ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕರ್ನಾಟಕ

ಸೀ ಸ್ಕೌಟ್ಸ್‌ ಆಂಡ್‌ ಗೈಡ್ಸ್‌ ಮಕ್ಕಳಲ್ಲಿ ಶಿಸ್ತು, ದೇಶಸೇವಾ ಮನೋಭಾವ ಹೆಚ್ಚಿಸಲಿದೆ: ಡಾ.ಉದಯ್ ಚಂದ್ ಕೊಂಡತ್

ಸೀ ಸ್ಕೌಟ್ಸ್‌ ಆಂಡ್‌ ಗೈಡ್ಸ್‌ ಶಿಸ್ತು, ದೇಶಸೇವಾ ಮನೋಭಾವ ಹೆಚ್ಚಿಸಲಿದೆ

ಸೀ ಸ್ಕೌಟ್ಸ್‌ ಆಂಡ್‌ ಗೈಡ್ಸ್‌" ಎಂದರೆ ಸಮುದ್ರ ಸಂಬಂಧಿತ ಚಟುವಟಿಕೆಗಳನ್ನು ಒಳಗೊಂಡಿರುವ ಸ್ಕೌಟ್ ಮತ್ತು ಗೈಡ್ ವಿಭಾಗವಾಗಿದ್ದು, ಇದು ಯುವಕರಲ್ಲಿ ಶಿಸ್ತು, ಜವಾಬ್ದಾರಿ ಮತ್ತು ನಾಯಕತ್ವವನ್ನು ಬೆಳೆಸಲಿದೆ, ಅಷ್ಟೆಅಲ್ಲದೆ, ಸಮುದ್ರಯಾನ, ಹಡಗು ನಡೆಸುವಿಕೆ ಮತ್ತು ನಾವಿಕ ಕಲೆಗಳಂತಹ ಚಟುವಟಿಕೆಗಳನ್ನು ಕಲಿಸಲಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ಹೊಸ ನಿಯಮ ಜಾರಿ

ವಿಮಾನ ನಿಲ್ದಾಣದಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ಹೊಸ ನಿಯಮ ಜಾರಿ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ವೇಗವಾಗಿ ಬೆಳೆಯುತ್ತಿರುವ, ಭಾರತದ ಮೂರನೇ ಅತಿದೊಡ್ಡ ವಿಮಾನ ನಿಲ್ದಾಣವಾಗಿದ್ದು, ಪ್ರತಿದಿನ ಸುಮಾರು 130,000 ಪ್ರಯಾಣಿಕರಿಗೆ ಸೇವೆ ಸಲ್ಲಿಸುತ್ತಿದೆ. ವಿಮಾನ ನಿಲ್ದಾಣದಲ್ಲಿನ ರಸ್ತೆ ಮಾರ್ಗದಲ್ಲಿ ಸುಮಾರು 100,000 ವಾಹನಗಳು ಪ್ರತಿ ನಿತ್ಯ ಸಂಚರಿಸುತ್ತಿವೆ.

BMTC Electric Bus: ಪ್ರಧಾನಮಂತ್ರಿ ಇ-ಡ್ರೈವ್ ಯೋಜನೆಯಡಿ ಬೆಂಗಳೂರಿಗೆ 4,500 ಹೆಚ್ಚುವರಿ ಎಲೆಕ್ಟ್ರಿಕ್ ಬಸ್‌

ಬೆಂಗಳೂರಿಗೆ 4,500 ಹೆಚ್ಚುವರಿ ಎಲೆಕ್ಟ್ರಿಕ್ ಬಸ್‌ ಘೋಷಣೆ

ಪ್ರಧಾನಮಂತ್ರಿ ಇ-ಡ್ರೈವ್ ಯೋಜನೆಯಡಿ ಬೆಂಗಳೂರಿಗೆ 4,500 ಹೆಚ್ಚುವರಿ ಎಲೆಕ್ಟ್ರಿಕ್ ಬಸ್‌ಗಳನ್ನು ಘೋಷಿಸಲಾಗಿದೆ. ನಗರ ಸಾರಿಗೆ ವ್ಯವಸ್ಥೆಯನ್ನು ಸುಧಾರಿಸಲು ಮತ್ತು ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಯನ್ನು ಉತ್ತೇಜಿಸಲು ಈ ಯೋಜನೆಯು ಮಹತ್ವಪೂರ್ಣ ಎನಿಸಿಕೊಂಡಿದೆ. ಲೋಕಸಭೆಯಲ್ಲಿ ಕೇಂದ್ರ ಬೃಹತ್ ಕೈಗಾರಿಕೆಗಳ ರಾಜ್ಯ ಸಚಿವ ಭೂಪತಿರಾಜು ಶ್ರೀನಿವಾಸ ವರ್ಮಾ ಈ ಮಾಹಿತಿ ನೀಡಿದರು.

