ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕರ್ನಾಟಕ

Mysore silk saree: ಮೈಸೂರು ರೇಷ್ಮೆ ಸೀರೆಗಳಿಗೆ ಭಾರಿ ಡಿಮ್ಯಾಂಡ್‌, ಆನ್‌ಲೈನ್‌ ಮಾರಾಟಕ್ಕೆ ಬ್ರೇಕ್‌

ಮೈಸೂರು ರೇಷ್ಮೆ ಸೀರೆಗೆ ಭಾರಿ ಡಿಮ್ಯಾಂಡ್‌, ಆನ್‌ಲೈನ್‌ ಮಾರಾಟಕ್ಕೆ ಬ್ರೇಕ್‌

ಕೆಎಸ್‌ಐಸಿ ಪ್ರತಿದಿನ ಸರಾಸರಿ 350 ರಿಂದ 400 ಸೀರೆಗಳನ್ನು ತಯಾರಿಸುತ್ತಿದೆ. ಆದರೆ ರಾಜ್ಯದ ಜನರು, ವಿಶೇಷವಾಗಿ ಸ್ಥಳೀಯ ಗ್ರಾಹಕರು, ಹೆಚ್ಚಿನ ಸಂಖ್ಯೆಯಲ್ಲಿ ಅಂಗಡಿಗಳಿಗೆ ಭೇಟಿ ನೀಡುತ್ತಿರುವುದರಿಂದ ಪೂರೈಕೆಯನ್ನು ಸಮರ್ಪಕವಾಗಿ ನಿರ್ವಹಿಸುವುದು ಸವಾಲಾಗುತ್ತಿದೆ. ಈ ಕಾರಣದಿಂದಾಗಿ, ಕೆಲವು ಸಮಯದವರೆಗೆ ಆನ್‌ಲೈನ್ ಆರ್ಡರ್‌ ಸ್ಥಗಿತಗೊಳಿಸಲು ಚಿಂತನೆ ನಡೆಸಲಾಗುತ್ತಿದೆ.

ಹಿಕಲ್ ಟೆಕ್ನಾಲಜೀಸ್‌ಗೆ ಡಸಾಲ್ಟ್ ಏವಿಯೇಷನ್ ಪ್ರಶಸ್ತಿಗಳ ದೀರ್ಘಾವಧಿಯ ಒಪ್ಪಂದಕ್ಕೆ ಸಹಿ

ರಫೇಲ್ ಕಂಟ್ರೋಲ್ ಸಿಸ್ಟಮ್ಸ್ ಅಪ್ಲಿಕೇಶನ್‌ಗಳಿಗೆ ಉತ್ಪನ್ನಗಳ ತಯಾರಿಕೆ

ಈ ಮೈಲಿಗಲ್ಲು ಹಿಕಲ್‌ನಲ್ಲಿರುವ ನಮ್ಮ ತಂಡಗಳು ನಿರ್ಮಿಸಿರುವ ಎಂಜಿನಿಯರಿಂಗ್ ಹೂಡಿಕೆ, ನಿಖರ ಉತ್ಪಾದನಾ ಶಿಸ್ತು ಮತ್ತು ಗುಣಮಟ್ಟದ ಸಂಸ್ಕೃತಿಯ ವರ್ಷಗಳ ಪುರಾವೆಯಾಗಿದೆ" ಎಂದು ಹಿಕಲ್ ಟೆಕ್ನಾಲಜೀಸ್‌ನ ವ್ಯವಸ್ಥಾಪಕ ನಿರ್ದೇಶಕ ಯಶಸ್ ಜೈವೀರ್ ಹೇಳಿದರು. "ವಿಶ್ವದ ಅತ್ಯಂತ ಅತ್ಯಾಧುನಿಕ ಯುದ್ಧ ವಿಮಾನಗಳಲ್ಲಿ ಒಂದಾದ ರಫೇಲ್‌ಗಾಗಿ ನಿರ್ಣಾಯಕ ಉತ್ಪನ್ನಗಳನ್ನು ವಹಿಸಿಕೊಳ್ಳುವುದು ಭಾರತೀಯ ಏರೋ ಸ್ಪೇಸ್ ಉತ್ಪಾದನೆಯು ಜಾಗತಿಕ ವೇದಿಕೆಗೆ ಬಂದಿದೆ ಎಂಬುದಕ್ಕೆ ಒಂದು ಮನ್ನಣೆಯಾಗಿದೆ.

