ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕರ್ನಾಟಕ

Chikkaballapur News: ಸದಾಕಾಲ ಗುರುಚಿಂತನೆ ಮಾಡುವವರು ಸಹಜಯೋಗಿಗಳು: ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್

ಸದಾಕಾಲ ಗುರುಚಿಂತನೆ ಮಾಡುವವರು ಸಹಜಯೋಗಿಗಳು

ಆಡಂಬರದಿಂದ ಮುಕ್ತಿಯನ್ನು ಸಾಧಿಸಲು ಸಾಧ್ಯವಿಲ್ಲ. ಮುಕ್ತಿಗೆ ಬೇಕಾದುದು ತತ್ವ ಚಿಂತನೆ, ಭಕ್ತಿಯ ಸಮರ್ಪಣೆ, ನಿರಂತರ ಸಾಧನೆ ಮಾತ್ರ. ಗುರು ಉಪದೇಶದಲ್ಲಿ ಧೃಡವಾದ ನಂಬಿಕೆ ಯುಳ್ಳ ಗುರುಭಕ್ತನು ಮಾತ್ರವೇ ಸಾಧನ ಮಾರ್ಗದಲ್ಲಿ ಮುಂದುವರಿದು ಮುಕ್ತಿಯನ್ನು ಪಡೆಯ ಬಲ್ಲ. ಪ್ರತಿನಿತ್ಯವೂ ಉಸಿರಾಟದಲ್ಲಿಯೇ ಗುರುಸ್ಮರಣೆ ಮಾಡುವಂತಹ ಸಾಧನೆ ಮಾಡಬೇಕು. ಗುರುಪಾದದ ಚಿಂತನೆ ಇರಬೇಕು.

MNarega Bajau Movement: ಚಿಕ್ಕಬಳ್ಳಾಪುರ ನರೇಗಾ ಬಚಾವ್ ಆಂದೋಲನಕ್ಕೆ ವೇದಿಕೆ ಸಜ್ಜು: ಎಲ್ಲೆಲ್ಲೂ ಕಾರ್ಯಕ್ರಮದ್ದೇ ಗುಲ್ಲು

ಚಿಕ್ಕಬಳ್ಳಾಪುರ ನರೇಗಾ ಬಚಾವ್ ಆಂದೋಲನಕ್ಕೆ ವೇದಿಕೆ ಸಜ್ಜು

ಕೇಂದ್ರ ಸರಕಾರ ಜಾರಿಗೆ ತಂದಿರುವ ವಿಬಿಜಿರಾಮ್‌ಜಿ(VBG Ramji) ಯೋಜನೆ ವಿರೋಧಿಸಿ ನಡೆಯಲಿರುವ ನರೇಗಾ ಬಚಾವ್ ಆಂದೋಲನಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳು ಮುಗಿದಿದ್ದು ಕೆಪಿಸಿಸಿ ಕಾರ್ಯಾಧ್ಯಕ್ಷ ಚಂದ್ರಶೇಖರ್ ಮತ್ತು ತಂಡದ ಉಸ್ತುವಾರಿಯಲ್ಲಿ, ಜಿಲ್ಲಾ ಉಸ್ತು ವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರೇ ಇದರ ನೇತೃತ್ವ ವಹಿಸಿದ್ದು ಎಲ್ಲೂ ಅಚಾತುರ್ಯ ವಾಗದಂತೆ ನೋಡಿಕೊಳ್ಳುತ್ತಿದ್ದರು

MP Dr. K. Sudhakar: ಕಾಂಗ್ರೆಸ್‌ನಿಂದ ನರೇಗಾ ಬಚಾವೋ ಅಲ್ಲ ಕರ್ನಾಟಕ ಬಚಾವೋ" ಆಂದೋಲನದ ಅಗತ್ಯ ಇದೆ : ಸಂಸದ ಡಾ.ಕೆ.ಸುಧಾಕರ್

