ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಕರ್ನಾಟಕ
CM Siddaramaiah: ಐಪಿಎಸ್ ಅಧಿಕಾರಿ ಅಮಾನತು ರದ್ದು; ಸಿಎಟಿ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ ಎಂದ ಸಿಎಂ

ಸಿಎಟಿ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ ಎಂದ ಸಿಎಂ

CM Siddaramaiah: ಬೆಂಗಳೂರು ಪೂರ್ವ ವಿಭಾಗದ ಹೆಚ್ಚುವರಿ ಆಯುಕ್ತ ವಿಕಾಸ್‌ ಕುಮಾರ್‌ ಅವರ ಅಮಾನತು ರದ್ದುಗೊಳಿಸುವಂತೆ ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ ಆದೇಶಿಸಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದು, ಮೇಲ್ಮನವಿ ಸಲ್ಲಿಸುವ ಅವಕಾಶವಿದ್ದು, ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ತಿಳಿಸಿದ್ದಾರೆ.

ಮಹಿಳಾ ಉದ್ಯಮಿಗಳ ಕನಸಿಗೆ ಸ್ಥಳೀಯ ಸ್ಫೂರ್ತಿ, ಜಾಗತಿಕ ರೆಕ್ಕೆ : 'ಶೀ ಎಕ್ಸ್‌ಪೋರ್ಟ್ಸ್' ಮೂಲಕ ವಿಶ್ವ ಗೆಲ್ಲಲು ಸಿದ್ಧತೆ

ಮಹಿಳಾ ಉದ್ಯಮಿಗಳ ಕನಸಿಗೆ ಸ್ಥಳೀಯ ಸ್ಫೂರ್ತಿ, ಜಾಗತಿಕ ರೆಕ್ಕೆ

ಉನ್ನತ ಮಟ್ಟದ ಚರ್ಚೆಯಿಂದ ಡಿಜಿಟಲ್, ಸಹಯೋಗ ಮತ್ತು ಗಡಿಯಾಚೆ ಉದ್ಯಮದ ವಿಸ್ತರಣೆ ಯ ಮಾರ್ಗಗಳನ್ನು ಮಹಿಳೆಯರು ತಿಳಿದುಕೊಂಡರು. 'ಶೀ ಎಕ್ಸ್‌ಪೋರ್ಟ್ಸ್' ಎನ್ನುವುದು ಆಸ್ಪೈರ್ ಫಾರ್ ಹರ್‌ನ ರಾಷ್ಟ್ರೀಯ ಉಪಕ್ರಮವಾದ್ದು, ಇದು ವಿಶೇಷವಾಗಿ ಟಯರ್‌ 2 ಮತ್ತು 3 ನಗರಗಳ ಮಹಿಳಾ ಉದ್ಯಮಿಗಳನ್ನು ಜಾಗತಿಕ ಕ್ಷೇತ್ರಕ್ಕೆ ತೆರೆದುಕೊಳ್ಳಲು ಬೇಕಾದ ಸಿದ್ಧತೆ ಹಾಗೂ ಆತ್ಮವಿಶ್ವಾಸವನ್ನು ನೀಡುತ್ತದೆ

Standard Operating Procedure: ಕಾಲ್ತುಳಿತ ದುರಂತ; ಜನಸಂದಣಿ ನಿರ್ವಹಣೆಗೆ ಎಸ್‌ಒಪಿ ರೂಪಿಸಿದ ರಾಜ್ಯ ಸರ್ಕಾರ

ಕಾಲ್ತುಳಿತ ದುರಂತ; ಜನಸಂದಣಿ ನಿರ್ವಹಣೆಗೆ ಎಸ್‌ಒಪಿ ರೂಪಿಸಿದ ರಾಜ್ಯ ಸರ್ಕಾರ

Standard Operating Procedure: ದೊಡ್ಡ ಕಾರ್ಯಕ್ರಮಗಳಲ್ಲಿ ಜನಸಂದಣಿ ನಿಯಂತ್ರಣಕ್ಕೆ ಕ್ರಮ ಮತ್ತು ಕಾರ್ಯಗತಗೊಳಿಸಲು ಸ್ಪಷ್ಟ ಮಾರ್ಗಸೂಚಿಗಳನ್ನು ನೀಡುವುದು, ಅಪಾಯಗಳನ್ನು ಕಡಿಮೆ ಮಾಡುವುದು, ಸಮನ್ವಯವನ್ನು ಹೆಚ್ಚಿಸುವ ಸಲುವಾಗಿ ಪೊಲೀಸ್‌ ಇಲಾಖೆಯು ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನ (ಎಸ್‌ಒಪಿ) ರೂಪಿಸಿದೆ.

