ವಾಹನ ಚಾಲಕರಿಗೆ ಶಾಕ್: ಏಪ್ರಿಲ್‌ನಿಂದ ಟೋಲ್ ದರ ಏರಿಕೆ, ನಗದು ರದ್ದು
ಏಪ್ರಿಲ್ 1, 2026 ರಿಂದ ಹೊಸ ದರಗಳು ಜಾರಿಗೆ ಬರಲಿವೆ. ವಾರ್ಷಿಕ ಪಾಸ್ ದರವು ಸುಮಾರು ₹3,000 ರಿಂದ ₹3,075 ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ. ರಾಜ್ಯದ ಸುಮಾರು 66 ಟೋಲ್ ಪ್ಲಾಜಾಗಳಲ್ಲಿ ಶೇ. 3ರಿಂದ 5% ರಷ್ಟು ದರ ಏರಿಕೆಯಾಗುವ ಸಾಧ್ಯತೆಯಿದೆ. ಟೋಲ್ ಪ್ಲಾಜಾಗಳಲ್ಲಿ ನಗದು (Cash) ವ್ಯವಹಾರವನ್ನು ಸಂಪೂರ್ಣವಾಗಿ ನಿಲ್ಲಿಸಿ, ಕೇವಲ FASTag ಮತ್ತು UPI ಮೂಲಕ ಮಾತ್ರ ಪಾವತಿಗೆ ಅವಕಾಶ ನೀಡುವ ಪ್ರಸ್ತಾಪವಿದೆ.