ಕಾಂಗ್ರೆಸ್‌ನಿಂದ ಕರ್ನಾಟಕ ಬಚಾವೋ" ಆಂದೋಲನದ ಅಗತ್ಯ ಇದೆ

ಪ್ರಧಾನಿ ನರೇಂದ್ರ ಮೋದಿ ಮನರೇಗಾ ಯೋಜನೆಗೆ ಹೊಸ ರೂಪ ನೀಡಿ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ), ಇದನ್ನು ಸಂಕ್ಷಿಪ್ತ ವಾಗಿ ವಿಬಿ ಜಿ ರಾಮ್ ಜಿ ಎಂದು ಕರೆಯುತ್ತಾರೆ. ಇದರಲ್ಲಿ ಮಹಾತ್ಮ ಗಾಂಧೀಜಿ ಹೆಸರು ತೆಗೆದು ಹಾಕಿದ್ದಾರೆ ಎಂಬುದು ಕಾಂಗ್ರೆಸ್ ಆರೋಪ ಕಳೆದ 60 ವರ್ಷಗಳಲ್ಲಿ 400 ಕ್ಕೂ ಅಧಿಕ ಯೋಜನೆಗಳಿಗೆ, ಸಂಸ್ಥೆಗಳಿಗೆ ನೆಹರು, ರಾಜೀವ್ ಗಾಂಧಿ, ಇಂದಿರಾಗಾಂಧಿ, ಸಂಜಯಗಾಂಧಿ ಹೆಸರು ನಾಮಕರಣ ಮಾಡಿದ್ದಾರೆ. ಆಗ ಇವರಿಗೆ ಮಹಾತ್ಮ ಗಾಂಧೀಜಿಯ ನೆನಪಾಗಲೇ ಇಲ್ಲ

ದೇವರೇ ನನ್ನ ಅತ್ತೆ ಸಾಯಲಿ; ಬೆಳಗಾವಿಯ ಹುಲಿಕಾಂತೇಶ್ವರನಿಗೆ ಸೊಸೆಯಿಂದ ಹರಕೆ ಚೀಟಿ!

ನನ್ನ ಅತ್ತೆ ಸಾಯಲಿ; ಬೆಳಗಾವಿಯ ಹುಲಿಕಾಂತೇಶ್ವರನಿಗೆ ವಿಚಿತ್ರ ಹರಕೆ ಚೀಟಿ!

ಬೆಳಗಾವಿ ಜಿಲ್ಲೆಯ ಮುಗಳಖೋಡ ಪಟ್ಟಣ ಸಮೀಪದ ಖಣದಾಳ ಗ್ರಾಮದ ಹುಲಿಕಾಂತೇಶ್ವರ ದೇವರ ಹುಂಡಿಯಲ್ಲಿ ವಿಚಿತ್ರ ಹರಕೆ ಚೀಟಿ ಪತ್ತೆಯಾಗಿದೆ. 'ದೇವರೇ ನನ್ನ ಕಷ್ಟ ದೂರ ಮಾಡಿ, ಮುಂದಿನ ಜಾತ್ರೆಯೊಳಗೆ ನನ್ನ ಅತ್ತೆ ಸಾಯಲಿ' ಎಂದು ಹರಕೆ ಚೀಟಿಯಲ್ಲಿ ಬರೆಯಲಾಗಿದೆ. ಸದ್ಯ ಈ ಚೀಟಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

Bribery Case: ಬಿಜೆಪಿ ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?; ಸ್ವಾಮೀಜಿ ಆಡಿಯೊ ವೈರಲ್!

ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?; ಆಡಿಯೊ ವೈರಲ್

ಶಿರಹಟ್ಟಿ ತಾಲೂಕಿನ ಆದರಹಳ್ಳಿ ಕುಮಾರ ಮಹಾರಾಜ ಸ್ವಾಮೀಜಿ ಹಾಗೂ ಬಿಜೆಪಿ ಕಾರ್ತಕರ್ತರೊಬ್ಬರು ಮಾತನಾಡಿದ್ದಾರೆ ಎನ್ನಲಾದ ಆಡಿಯೊ ವೈರಲ್ ಆಗಿದೆ. ತಮ್ಮದೇ ಸಮುದಾಯದ ಶಾಸಕರ ವಿರುದ್ಧ ಬಂಜಾರ ಸಮಾಜದ ಸ್ವಾಮೀಜಿ ಷಡ್ಯಂತ್ರ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

World Social Justice Day: ವಾಹನ ಚಾಲಕರು ವಾಹನ ಚಲಾಯಿಸುವಾಗ ಜವಾಬ್ದಾರಿಯಿಂದ ಚಲಾಯಿಸಬೇಕು

ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ ಅಂಗವಾಗಿ ರಸ್ತೆ ಸುರಕ್ಷತಾ ಕಾರ್ಯಕ್ರಮ

ಲಿಂಗ ಅಸಮಾನತೆ, ನಿರುದ್ಯೋಗ, ಮಾನವ ಹಕ್ಕುಗಳು ಮತ್ತು ಸಾಮಾಜಿಕ ರಕ್ಷಣೆಗಳಂತಹ ಸಮಸ್ಯೆಗಳನ್ನು ನಿಭಾಯಿಸಿ, ಸಾಮಾಜಿಕ ನ್ಯಾಯವನ್ನು ಉತ್ತೇಜಿಸುವ ಉದ್ದೇಶದಿಂದ ವಿಶ್ವ ಸಾಮಾಜಿಕ ನ್ಯಾಯ ದಿನವನ್ನು ಆಚರಿಸಲಾಗುತ್ತದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ ಸಿ ನ್ಯಾಯಾಧೀಶರಾದ ಶಕುಂತಲಾ ಆರ್ ( Principal Civil Judge and JMF C Judge Shakuntala R.) ರವರು ಹೇಳಿದರು

