ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕರ್ನಾಟಕ

MB Patil: ಕಿರ್ಲೋಸ್ಕರ್‌ನಿಂದ ರಾಜ್ಯದಲ್ಲಿ 3,000 ಕೋಟಿ ರೂ. ಹೂಡಿಕೆ: ಎಂ.ಬಿ. ಪಾಟೀಲ್‌

ಕಿರ್ಲೋಸ್ಕರ್‌ನಿಂದ ರಾಜ್ಯದಲ್ಲಿ 3,000 ಕೋಟಿ ರೂ. ಹೂಡಿಕೆ: ಎಂ.ಬಿ. ಪಾಟೀಲ್‌

Kirloskar Ferrous: ಕಿರ್ಲೋಸ್ಕರ್ ಫೆರೋಸ್ ಈಗಾಗಲೇ ಹಿರಿಯೂರಿನಲ್ಲಿ ತನ್ನ ಘಟಕ ಹೊಂದಿದ್ದು, ಅದನ್ನು ಮೇಲ್ದರ್ಜೆಗೇರಿಸಲು ಮುಂದಾಗಿದೆ. ಇಲ್ಲಿ ಸ್ಪಾಂಜ್ ಪೈಪ್ ಉತ್ಪಾದನೆ ಆರಂಭಿಸಲಿದೆ. ಜತೆಗೆ ತನ್ನ ಉಕ್ಕು ಉತ್ಪಾದನೆ ಘಟಕದ ಸಾಮರ್ಥ್ಯ ಹೆಚ್ಚಳ, ಕಬ್ಬಿಣದ ಅದಿರು ಸಂಸ್ಕರಣೆ ಹೆಚ್ಚಳ, ಫೌಂಡ್ರಿ ಘಟಕದ ಅಭಿವೃದ್ಧಿ ಮುಂತಾದ ಯೋಜನೆಗಳನ್ನು ಕೈಗೆತ್ತಿಕೊಳ್ಳಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.

Sri Sathya Sai University: ಮೌಲ್ಯಾಧಾರಿತ ಶಿಕ್ಷಣ; ಕರ್ನಾಟಕ ಸಂಸ್ಕೃತ ವಿವಿ ಜತೆ ಸತ್ಯ ಸಾಯಿ ವಿವಿ ಒಡಂಬಡಿಕೆ

ಮೌಲ್ಯಾಧಾರಿತ ಶಿಕ್ಷಣ; ಸಂಸ್ಕೃತ ವಿವಿ ಜತೆ ಸತ್ಯ ಸಾಯಿ ವಿವಿ ಒಪ್ಪಂದ

Sadguru Sri Madhusudan Sai: ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿರುವ 'ಒಂದು ಜಗತ್ತು ಒಂದು ಕುಟುಂಬ ಜಾಗತಿಕ ಸಾಂಸ್ಕೃತಿಕ ಉತ್ಸವ'ದ 81ನೇ ದಿನವಾದ ಮಂಗಳವಾರ ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯ ಮತ್ತು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಒಡಂಬಡಿಕೆ ಮಾಡಿಕೊಂಡವು. ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ಸಮ್ಮುಖದಲ್ಲಿ ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯ ಕುಲಪತಿ ಶ್ರೀಕಂಠ ಮೂರ್ತಿ ಹಾಗೂ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಹಲ್ಯಾ ಅವರು ಒಡಂಬಡಿಕೆ ಪತ್ರ ವಿನಿಮಯ ಮಾಡಿಕೊಂಡರು.

BY Vijayendra: ರಾಜ್ಯ ಸರ್ಕಾರಕ್ಕೆ ಮನುಷ್ಯತ್ವ ಇದ್ದರೆ ತಕ್ಷಣ ರೈತರ ಸಂಕಷ್ಟಕ್ಕೆ ಪರಿಹಾರ ನೀಡಲಿ: ಬಿ.ವೈ. ವಿಜಯೇಂದ್ರ ಆಗ್ರಹ

ಸರ್ಕಾರಕ್ಕೆ ಮನುಷ್ಯತ್ವ ಇದ್ದರೆ ರೈತರ ಸಂಕಷ್ಟ ಪರಿಹರಿಸಲಿ

Sugarcane farmers protest: ಬೆಳಗಾವಿ ಜಿಲ್ಲೆಯ ಗುರ್ಲಾಪುರ ಕ್ರಾಸ್‌ನಲ್ಲಿ ನಡೆಯುತ್ತಿರುವ ಆಹೋರಾತ್ರಿ ಹೋರಾಟದಲ್ಲಿ ಮಂಗಳವಾರ ಪಾಲ್ಗೊಂಡು ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ, ನಾನು ರಾಜಕಾರಣ ಮಾಡುತ್ತಿಲ್ಲ. ರೈತರು ಇವತ್ತು ಕಂಗಾಲಾಗಿದ್ದಾರೆ. ಕಬ್ಬು ಬೆಳೆಗಾರರು ಕೇಳುತ್ತಿರುವುದು ಭಿಕ್ಷೆಯಲ್ಲ, ನ್ಯಾಯಸಮ್ಮತ ಬೇಡಿಕೆಯನ್ನು ಅವರು ಕೇಳುತ್ತಿದ್ದಾರೆ. ಮುಖ್ಯಮಂತ್ರಿಗಳಿಗೆ ಜವಾಬ್ದಾರಿ ಇದ್ದಲ್ಲಿ, ರಾಜ್ಯ ಸರ್ಕಾರಕ್ಕೆ ಕಿಂಚಿತ್ತಾದರೂ ಮನುಷ್ಯತ್ವ ಇದ್ದರೆ, ತಕ್ಷಣ ಸಭೆ ಕರೆದು ರೈತರ ಸಂಕಷ್ಟಕ್ಕೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

