ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕರ್ನಾಟಕ

ಸಚಿವ ದಿನೇಶ್‌ ಗುಂಡೂರಾವ್‌ ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಅಗ್ನಿ ದುರಂತ

ಸಚಿವ ದಿನೇಶ್‌ ಗುಂಡೂರಾವ್‌ ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಅಗ್ನಿ ದುರಂತ

Dinesh Gundu Rao: ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಅದೃಷ್ಟವಶಾತ್‌ ಯಾವುದೇ ಅನಾಹುತ ನಡೆದಿಲ್ಲ. ಬೆಂಗಳೂರಿನ ಚಿಕ್ಕಪೇಟೆಯಲ್ಲಿ ಸಂಕ್ರಾಂತಿ ಸುಗ್ಗಿ ಹಬ್ಬ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಬೆಂಕಿ ಆಕಸ್ಮಿಕ ಕಂಡುಬಂತು.

Bagepally News: ಶಾಂತಿನಿಕೇತನ ಶಾಲೆಯಲ್ಲಿ ಸಂಕ್ರಾಂತಿ ಸಂಭ್ರಮ

Bagepally News: ಶಾಂತಿನಿಕೇತನ ಶಾಲೆಯಲ್ಲಿ ಸಂಕ್ರಾಂತಿ ಸಂಭ್ರಮ

ಶಾಲಾವರಣದಲ್ಲಿ ಗುಡಿಸಲು ನಿರ್ಮಿಸಿ ಅದರ ಮುಂದೆ ವಿದ್ಯಾರ್ಥಿಗಳು ಮನೆಗಳಿಂದ ತಂದಿದ್ದ ನವ ಧಾನ್ಯಗಳನ್ನು ರಾಶಿ ಹಾಕಿ, ಹಿರಿಯರು ಸಮಯ ಕಳೆಯಲು ಆಟವಾಡಲು ಬಳಸುತ್ತಿದ್ದ ಹಳ್ಳು ಮನೆ ಗುಳಿ, ಕಬ್ಬಿನ ಜಲ್ಲೆಗಳು, ಮಡಿಕೆ, ಕುಡಿಕೆಗಳು, ಗೆಡ್ಡೆ-ಗೆಣಸುಗಳನ್ನು ಇಟ್ಟು, ಎತ್ತುಗಳ ಪೂಜೆಗೆ ಅಣಿ ಗೊಳಿಸಿದ್ದರು.

ಮಾಜಿ ಸಚಿವ, ಶತಾಯುಷಿ ಡಾ. ಭೀಮಣ್ಣ ಖಂಡ್ರೆ ನಿವಾಸಕ್ಕೆ ಮಠಾಧೀಶರು, ಗಣ್ಯರು ಭೇಟಿ

ಡಾ. ಭೀಮಣ್ಣ ಖಂಡ್ರೆ ನಿವಾಸಕ್ಕೆ ನಾನಾ ಮಠಾಧೀಶರು, ಗಣ್ಯರು ಭೇಟಿ

Bheemanna Khandre: ಸ್ವಾತಂತ್ರ್ಯ ಹೋರಾಟಗಾರ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಮಾಜಿ ಅಧ್ಯಕ್ಷ, ಮಾಜಿ ಸಚಿವ, ಶತಾಯುಷಿ ಡಾ. ಭೀಮಣ್ಣ ಖಂಡ್ರೆ (102) ಅವರ ನಿವಾಸಕ್ಕೆ ಕಳೆದ ಮೂರು ದಿವಸಗಳಿಂದ ನಾನಾ ಮಠಾಧೀಶರು, ಗಣ್ಯರು ಖಂಡ್ರೆ ನಿವಾಸಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

Bagepally News: ಮಾಧ್ಯಮಗಳು ಪೊಲೀಸ್ ವ್ಯವಸ್ಥೆ ಮತ್ತು ಸಾರ್ವಜನಿಕರ ನಡುವೆ ಸೇತುವೆಯಾಗಬೇಕು: ನೂತನ ಸರ್ಕಲ್ ಇನ್ಸ್‌ಪೆಕ್ಟರ್ ಅಜಯ್ ಸಾರಥಿ ಹೇಳಿಕೆ

