ಫೆ.12ಕ್ಕೆ ನಗರಕ್ಕೆ ಜಗಜೀತ್‌ಸಿಂಗ್ ದಲೇವಾಲ ಆಗಮನ
ದೇಶಕ್ಕೆ ಸ್ವಾತಂತ್ರ್ಯ ಬಂದು 78 ವರ್ಷ ಕಳೆದರೂ ದೇಶಕ್ಕೆ ಅನ್ನ ನೀಡುವ ಅನ್ನದಾತರು ಸಮಸ್ಯೆಗಳ ಸುಳಿಯಿಂದ ಹೊರಬರಲಾಗದೆ ನರಳುತ್ತಿದ್ದಾರೆ.ಬೆವರು ಹರಿಸಿ ದುಡಿದರೂ ಕೂಡ ಬೆಳೆದ ಬೆಳೆಗಳಿಗೆ ಸ0ರಿಯಾದ ಬೆಲೆ ದೊರೆಯುತ್ತಿಲ್ಲ. ನಮ್ಮನ್ನಾಳುವ ಕೇಂದ್ರ ಮತ್ತು ರಾಜ್ಯ ಸರಕಾರಗಳೂ ಕೂಡ ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹರ ಕಂಡುಹಿಡಿಯುವಲ್ಲಿ ಸಂಪೂರ್ಣ ಸೋತಿವೆ.