ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕರ್ನಾಟಕ

Shidlaghatta News: ಶಿಡ್ಲಘಟ್ಟದಲ್ಲಿ ಪೂಜಮ್ಮ ದೇವಿ ಕರಗ ಮಹೋತ್ಸವ ವೈಭವ: ಭಕ್ತರ ಸಾಗರ

ಶಿಡ್ಲಘಟ್ಟದಲ್ಲಿ ಪೂಜಮ್ಮ ದೇವಿ ಕರಗ ಮಹೋತ್ಸವ ವೈಭವ

ಕರಗ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಭಕ್ತರ ಹರ್ಷೋದ್ಗಾರಗಳ ನಡುವೆ ಸಾಗಿತು. ಮನೆಮನೆಗಳ ಮುಂದೆ ಭಕ್ತರು ಹೂವಿನ ಹಾರ ಹಾಗೂ ಕರ್ಪೂರ ಆರತಿ ನೀಡಿ ಕರಗವನ್ನು ಭಕ್ತಿಯಿಂದ ಸ್ವಾಗತಿಸಿದರು. ಮಹೋತ್ಸವವು ನಗರದಲ್ಲಿ ಧಾರ್ಮಿಕ ಸಂಭ್ರಮ ವನ್ನು ಮೂಡಿಸಿ ಭಕ್ತರಲ್ಲಿ ಏಕತೆ ಮತ್ತು ಭಕ್ತಿಭಾವವನ್ನು ಗಟ್ಟಿಗೊಳಿಸಿತು.

Gauribidanur News: ಗೆಳೆಯನ ಹೆಸರಿನ ಪ್ರಶಸ್ತಿ ಮತ್ತೊಬ್ಬ ಗೆಳೆಯನಿಗೆ ಕೊಡುವುದು ವಿಶಿಷ್ಟವಾದದ್ದು: ಪ್ರೊ.ನಗರಗೆರೆ ರಮೇಶ್ ಅಭಿಮತ

ಗೆಳೆಯನ ಹೆಸರಿನ ಪ್ರಶಸ್ತಿ ಮತ್ತೊಬ್ಬ ಗೆಳೆಯನಿಗೆ ಕೊಡುವುದು ವಿಶಿಷ್ಟವಾದದ್ದು

ಕೆ.ನಾರಾಯಣಸ್ವಾಮಿ ಮತ್ತು ಡಾ.ಎಸ್. ಬಿಸಲಯ್ಯ ದೀರ್ಘ ಕಾಲದ ಸ್ನೇಹಿತರು. ಸಮಾನ ಮನಸ್ಕರು. ಸಾಮಾಜಿಕ ಕಳಕಳಿಯನ್ನು ಹೊಂದಿರುವವರು. ಶೈಕ್ಷಣಿಕ ಕ್ಷೇತ್ರದಲ್ಲಿ ಅತಿ ಎತ್ತರಕ್ಕೆ ಬೆಳೆದವರು. ಇಂತಹ ಮೇಧಾವಿ ಗಳನ್ನು ಪ್ರಶಸ್ತಿ ಮೂಲಕ ಸಮಾಗಮ ಮಾಡಿರುವುದು ಸಮಂಜಸವಾಗಿದೆ

Chikkaballapur News:ಸಹಸ್ರಾರು ಭಕ್ತರ ಜಯಘೋಷದ ನಡುವೆ ಸದ್ಗುರು ತಾತಯ್ಯನವರ ರಥೋತ್ಸವ ಸಂಪನ್ನ

ಜಯಘೋಷದ ನಡುವೆ ಸದ್ಗುರು ತಾತಯ್ಯನವರ ರಥೋತ್ಸವ ಸಂಪನ್ನ

ರಥೋತ್ಸವದ ಅಂಗವಾಗಿ ಸದ್ಗುರು ಯೋಗಿ ನಾರೇಯಣ ತಾತಯ್ಯನವರ ಮಠದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಸದ್ಗುರು ಯೋಗಿನಾರೇಯಣ ತಾತಯ್ಯನವರ ಮೂಲ ವಿಗ್ರಹವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಸದ್ಗುರು ತಾತಯ್ಯನವರ ಉತ್ಸವ ವಿಗ್ರಹಕ್ಕೆ ವಿಶೇಷ ಅಭಿಷೇಕ ಮತ್ತು ವೇದಘೋಷದೊಂದಿಗೆ ಅಷ್ಟಾವಧಾನ ಸೇವೆಯನ್ನು ಸಮರ್ಪಿಸಲಾಯಿತು.