ರಟ್ಟೀಹಳ್ಳಿಯಲ್ಲಿ ದನದ ಕೊಟ್ಟಿಗೆಗೆ ಬೆಂಕಿ; ಎಮ್ಮೆ, ಎರಡು ಎತ್ತು, ಮೂರು ಆಕಳು ಸಜೀವ ದಹನ

ರಟ್ಟೀಹಳ್ಳಿಯಲ್ಲಿ ದನದ ಕೊಟ್ಟಿಗೆಗೆ ಬೆಂಕಿ; ಜಾನುವಾರು ಸಜೀವ ದಹನ

Haveri News: ಹಾವೇರಿ ಜಿಲ್ಲೆ ರಟ್ಟೀಹಳ್ಳಿ ತಾಲೂಕಿನ ಕಣವಿಸಿದ್ಗೇರಿ ಗ್ರಾಮದಲ್ಲಿ ಅವಘಡ ನಡೆದಿದೆ. ಸಿದ್ಲಿಂಗಪ್ಪ ಶಿವಪ್ಪ ಭಾನುವಳ್ಳಿ ಎಂಬುವರ ದನದ ಕೊಟ್ಟಿಗೆಗೆ ಬೆಂಕಿ ತಗುಲಿದ್ದು, ಈ ವೇಳೆ ಒಂದು ಎಮ್ಮೆ, ಎರಡು ಎತ್ತು, ಮೂರು ಆಕಳು ಮೃತಪಟ್ಟಿವೆ. ಶಾಸಕ ಯು.ಬಿ.ಬಣಕಾರ ಮತ್ತು ಮಾಜಿ ಸಚಿವ ಬಿ.ಸಿ.ಪಾಟೀಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸಿದ್ದರಾಮಯ್ಯನವರೇ ಒಕ್ಕಲಿಗರ ಮೇಲೆ ಪ್ರೀತಿ ಪ್ರದರ್ಶನಕ್ಕೆ ಇದು ಸಕಾಲ, ಕೂಡಲೇ ಕುರ್ಚಿ ತ್ಯಜಿಸಿ: ಎಚ್‌.ಡಿ.ಕುಮಾರಸ್ವಾಮಿ

ಒಕ್ಕಲಿಗರ ಮೇಲೆ ಪ್ರೀತಿ ಪ್ರದರ್ಶನಕ್ಕೆ ಇದು ಸಕಾಲ, ಕುರ್ಚಿ ತ್ಯಜಿಸಿ

ಒಕ್ಕಲಿಗ ಸಮುದಾಯಕ್ಕೆ ಸಮರ್ಥ ನಾಯಕತ್ವ ನೀಡುವ ಕಾಂಗ್ರೆಸ್‌ ಉದಾರತೆಯನ್ನು ನಾನು ಸ್ವಾಗತಿಸುವೆ. ಈ ಉದಾರತೆ ನಿಮಗೂ ಬೇಕಲ್ಲವೇ? ಈಗ ನೀವು ಉದಾರತೆ ತೋರಬೇಕು. ಎರಡನೇ ಅವಧಿಗೆ ನೀವು ಸಿಎಂ ಆಗುವ ಮುನ್ನ ಅಗ್ರಿಮೆಂಟ್‌ ಆಗಿತ್ತಲ್ಲಾ, ಅದನ್ನು ಬಹಿರಂಗವಾಗಿ ಹೇಳುವ ಉದಾರತೆ ತೋರಿ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಇವತ್ತು ನಿಮಗೆ ಸಿಕ್ಕಿರುವ ಅಧಿಕಾರ ದೇವೇಗೌಡರ ದೇಣಿಗೆ: ಸಿದ್ದರಾಮಯ್ಯ ವಿರುದ್ಧ ಎಚ್‌ಡಿಕೆ ಕಿಡಿ

ಇವತ್ತು ನಿಮಗೆ ಸಿಕ್ಕಿರುವ ಅಧಿಕಾರ ದೇವೇಗೌಡರ ದೇಣಿಗೆ: ಎಚ್‌ಡಿಕೆ ಕಿಡಿ

ಸ್ವಜಾತಿ, ಕುಟುಂಬ ಎಂದು ದೇವೇಗೌಡರು ಅವರು ಆವತ್ತೇ ಭಾವಿಸಿದ್ದಿದ್ದರೆ ನೀವು ಹಣಕಾಸು ಮಂತ್ರಿ ಆಗುವುದಿರಲಿ, ಅಟ್‌ಲೀಸ್ಟ್ ಒಂದು ನಿಗಮದ ಅಧ್ಯಕ್ಷಗಿರಿಯೂ ದಕ್ಕುತ್ತಿರಲಿಲ್ಲ. ನೀವು ಹೇಳಿದಂತೆ ಕುಟುಂಬವೇ ಮಿಗಿಲು ಎಂದು ಗೌಡರು ಭಾವಿಸಿದ್ದಿದ್ದರೆ ಈ ಪಟ್ಟಿಯಲ್ಲಿನ ಒಬ್ಬರೂ ಶಾಸಕ, ಮಂತ್ರಿ, ಎಂಪಿ ಆಗುತ್ತಲೇ ಇರಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.

