲಿಗೆ ಡೈನಾಮೈಟ್: ಜಿಲ್ಲಾಡಳಿತಕ್ಕೆ ನೋ ಸೆಂಟಿಮೆಂಟ್

ಬಂಡೆ ಸಿಡಿಸಿ ಜಮೀನನ್ನು ಮಾಡಿ ಹುರುಳಿ ಚೆಲ್ಲುವುದು, ಸೈಟ್ ವಿಂಗಡಿಸುವುದು, ಪಕ್ಕದಲ್ಲಿರುವ ಭೂಮಿ ಒತ್ತುವರಿ ಮಾಡಿಕೊಂಡು ಮತ್ತೊಂದು ಕಟ್ಟಡ ನಿರ್ಮಾಣ ಮಾಡುವ ದಂಧೆಯೂ ಅಂತರ ಗಂಗೆ ಬೆಟ್ಟದ ಮೇಲೆ ನಿರಂತರವಾಗಿ ನಡೆಯುತ್ತಿದ್ದರೂ ಕಂದಾಯ ಇಲಾಖೆ ಜಾಣಮೌನ ವಹಿಸಿದೆ.

Nikhil Kumaraswamy: ರಾಜ್ಯದ ಕೃಷಿ ಸಚಿವರು ತಮ್ಮ ಕ್ಷೇತ್ರಕ್ಕೆ ಸಚಿವರಾ? ರಾಜ್ಯದ ಸಚಿವರಾ? ನಿಖಿಲ್ ಕುಮಾರಸ್ವಾಮಿ ಪ್ರಶ್ನೆ

ರಾಜ್ಯ ಸರ್ಕಾರ ಬರೀ ಘೋಷಣೆಗೆ ಮಾತ್ರ ಸೀಮಿತವಾಗಿದೆ: ನಿಖಿಲ್ ಕುಮಾರಸ್ವಾಮಿ

Nikhil Kumaraswamy: ರಾಜ್ಯದ ಕೃಷಿ ಸಚಿವರು ತಮ್ಮ ಕ್ಷೇತ್ರಕ್ಕೆ ಸಚಿವರಾ ಅಥವಾ ರಾಜ್ಯದ ಸಚಿವರಾ? ಇಷ್ಟು ಮಳೆ ಆದರೂ ಯಾವುದೇ ಪ್ರದೇಶಕ್ಕೆ ಭೇಟಿ ನೀಡಿಲ್ಲ. ರೈತರ ಸಂಕಷ್ಟದ ದಿನಗಳಲ್ಲಿ ಸರ್ಕಾರ ಯಾವ ರೀತಿ ನೆರವು ನೀಡುತ್ತದೆ ಎಂದು ಉತ್ತರ ಕೋಡಬೇಕು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

Marutha Movie: ದುನಿಯಾ ವಿಜಯ್ - ಶ್ರೇಯಸ್ ಮಂಜು ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ ʼಮಾರುತʼ ಚಿತ್ರ ಅ.31ಕ್ಕೆ ರಿಲೀಸ್‌

ಡಾ.ಎಸ್. ನಾರಾಯಣ್ ನಿರ್ದೇಶನದ ʼಮಾರುತʼ ಚಿತ್ರ ಅ.31ಕ್ಕೆ ರಿಲೀಸ್‌

Marutha Movie: ಖ್ಯಾತ ನಿರ್ದೇಶಕ ಡಾ.ಎಸ್. ನಾರಾಯಣ್ ನಿರ್ದೇಶನದ, ದುನಿಯಾ ವಿಜಯ್ ಹಾಗೂ ಶ್ರೇಯಸ್ ಮಂಜು ಪ್ರಮುಖ ಪಾತ್ರದಲ್ಲಿ ನಟಿಸಿರುವ ʼಮಾರುತʼ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದ್ದು, ಅಕ್ಟೋಬರ್ 31ರಂದು ಬಿಡುಗಡೆಯಾಗಲಿದೆ‌‌. ಈ ಕುರಿತ ವಿವರ ಇಲ್ಲಿದೆ.

