ಬೆಂಗಳೂರು ಬಿಜೆಪಿ ಕಚೇರಿ ಬಳಿ ಬಾಂಬ್ ಸ್ಫೋಟಿಸಿದ ಶಂಕಿತ ಉಗ್ರ ಸೆರೆ
Bengaluru Blast: ಏಪ್ರಿಲ್ 17, 2013ರಂದು ಬಿಜೆಪಿ ಕಚೇರಿಯ ಹೊರಗೆ ಬಾಂಬ್ ಸ್ಫೋಟಗೊಂಡು ಕನಿಷ್ಠ 16 ಜನರು ಗಾಯಗೊಂಡಿದ್ದರು. ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಮೂರು ವಾರಗಳ ಮೊದಲು ಈ ಸ್ಫೋಟ ನಡೆದಿತ್ತು. ಶಂಕಿತ ಉಗ್ರ ನಾಗೂರ್ ಅಬುಬಕ್ಕರ್ ಸಿದ್ದಿಕ್ ಕಳೆದ 30 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಎಂದು ಆತನನ್ನು ಬಂಧಿಸಿದ ಅಧಿಕಾರಿ ಹೇಳಿದರು.