ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕರ್ನಾಟಕ

ಉತ್ತರ ಕನ್ನಡವೀಗ ಬಿಸಿಲಿಗೆ ತತ್ತರ

ಉತ್ತರ ಕನ್ನಡವೀಗ ಬಿಸಿಲಿಗೆ ತತ್ತರ

ಹಸಿರು ಹೊದಿಕೆಯನ್ನು ಹೊದ್ದುಕೊಂಡಿರುವ ಪಶ್ಚಿಮ ಘಟ್ಟಗಳಲ್ಲಿ ತಾಪಮಾನ ಏರಿಕೆ ಯಾಗಿರುವುದು ಕೇವಲ ಮನುಷ್ಯರಿಗಷ್ಟೇ ಅಲ್ಲ, ಅಲ್ಲಿನ ಜೀವವೈವಿಧ್ಯಕ್ಕೂ ದೊಡ್ಡ ಹೊಡೆತ ನೀಡಿದೆ. ಮಲೆನಾಡಿನ ಪ್ರಮುಖ ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಮತ್ತು ಕೊಡಗಿನಲ್ಲಿ ಉಷ್ಣಾಂಶವು ಸಾಮಾನ್ಯಕ್ಕಿಂತ 2ಡಿಸೆ ನಿಂದ ೪ಡಿಸೆ ವರೆಗೆ ಏರಿಕೆಯಾಗಿದೆ.

ಪ್ರೀತಿ, ಬಾಂಧವ್ಯದ ಜತೆ ಸಹೋದರ ಭಾವನೆಯನ್ನು ಬೆಸೆಯುವುದೇ ಇಫ್ತಿಯಾರ್ ಕೂಟದ ಉದ್ದೇಶ : ನಗರಸಭೆ ಸದಸ್ಯ ನರಸಿಂಹಮೂರ್ತಿ

ಸಹೋದರ ಭಾವನೆ ಬೆಸೆಯುವುದೇ ಇಫ್ತಿಯಾರ್ ಕೂಟದ ಉದ್ದೇಶ

ಸಾಮಾಜಿಕ ಜೀವನದಲ್ಲಿ ಸೌಹಾರ್ದಯುತವಾಗಿ ಬದುಕುವುದು ಹೇಗೆ ಎಂಬುದನ್ನು ಇಫ್ತಿಯಾರ್ ಕೂಟ ಕಲಿಸಿ ಕೊಡಲಿದೆ. ಇಲ್ಲಿ ಬರುವ ಎಲ್ಲರೂ ಪರಸ್ಪರ ಪ್ರೀತಿ, ಬಾಂಧವ್ಯ, ಭ್ರಾತೃತ್ವ ಭಾವನೆ ಹೊಂದುವ ಮೂಲಕ ದೇವರ ಕೃಪೆಗೆ ಪಾತ್ರ ವಾಗುತ್ತಾರೆ ಎಂದು ನಗರಸಭಾ ಸದಸ್ಯ ನರಸಿಂಹಮೂರ್ತಿ ತಿಳಿಸಿದರು. ನಗರದ 20ನೇ ವಾರ್ಡಿನಲ್ಲಿ ರಂಜಾನ್ ಹಬ್ಬದ ಅಂಗವಾಗಿ ಉಪವಾಸವಿರುವ ಮುಸ್ಲಿಂ ಬಾಂಧವರಿಗಾಗಿ ಏರ್ಪಡಿಸಿದ್ದ ಸಾಮೂಹಿಕ ಇಪ್ತಿಯಾರ್ ಕೂಟದಲ್ಲಿ ಭಾಗವಹಿಸಿ ಮಾತನಾಡಿದರು.

ವತ್ತಿಕುಟಿ ಫೌಂಡೇಶನ್ ಬೆಂಗಳೂರಿನಲ್ಲಿ ಪಾರ್ಕಿನ್ಸನ್ ರೋಗ ಮತ್ತು ಕಂಪನಗಳಿಗೆ ನಾನ್-ಇನ್ವೇಸಿವ್ ಚಿಕಿತ್ಸೆ ಆಯ್ಕೆ

ITC ವಿಂಡ್ಸರ್ ಮ್ಯಾನರ್ ನಲ್ಲಿ ನ್ಯೂರೋನೆಕ್ಸ್ಟ್ ಫೋರಮ್ ಆಯೋಜನೆ

ಉದಯೋನ್ಮುಖ ನ್ಯೂರೋಲಾಜಿಕಲ್ ಚಿಕಿತ್ಸಾ ತಂತ್ರಜ್ಞಾನಗಳ ಕುರಿತು ಜಾಗೃತಿ ಮತ್ತು ಕ್ಲಿನಿಕಲ್ ಸಂವಾದ ಮುಂದುವರಿಸುವ ಪ್ರಯತ್ನಗಳನ್ನು ಮತ್ತಷ್ಟು ಬಲಪಡಿಸುವ ಉದ್ದೇಶ ದಿಂದ, ವತ್ತಿಕುಟಿ ಫೌಂಡೇಶನ್ ಮಾ.15ರಂದು ಬೆಂಗಳೂರಿನ ITC ವಿಂಡ್ಸರ್ ಮ್ಯಾನರ್ ನಲ್ಲಿ ನ್ಯೂರೋನೆಕ್ಸ್ಟ್ ಫೋರಮ್ಅನ್ನು ಆಯೋಜಿಸಲು ಸಜ್ಜಾಗಿದೆ.