LPG crisis: ವಾಣಿಜ್ಯ ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯ ಸರಿಪಡಿಸಲು ತುರ್ತು ಕ್ರಮ ಕೈಗೊಳ್ಳಿ: ಕೇಂದ್ರಕ್ಕೆ ಸಿಎಂ ಸಿದ್ದರಾಮಯ್ಯ ಪತ್ರ

ವಾಣಿಜ್ಯ ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯ; ಕೇಂದ್ರಕ್ಕೆ ಸಿಎಂ ಪತ್ರ

Commercial LPG shortage: ಬೆಂಗಳೂರಿನಲ್ಲಿ ವಾಣಿಜ್ಯ ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವುದರಿಂದ ನಗರದ ಹಲವಾರು ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳ ಕಾರ್ಯಾಚರಣೆ ಸ್ಥಗಿತಗೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಸಮಸ್ಯೆ ಪರಿಹರಿಸಲು ತುರ್ತು ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

Tejaswi Surya: ಎಲ್‌ಪಿಜಿ ಪೂರೈಕೆ ಕೊರತೆ, ಸರಿಪಡಿಸಲು ಸಂಸದ ತೇಜಸ್ವಿ ಸೂರ್ಯ ಮನವಿ

ಎಲ್‌ಪಿಜಿ ಪೂರೈಕೆ ಕೊರತೆ, ಸರಿಪಡಿಸಲು ಸಂಸದ ತೇಜಸ್ವಿ ಸೂರ್ಯ ಮನವಿ

ಟ್ವೀಟ್ ಮಾಡಿರುವ ಸಂಸದ ತೇಜಸ್ವಿ ಸೂರ್ಯ, ಹೋಟೆಲ್ ಹಾಗೂ ಆತಿಥ್ಯ ಕ್ಷೇತ್ರಕ್ಕೆ ನಿರಂತರ ಎಲ್‌ಪಿಜಿ ಪೂರೈಕೆ ಖಚಿತಪಡಿಸುವಂತೆ ಮನವಿ ಮಾಡಿ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರಾದ ಹರ್ದೀಪ್ ಸಿಂಗ್ ಪುರಿಗೆ ಪತ್ರ ಬರೆದಿದ್ದಾರೆ. ಸಂಸದೆ ಶೋಭಾ ಕರಂದ್ಲಾಜೆ ಕೂಡ ಮಾತುಕತೆ ನಡೆಸಲು ಮುಂದಾಗಿದ್ದಾರೆ.

Gulf war: ಇರಾನ್-‌ ಇಸ್ರೇಲ್‌ ಯುದ್ಧದ ಪರಿಣಾಮ ಬೆಂಗಳೂರು ಏರ್‌ಪೋರ್ಟ್‌ನಲ್ಲಿ 17 ವಿಮಾನ ಹಾರಾಟ ರದ್ದು

ಯುದ್ಧದ ಪರಿಣಾಮ ಬೆಂಗಳೂರು ಏರ್‌ಪೋರ್ಟ್‌ನಲ್ಲಿ 17 ವಿಮಾನ ಹಾರಾಟ ರದ್ದು

ಏರ್‌ಸ್ಪೇಸ್ ನಿರ್ಬಂಧ ಮತ್ತು ಭದ್ರತಾ ಕಾರಣದಿಂದ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ಪ್ರಯಾಣಿಕರು ತಮ್ಮ ವಿಮಾನ ವೇಳಾಪಟ್ಟಿಯನ್ನು ಪರಿಶೀಲಿಸಲು ವಿಮಾನ ನಿಲ್ದಾಣ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಇದರಿಂದ ಮಧ್ಯಪ್ರಾಚ್ಯಕ್ಕೆ ಹೋಗುವ ಪ್ರಯಾಣಿಕರಿಗೆ ತಾತ್ಕಾಲಿಕ ತೊಂದರೆ ಉಂಟಾಗುವ ಸಾಧ್ಯತೆ ಇದೆ.

Fraud Case: ವರ್ಗಾವಣೆಗಾಗಿ ಗಿಳಿಶಾಸ್ತ್ರದ ಮೊರೆ ಹೋದ ಐಟಿ ಅಧಿಕಾರಿ, 35 ಲಕ್ಷ ರೂಪಾಯಿ ಮಂಗಮಾಯ!

ವರ್ಗಾವಣೆಗಾಗಿ ಗಿಳಿಶಾಸ್ತ್ರದ ಮೊರೆ ಹೋದ ಐಟಿ ಅಧಿಕಾರಿಗೆ ಲಕ್ಷ ಲಕ್ಷ ವಂಚನೆ!

ವರ್ಗಾವಣೆಯ ವಿಚಾರವಾಗಿ ಗಿಳಿಶಾಸ್ತ್ರ ಕೇಳಿದಾಗ, ದೊಡ್ಡ ಪೂಜೆ ಮಾಡಬೇಕು. ಅದಕ್ಕಾಗಿ ಮನೆಯಲ್ಲಿರುವ ಚಿನ್ನಾಭರಣಗಳನ್ನು ತರಬೇಕು ಎಂದು ಶೇಖರ್ ಸಲಹೆ ನೀಡಿದ್ದ. ಅವನ ಮಾತನ್ನು ನಂಬಿದ ಐಟಿ ಅಧಿಕಾರಿ ಸುಮಾರು 35 ಲಕ್ಷ ರೂಪಾಯಿ ಮೌಲ್ಯದ 194 ಗ್ರಾಂ ಚಿನ್ನಾಭರಣ ಮತ್ತು 1 ಕೆಜಿ 300 ಗ್ರಾಂ ಬೆಳ್ಳಿಯನ್ನು ತೆಗೆದುಕೊಂಡು ಹೋಗಿ ಆತನಿಗೆ ನೀಡಿದ್ದರು.