ಪೊಲೀಸ್ ವ್ಯವಸ್ಥೆ-ಸಾರ್ವಜನಿಕರ ನಡುವೆ ಮಾಧ್ಯಮಗಳು ಸೇತುವೆಯಾಗಬೇಕು

ಬಾಗೇಪಲ್ಲಿ ತಾಲ್ಲೂಕಿಗೆ ಬಂದಿರುವುದು ನನ್ನ ಭಾಗ್ಯ ಎಂದು ಮಾತು ಆರಂಭಿಸಿ, ಕಾನೂನಿಗೆ ಗೌರವ ಕೊಡುವ ವರಿಗೆ ಸದಾ ಗೌರವ ನೀಡುವುದಾಗಿ, ರಾಜಕೀಯ ಒತ್ತಡ ಎಷ್ಟೇ ಇದ್ದರೂ ಕಾನೂನಾತ್ಮಕ ವಾಗಿಯೇ ಕೆಲಸ ಮಾಡು ವುದಾಗಿ ಖಡಕ್ ಆಗಿ ನುಡಿದರಲ್ಲದೇ, ಪೊಲೀಸ್ ಎಂದರೆ ಭಯ ಹುಟ್ಟಿಸುವ ಶಕ್ತಿಯಲ್ಲ, ಬದಲಾಗಿ ಸಮಾಜಕ್ಕೆ ಭರವಸೆ ನೀಡುವ ವ್ಯವಸ್ಥೆಯಾಗಬೇಕು

Bangalore News: ವೆಂಕಟೇಶ ನಾಟ್ಯ ಮಂದಿರದಿಂದ ಜ.16 ರಿಂದ ಮೂರು ದಿನಗಳ ನಾಟ್ಯ ರಸ ಸಂಜೆ ಕಾರ್ಯಕ್ರಮ: ದಿಗ್ಗಜ ಕಲಾವಿದರಿಂದ ಪ್ರದರ್ಶನಕ್ಕೆ ವೇದಿಕೆ ಸಜ್ಜು

ಜ. 16 ರಿಂದ ಮೂರು ದಿನಗಳ ನಾಟ್ಯ ರಸ ಸಂಜೆ ಕಾರ್ಯಕ್ರಮ

ಹಿರಿಯ ಭರತನಾಟ್ಯ ಗುರು ರಾಧಾ ಶ್ರೀಧರ್ ಅವರು 1969ರಲ್ಲಿ ಸ್ಥಾಪನೆ ಮಾಡಿದ ವೆಂಕಟೇಶ ನಾಟ್ಯ ಮಂದಿರ 56ವರ್ಷಗಳಿಂದ ನಿರಂತರ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದೆ. ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸರ್ಕಾರದ ಶಾಂತಲಾ ನಾಟ್ಯ ಪ್ರಶಸ್ತಿಗೆ ಭಾಜನ ವಾಗಿರುವ ರಾಧಾ ಶ್ರೀಧರ್ ಅವರಿಗೆ 87ರ ಹರೆಯದಲ್ಲೂ ಜೀವನೋತ್ಸಾಹ ಕುಂದಿಲ್ಲ

ಅರಮನೆ ಮೈದಾನದಲ್ಲಿ ಜ.29 ರಿಂದ ಫೆ.1ರವರೆಗೆ ರಾಷ್ಟ್ರಮಟ್ಟದ ‘ವಿವೇಕ ದೀಪ್ತಿ’ ಆಯೋಜನೆ

ಜ.29 ರಿಂದ ಫೆ.1ರ ವರೆಗೆ ರಾಷ್ಟ್ರಮಟ್ಟದ ‘ವಿವೇಕ ದೀಪ್ತಿ’ ಆಯೋಜನೆ

ದಕ್ಷಿಣಾಸ್ಯ ದರ್ಶಿನಿ – ಆದಿ ಶಂಕರಾಚಾರ್ಯರು ರಚಿಸಿದ ಶ್ರೀ ದಕ್ಷಿಣಾಮೂರ್ತಿ ಅಷ್ಟಕದ ತತ್ತ್ವೋ ಪದೇಶಗಳನ್ನು ವಿದ್ಯಾರ್ಥಿಗಳ ನೇತೃತ್ವದ ವೈಜ್ಞಾನಿಕ ಪ್ರಯೋಗಗಳು, ಸಂವಾದಾತ್ಮಕ ಸ್ಥಾಪನೆಗಳು ಮತ್ತು ಅನುಭವಾತ್ಮಕ ಕಲಿಕಾ ಮಾದರಿಗಳ ಮೂಲಕ ವಿವರಿಸುವ ವಿಶಾಲ ಪ್ರದರ್ಶನ. ಗಂಭೀರ ತತ್ತ್ವಚಿಂತನೆಗಳನ್ನು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಾಮಾನ್ಯ ಜನರಿಗೆ ಸುಲಭವಾಗಿ ಗ್ರಹಿಸುವಂತೆ ಮತ್ತು ಆಕರ್ಷಕವಾಗಿ ರೂಪಿಸುವ ಉದ್ದೇಶದಿಂದ ಈ ಪ್ರದರ್ಶನ ವಿನ್ಯಾಸಗೊಳಿಸಲಾಗಿದೆ.

