ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

ಬಿಜೆಪಿ, ಜೆಡಿಎಸ್ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ನಿಲ್ಲಿಸದಿದ್ರೆ ನಾಳೆ ಎಲ್ಲಾ ಪೊಲೀಸ್ ಠಾಣೆಗಳಿಗೆ ಮುತ್ತಿಗೆ: ಎಚ್‌ಡಿಕೆ ಎಚ್ಚರಿಕೆ

ದಬ್ಬಾಳಿಕೆ ನಿಲ್ಲಿಸದಿದ್ರೆ ಪೊಲೀಸ್ ಠಾಣೆಗಳಿಗೆ ಮುತ್ತಿಗೆ: ಎಚ್‌ಡಿಕೆ

HD Kumaraswamy: ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ಮೇಲೆ ಸುಳ್ಳು ದೂರುಗಳನ್ನು ದಾಖಲಿಸಿ, ಅವರ ಮೇಲೆ ಪೊಲೀಸ್ ದಬ್ಬಾಳಿಕೆ ನಡೆಸುವುದನ್ನು ನಿಲ್ಲಿಸಬೇಕು. ಪೊಲೀಸ್ ಇಲಾಖೆಯನ್ನು ಈ ರೀತಿ ದುರ್ಬಳಕೆ ಮಾಡಿಕೊಳ್ಳಬಾರದು. ರಾಜ್ಯ ಸರ್ಕಾರ ಈ ರೀತಿಯ ಕಾನೂನುಬಾಹಿರ ಕ್ರಮಗಳನ್ನು ಕೈಗೊಳ್ಳುವುದನ್ನು ಮುಂದುವರಿಸಿದರೆ ನಾವು ಕೈಕಟ್ಟಿ ಕೂರಲು ಸಾಧ್ಯವಿಲ್ಲ. ಅದರ ವಿರುದ್ಧ ಪೊಲೀಸ್ ಠಾಣೆಗಳಿಗೆ ಮುತ್ತಿಗೆ ಹಾಕುವ ಚಳವಳಿ ಶುರು ಮಾಡುತ್ತೇವೆ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಎಚ್ಚರಿಸಿದ್ದಾರೆ.

ಉಸಿರಿನ ಗತಿಯಲ್ಲಿದೆ ಜಗತ್ತಿನ ಸಕಲ ಆಗುಹೋಗುಗಳ ರಹಸ್ಯ: ರಾಘವೇಶ್ವರ ಶ್ರೀ

ಉಸಿರಿನ ಗತಿಯಲ್ಲಿದೆ ಜಗತ್ತಿನ ಸಕಲ ಆಗುಹೋಗುಗಳ ರಹಸ್ಯ: ರಾಘವೇಶ್ವರ ಶ್ರೀ

ವಿಷ್ಣುಗುಪ್ತ ವಿಶ್ವವಿದ್ಯಾಪೀಠದಿಂದ ಗೋಕರ್ಣದ ಅಶೋಕೆಯಲ್ಲಿ ಆಯೋಜಿತವಾದ ಎರಡು ದಿನಗಳ 'ಸ್ವರೋದಯ' ರಾಷ್ಟ್ರಿಯ ಜ್ಯೌತಿಷ ವಿಚಾರಮಂಥನದಲ್ಲಿ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಮಾತನಾಡಿದ್ದಾರೆ. ಶ್ವಾಸವೇ ಜೀವನವಾಗಿದ್ದು, ಉಸಿರಾಟದ ಮೂಲಕ ಜಗತ್ತನ್ನು ತಿಳಿಯಲು ಸಾಧ್ಯವಿದೆ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.

LIC All-India Sports : ಬೆಂಗಳೂರಿನಲ್ಲಿ ಎಲ್‌ಐಸಿ ಅಖಿಲ ಭಾರತ ಕ್ರೀಡಾಕೂಟಕ್ಕೆ ಚಾಲನೆ

ಬೆಂಗಳೂರಿನಲ್ಲಿ ಎಲ್‌ಐಸಿ ಅಖಿಲ ಭಾರತ ಕ್ರೀಡಾಕೂಟಕ್ಕೆ ಚಾಲನೆ

ಎಲ್‌ಐಸಿಯ ವಾರ್ಷಿಕ ಕ್ರೀಡಾಕೂಟವಾಗಿರುವ ಈ ನಾಲ್ಕು ದಿನಗಳ ಕ್ರೀಡಾ ಕಾರ್ಯಕ್ರಮದಲ್ಲಿ ಕ್ಯಾರಂ, ಚೆಸ್, ಟೇಬಲ್ ಟೆನಿಸ್, ಬ್ಯಾಡ್ಮಿಂಟನ್, ವಾಲಿಬಾಲ್ ಮತ್ತು ಅಥ್ಲೆಟಿಕ್ಸ್ ಸೇರಿದಂತೆ ಆರು ಕ್ರೀಡಾ ವಿಭಾಗ ಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಎಲ್‌ಐಸಿಯ ಎಂಟು ವಲಯಗಳನ್ನು ಪ್ರತಿನಿಧಿಸುವ ಸುಮಾರು 376 ಕ್ರೀಡಾಪಟುಗಳು ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದ್ದಾರೆ.