LV Autorikshaw Handbag 2025: ಆಟೋರಿಕ್ಷಾ ಹ್ಯಾಂಡ್‌ಬ್ಯಾಗ್‌ ಅನಾವರಣಗೊಳಿಸಿದ ಲೂಯಿಸ್‌ ವ್ಯುಟನ್‌; ಬೆಲೆ ಕೇಳಿದ್ರೆ ದಂಗಾಗುತ್ತೀರಾ!

ಆಟೋರಿಕ್ಷಾ ಹ್ಯಾಂಡ್‌ಬ್ಯಾಗ್‌ ಅನಾವರಣಗೊಳಿಸಿದ ಲೂಯಿಸ್‌ ವ್ಯುಟನ್‌

LV Autorikshaw Handbag 2025: ಅಂತಾರಾಷ್ಟ್ರೀಯ ಮಟ್ಟದ ಹೈ ಫ್ಯಾಷನ್‌ಗೆ ಹೆಸರಾದ ಪ್ರತಿಷ್ಠಿತ ಲೂಯಿಸ್‌ ವ್ಯುಟನ್‌ ಬ್ರ್ಯಾಂಡ್‌ ಇದೀಗ ಆಟೋರಿಕ್ಷಾ ಹ್ಯಾಂಡ್‌ಬ್ಯಾಗ್‌ ಬಿಡುಗಡೆಗೊಳಿಸಿದೆ. ಮೆನ್ಸ್ ಫ್ಯಾಷನ್‌ ಶೋನಲ್ಲಿ ಮಾಡೆಲ್‌ಗಳು ಇದನ್ನು ಹಿಡಿದು ವಾಕ್‌ ಮಾಡಿದ್ದು, ಸದ್ಯ ಫ್ಯಾಷನ್‌ ಪ್ರಿಯರನ್ನು ನಿಬ್ಬೆರಗಾಗಿಸಿದೆ. ಈ ಕುರಿತಂತೆ ಇಲ್ಲಿದೆ ವರದಿ.

ಕೃಷಿ ಉಪಕರಣ ತಯಾರಕಾ ಸಂಸ್ಥೆಯಾದ TAFE ಸಂಸ್ಥೆಯು AGCO ಬ್ರ್ಯಾಂಡ್‌ನೊಂದಿಗೆ ಒಪ್ಪಂದಕ್ಕೆ ಸಹಿ

AGCO ಬ್ರ್ಯಾಂಡ್‌ನೊಂದಿಗೆ TAFE ಸಂಸ್ಥೆ ಒಪ್ಪಂದಕ್ಕೆ ಸಹಿ

ಮ್ಯಾಸ್ಸಿ ಫರ್ಗುಸನ್‌” ಮತ್ತು ಸಂಬಂಧಿತ ಟ್ರೇಡ್‌ಮಾರ್ಕ್‌ ಗಳಲ್ಲಿನ ಎಲ್ಲಾ ಹಕ್ಕುಗಳು, ಟೈಟಲ್‌ ಮತ್ತು ಆಸಕ್ತಿ ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲಾ ಸದ್ಭಾವನೆಗಳನ್ನು ಒಳಗೊಂಡಂತೆ ಮ್ಯಾಸಿ ಫರ್ಗುಸನ್‌ ಬ್ರ್ಯಾಂಡ್‌ ನ ಮಾಲೀಕತ್ವವು ಭಾರತ, ನೇಪಾಳ ಮತ್ತು ಭೂತಾನ್‌ ಗೆ ಏಕೈಕ ಮತ್ತು ವಿಶೇಷ ಮಾಲೀಕ ರಾಗಿ TAFE ನೊಂದಿಗೆ ಇರುತ್ತದೆ.

Star Fashion 2025: ಫಿಶ್‌ಟೇಲ್‌ ಫ್ಲೋರಲ್‌ ಡ್ರೆಸ್‌ನಲ್ಲಿ ಸೂಪರ್‌ ಮಾಡೆಲ್‌ನಂತೆ ಕಂಡ ನಟಿ ಮಯೂರಿ