ಸಿಎಂ ಬಳಿಕ ಇದೀಗ ಡಿಸಿಎಂಗೂ ಸುತ್ತಿಕೊಂಡ ವಾಚ್‌ ವಿವಾದ; 43 ಲಕ್ಷ ರೂಪಾಯಿಯ ವಾಚ್‌ ಎಂದ ಬಿಜೆಪಿಗೆ ತಿರುಗೇಟು ಕೊಟ್ಟ ಡಿಕೆಶಿ

ದೆಹಲಿ ಪ್ರವಾಸಕ್ಕೆ ರಾಜಕೀಯ ಮಹತ್ವವೇನೂ ಇಲ್ಲ: ಡಿ.ಕೆ. ಶಿವಕುಮಾರ್‌

DK Shivakumar: ಡಿ. 8ರಂದು ದೆಹಲಿಯಲ್ಲಿ ನಡೆಸಲು ಉದ್ದೇಶಿಸಿದ್ದ ಸರ್ವಪಕ್ಷ ಸಭೆಯನ್ನು ಕೆಲವು ತಾಂತ್ರಿಕ ಕಾರಣಗಳಿಂದಾಗಿ ಮುಂದೂಡುವ ಸಾಧ್ಯತೆಗಳಿವೆ. ನಾವು ಈ ಸಭೆಗೆ ವಿರೋಧ ಪಕ್ಷಗಳ ನಾಯಕರನ್ನು ಕರೆದುಕೊಂಡು ಹೋಗಲು ತೀರ್ಮಾನಿಸಿದ್ದೆವು. ಆದರೆ ಅವರು ರಾಗ ಎಳೆಯುತ್ತಿದ್ದಾರೆ. ಹೀಗಾಗಿ ನಾನು ಹಾಗೂ ಸಿಎಂ ಚರ್ಚೆ ಮಾಡಿ, ವಿರೋಧ ಪಕ್ಷದವರಿಗೆ ಅವರಿಗೆ ಸರಿಹೋಗುವ ದಿನಾಂಕ ನಿಗದಿ ಮಾಡುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ಸಿಬ್ಬಂದಿಯನ್ನು ಸೊಂಡಿಲಿನಿಂದ ಎತ್ತಿ ನೀರಿಗೆ ಎಸೆದ ಸುಬ್ರಹ್ಮಣ್ಯ ದೇವಸ್ಥಾನದ ಆನೆ ಯಶಸ್ವಿ; ವಿಡಿಯೊ ವೈರಲ್‌

ಸುಬ್ರಹ್ಮಣ್ಯ ದೇವಸ್ಥಾನದ ಸಿಬ್ಬಂದಿಯನ್ನು ಎತ್ತಿ ಎಸೆದ ಆನೆ

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆನೆ ಯಶಸ್ವಿ ಸಿಬ್ಬಂದಿಯನ್ನು ಸೊಂಡಿಲಿನಿಂದ ನೀರಿಗೆ ಎಸೆದ ಘಟನೆ ನಡೆದಿದೆ. ಇದರಿಂದ ಕೆಲ ಹೊತ್ತು ಆತಂಕದ ವಾತಾವಣ ನಿರ್ಮಾಣವಾಯಿತು. ಅದಾದ ಕ್ಷಣದಲ್ಲೇ ಯಶಸ್ವಿ ಶಾಂತಾವಾಗಿದ್ದು, ಯಾವುದೇ ಸಮಸ್ಯೆ ಎದುರಾಗಿಲ್ಲ.

ರಾಜಕೀಯ ಶಾಶ್ವತವಲ್ಲ ಎಂಬ ಸಿಎಂ ಹೇಳಿಕೆಗೆ ಡಿ.ಕೆ. ಸುರೇಶ್ ಅಚ್ಚರಿಯ ಪ್ರತಿಕ್ರಿಯೆ; ಮಾಜಿ ಸಂಸದ ಹೇಳಿದ್ದೇನು?

ರಾಜಕೀಯ ಶಾಶ್ವತವಲ್ಲ ಎಂಬ ಸಿಎಂ ಹೇಳಿಕೆ; ಡಿ.ಕೆ. ಸುರೇಶ್ ಏನಂದ್ರು?

ರಾಜಕೀಯ ಯಾರಿಗೂ ಶಾಶ್ವತವಲ್ಲ ಎಂಬ ಸಿಎಂ ಹೇಳಿಕೆ ವಿಚಾರದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಂಸದ ಹಾಗೂ ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್, ಮುಖ್ಯಮಂತ್ರಿ ಯಾರೊಂದಿಗೋ ಮಾತನಾಡುವಾಗ ಆಡಿರುವ ಮಾತುಗಳಿಗೆ ಹೆಚ್ಚಿನ ಮಹತ್ವ ನೀಡುವ ಅಗತ್ಯವಿಲ್ಲ. ಆ ಬಗ್ಗೆ ಹೆಚ್ಚಿನ ವಿಶ್ಲೇಷಣೆಯೂ ಅನಗತ್ಯ ಎಂದು ಹೇಳಿದ್ದಾರೆ.