Sandalwood Senior Actor S Doddanna: ವೃತ್ತಿ ಜೀವನದ ಯಶಸ್ಸಿಗೆ ಪ್ರಾಮಾಣಿಕತೆ ಮತ್ತು ವಿನಯತೆ ಮುಖ್ಯ: ದೊಡ್ಡಣ್ಣ

ವೃತ್ತಿ ಜೀವನದ ಯಶಸ್ಸಿಗೆ ಪ್ರಾಮಾಣಿಕತೆ ಮತ್ತು ವಿನಯತೆ ಮುಖ್ಯ

ಬೆಂಗಳೂರು ವಿಶ್ವವಿದ್ಯಾಲಯ(Bangalore University)ದ ವಿದ್ಯುನ್ಮಾನ ಮಾಧ್ಯಮ ವಿಭಾಗ ಏರ್ಪಡಿಸಿದ್ದ ಎರಡು ವಾರಗಳ ಅಭಿಶಿಕ್ಷಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಚಲನಚಿತ್ರ ನಿರ್ಮಾಣದ ಆರಂಭಿಕ ದಿನಗಳನ್ನು ಮೆಲುಕು ಹಾಕಿದರು. ಕನ್ನಡ ಚಲನಚಿತ್ರದ ದಿಗ್ಗಜ ನಟರೊಂದಿಗಿನ ತಮ್ಮ ಅನುಭವವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.

ಹೆಣ್ಣಿನ ಆಸೆಗೆ ಬಿದ್ದು ಕೈದಿ ಬಿಡುಗಡೆ ಮಾಡಿದ್ದ ಡಿಐಜಿ ಸೋಮಶೇಖರ್?; ತನಿಖೆ ವೇಳೆ ಸ್ಫೋಟಕ ವಿಚಾರ ಬಯಲು!

ಹೆಣ್ಣಿನ ಆಸೆಗೆ ಬಿದ್ದು ಕೈದಿ ಬಿಡುಗಡೆ ಮಾಡಿದ್ದ ಡಿಐಜಿ ಸೋಮಶೇಖರ್?

DIG Somashekhar Case: ಸುಮಾರು ಎಂಟು ವರ್ಷಗಳ ಹಿಂದೆ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಅಪರಾಧಿ ಶಂಕರ್ ಎಂಬಾತ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿದ್ದ. 2001ರಲ್ಲಿ ಅಪಹರಣ-ಸುಲಿಗೆ ಪ್ರಕರಣದಲ್ಲಿ ಶಂಕರ್‌ನನ್ನು ಬಂಧಿಸಲಾಗಿತ್ತು. ಆದರೆ, ಸುಪ್ರೀಂ ಕೋರ್ಟ್‌ ಆದೇಶದ ನಕಲಿ ದಾಖಲೆ ಸೃಷ್ಟಿ ಅಪರಾಧಿಯನ್ನು ಬಿಡುಗಡೆ ಮಾಡಿರುವುದು ಗೊತ್ತಾದ ಹಿನ್ನೆಲೆ ಜೈಲು ಡಿಐಜಿ ಸೋಮಶೇಖರ್ ಅವರನ್ನು ಬಂಧಿಸಲಾಗಿದೆ.

Hospet News: ಬೆಳೆ ನಷ್ಟ, ಕುಡಿಯುವ ನೀರು ಹಾಗೂ ವಿಬಿಜಿ ರಾಮ್ ಜಿ ಕಾಮಗಾರಿ ಕುರಿತು ರೈತರು, ಕಾರ್ಮಿಕರಿಂದ ಮಾಹಿತಿ ಸಂಗ್ರಹ

ಕೇಂದ್ರ ಬರ ಅಧ್ಯಯನ ತಂಡ ಪರಿಶೀಲನೆ ಸಮಯದಲ್ಲಿ ತುಂತುರು ಮಳೆ.!

ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳಾದ ಅಜಿತ್ ಕುಮಾರ್ ಸಾವು ನೇತೃತ್ವದ ತಂಡದ ಸದಸ್ಯರಾದ ಕರ್ನಲ್ ಅಮರೇಂದ್ರ ಸಿಂಗ್, ಚೇತ್ ರಾಮ್ ಮೀನಾ ಅವರ ತಂಡವು ಜಿಲ್ಲೆಯ ವಿವಿಧೆಡೆ ಬರ ಪರಿಸ್ಥಿತಿ ಯನ್ನು ಪರಿಶೀಲಿಸಿತು. ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಅವರು ಜಿಲ್ಲೆಯಲ್ಲಿ ಉಂಟಾಗಿರುವ ಮಳೆ ಕೊರತೆ, ಬೆಳೆ ಹಾನಿ, ಕುಡಿಯುವ ನೀರಿನ ಲಭ್ಯತೆ ಹಾಗೂ ಗ್ರಾಮೀಣ ಉದ್ಯೋಗದ ಪರಿಸ್ಥಿತಿಗೆ ಸಂಬಂಧಿಸಿದಂತೆ ತಂಡಕ್ಕೆ ಮಾಹಿತಿ ನೀಡಿದರು.

Hospet News: ಯುವ ಸಮೂಹ ದುಶ್ಚಟಗಳಿಗೆ ಬಲಿಯಾಗದೇ ಆರೋಗ್ಯದ ಬಗ್ಗೆ ಜಾಗೃತಿ ವಹಿಸಿ: ಗಂಟೆ ಸೋಮಶೇಖರ್

ಉಚಿತ ಆರೋಗ್ಯ ತಪಾಸಣಾ ಶಿಬಿರ

ಪ್ರಸೂತಿ, ಸ್ತ್ರೀರೋಗ ಹಾಗೂ ಬಂಜೆತನ ಚಿಕಿತ್ಸಾ ತಜ್ಞೆ ಡಾ. ಚೈತ್ರಾ ತುಂಗದ ಮಾತನಾಡಿ, ತಪಾಸಣೆಗೆ ಹಾಜರಾದ ಮಹಿಳೆಯರಲ್ಲಿ ಹೇಳಲಾರದಷ್ಟು ನೋವುಗಳನ್ನು ಅನುಭವಿಸುತ್ತಿದ್ದಾರೆ. ಇದರ ನಿವಾರಣೆ ಮಾಡುವುದಕ್ಕೆ ಪ್ರತೀ ತಿಂಗಳ ಕ್ಯಾಂಪಿಂಗ್ ಮಾಡಲು ನಮ್ಮ ಈ ರೈತರಾದ ರಾಜ್ಯ ರೈತ ಹಸಿರುಸೇನೆ ಹಸುರೀಕರಣ ಸಂಸ್ಕೃತಿ ಟ್ರಸ್ಟ್ ಜೊತೆ ಕೈ ಜೊಡಿಸಲು ನಾವು ಸಿದ್ದರಿದ್ದೇವೆ ಎಂದರು.

ಬರ ಹಿನ್ನೆಲೆಯಲ್ಲಿ ಜನರ ಸಂಕಷ್ಟಕ್ಕೆ ರಾಜ್ಯ ಸರ್ಕಾರ ಸ್ಪಂದನೆ; ಮೋಜಿಣಿ ಶುಲ್ಕ ಹೆಚ್ಚಳಕ್ಕೆ ತಡೆ

ಜನರ ಸಂಕಷ್ಟಕ್ಕೆ ರಾಜ್ಯ ಸರ್ಕಾರ ಸ್ಪಂದನೆ; ಮೋಜಿಣಿ ಶುಲ್ಕ ಹೆಚ್ಚಳಕ್ಕೆ ತಡೆ

Mojini charges: ಬರದಂತಹ ಸಂಕಷ್ಟದ ಸಂದರ್ಭದಲ್ಲಿ ರೈತರ ಹಿತಾಸಕ್ತಿಯೇ ಸರ್ಕಾರದ ಮೊದಲ ಆದ್ಯತೆ. ಈಗಾಗಲೇ ಹಲವು ರೀತಿಯ ಆರ್ಥಿಕ ಒತ್ತಡ ಎದುರಿಸುತ್ತಿರುವ ರೈತರ ಮೇಲೆ ಕಂದಾಯ ಇಲಾಖೆಯ ಸೇವೆಗಳ ಮೂಲಕ ಹೆಚ್ಚುವರಿ ಹೊರೆ ಬೀಳಬಾರದು. ಅದಕ್ಕಾಗಿ ಮೋಜಿಣಿ ವ್ಯವಸ್ಥೆಯಡಿ ಸಾರ್ವಜನಿಕರಿಂದ ಸ್ವೀಕರಿಸಲಾಗುವ ವಿವಿಧ ಅಳತೆ ಅರ್ಜಿಗಳ ಪರಿಷ್ಕೃತ ಶುಲ್ಕವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂದು ಡಿಸಿಎಂ ಪರಮೇಶ್ವರ ತಿಳಿಸಿದ್ದಾರೆ.