Mangaluru News: ದಾಂಪತ್ಯ ಕಲಹ; ಮಗಳ ಜತೆ ಆತ್ಮಹತ್ಯೆಗೆ ಯತ್ನಿಸಿದ ತಂದೆಯ ರಕ್ಷಣೆ

ದಾಂಪತ್ಯ ಕಲಹ; ಮಗಳ ಜತೆ ಆತ್ಮಹತ್ಯೆಗೆ ಯತ್ನಿಸಿದ ತಂದೆಯ ರಕ್ಷಣೆ

Self Harming: ಮಂಗಳೂರಿನ ಪಣಂಬೂರು ಬೀಚ್ ಬಳಿ ಪುಟ್ಟ ಮಗಳ ಜತೆ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಪ್ರಯತ್ನಿಸುತ್ತಿದ್ದ. ಸುತ್ತಮುತ್ತಲು ಜನ, ಪೊಲೀಸರು ಇರುವುದನ್ನು ಗಮನಿಸಿ ಆತ ಮನೆಗೆ ತೆರಳಿದ್ದ. ಸಂಶಯದಿಂದ ಮನೆಗೆ ತೆರಳಿದಾಗ ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸುತ್ತಿದ್ದ ತಂದೆ ಮತ್ತು ಮಗಳನ್ನು ಪೊಲೀಸರು ರಕ್ಷಿಸಿದ್ದಾರೆ.

KSET 2025 Key Answer: ಕೆಸೆಟ್-2025ರ ಕೀ ಉತ್ತರ ಪ್ರಕಟ; ವೆಬ್‌ಸೈಟ್‌ ಲಿಂಕ್‌ ಇಲ್ಲಿದೆ

ಕೆಸೆಟ್-2025ರ ಕೀ ಉತ್ತರ ಪ್ರಕಟ; ವೆಬ್‌ಸೈಟ್‌ ಲಿಂಕ್‌ ಇಲ್ಲಿದೆ

Karnataka Examinations Authority: ಕೆಸೆಟ್‌ ಪರೀಕ್ಷೆಯ ಕೀ ಉತ್ತರಗಳನ್ನು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಅಭ್ಯರ್ಥಿಗಳ ಮಾಹಿತಿಗಾಗಿ ಮಂಗಳವಾರ ಪ್ರಕಟಿಸಲಾಗಿದೆ. ಪ್ರಕಟಿತ ಕೀ ಉತ್ತರಗಳಿಗೆ ಆಕ್ಷೇಪಣೆಗಳಿದ್ದಲ್ಲಿ, ಅಭ್ಯರ್ಥಿಗಳು ಕೆಇಎ ವೆಬ್‌ಸೈಟ್‌ನಲ್ಲಿ ಒದಗಿಸಲಾದ ಆನ್‌ಲೈನ್ ಪೋರ್ಟಲ್ ಮೂಲಕ ಮಾತ್ರವೇ ನ.6 ಮಧ್ಯಾಹ್ನ 3 ಗಂಟೆಯೊಳಗೆ ಸಲ್ಲಿಸಬೇಕು.

Pralhad Joshi: ʼTIME 100 Climate 2025ʼ ಪಟ್ಟಿಯಲ್ಲಿ ಸ್ಥಾನ ಪಡೆದ ಸಚಿವ ಪ್ರಲ್ಹಾದ್‌ ಜೋಶಿ

ʼTIME 100 Climate 2025ʼ ಪಟ್ಟಿಯಲ್ಲಿ ಸ್ಥಾನ ಪಡೆದ ಪ್ರಲ್ಹಾದ್‌ ಜೋಶಿ

TIME 100 Climate Most Powerfull Leader: ಜಗತ್ತಿನಲ್ಲಿ ಹವಾಮಾನ ಬದಲಾವಣೆ ತಡೆದು ಸುಸ್ಥಿರತೆ ಕಾಪಾಡುತ್ತಿರುವವರ ಕುರಿತು ಸಿದ್ಧಪಡಿಸಿದ "TIME 100 climate most powerfull leader" ಪಟ್ಟಿಯಲ್ಲಿ ಪ್ರಮುಖ ಸ್ಥಾನ ಪಡೆದಿದ್ದಾರೆ ಪ್ರಧಾನಿ ಮೋದಿ ಸಂಪುಟದ ಪ್ರಭಾವಿ ಸಚಿವ ಪ್ರಲ್ಹಾದ್‌ ಜೋಶಿ. ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಸತತ 5ನೇ ಬಾರಿ ಸಂಸದರಾಗಿ ದಾಖಲೆ ನಿರ್ಮಿಸಿದ ಪ್ರಲ್ಹಾದ್‌ ಜೋಶಿ ಇದೀಗ ಈ ವರ್ಷದ 'TIME 100 CLIMATE' ಪಟ್ಟಿಯಲ್ಲಿ ಪ್ರಭಾವಿ ನಾಯಕನ ಸ್ಥಾನ ಪಡೆದ "ಮೊದಲ ಭಾರತೀಯ ರಾಜಕಾರಣಿ" ಎಂಬ ಹೊಸ ದಾಖಲೆ ಸಹ ಬರೆದು ವಿಶ್ವದಾದ್ಯಂತ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Kembhavi RSS Route March: ಕೆಂಭಾವಿಯಲ್ಲಿ ಆರ್‌ಎಸ್‌ಎಸ್‌ ಪಥ ಸಂಚಲನ ಯಶಸ್ವಿ; ಸಾವಿರಕ್ಕೂ ಅಧಿಕ ಸ್ವಯಂಸೇವಕರು ಭಾಗಿ