ಸಂಕ್ರಾಂತಿ ಸಂಭ್ರಮ: ನದಿ ತೀರದ ದೇವಸ್ಥಾನಗಳಲ್ಲಿ ಅದ್ಧೂರಿ ಜಾತ್ರಾ ಮಹೋತ್ಸವ

ಸಂಕ್ರಾಂತಿ ಪ್ರಯುಕ್ತ ನದಿ ತೀರದ ದೇವಸ್ಥಾನಗಳಲ್ಲಿ ಜಾತ್ರೆ

Haveri News: ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಗುರುವಾರ ಹಾವೇರಿ ಜಿಲ್ಲಾದ್ಯಂತ ದೇವಸ್ಥಾನಗಳಲ್ಲಿ ಅದ್ಧೂರಿ ಜಾತ್ರಾ ಮಹೋತ್ಸವಗಳು ಜರುಗಿದವು. ಜತೆಗೆ ಮಕರ ಸಂಕ್ರಾಂತಿಯನ್ನು ನಗರ ಸೇರಿದಂತೆ ಜಿಲ್ಲಾದ್ಯಂತ ಅತ್ಯಂತ ಸಡಗರ ಮತ್ತು ಸಂಭ್ರಮದಿಂದ ಆಚರಿಸಲಾಯಿತು.

ನಿಮ್ಮ ಸಂಕ್ರಾಂತಿಯನ್ನು ಪ್ರಯತ್ನರಹಿತ ಕಲಾ ಶ್ರೇಷ್ಠತೆಯೊಂದಿಗೆ ಸಂಭ್ರಮಿಸಿ

ನಿಮ್ಮ ಸಂಕ್ರಾಂತಿಯನ್ನು ಪ್ರಯತ್ನರಹಿತ ಕಲಾ ಶ್ರೇಷ್ಠತೆಯೊಂದಿಗೆ ಸಂಭ್ರಮಿಸಿ

ಪ್ರತಿನಿತ್ಯದ ಕ್ಷಣಗಳಿಗೂ ಹೊಂದಿಕೊಳ್ಳುತ್ತದೆ. ಈ ನೋಟವನ್ನು ಕರಕುಶಲತೆಯ ಆಭರಣದಿಂದ ಪೂರ್ಣಗೊಳಿಸಬಹುದಾಗಿದ್ದು ಅದರಲ್ಲಿ ಪರಿಷ್ಕರಿಸಿದ ಲೋಹದ ನೆಕ್ಲೇಸ್ ಗಳು, ಬೆಳ್ಳಿ ಬಳೆಗಳು ಮತ್ತು ಜುಮಕಿಗಳು ಹಾಗೂ ಸೂಕ್ಷ್ಮ ಅಕ್ಸೆಂಟ್ ಗಳು ಸೊಗಸಿನ ಸೂಕ್ತ ಸ್ಪರ್ಶ ನೀಡುತ್ತವೆ, ಅಲ್ಲದೆ ಸಂಕ್ರಾಂತಿಯ ಹಬ್ಬಕ್ಕೆ ಲಯ ನೀಡುತ್ತವೆ

ಬೆಂಗಳೂರಿನಲ್ಲಿ ಒಂದೇ ದಿನದಲ್ಲಿ ಎರಡು ವಿಶೇಷ ಶೋರೂಮ್‌ಗಳ ಅನಾವರಣಗೊಳಿಸಿದ KISNA

ರಾಜ್ಯದಲ್ಲಿ ತನ್ನ 5ನೇ ಮತ್ತು 6ನೇ ವಿಶೇಷ ಶೋರೂಂಗಳ ಉದ್ಘಾಟನೆ

ಬೆಂಗಳೂರು ನಮಗೆ ಪ್ರಮುಖ ಬೆಳವಣಿಗೆಯ ಮಾರುಕಟ್ಟೆ ಯಾಗಿದೆ ಮತ್ತು ಒಂದೇ ದಿನದಲ್ಲಿ ಎರಡು ವಿಶೇಷ ಬ್ರ್ಯಾಂಡ್ ಔಟ್‌ಲೆಟ್‌ಗಳನ್ನು ತೆರೆಯುವುದು ನಗರದ ಬಲವಾದ ಗ್ರಾಹಕ ಬೇಡಿಕೆ ಮತ್ತು ಅದರ ದೀರ್ಘಕಾಲೀನ ಸಾಮರ್ಥ್ಯದಲ್ಲಿನ ನಮ್ಮ ವಿಶ್ವಾಸ ಎರಡನ್ನೂ ಪ್ರತಿಬಿಂಬಿಸುತ್ತದೆ. ನಾವು ನಮ್ಮ ಉಪಸ್ಥಿತಿಯನ್ನು ವಿಸ್ತರಿಸುತ್ತಿದ್ದಂತೆ, ‘ಹರ್ ಘರ್ ಕಿಸ್ನಾ'ದ ನಮ್ಮ ದೃಷ್ಟಿಯನ್ನು ಬಲಪಡಿಸುವುದರ ಜೊತೆಗೆ ಉತ್ತಮವಾಗಿ ರಚಿಸಲಾದ ವಜ್ರ ಮತ್ತು ಚಿನ್ನದ ಆಭರಣಗಳನ್ನು ನೀಡಲು ನಾವು ಬದ್ಧರಾಗಿ ದ್ದೇವೆ