ಬಾಯಿ ತೆರೆಯಲೂ ಸಾಧ್ಯವಾಗದ ಬಾಲಕನಿಗೆ ಕೆಎಂಸಿಯಲ್ಲಿ ಯಶಸ್ವಿ ದವಡೆ ಶಸ್ತ್ರಚಿಕಿತ್ಸೆ

ಬಾಯಿ ತೆರೆಯಲೂ ಸಾಧ್ಯವಾಗದ ಬಾಲಕನಿಗೆ ದವಡೆ ಶಸ್ತ್ರಚಿಕಿತ್ಸೆ

ಟಿಎಮ್‌ಜೆ್‌ ( ಟೆಂಪೊರೊಮೆಂಡಿಬ್ಯುಲರ್‍‌) ಆನ್‌ಕಿಲೊಸಿಸ್‌ ಸಮಸ್ಯೆಯಿಂದ ಬಾಲಕ ಆರವ್‌ (ಹೆಸರು ಬದಲಾಯಿಸಲಾಗಿದೆ) ಬಳಲುತ್ತಿದ್ದು ಸರಿಯಾಗಿ ಬಾಯಿ ತೆರೆಯಲು ಸಾಧ್ಯವಾಗದೇ ಸಂಕಷ್ಟ ಅನು ಭವಿಸುತ್ತಿದ್ದ. ಆಸ್ಪತ್ರೆಯ ಓರಲ್‌ ಮತ್ತು ಮ್ಯಾಕ್ಸಿಲ್ಲೊಫೇಶಿಯಲ್‌ ವಿಭಾಗದ ಕನ್ಸಲ್ಟೆಂಟ್‌ ಡಾ. ಅಭಯ್‌ ತಾರಾನಾಥ್‌ ಕಾಮತ್ ಮತ್ತವರ ತಂಡ ಬಾಲಕನ ಜೀವನ ಸುಧಾರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವೇಣುಗೋಪಾಲ್ ಜತೆ ರಾಜಕೀಯ ಚರ್ಚೆಯಾಗಿಲ್ಲ ಎಂದ ಸಿಎಂ ಸಿದ್ದರಾಮಯ್ಯ

ವೇಣುಗೋಪಾಲ್ ಜತೆ ರಾಜಕೀಯ ಚರ್ಚೆಯಾಗಿಲ್ಲ: ಸಿಎಂ ಸಿದ್ದರಾಮಯ್ಯ

CM Siddaramaiah: ಮಂಗಳೂರಿನಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಅವರೊಂದಿಗೆ ರಾಜಕೀಯ ಚರ್ಚೆಯಾಗಿಲ್ಲ ಎಂದು ತಿಳಿಸಿದ್ದಾರೆ. ನೀವು ದೆಹಲಿಗೆ ಹೋಗುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿ ನಾನು ಹೋಗುವುದಿಲ್ಲ. ನನ್ನನು ಕರೆದರೆ ಮಾತ್ರ ದೆಹಲಿಗೆ ತೆರಳುವೆ ಎಂದು ಹೇಳಿದ್ದಾರೆ.

ದೈವವನ್ನು ದೆವ್ವ ಎಂದು ಕರೆದ ರಣವೀರ್‌ ಸಿಂಗ್‌ ವಿರುದ್ಧ ಎಫ್‌ಐಆರ್

ರಣವೀರ್‌ ಸಿಂಗ್‌ ವಿರುದ್ಧ ಎಫ್‌ಐಆರ್ ದಾಖಲು

Ranveer Singh: ಗೋವಾದಲ್ಲಿ ನಡೆದ 56ನೇ ಇಂಟರ್‌ನ್ಯಾಷನಲ್​ ಫಿಲ್ಮ್​ ಫೆಸ್ಟಿವಲ್‌ನಲ್ಲಿ ಚಾವುಂಡಿ ದೈವವನ್ನು ದೆವ್ವ ಎಂದು ಕರೆದು ವಿವಾದ ಎಬ್ಬಿಸಿದ್ದ ಬಾಲಿವುಡ್ ನಟ ರಣವೀರ್‌ ಸಿಂಗ್‌ ವಿರುದ್ಧ ಬೆಂಗಳೂರಿನ ಹೈಗ್ರೌಂಡ್‌ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

'ಹೃದಯ ಮತ್ತು ಶ್ವಾಸಕೋಶ ಪಿಂಡಗಳ ಪ್ರತಿರೋಪಣ ಮತ್ತು ಯಾಂತ್ರಿಕ ಸಂಚಾರ ಬೆಂಬಲ (ಎಂ.ಸಿ.ಎಸ್)' ಘಟಕ ಉದ್ಘಾಟನೆ