ಫಿಶ್‌ಟೇಲ್‌ ಫ್ಲೋರಲ್‌ ಡ್ರೆಸ್‌ನಲ್ಲಿ ಸೂಪರ್‌ ಮಾಡೆಲ್‌ನಂತೆ ಕಂಡ ನಟಿ ಮಯೂರಿ

Star Fashion 2025: ಸ್ಯಾಂಡಲ್‌ವುಡ್‌ ನಟಿ ಮಯೂರಿ ಅತ್ಯಾಕರ್ಷಕ ಫಿಶ್‌ ಟೇಲ್‌ ಬಾಡಿಕಾನ್‌ ಫ್ಲೋರಲ್‌ ಡ್ರೆಸ್‌ನಲ್ಲಿ ಸೂಪರ್‌ ಮಾಡೆಲ್‌ನಂತೆ ಪೋಸ್‌ ನೀಡಿದ್ದಾರೆ. ಅವರ ಈ ಲುಕ್‌ ಹೇಗಿದೆ? ಸ್ಟೈಲಿಂಗ್‌ ಹೇಗಿದೆ? ಎಂಬುದರ ಬಗ್ಗೆ ಫ್ಯಾಷನ್‌ ವಿಮರ್ಶಕರು ಇಲ್ಲಿ ವಿಮರ್ಶಿಸಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್ 2024 ರ ಮನು ಭಾಕರ್ ಅವರ ಇತ್ತೀಚಿನ ಬ್ರ್ಯಾಂಡ್ ಫಿಲ್ಮ್ ಅನಾವರಣ

ಚಾಂಪಿಯನ್‌ಗಳು ಅತ್ಯುತ್ತಮ ಪರಿಕರಗಳ ಆಯ್ಕೆ ಮಾಡಿ

ಬ್ರ್ಯಾಂಡ್ ಫಿಲ್ಮ್ ಉನ್ನತ ಮಟ್ಟದಲ್ಲಿ ಶ್ರೇಷ್ಠತೆಯನ್ನು ಸಾಧಿಸಲು ಅಗತ್ಯವಿರುವ ಗಮನ, ನಿಖರತೆ ಮತ್ತು ನಿರ್ಣಯವನ್ನು ಸೆರೆಹಿಡಿಯುವ ಆಯ್ದ ಕ್ಷಣಗಳನ್ನು ಒಳಗೊಂಡಿದೆ. ಈ ಗುಣಗಳು ಗೋಲ್ಡನ್ ಬುಲೆಟ್‌ ನ ಬಳಕೆದಾರರ - ತಮ್ಮದೇ ಆದ ಚಾಂಪಿಯನ್‌ಗಳ ಸಮರ್ಪಣೆ ಮತ್ತು ಕೌಶಲ್ಯವನ್ನು ಪ್ರತಿಬಿಂಬಿಸು ತ್ತವೆ.

Bengaluru Stampede: "ಎಲ್ಲವನ್ನೂ ನಿಭಾಯಿಸಲು ಪೊಲೀಸರೇನು ದೇವರಲ್ಲ"; ಬೆಂಗಳೂರು ಕಾಲ್ತುಳಿತಕ್ಕೆ ಆರ್‌ಸಿಬಿ ಕಾರಣ ಎಂದ CAT

ಬೆಂಗಳೂರು ಕಾಲ್ತುಳಿತಕ್ಕೆ ಆರ್‌ಸಿಬಿ ಕಾರಣ ಎಂದ CAT !

ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ 11 ಮಂದಿ ಸಾವನ್ನಪ್ಪಿ 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದ ಕಾಲ್ತುಳಿತಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಕಾರಣ ಎಂದು ಕೇಂದ್ರ ಆಡಳಿತ ನ್ಯಾಯಮಂಡಳಿ (ಸಿಎಟಿ) ಹೇಳಿದೆ. ಆರ್‌ಸಿಬಿ ಮ್ಯಾನೇಜ್‌ಮೆಂಟ್‌ ಅವರು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಅಷ್ಟು ಪ್ರಮಾಣದ ಜನರು ಒಂದೆಡೆಗೆ ಸೇರಿದ್ದರು ಎಂದು ಅದು ಹೇಳಿದೆ.

