PUC ಪಾಸಾಗಲು ಇನ್ಮುಂದೆ ಎರಡೇ ವರ್ಷ ಚಾನ್ಸ್!
ಶಿಕ್ಷಣ ಇಲಾಖೆ ಮಹತ್ವದ ಆದೇಶವನ್ನು ಹೊರಡಿಸಿದ್ದು, ದ್ವಿತೀಯ ಪಿಯುಸಿಯಲ್ಲಿ ಅನುತ್ತೀರ್ಣರಾದ ಅಥವಾ ಫಲಿತಾಂಶ ಸುಧಾರಣೆ ಬಯಸುವ ಅಭ್ಯರ್ಥಿಗಳಿಗೆ ಇನ್ನು ಮುಂದೆ ಎರಡು ವರ್ಷ ಮಾತ್ರ ಪರೀಕ್ಷೆ ಬರೆಯಲು ಅವಕಾಶ ಸಿಗಲಿದೆ. ಈ ಹಿಂದೆ 2024ರ ದ್ವಿತೀಯ ಪಿಯು ಪರೀಕ್ಷೆ 1, 2 ಮತ್ತು 3ಕ್ಕೆ ನೋಂದಾಯಿಸಿಕೊಂಡ ರೆಗ್ಯುಲರ್ (ಕಾಯಂ), ಖಾಸಗಿ ಹಾಗೂ ಪುನರಾವರ್ತಿತ ವಿದ್ಯಾರ್ಥಿಗಳಿಗೆ ಮುಂದಿನ ವರ್ಷಗಳಿಗೂ ಫಲಿತಾಂಶ ಸುಧಾರಣೆಗೆ ಅವಕಾಶ ನೀಡಲಾಗಿತ್ತು.