Ecofluence 3.0: ಬೆಂಗಳೂರಿನ ಪ್ರತಿಷ್ಠಿತ ಇಂಡಸ್ ಬಿಸಿನೆಸ್ ಅಕಾಡೆಮಿಯ 'ಇಕೋಫ್ಲುಯೆನ್ಸ್ 3.0' ಅಂತರರಾಷ್ಟ್ರೀಯ ಸಮ್ಮೇಳನ

ಇಂಡಸ್ ಬಿಸಿನೆಸ್ ಅಕಾಡೆಮಿಯ 'ಇಕೋಫ್ಲುಯೆನ್ಸ್ 3.0' ಅಂತರರಾಷ್ಟ್ರೀಯ ಸಮ್ಮೇಳನ

ಇಂಡಸ್ ಬಿಸಿನೆಸ್ ಅಕಾಡೆಮಿಯು ಇಂಡಿಯನ್ ಎಕನಾಮಿಕ್ ಅಸೋಸಿ ಯೇಷನ್ ​​(ಐಇಎ), ಅಸೋಸಿಯೇಷನ್ ​​ಆಫ್ ಇಂಡಿಯನ್ ಮ್ಯಾನೇಜ್‌ಮೆಂಟ್ ಸ್ಕೂಲ್ಸ್ (ಎಐಎಂಎಸ್) ಸಹಯೋಗ ದೊಂದಿಗೆ ಮತ್ತು ಎಎಮ್‌ಡಿಎಸ್‌ಎ ಬೆಂಬಲದೊಂದಿಗೆ ಜಂಟಿಯಾಗಿ ಆಯೋಜಿಸಿದ ಅಂತರ ರಾಷ್ಟ್ರೀಯ ಸಮ್ಮೇಳನ ಇಕೋಫ್ಲುಯೆನ್ಸ್ 3.0 ಅನ್ನು ತನ್ನ ಕ್ಯಾಂಪಸ್ಸಿನ ಸಭಾಂಗಣದಲ್ಲಿ ಯಶಸ್ವಿಯಾಗಿ ಆರಂಭಿಸಿತು.

ಲಂಚ ಪ್ರಕರಣ; ಶಾಸಕ ಚಂದ್ರು ಲಮಾಣಿಗೆ ಮಾ.2ರವರೆಗೆ ನ್ಯಾಯಾಂಗ ಬಂಧನ

ಬಿಜೆಪಿ ಶಾಸಕ ಚಂದ್ರು ಲಮಾಣಿಗೆ ಮಾ.2ರವರೆಗೆ ನ್ಯಾಯಾಂಗ ಬಂಧನ

1 ಕೋಟಿ ರೂ. ವೆಚ್ಚದ ಚೆಕ್‌ ಡ್ಯಾಂ ನಿರ್ಮಾಣ ಹಾಗೂ ತಡೆಗೋಡೆ ಕಾಮಗಾರಿ ನಡೆಸಲು 11 ಲಕ್ಷ ರೂ. ಕಮಿಷನ್‌ ನೀಡಬೇಕೆಂದು ಶಾಸಕ ಚಂದ್ರು ಲಮಾಣಿ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಅದರಂತೆ ಲಂಚ ಸ್ವೀಕರಿಸುವಾಗ ಶನಿವಾರ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದರು.

Mann Ki Baat: ವಿದೇಶಗಳಿಗೆ ರಫ್ತು; ಮನ್‌ ಕಿ ಬಾತ್‌ನಲ್ಲಿ ನಂಜನಗೂಡು ರಸಬಾಳೆ, ಮೈಸೂರು ವೀಳ್ಯದೆಲೆ, ಇಂಡಿ ನಿಂಬೆ ಬಗ್ಗೆ ಪ್ರಧಾನಿ ಮೋದಿ ಪ್ರಶಂಸೆ