ಯುನೈಟೆಡ್ ಬ್ರೂವರೀಸ್ ಲಿಮಿಟೆಡ್ ಕರ್ನಾಟಕದಲ್ಲಿ ಆಮ್‌ಸ್ಟೆಲ್‌ ಗ್ರಾಂಡೆ ಪ್ರಾರಂಭ

ಕರ್ನಾಟಕದಲ್ಲಿ ಆಮ್‌ಸ್ಟೆಲ್‌ ಗ್ರಾಂಡೆ ಪ್ರಾರಂಭ

ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶದಲ್ಲಿ ಅಗಾಧ ಪ್ರತಿಕ್ರಿಯೆಯನ್ನು ಪಡೆದ ನಂತರ, ನಾವು ಆಮ್‌ಸ್ಟೆಲ್‌ ಗ್ರಾಂಡೆಯನ್ನು ಕರ್ನಾಟಕಕ್ಕೆ ತರಲು ಉತ್ಸುಕರಾಗಿದ್ದೇವೆ. ಕರ್ನಾಟಕವು ನಿರಂತರವಾಗಿ ವಿಕಸನಗೊಳ್ಳುತ್ತಿರುವ ಮಾರುಕಟ್ಟೆಯಾಗಿದ್ದು, ಗ್ರಾಹಕರು ಹೊಸ, ಅಂತರರಾಷ್ಟ್ರೀಯ ಮತ್ತು ಪ್ರೀಮಿಯಂ ಅನ್ನು ಪ್ರಯತ್ನಿಸಲು ಉತ್ಸುಕರಾಗಿದ್ದಾರೆ

Heart Attack: ಹಾಸನ ಜಿಲ್ಲೆಯಲ್ಲಿ ಹೃದಯಾಘಾತ ಹೆಚ್ಚಳದ ಕುರಿತು ಅಧ್ಯಯನಕ್ಕೆ ತಜ್ಞರ ಸಮಿತಿ ರಚನೆ: ಸಿಎಂ

ಹೃದಯಾಘಾತ ಹೆಚ್ಚಳದ ಕುರಿತು ಅಧ್ಯಯನಕ್ಕೆ ತಜ್ಞರ ಸಮಿತಿ ರಚನೆ: ಸಿಎಂ

Heart Attack: ಹಾಸನ ಜಿಲ್ಲೆಯು ಸೇರಿದಂತೆ ರಾಜ್ಯದಲ್ಲಿ ಸಂಭವಿಸುತ್ತಿರುವ ಹಠಾತ್ ಸರಣಿ ಸಾವುಗಳಿಗೆ ನೈಜ ಕಾರಣ ಪತ್ತೆಮಾಡಿ, ತಡೆಯುವ ನಿಟ್ಟಿನಲ್ಲಿ ನಾವು ಸಂಪೂರ್ಣ ಬದ್ಧರಿದ್ದೇವೆ. ಈ ಉದ್ದೇಶದಿಂದಲೇ ಹೃದಯ ಜ್ಯೋತಿ ಮತ್ತು ಗೃಹ ಆರೋಗ್ಯದಂತಹ ಯೋಜನೆಗಳನ್ನು ಈಗಾಗಲೇ ಜಾರಿಗೆಕೊಟ್ಟು, ಸಾರ್ವಜನಿಕರ ಆರೋಗ್ಯದ ಮೇಲೆ ನಿಗಾ ವಹಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

Apoorva Bidari: 53 ಪ್ರಕರಣಗಳಲ್ಲಿ ದೋಷಪೂರಿತ ಆದೇಶ; ಕೆಎಎಸ್‌ ಅಧಿಕಾರಿ ಅಪೂರ್ವ ಬಿದರಿ ವಿರುದ್ಧ ಎಫ್‌ಐಆರ್‌

ಕೆಎಎಸ್‌ ಅಧಿಕಾರಿ ಅಪೂರ್ವ ಬಿದರಿ ವಿರುದ್ಧ ಎಫ್‌ಐಆರ್‌

Apoorva Bidari: ಬೆಂಗಳೂರು ದಕ್ಷಿಣ ಉಪವಿಭಾಗದ ಎಸಿ ಅಪೂರ್ವ ಬಿದರಿ ಅವರು ಅರೆ ನ್ಯಾಯಿಕ ಪ್ರಕರಣಗಳಲ್ಲಿ ದೋಷಪೂರಿತವಾಗಿ ಆದೇಶಗಳನ್ನು ಹೊರಡಿಸಿದ ಹಿನ್ನೆಲೆಯಲ್ಲಿ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಜಿಲ್ಲಾಧಿಕಾರಿಗೆ ಕಂದಾಯ ಇಲಾಖೆಯ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು ಸೂಚನೆ ನೀಡಿದ್ದಾರೆ.

CM Siddaramaiah: ಊಹಾ ಪತ್ರಿಕೋದ್ಯಮ ಸಮಾಜಕ್ಕೆ ಮಾರಕ- ಸಿದ್ದರಾಮಯ್ಯ

ಊಹಾ ಪತ್ರಿಕೋದ್ಯಮ ಸಮಾಜಕ್ಕೆ ಮಾರಕ- ಸಿದ್ದರಾಮಯ್ಯ

CM Siddaramaiah: ಊಹಾ ಪತ್ರಿಕೋದ್ಯಮ ಪತ್ರಿಕೋದ್ಯಮಕ್ಕೆ ಮತ್ತು ಸಮಾಜಕ್ಕೂ ಅಪಾಯ. ಮಾಧ್ಯಮ ಸ್ವತಂತ್ರವಾಗಿ, ನಿರ್ಭೀತಿಯಿಂದ ಸುದ್ದಿ ಮಾಡಬೇಕು ಎನ್ನುವುದರಲ್ಲಿ ನಂಬಿಕೆ ಇಟ್ಟುಕೊಂಡಿರುವವನು ನಾನು. ಜವಾಹರಲಾಲ್ ನೆಹರೂ ಅವರೂ ಇದನ್ನೇ ನಂಬಿದ್ದರು ಮತ್ತು ಪಾಲಿಸಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

