ಗಗನಯಾತ್ರಿಗಳ ದಿನಚರಿ ಹೇಗಿರುತ್ತೆ ಗೊತ್ತಾ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
Sunita William Detail Story: ನಾಸಾ(NASA) ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಮಂಗಳವಾರ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ (ISS) ಅನ್‌ಡಾಕ್ ಮಾಡಲಿದ್ದು, ಇದು ಬಾಹ್ಯಾಕಾಶದಲ್ಲಿ ಒಂಬತ್ತು ತಿಂಗಳ ಅಸಾಧಾರಣ ಪ್ರಯಾಣವನ್ನು ಅಂತ್ಯಗೊಳಿಸಲಿದೆ. ವಿಲಿಯಮ್ಸ್, ವಿಲ್ಮೋರ್ ಮತ್ತು ಇತರ ಇಬ್ಬರು ಕ್ರೂ-9 ಸದಸ್ಯರೊಂದಿಗೆ ಸ್ಪೇಸ್‌ಎಕ್ಸ್ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಲ್ಲಿ ಭೂಮಿಗೆ ಹಿಂತಿರುಗುತ್ತಿದ್ದಾರೆ.