ಕೆಂಭಾವಿಯಲ್ಲಿ ಆರ್‌ಎಸ್‌ಎಸ್‌ ಪಥ ಸಂಚಲನ ಯಶಸ್ವಿ

RSS Route march in Kembhavi: ಆರ್‌ಎಸ್‌ಎಸ್‌ ಪಥ ಸಂಚಲನ ಹಿನ್ನೆಲೆಯಲ್ಲಿ ಯಾದಗಿರಿ ಜಿಲ್ಲೆಯ ಕೆಂಭಾವಿ ಪಟ್ಟಣದಲ್ಲಿ 350ಕ್ಕೂ ಅಧಿಕ‌ ಪೋಲಿಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಪಥ ಸಂಚಲನ ಸಾಗುವ ಪ್ರಮುಖ ಬೀದಿಗಳಲ್ಲಿ ರಂಗೋಲಿ ಬಿಡಿಸಿ ಸಿಂಗಾರ ಮಾಡಲಾಗಿತ್ತು. ರಾಜ‌ ಬೀದಿಯಲ್ಲಿ ದೇಶಭಕ್ತರ ಭಾವಚಿತ್ರ, ಆರ್‌ಎಸ್‌ಎಸ್‌ ಸರಸಂಘಚಾಲಕರ ಫೋಟೊಗಳು ರಾರಾಜಿಸಿದವು.

Laxmi Hebbalkar: ನಾವು ಕೂಡ ರೈತರು; ಕಬ್ಬು ಬೆಳೆಗಾರರಿಗೆ ಅನ್ಯಾಯ ಆಗದಂತೆ ಕ್ರಮ ಎಂದ ಹೆಬ್ಬಾಳ್ಕರ್

ಕಬ್ಬು ಬೆಳೆಗಾರರಿಗೆ ಅನ್ಯಾಯ ಆಗದಂತೆ ಕ್ರಮ ಎಂದ ಹೆಬ್ಬಾಳ್ಕರ್

Sugarcane Farmers Protest: ನಾವು ಕೂಡ ರೈತರು, ಕಾರ್ಖಾನೆ ಇದ್ದ ಕಾರಣಕ್ಕೆ ರೈತರ ಕಷ್ಟ ಗೊತ್ತಿಲ್ಲ ಅಂತಲ್ಲ. ರೈತರಿಗೂ ಅನ್ಯಾಯ ಆಗಬಾರದು, ಕಾರ್ಖಾನೆ ಮಾಲೀಕರಿಗೂ ಅನ್ಯಾಯ ಆಗಬಾರದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ. ಕಾರ್ಖಾನೆ ಮಾಲೀಕರು, ರೈತರು ಸೇರಿ ಸಭೆ ಮಾಡುತ್ತೇವೆ. ದರದ ಬಗ್ಗೆ ಮಾತನಾಡಲು ಹೋದರೆ ಬೇರೆ ರೀತಿ ಆಗುತ್ತೆ. ರೈತರಿಗೆ ದಕ್ಕೆಯಾಗದ ರೀತಿಯಲ್ಲಿ ನಡೆದುಕೊಳ್ಳಬೇಕು ಎಂದು ‌ಅವರು ಹೇಳಿದ್ದಾರೆ.

Doctor Murder Case: ನಿನಗಾಗಿ ನನ್ನ ಹೆಂಡ್ತಿಯನ್ನು ಕೊಂದೆ; ಪತ್ನಿ ಕೊಲೆ ಬಳಿಕ ನಾಲ್ಕೈದು ಮಹಿಳೆಯರಿಗೆ ಮೆಸೇಜ್‌ ಕಳುಹಿಸಿದ್ದ ವೈದ್ಯ!

ನಿನಗಾಗಿ ನನ್ನ ಹೆಂಡ್ತಿಯನ್ನು ಕೊಂದೆ; ಪತ್ನಿ ಕೊಲೆ ಬಳಿಕ ವೈದ್ಯ ಮೆಸೇಜ್‌!

Dr Kritika Reddy Murder Case: ಪತ್ನಿ ಕೃತಿಕಾ ಕೊಲೆ ಬಳಿಕ ವೈದ್ಯ ಮಹೇಂದ್ರ ರೆಡ್ಡಿ, ತನ್ನ ಪ್ರಪೋಸಲ್ ತಿರಸ್ಕರಿಸಿದ್ದ ಮಹಿಳೆಯರಿಗೆ ಮೆಸೇಜ್‌ ಕಳುಹಿಸಿದ್ದ ಎನ್ನುವುದು ತಿಳಿದುಬಂದಿದೆ. ಪೊಲೀಸರು ವಶಪಡಿಸಿಕೊಂಡ ಮೊಬೈಲ್ ಫೋನ್ ಮತ್ತು ಲ್ಯಾಪ್‌ಟಾಪ್‌ನಲ್ಲಿದ್ದ ಡೇಟಾವನ್ನು ಪರಿಶೀಲಿಸಿದಾಗ ವೈದ್ಯನ ಕುರಿತ ಹಲವು ವಿಚಾರ ಬೆಳಕಿಗೆ ಬಂದಿದೆ.