Doctors Strike: ನಾಳೆಯಿಂದ ರಾಜ್ಯಾದ್ಯಂತ ವೈದ್ಯರ ಮುಷ್ಕರ, ಸರ್ಕಾರಿ ಆಸ್ಪತ್ರೆಗಳ ಒಪಿಡಿ ಬಂದ್

ನಾಳೆಯಿಂದ ರಾಜ್ಯಾದ್ಯಂತ ವೈದ್ಯರ ಮುಷ್ಕರ, ಸರ್ಕಾರಿ ಆಸ್ಪತ್ರೆಗಳ ಒಪಿಡಿ ಬಂದ್

ಸರ್ಕಾರಿ ವೈದ್ಯಾಧಿಕಾರಿಗಳ ಸಂಘವು ಹಲವು ವರ್ಷಗಳಿಂದ ಬಾಕಿಯಿರುವ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಸರ್ಕಾರದ ಗಮನ ಸೆಳೆಯಲು ಈ ಮುಷ್ಕರಕ್ಕೆ ಕರೆ ನೀಡಿದೆ. ಕಳೆದ ನಾಲ್ಕು ವರ್ಷಗಳಿಂದ ನಡೆಯದಿರುವ ವೃಂದ ಮತ್ತು ನೇಮಕಾತಿ ಪ್ರಕ್ರಿಯೆ, 13 ವರ್ಷಗಳಿಂದ ಪರಿಷ್ಕರಣೆಗೊಳ್ಳದ ವೈದ್ಯರ ಜ್ಯೇಷ್ಠತಾ ಪಟ್ಟಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಗಳ ಕೊರತೆ ಸೇರಿದಂತೆ ಒಟ್ಟು 15 ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸಂಘವು ಹೋರಾಟಕ್ಕೆ ಮುಂದಾಗಿದೆ.

ಸ್ವಿಗ್ಗಿ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಸಹಯೋಗದಲ್ಲಿ ಕ್ರೆಡಿಟ್ ಕಾರ್ಡ್‌ ಬಿಡುಗಡೆ

ಖಾಸಗಿ ಬ್ಯಾಂಕ್ʼಗಳ ಸಹಯೋಗದಲ್ಲಿ ಕ್ರೆಡಿಟ್ ಕಾರ್ಡ್‌ ಬಿಡುಗಡೆ

ಸ್ವಿಗ್ಗಿ ಎಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನ ಅಸ್ತಿತ್ವದಲ್ಲಿರುವ ಬಳಕೆದಾರರು ಸ್ವಿಗ್ಗಿ ಮತ್ತು ಕ್ಲಿಯರ್‌ಟ್ರಿಪ್, ನೈಕಾ, ಪೇಟಿಎಂ ಟ್ರಾವೆಲ್, ಅಮೆಜಾನ್, ಫ್ಲಿಪ್‌ಕಾರ್ಟ್ ಮತ್ತು ಮೈಂತ್ರಾದಂತಹ 30+ ಕ್ಕೂ ಹೆಚ್ಚು ಪ್ರಮುಖ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಬಲವಾದ ಕ್ಯಾಶ್‌ಬ್ಯಾಕ್ ಪ್ರಯೋಜನಗಳನ್ನು ಆನಂದಿಸುತ್ತಿದ್ದಾರೆ.

ಜಪಾನ್-ಭಾರತ ಮೊಬಿಲಿಟಿ ಶೃಂಗಸಭೆ 2026: ಶುದ್ಧ ಇಂಧನ, ಡಿಜಿಟಲ್ ಮೊಬಿಲಿಟಿ ಮತ್ತು ನಾವೀನ್ಯತೆ ಕುರಿತು ದ್ವಿಪಕ್ಷೀಯ ಸಹಕಾರಕ್ಕೆ ವೇಗ

ಶುದ್ಧ ಇಂಧನ, ಡಿಜಿಟಲ್ ಮೊಬಿಲಿಟಿ ಕುರಿತು ದ್ವಿಪಕ್ಷೀಯ ಸಹಕಾರಕ್ಕೆ ವೇಗ

ಭಾರತ ಹಾಗೂ ಜಪಾನ್‌ ನಡುವೆ ಮೊಬಿಲಿಟಿ ಅವಕಾಶಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ನಗರದ ತಾಜ್‌ವೆಸ್ಟೆಂಡ್‌ ಹೋಟೆಲ್‌ನಲ್ಲಿ ನಡೆದ ಜಪಾನ್-ಇಂಡಿಯಾ ಮೊಬಿಲಿಟಿ ಶೃಂಗಸಭೆ 2026 (Japan-India Mobility Summit) ಯಲ್ಲಿ ಭಾರತ ಮತ್ತು ಜಪಾನ್‌ನ ನೀತಿ ನಿರೂಪಕರು, ಉದ್ಯಮ ನಾಯಕರು ಮತ್ತು ನಾವೀನ್ಯಕಾರರನ್ನು ಪಾಲ್ಗೊಂಡಿದ್ದರು.