ಗವಿಗಂಗಾಧರೇಶ್ವರನನ್ನು ಸ್ಪರ್ಶಿಸಿದ ಸೂರ್ಯ ರಶ್ಮಿ; ಮಕರ ಸಂಕ್ರಾಂತಿಯಂದು ಜರುಗಿತು ವಿಸ್ಮಯ

ಗವಿಗಂಗಾಧರೇಶ್ವರನನ್ನು ಸ್ಪರ್ಶಿಸಿದ ಸೂರ್ಯ ರಶ್ಮಿ

ಮಕರ ಸಂಕ್ರಾಂತಿಯಂದು ಪ್ರಕೃತಿಯ ವಿಸ್ಮಯ ನಡೆದಿದ್ದು, ಬೆಂಗಳೂರಿನ ಗವಿಪುರಂ ಗುಟ್ಟಹಳ್ಳಿಯಲ್ಲಿರುವ ಗವಿಗಂಗಾಧರೇಶ್ವರ ದೇವಸ್ಥಾನದ ಶಿವಲಿಂಗವನ್ನು ಸೂರ್ಯರಶ್ಮಿ ಸ್ಪರ್ಶಿಸಿದೆ. ಈ ಪುನೀತ ಕ್ಷಣವನ್ನು ಕಣ್ತುಂಬಿಕೊಂಡು ನೆರೆದಿದ್ದ ನೂರಾರು ಮಂದಿ ಪುನೀತರಾಗಿದ್ದಾರೆ. ದೇವಸ್ಥಾನದ ಆವರಣದಲ್ಲಿ ಎಲ್‌ಇಡಿ ಸ್ಕ್ರೀನ್​​ ವ್ಯವಸ್ಥೆ ಮಾಡಲಾಗಿಯಿತು.

ಮಂಗಳೂರಿನಲ್ಲಿ ಪ್ಯಾಲಿಯೇಟಿವ್ ಕೇರ್‌ಗಾಗಿ 5 ಲಕ್ಷಕ್ಕೂ ಅಧಿಕ ನಿಧಿ ಸಂಗ್ರಹಿಸಿದ ಹಸೀನಾ ಥೆಮಾಲಿ!

ಮಂಗಳೂರಿನಲ್ಲಿ ಪ್ಯಾಲಿಯೇಟಿವ್ ಕೇರ್‌ಗಾಗಿ 5 ಲಕ್ಷ ರು ನಿಧಿ ಸಂಗ್ರಹ!

ಓಟಗಾರ್ತಿ ಹಾಗೂ ಕೋಚ್ ಆಗಿರುವ ಹಸೀನಾ ಥೆಮಾಲಿ ಅವರು ಟಾಟಾ ಮುಂಬೈ ಮ್ಯಾರಥಾನ್ (TMM) 2026ರಲ್ಲಿ ಮೊದಲ ಬಾರಿಗೆ ನಿಧಿ ಸಂಗ್ರಾಹಕರಾಗಿ ಭಾಗವಹಿಸಿ ₹5,01,001 ಮೊತ್ತವನ್ನು ಸಂಗ್ರಹಿಸಿದ್ದಾರೆ. ಈ ನಿಧಿ ಸಂಗ್ರಹವು ಅಂತಿಮ ಹಂತದ ಕ್ಯಾನ್ಸರ್ ರೋಗಿಗಳಿಗೆ ಉಚಿತ ಹಾಗೂ ಮಾನವೀಯ ಸೇವೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.

ರಾಜ್ಯ ಈಗ ಕೈಗಾರಿಕಾ ಸ್ನೇಹಿ; 11 ತಿಂಗಳಲ್ಲಿ 4.71 ಲಕ್ಷ ಕೋಟಿ ರುಪಾಯಿ ಹೂಡಿಕೆ: ಲೆಕ್ಕ ಮುಂದಿಟ್ಟ ಸಚಿವ ಎಂ.ಬಿ. ಪಾಟೀಲ್‌

11 ತಿಂಗಳಲ್ಲಿ 4.71 ಲಕ್ಷ ಕೋಟಿ ರುಪಾಯಿ ಹೂಡಿಕೆ: ಎಂ.ಬಿ. ಪಾಟೀಲ್‌

MB Patil: 2025ರ ಫೆಬ್ರವರಿಯಲ್ಲಿ ನಡೆಸಿದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ 10.27 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆಯ ಖಾತ್ರಿ ಸಿಕ್ಕಿತ್ತು. ಈ ಪೈಕಿ ಡಿಸೆಂಬರ್ ಕೊನೆಯ ಹೊತ್ತಿಗೆ 4.71 ಲಕ್ಷ ಕೋಟಿ ರೂ. ನೈಜ ಹೂಡಿಕೆ ಆಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.