ಟಾಟಾ ಟ್ರಸ್ಟ್‌ ಸಹಭಾಗಿತ್ವದಲ್ಲಿ ನಡೆದ ನೊಬೆಲ್ ಪ್ರೈಜ್ ಡೈಲಾಗ್ ಇಂಡಿಯಾ 2025

ಟಾಟಾ ಟ್ರಸ್ಟ್‌ ಸಹಭಾಗಿತ್ವದಲ್ಲಿ ನೊಬೆಲ್ ಪ್ರೈಜ್ ಡೈಲಾಗ್ ಇಂಡಿಯಾ 2025

ನಾವು ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ದಾರಿಯಲ್ಲಿದ್ದೇವೆ. ಈ ಸಂದರ್ಭದಲ್ಲಿ ನಾವು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ವಿಚಾರದಲ್ಲಿ ಬೆಳವಣಿಗೆಯನ್ನು ಸಾಧಿಸಲು ಯುವ ಜನರನ್ನು ಸಬಲೀಕರಣಗೊಳಿಸಬೇಕಾಗಿದೆ. ವಿಶೇಷವಾಗಿ ಅಗತ್ಯ ಇರುವ ವ್ಯಕ್ತಿಗಳಿಗಾಗಿ ಹೊಸ ಆವಿಷ್ಕಾರ ಸೃಷ್ಟಿಗೆ ಪ್ರೋತ್ಸಾಹಿಸಬೇಕಾಗಿದೆ.

Vijay Mallya: ಬ್ಯಾಂಕ್‌ಗಳಿಂದ ಸಾಲದ ಲೆಕ್ಕ ಕೋರಿ ಹೈಕೋರ್ಟ್‌ಗೆ ವಿಜಯ್‌ ಮಲ್ಯ ರಿಟ್‌

ಬ್ಯಾಂಕ್‌ಗಳಿಂದ ಸಾಲದ ಲೆಕ್ಕ ಕೋರಿ ಹೈಕೋರ್ಟ್‌ಗೆ ವಿಜಯ್‌ ಮಲ್ಯ ರಿಟ್‌

Vijay Mally Writ: ವಿಜಯ್ ಮಲ್ಯ ಪರವಾಗಿ ಹಿರಿಯ ವಕೀಲ ಸಜನ್ ಪೂವಯ್ಯ ವಾದಿಸಿದರು. ವಿಜಯ್‌ ಮಲ್ಯ ಅವರು 6,200 ಕೋಟಿ ರೂಪಾಯಿ ಸಾಲ ಮರುಪಾವತಿ ಮಾಡಬೇಕಿತ್ತು. 14,000 ಕೋಟಿ ಹಣವನ್ನು ಅವರಿಂದ ವಸೂಲಿ ಮಾಡಿದ್ದಾರೆ. ಹೀಗೆಂದು ಹಣಕಾಸು ಸಚಿವೆ ಲೋಕಸಭೆಗೆ ತಿಳಿಸಿದ್ದಾರೆ. ಸಾಲ ವಸೂಲಾತಿ ಅಧಿಕಾರಿ ಸಹ 10200 ಕೋಟಿ ವಸೂಲಾಗಿದೆ ಎಂದಿದ್ದಾರೆ. ಸಂಪೂರ್ಣವಾಗಿ ಸಾಲ ತೀರಿದರೂ ಕೂಡ ಈಗಲೂ ಪ್ರಕ್ರಿಯೆ ಮುಂದುವರಿಸಲಾಗುತ್ತಿದೆ. ಹೀಗಾಗಿ ಸಾಲ ವಸೂಲಿಯಾದ ಲೆಕ್ಕಪತ್ರ ಕೋರಿ ವಿಜಯ್ ಮಲ್ಯ ರಿಟ್ ಅರ್ಜಿ ಸಲ್ಲಿಸಿದ್ದಾರೆ ಎಂದು ವಾದಿಸಿದರು.

Gauribidanur News: ಮದಕರಿ ನಾಯಕನ ಶೌರ್ಯ ಸಾಹಸ ಯುವ ಜನತೆಗೆ ಮಾದರಿ : ಆಂಧ್ರ ಸಂಸದ ಅಂಬಿಕಾ ಜಿ ಲಕ್ಷ್ಮೀನಾರಾಯಣ

ಮದಕರಿ ನಾಯಕನ ಶೌರ್ಯ ಸಾಹಸ ಯುವ ಜನತೆಗೆ ಮಾದರಿ

ನಾಯಕ ಸಮಾಜ ರಾಜಕೀಯ ವನ್ನು ಬದಿಗೊತ್ತಿ ಒಂದುಗೂಡಬೇಕು, ಯಾರು ಯಾವುದೇ ರಾಜಕೀಯ ಪಕ್ಷದಲ್ಲಿದ್ದರೂ ಚಿಂತೆಯಿಲ್ಲ, ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕೀಯ ಮಾಡಬೇಕು, ಉಳಿದಂತೆ ಸಮಾಜದ ವಿಚಾರ ಬಂದಾಗ ಭಿನ್ನಾಭಿಪ್ರಾಯ ಮರೆತು ಒಂದಾಗಬೇಕು , ತಾಲ್ಲೂಕಿನಲ್ಲಿ ಮದಕರಿ ಯುವ ಬ್ರಿಗೇಡ್ ಮೂಲಕ ಅರ್ಥಪೂರ್ಣವಾಗಿ ಮದಕರಿ ನಾಯಕರ ಜಯಂತಿ ಆಚರಣೆ ಮಾಡಿದ್ದಾರೆ

Union Minister Shobha Karandlaje: ದೇವತಾ ಕಾರ್ಯಗಳಿಂದ ಸಮಾಜದಲ್ಲಿ ಸಾಮರಸ್ಯ ಸ್ಥಾಪನೆ ಸಾಧ್ಯ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ದೇವತಾ ಕಾರ್ಯಗಳಿಂದ ಸಮಾಜದಲ್ಲಿ ಸಾಮರಸ್ಯ ಸ್ಥಾಪನೆ ಸಾಧ್ಯ