ಯುವಪೀಳಿಗೆಗಾಗಿ ಕ್ಲಾಸಿಕ್ ಮೋಟಾರ್‌ ಬೈಕ್‌ ಯೆಜ್ಡಿ - ರೋಡ್‌ಸ್ಟರ್ ರೆಡ್ ವುಲ್ಫ್ ಬಿಡುಗಡೆ

ಕ್ಲಾಸಿಕ್ ಮೋಟಾರ್‌ ಬೈಕ್‌ ಯೆಜ್ಡಿ - ರೋಡ್‌ಸ್ಟರ್ ರೆಡ್ ವುಲ್ಫ್ ಬಿಡುಗಡೆ

ಬಂಡಾಯದ ಕೆಂಪು ಬಣ್ಣದಲ್ಲಿ ಮುಳುಗಿರುವ ಮತ್ತು ಕ್ರೋಮ್‌ನಲ್ಲಿ ಹೊಳೆಯುವ ಯೆಜ್ಡಿ ರೋಡ್‌ಸ್ಟರ್‌ನ ಇತ್ತೀಚಿನ ವ್ಯಾಖ್ಯಾನವು ಅದರ ಜನಪ್ರಿಯ ಬೇಡಿಕೆಯನ್ನು ಹೆಚ್ಚಿಸಿರುವ ಎದ್ದುಕಾಣುವ ಕೋರ್ ಕ್ರೂಸರ್ ವಿನ್ಯಾಸ ಮತ್ತು ಸಂಸ್ಕರಿಸಿದ ಕಾರ್ಯಕ್ಷಮತೆಯ ಎಂಜಿನಿಯ ರಿಂಗ್‌ನೊಂದಿಗೆ ಬರುತ್ತದೆ.

Hotels bandh: ರಾಜಧಾನಿಯಲ್ಲಿ ಬೆಳಗ್ಗೆ ತೆರೆದ ಹೋಟೆಲ್‌ಗಳು, ಮಧ್ಯಾಹ್ನದ ಹೊತ್ತಿಗೆ ಗ್ಯಾಸ್‌ ಖಾಲಿ!

ಬೆಳಗ್ಗೆ ತೆರೆದ ಹೋಟೆಲ್‌ಗಳು, ಮಧ್ಯಾಹ್ನದ ಹೊತ್ತಿಗೆ ಗ್ಯಾಸ್‌ ಖಾಲಿ!

ವಾಣಿಜ್ಯ ಸಿಲಿಂಡರ್‌ ಸರಬರಾಜು ಏಕಾಏಕಿ ನಿಂತಿರುವುದೇ ಈ ಸಮಸ್ಯೆಗೆ ಕಾರಣವಾಗಿದೆ. ಅನಿವಾರ್ಯವಾಗಿ ಬಂದ್ ಮಾಡಬೇಕಾದ ಪರಿಸ್ಥಿತಿ ಇದೆ ಎಂದು ಹೊಟೆಲ್ ಮಾಲೀಕರ ಸಂಘ ನಿನ್ನೆಯೇ ಎಚ್ಚರಿಸಿತ್ತು. ಇಂದು ಬೆಳಗ್ಗಿನಿಂದ ಹೋಟೆಲ್‌ಗಳು ತೆರೆದಿವೆ. ಆದರೆ ಯಾವುದೇ ಕ್ಷಣದಲ್ಲೂ ಗ್ಯಾಸ್‌ ಖಾಲಿಯಾಗುವ ಭಯದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಬಹುತೇಕ ಹೋಟೆಲ್‌ಗಳು ಮಧ್ಯಾಹ್ನದ ಬಳಿಕ ಮುಚ್ಚಲಿವೆ.

Couple death: ಕನಸಿನ ಮನೆಯ ಮೆಟ್ಟಿಲು ಕುಸಿದು ದುರಂತ ಕಂಡ ದಂಪತಿ

ಕನಸಿನ ಮನೆಯ ಮೆಟ್ಟಿಲು ಕುಸಿದು ದುರಂತ ಕಂಡ ದಂಪತಿ

ದ್ಯಾವಪ್ಪ ಹಾಗೂ ಶಿವಮ್ಮ ದಂಪತಿ ಮನೆ ಕಟ್ಟುವ ಕನಸು ಕಂಡಿದ್ದು, ಅದರಂತೆ ಹಣ ಹೊಂದಿಸಿ ಮನೆ ನಿರ್ಮಾಣ ಮಾಡಲು ಶುರು ಮಾಡಿದ್ದರು. ಸ್ವತಃ ತಾವೇ ಮನೆ ನಿರ್ಮಿಸಿಕೊಳ್ಳುತ್ತಿದ್ದು, ಅರ್ಧ ಮನೆ ಸಹ ಕಟ್ಟಲಾಗಿತ್ತು. ನಿನ್ನೆ ಮನೆ ಗೋಡೆ ಪ್ಲಾಸ್ಟರಿಂಗ್ ಮಾಡುತ್ತಿದ್ದ ವೇಳೆ ದಂಪತಿ ಮೇಲೆ ಏಕಾಏಕಿ ಮೆಟ್ಟಿಲುಗಳ ಪಿಲ್ಲರ್ ಕುಸಿದು ಬಿದ್ದಿದೆ.