ಮೀಸಲಾತಿ ಜಾರಿಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಬದ್ಧತೆಯೇ ಇಲ್ಲ: ಛಲವಾದಿ ನಾರಾಯಣಸ್ವಾಮಿ

ಮೀಸಲಾತಿ ಜಾರಿಯಲ್ಲಿ ರಾಜ್ಯ ಸರ್ಕಾರ ಕಳ್ಳಾಟ: ಛಲವಾದಿ ನಾರಾಯಣಸ್ವಾಮಿ

Chalavadi Narayanaswamy: ಮೀಸಲಾತಿ ಮತ್ತು ಒಳಮೀಸಲಾತಿಯಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ಕಳ್ಳಾಟ ಆಡುತ್ತಿದೆ. ಯಾರಾದರೂ ಕೋರ್ಟಿಗೆ ಹೋಗಲಿ, ಪ್ರಶ್ನೆ ಮಾಡಲಿ, ಹೇಗಾದರೂ ನಿಂತು ಹೋಗಲಿ ಎಂಬ ಮನಸ್ಥಿತಿಯಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಂತಿದೆ. ಇದರ ವಿರುದ್ಧ ಜನರ ಆಕ್ರೋಶ ಇದೆ. ಅದನ್ನು ಆಂದೋಲನವಾಗಿ ಪರಿವರ್ತಿಸುತ್ತೇವೆ. ಇಡೀ ರಾಜ್ಯದಲ್ಲಿ ದೊಡ್ಡ ಹೋರಾಟ ಆರಂಭವಾಗಲಿದೆ. ಇದರ ರೂಪರೇಷೆ ಚರ್ಚೆ ಮಾಡುತ್ತೇವೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.

Holi 2026: ಹಾವೇರಿ ಜಿಲ್ಲೆಯಲ್ಲಿ ಸಡಗರ ಸಂಭ್ರಮದಿಂದ ಹೋಳಿ ಆಚರಣೆ; ಬಣ್ಣದೋಕುಳಿಯಲ್ಲಿ ಮಿಂದೆದ್ದ ಜನ

ಹಾವೇರಿ ಜಿಲ್ಲೆಯಲ್ಲಿ ಸಡಗರ ಸಂಭ್ರಮದಿಂದ ಹೋಳಿ ಆಚರಣೆ

Haveri News: ಹಾವೇರಿ ಸೇರಿದಂತೆ ಜಿಲ್ಲೆಯ ಬಹುತೇಕ ಹಳ್ಳಿ, ನಗರಗಳಲ್ಲಿ ಹೋಳಿ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಬುಧವಾರ ಬೆಳಿಗ್ಗೆಯೇ ನಗರದ ವಿವಿಧ ಗಲ್ಲಿ, ಓಣಿಗಳಲ್ಲಿ ಹೋಳಿ ಹಬ್ಬವು ತುಂಬಾ ಸಡಗರ ಸಂಭ್ರಮದಿಂದ ಜರುಗಿತು.

ನಮ್ಮದು ನಾಳೆ ಎನ್ನುವ ಸರ್ಕಾರವಲ್ಲ, ಇಂದೇ ಎನ್ನುವ ಸರ್ಕಾರ: ಡಿಸಿಎಂ ಡಿ.ಕೆ. ಶಿವಕುಮಾರ್

ನಮ್ಮದು ನಾಳೆ ಎನ್ನುವ ಸರ್ಕಾರವಲ್ಲ, ಇಂದೇ ಎನ್ನುವ ಸರ್ಕಾರ: ಡಿಕೆಶಿ

ಶಾಸಕರಾಗಿ, ಸಂಸದರಾಗಿ ಸಿಎಂ ಆಗಿ ದೊಡ್ಡ ಸ್ಥಾನಕ್ಕೆ ಹೋದವರು ಇಲ್ಲಿಗೆ ಬಂದು ಬುಡುಬುಡುಕೆ, ಬಣ್ಣ ಬಣ್ಣದ ಮಾತುಗಳನ್ನಾಡುತ್ತಾರೆ. ನಾಳೆ ಕೆಲಸ ಮಾಡುತ್ತೇವೆ ಎಂಬುದು ಶತೃತ್ವ, ಇವತ್ತೇ ಕೆಲಸ ಮಾಡುತ್ತೇವೆ ಎಂಬುದು ಮಿತ್ರತ್ವ. ನಾಳೆ ಯಾರು ಇರುತ್ತಾರೋ ಇರುವುದಿಲ್ಲವೋ ಗೊತ್ತಿಲ್ಲ. ಅಧಿಕಾರ ಇದ್ದಾಗ ನಾವು ಏನು ಮಾಡಿದೆವು ಎಂಬುದು ಮುಖ್ಯ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನೋದ್ಯಮಕ್ಕೆ ಉತ್ತೇಜನ; ಉದ್ಯಮಿಗಳ ಜತೆ ಎಚ್.ಡಿ. ಕುಮಾರಸ್ವಾಮಿ ಮಹತ್ವದ ಸಭೆ

ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನೋದ್ಯಮಕ್ಕೆ ಉತ್ತೇಜನ: ಎಚ್.ಡಿ.ಕುಮಾರಸ್ವಾಮಿ

HD Kumaraswamy: ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ಕ್ಷೇತ್ರದ ಅಭಿವೃದ್ಧಿಗೆ ಸಂಶೋಧನೆ, ಉತ್ಪಾದನೆ ಹಾಗೂ ಉದ್ಯೋಗ ಸೃಷ್ಟಿಗೆ ಒತ್ತು ನೀಡಲಾಗುವುದು. ಸಾರಿಗೆ ಕ್ಷೇತ್ರದಲ್ಲಿ ಇಂಗಾಲ ಹೊರಸೂಸುವಿಕೆಯನ್ನು ಶೂನ್ಯಮಟ್ಟಕ್ಕೆ ಇಳಿಸಿ ಪರಿಸರ ಪೂರಕ ಸಾರಿಗೆ ವ್ಯವಸ್ಥೆ ರೂಪಿಸುವ ದೃಢ ಸಂಕಲ್ಪವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಹೊಂದಿದ್ದಾರೆ. ಅವರ ಕನಸು ನನಸು ಮಾಡುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಬೆಂಗಳೂರು ದಕ್ಷಿಣ ಜಿಲ್ಲೆಯನ್ನು ನಂ.1 ಮಾಡುವುದು ಡಿ.ಕೆ. ಶಿವಕುಮಾರ್‌ರ ಕನಸು: ಡಿ.ಕೆ. ಸುರೇಶ್

ಬೆಂ.ದಕ್ಷಿಣ ಜಿಲ್ಲೆಯನ್ನು ನಂ.1 ಮಾಡುವುದು ಡಿಕೆಶಿ ಕನಸು: ಡಿ.ಕೆ. ಸುರೇಶ್

DK Suresh: ನಾವು ಸುಳ್ಳು ಹೇಳಿ ಕೆಲಸ ಮಾಡುವವರಲ್ಲ‌‌. ನಿಮ್ಮ ಬಳಿ ಅತ್ತು ಕರೆದು ನಾಟಕ ಮಾಡುವವರಲ್ಲ. ನಾನು ಕೊಟ್ಟ ಮಾತನ್ನು ಉಳಿಸಿಕೊಳ್ಳುವವನು, ಕೊಟ್ಟ ಭರವಸೆ ಈಡೇರುವ ತನಕ ವಿಶ್ರಾಂತಿ ತೆಗೆದುಕೊಳ್ಳುವುದಿಲ್ಲ ಎಂದು ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್ ಹೇಳಿದ್ದಾರೆ.

KAS Exam Scam: ಕೆಎಎಸ್‌ ಪರೀಕ್ಷೆಯಲ್ಲಿ ಮತ್ತೊಂದು ಅಕ್ರಮ; ಸಂದರ್ಶನಕ್ಕೆ ಒಂದೇ ಕೊಠಡಿಯ 15 ಮಂದಿ ಆಯ್ಕೆ!

ಕೆಎಎಸ್‌ ಪರೀಕ್ಷೆಯಲ್ಲಿ ಮತ್ತೆ ಅಕ್ರಮ; ಒಂದೇ ಕೊಠಡಿಯ 15 ಮಂದಿ ಆಯ್ಕೆ!

ಕೆಎಎಸ್‌ ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, 1:3 ಅನುಪಾತದಲ್ಲಿ ಸಂದರ್ಶನಕ್ಕೆ ಅರ್ಹತೆ ಪಡೆದ ಅಭ್ಯರ್ಥಿಗಳ ಪಟ್ಟಿಯನ್ನು ಕೆಪಿಎಸ್‌ಸಿ ಸೋಮವಾರ ಪ್ರಕಟಿಸಿತ್ತು. ಆದರೆ, ಈ ಪಟ್ಟಿಯಲ್ಲಿ ಗೋಲ್‌ಮಾಲ್‌ ನಡೆದಿದೆ ಎಂಬ ಆರೋಪಿಸಿರುವ ಅಭ್ಯರ್ಥಿಗಳು, ಸೂಕ್ತ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