ಮನ್‌ ಕಿ ಬಾತ್‌ನಲ್ಲಿ ನಂಜನಗೂಡು ರಸಬಾಳೆ ಬಗ್ಗೆ ಪ್ರಧಾನಿ ಮೋದಿ ಪ್ರಶಂಸೆ

ದೇಶದ ರೈತರು ಸಾಂಪ್ರದಾಯಿಕ ಕೃಷಿಯ ಜತೆ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕ ಕೃಷಿ ಉತ್ಪನ್ನಗಳ ಮಾರುಕಟ್ಟೆಯನ್ನು ವಿಸ್ತರಿಸುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಅವರು ಮನ್‌ ಕಿ ಬಾತ್‌ನಲ್ಲಿ ಹೇಳಿದ್ದು, ಭಾರತದ ಕೃಷಿ ಉತ್ಪನ್ನಗಳ ರಫ್ತಿನಲ್ಲಿ ಹೆಚ್ಚಳವಾಗುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನೆಲಮಂಗಲದ ವಿಪ್ರೋ ಎಂಟರ್‌ಪ್ರೈಸಸ್ ಗೋದಾಮಿನಲ್ಲಿ ಭೀಕರ ಅಗ್ನಿ ಅವಘಡ; ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಭಸ್ಮ

ನೆಲಮಂಗಲದ ವಿಪ್ರೋ ಎಂಟರ್‌ಪ್ರೈಸಸ್ ಗೋದಾಮಿನಲ್ಲಿ ಭೀಕರ ಅಗ್ನಿ ಅವಘಡ

ಮಾದನಾಯಕನಹಳ್ಳಿ ಪೊಲೀಸ್ ವ್ಯಾಪ್ತಿಯಲ್ಲಿ ಅಗ್ನಿ ಅವಘಡ ನಡೆದಿದೆ. ಬೆಂಕಿಗಾಹುತಿಯಾದ ಗೋದಾಮಿನಲ್ಲಿ ಸಾಬೂನು, ಸೋಪು ಪುಡಿ ಸೇರಿ ವಿವಿಧ ರೀತಿಯ ವಸ್ತುಗಳನ್ನಿಟ್ಟಿಡಲಾಗಿತ್ತು. ಪ್ರಾಥಮಿಕ ವರದಿಗಳ ಪ್ರಕಾರ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.

ಆಮಿಷವೊಡ್ಡಿ 9 ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿ ಬಂಧನ

ಆಮಿಷವೊಡ್ಡಿ 9 ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ

ರಾಜ್ಯದಲ್ಲಿ ಮತ್ತೊಂದು ಬೆಚ್ಚಿ ಬೀಳಿಸುವಂತಹ ಘಟನೆ ನಡೆದಿದ್ದು, ಚಾಕೊಲೇಟ್ ನೀಡುವುದಾಗಿ ಬಾಲಕಿಯನ್ನು ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಬೆಂಗಳೂರಿನ ಆನೇಕಲ್ ಪೊಲೀಸ್ ಅಣಾ ವ್ಯಾಪ್ತಿಯಲ್ಲಿ ನಡೆದಿದೆ. ಆನೇಕಲ್ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಪೋಕ್ಸ್ ಕೇಸ್ ದಾಖಲಾಗಿದೆ.

​ಶಿರಸಿ: ಮಾರಿಕಾಂಬಾ ಜಾತ್ರಾ ಮಹೋತ್ಸವ: ಕಮತಗಿಯ ಶ್ರೀ ಗುರು ಹೊಳೆ ಹುಚ್ಚೇಶ್ವರ ನಾಟ್ಯ ಸಂಘ'ದಿಂದ ನಾಟಕ ಪ್ರದರ್ಶನ

ಕಮತಗಿಯ ಶ್ರೀ ಗುರು ಹೊಳೆ ಹುಚ್ಚೇಶ್ವರ ನಾಟ್ಯ ಸಂಘ'ದಿಂದ ನಾಟಕ ಪ್ರದರ್ಶನ

ಕಳೆದ ಬಾರಿ 'ಗಂಡನಿಗೆ ತಕ್ಕ ಹೆಂಡತಿ' ನಾಟಕದ ಮೂಲಕ ಜನಮನ ಗೆದ್ದಿದ್ದ ಈ ಸಂಸ್ಥೆಯು, ಈ ವರ್ಷ ವಿಕಾಸ ಆಶ್ರಮದ ಮೈದಾನದಲ್ಲಿ ನಿರ್ಮಿಸಲಾದ ಸುಸಜ್ಜಿತ ರಂಗಮಂದಿರದಲ್ಲಿ ತನ್ನ ಪ್ರದರ್ಶನಗಳನ್ನು ನೀಡಲಿದೆ ಎಂದು ನಾಟಕ ಸಂಘದ ಮಾಲೀಕ ಪಾಪು ಕಲ್ಲೂರ್ ಹಾಗೂ ವ್ಯವಸ್ಥಾಪಕ ಶರತ್ ತಿಳಿಸಿದರು.