ಮುದುಗೆರೆ ಗ್ರಾಮದಲ್ಲಿ ನೆಲೆಸಿರುವ ಶ್ರೀಲಕ್ಷ್ಮೀ ಚನ್ನಕೇಶವ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಪುನಪ್ರತಿಷ್ಟಾನೆಯನ್ನು ಸರ್ಕಾರ ಹಾಗೂ ಭಕ್ತಾಧಿಗಳ ನೆರವಿನಿಂದ ಅತ್ಯಂತ ಶ್ರದ್ದಾಭಕ್ತಿ ಯಿಂದ ನೆರವೇರಿಸಿದ್ದಾರೆ ಎಂದು ತಿಳಿಸಿದ ಅವರು ದೇಶದಲ್ಲಿ ಉತ್ತಮ ಮಳೆ ಬೆಳೆಯಾಗಲಿ, ದೇಶ ಸಮೃದ್ದಿಯಾಗುವಂತೆ ಕಾಪಾಡಲಿ ಎಂದು ಪೂಜೆ ಸಲ್ಲಿಸಿ ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡಿ ದ್ದೇನೆ ಎಂದರು.

Murder Case: ಆನೇಕಲ್‌ನಲ್ಲಿ ಪ್ರಾವಿಜನ್‌ ಸ್ಟೋರ್‌ ಮಾಲಿಕನ ಕತ್ತು ಕೊಯ್ದು ಹತ್ಯೆ

ಆನೇಕಲ್‌ನಲ್ಲಿ ಪ್ರಾವಿಜನ್‌ ಸ್ಟೋರ್‌ ಮಾಲಿಕನ ಕತ್ತು ಕೊಯ್ದು ಹತ್ಯೆ

Bengaluru Crime news: ಕೊಲೆ ನಡೆದ ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಡಿಸಿಪಿ ನಾರಾಯಣ್​ ಈ ಬಗ್ಗೆ ಮಾಧ್ಯಮದವರ ಜೊತೆಗೆ ಮಾತನಾಡಿದ್ದು, ಕತ್ತು ಕೊಯ್ದು ಕೊಲೆ ಮಾಡಲಾಗಿದೆ ಎಂದು 112ಗೆ ಫೋನ್​ ಬಂದಿತ್ತು. ಕೂಡಲೇ ಹೆಬ್ಬಗೋಡಿ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಹರಿತವಾದ ಆಯುಧದಿಂದ ಕತ್ತು ಕೊಯ್ದು ಕೊಲೆ ಮಾಡಲಾಗಿದೆ. ಪಕ್ಕದ ಮನೆಯ ನಿವಾಸಿಯೊಬ್ಬರು ಇದನ್ನು ನೋಡಿದ್ದಾರೆ. ಕೂಡಲೇ ಆರೋಪಿಯನ್ನು ಹಿಡಿಯಲು ಮುಂದಾಗಿದ್ದರು. ಈ ವೇಳೆ ಬೈಕ್ ಅಡ್ಡಗಟ್ಟುವಾಗ ಅವರ ಮೇಲೂ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದಾನೆ ಎಂದರು.

Karnataka Weather:‌ ಮುಂದಿನ 3 ದಿನ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ; ಯೆಲ್ಲೋ ಅಲರ್ಟ್ ಘೋಷಣೆ

ಮುಂದಿನ 3 ದಿನ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ!

ಕರ್ನಾಟಕ ಹವಾಮಾನ ವರದಿ: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳವರೆಗೆ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ (Karnataka Weather Report) ಇರಲಿದ್ದು, ಹಗುರ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 27 ಡಿಗ್ರಿ ಸೆ. ಮತ್ತು 19 ಡಿಗ್ರಿ ಸೆ. ಇರುವ ಸಾಧ್ಯತೆ ಇದೆ.

ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ "ಕ್ಯಾನ್ಸರ್‌ ಚಿಕಿತ್ಸಾ ಘಟಕ"ಕ್ಕೆ ಚಾಲನೆ ನೀಡಿದ ನಟ ಶಿವರಾಜ್‌ ಕುಮಾರ್‌

ಸುಧಾರಿತ ಮತ್ತು ಸಮಗ್ರ ಗ್ರಂಥಿ ಚಿಕಿತ್ಸಾ ಸೇವೆಗಳಲ್ಲಿ ಹೊಸ ಅಧ್ಯಾಯ ಆರಂಭ

ದೇಶದಲ್ಲಿ ಹೆಚ್ಚುತ್ತಿರುವ ಕ್ಯಾನ್ಸರ್‌ ಪ್ರಕರಣಗಳ ಹಿನ್ನೆಲೆಯಲ್ಲಿ ಸುಧಾರಿತ, ಸಮಗ್ರ ಕ್ಯಾನ್ಸರ್‌ ಚಿಕಿತ್ಸಾ ಸೇವೆಗಳನ್ನು ದಕ್ಷಿಣ ಭಾರತದಲ್ಲಿ ಒದಗಿಸುವ ನಿಟ್ಟಿನಲ್ಲಿ ಸ್ಪರ್ಶ್‌ ಆಸ್ಪತ್ರೆ ಸಮೂಹವು ತನ್ನ ಹೆಣ್ಣೂರು ಸ್ಪರ್ಶ್‌ ಆಸ್ಪತ್ರೆ ಆವರಣದಲ್ಲಿ ಸ್ಪರ್ಶ್‌ ಇನ್ಸ್ಟಿಟ್ಯೂಟ್‌ ಆಫ್‌ ಕ್ಯಾನ್ಸರ್‌ ಕೇರ್‌ (ಸ್ಪರ್ಶ್‌ ಕ್ಯಾನ್ಸರ್‌ ಚಿಕಿತ್ಸಾ ಘಟಕ) ತೆರೆದಿದ್ದು, ನಟ ಶಿವರಾಜ್‌ ಕುಮಾರ್‌ ಚಾಲನೆ ನೀಡಿದರು.