Valmiki Jayanti 2026: ವಾಲ್ಮೀಕಿ ಜಯಂತಿ ರಜೆ ದಿನಾಂಕ ಬದಲು; ಅ.26ಕ್ಕೆ ಸಾರ್ವತ್ರಿಕ ರಜೆ ಘೋಷಿಸಿ ರಾಜ್ಯ ಸರ್ಕಾರ ಆದೇಶ

ವಾಲ್ಮೀಕಿ ಜಯಂತಿ ರಜೆ ದಿನಾಂಕ ಬದಲು; ಅ.26ಕ್ಕೆ ರಜೆ ಘೋಷಿಸಿದ ಸರ್ಕಾರ

ಸರ್ಕಾರದ ಹಿಂದಿನ ಅಧಿಸೂಚನೆಯನ್ವಯ 2026ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅಕ್ಟೋಬರ್ 25ರ ಭಾನುವಾರದಂದು ಘೋಷಿಸಲಾಗಿತ್ತು. ಆದರೆ, ವಾಲ್ಮೀಕಿ ಜಯಂತಿಯನ್ನು 'ಶೀಗಿ ಹುಣ್ಣಿಮೆ' ದಿನದಂದೇ ಆಚರಿಸುವ ಸಂಪ್ರದಾಯ ಇರುವ ಹಿನ್ನೆಲೆ ರಜೆ ದಿನವನ್ನು ಬದಲಿಸಲಾಗಿದೆ

VISL Bhadravathi‌: ಭದ್ರಾವತಿಯ ವಿಐಎಸ್‌ಎಲ್ ಕಾರ್ಖಾನೆಯ ಡಿಜಿಎಂ ಆತ್ಮಹತ್ಯೆ

ಭದ್ರಾವತಿಯ ವಿಐಎಸ್‌ಎಲ್ ಕಾರ್ಖಾನೆಯ ಡಿಜಿಎಂ ಆತ್ಮಹತ್ಯೆ

ತಮಿಳುನಾಡಿನ ಸೇಲಂ ಮೂಲದ ಗೋವಿಂದರಾಜ್‌ (51) ನೇಣಿಗೆ ಶರಣಾದ ವ್ಯಕ್ತಿ. ಪತ್ನಿ, ಮಕ್ಕಳನ್ನು ಸೇಲಂಗೆ ಕಳುಹಿಸಿ ಭದ್ರಾವತಿ ನಗರದ ಸೇಂಟ್‌ ಚಾರ್ಲ್ಸ್ ಶಾಲೆಯ ಎದುರಿರುವ ಕ್ವಾರ್ಟರ್ಸ್‌ನ ಮನೆಯಲ್ಲಿ ಗೋವಿಂದರಾಜ್ ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.

ಸುಪ್ರೀಂ ಕೋರ್ಟ್‌ನ ನಕಲಿ ಆದೇಶ ಸೃಷ್ಟಿಸಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿ ಬಿಡುಗಡೆ: ಡಿಐಜಿ ಸೋಮಶೇಖರ್ ಅರೆಸ್ಟ್

ನಕಲಿ ಆದೇಶ ಸೃಷ್ಟಿಸಿ ಕೈದಿ ಬಿಡುಗಡೆ: ಡಿಐಜಿ ಸೋಮಶೇಖರ್ ಅರೆಸ್ಟ್

2018ರಲ್ಲಿ ಕೊಲೆ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿಯನ್ನು ಸುಪ್ರೀಂ ಕೋರ್ಟ್‌ನ ನಕಲಿ ಆದೇಶದ ಆಧಾರದ ಮೇಲೆ ಬಿಡುಗಡೆ ಮಾಡಲಾಗಿತ್ತು. ಈ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದ ಪೊಲೀಸರು, ಅಂದಿನ ಜೈಲು ಚೀಫ್ ಸೂಪರಿಂಟೆಂಡೆಂಟ್ ಆಗಿದ್ದ ಹಾಗೂ ಸದ್ಯ ಡಿಐಜಿ ಹುದ್ದೆಯಲ್ಲಿರುವ ಸೋಮಶೇಖರ್ ಅವರನ್ನು ಬಂಧಿಸಿದ್ದಾರೆ.

