ಕಾಲುವೆಯಲ್ಲಿ ಮುಳುಗಿ ಇಬ್ಬರು ರೈತ ಮಹಿಳೆಯರು ಸಾವು
ಗದ್ದೆಯಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಮರಳುವಾಗ ದುರ್ಘಟನೆ ಸಂಭವಿಸಿದೆ. ಕೂಲಿ ಕೆಲಸ ಮುಗಿಸಿ ಕೈಕಾಲು ತೊಳೆದುಕೊಂಡು ಮನೆಗೆ ಹೋಗಲು ಕಾಲುವೆ ಬಳಿ ಬಂದಿದ್ದರು. ಲಿಂಗಸುಗೂರು ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಶೋಧ ಕಾರ್ಯ ನಡೆಸಿ ಮಹಿಳೆಯರ ಶವ ಹೊರತೆಗೆದಿದ್ದಾರೆ. ಸದ್ಯ ಇಬ್ಬರು ಮಹಿಳೆಯರ ಮೃತದೇಹವನ್ನು ಲಿಂಗಸುಗೂರು ತಾಲೂಕಾಸ್ಪತ್ರೆ ಶವಾಗಾರಕ್ಕೆ ರವಾನಿಸಲಾಗಿದೆ.