ಮೀಸಲಾತಿ ಸರಿಯಾಗಿ ಅನುಷ್ಠಾನಗೊಳಿಸದಿದ್ರೆ ಉಗ್ರ ಹೋರಾಟ; ರಾಜ್ಯ ಸರ್ಕಾರಕ್ಕೆ ಶ್ರೀರಾಮುಲು ಎಚ್ಚರಿಕೆ

ಮೀಸಲಾತಿ ಸರಿಯಾಗಿ ಅನುಷ್ಠಾನಗೊಳಿಸದೆ ಗೊಂದಲ ಸೃಷ್ಟಿ: ಶ್ರೀರಾಮುಲು

B Sriramulu: ರಾಜ್ಯ ಸರ್ಕಾರ ಅಧಿಕಾರಕ್ಕೆ ಬರುವುದಕ್ಕಿಂತ ಮೊದಲು ನೀಡಿದ ಭರವಸೆಗಳನ್ನು, ಆಶ್ವಾಸನೆಗಳನ್ನು ಜಾರಿ ಮಾಡಲಿಲ್ಲ. ಒಂದು ವರ್ಷದಲ್ಲಿ ಒಂದು ಲಕ್ಷ ಹುದ್ದೆ ಭರ್ತಿ ಮಾಡುತ್ತೇವೆ ಅಂತ ಹೇಳಿದ್ದರು. ಆದರೆ ಇಷ್ಟು ಸಮಯವಾದರೂ ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳಲಿಲ್ಲ. ರಾಜ್ಯದಲ್ಲಿ ಸುಮಾರು 2.85 ಲಕ್ಷ ಹುದ್ದೆ ಖಾಲಿ ಇದೆ. ಈ ಬಗ್ಗೆ ಕ್ರಮ ಕೈಗೊಳ್ಳದೆ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಆರೋಪಿಸಿದ್ದಾರೆ.

ಎಂಬಿಬಿಎಸ್‌ ಸೀಟ್‌ ಕೊಡಿಸೋದಾಗಿ ಯುವತಿಗೆ 25 ಲಕ್ಷ ವಂಚನೆ: ನಾಲ್ವರ ವಿರುದ್ಧ ಎಫ್‌ಐಆರ್‌

ಎಂಬಿಬಿಎಸ್‌ ಸೀಟ್‌ ಕೊಡಿಸೋದಾಗಿ ಯುವತಿಗೆ 25 ಲಕ್ಷ ವಂಚನೆ!

ಬೆಂಗಳೂರಿನಲ್ಲಿ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಕಿಮ್ಸ್ ಕಾಲೇಜಿನಲ್ಲಿ ಎಂಬಿಬಿಎಸ್‌ ಸೀಟ್ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಮೋಸ ಹೋಗಿರುವುದು ಗೊತ್ತಾದ ಬಳಿಕ ಯುವತಿ ಸದ್ಯ ಪೊಲೀಸರ ಮೊರೆ ಹೋಗಿದ್ದಾಳೆ. ಈ ಸಂಬಂಧ ಕೇಸ್‌ ದಾಖಲಾಗಿದೆ.

SC Internal Reservation: ಒಳ ಮೀಸಲಾತಿಯಡಿ ಹುದ್ದೆಗಳ ಭರ್ತಿ ಮಾಡಿ: ಬಿ.ವೈ. ವಿಜಯೇಂದ್ರ ಆಗ್ರಹ

ಒಳ ಮೀಸಲಾತಿಯಡಿ ಹುದ್ದೆಗಳ ಭರ್ತಿ ಮಾಡಿ: ವಿಜಯೇಂದ್ರ ಆಗ್ರಹ

BY Vijayendra: ಶೇ.56 ಒಳ ಮೀಸಲಾತಿ ನೀಡಿ ಬಿಜೆಪಿ ಸರ್ಕಾರವು ಎಲ್ಲ ಸಮುದಾಯಗಳಿಗೆ ನ್ಯಾಯ ಕೊಡುವ ಕೆಲಸ ಮಾಡಿದೆ. ಅದರ ಆಧಾರದಡಿ ಶೋಷಿತ- ಪೀಡಿತ ಸಮುದಾಯಗಳಿಗೆ ಒಳ ಮೀಸಲಾತಿ ಪರಿಗಣಿಸಿ ಈ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದರು.