AI Education: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಎಐ ತರಬೇತಿ ನೀಡಲು ಗೂಗಲ್ ಕಂಪನಿ ಆಸಕ್ತಿ: ಸಿಎಂ

ಸರ್ಕಾರಿ ಶಾಲೆಗಳಲ್ಲಿ ಎಐ ತರಬೇತಿ ನೀಡಲು ಗೂಗಲ್ ಕಂಪನಿ ಆಸಕ್ತಿ

ಸಿಎಂ ಡಿ.ಕೆ.ಶಿವಕುಮಾರ್‌ ಅವರು ನೇಮಕಾತಿ ಹಾಗೂ ಆದ್ಯತೆ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದಾರೆ. ಈ ವೇಳೆ ಮಾತನಾಡಿರುವ ಅವರು, ಎಐ ವಿಶ್ವವಿದ್ಯಾಲಯ ಸ್ಥಾಪನೆಗೆ ಜಾಗ ಗುರುತಿಸಲು ಸೂಚಿಸಲಾಗಿದ್ದು, 956 ಶಿಕ್ಷಕರನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕಕ್ಕೆ ಕ್ರಮ ವಹಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ವೃತ್ತಿ ಜೀವನದ ಯಶಸ್ಸಿಗೆ ಪ್ರಾಮಾಣಿಕತೆ ಮತ್ತು ವಿನಯತೆ ಮುಖ್ಯ: ಹಿರಿಯ ನಟ ದೊಡ್ಡಣ್ಣ

ವೃತ್ತಿ ಜೀವನದ ಯಶಸ್ಸಿಗೆ ಪ್ರಾಮಾಣಿಕತೆ ಮತ್ತು ವಿನಯತೆ ಮುಖ್ಯ: ದೊಡ್ಡಣ್ಣ

Dept of Electronic Media, Bangalore University: ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯುನ್ಮಾನ ಮಾಧ್ಯಮ ವಿಭಾಗದಲ್ಲಿ ಏರ್ಪಡಿಸಿದ್ದ ಎರಡು ವಾರಗಳ ಅಭಿಶಿಕ್ಷಣ ಕಾರ್ಯಕ್ರಮವನ್ನು ಹಿರಿಯ ನಟ ಎಸ್‌. ದೊಡ್ಡಣ್ಣ ಅವರು ಉದ್ಘಾಟಿಸಿದ್ದಾರೆ. ಮುಖ್ಯ ಅತಿಥಿಗಳಾಗಿ ಹಿರಿಯ ಪತ್ರಕರ್ತ ದಿನೇಶ್‌ ಅಮಿನ್‌ ಮಟ್ಟು, ಗೌರವ ಅತಿಥಿಗಳಾಗಿ ಖ್ಯಾತ ಛಾಯಾಚಿತ್ರಗ್ರಾಹಕ ಅಶೋಕ್‌ ಕಶ್ಯಪ್‌ ಅವರು ಭಾಗವಹಿಸಿದ್ದರು.

ಸೇವಾ ಸಂಕಲ್ಪ ಅಭಿಯಾನ ವೇಳೆ ಕಳ್ಳರ ಕೈಚಳಕ: ಬಿಜೆಪಿ ಕಾರ್ಯಕರ್ತನ ಜೇಬಿನಿಂದ 60 ಸಾವಿರ ರೂ. ಕಳವು

ಬಿಜೆಪಿ ಕಾರ್ಯಕರ್ತನ ಜೇಬಿನಿಂದ 60 ಸಾವಿರ ರೂ. ಕಳವು!

Tumkur News: ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಚೇಳೂರು ಗ್ರಾಮದಲ್ಲಿ ಬಿಜೆಪಿ ಆಯೋಜಿಸಿದ್ದ 'ಸೇವಾ ಸಂಕಲ್ಪ ಅಭಿಯಾನ'ದ ವೇಳೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಬಿಜೆಪಿ ಕಾರ್ಯಕರ್ತರೊಬ್ಬರ ಪ್ಯಾಂಟ್ ಜೇಬನ್ನು ಕತ್ತರಿಸಿ 60 ಸಾವಿರ ರೂಪಾಯಿ ಹಣವನ್ನು ಕಳ್ಳರು ದೋಚಿರುವ ಘಟನೆ ನಡೆದಿದೆ.