ಎಂ.ಸಿ.ಎಸ್ ಘಟಕ ಉದ್ಘಾಟನೆ

ಪಿಂಡ ಪ್ರತಿರೋಪಣ ಕ್ಷೇತ್ರದಲ್ಲಿ ದೀರ್ಘಕಾಲದಿಂದ ಮುಂಚೂಣಿಯಲ್ಲಿದ್ದರೂ, ಕರ್ನಾಟಕದಲ್ಲಿ ಅಪೋಲೊ ಆಸ್ಪತ್ರೆಗಳ ಸಂಪೂರ್ಣ ಸಮಗ್ರ ಹೃದಯ ಮತ್ತು ಶ್ವಾಸಕೋಶ ಪ್ರತಿರೋಪಣ ಕಾರ್ಯಕ್ರಮ ಇದೇ ಮೊದಲಾಗಿದ್ದು ರಾಜ್ಯ ಮತ್ತು ನೆರೆಯ ಪ್ರದೇಶಗಳಿಗೆ ಸೇವೆ ಸಲ್ಲಿಸುವ ಪ್ರಮುಖ ಕೇಂದ್ರವಾಗಿ ಶೇಷಾದ್ರಿಪುರಂ ವಿಕಸಿತಗೊಂಡಿದೆ.

ಬಾಡಿಗೆ ನಿಯಮ ಬದಲಾವಣೆ: ಹೊಸ ರೂಲ್ಸ್‌ನಲ್ಲಿ ಏನೆಲ್ಲ ಇದೆ?

ಭದ್ರತೆ ಪಾವತಿ: ಏನಿದೆ ಹೊಸ ಬಾಡಿಗೆ ನಿಯಮ?

ಮನೆ, ಕಚೇರಿ ಬಾಡಿಗೆ ಕೊಡುವವರು ಭದ್ರತೆ ಮೊತ್ತವಾಗಿ ಸಾವಿರದಿಂದ ಲಕ್ಷಾಂತರ ರೂಪಾಯಿ ಕೇಳುವುದು ವಾಡಿಕೆ. ಆದರೆ ಅದಕ್ಕೆ ಈಗ ಬೆಂಗಳೂರು ಮತ್ತು ಮುಂಬೈ ನಗರಗಲ್ಲಿ ಕಡಿವಾಣ ಹಾಕಲಾಗುತ್ತಿದೆ. ಬಾಡಿಗೆ ನೀಡುವವರು ತೆಗೆದುಕೊಳ್ಳಬೇಕಾದ ಭದ್ರತೆ ಪಾವತಿಯಲ್ಲಿ ಹೊಸ ಬದಲಾವಣೆಗಳನ್ನು ಮಾಡಲಾಗಿದೆ. ಅದು ಏನು ಎನ್ನುವ ಕುರಿತು ಇಲ್ಲಿದೆ ಮಾಹಿತಿ.

Hanuman Jayanti: ಸಡಗರ-ಸಂಭ್ರಮ, ಶ್ರದ್ಧಾಭಕ್ತಿಯಿಂದ ಹನುಮ ಜಯಂತಿ ಆಚರಣೆ

ಸಡಗರ-ಸಂಭ್ರಮ, ಶ್ರದ್ಧಾಭಕ್ತಿಯಿಂದ ಹನುಮ ಜಯಂತಿ ಆಚರಣೆ

ಪಟ್ಟಣದ ಹೊರವಲಯದ ವಾಪಸಂದ್ರ ಆಂಜನೇಯ ಸ್ವಾಮಿ ದೇವಾಲಯ, ಪಟ್ಟಣದ ಮಾರುತಿ ವೃತ್ತದ ಬಾಲಾಂಜನೇಯ ಸ್ವಾಮಿ, ಆಸ್ಪತ್ರೆ ಬಳಿಯ ಆಂಜನೇಯ ಸ್ವಾಮಿ, ಉಲ್ಲೋಡು ಬಯಲಾಂಜ ನೇಯ ಸ್ವಾಮಿ ಹಾಗೂ ಮೇಡಿಮಾಕಲಹಳ್ಳಿ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ಸೇರಿದಂತೆ ತಾಲೂಕಿನ ವಿವಿಧ ದೇವಾಲಯಗಳಲ್ಲಿ ಭಕ್ತಾದಿಗಳು ದೇವರ ದರ್ಶನ ಪಡೆದು ಪುನೀತರಾದರು

ನಟ ದರ್ಶನ್‌ಗೆ ಮತ್ತೊಮ್ಮೆ ಹಿನ್ನಡೆ; 82 ಲಕ್ಷ ರೂ. ಆದಾಯ ತೆರಿಗೆ ಇಲಾಖೆ ವಶಕ್ಕೆ ನೀಡಿದ ಕೋರ್ಟ್‌