ದೇವಸ್ಥಾನಕ್ಕೆ 16 ಲಕ್ಷ ರುಪಾಯಿಯ ಬೆಳ್ಳಿ ಬಾಗಿಲು ಮಾಡಿಸಿದ್ದ ದಾನಜ್ಜಿಯ ಭೀಕರ ಕೊಲೆ; ಆಸ್ತಿಗಾಗಿ ಸಂಬಂಧಿಕರಿಂದಲೇ ಕೃತ್ಯ

ಬಾಗಲಕೋಟೆ ದಾನಜ್ಜಿಯ ಭೀಕರ ಕೊಲೆ

Bagalkot News: ಪರೋಪಕಾರಿ ಗುಣದಿಂದ ದಾನಜ್ಜು ಎಂದೇ ಖ್ಯಾತರಾಗಿದ್ದ ಬಾಗಲಕೋಟೆ ಜಿಲ್ಲೆಯ ಜಗದಾಳ ಗ್ರಾಮದ 80 ವರ್ಷದ ವೃದ್ಧೆ ಚಂದ್ರವ್ವ ನೀಲಗಿ ಅವರನ್ನು ಅಣ್ಣನ ಮಕ್ಕಳೇ ಆಸ್ತಿಗಾಗಿ ಹತ್ಯೆ ಮಾಡಿದ್ದಾರೆ. 11 ಎಕರೆ ಆಸ್ತಿಗಾಗಿ ಈ ಅಮಾನವೀಯ ಕೃತ್ಯ ಎಸಗಲಾಗಿದೆ.

Murder Case: ಕೋಲಾರ: ಪ್ರೀತಿಗೆ ಒಪ್ಪದ ವಿವಾಹಿತೆಯನ್ನು ಇರಿದು ಕೊಂದ ಎರಡು ಮಕ್ಕಳ ತಂದೆ!

ಪ್ರೀತಿಗೆ ಒಪ್ಪದ ವಿವಾಹಿತೆಯನ್ನು ಇರಿದು ಕೊಂದ ಎರಡು ಮಕ್ಕಳ ತಂದೆ!

ಇಂಡಸ್ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಚಿರಂಜೀವಿ ಸಾಲ ವಸೂಲಿ ಮಾಡಲು ತೆರಳಿದಾಗ ಸುಜಾತಾಳ ಪರಿಚಯವಾಗಿದೆ. ಈ ವೇಳೆ ನನ್ನನ್ನು ಪ್ರೀತಿಸುವಂತೆ ಚಿರಂಜೀವಿ, ಸುಜಾತಳ ಬೆನ್ನು ಬಿದ್ದಿದ್ದಾನೆ. ಆದರೆ ಸುಜಾತ ಇದಕ್ಕೆ ಒಪ್ಪಿಲ್ಲ. ದೂರ ಇರುವಂತೆ ಆತನಿಗೆ ಹಿತವಚನ ಹೇಳಿದ್ದಾರೆ. ಇದರಿಂದ ರೊಚ್ಚಿಗೆದ್ದ ಆತ ಆಕೆಯ ಕೊಲೆ ಮಾಡಿದ್ದಾನೆ.

'ಹಂಪಿ ಉತ್ಸವ'ಕ್ಕೆ ದಿನಾಂಕ ಫಿಕ್ಸ್‌; ಸ್ಥಳ ಪರಿಶೀಲಿಸಿದ ಸಚಿವ ಜಮೀರ್ ಅಹ್ಮದ್ ಖಾನ್

'ಹಂಪಿ ಉತ್ಸವ' ಮುಖ್ಯ ವೇದಿಕೆ ಸ್ಥಳ ಪರಿಶೀಲಿಸಿದ ಜಮೀರ್ ಅಹ್ಮದ್ ಖಾನ್

Hampi Utsav 2026: ಫೆಬ್ರವರಿ 13ರಿಂದ 3 ದಿನಗಳ ಕಾಲ ಅದ್ಧೂರಿಯಾಗಿ ಹಂಪಿ ಉತ್ಸವ 2026 ಆಚರಣೆ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಗುರುವಾರ ಉತ್ಸವ ನಡೆಯುವ ಮುಖ್ಯ ವೇದಿಕೆ, ವಾಹನಗಳ ನಿಲುಗಡೆ ಸ್ಥಳ ಪರಿಶೀಲನೆ ನಡೆಸಿದರು.