ವಿಧಾನ ಪರಿಷತ್‌ನ 4 ಕ್ಷೇತ್ರಗಳಲ್ಲೂ ಎನ್‍ಡಿಎ ಗೆಲುವು: ಬಿ.ವೈ. ವಿಜಯೇಂದ್ರ ವಿಶ್ವಾಸ

ವಿಧಾನ ಪರಿಷತ್‌ನ 4 ಕ್ಷೇತ್ರಗಳಲ್ಲೂ ಎನ್‍ಡಿಎ ಗೆಲುವು: ಬಿ.ವೈ. ವಿಜಯೇಂದ್ರ

BY Vijayendra: ರಾಜ್ಯದ ವಿಧಾನ ಪರಿಷತ್‌ನ 4 ಕ್ಷೇತ್ರಗಳಲ್ಲೂ ನಮ್ಮ ಎನ್‍ಡಿಎ ಅಭ್ಯರ್ಥಿಗಳು ಗೆದ್ದೇಗೆಲ್ಲುತ್ತಾರೆ ಎಂಬ ಸಂಪೂರ್ಣ ವಿಶ್ವಾಸ ಇದೆ. ನಾವು ಮತ್ತು ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಚುನಾವಣೆ ಗೆಲ್ಲಲೇಬೇಕೆಂಬ ಉತ್ಸಾಹದಿಂದ ಕೆಲಸ ಮಾಡುತ್ತಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.

Karnataka SIR: ರಾಜ್ಯದಲ್ಲಿ ಎಷ್ಟು ಫಾರ್ಮ್-7 ಸಲ್ಲಿಕೆಯಾಗಿವೆ?; ಮತದಾರರ ಹೆಸರು ಡಿಲೀಟ್‌ ಆರೋಪಕ್ಕೆ ಸ್ಪಷ್ಟನೆ ನೀಡಿದ ಚುನಾವಣಾ ಆಯೋಗ

ಮತದಾರರ ಹೆಸರು ಡಿಲೀಟ್‌ ಆರೋಪಕ್ಕೆ ಚುನಾವಣಾ ಆಯೋಗ ಸ್ಪಷ್ಟನೆ

Karnataka CEO V Anbukumar Pressmeet: ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ವೇಳೆ ಫಾರ್ಮ್-7 ದುರ್ಬಳಕೆ ಕುರಿತ ಆರೋಪಗಳಿಗೆ ತೆರೆ ಎಳೆದಿರುವ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್‌ ಅವರು, ನಿಯಮಾನುಸಾರ ನೋಟಿಸ್ ನೀಡದೆ ಯಾರ ಹೆಸರನ್ನೂ ಮತದಾರರ ಪಟ್ಟಿಯಿಂದ ಕೈಬಿಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Bengaluru Development Plan: ಬೆಂಗಳೂರು ಅಭಿವೃದ್ಧಿಗೆ ಮುಂದಿನ 15 ವರ್ಷಗಳ ಸಮಗ್ರ ಯೋಜನೆ: ಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು ಅಭಿವೃದ್ಧಿಗೆ ಮುಂದಿನ 15 ವರ್ಷಗಳ ಸಮಗ್ರ ಯೋಜನೆ: ಸಿಎಂ

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಬೆಂಗಳೂರು ಮಹಾನಗರ ಪ್ರದೇಶದ ಆರ್ಥಿಕ ಅಭಿವೃದ್ಧಿ ಕುರಿತಾದ ಸಲಹಾ ಸಮಿತಿ ಸಭೆಯಲ್ಲಿ ಸಿಎಂ ಶಿವಕುಮಾರ್ ಅವರು ಸೋಮವಾರ ಮಾತನಾಡಿದ್ದಾರೆ. ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸುಗಮ ಸಂಚಾರ ವ್ಯವಸ್ಥೆ, ವಸತಿ, ಕೈಗಾರಿಕಾ ಅಭಿವೃದ್ಧಿಗೆ ರೂಪುರೇಷೆಯನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಸಿಎಂ ಡಿ.ಕೆ.ಶಿವಕುಮಾರ್‌ ಅವರು ಮಾಹಿತಿ ನೀಡಿದ್ದಾರೆ.