ಎಲ್‌ಪಿಜಿ ಸಿಲಿಂಡರ್‌ ಪೂರೈಕೆ ಸ್ಥಗಿತ; ಬೆಂಗಳೂರಿನಲ್ಲಿ ನಾಳೆಯಿಂದ ಹೋಟೆಲ್‌ ಬಂದ್‌

ಬೆಂಗಳೂರಿನಲ್ಲಿ ನಾಳೆಯಿಂದ ಹೋಟೆಲ್‌ ಬಂದ್‌

Bangalore Hotels Association: ಪಶ್ಚಿಮ ಏಷ್ಯಾದಲ್ಲಿ ಸಂಘರ್ಷದ ಬಿಸಿ ನಮ್ಮ ರಾಜ್ಯಕ್ಕೂ ತಟ್ಟತೊಡಗಿದೆ. ವಾಣಿಜ್ಯ ಬಳಕೆಯ ಗ್ಯಾಸ್‌ ಸಿಲಿಂಡರ್‌ ಸರಬರಾಜು ನಿಂತಿರುವುದರಿಂದ ಮಾರ್ಚ್‌ 10ರಿಂದ ಬೆಂಗಳೂರಿನಲ್ಲಿ ಹೋಟೆಲ್‌ಗಳು ಬಂದ್‌ ಆಗಲಿವೆ ಎಂದು ಬೆಂಗಳೂರು ಹೋಟೆಲ್‌ಗಳ ಸಂಘ ತಿಳಿಸಿದೆ.

ರೈಸಿಂಗ್ ಸ್ಟಾರ್ ತಂಡಕ್ಕೆ ರಾಜೀವ್ ಗೌಡ ರಂಜಾನ್ ಕಪ್ ಚಾಂಪಿಯನ್ ಪಟ್ಟ

ರೈಸಿಂಗ್ ಸ್ಟಾರ್ ತಂಡಕ್ಕೆ ಚಾಂಪಿಯನ್ ಪಟ್ಟ

ಯುವಕರು ಕ್ರೀಡೆಗಳಲ್ಲಿ ಹೆಚ್ಚು ತೊಡಗಿಸಿಕೊಂಡು ಕ್ರೀಡಾ ಸ್ಫೂರ್ತಿಯನ್ನು ಬೆಳೆಸಿಕೊಳ್ಳ ಬೇಕು. ಸ್ಥಳೀಯ ಮಟ್ಟದಲ್ಲಿ ಪ್ರತಿಭೆ ತೋರಿಸುತ್ತಿರುವ ಕ್ರೀಡಾಪಟುಗಳು ಮುಂದಿನ ದಿನಗಳಲ್ಲಿ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಮಿಂಚುವಂತಾಗಲಿ ಎಂದು ಆಶಯ ವ್ಯಕ್ತಪಡಿಸಿ ದರು.

Health Sector: ವೈದ್ಯಕೀಯ ಶಿಕ್ಷಣ ಮತ್ತು ಫಾರ್ಮಸಿ ಶಿಕ್ಷಣದ ಸಮನ್ವಯದಿಂದ ಆರೋಗ್ಯ ಕ್ಷೇತ್ರ ಉನ್ನತಿಯತ್ತ ಸಾಗುತ್ತಿದೆ : ಡಾ. ಕೋಡಿರಂಗಪ್ಪ

ವೈದ್ಯಕೀಯ, ಫಾರ್ಮಸಿ ಶಿಕ್ಷಣದ ಸಮನ್ವಯ, ಆರೋಗ್ಯ ಕ್ಷೇತ್ರ ಉನ್ನತಿಯತ್ತ

ಭಾರತದಲ್ಲಿ ರಾಷ್ಟ್ರೀಯ ಫಾರ್ಮಸಿ ಶಿಕ್ಷಣಕ್ಕೆ ಒಂದು ಸ್ಪಷ್ಟ ಚೌಕಟ್ಟು ರೂಪರೇಷೆಗಳನ್ನು ಕಟ್ಟಿಕೊಟ್ಟಿರುವ ಫಾರ್ಮಸಿ ವಿಜ್ಞಾನ ಶಿಕ್ಷಣದ ಪಿತಾಮಹರೆನಿಸಿರುವ ಪ್ರೊ. ಮಹಾದೇವ ಲಾಲ್ ಶರ್ಸ್ ರವರು ಔಷದ ವಿಜ್ಞಾನ ಮತ್ತು ಫಾರ್ಮಸಿ ಕ್ಷೇತ್ರದ ವಿದ್ಯಾರ್ಥಿಗಳು ಹಾಗೂ ವೃತ್ತಿಪರರಿಗೆ  ಫಾರ್ಮಸಿ ಶಿಕ್ಷಣವು ಕಲಿಕಾರ್ಥಿಗಳಲ್ಲಿ ಗುಣಾತ್ಮಕವಾಗಿ ಹಲವು ಬದಲಾವಣೆ ಗಳನ್ನು ಹಾಗೂ ಕಲಿಕೆಯನ್ನು ಅಪೇಕ್ಷಿಸುತ್ತದೆ.