ಮಗುವಿನ ಮೊದಲ ಮಾತೇ ಮಾತೃಭಾಷೆ: ತಾಲ್ಲೂಕು ಕಸಾಪ ಅಧ್ಯಕ್ಷ ಯಲುವಹಳ್ಳಿ ಸೊಣ್ಣೇಗೌಡ

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ವಿಶ್ವ ಮಾತೃಭಾಷಾ ದಿನಾಚರಣೆ

ಕನ್ನಡ ತಾಯಿ ತನ್ನ ಕಂದನೊಂದಿಗೆ ಸಂವಹನ ಮಾಡುವ ಭಾಷೆಯೇ ಮಾತೃಭಾಷೆ. ಜಗತ್ತಿನಲ್ಲಿ ಈಗ ಏಳು ಸಾವಿರಕ್ಕೂ ಹೆಚ್ಚಿನ ಭಾಷೆಗಳಿದ್ದು,ಪ್ರತಿ 30 ರಿಂದ 40 ಕಿಲೋ ಮೀಟರ್ ಗೆ ಭಾಷೆಯ ಶೈಲಿಯಲ್ಲಿ ವಿಭಿನ್ನತೆಯಿರುತ್ತದೆ. ನೂರಾರು ಭಾಷೆಗಳು ಅಳಿದು ಹೋಗಿದ್ದು, ಹಲವಾರು ಭಾಷೆಗಳು ಅಳಿವಿನಂಚಿನಲ್ಲಿವೆ.ಭಾಷೆಯೆAದೆರೆ ಅದು ಬದುಕು ಸಂಸ್ಕೃತಿಯ ಸಾರ

ಗ್ಯಾಲೇರಿಯಾ ಮಾಲ್‌ನಲ್ಲಿ ಈ ತಿಂಗಳಲ್ಲಿ ಪೋಷಕರಿಗೆ ಆಹ್ವಾನ

ಗ್ಯಾಲೇರಿಯಾ ಮಾಲ್‌ನಲ್ಲಿ ಈ ತಿಂಗಳಲ್ಲಿ ಪೋಷಕರಿಗೆ ಆಹ್ವಾನ

ಉತ್ತಮ ಗುಣಮಟ್ಟದ ರಿಯಲ್ ಎಸ್ಟೇಟ್ ಆಸ್ತಿಗಳ ಪ್ರಮುಖ ಜಾಗತಿಕ ಡೆವಲಪರ್ ಮತ್ತು ನಿರ್ವಾಹಕರಾದ ಬ್ರೂಕ್‌ಫೀಲ್ಡ್ ಪ್ರಾಪರ್ಟೀಸ್, ಯಲಹಂಕದಲ್ಲಿರುವ ತನ್ನ ಪ್ರೀಮಿಯಂ ಜೀವನಶೈಲಿ ಚಿಲ್ಲರೆ ತಾಣವಾದ ಗ್ಯಾಲೇರಿಯಾ ಮಾಲ್‌ನಲ್ಲಿ ಫೆಬ್ರವರಿಯನ್ನು ಅನುಭವಿಸಲು ಪೋಷಕರನ್ನು ಆಹ್ವಾನಿಸುತ್ತದೆ. ಸಕುರಾ ಹೂವುಗಳಿಂದ ಪ್ರೇರಿತವಾದ ಕ್ಯೋಟೋ ಲವ್ ಬ್ಲಾಸಮ್ ವಿಷಯದ ಅಲಂಕಾರದೊಂದಿಗೆ ಮಾಲ್ ಕನಸಿನ ಗುಲಾಬಿ ಸ್ವರ್ಗವಾಗಿ ರೂಪಾಂತರಗೊಳ್ಳುತ್ತದೆ

ಮಾಜಿ ಶಾಸಕ ಸುರೇಶ್ ಗೌಡ ಕಾರು ಅಪಘಾತ; ಮಣಿಪಾಲ ಆಸ್ಪತ್ರೆಗೆ  ದಾಖಲು

ಮಾಜಿ ಶಾಸಕ ಸುರೇಶ್ ಗೌಡ ಕಾರು ಅಪಘಾತ

ನಾಗಮಂಗಲದ ಜೆಡಿಎಸ್ ಮಾಜಿ ಶಾಸಕ ಸುರೇಶ್ ಗೌಡರು ಪ್ರಯಾಣಿಸುತ್ತಿದ್ದ ಕಾರು ಮಂಡ್ಯದ ಬೊಂತೆಕೊಪ್ಪಲು ಬಳಿ ಪಲ್ಟಿಯಾಗಿ ಅಪಘಾತಕ್ಕೀಡಾಗಿದೆ. ಅಪಘಾತದಲ್ಲಿ ಸುರೇಶ್ ಗೌಡರ ಕೈಗೆ ಹಾಗೂ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಕರಾವಳಿಯಲ್ಲಿ ಭಾರೀ ಮಳೆ ಎಚ್ಚರಿಕೆ; ಕೊಡಗು ಸೇರಿ 5 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​