Gubbi News: ವಿಶೇಷ ಪೌಷ್ಟಿಕ ಆಹಾರ ವಿತರಣೆಯಲ್ಲಿ ಲೋಪ ಬರಬಾರದು : ಶಾಸಕ ಎಸ್.ಆರ್.ಶ್ರೀನಿವಾಸ್

ವಿಶೇಷ ಪೌಷ್ಟಿಕ ಆಹಾರ ವಿತರಣೆಯಲ್ಲಿ ಲೋಪ ಬರಬಾರದು

ಗಣಿಬಾಧಿತ ಪ್ರದೇಶದಲ್ಲಿ ಮಕ್ಕಳ ಶಿಕ್ಷಣಕ್ಕೆ ಕೊರತೆ ಆಗದಂತೆ ಸರ್ಕಾರ ವಿಶೇಷ ಅನುದಾನ ನೀಡಿ ಶಾಲೆ ವಾತಾವರಣ ಸರಿ ಪಡಿಸಿದೆ. ಜೊತೆಗೆ ಬಿಸಿಯೂಟ ಜೊತೆ ಸಂಜೆಯಲ್ಲಿ ಪೌಷ್ಟಿಕ ಆಹಾರ ಕಾಳು ಉಸಲಿ ನೀಡಲು ಯೋಜನೆ ರೂಪಿಸಿರುವುದು ಮೆಚ್ಚುವಂತಹದ್ದು. ಐಟಿಬಿಟಿ ಯುಗದಲ್ಲಿ ಮಕ್ಕಳು ಉತ್ತಮ ಶಿಕ್ಷಣ ಪಡೆಯುತ್ತಿದ್ದಾರೆ.

RSS row: ಆರೆಸ್ಸೆಸ್‌ ಪಥಸಂಚಲನ: ಸರಕಾರದ ಮೇಲ್ಮನವಿ ವಿಚಾರಣೆ, ತೀರ್ಪು ಕಾಯ್ದಿರಿಸಿದ ಹೈಕೋರ್ಟ್

ಆರೆಸ್ಸೆಸ್‌: ಸರಕಾರದ ಮೇಲ್ಮನವಿ ವಿಚಾರಣೆ, ತೀರ್ಪು ಕಾಯ್ದಿರಿಸಿದ ಹೈಕೋರ್ಟ್

RSS row: ಸಾರ್ವಜನಿಕ ಸ್ಥಳಗಳಲ್ಲಿ ರಾಷ್ಟ್ರೀಯ ಸ್ವಯಸೇವಕ ಸಂಘದ ಚಟುವಟಿಕೆಗಳಿಗೆ ಕಡಿವಾಣ ಹಾಕಲು ರಾಜ್ಯ ಸರಕಾರ ಜಾರಿಗೆ ತಂದಿರುವ ಆದೇಶಕ್ಕೆ ಈ ಹಿಂದೆ ಕರ್ನಾಟಕ ಹೈಕೋರ್ಟ್‌ ಮಧ್ಯಂತರ ತಡೆಯಾಜ್ಞೆ ನೀಡಿತ್ತು. ಇದೀಗ ಸರಕಾರ ಈ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದು, ಈ ಬಗೆಗೆ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆದಿದೆ. ಪುನಶ್ಚೇತನ ಸಂಸ್ಥೆ ಈ ವಿಚಾರದಲ್ಲಿ ಸರ್ಕಾರಕ್ಕೆ ಪ್ರತಿವಾದಿಯಾಗಿದೆ. ಸರ್ಕಾರ ಹಾಗೂ ಪುನಶ್ಚೇತನ ಸೇವಾ ಸಂಸ್ಥೆ ಪರ ವಕೀಲರ ವಾದ ಆಲಿಸಿದ ನಂತರ ಹೈಕೋರ್ಟ್ ವಿಭಾಗೀಯ ಪೀಠ ತೀರ್ಪು ಕಾಯ್ದಿರಿಸಿದೆ. ನವೆಂಬರ್ 7ರಂದು ಈ ಕುರಿತು ಮುಂದಿನ ವಿಚಾರಣೆ ನಡೆಯಲಿದೆ.

Chikkaballapur News: ಸಿಎಂ ಬದಲಾದರೆ ದಲಿತರಿಗೆ ಅವಕಾಶ ನೀಡಿ. ಇಲ್ಲವಾದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ನಿರ್ನಾಮ ಆಗಲಿದೆ : ಒಕ್ಕೂಟದ ರಾಜ್ಯಾಧ್ಯಕ್ಷ ವೆಂಕಟಸ್ವಾಮಿ

