ಅಮೇಜಿಂಗ್ ಪೆಟ್ ಪ್ಲಾನೆಟ್; ಶಿರಸಿಯಲ್ಲಿದೆ ಒಂದು ಪುಟ್ಟ ಪ್ರಾಣಿ ಸಾಮ್ರಾಜ್ಯ!
ಇದು ಪ್ರಾಣಿ-ಪಕ್ಷಿಗಳ ಅನಾಥಾಶ್ರಮವಾಗಿದೆ. ಪ್ರಾಣಿಪ್ರಿಯ ವೈದ್ಯ ಡಾ. ರಾಜೇಂದ್ರ ಸಿರ್ಸಿಕರ್ ಮತ್ತು ಪೂಜಾರಾಜ್ ಸಿರ್ಸಿಕರ್ ದಂಪತಿ ಈ 'ಅಮೇಜಿಂಗ್ ಪೆಟ್ ಪ್ಲಾನೆಟ್' ಅನ್ನು ನಡೆಸುತ್ತಿದ್ದಾರೆ. ರಸ್ತೆ ಅಪಘಾತಕ್ಕೊಳಗಾದ ಮತ್ತು ಅನಾರೋಗ್ಯಕ್ಕೆ ತುತ್ತಾದ ಅನಾಥ ಪ್ರಾಣಿ-ಪಕ್ಷಿಗಳನ್ನು ಈ ದಂಪತಿ ರಕ್ಷಿಸಿ ತಂದು, ತಮ್ಮ ಸ್ವಂತ ಹಣದಲ್ಲಿ ಪೋಷಿಸುತ್ತಿದ್ದಾರೆ.