ಶೃಂಗೇರಿಯಲ್ಲಿ ಜೆಜೆಎಂ ಸ್ಟ್ಯಾಂಪ್ ಪೇಪರ್ ಅಕ್ರಮ; ಸಿಬಿಐ ತನಿಖೆಗೆ ಮಾಜಿ ಸಚಿವ ಡಿ.ಎನ್.ಜೀವರಾಜ್ ಒತ್ತಾಯ

ಶೃಂಗೇರಿಯಲ್ಲಿ ಜೆಜೆಎಂ ಸ್ಟ್ಯಾಂಪ್ ಪೇಪರ್ ಅಕ್ರಮ; ತನಿಖೆಗೆ ಆಗ್ರಹ

ಶೃಂಗೇರಿ ಕ್ಷೇತ್ರದಲ್ಲಿ ಜೆಜೆಎಂ ಎಂಬುದು ಜಲಜೀವನ್ ಕಮಿಷನ್ ಆಗಿದೆ. 150 ಕೋಟಿ ರೂ.ಗಿಂತ ಹೆಚ್ಚು ಹಣವನ್ನು ಕೇಂದ್ರ ಸರಕಾರ ಕೊಟ್ಟಿದ್ದರೂ ಒಂದೇ ಒಂದು ಮನೆಗೆ ನೀರು ಲಭಿಸಿಲ್ಲ. ಹಿಂದೆ ಕರೀಂಲಾಲ್ ತೆಲಗಿ ಮೂಲಕ ಸ್ಟ್ಯಾಂಪ್ ಪೇಪರ್ ಹಗರಣ ನಡೆದಿತ್ತು. ಇಲ್ಲಿ ಅದನ್ನೂ ಮೀರಿದ ಹಗರಣ ನಡೆದಿದೆ ಎಂದು ಬಿಜೆಪಿ ಮಾಜಿ ಸಚಿವ ಡಿ.ಎನ್‌. ಜೀವರಾಜ್‌ ಆರೋಪಿಸಿದ್ದಾರೆ.

Rohan Bopanna: 'ಅಡ್ವಾಂಟೇಜ್ ಪ್ರೋಗ್ರಾಂ' ಗೆ ರೋಹನ್ ಬೋಪಣ್ಣ ಟೆನಿಸ್ ಅಭಿವೃದ್ಧಿ ಪ್ರತಿಷ್ಠಾನದೊಂದಿಗೆ ಮೋತಿಲಾಲ್ ಓಸ್ವಾಲ್ ಫೌಂಡೇಶನ್ ಸಹಭಾಗಿತ್ವ

ಟೆನಿಸ್ ಡೆವಲಪ್‌ಮೆಂಟ್ ಫೌಂಡೇಶನ್ ನೊಂದಿಗೆ ಪಾಲುದಾರಿಕೆ

ಮೂರು ವರ್ಷಗಳ ಕಾಲ ₹6 ಕೋಟಿ ಬಂಡವಾಳವನ್ನು ಒದಗಿಸುವ ಮೂಲಕ ಉದ್ಯಮದ ಬೆಳವಣಿಗೆಯಂತೆ ಕ್ರೀಡಾ ಪ್ರಗತಿಗೆ ಶಿಸ್ತುಬದ್ಧ ವ್ಯವಸ್ಥೆಗಳು ಮತ್ತು ಸೂಕ್ತ ಕಾರ್ಯಕ್ಷಮತೆಯ ಅಗತ್ಯತೆ ಇದೆ ಎಂದು ಫೌಂಡೇಶನ್‌ನ ಬಲವಾಗಿ ನಂಬಿದೆ. ಈ ನಿಟ್ಟಿನಲ್ಲಿ ದೀರ್ಘಾವಧಿಯ ಬಂಡವಾಳದ ನೀಡುವ ಮೂಲಕ ಕ್ರೀಡಾಪ್ರಗತಿಯನ್ನು ಸಾಧಿಸಲು ಫೌಂಡೇಷನ್ ತನ್ನನ್ನು ತೊಡಗಿಸಿಕೊಂಡಿದೆ.