ಆನ್‌ಲೈನ್‌ನಲ್ಲಿ ನೂರಾರು ಫ್ರೆಂಡ್ಸ್, ರಿಯಲ್ ಲೈಫ್‌ನಲ್ಲಿ ಯಾರೂ ಇಲ್ಲ! ಭಾರತದ 'ಸಿಂಗಲ್ಸ್'ಗೆ ಕಾಡುತ್ತಿದೆ ಒಂಟಿತನ; ಸಮೀಕ್ಷೆಯಲ್ಲಿ ಅಚ್ಚರಿಯ ಮಾಹಿತಿ

ಭಾರತದ 'ಸಿಂಗಲ್ಸ್'ಗೆ ಕಾಡುತ್ತಿದೆ ಒಂಟಿತನ; ಸಮೀಕ್ಷೆಯಲ್ಲಿ ಅಚ್ಚರಿಯ ಮಾಹಿತಿ

ಕೆಲಸದ ಒತ್ತಡದ ನಡುವೆಯೂ ಹೊಸ ಪರಿಚಯಗಳನ್ನು ಮಾಡಿಕೊಳ್ಳಲು ಯುವಜನತೆ ತಂತ್ರಜ್ಞಾನದ ಮೊರೆ ಹೋಗುತ್ತಿದ್ದಾರೆ. ಶೇ. 40ರಷ್ಟು ಸಿಂಗಲ್ಸ್ ಪ್ರಸ್ತುತ ಯಾವುದಾದರೊಂದು ಡೇಟಿಂಗ್ ಆ್ಯಪ್ ಬಳಸುತ್ತಿದ್ದಾರೆ ಎಂಬುವುದು ಡೇಟಿಂಗ್ ಆ್ಯಪ್‌ಗಳ ಪ್ರಸಿದ್ಧ ಸಂಸ್ಥೆ ಮ್ಯಾಚ್ ಗ್ರೂಪ್ ಮತ್ತು ಇಪ್ಸೋಸ್ ಜಂಟಿಯಾಗಿ ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ.

ತುಮಕೂರಿನ ಲಕ್ಕೇನಹಳ್ಳಿಯಲ್ಲಿ ಅಪರೂಪದ 'ಚಿಪ್ಪು ಹಂದಿ' ರಕ್ಷಣೆ

ತುಮಕೂರಿನ ಲಕ್ಕೇನಹಳ್ಳಿಯಲ್ಲಿ ಅಪರೂಪದ 'ಚಿಪ್ಪು ಹಂದಿ' ರಕ್ಷಣೆ

Tumkur News: ತುಮಕೂರು ತಾಲೂಕಿನ ನಾಗವಲ್ಲಿ ಸಮೀಪದ ಲಕ್ಕೇನಹಳ್ಳಿಯಲ್ಲಿ ಅಳಿವಿನಂಚಿನಲ್ಲಿರುವ ಅಪರೂಪದ ವನ್ಯಜೀವಿ 'ಚಿಪ್ಪು ಹಂದಿ' ಪತ್ತೆಯಾಗಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ಅದನ್ನು ಸುರಕ್ಷಿತವಾಗಿ ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

ಶಿಕ್ಷಕರಿಗೆ ಬೆದರಿಕೆ ಹಾಕಿ ಅಧಿಕಾರ ದುರುಪಯೋಗ: ಸಿಎಂ ಡಿಕೆಶಿ ವಿರುದ್ಧ ಯಡಿಯೂರಪ್ಪ ವಾಗ್ದಾಳಿ

ಶಿಕ್ಷಕರಿಗೆ ಬೆದರಿಕೆ ಹಾಕಿ ಅಧಿಕಾರ ದುರುಪಯೋಗ: ಮಾಜಿ ಸಿಎಂ ಬಿಎಸ್‌ವೈ

BS Yediyurappa: ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ತಪ್ಪಾಗಿದ್ದರೆ ಅದನ್ನು ಸರಿಪಡಿಸುವುದು ಸರ್ಕಾರದ ಜವಾಬ್ದಾರಿ. ಆದರೆ ಪ್ರತಿಭಟನೆ ನಡೆಸಿದ ಶಿಕ್ಷಕರ ವಿರುದ್ಧ ಅಧಿಕಾರದ ಬಲ ಪ್ರಯೋಗಿಸಿ ಬೆದರಿಕೆ ಹಾಕುವುದು ಸರಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದ್ದಾರೆ.