Pratap Simha: ನಾನು ಚಾಮರಾಜ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ: ಪ್ರತಾಪ್ ಸಿಂಹ ಪ್ರಕಟ

ನಾನು ಚಾಮರಾಜ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ: ಪ್ರತಾಪ್ ಸಿಂಹ ಪ್ರಕಟ

ಅಭ್ಯರ್ಥಿ ಯಾರು ಎಂದು ನಮ್ಮ ಪಕ್ಷ ನಿರ್ಧಾರ ಮಾಡುತ್ತದೆ. ವಾಸು ಎಚ್ಎಸ್, ಶಂಕರಲಿಂಗೇಗೌಡ ಹಾದಿಯಲ್ಲಿ ನಾನು ನಡೆಯುತ್ತೇನೆ. ಮುಂದೆ ನಾನು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ. ಚಾಮರಾಜ ಕ್ಷೇತ್ರದ ಜನ ವಿದ್ಯಾವಂತ ಪ್ರತಿನಿಧಿ ಬಯಸುತ್ತಾರೆ ಎಂದು ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದರು.

Cylinder Blast: ಗ್ಯಾಸ್‌ ಸಿಲಿಂಡರ್‌ ಸ್ಫೋಟ, ಬಾಂಗ್ಲಾದೇಶಿ ವಲಸಿಗರು ನೆಲೆಸಿದ್ದ ಶೆಡ್‌ಗಳು ಬೆಂಕಿಗಾಹುತಿ

ಸಿಲಿಂಡರ್‌ ಸ್ಫೋಟ, ಬಾಂಗ್ಲಾದೇಶಿ ವಲಸಿಗರ ಶೆಡ್‌ಗಳು ಬೆಂಕಿಗಾಹುತಿ

5 ಎಕ್ರೆ ಜಾಗದಲ್ಲಿ ಅಕ್ರಮವಾಗಿ ನೆಲೆಸಿದ್ದ ಇವರನ್ನು ಕೆಲ ದಿನಗಳ ಹಿಂದೆ ಸ್ಥಳದಿಂದ ಖಾಲಿ ಮಾಡಲಾಗಿತ್ತು. ಆದರೆ ರಾತ್ರೋರಾತ್ರಿ ಮತ್ತೆ ವಲಸಿಗರು ಇಲ್ಲಿಗೆ ಆಗಮಿಸಿ ಶೆಡ್‌ ಹಾಕಿದ್ದರು. ತಡರಾತ್ರಿ ಸಿಲಿಂಡರ್ ಸ್ಫೋಟದಿಂದ ಶೆಡ್‌ಗಳು ಹೊತ್ತಿ ಉರಿದಿದ್ದು ಆಗಸದೆತ್ತರಕ್ಕೆ ಬೆಂಕಿಯ ಕೆನ್ನಾಲಿಗೆ ಚಾಚಿದೆ. ವಿಚಾರ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಎರಡು ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದ್ದಾರೆ.

Karunya Ram: ಬೆಟ್ಟಿಂಗ್‌ ಆಡಿ ವಂಚನೆ: ತಂಗಿಯ ವಿರುದ್ಧವೇ ನಟಿ ಕಾರುಣ್ಯ ರಾಮ್‌ ದೂರು

ಬೆಟ್ಟಿಂಗ್‌ ಆಡಿ ವಂಚನೆ: ತಂಗಿಯ ವಿರುದ್ಧವೇ ನಟಿ ಕಾರುಣ್ಯ ರಾಮ್‌ ದೂರು

ಮೇಕಪ್ ಆರ್ಟಿಸ್ಟ್‌ ಆಗಿರುವ ಸಹೋದರಿ ಸಮೃದ್ಧಿ ರಾಮ್ ಅವರು ಬೆಟ್ಟಿಂಗ್ ಆಡಿ ಸುಮಾರು 25 ಲಕ್ಷ ರೂ. ಸಾಲ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ವ್ಯವಹಾರದಲ್ಲೂ ಅಪಾರ ನಷ್ಟ ಅನುಭವಿಸಿದ್ದಾರೆ. ಖಾಸಗಿ ವ್ಯಕ್ತಿಗಳಿಂದ ಸಾಲ ಪಡೆದಿದ್ದಾರೆ. ಹೀಗಾಗಿ ಮನೆಯಲ್ಲಿದ್ದ ಚಿನ್ನ ಹಾಗೂ ಹಣವನ್ನು ಸಾಲ ತೀರಿಸಲು ಬಳಸಿಕೊಂಡು ವಂಚಿಸಿದ್ದಾರೆ ಎಂದು ನಟಿ ದೂರು ನೀಡಿದ್ದಾರೆ.