ಕರಾವಳಿಯಲ್ಲಿ ಭಾರೀ ಮಳೆ ಎಚ್ಚರಿಕೆ

ರಾಜ್ಯದ ಹಲವೆಡೆ ಹವಾಮಾನದಲ್ಲಿ ಭಾರೀ ಬದಲಾವಣೆ ಉಂಟಾಗಿದೆ. ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಒಣಹವೆ ಇಂದೂ ಮುಂದುವರೆಯಲಿದ್ದು, ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಹಿನ್ನೆಲೆ 5 ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್​ ಸೂಚಿಸಿದೆ.

Virajpet MLA A S Ponnanna Interview: ನಾಯಕತ್ವದ ಬಗ್ಗೆ ಸಿಎಂ-ಡಿಸಿಎಂ ಮಧ್ಯೆ  ಚರ್ಚೆಯಾಗಿದೆ

ನಾಯಕತ್ವದ ಬಗ್ಗೆ ಸಿಎಂ-ಡಿಸಿಎಂ ಮಧ್ಯೆ ಚರ್ಚೆಯಾಗಿದೆ

ಕಾವೇರಿ, ಕೃಷ್ಣಾ, ಮುಡಾ, ವಾಲ್ಮೀಕಿ ಸೇರಿದಂತೆ ಅನೇಕ ಕಾನೂನು ಸಮಸ್ಯೆಗಳನ್ನು ಸುಲಭ ವಾಗಿ ಪರಿಹರಿಸಬೇಕು. ಕಠಿಣ ಮಾಡಬಾರದು. ಸಮಸ್ಯೆಗಳನ್ನು ಜನರ ಹಿತದೃಷ್ಟಿಯಿಂದ ಕಾನೂನಾತ್ಮಕಾಗಿ ನೋಡಬೇಕು. ಇದರಿಂದ ಯಾವುದೇ ಟ್ರಬಲ್ ಶೂಟ್ ಮಾಡಬಹುದು. ಆದ್ದರಿಂದ ಎಲ್ಲವನ್ನೂ ರಾಜಕೀಯವಾಗಿ ಯೋಚಿಸಬಾರದು.

ಒಗ್ಗಟ್ಟಿನ ಶಕ್ತಿ ತೋರಿಸೋಣ : ಕಾಂಗ್ರೆಸ್ ಕಾರ್ಯಕರ್ತರಿಗೆ ಪುಟು ಅಂಜಿನಪ್ಪ ಮನವಿ

ಒಗ್ಗಟ್ಟಿನ ಶಕ್ತಿ ತೋರಿಸೋಣ : ಕಾರ್ಯಕರ್ತರಿಗೆ ಪುಟು ಅಂಜಿನಪ್ಪ ಮನವಿ

ತಾಲೂಕಿನ ಎಲ್ಲಾ ಹೋಬಳಿ ಹಾಗೂ ಗ್ರಾಮಗಳ ಕಾಂಗ್ರೆಸ್ ಪದಾಧಿಕಾರಿಗಳು, ಪ್ರಮುಖರು ಮತ್ತು ಕಾರ್ಯಕರ್ತರು ಒಗ್ಗಟ್ಟಿನಿಂದ ಚಿಕ್ಕಬಳ್ಳಾಪುರಕ್ಕೆ ತೆರಳಿ ಹೋರಾಟಕ್ಕೆ ಬಲ ತುಂಬ ಬೇಕು. ಪಕ್ಷದ ತತ್ವ–ಸಿದ್ಧಾಂತಗಳ ರಕ್ಷಣೆ ಮತ್ತು ಜನಪರ ಹೋರಾಟಗಳಿಗೆ ಶಕ್ತಿ ತುಂಬುವುದು ಪ್ರತಿಯೊಬ್ಬ ಕಾರ್ಯಕರ್ತನ ಜವಾಬ್ದಾರಿ

Khadi clothing: ಸರಕಾರಿ ನೌಕರರು ತಿಂಗಳಲ್ಲಿ ಒಂದು ದಿನ ಖಾದಿ ಧರಿಸುವುದು ಕಡ್ಡಾಯ : ಜಿಲ್ಲಾಧಿಕಾರಿ ಜಿ.ಪ್ರಭು