ಇವತ್ತಿನ‌ ಸಮಾಜಕ್ಕೆ ಕತ್ತರಿಗಳಲ್ಲ, ಸೂಜಿಗಳ ಅಗತ್ಯವಿದೆ: ಕೆ.ವಿ. ಪ್ರಭಾಕರ್

ಇವತ್ತಿನ‌ ಸಮಾಜಕ್ಕೆ ಕತ್ತರಿಗಳಲ್ಲ, ಸೂಜಿಗಳ ಅಗತ್ಯವಿದೆ: ಕೆ.ವಿ. ಪ್ರಭಾಕರ್

KV Prabhakar: ಪತ್ರಕರ್ತರಾಗುವವರು ಪೂರ್ವಗ್ರಹ ಮುಕ್ತ ಮಗುವಿನ ಮನಸ್ಸಿನಿಂದ ಸಾಮಾಜಿಕ ವ್ಯವಸ್ಥೆಯನ್ನು, ಸಾಮಾಜಿಕ ತಾರತಮ್ಯಗಳನ್ನು "ಇರುವುದನ್ನು ಇರುವ ಹಾಗೆ ಗಮನಿಸಬೇಕು". ಹೀಗಾದಾಗ ಮಾತ್ರ ಸಾಮಾಜಿಕ ಸಮಸ್ಯೆಗಳು ಮತ್ತು ಈ ಸಮಸ್ಯೆಗಳಿಗೆ ಕಾರಣವಾದ ಸಂಗತಿಗಳ ಬಗ್ಗೆ ಸ್ಪಷ್ಟ ಗ್ರಹಿಕೆ ಬರುತ್ತದೆ. ಈ ಸ್ಪಷ್ಟತೆಯೇ ಪರಿಣಾಮಕಾರಿ ಪತ್ರಕರ್ತನನ್ನು ರೂಪಿಸುತ್ತದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ 'ಸ್ಮೈಲ್‌ಥಾನ್' ಸಂಭ್ರಮ: ಸ್ಯಾಂಡಲ್‌ವುಡ್-ಬಾಲಿವುಡ್ ತಾರೆಯರಿಂದ ಸಾಥ್!

ಬೆಂಗಳೂರಿನಲ್ಲಿ 'ಸ್ಮೈಲ್‌ಥಾನ್' ಸಂಭ್ರಮ

ಸ್ಮೈಲ್‌ಥಾನ್ ಕೇವಲ ಸೌಂದರ್ಯ ಸ್ಪರ್ಧೆಯಲ್ಲ, ಇದು ಆರೋಗ್ಯ ಜಾಗೃತಿಯ ಒಂದು ಚಳವಳಿ. ತಡೆಗಟ್ಟುವ ದಂತ ಆರೈಕೆ, ನಿಯಮಿತ ಬಾಯಿ ಸ್ವಚ್ಛತೆ ಮತ್ತು ಆತ್ಮವಿಶ್ವಾಸಭರಿತ ನಗೆಯ ಮಹತ್ವವನ್ನು ಜನಸಾಮಾನ್ಯರಿಗೆ ತಿಳಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ ವಾಗಿದೆ

ಬೆಂಗಳೂರಿನಲ್ಲಿ ಅಡುಗೆ ವಿಚಾರಕ್ಕೆ ಅತ್ತೆ-ಸೊಸೆ ಗಲಾಟೆ: ಮನನೊಂದು ಟೆಕ್ಕಿ ಯುವತಿ ಆತ್ಮಹತ್ಯೆ

ಅಡುಗೆ ವಿಚಾರಕ್ಕೆ ಅತ್ತೆ-ಸೊಸೆ ಗಲಾಟೆ: ಮನನೊಂದು ಯುವತಿ ಆತ್ಮಹತ್ಯೆ

Bengaluru Techie Death: ಮನೆಯಲ್ಲಿ ಅಡುಗೆ ಮಾಡುವ ವಿಚಾರದಲ್ಲಿ ಅತ್ತೆ ಮತ್ತು ಸೊಸೆ ನಡುವೆ ಪದೇಪದೆ ಜಗಳವಾಗುತ್ತಿತ್ತು. ಒಂದೇ ಒಲೆಯಲ್ಲಿ ಪ್ರತ್ಯೇಕವಾಗಿ ಅಡುಗೆ ಮಾಡುವ ಬಗ್ಗೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಇದರಿಂದ ಮನನೊಂದು ಸೊಸೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.

Gold Rate Today 4th March 2026: ಯುದ್ಧ ಕಾರ್ಮೋಡದ ನಡುವೆ ಆಭರಣಪ್ರಿಯರಿಗೆ ಸಿಕ್ತು ಗುಡ್‌ನ್ಯೂಸ್‌; ಚಿನ್ನದ ದರದಲ್ಲಿ ಮತ್ತೆ ಭಾರಿ ಇಳಿಕೆ

ಭಾರಿ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ

Gold Silver Rate Today: ಇದೀಗ ಭಾರತದಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ಕಂಡು ಬರುತ್ತಿದೆ. ಬುಧವಾರ (ಮಾರ್ಚ್‌ 4) ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 285 ರುಪಾಯಿ ಇಳಿಕೆಯಾಗಿ 15,080 ರುಪಾಯಿಗೆ ಬಂದು ತಲುಪಿದೆ. ಇನ್ನು 24 ಕ್ಯಾರಟ್‌ನ 1 ಗ್ರಾಂ ಚಿನ್ನ 311 ರುಪಾಯಿ ಕಡಿಮೆಯಾಗಿದ್ದು, 16,451 ರುಪಾಯಿ ಇದೆ.