International Women's Day: ಸುಪ್ರಿಯಾ ಅವರಿಗೆ ‘ನೇತಾಜಿ ಮಹಿಳಾ ಪ್ರಶಸ್ತಿ'

ಸುಪ್ರಿಯಾ ಅವರಿಗೆ ‘ನೇತಾಜಿ ಮಹಿಳಾ ಪ್ರಶಸ್ತಿ

ಶೈಕ್ಷಣಿಕ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿರುವ ನ್ಯಾಷನಲ್ ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಉಪನ್ಯಾಸಕಿ ಕುಮಾರಿ ಸುಪ್ರಿಯಾ ನಾಯಕ್ ಅವರ ಸೇವೆಯನ್ನು ಪರಿಗಣಿಸಿ ಸಂಘದ ವತಿಯಿಂದ ಸನ್ಮಾನಿಸಿ, ‘ನೇತಾಜಿ ಮಹಿಳಾ ಪ್ರಶಸ್ತಿ’ ನೀಡಿ ಗೌರವಿಸ ಲಾಯಿತು

National level relay competition: ರಾಜ್ಯಮಟ್ಟದ ಕ್ರೀಡಾಕೂಟ: ಜಿಲ್ಲೆಗೆ 4*400 ಮೀ ರಿಲೆಯಲ್ಲಿ ಚಿನ್ನದ ಪದಕ, 4*100 ಮೀ ರಿಲೆಯಲ್ಲಿ ಬೆಳ್ಳಿ ಪದಕ

ಜಿಲ್ಲೆಗೆ 4*400 ಮೀ ರಿಲೆಯಲ್ಲಿ ಚಿನ್ನ, 4*100 ಮೀ ರಿಲೆಯಲ್ಲಿ ಬೆಳ್ಳಿ ಪದಕ

ಇದೇ ತಿಂಗಳು 18 ರಿಂದ 20ರ ತನಕ ಚಂಡೀಗಢದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಮಟ್ಟದ ರಿಲೇ ಸ್ಪರ್ಧೆಗೆ ಶಿಡ್ಲಘಟ್ಟ ತಾಲ್ಲೂಕಿನ ಕು|| ಸಿರಿನಾಗರಾಜ್, ಅಕ್ಷಯಶೇಖರ್, ಹಾತ್ಮೀನಾ, ನೂಪ್ರಾಹೊಳ್ಳಾ ಕ್ರೀಡಾಪಟುಗಳು ಚಿನ್ನದ ಪದಕ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆ ಯಾಗಿದ್ದಾರೆ.

Chikkaballapur News: ಭಾನುವಾರ ಬಂದ್ ಕರೆ ಸಮಂಜಸವಲ್ಲ, ವ್ಯಾಪಾರಕ್ಕೆ ತೊಂದರೆ, ಬೇರೆ ದಿನದಲ್ಲಿ ಬಂದ್‌ ಮಾಡಿ: ಮಂಜುನಾಥ್ ಆಗ್ರಹ

ಭಾನುವಾರ ಬಂದ್ ಕರೆ ಸಮಂಜಸವಲ್ಲ, ಬೇರೆ ದಿನ ಬಂದ್‌ ಮಾಡಿ

ಮಾ.19ರಂದು ಯುಗಾದಿ ಹಬ್ಬವಿದೆ. ಅದರ ಮರುದಿನ ವರುಷ ತೊಡಕು, ಆನಂತರ ಒಂದೆರಡು ದಿನಗಳಲ್ಲಿ ರಂಜಾನ್ ಹಬ್ಬ ಬರುತ್ತದೆ. ಇವರು ಮಾ.15ರಂದು ಬಂದ್ ಕರೆದಿರುವು ದರಿಂದ ಯುಗಾದಿ ಹಬ್ಬ, ವರ್ಷ ತೊಡಕು ಮತ್ತು ರಂಜಾನ್ ಹಬ್ಬ ಆಚರಣೆ ಮಾಡುವವರಿಗೆ, ಹಬ್ಬದ ಸಾಮಗ್ರಿ ಖರೀದಿಸುವವರಿಗೆ, ಹೊಸಬಟ್ಟೆ ಮತ್ತು ಹಬ್ಬದ ಆಚರಣೆಗೆ ಸಿದ್ಧತೆ ಮಾಡಿ ಕೊಳ್ಳಲು, ಮದುವೆ ಇತ್ಯಾದಿ ಶುಭ ಸಮಾರಂಭಗಳಲ್ಲಿ ಭಾಗಿ ಯಾಗುವವರಿಗೆ, ಭಾನುವಾರದ ವ್ಯಾಪಾರ ನಂಬಿ ಬದುಕುವವರಿಗೆ ತುಂಬಾ ತೊಂದರೆ ಆಗಲಿದೆ