ಬಂತಿದೋ ಪೂರ್ವಿಕರ ನೆನೆಯುವ ಪಿತೃ ಪಕ್ಷ

ಬಂತಿದೋ ಪೂರ್ವಿಕರ ನೆನೆಯುವ ಪಿತೃ ಪಕ್ಷ

ಹೊರ ರಾಜ್ಯದ ವ್ಯಾಪಾರಿಗಳ ಸುಳಿವಿಲ್ಲದ್ದರಿಂದ ತಂದ ಹೂವು ಬಿಕರಿಯಾಗುತ್ತಿಲ್ಲ. ಬಿಕರಿ ಯಾದರೂ ಕೂಡ ರೈತರು ಹೂವನ್ನು ಬಿಡಿಸಿ ಮಾರುಕಟ್ಟೆಗೆ ತರುವ ಕೂಲಿಯೂ ಗಿಟ್ಟದಂತಾಗಿ ತಂದ ಹೂವನ್ನು ಮಾರುಕಟ್ಟೆಯಲ್ಲಿಯೇ ಬಿಟ್ಟುಹೋಗುವ ಪರಿಸ್ಥಿತಿ ನಿರ್ಮಾಣವಾಗಿ ರೈತರು ಕಣ್ಣೀರಲ್ಲಿ ಕೈತೊಳೆಯು ವಂತಾದೆ.

Vehicle Scrapping: 15 ವರ್ಷ ಮೀರಿದ ಸರ್ಕಾರಿ ವಾಹನಗಳು ಕಡ್ಡಾಯ ಗುಜರಿಗೆ:‌ ಆದೇಶ

15 ವರ್ಷ ಮೀರಿದ ಸರ್ಕಾರಿ ವಾಹನಗಳು ಕಡ್ಡಾಯ ಗುಜರಿಗೆ:‌ ಆದೇಶ

15 ವರ್ಷಗಳನ್ನು ಪೂರೈಸಿರುವ, ರಾಜ್ಯ ಸರ್ಕಾರ/ ಕೇಂದ್ರ ಸರ್ಕಾರ/ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳು/ ನಿಗಮಗಳು/ ಮಂಡಳಿಗಳು/ ಸ್ಥಳೀಯ ಸಂಸ್ಥೆ ಇತ್ಯಾದಿಗಳಲ್ಲಿರುವ 5000 ವಾಹನಗಳನ್ನು ಆದ್ಯತೆ ಮತ್ತು ಉಪಯೋಗದ ಆಧಾರದ ಮೇಲೆ ಹಂತಹಂತವಾಗಿ ನಾಶಪಡಿಸಲು ಆದೇಶಿಸಲಾಗಿದೆ.

Muda Case: ಮುಡಾ ಪ್ರಕರಣ; ಮಾಜಿ ಆಯುಕ್ತ ದಿನೇಶ್‌ ಕುಮಾರ್ ವಿರುದ್ಧ ತನಿಖೆಗೆ ಸರ್ಕಾರ ಅನುಮತಿ

ಮುಡಾ ಮಾಜಿ ಆಯುಕ್ತ ದಿನೇಶ್‌ ಕುಮಾರ್ ವಿರುದ್ಧ ತನಿಖೆಗೆ ಸರ್ಕಾರ ಅನುಮತಿ

Muda Case: ಮುಡಾದ ಮಾಜಿ ಅಧ್ಯಕ್ಷ ಎಚ್.ವಿ ರಾಜೀವ್ ಮತ್ತು ದಿನೇಶ್‌ಕುಮಾರ್ ವಿರುದ್ಧ ಲೋಕಾಯುಕ್ತ ತನಿಖೆಗೆ ಅನುಮತಿ ನೀಡುವಂತೆ ಕೋರಿ ಲೋಕಾಯುಕ್ತ ಪೊಲೀಸರು ಪ್ರಾಸಿಕ್ಯೂಷನ್ ಅನುಮತಿ ಕೋರಿದ್ದರು. ಆದರೆ, ದಿನೇಶ್‌ಕುಮಾರ್ ವಿರುದ್ಧ ಮಾತ್ರ ತನಿಖೆ ನಡೆಸಲು ಸರ್ಕಾರ ಅನುಮತಿ ಕೊಟ್ಟಿದೆ.

Full Meals Movie: ಕ್ಯಾಸೆಟ್‌ನಲ್ಲಿ ʼವಾಹ್ ಏನೋ ಹವಾʼ ಸಾಂಗ್‌ ರಿಲೀಸ್‌ ಮಾಡಿದ ʼಫುಲ್ ಮೀಲ್ಸ್ʼ ಚಿತ್ರತಂಡ