Missing Case: ಪರೀಕ್ಷೆ ತಪ್ಪಿಸಿಕೊಳ್ಳಲು ಪಿಯುಸಿ ವಿದ್ಯಾರ್ಥಿನಿಯರು ನಾಪತ್ತೆ, ಒಂದು ತಿಂಗಳಾದರೂ ಪತ್ತೆಯಿಲ್ಲ

ಪರೀಕ್ಷೆ ತಪ್ಪಿಸಿಕೊಳ್ಳಲು ಪಿಯುಸಿ ವಿದ್ಯಾರ್ಥಿನಿಯರು ನಾಪತ್ತೆ

ಒಂದು ತಿಂಗಳಿನಿಂದ ಪೊಲೀಸರು ಮತ್ತು ಪೋಷಕರು ಹುಡುಕಾಡುತ್ತಿದ್ದಾರೆ. ಮನೆಯಲ್ಲಿಯೇ ಇಬ್ಬರು ಯುವತಿಯರು ಮೊಬೈಲ್ ಬಿಟ್ಟು ನಾಪತ್ತೆಯಾಗಿದ್ದಾರೆ. ಎಟಿಎಂ ಸೇರಿದಂತೆ ಏನನ್ನೂ ಕೂಡ ಇವರು ಕೊಂಡುಹೋಗಿಲ್ಲ. ಆಧಾರ್ ಕಾರ್ಡ್ ಹಾಗೂ ಕಾಲೇಜು ಬ್ಯಾಗು ಜೊತೆ ಇಬ್ಬರೂ ನಾಪತ್ತೆಯಾಗಿದ್ದಾರೆ.

Road Accident: ಆಂಧ್ರದಲ್ಲಿ ಅಪಘಾತ, ತಿರುಪತಿಗೆ ಹೊರಟಿದ್ದ ಕರ್ನಾಟಕದ ಐವರು ದುರ್ಮರಣ

ಆಂಧ್ರದಲ್ಲಿ ಅಪಘಾತ, ತಿರುಪತಿಗೆ ಹೊರಟಿದ್ದ ಕರ್ನಾಟಕದ ಐವರು ದುರ್ಮರಣ

ಅತಿ ವೇಗದಲ್ಲಿ ಬಂದ ಕಾರು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ವಾಹನದಲ್ಲಿ ಸಿಲುಕಿದ್ದ ಶವಗಳನ್ನು ಹೊರತರುವುದು ಪೊಲೀಸರಿಗೆ ಕಷ್ಟಕರವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಮೃತಪಟ್ಟವರ ಸಂಪೂರ್ಣ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತಿದೆ.

Assault Case: ಖಮೇನಿ ಹತ್ಯೆ ಕುರಿತು ಸ್ಟೋರಿ ಹಾಕಿದ ಹಿಂದೂ ಯುವಕನ ಮೇಲೆ ಹಲ್ಲೆ

ಖಮೇನಿ ಹತ್ಯೆ ಕುರಿತು ಸ್ಟೋರಿ ಹಾಕಿದ ಹಿಂದೂ ಯುವಕನ ಮೇಲೆ ಹಲ್ಲೆ

ವ್ಯಾಪಾರ ಮಾಡುತ್ತಿದ್ದ ವೇಳೆ ಚಂದ್ರಶೇಖರ್‌ಗೆ ಯುವಕರು ಬಂದು ಹಲ್ಲೆ ನಡೆಸಿದ್ದಾರೆ. ಮನೆಗೆ ನುಗ್ಗಿ ಹೊಡೆಯುತ್ತೇವೆ ಎಂದು ಕೂಡ ಚಂದ್ರಶೇಖರಗೆ ಬೆದರಿಕೆ ಹಾಕಿದ್ದಾರೆ. ಹೀಗಾಗಿ ಭಯಭೀತನಾಗಿ ಚಂದ್ರಶೇಖರ, ಈ ಯುವಕರಿಂದ ಜೀವ ಭಯವಿದೆ ಎಂದು ತಡರಾತ್ರಿ ಗಂಗಾವತಿ ನಗರ ಪೊಲೀಸ್ ಠಾಣೆಗೆ ದೂರು ನೀಡಲು ಬಂದಿದ್ದು, ಈ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.