ತಿಂಗಳಲ್ಲಿ ಒಂದು ದಿನ ಸರಕಾರಿ ನೌಕರರು ಖಾದಿ ಧರಿಸುವುದು ಕಡ್ಡಾಯ

ಕರ್ನಾಟಕ ಸರ್ಕಾರವು ತನ್ನ ನೌಕರರಿಗೆ ತಿಂಗಳಲ್ಲಿ ಒಂದು ದಿನ ಖಾದಿ ಉಡುಪು ಧರಿಸುವು ದನ್ನು ಕಡ್ಡಾಯಗೊಳಿಸಿದೆ. ಪ್ರತಿ ತಿಂಗಳ ಮೊದಲ ಶನಿವಾರ ಮತ್ತು ರಾಷ್ಟ್ರೀಯ ಹಬ್ಬ ಗಳಂದು ಖಾದಿ ಬಟ್ಟೆಗಳನ್ನು ಧರಿಸಬೇಕು. ಇದು ಸ್ವದೇಶಿ ಉತ್ಪನ್ನಗಳ ಬಗ್ಗೆ ಗೌರವ, ರಾಷ್ಟ್ರೀಯ ಭಾವನೆ ಮತ್ತು ಗ್ರಾಮೀಣ ಆರ್ಥಿಕತೆಯನ್ನು ಉತ್ತೇಜಿಸುವ ಗುರಿ ಹೊಂದಿದೆ.

ಬಜೆಟ್‌ ಬಳಿಕ ರಾಜ್ಯ ಸರ್ಕಾರ ಪತನವಾಗುವುದು ನಿಶ್ಚಿತ: ಶಾಸಕ ಯತ್ನಾಳ್‌ ಭವಿಷ್ಯ

ಬಜೆಟ್‌ ಬಳಿಕ ರಾಜ್ಯ ಸರ್ಕಾರ ಪತನವಾಗುವುದು ನಿಶ್ಚಿತ: ಶಾಸಕ ಯತ್ನಾಳ್‌

ಸಿಎಂ ಸಿದ್ದರಾಮಯ್ಯ ಅವರೇ ತಮಗೆ ಒಳಸಂಚು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಅವರಿಗೆ ಒಳಸಂಚು ಯಾರು ಮಾಡುತ್ತಾರೆ?, ಬಿಜೆಪಿಯವರು ಮಾಡುತ್ತಿದ್ದಾರಾ? ಕಾಂಗ್ರೆಸ್ ಪಾರ್ಟಿಯಲ್ಲಿಯೇ ಒಳ ಸಂಚು ಮಾಡುತ್ತಿದ್ದಾರೆ. ಡಿಕೆಶಿ ಅವರು ಎರಡೂವರೆ ವರ್ಷ ಸಿಎಂ ಆಗಬೇಕೆಂದು ಪ್ರಯತ್ನ ಮಾಡುತ್ತಿದ್ದಾರೆ ಎಂದು ಶಾಸಕ ಯತ್ನಾಳ್‌ ಟೀಕಿಸಿದ್ದಾರೆ.

Chikkaballapur News: 10 ಸಾವಿರ ಮಂದಿಗೆ ಉಚಿತ ಸೂರು ಕಲ್ಪಿಸುವ ಸಂಕಲ್ಪಕ್ಕೆ ಚಾಲನೆ ನೀಡಿದ ಸಮಾಜ ಸೇವಕ ಸಿ.ಎಂ. ಬೈರೇಗೌಡ

ಸೂರು ಕಲ್ಪಿಸುವ ಸಂಕಲ್ಪಕ್ಕೆ ಚಾಲನೆ ನೀಡಿದ ಸಿ.ಎಂ. ಬೈರೇಗೌಡ

ಅವರಿವರೆನ್ನದೆ ಮನುಷ್ಯ ಮನುಷ್ಯರಿಗೆ ನೆರವಾಗುವುದೇ ರಾಷ್ಟ್ರಕವಿ ಕುವೆಂಪು ಹೇಳುವ ಮನುಜ ಮತ ವಿಶ್ವಪಥದ ಸಂದೇಶವಾಗಿದೆ. ಇದನ್ನು ಅರ್ಥ ಅರಿತಿರುವ ನಾನು ಮತ್ತು ನಮ್ಮ ಸಮಿತಿ ಜಿಲ್ಲೆಯ 8 ತಾಲೂಕುಗಳಲ್ಲಿ ಸಂಚರಿಸಿ ಇಂದಿಗೂ ಗುಡಿಸಿಲುಗಳಲ್ಲಿ, ಟೆಂಟು ಗಳಲ್ಲಿ, ತಡಿಕೆಗಳಲ್ಲಿ, ಬಸ್ ತಂಗುದಾಣಗಳಲ್ಲಿ ಆಶ್ರಯ ಪಡೆದು ವಾಸ ಮಾಡುತ್ತಿರುವ ನಿರ್ಗತಿಕರಿಗೆ ನೆರವಾಗಲು ಮುಂದಾಗಿದ್ದೇವೆ

Loading...