CM Siddaramaiah: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಪ್ರಶ್ನೆಯೇ ಇಲ್ಲ: ಕಾಂಗ್ರೆಸ್‌ ಹೈಕಮಾಂಡ್‌

ಮುಖ್ಯಮಂತ್ರಿ ಬದಲಾವಣೆಯ ಪ್ರಶ್ನೆಯೇ ಇಲ್ಲ: ಕಾಂಗ್ರೆಸ್‌ ಹೈಕಮಾಂಡ್‌

CM Siddaramaiah: ಮುಖ್ಯಮಂತ್ರಿಯನ್ನು ತಕ್ಷಣ ಬದಲಾಯಿಸುವ ಪ್ರಶ್ನೆಯೇ ಇಲ್ಲ. ಆದರೆ ರಾಜ್ಯ ಕಾಂಗ್ರೆಸ್ ಘಟಕ ಮತ್ತು ಸಂಪುಟದಲ್ಲಿ ಪ್ರಮುಖ ಬದಲಾವಣೆಗಳಾಗುವ ಸಾಧ್ಯತೆ ಇದೆ ಮತ್ತು ಆ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ. ರಣದೀಪ್‌ ಸುರ್ಜೇವಾಲ ಈ ಕುರಿತು ಶಾಸಕರ ಜೊತೆ ಚರ್ಚೆ ನಡೆಸಿದ್ದಾರೆ.

Self Harming: ಬೇರೊಬ್ಬರ ಜತೆ ಮದುವೆ ನಿಶ್ಚಯ; ಆಟೋದಲ್ಲಿ ಪ್ರೇಮಿಗಳಿಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ!

ಆಟೋದಲ್ಲಿ ಪ್ರೇಮಿಗಳಿಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ!

Self Harming: ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಚಿಕ್ಕನಂದಿ ಗ್ರಾಮದ ಹೊರ ವಲಯದಲ್ಲಿ ಘಟನೆ ನಡೆದಿದೆ. ಹದಿನೈದು ದಿನದ ಹಿಂದೆ ಯುವತಿಗೆ ನಿಶ್ಚಿತಾರ್ಥವಾಗಿತ್ತು. ಮನೆಯಲ್ಲಿ ಬೇರೊಬ್ಬ ಯುವಕನೊಟ್ಟಿಗೆ ಮದುವೆ ನಿಶ್ಚಯ ಮಾಡಿದ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ ಆಟೋದಲ್ಲಿ ಪ್ರಿಯಕರನ ಜತೆ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಜಾಗತಿಕವಾಗಿ ಸಾಬೀತಾದ ಮಧ್ಯಮ-ಪಿವೋಟ್ ಮೊಣಕಾಲು ಇಂಪ್ಲಾಂಟ್ ತಂತ್ರಜ್ಞಾನ ಈಗ ಬೆಂಗಳೂರಿನಲ್ಲಿ

ಬೆಂಗಳೂರಿನಲ್ಲಿ ಮಧ್ಯಮ-ಪಿವೋಟ್ ಮೊಣಕಾಲು ಇಂಪ್ಲಾಂಟ್ ತಂತ್ರಜ್ಞಾನ

ನಾನು ಎವಲ್ಯೂಷನ್ ®️ ಮೀಡಿಯಲ್-ಪಿವೋಟ್ ಮೊಣಕಾಲನ್ನು ಬಹಳ ಕಡಿಮೆ ಸಮಯ ದಲ್ಲಿ ವ್ಯಾಪಕವಾಗಿ ಬಳಸಿದ್ದೇನೆ ಮತ್ತು ಒಟ್ಟಾರೆ ಫಲಿತಾಂಶದ ಬಗ್ಗೆ ಬಹಳಷ್ಟು ಪ್ರಭಾವಿತನಾಗಿ ದ್ದೇನೆ" ಎಂದು ಡಾ.ರಾಜಮನ್ಯಾ ಹೇಳಿದರು. "ಇದು ಮೊಣಕಾಲಿನ ಹೆಚ್ಚು ನೈಸರ್ಗಿಕ ಚಲನೆ ಮಾಡಲು ಸಹಾಯ ಮಾಡುತ್ತದೆ ಆರೋಗ್ಯಕರ ಮೊಣಕಾಲಿನ ಜಂಟಿ ಚಲನಶಾಸ್ತ್ರವನ್ನು ನಿಕಟವಾಗಿ ಪುನರಾವ ರ್ತಿಸುತ್ತದೆ