Doctors strike: ಆರೋಗ್ಯ ಸಚಿವರ ಸಂಧಾನ ವಿಫಲ, ಮಾರ್ಚ್ 11ರಂದು ವೈದ್ಯರ ಮುಷ್ಕರ ಖಚಿತ

ಆರೋಗ್ಯ ಸಚಿವರ ಸಂಧಾನ ವಿಫಲ, ಮಾರ್ಚ್ 11ರಂದು ವೈದ್ಯರ ಮುಷ್ಕರ ಖಚಿತ

ಸೋಮವಾರದಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೈದ್ಯರು, ಅಧಿಕಾರಿ ನೌಕರರ ಪ್ರಮುಖ ಬೇಡಿಕೆಗಳ ಬಗ್ಗೆ ಚರ್ಚಿಸಲು ಸಚಿವ ದಿನೇಶ್ ಗುಂಡೂರಾವ್ ಅವರ ಅಧ್ಯಕ್ಷತೆಯಲ್ಲಿ ವಿಕಾಸಸೌಧದಲ್ಲಿ ಸಭೆ ನಡೆಯಿತು.ಆದರೆ ಸಚಿವರು ಹಾಗೂ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ನಮ್ಮ ಬೇಡಿಕೆಗಳನ್ನು ಈಡೇರಿಸುವ ಸ್ಪಷ್ಟವಾದಂತ ಭರವಸೆಯನ್ನು ನೀಡಿಲ್ಲ ಎಂದು ವೈದ್ಯರ ಸಂಘಟನೆ ಹೇಳಿದೆ.

Golden treasure: ಬೆಂಗಳೂರಿನ ಪುರಾತನ ದೇವಾಲಯದ ಬಳಿ ನಿಧಿಗಾಗಿ ಅಗೆದ ಕಿಡಿಗೇಡಿಗಳು

ಬೆಂಗಳೂರಿನ ಪುರಾತನ ದೇವಾಲಯದ ಬಳಿ ನಿಧಿಗಾಗಿ ಅಗೆದ ಕಿಡಿಗೇಡಿಗಳು

ಬೆಂಗಳೂರಿನ HSR ಲೇಔಟ್ ಠಾಣೆ ವ್ಯಾಪ್ತಿಯ ಎಳ್ಳುಕುಂಟೆ ಬಳಿ ಹಲವು ವರ್ಷಗಳ ಇತಿಹಾಸ ಹೊಂದಿರುವ ದೇವಸ್ಥಾನ ಇದೆ. ಇಲ್ಲಿ ಪ್ರತಿ ವರ್ಷ ಬಸವೇಶ್ವರ ಜಾತ್ರೆ ಮಹೋತ್ಸವ ಮಾಡುತ್ತಾರೆ. ದೇವಸ್ಥಾನಕ್ಕೆ ಅಟ್ಯಾಚ್ ಆಗಿರುವ ಅಪಾರ್ಟ್ಮೆಂಟ್ ಕೆಳಗಡೆ ನಿಧಿ ಅಡಗಿದೆ ಎನ್ನುವ ಗಾಳಿಸುದ್ದಿ ಇದೀಗ ನಿಧಿಚೋರರಲ್ಲಿ ಸಂಚಲನ ಮೂಡಿಸಿದೆ.

Murder Case: ಊಟಕ್ಕಾಗಿ ಹೋಟೆಲ್‌ಗೆ ಹೋದ ಯುವಕನ ಕೊಲೆ, ಆಕಸ್ಮಿಕವಾಗಿ ಕಾಲು ತುಳಿದದ್ದೇ ಕಾರಣ!

ಹೋಟೆಲ್‌ನಲ್ಲಿ ಆಕಸ್ಮಿಕವಾಗಿ ಕಾಲು ತುಳಿದ ಯುವಕನ ಕೊಲೆ

ಮನೆ ಸಮೀಪದ ಹೋಟೆಲ್‌ಗೆ ರಾತ್ರಿ ದೋಸೆ ತಿನ್ನಲು ಶಶಿ ಅವರು ಹೋಗಿದ್ದರು. ಅದೇ ವೇಳೆ ಮಂಜುನಾಥ ಸಹ ಹೋಟೆಲ್‌ಗೆ ಹೋಗಿದ್ದ. ದೋಸೆ ತಿನ್ನುವಾಗ ಆಕಸ್ಮಿಕವಾಗಿ ಮಂಜುನಾಥ್ ಕಾಲನ್ನು ಶಶಿ ತುಳಿದಿದ್ದಾನೆ. ಈ ವಿಚಾರಕ್ಕೆ ಜಗಳವಾಗಿ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಡ್ಯಾಗರ್‌ನಿಂದ ಶಶಿಗೆ ಇರಿಯಲಾಗಿದೆ.

Loading...