ಕ್ಯಾಸೆಟ್‌ನಲ್ಲಿ ಹಾಡು ಬಿಡುಗಡೆ ಮಾಡಿದ ʼಫುಲ್ ಮೀಲ್ಸ್ʼ ಚಿತ್ರತಂಡ

Full Meals Movie: ಲಿಖಿತ್ ಶೆಟ್ಟಿ ಅಭಿನಯದ ʼಫುಲ್ ಮೀಲ್ಸ್ʼ ಚಿತ್ರತಂಡದಿಂದ ʼವಾಹ್ ಏನೋ ಹವಾʼ ಹಾಡನ್ನು ಕ್ಯಾಸೆಟ್‌ನಲ್ಲಿ ಬಿಡುಗಡೆ ಮಾಡಲಾಯಿತು. ಚಿತ್ರದ ಸಂಗೀತ ನಿರ್ದೇಶಕ ಗುರುಕಿರಣ್, ನಾಯಕ ಲಿಖಿತ್ ಶೆಟ್ಟಿ, ನಿರ್ದೇಶಕ ಎನ್. ವಿನಾಯಕ, ನಾಯಕಿಯರಾದ ಖುಷೀ ರವಿ ಮತ್ತು ತೇಜಸ್ವಿನಿ ಶರ್ಮ, ಹಾಡಿನ ಕ್ಯಾಸೆಟ್ ಅನ್ನು ಪ್ರದರ್ಶಿಸಿ ವಿಭಿನ್ನವಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಗುರು ಕಿರಣ್ ಟೇಪ್ ರೆಕಾರ್ಡರ್‌ನಲ್ಲಿ ಹಾಡನ್ನು ಹಾಕುವ ಮುಖಾಂತರ ಹಾಡನ್ನು ಲೋಕಾರ್ಪಣೆ ಮಾಡಿದರು.

Sirsi News: ಶಿರಸಿಯ ಶ್ರೀ ಭೂತೇಶ್ವರ ಸಹಕಾರಿ ಸಂಘಕ್ಕೆ ₹51 ಲಕ್ಷ ಲಾಭ: ಬೆಳ್ಳಿ ಹಬ್ಬದ ಸಂಭ್ರಮಕ್ಕೆ ಕಾಲಿಟ್ಟ ಸಂಸ್ಥೆ

ಶಿರಸಿಯ ಶ್ರೀ ಭೂತೇಶ್ವರ ಸಹಕಾರಿ ಸಂಘಕ್ಕೆ ₹51 ಲಕ್ಷ ಲಾಭ

ರಾಷ್ಟ್ರೀಯ ಬ್ಯಾಂಕುಗಳ ಪೈಪೋಟಿಯನ್ನು ಸಮರ್ಥವಾಗಿ ಎದುರಿಸಿ, ಸಿಬ್ಬಂದಿಯ ಅವಿರತ ಪರಿಶ್ರಮ ದಿಂದ ಸಂಘವು ಈ ಲಾಭ ಗಳಿಸಿದೆ. ಸಂಘವು ತನ್ನ ಸದಸ್ಯರಿಗೆ ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಸೇವೆ ಗಳನ್ನು ಒದಗಿಸುತ್ತಿದೆ. ಶೇ. 9ರ ಬಡ್ಡಿದರದಲ್ಲಿ ಚಿನ್ನಾಭರಣ ಸಾಲ, ಶೇ. 11ರ ಬಡ್ಡಿದರದಲ್ಲಿ ವಾಹನ ಸಾಲ ಹಾಗೂ ಹೊಸದಾಗಿ ಶೇ. 12ರ ಬಡ್ಡಿದರದಲ್ಲಿ ಅಡಮಾನ ಸಾಲಗಳನ್ನು ನೀಡಲಾಗುತ್ತಿದೆ.

Fraud case: ಬೆಂಗಳೂರಿನಲ್ಲಿ ಲೀಸ್‌ ನೆಪದಲ್ಲಿ ಕೋಟ್ಯಂತರ ರೂಪಾಯಿ ವಂಚನೆ, ಆರೋಪಿ ನಾಪತ್ತೆ

ಬೆಂಗಳೂರಿನಲ್ಲಿ ಲೀಸ್‌ ನೆಪದಲ್ಲಿ ಕೋಟ್ಯಂತರ ರೂಪಾಯಿ ವಂಚನೆ, ಆರೋಪಿ ನಾಪತ್ತೆ

Bengaluru: ಕೆಟಿನಾ ಹೋಮ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮಾಲೀಕ ವಿವೇಕ್ ಕೇಶವನ್, ವೆಬ್‌ಸೈಟ್ ಮುಖಾಂತರ ಮನೆ ಬಾಡಿಗೆಗೆ ಪಡೆದು ನಂತರ ಅದೇ ಮನೆಗಳನ್ನು ಲೀಸ್‌ಗೆ ನೀಡುವ ಮೂಲಕ ಜನರಿಂದ ಭಾರೀ ಮೊತ್ತವನ್ನು ಪಡೆದುಕೊಂಡಿರುವ ಆರೋಪ ಕೇಳಿಬಂದಿದೆ.

Loading...