ದರ್ಶನ್‌ ಮನೆಯಲ್ಲಿ ಪತ್ತೆಯಾದ 82 ಲಕ್ಷ ರೂ. ನೀಡಲು ನಿರಾಕರಿಸಿದ ಕೋರ್ಟ್‌

Actor Darshan: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಸ್ಯಾಂಡಲ್‌ವುಡ್‌ ನಟ ದರ್ಶನ್‌ ಅವರಿಗೆ ಇದೀಗ ಮತ್ತೊಂಡು ಆಘಾತ ಎದುರಾಗಿದೆ. ದರ್ಶನ್‌ ನಿವಾಸದಲ್ಲಿ ಪತ್ತೆಯಾಗಿರುವ 82 ಲಕ್ಷ ರೂ. ಆದಾಯ ತೆರಿಗೆ ಇಲಾಖೆಯಲ್ಲೇ ಇರಲಿ ಎಂದು ಬೆಂಗಳೂರಿನ 57ನೇ ಸಿಸಿಎಚ್ ಕೋರ್ಟ್‌ ಆದೇಶ ಹೊರಡಿಸಿದೆ.

ಟ್ರಾಫಿಕ್ ಪೊಲೀಸ್ ಇಲಾಖೆ ಜೊತೆಗಿನ ಸಹಭಾಗಿತ್ವದಲ್ಲಿ ಹೆಲ್ಮೆಟ್ ಸುರಕ್ಷತಾ ಅಭಿಯಾನ ನಡೆಸಿದ ಬೆಂಗಳೂರು ಫೋರ್ಟಿಸ್ ಹಾಸ್ಪಿಟಲ್ಸ್

ಹೆಲ್ಮೆಟ್ ಸುರಕ್ಷತಾ ಅಭಿಯಾನ ನಡೆಸಿದ ಬೆಂಗಳೂರು ಫೋರ್ಟಿಸ್ ಹಾಸ್ಪಿಟಲ್ಸ್

ಬೆಂಗಳೂರಿನ ಫೋರ್ಟಿಸ್ ಹಾಸ್ಪಿಟಲ್ಸ್ ಸಮೂಹವು ಈ ಅಭಿಯಾನದ ಭಾಗವಾಗಿ ಬೆಂಗಳೂರಿನ ವಿವಿಧ ಫೋರ್ಟಿಸ್ ಆಸ್ಪತ್ರೆಗಳ ಸಮೀಪದ ಜನ ದಟ್ಟಣೆಯ ಟ್ರಾಫಿಕ್ ಚೌಕಗಳಲ್ಲಿ ಹೆಲ್ಮೆಟ್ ಇಲ್ಲದೆ ಸಾಗುತ್ತಿದ್ದ ದ್ವಿಚಕ್ರ ವಾಹನ ಸವಾರರಿಗೆ ಸುಮಾರು 275 ಬ್ರಾಂಡೆಡ್ ಹೆಲ್ಮೆಟ್‌ ಗಳನ್ನು ಮತ್ತು ಪ್ರಥಮ ಚಿಕಿತ್ಸೆ ಕುರಿತಾದ ಕಿರುಪುಸ್ತಕಗಳನ್ನು ವಿತರಿಸಿದೆ.

ಕ್ರೀಡಾ ಕ್ಷೇತ್ರದ ಸಾಧಕರಿಗೆ ಉದ್ಯೋಗ ನೀಡುತ್ತಿರುವುದು ಹೆಮ್ಮೆಯ ಸಂಗತಿ : ಮಂಚನಬಲೆ ಶ್ರೀನಿವಾಸ್

ಕ್ರೀಡಾ ಕ್ಷೇತ್ರದ ಸಾಧಕರಿಗೆ ಉದ್ಯೋಗ ನೀಡುತ್ತಿರುವುದು ಹೆಮ್ಮೆಯ ಸಂಗತಿ

ಕ್ರೀಡೆಗಳಲ್ಲಿ ಉತ್ತಮ ಸಾಧನೆ ಮಾಡಿದವರಿಗೆ ಸರಕಾರಿ ಉದ್ಯೋಗಳಲ್ಲಿ ಮೀಸಲಾತಿ ನೀಡುತ್ತಿರು ವುದು ಒಳ್ಳೆಯ ಬೆಳವಣಿಗೆ. ಈ ಅವಕಾಶವನ್ನು ಗ್ರಾಮೀಣ ಭಾಗದ ಕ್ರೀಡಾ ಸಾಧಕರು ಕ್ರೀಡಾಕೂಟ ಗಳಲ್ಲಿ ಉತ್ತಮ ಸಾಧನೆ ದಾಖಲಿಸಿ ಉದ್ಯೋಗವನ್ನು ತಮ್ಮದಾಗಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಅಸ್ಮಿತ ಕ್ರೀಡಾಕೂಟಕ್ಕೆ ಜಿಲ್ಲೆಯಾದ್ಯಂತ ನೂರಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದು, ಈ ಕ್ರೀಡಾಕೂಟದಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಚಿನ್ನ, ಬೆಳ್ಳಿ, ಕಂಚು ಪದಕಗಳು ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡಲಾಯಿತು.