Makara Sankranti 2026: ಮಕರ ಸಂಕ್ರಾಂತಿ ಸಂಭ್ರಮ: ದುಬಾರಿ ದುನಿಯಾ ನಡುವೆಯೂ ಖರೀದಿ ಜೋರು

ಮಕರ ಸಂಕ್ರಾಂತಿ ಸಂಭ್ರಮ: ದುಬಾರಿ ದುನಿಯಾ ನಡುವೆಯೂ ಖರೀದಿ ಜೋರು

ಸಿಲಿಕಾನ್ ಸಿಟಿ ಜನ ಸಹ ಹಬ್ಬಕ್ಕಾಗಿ ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದಾರೆ. ಹಬ್ಬದ ಖರೀದಿ ಕೂಡ ಬಲು ಜೋರಾಗಿದೆ. ಆದರೆ ಹೂ, ಹಣ್ಣು, ಕಬ್ಬುಗಳ ಬೆಲೆ ಗ್ರಾಹಕರ ಜೇಬು ಸುಡುತ್ತಿದೆ. ಕೆಆರ್ ಮಾರುಕಟ್ಟೆ, ಯಶವಂತಪುರ, ಬಸವನಗುಡಿ, ವಿಜಯನಗರ, ಜಯನಗರ, ದಾಸರಹಳ್ಳಿ, ಕೆಆರ್ ಪುರ, ಮಲ್ಲೇಶ್ವರಂ ಸೇರಿದಂತೆ ವಿವಿಧ ಮಾರುಕಟ್ಟೆಗಳಲ್ಲಿ ಕಬ್ಬು, ಖರೀದಿ ಭರಾಟೆ ಜೋರಾಗಿದೆ.

Siddaramananda Swamiji: ಕಾಗಿನೆಲೆ ಕನಕಗುರು ಪೀಠದ ಶ್ರೀ ಸಿದ್ದರಾಮಾನಂದ ಸ್ವಾಮೀಜಿ ಇನ್ನಿಲ್ಲ

ಕಾಗಿನೆಲೆ ಕನಕಗುರು ಪೀಠದ ಶ್ರೀ ಸಿದ್ದರಾಮಾನಂದ ಸ್ವಾಮೀಜಿ ಇನ್ನಿಲ್ಲ

ಸ್ವಾಮೀಜಿ (Siddaramananda Swamiji) ಇದೇ ಜ.12, 13, 14 ರಂದು ಅದ್ದೂರಿಯಾಗಿ ಹಾಲುಮತ ಸಂಸ್ಕೃತಿ ವೈಭವ ಕಾರ್ಯಕ್ರಮ ನಡೆಸಿದ್ದರು. ಹಾಲುಮತ ಸಾಹಿತ್ಯ ಸಮ್ಮೇಳನ ಹಾಗೂ ಹಾಲುಮತ (Halumatha) ಪೂಜಾರಿಗಳ ಶಿಬಿರ ಅದ್ದೂರಿಯಾಗಿ ನಡೆದಿತ್ತು. ಕಳೆದ ಒಂದು ವಾರದಿಂದ ಸರಿಯಾಗಿ ಊಟ, ನಿದ್ದೆ ಮಾಡದೇ ಕಾರ್ಯಕ್ರಮಲ್ಲಿ ಭಾಗಿಯಾಗಿದ್ದರಿಂದ ಬುಧವಾರ ರಾತ್ರಿ ಲೋ ಬಿಪಿಯಿಂದ ಸ್ವಾಮೀಜಿ ಬಳಲಿದ್ದರು.

Murder case: ಬಾಲಕನ ಕೊಲೆ, ಹತ್ಯೆಗೈದ ಮೂವರು ಅಪ್ರಾಪ್ತ ವಯಸ್ಕರು ಅರೆಸ್ಟ್

ಬಾಲಕನ ಕೊಲೆ, ಹತ್ಯೆಗೈದ ಮೂವರು ಅಪ್ರಾಪ್ತ ವಯಸ್ಕರು ಅರೆಸ್ಟ್

ಕೊಲೆಯಾದ ನಿಂಗರಾಜ್, ಅನುದಾನಿತ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಓದುತ್ತಿದ್ದ. ಕ್ಷುಲ್ಲಕ ವಿಚಾರವಾಗಿ ಜಗಳ ಮಾಡಿಕೊಂಡು ಮೂವರು ಅಪ್ರಾಪ್ತ ಬಾಲಕರು ಸೇರಿ ನಿಂಗರಾಜನನ್ನು ಕೊಲೆ ಮಾಡಿದ್ದಾರೆ. ಸದ್ಯ ಪೊಲೀಸರು ಮೂವರು ಅಪ್ರಾಪ್ತರನ್ನು ಆರೆಸ್ಟ್ ಮಾಡಿದ್ದಾರೆ. ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Namma Metro: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ, ಇಂದಿನಿಂದ ಅನ್‌ಲಿಮಿಟೆಡ್‌ ಪಾಸ್‌

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಇಂದಿನಿಂದ ಅನ್‌ಲಿಮಿಟೆಡ್‌ ಪಾಸ್‌