Tapassi Movie: ತೆರೆಮೇಲೆ ಮೋಡಿ ಮಾಡೋಕೆ ಕ್ರೇಜಿಸ್ಟಾರ್‌ ರೆಡಿ; ಬಹುನಿರೀಕ್ಷಿತ ‘ತಪಸ್ಸಿ’ ಚಿತ್ರ ಈ ವಾರ ರಿಲೀಸ್‌

ರವಿಚಂದ್ರನ್ ಅಭಿನಯದ ಬಹುನಿರೀಕ್ಷಿತ ‘ತಪಸ್ಸಿ’ ಚಿತ್ರ ಈ ವಾರ ತೆರೆಗೆ

Tapassi Movie: ಸ್ಪೆನ್ಸರ್ ಮ್ಯಾಥ್ಯೂ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಹಾಗೂ ಕ್ರೇಜಿಸ್ಟಾರ್ ರವಿಚಂದ್ರನ್ ವಿಶೇಷಪಾತ್ರದಲ್ಲಿ ನಟಿಸಿರುವ, ವಿಭಿನ್ನ ಕಥಾಹಂದರ ಹೊಂದಿರುವ ʼತಪಸ್ಸಿʼ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ʼತಪಸ್ಸಿʼ ಮಹಿಳಾ ಪ್ರಧಾನ ಚಿತ್ರವಾಗಿದ್ದು, ಅಮೆಯ್ರಾ ಗೋಸ್ವಾಮಿ ನಾಯಕಿಯಾಗಿ ನಟಿಸಿದ್ದಾರೆ.

ಗೋಕುಲ ಎಜುಕೇಶನ್ ಫೌಂಡೇಶನ್ (ಜಿಇಎಫ್ - ಮೆಡಿಕಲ್) ಆರೋಗ್ಯ ಸೇವೆಗಳಿಗೆ ನೂತನ ಮುಖ್ಯ ಕಾರ್ಯನಿರ್ವಾಹಕರಾಗಿ ಡಾ.ಎಸ್. ಸಿ. ನಾಗೇಂದ್ರ ಸ್ವಾಮಿ ನೇಮಕ

ನೂತನ ಮುಖ್ಯ ಕಾರ್ಯನಿರ್ವಾಹಕರಾಗಿ ಡಾ.ಎಸ್.ಸಿ.ನಾಗೇಂದ್ರ ಸ್ವಾಮಿ ನೇಮಕ

ರಾಮಯ್ಯ ಮೆಮೋರಿಯಲ್ ಹಾಸ್ಪಿಟಲ್ (ಆರ್‌ಎಂಹೆಚ್), 2004ರಲ್ಲಿ ಸ್ಥಾಪನೆಯಾಗಿದ್ದು, ಭಾರತದ ಬೆಂಗಳೂರಿನಲ್ಲಿ 500+ ಪ್ರತ್ಯೇಕ ಮಲ್ಟಿ-ಸೂಪರ್‌ಸ್ಪೆಷಾಲಿಟಿ ಕ್ವಾಟರ್ನರಿ ಕೇರ್ ಆಸ್ಪತ್ರೆಯಾಗಿದೆ, ಇದು ಸಮಗ್ರ ರೋಗಿಗಳ ಕೇಂದ್ರಿತ ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸುತ್ತದೆ. ಇದು ಜಾಗತಿಕ ಮಾನದಂಡಗಳಿಗೆ ಸಮಾನವಾಗಿದೆ.

Nandini Milk Parlour: ನಂದಿನಿ ಮಿಲ್ಕ್‌ ಪಾರ್ಲರ್‌ನಲ್ಲಿ ಹಾಲಿನ ಜತೆ ಆಲ್ಕೋಹಾಲ್‌ ಮಾರಾಟ!; ಕ್ರಮಕ್ಕೆ ಆಗ್ರಹ

ನಂದಿನಿ ಮಿಲ್ಕ್‌ ಪಾರ್ಲರ್‌ನಲ್ಲಿ ಹಾಲಿನ ಜತೆ ಆಲ್ಕೋಹಾಲ್‌ ಮಾರಾಟ!