2025 ರ ಜಾಗತಿಕ ವ್ಯಾಪಾರ ಸಾಮರ್ಥ್ಯ ಹೊಂದಿರುವ 200 ಆಯ್ದ ಕಂಪನಿಗಳಲ್ಲಿ  ಎಐ ಕಲ್ಚರ್‌ಟೆಕ್ ಆಯ್ಕೆ

ಜಾಗತಿಕ ವ್ಯಾಪಾರ ಸಾಮರ್ಥ್ಯ: 200 ಕಂಪನಿಗಳಲ್ಲಿ ಎಐ ಕಲ್ಚರ್‌ಟೆಕ್ ಆಯ್ಕೆ

ಅಪಾರ ಗೌರವ ಹೊಂದಿರುವ ಸಮೂಹವು 1,000 ಕ್ಕೂ ಹೆಚ್ಚು ಸಂಸ್ಥಾಪಕರನ್ನು ಪ್ರತಿ ನಿಧಿಸುತ್ತದೆ. ಇದರಲ್ಲಿ ಭಾರತದ ಸುಮಾರು 20% ಯುನಿಕಾರ್ನ್ ನಾಯಕರು ಸೇರಿದ್ದಾರೆ ಮತ್ತು ಒಟ್ಟಾರೆಯಾಗಿ USD 19 ಬಿಲಿಯನ್‌ಗಿಂತಲೂ ಹೆಚ್ಚು ಬಂಡವಾಳವನ್ನು ಸಂಗ್ರಹಿಸಿಕೊಂಡು, 30ಕ್ಕೂ ಹೆಚ್ಚು ದೇಶಗಳಿಗೆ ವಿಸ್ತರಿಸಿರುವ ಅನ್ವೇಷಣೆ ಆಧರಿತ ಕಂಪನಿಗಳನ್ನು ಪ್ರತಿನಿಧಿಸುತ್ತದೆ.

ಪ್ರಜ್ವಲ್‌ ರೇವಣ್ಣಗೆ ಮತ್ತೊಂದು ಶಾಕ್‌; ಜೀವಿತಾವಧಿ ಸೆರೆವಾಸ ಶಿಕ್ಷೆಗೆ ತಡೆ ನೀಡಿ, ಜಾಮೀನು ಮಂಜೂರು ಮಾಡಲು ಹೈಕೋರ್ಟ್ ನಕಾರ

ಪ್ರಜ್ವಲ್‌ ರೇವಣ್ಣಗೆ ಜಾಮೀನು ಮಂಜೂರು ಮಾಡಲು ಹೈಕೋರ್ಟ್ ನಕಾರ

Prajwal Revanna: ಮನೆಕೆಲಸದ ಮಹಿಳೆಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಸದ್ಯ ಸೆರೆವಾಸ ಅನುಭವಿಸುತ್ತಿರುವ ಪ್ರಜ್ವಲ್‌ ರೇವಣ್ಣ ಅವರಿಗೆ ಕರ್ನಾಟಕ ಹೈಕೋರ್ಟ್‌ ಆಘಾತ ನೀಡಿದೆ. ಜೀವಾವಧಿ ಶಿಕ್ಷೆ ಬದಿಗೆ ಸರಿಸಿ, ಜಾಮೀನು ಮಂಜೂರು ಮಾಡಬೇಕು ಎಂದು ಕೋರಿ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ ಬುಧವಾರ ವಜಾಗೊಳಿಸಿದೆ.

