ಮೈಸೂರು ರೇಷ್ಮೆ ಸೀರೆಗೆ ಭಾರಿ ಡಿಮ್ಯಾಂಡ್, ಆನ್ಲೈನ್ ಮಾರಾಟಕ್ಕೆ ಬ್ರೇಕ್
ಕೆಎಸ್ಐಸಿ ಪ್ರತಿದಿನ ಸರಾಸರಿ 350 ರಿಂದ 400 ಸೀರೆಗಳನ್ನು ತಯಾರಿಸುತ್ತಿದೆ. ಆದರೆ ರಾಜ್ಯದ ಜನರು, ವಿಶೇಷವಾಗಿ ಸ್ಥಳೀಯ ಗ್ರಾಹಕರು, ಹೆಚ್ಚಿನ ಸಂಖ್ಯೆಯಲ್ಲಿ ಅಂಗಡಿಗಳಿಗೆ ಭೇಟಿ ನೀಡುತ್ತಿರುವುದರಿಂದ ಪೂರೈಕೆಯನ್ನು ಸಮರ್ಪಕವಾಗಿ ನಿರ್ವಹಿಸುವುದು ಸವಾಲಾಗುತ್ತಿದೆ. ಈ ಕಾರಣದಿಂದಾಗಿ, ಕೆಲವು ಸಮಯದವರೆಗೆ ಆನ್ಲೈನ್ ಆರ್ಡರ್ ಸ್ಥಗಿತಗೊಳಿಸಲು ಚಿಂತನೆ ನಡೆಸಲಾಗುತ್ತಿದೆ.