ಸಿಎಂ ಬದಲಾದರೆ ದಲಿತರಿಗೆ ಅವಕಾಶ ನೀಡಿ, ಇಲ್ಲವೇ ಕಾಂಗ್ರೆಸ್ ನಿರ್ನಾಮ ಆಗಲಿದೆ

ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮುಂದುವರೆದಲ್ಲಿ ಯಾವುದೇ ಅಭ್ಯಂತರ ಇಲ್ಲ. ಆದರೆ ರಾಜ್ಯದಲ್ಲಿ ಸಿಎಂ ಕುರ್ಚಿಗಾಗಿ ಆತಂರಿಕ ಕಚ್ಚಾಟ ಹೆಚ್ಚಾ ಗಿದ್ದು, ಡಿಕೆಶಿ ಹಾಗೂ ಸಿಎಂ ಬಣಗಳ ನಡುವೆ ಕಿತ್ತಾಟವು ಗಂಭೀರ ಸ್ವರೂಪ ಪಡೆದುಕೊಂಡಿದೆ. ಈ ಹಿಂದೆಯೂ ದಲಿತ ಸಿಎಂ ಎಂಬ ಹೋರಾಟ ಆರಂಭವಾಗಿತ್ತು. ಆದರೆ ಕಾಲಕ್ರಮೇಣ ಹೋರಾಟ ವನ್ನು ದಿಕ್ಕುತಪ್ಪಿಸಲಾಯಿತು.

Yajamana Movie: 25 ವರ್ಷಗಳ ನಂತರ ಡಾ. ವಿಷ್ಣುವರ್ಧನ್ ಅಭಿನಯದ ʼಯಜಮಾನʼ ರೀ ರಿಲೀಸ್‌!

ರೀರಿಲೀಸ್‌ ಆಗ್ತಿದೆ ವಿಷ್ಣು ಅಭಿನಯದ ʼಯಜಮಾನʼ-ಯಾವಾಗ ಗೊತ್ತಾ?

Dr Vishnuvardhan: ಕರ್ನಾಟಕ ರತ್ನ ಡಾ. ವಿಷ್ಣುವರ್ಧನ್ ಅಭಿನಯದ, ಮೆಹರುನ್ನಿಸಾ ರೆಹಮಾನ್ ನಿರ್ಮಾಣದ ಹಾಗೂ ಆರ್. ಶೇಷಾದ್ರಿ - ರಾಧಾ ಭಾರತಿ ನಿರ್ದೇಶನದ ʼಯಜಮಾನʼ ಚಿತ್ರ ಇದೇ ನವೆಂಬರ್ 7ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಮರು ಬಿಡುಗಡೆಯಾಗುತ್ತಿದೆ. ಜನಮೆಚ್ಚಿದ ಈ ಚಿತ್ರ‌ ಆಧುನಿಕ ತಂತ್ರಜ್ಞಾನದಿಂದ ಸಿಂಗಾರಗೊಂಡಿದೆ. ಮುನಿಸ್ವಾಮಿ ಎಸ್.ಡಿ. ಈ ಚಿತ್ರವನ್ನು ಮರು ಬಿಡುಗಡೆ ಮಾಡುತ್ತಿದ್ದಾರೆ. ಚಿತ್ರದ ರಜತೋತ್ಸವವನ್ನು ಸಂಭ್ರಮಿಸಲು ಕಲಾವಿದರ ಸಂಘದಲ್ಲಿ ಅದ್ದೂರಿ ಸಮಾರಂಭ ಆಯೋಜಿಸಲಾಗಿತ್ತು. ಈ ಕುರಿತ ವಿವರ ಇಲ್ಲಿದೆ.

Bangalore Flat Rent: ಬೆಂಗಳೂರಿನಲ್ಲಿ 2 ಬಿಎಚ್‌ಕೆ ಫ್ಲ್ಯಾಟ್‌ಗೆ 20 ಸಾವಿರ ಬಾಡಿಗೆ, 30 ಲಕ್ಷ ಅಡ್ವಾನ್ಸ್‌ ಕೇಳಿದ ಮಾಲೀಕ!

2 ಬಿಎಚ್‌ಕೆ ಫ್ಲ್ಯಾಟ್‌ಗೆ 20 ಸಾವಿರ ಬಾಡಿಗೆ, 30 ಲಕ್ಷ ಅಡ್ವಾನ್ಸ್‌!

Security Deposit For Bangalore Flat : ಬೆಂಗಳೂರಿನ ಫ್ರೇಜರ್‌ ಟೌನ್‌ನಲ್ಲಿ 2 ಬಿಎಚ್‌ಕೆ ಫ್ಲ್ಯಾಟ್‌ವೊಂದಕ್ಕೆ ನೀಡಿರುವ ಜಾಹೀರಾತು ವೈರಲ್‌ ಆಗಿದೆ. 2 ಬಿಎಚ್‌ಕೆ ಫ್ಲ್ಯಾಟ್‌ಗೆ 20 ಸಾವಿರ ಬಾಡಿಗೆ ಹಾಗೂ 30 ಲಕ್ಷ ಅಡ್ವಾನ್ಸ್‌ ನಿಗದಿಪಡಿಸಿರುವುದನ್ನು ರೆಡಿಟ್‌ನಲ್ಲಿ ನೆಟ್ಟಿಗರೊಬ್ಬರು ಹಂಚಿಕೊಂಡಿದ್ದಾರೆ. ಈ ಬಗ್ಗೆ ಹಲವರು ಕಿಡಿಕಾರಿದ್ದಾರೆ.

Kolhar News: ತಾಲೂಕ ಆಡಳಿತದಿಂದ ಸಂಭ್ರಮದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ

ತಾಲೂಕ ಆಡಳಿತದಿಂದ ಸಂಭ್ರಮದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ

ತಾಲ್ಲೂಕ ದಂಡಾಧಿಕಾರಿ ಸಂತೋಷ ಮ್ಯಾಗೇರಿ ಧ್ವಜವಂದನೆ ಸ್ವೀಕರಿಸಿ ಮಾತನಾಡುತ್ತಾ ಶರಣರು, ಸಂತರು, ಕವಿಗಳು, ಸಾಹಿತಿಗಳು ಕನ್ನಡ ನಾಡು, ನುಡಿ ಮತ್ತು ಭಾಷೆಯನ್ನು ಬೆಳೆಸಲು ಅಪಾರ ವಾಗಿ ಶ್ರಮಿಸಿದ್ದಾರೆ ಎಂದರು. ನಾಡು ನುಡಿಯ ವಿಷಯದಲ್ಲಿ ನಾವುಗಳು ಕೂಡ ಅಪಾರವಾದ ಸ್ವಾಭಿಮಾನ ಬೆಳೆಸಿಕೊಂಡು ಮುನ್ನಡೆಯಬೇಕು ಎಂದರು.