ಇದುವರೆಗೆ ಅನಿಯಮಿತ ಪ್ರಯಾಣ ಪಾಸ್‌ಗಳು, ಕೇವಲ ಕಾಂಟ್ಯಾಕ್ಟ್‌ಲೆಸ್ ಸ್ಮಾರ್ಟ್ ಕಾರ್ಡ್‌ಗಳ (ಸಿಎಸ್‌ಸಿ) ಮೂಲಕವೇ ಲಭ್ಯವಾಗುತ್ತಿದ್ದು, ₹50 ಭದ್ರತಾ ಠೇವಣಿ ಪಾವತಿಸುವುದು ಕಡ್ಡಾಯವಾಗಿತ್ತು. ಇದೀಗ ಮೊಬೈಲ್ ಕ್ಯೂಆರ್‌ ಕೋಡ್‌ ಪಾಸ್‌ಗಳ ಪರಿಚಯದೊಂದಿಗೆ, ಪಾಸ್‌ಗಳು ಮೊಬೈಲ್ ಫೋನ್‌ಗಳಲ್ಲಿ ಡಿಜಿಟಲ್ ರೂಪದಲ್ಲಿ ಲಭ್ಯವಾಗುತ್ತವೆ. ಪ್ರಯಾಣಿಕರಿಗೆ ಯಾವುದೇ ಭದ್ರತಾ ಠೇವಣಿ ಪಾವತಿಸುವ ಅಗತ್ಯವಿರುವುದಿಲ್ಲ.

Water Bell: ಇನ್ನುಮುಂದೆ ರಾಜ್ಯದ ಶಾಲೆಗಳಲ್ಲಿ ವಾಟರ್ ಬೆಲ್ ಕಡ್ಡಾಯ; ಸರ್ಕಾರ ಆದೇಶ

ರಾಜ್ಯದ ಶಾಲೆಗಳಲ್ಲಿ ವಾಟರ್ ಬೆಲ್ ಕಡ್ಡಾಯ; ಸರ್ಕಾರ ಆದೇಶ

ದೇಶದಲ್ಲಿ ಕೇರಳದ ಶಾಲೆಗಳಲ್ಲಿ 2019ರಲ್ಲಿ ಮೊದಲ ಬಾರಿ ವಾಟರ್‌ ಬೆಲ್‌ ವ್ಯವಸ್ಥೆ ಪರಿಚಯಿಸಲಾಗಿತ್ತು. ಅದಾದ ನಂತರ ಕರ್ನಾಟಕ ಹಾಗೂ ತೆಲಂಗಾಣದಲ್ಲಿ ಶಾಲೆಗಳಲ್ಲಿ ವಾಟರ್‌ ಬೆಲ್‌ ಅಳವಡಿಸಿಕೊಳ್ಳಲಾಗಿತ್ತು. ಇದೀಗ ಈ ನಿಯಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಸಂಬಂಧ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.

Bengaluru Tunnel Road: ಸುರಂಗ ಮಾರ್ಗದಿಂದ ಲಾಲ್ ಬಾಗ್‌ಗೆ ಯಾವುದೇ ತೊಂದರೆ ಇಲ್ಲ: ಡಿ.ಕೆ. ಶಿವಕುಮಾರ್‌

ಸುರಂಗ ಮಾರ್ಗದಿಂದ ಲಾಲ್ ಬಾಗ್‌ಗೆ ಯಾವುದೇ ತೊಂದರೆ ಇಲ್ಲ: ಡಿಕೆಶಿ

ಬೆಂಗಳೂರಿನ ಲಾಲ್ ಬಾಗ್‌ನಲ್ಲಿ ಏರ್ಪಡಿಸಲಾಗಿರುವ ಫಲಪುಷ್ಪ ಪ್ರದರ್ಶನ ಉದ್ಘಾಟನೆ ವೇಳೆ ಡಿಸಿಎಂ ಡಿ.ಕೆ. ಶಿವಕುಮಾರ್ ಮಾತನಾಡಿದ್ದಾರೆ. ಬೆಂಗಳೂರು ಉತ್ತರ ಭಾಗದಲ್ಲಿ ಅರಣ್ಯ ಇಲಾಖೆ ಜಾಗದಲ್ಲಿ ಬಸವಣ್ಣನವರ ಹೆಸರಿನಲ್ಲಿ ಲಾಲ್ ಬಾಗ್ ಮಾದರಿ ಉದ್ಯಾನ ನಿರ್ಮಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಇನ್ನು ಬೆಂಗಳೂರಿನ ದಕ್ಷಿಣ ಭಾಗದಲ್ಲೂ ಇದೇ ಮಾದರಿ ಉದ್ಯಾನ ನಿರ್ಮಿಸಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದ್ದಾರೆ.

Loading...