Midday Meal: ಇನ್ನು ಮುಂದೆ ಪೂರ್ವ ಪ್ರಾಥಮಿಕ ಶಾಲೆ ಮಕ್ಕಳಿಗೂ ಮೊಟ್ಟೆ, ಬಾಳೆಹಣ್ಣು, ಹಾಲು

ಇನ್ನು ಮುಂದೆ ಪೂರ್ವ ಪ್ರಾಥಮಿಕ ಶಾಲೆ ಮಕ್ಕಳಿಗೂ ಮೊಟ್ಟೆ, ಬಾಳೆಹಣ್ಣು, ಹಾಲು

Midday meal scheme: ಪೂರ್ವ ಪ್ರಾಥಮಿಕ ತರಗತಿಗಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ ವಿಸ್ತರಣೆ ಆಗಿರಲಿಲ್ಲ. ಈಗ ಪ್ರಧಾನ ಮಂತ್ರಿ ಪೋಷಣ ಶಕ್ತಿ ನಿರ್ಮಾಣ ಯೋಜನೆಯಡಿ ಮಧ್ಯಾಹ್ನದ ಬಿಸಿಯೂಟ, ಕ್ಷೀರಭಾಗ್ಯ ಯೋಜನೆಯಡಿ ಬಿಸಿಹಾಲು ಮತ್ತು ಮೊಟ್ಟೆ, ಬಾಳೆಹಣ್ಣು ನೀಡುವ ಕಾರ್ಯಕ್ರಮವನ್ನು ಡಿಸೆಂಬರ್‌ 1ರಿಂದ ಅನ್ವಯವಾಗುವಂತೆ ಅನುಷ್ಠಾನಗೊಳಿಸಲು ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

Belagavi Assembly Session: ಬೆಳಗಾವಿ ಚಳಿಗಾಲದ ಅಧಿವೇಶನಕ್ಕೆ ಗುಪ್ತಚರ ಇಲಾಖೆ ಹೈಅಲರ್ಟ್‌

ಬೆಳಗಾವಿ ಚಳಿಗಾಲದ ಅಧಿವೇಶನಕ್ಕೆ ಗುಪ್ತಚರ ಇಲಾಖೆ ಹೈಅಲರ್ಟ್‌

Belagavi suvarna vidhana soudha: ಡಿಸೆಂಬರ್‌ 8ರಿಂದ ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ವಿಧಾನಸಭೆ ಹಾಗೂ ಪರಿಷತ್ತಿನ ಚಳಿಗಾಲದ ಅಧಿವೇಶನ ನಡೆಯಲಿದೆ. ದೆಹಲಿ ಸ್ಫೋಟದ ಹಿನ್ನೆಲೆಯಲ್ಲಿ ಬೆಳಗಾವಿ ಅಧಿವೇಶನಕ್ಕೆ ಗುಪ್ತಚರ ಇಲಾಖೆ ಹೈ ಅಲರ್ಟ್‌ ನೀಡಿದ್ದು, ಬಿಗಿ ಭದ್ರತೆ ಒದಗಿಸಲು ಪೊಲೀಸ್‌ ಇಲಾಖೆ ಮುಂದಾಗಿದೆ.

SSLC, PUC Exam: ಎಸ್ಸೆಸ್ಸೆಲ್ಸಿ- ದ್ವಿತೀಯ ಪಿಯುಸಿಗೆ ಇನ್ನು ಎರಡೇ ಬಾರಿ ಪರೀಕ್ಷೆ, 3ನೇ ಪರೀಕ್ಷೆಗೆ ಬೈ

ಎಸ್ಸೆಸ್ಸೆಲ್ಸಿ- ಪಿಯುಸಿಗೆ ಇನ್ನು ಎರಡೇ ಬಾರಿ ಪರೀಕ್ಷೆ, 3ನೇ ಪರೀಕ್ಷೆಗೆ ಬೈ

SSLC, PUC Exam: ಎಸ್ಸೆಸ್ಸೆಲ್ಸಿ- ಪಿಯುಸಿ ವಿದ್ಯಾರ್ಥಿಗಳ ಉತ್ತೀರ್ಣ ಅಂಕಗಳನ್ನು ಕಡಿತ ಮಾಡಿರುವುದರಿಂದ ಮೊದಲೆರಡು ಪರೀಕ್ಷೆಗಳಲ್ಲೇ ಬಹುತೇಕ ವಿದ್ಯಾರ್ಥಿಗಳು ಪಾಸಾಗುತ್ತಿದ್ದಾರೆ. ಅಲ್ಲದೆ, ಮೂರನೇ ಪರೀಕ್ಷೆಯಲ್ಲೂ ಅಂಕಗಳಲ್ಲಿ ಅಂತಹ ಸುಧಾರಣೆ ಕಾಣುತ್ತಿಲ್ಲ. ಹೀಗಾಗಿ, ಮೂರನೇ ಪರೀಕ್ಷೆ ಕೈಬಿಡಲು ಇಲಾಖೆ ಗಂಭೀರ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

Sriranagaptna: ಶ್ರೀರಂಗಪಟ್ಟಣದಲ್ಲಿ ಜಾಮಿಯಾ ಮಸೀದಿ- ಹನುಮ ಮಂದಿರ ವಿವಾದ ಮತ್ತೆ ಮುನ್ನೆಲೆಗೆ, ಬಿಗಿ ಭದ್ರತೆ