Mysore News: ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ನಂದಿನಿ ಪಾರ್ಲರ್‌ನಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ. ರಹಸ್ಯವಾಗಿ ಹಾಲಿನ ಪ್ಯಾಕೆಟ್ ನಡುವೆ ಮದ್ಯದ ಪ್ಯಾಕೆಟ್‌ಗಳನ್ನು ಗ್ರಾಹಕರಿಗೆ ನೀಡುವ ದೃಶ್ಯ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಹೀಗಾಗಿ ಅಂಗಡಿ ಮಾಲೀಕನ ವಿರುದ್ಧ ಕ್ರಮಕ್ಕೆ ಸ್ಥಳೀಯರು ಆಗ್ರಹಿಸಿದ್ದಾರೆ.

Narayana Murthy : "70 ಗಂಟೆ ಕೆಲಸ" ಹೇಳಿಕೆ ವಾಪಾಸ್‌? ನೌಕರರಿಗೆ ಕಡಿಮೆ ಕೆಲಸ, ಆರೋಗ್ಯ ಮೊದಲು ಎಂದ ಇನ್ಫೋಸಿಸ್‌!

ಕಡಿಮೆ ಕೆಲಸ, ಆರೋಗ್ಯ ಮೊದಲು ಎಂದ ಇನ್ಫೋಸಿಸ್‌!

ವಾರಕ್ಕೆ 70 ಗಂಟೆ ಕೆಲಸ ಮಾಡಬೇಕೆಂದು ಹೇಳಿದ್ದ ಇನ್ಫೋಸಿಸ್ ಸಂಸ್ಥೆಯ ಸಹ ಸಂಸ್ಥಾಪಕ ನಾರಾಯಣಮೂರ್ತಿ ಈಗ ಉದ್ಯೋಗಿಗಳ ಯೋಗಕ್ಷೇಮದ ಬಗ್ಗೆ ಮಾತನಾಡಿದ್ದಾರೆ. ನಾರಾಯಣ ಮೂರ್ತಿ ಅವರ ಒಡೆತನದ ಇನ್ಫೋಸಿಸ್ ತನ್ನ ಉದ್ಯೋಗಿಗಳಿಗೆ ಕೆಲಸ ಹಾಗೂ ಜೀವನದ ಸಮತೋಲನವನ್ನು ಕಾಯ್ದುಕೊಳ್ಳುವಂತೆ ಕೇಳಿಕೊಳ್ಳುತ್ತಿದೆ.

Bengaluru Stampede: ಬೆಂಗಳೂರು ಕಾಲ್ತುಳಿತ: ಐಪಿಎಸ್‌ ವಿಕಾಸ್‌ ಕುಮಾರ್‌ ಅಮಾನತು ರದ್ದುಗೊಳಿಸಿದ ಸಿಎಟಿ

ಕಾಲ್ತುಳಿತ: ಐಪಿಎಸ್‌ ವಿಕಾಸ್‌ ಕುಮಾರ್‌ ಅಮಾನತು ರದ್ದುಗೊಳಿಸಿದ ಸಿಎಟಿ

Bengaluru Stampede: ಅಮಾನತು ಪ್ರಶ್ನಿಸಿ ವಿಕಾಸ್​ ಕುಮಾರ್ ಅವರು ಸಿಎಟಿ ಮೊರೆ ಹೋಗಿದ್ದರು. ಐಪಿಎಸ್​ ಅಧಿಕಾರಿ ವಿಕಾಸ್ ಕುಮಾರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ, ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿ ವಿವರಣೆ ಕೋರಿತ್ತು. ಇದೀಗ, ವಿಕಾಸ್ ಕುಮಾರ್ ಅವರ ಅಮಾನತು ಆದೇಶ ಹಿಂಪಡೆಯುವಂತೆ ರಾಜ್ಯ ಸರ್ಕಾರಕ್ಕೆ ಸಿಎಟಿ ನಿರ್ದೇಶನ ನೀಡಿದೆ.

Road Accident: ದೊಡ್ಡಬಳ್ಳಾಪುರದಲ್ಲಿ ಕಾರು ಅಪಘಾತ, ನಾಲ್ವರು ಸಾವು

ದೊಡ್ಡಬಳ್ಳಾಪುರದಲ್ಲಿ ಕಾರು ಅಪಘಾತ, ನಾಲ್ವರು ಸಾವು

Road Accident : ಈಶ್ವರಪ್ಪ, ಪುರುಷೋತ್ತಮ, ಕಾಳಪ್ಪ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. ಅಪಘಾತದ ರಭಸಕ್ಕೆ ಮೃತ ದೇಹಗಳು ರಸ್ತೆಯ ಮೇಲೆ ಚಲ್ಲಾಪಿಲ್ಲಿಯಾಗಿ ಬಿದ್ದಿವೆ. ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನುಳಿದ ನಾಲ್ವರಿಗೆ ಗಂಭೀರವಾದ ಗಾಯಗಳಾಗಿವೆ.