FRP ಅಷ್ಟೇ ಅಲ್ಲ, ಕರ್ನಾಟಕದ ಕಬ್ಬು ಬೆಳೆಗಾರರಿಗೆ ಬೇಕು SAP ಬೆಂಬಲ

FRP ಅಷ್ಟೇ ಅಲ್ಲ, ಕರ್ನಾಟಕದ ಕಬ್ಬು ಬೆಳೆಗಾರರಿಗೆ ಬೇಕು SAP ಬೆಂಬಲ

Sugarcane farmers Protest: 'ಯಾವುದೇ ಹೊಸ ಯೋಜನೆ ಘೋಷಣೆಗೆ ಹಣವಿಲ್ಲ' ಎಂಬ ಆರ್ಥಿಕ ಇಲಾಖೆ ಹೇಳಿಕೆ ಸಹ ಸ್ವತಃ ರಾಜ್ಯ ಸರ್ಕಾರವನ್ನೂ ದಿಕ್ಕೆಡಿಸಿದೆ. ಹೀಗಾಗಿ ಕಬ್ಬು ಬೆಳೆಗಾರರ ಹೋರಾಟವನ್ನು ಕೇಂದ್ರದತ್ತ ತಿರುಗಿಸಲಾಗಿದೆ? ಎಂಬ ಬಲವಾದ ಆರೋಪ ವಿಪಕ್ಷಗಳದ್ದಾಗಿದೆ.

KRS ಬಳಿ ನಡೆಯಬೇಕಿದ್ದ ಕಾವೇರಿ ಆರತಿ ಕಾರ್ಯಕ್ರಮ ಮುಂದೂಡಿಕೆ; ಕಾರಣವೇನು?

KRS ಬಳಿ ನಡೆಯಬೇಕಿದ್ದ ಕಾವೇರಿ ಆರತಿ ಕಾರ್ಯಕ್ರಮ ಮುಂದೂಡಿಕೆ

ಕೆಆರ್‌ಎಸ್ ಅಣೆಕಟ್ಟಿನ (KRS) ಬಳಿ ಆಯೋಜಿಸಲಾಗಿದ್ದಕಾವೇರಿ ಆರತಿ ಕಾರ್ಯಕ್ರಮದ ದಿನಾಂಕ ಮುಂದೂಡಲಾಗಿದೆ. ಈ ಹಿಂದೆ ನಿಗದಿಯಾಗಿದ್ದ ವೇಳಾಪಟ್ಟಿಯ ಪ್ರಕಾರ ಅ.11 ರಿಂದ ಈ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆರಂಭವಾಗಬೇಕಿತ್ತು. ಆದರೆ ಇದೀಗ ಇದೇ ತಿಂಗಳ 18 ಕ್ಕೆ ಮುಂದೂಡಲಾಗಿದೆ.

ಬಾಗಲಕೋಟೆಯ  ದೇವಾಲಯದಲ್ಲಿ ದಲಿತರಿಗೆ ಪ್ರತ್ಯೇಕ ಊಟ: ಗಾಂಧಿ ಜಯಂತಿಯಂದೇ ಕಂಡುಬಂದ  ಅಸ್ಪ್ರಶ್ಯತೆ

ದೇವಾಲಯದಲ್ಲಿ ದಲಿತರಿಗೆ ಪ್ರತ್ಯೇಕ ಊಟ: ದೂರು ದಾಖಲು

ಗಾಂಧಿ ಜಯಂತಿಯಂದು ದೇವಾಲಯವೊಂದರಲ್ಲಿ ಅಸ್ಪ್ರಶ್ಯತೆಯನ್ನು ಪಾಲಿಸಿರುವ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ. ದೇವಾಲಯದ ಜಾತ್ರೆಯ ಸಂದರ್ಭದಲ್ಲಿ ದಲಿತರಿಗೆ ಪ್ರತ್ಯೇಕ ಊಟದ ವ್ಯವಸ್ಥೆ ಮಾಡಲಾಗಿತ್ತು. ಈ ಕುರಿತು ಗ್ರಾಮದ ದಲಿತ ಸಮುದಾಯದ ಬಸಪ್ಪ ಯಲದಗಲ್ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.

ಮಾರಕಾಸ್ತ್ರಗಳಿಂದ ವ್ಯಕ್ತಿಯ ಕೊಲೆ

ಮಾರಕಾಸ್ತ್ರಗಳಿಂದ ವ್ಯಕ್ತಿಯ ಕೊಲೆ

ನಗರದ ಸಬ್ ಅರ್ಬನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ. ಹುಮನಾಬಾದ್ ರಸ್ತೆಯ ಕಲಬು ರಗಿ ಹೋಟೆಲ್ ಸಮೀಪ ಸಿದ್ದಲಿಂಗ (35) ಎಂಬುವವರನ್ನು ಸೋಮು ಅಲಿಯಾಸ್ ಸೋಮಶೇಖರ ಹಾಗೂ ಇತರರು ಮೈದಾನದ ಕಡೆಗೆ ಕರೆದುಕೊಂಡು ಹೋಗಿ, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Loading...