Vande Bharat Express: ರಾಜ್ಯದ ವಂದೇ ಭಾರತ್ ರೈಲುಗಳ ವೇಳಾಪಟ್ಟಿ ಪರಿಷ್ಕರಣೆ; ಮಾ.15ರಿಂದ ಜಾರಿ

ವಂದೇ ಭಾರತ್ ರೈಲುಗಳ ವೇಳಾಪಟ್ಟಿ ಪರಿಷ್ಕರಣೆ; ಮಾ.15ರಿಂದ ಜಾರಿ

Indian Railways: ಹುಬ್ಬಳ್ಳಿ-ಪುಣೆ ವಂದೇ ಭಾರತ್‌ ಎಕ್ಸ್‌ಪ್ರೆಸ್‌, ಬೆಂಗಳೂರು-ಧಾರವಾಡ, ಬೆಳಗಾವಿ-ಬೆಂಗಳೂರು ಸೇರಿ ವಿವಿಧ ಮಾರ್ಗಗಳಲ್ಲಿ ಸಂಚರಿಸುವ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲುಗಳ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ನೈರುತ್ಯ ರೈಲ್ವೆಯು ಪ್ರಕಟಿಸಿರುವ ಹೊಸ ವೇಳಾಪಟ್ಟಿಯ ಮಾಹಿತಿ ಇಲ್ಲಿದೆ.

International Women's Day: ಮಹಿಳೆಯರು ಕನಸು ಕಟ್ಟಿಕೊಂಡು ಧೈರ್ಯದಿಂದ ಮುನ್ನುಗ್ಗಿದರೆ ಜಯ ನಿಮ್ಮದೇ : ಪ್ರೊ.ಕೋಡಿರಂಗಪ್ಪ ಸಲಹೆ

ಮಹಿಳೆಯರು ಕನಸು ಕಟ್ಟಿಕೊಂಡು ಧೈರ್ಯದಿಂದ ಮುನ್ನುಗ್ಗಿದರೆ ಜಯ ನಿಮ್ಮದೇ

ಮಹಿಳೆಗೆ ಈ ಮೊದಲು ಶಿಕ್ಷಣ ಮರೀಚಿಕೆಯಾಗಿತ್ತು. ಸ್ವಾತಂತ್ರ್ಯಾ ನಂತರದಲ್ಲಿ ದೊರೆತ ಶಿಕ್ಷಣ ದ ಫಲವಾಗಿ ಸ್ವಾತಂತ್ರ್ಯ ಮತ್ತು ಹಕ್ಕುಗಳು ದೊರೆತ ಪರಿಣಾಮ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಹೆಜ್ಜೆಗುರುತು ಮೂಡಿಸಲು ಸಾಧ್ಯವಾಗಿದೆ. ಮಹಿಳೆಯನ್ನು ಇಂದು ಕೇವಲ ಗೃಹಿಣಿ ಯಾಗಿ ಮಾತ್ರ ಕಾಣಲಾಗದು. ಸಿಕ್ಕಿರುವ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು ಮುನ್ನಡೆ ಸಾಧಿಸಿರುವುದು ಹೆಮ್ಮೆಯ ಸಂಗತಿಯಾಗಿದೆ

ರಾಜ್ಯದ ಆದಾಯ, ಖರ್ಚುಗಳ ಬಗ್ಗೆ ಸ್ಪಷ್ಟ ತಿಳಿವಳಿಕೆ ಇರಬೇಕು: ಬಜೆಟ್‌ ಲೆಕ್ಕಾಚಾರದ ಕುರಿತು ಶಾಸಕರಿಗೆ ಸಿಎಂ ಪಾಠ

ಬಜೆಟ್‌ ಲೆಕ್ಕಾಚಾರದ ಕುರಿತು ಶಾಸಕರಿಗೆ ಸಿಎಂ ಸಿದ್ದರಾಮಯ್ಯ ಪಾಠ

ಬಜೆಟ್‌ ಅನ್ನು ಅರ್ಥ ಮಾಡಿಕೊಳ್ಳುವ ಶಾಸಕರ ಸಂಖ್ಯೆಯೇ ಕಡಿಮೆಯಾಗಿದೆ. ಮುಂದಿನ ದಿನಗಳಲ್ಲಿ ಈ ಕೊರತೆ ನೀಗಬಹುದೆಂದು ನಾನು ಭಾವಿಸಿದ್ದೇನೆ. ಬಜೆಟ್ ಎಷ್ಟೆ ಒಳ್ಳೆಯದಾಗಿದ್ದರೂ ಅದನ್ನು ಅರ್ಥಪೂರ್ಣವಾಗಿ ಖರ್ಚು ಮಾಡುವುದರಲ್ಲಿ ಶಾಸಕರ ಪಾತ್ರ ದೊಡ್ಡದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