ಶ್ರೀರಂಗಪಟ್ಟಣದಲ್ಲಿ ಜಾಮಿಯಾ ಮಸೀದಿ- ಹನುಮ ಮಂದಿರ ವಿವಾದ ಮತ್ತೆ ಮುನ್ನೆಲೆಗೆ

Sriranagaptna Jamia Masjid: ಮಂಡ್ಯ, ಮೈಸೂರು, ಕೊಡಗು, ಹಾಸನ, ರಾಮನಗರ ಜಿಲ್ಲೆಗಳಿಂದಲೂ ಹನುಮ ಮಾಲಾಧಾರಿಗಳು ಬರುತ್ತಿದ್ದಾರೆ. ಬಿಜೆಪಿ-ಜೆಡಿಎಸ್‌ ನಾಯಕರೂ ಯಾತ್ರೆಯಲ್ಲಿ ಭಾಗಿಯಾಗುತ್ತಿದ್ದಾರೆ. ಹೀಗಾಗಿ, ಬಿಗಿ ಪೊಲೀಸ್‌ ಬಂದೋಬಸ್ತ್ ಕೈಗೊಳ್ಳಲಾಗಿದೆ. ದಾರಿ ಉದ್ದಕ್ಕೂ ಸಿಸಿ ಕ್ಯಾಮರಾ ಕಣ್ಗಾವಲು ಹಾಕಲಾಗಿದೆ. ಮುಂಜಾಗ್ರತಾ ಕ್ರಮವಾಗಿ 1,000ಕ್ಕೂ ಹೆಚ್ಚು ಪೊಲೀಸರು ಯಾತ್ರೆ ತೆರೆಳುವ ದಾರಿಯುದ್ದಕ್ಕೂ ಮಂಗಳವಾರ ಪಥಸಂಚಲನ ನಡೆಸಿದ್ದಾರೆ.

Bengaluru Airport: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತೊಂದರೆ, 70 ವಿಮಾನ ಹಾರಾಟಕ್ಕೆ ಅಡಚಣೆ, 22 ಫ್ಲೈಟ್‌ ರದ್ದು

ಬೆಂಗಳೂರು ಏರ್‌ಪೋರ್ಟ್‌: 70 ವಿಮಾನ ಹಾರಾಟಕ್ಕೆ ಅಡ್ಡಿ, 22 ಫ್ಲೈಟ್‌ ರದ್ದು

kempegowda international Airport: ವಿಮಾನಗಳ ಸಾಫ್ಟ್‌ವೇರ್ ಸಂಬಂಧಿತ ತಾಂತ್ರಿಕ ಕಾರಣಗಳಿಂದಾಗಿ ಕೊಲ್ಕತ್ತಾ, ದೆಹಲಿ, ಮುಂಬೈ, ಡೆಹ್ರಾಡೂನ್, ವಾರಣಾಸಿ, ಅಹಮದಾಬಾದ್, ಪುಣೆ, ಚೆನೈ, ಭೂಪಾಲ್ ಸೇರಿದಂತೆ ಹಲವು ಪ್ರದೇಶಗಳಿಗೆ ತೆರಳಬೇಕಿದ್ದ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ. ಸರಿಯಾದ ಸಮಯಕ್ಕೆ ವಿಮಾನಗಳು ಹಾರಾಟ ನಡೆಸದ ಕಾರಣ ಏರ್​​ಪೋರ್ಟ್​ನಲ್ಲಿ ಪ್ರಯಾಣಿಕರು ಪರದಾಟ ನಡೆಸಿದ್ದಾರೆ.

Karnataka Weather: ಹವಾಮಾನ ವರದಿ; ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ

ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ!

ಕರ್ನಾಟಕ ಹವಾಮಾನ ವರದಿ: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳವರೆಗೆ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಹಗುರದಿಂದ ಮಧ್ಯಮ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ತುಮಕೂರು ಇಬ್ಭಾಗ ಮಾಡಲು ಪಟ್ಟು

ತುಮಕೂರು ಇಬ್ಭಾಗ ಮಾಡಲು ಪಟ್ಟು

ಕಲ್ಪವೃಕ್ಷ ಸೀಮೆಯ ಹತ್ತು ತಾಲೂಕುಗಳನ್ನು ಹೊಂದಿರುವ ಬೃಹತ್ತಾದ ತುಮಕೂರು ಜಿಲ್ಲೆಯನ್ನು ಆಡಳಿತಾತ್ಮಕ ಅನುಕೂಲಕ್ಕಾಗಿ ಇಬ್ಬಾಗ ಮಾಡಿ ಎರಡು ಜಿಲ್ಲೆ ಯಾಗಿಸಬೇಕು ಎನ್ನುವುದು ಹಳೇ ಬೇಡಿಕೆ. ಆದರೆ ಯಾವ ತಾಲೂಕು ಕೇಂದ್ರವನ್ನು ಹೊಸ ಜಿಲ್ಲಾ ಕೇಂದ್ರವಾಗಿಸಬೇಕು ಎಂಬ ಗೊಂದಲ ಮಾತ್ರ ಬಗೆಹರಿದಿಲ್ಲ.

Loading...