BY Vijayendra: ಕಬ್ಬು ಬೆಳೆಗಾರರಿಗೆ ನ್ಯಾಯಯುತ ದರ ನಿಗದಿ ಮಾಡಿ: ಬಿ.ವೈ. ವಿಜಯೇಂದ್ರ ಆಗ್ರಹ

ಕಬ್ಬು ಬೆಳೆಗಾರರಿಗೆ ನ್ಯಾಯಯುತ ದರ ನಿಗದಿ ಮಾಡಿ: ಬಿವೈವಿ

BY Vijayendra against State Congress Government: ಬೆಳಗಾವಿಯಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಹೋರಾಟದಲ್ಲಿ ಪಾಲ್ಗೊಂಡು ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ, ಇಂದು ಸಂಜೆ 5 ಗಂಟೆಯ ಒಳಗಾಗಿ ರಾಜ್ಯ ಸರ್ಕಾರ ಸ್ಥಳಕ್ಕೆ ಉಸ್ತುವಾರಿ ಸಚಿವರನ್ನಾಗಲಿ, ಸಕ್ಕರೆ ಸಚಿವರನ್ನಾಗಲಿ ಅಥವಾ ಮುಖ್ಯಮಂತ್ರಿಗಳೇ ಖುದ್ದಾಗಿ ಸ್ಥಳಕ್ಕೆ ಆಗಮಿಸಿ ಕಬ್ಬು ಬೆಳೆಗಾರರ ನ್ಯಾಯಯುತ ದರ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು. ಇಲ್ಲದಿದ್ದರೆ ನಾಳೆಯೂ ರೈತರ ಜತೆಯಾಗಿ ಹೋರಾಟದಲ್ಲಿ ಧುಮುಕುತ್ತೇನೆ. ನಾಳೆ ನನ್ನ ಜನ್ಮದಿನವಿದ್ದರೂ ಕಣ್ಣೀರು ಸುರಿಸುತ್ತಿರುವ ರೈತರಿಗೆ ನಾಳೆ ಮೀಸಲಿಡುತ್ತೇನೆ. ಒಂದು ವೇಳೆ ನಾಳೆಯು ಬಗೆಹರಿಯದಿದ್ದರೆ ರಾಜ್ಯಾದ್ಯಂತ ರೈತರ ಕಿಡಿ ಹರಡುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

BRAT Movie: ಯಶಸ್ಸಿನ ಹಾದಿಯಲ್ಲಿ ಡಾರ್ಲಿಂಗ್ ಕೃಷ್ಣ ಅಭಿನಯದ ʼಬ್ರ್ಯಾಟ್ʼ ಚಿತ್ರ

ಯಶಸ್ಸಿನ ಹಾದಿಯಲ್ಲಿ ಡಾರ್ಲಿಂಗ್ ಕೃಷ್ಣ ಅಭಿನಯದ ʼಬ್ರ್ಯಾಟ್ʼ ಚಿತ್ರ

Darling Krishna Starrer BRAT Movie: ಮಂಜುನಾಥ್ ಕಂದಕೂರ್ ನಿರ್ಮಾಣದ, ಶಶಾಂಕ್ ನಿರ್ದೇಶನದ ಹಾಗೂ ಡಾರ್ಲಿಂಗ್ ಕೃಷ್ಣ ನಾಯಕನಾಗಿ ನಟಿಸಿರುವ ʼಬ್ರ್ಯಾಟ್ʼ ಚಿತ್ರ ಕೂಡ ಸೇರಿದೆ. ಕಳೆದ ವಾರ ತೆರೆಕಂಡ ಈ ಚಿತ್ರ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದೆ. ಈ ಕುರಿತು ಚಿತ್ರದ ನಿರ್ದೇಶಕ ಶಶಾಂಕ್‌ ಮಾತನಾಡಿ, ಕ್ರಿಕೆಟ್ ಬೆಟ್ಟಿಂಗ್ ಕುರಿತಾದ ಕಥಾಹಂದರ ಹೊಂದಿರುವ ಈ ಚಿತ್ರ ಯುವಜನತೆಯನ್ನು ಹೆಚ್ಚು ಆಕರ್ಷಿಸುತ್ತದೆ ಅಂದುಕೊಂಡಿದ್ದೆ. ಆದರೆ, ಚಿತ್ರ ಬಿಡುಗಡೆಯಾದ ಮೇಲೆ ಯುವಕರ ಜತೆಗೆ ಫ್ಯಾಮಿಲಿ ಆಡಿಯನ್ಸ್ ಕೂಡ ಹೆಚ್ಚು ಬರುತ್ತಿದ್ದಾರೆ. ಕ್ಲಾಸ್ ಅಥವಾ ಮಾಸ್ ಆಡಿಯನ್ಸ್ ಎಂಬ ಭೇದವಿಲ್ಲದೆ ಎಲ್ಲರೂ ಈ ಚಿತ್ರವನ್ನು ಇಷ್ಟಪಡುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Loading...