Chikkaballapur News: ಆಶ್ರಯ ಯೋಜನೆಯಡಿ ಅರ್ಹ ನಿವೇಶನ ರಹಿತರೆ ಆಯ್ಕೆ ಆಗಬೇಕು: ಜಿ.ಪ್ರಭು ಸೂಚನೆ

ಆಶ್ರಯ ಯೋಜನೆಯಡಿ ಅರ್ಹ ನಿವೇಶನ ರಹಿತರೇ ಆಯ್ಕೆ ಆಗಬೇಕು

ರಾಜ್ಯ ಸರಕಾರವು ಮುಖ್ಯಮಂತ್ರಿಗಳ ಗ್ರಾಮೀಣ ಆಶ್ರಯ ನಿವೇಶನ ಯೋಜನೆಯಡಿ ನಿವೇಶನ ಹಂಚಿಕೆ ಮಾಡಲು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಿಂದ 959.11 ಎಕರೆ ಮಂಜೂರಾಗಿ ರುವ ಜಮೀನು ಪ್ರಸ್ತುತ ಲಭ್ಯವಿದೆ. ಜಿಲ್ಲೆಯ 358 ಸ್ಥಳಗಳಲ್ಲಿ ಈ ಜಮೀನಿನಿಂದ ನಿವೇಶನ ನೀಡಬಹುದಾಗಿದೆ.

MLA B.N.Ravikumar: ಕ್ಷೇತ್ರದಲ್ಲಿ ಮನೆ ಮನೆಗೂ ಶುದ್ಧ ಕುಡಿಯುವ ನೀರು ಹರಿಸುವ ಕಾಮಗಾರಿ ಪ್ರಗತಿಯಲ್ಲಿದೆ : ಶಾಸಕ ಬಿ.ಎನ್.ರವಿಕುಮಾರ್

ಕ್ಷೇತ್ರದಲ್ಲಿ ಶುದ್ಧ ಕುಡಿಯುವ ನೀರು ಹರಿಸುವ ಕಾಮಗಾರಿ ಪ್ರಗತಿಯಲ್ಲಿದೆ

ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರವ್ಯಾಪ್ತಿಯ ಕೆರೆಗಳಿಗೆ ಎಚ್‌ಎನ್ ವ್ಯಾಲಿ(HN Valley)ಯ ನೀರು ಹರಿಸುವ 3ನೇ ಹಂತದ ಕಾಮಗಾರಿಗೆ 250 ಕೋಟಿ ರೂ.ಗಳನ್ನು ಬಜೆಟ್‌ʼ ನಲ್ಲಿ ಘೋಷಿಸಿರು ವುದು ಸಂತೋಷ ತಂದಿದ್ದು, ಕ್ಷೇತ್ರದ ಮತದಾರರ ಪರವಾಗಿ ಸಿಎಂ ಸಿದ್ದರಾಮಯ್ಯ(CM Siddaramaiah) ಅವರಿಗೆ ಅಭಿನಂದನೆಗಳನ್ನು ತಿಳಿಸುತ್ತೇನೆ

Edible Oil Price Rise: ಇರಾನ್ ಇಸ್ರೇಲ್ ಯುದ್ಧ ಎಫೆಕ್ಟ್: ಅಡುಗೆ ಎಣ್ಣೆ ಬೆಲೆ ತೀವ್ರ ಏರಿಕೆ, ಗ್ರಾಹಕರಿಗೆ ಬರೆ

ಅಡುಗೆ ಎಣ್ಣೆ ಬೆಲೆ ತೀವ್ರ ಏರಿಕೆ, ಗ್ರಾಹಕರಿಗೆ ಬರೆ

ಪ್ರಮುಖ ಬ್ರ್ಯಾಂಡ್‌ಗಳ ಅಡುಗೆ ಎಣ್ಣೆಯ ಬೆಲೆಯಲ್ಲಿ ಪ್ರತಿ ಲೀಟರ್‌ಗೆ ಸರಾಸರಿ ಲೀ, ಸಗಟು 10 ರಿಂದ 12 ರು. ರಷ್ಟು ಏರಿಕೆಯಾಗಿದೆ. ಕಳೆದ ತಿಂಗಳು 15 ಏರಿಕೆಯಾಗಿತ್ತು. ಹಿಂದಿನ ದರಕ್ಕೆ ಹೋಲಿಸಿದರೆ ಒಟ್ಟು 25 ರು. ಏರಿಕೆಯಾ ದಂತಾಯಿತು. ಮಾರುಕಟ್ಟೆಯಲ್ಲಿ ಸದ್ಯ ಕಂಡು ಬರುತ್ತಿರುವ ಪ್ರಕರಣ ಮುಂದಿನ ದಿನ ಗಳಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯೂ ಇದೆ ಎನ್ನುತ್ತಾರೆ ಅಡುಗೆ ಎಣ್ಣೆ ವ್ಯಾಪಾರಿಗಳು.

Loading...