Gold Price Today: ಸ್ವರ್ಣಪ್ರಿಯರಿಗೆ ಮತ್ತೆ ಶಾಕ್‌! ಚಿನ್ನದ ದರದಲ್ಲಿ ಭಾರೀ ಏರಿಕೆ

ಇಂದು ಚಿನ್ನದ ದರ ಎಷ್ಟಿದೆ? ಇಲ್ಲಿ ಚೆಕ್‌ ಮಾಡಿ

Gold Price Today on 1st July 2025: ಇಂದು 22 ಕ್ಯಾರಟ್‌ನ 8 ಗ್ರಾಂ ಚಿನ್ನ 72,160 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 90,200 ರೂ. ಮತ್ತು 100 ಗ್ರಾಂಗೆ 9,02,000 ರೂ. ನೀಡಬೇಕಾಗುತ್ತದೆ. 24 ಕ್ಯಾರಟ್‌ನ 8 ಗ್ರಾಂ ಚಿನ್ನ 78,720 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 98,400 ರೂ. ಮತ್ತು 100 ಗ್ರಾಂಗೆ 9,84,000 ರೂ. ಪಾವತಿಸಬೇಕಾಗುತ್ತದೆ.

UPS blast: ದಾವಣಗೆರೆಯಲ್ಲಿ ಯುಪಿಎಸ್‌ ಸ್ಫೋಟಗೊಂಡು ಇಬ್ಬರು ಸಾವು

ದಾವಣಗೆರೆಯಲ್ಲಿ ಯುಪಿಎಸ್‌ ಸ್ಫೋಟಗೊಂಡು ಇಬ್ಬರು ಸಾವು

ದಾವಣಗೆರೆಯ ಕಾಯಿಪೇಟೆಯಲ್ಲಿ ಯುಪಿಎಸ್ ಸ್ಪೋಟಗೊಂಡ (UPS blast) ಪರಿಣಾಮ ಅಗ್ನಿ ಅವಘಡ (fire accident) ಸಂಭವಿಸಿದ್ದು, ಈ ದುರಂತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ವಿದ್ಯುತ್‌ ನಿರ್ವಹಣೆಗೆ ಕಳಪೆ ಯುಪಿಎಸ್‌ಗಳನ್ನು ಬಳಸದಂತೆ ವಿದ್ಯುತ್‌ ಇಲಾಖೆ ಈ ಹಿಂದೆ ಎಚ್ಚರಿಕೆ ನೀಡಿತ್ತು.

Fire Accident: ವಿಕ್ಟೋರಿಯಾ ಆಸ್ಪತ್ರೆಯ ವಾರ್ಡ್‌ನಲ್ಲಿ ಬೆಂಕಿ ಆಕಸ್ಮಿಕ, ರೋಗಿಗಳು ಪಾರು

ವಿಕ್ಟೋರಿಯಾ ಆಸ್ಪತ್ರೆಯ ವಾರ್ಡ್‌ನಲ್ಲಿ ಬೆಂಕಿ ಆಕಸ್ಮಿಕ, ರೋಗಿಗಳು ಪಾರು

Fire Accident: ವಿಕ್ಟೋರಿಯಾ ಆಸ್ಪತ್ರೆಯ ಸ್ವಿಚ್ ಬೋರ್ಡ್​​ನಲ್ಲಿ ಶಾರ್ಟ್ ಸರ್ಕ್ಯೂಟ್​​ನಿಂದ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗುತ್ತಿದೆ. ಬರ್ನ್ ವಾರ್ಡ್​​ನ ಸೆಮಿನಾರ್ ಕೋಣೆಯಲ್ಲಿ ಬೆಂಕಿ ಹತ್ತಿಕೊಂಡಿತ್ತು. ಬೆಂಕಿ ಮತ್ತು ಹೊಗೆ ಕಾಣಿಸಿಕೊಳ್ಳುತ್ತಿದ್ದಂತೆ ಎಚ್ಚೆತ್ತ ವೈದ್ಯರು ಕೂಡಲೇ ಎಲ್ಲಾ ರೋಗಿಗಳನ್ನು ಹೆಚ್ ಬ್ಲಾಕ್‌ಗೆ ಶಿಫ್ಟ್ ಮಾಡಿದ್ದಾರೆ.