Shiradi ghat accident: ಶಿರಾಡಿ ಘಾಟ್‌ನಲ್ಲಿ ಭೀಕರ ಅಪಘಾತ; ಕೆಎಸ್‌ಆರ್‌ಟಿಸಿ ಬಸ್‌-ಕಾರು ಡಿಕ್ಕಿಯಾಗಿ ಮೂವರ ದುರ್ಮರಣ

ಶಿರಾಡಿ ಘಾಟ್‌ನಲ್ಲಿ ಬಸ್‌-ಕಾರು ಡಿಕ್ಕಿಯಾಗಿ ಮೂವರ ದುರ್ಮರಣ

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಶಿರಾಡಿ ಘಾಟ್‌ನ ಗುಂಡ್ಯ ಸಮೀಪ ಶುಕ್ರವಾರ ಸಂಜೆ ಭೀಕರ ಅಪಘಾತ ನಡೆದಿದೆ. ಧರ್ಮಸ್ಥಳದಿಂದ ತಿರುಪತಿಗೆ ಹೋಗುತ್ತಿದ್ದ ರಾಜಹಂಸ ಬಸ್ ಹಾಗೂ ಎದುರಿನಿಂದ ಬರುತ್ತಿದ್ದ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ದುರಂತ ಸಂಭವಿಸಿದೆ.

Chikkaballapur News: ಜಾತಿ ಮುಕ್ತ ಮತ್ತು ಹಸಿವು ಮುಕ್ತ ಸಮಾಜ ನಿರ್ಮಾಣದಲ್ಲಿ ದಸಂಸ ಕೊಡುಗೆ ಆಪಾರ: ರಾಜ್ಯ ಮುಖಂಡ ಕೆ.ಸಿ.ರಾಜಾಕಾಂತ್

ಹಸಿವು ಮುಕ್ತ ಸಮಾಜ ನಿರ್ಮಾಣದಲ್ಲಿ ದಸಂಸ ಕೊಡುಗೆ ಆಪಾರ

ಕಳೆದ 50 ವರ್ಷಗಳ ಸುದೀರ್ಘ ಪಯಣದಲ್ಲಿ ದಲಿತ ಸಂಘರ್ಷ ಸಮಿತಿ ಅನೇಕ ಸಾಧನೆ ಗಳನ್ನೂ ಸವಾಲುಗಳನ್ನೂ ಎದುರಿಸಿದೆ. ಜನಪರ ಹೋರಾಟಗಳ ಜೊತೆಗೆ ಭೂಮಿಗಾಗಿ ಕಡ್ಡಾಯ ಶಿಕ್ಷಣಕ್ಕಾಗಿ, ಸೂರಿಗಾಗಿ, ಸೇಂದಿ ಮುಕ್ತ ರಾಜ್ಯಕ್ಕಾಗಿ, ಶೋಷಣೆಯ ವಿಮುಕ್ತಿಗಾಗಿ ವಿಶ್ರಾಂತವಾಗಿ ಹೋರಾಟಗಳನ್ನು ಕಟ್ಟಿದೆ.

Byrathi Basavaraj: ಬಿಕ್ಲು ಶಿವ ಕೊಲೆ ಪ್ರಕರಣ; ಪರಪ್ಪನ ಅಗ್ರಹಾರ ಜೈಲಿನಿಂದ ಬಿಜೆಪಿ ಶಾಸಕ ಬೈರತಿ ಬಸವರಾಜ್ ಬಿಡುಗಡೆ

ಬಿಕ್ಲು ಶಿವ ಕೊಲೆ ಪ್ರಕರಣ; ಜೈಲಿನಿಂದ ಶಾಸಕ ಬೈರತಿ ಬಸವರಾಜ್ ಬಿಡುಗಡೆ

ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಂಧನವಾಗಿದ್ದ ಶಾಸಕ ಬೈರತಿ ಬಸವರಾಜ್‌ಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಗುರುವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಈ ಹಿನ್ನೆಲೆಯಲ್ಲಿ ಅವರು ಇಂದು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

Chikkaballapur Congress: ಇಂದು ನಗರದಲ್ಲಿ ಕಾಂಗ್ರೆಸ್ ಪಕ್ಷದಿಂದ ಬೃಹತ್ ಮೆರವಣಿಗೆ

ಇಂದು ನಗರದಲ್ಲಿ ಕಾಂಗ್ರೆಸ್ ಪಕ್ಷದಿಂದ ಬೃಹತ್ ಮೆರವಣಿಗೆ

ಜಿಲ್ಲಾ ಕಾಂಗ್ರೆಸ್ ಮತ್ತು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಮಾ.14ರಂದು ಶನಿವಾರ ಬೆಳಿಗ್ಗೆ10 ಗಂಟೆಗೆ ಚಿಕ್ಕಬಳ್ಳಾಪುರ ಜಿಲ್ಲಾ ಕಾಂಗ್ರೆಸ್ ಕಚೇರಿ ಯಿಂದ ಶಿಡ್ಲಘಟ್ಟ ವೃತ್ತದ ವರೆಗೆ ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಖಂಡಿಸಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸ ಲಾಗುವುದು

Chikkaballapur News: ಜಿಲ್ಲೆಯಲ್ಲಿ ಗೃಹ ಬಳಕೆ ಅಡುಗೆ ಅನಿಲ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಇಲ್ಲ: ಜಿಲ್ಲಾಧಿಕಾರಿ ಜಿ.ಪ್ರಭು ಅಭಯ

ಜಿಲ್ಲೆಯಲ್ಲಿ ಗೃಹ ಬಳಕೆ ಅಡುಗೆ ಅನಿಲ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಇಲ್ಲ

ಇರಾನ್ ಅಮೇರಿಕಾ ಯುದ್ಧದ ಸಂದರ್ಭವನ್ನು ಬಳಸಿಕೊಂಡು ಕೆಲವರು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಗೃಹ ಬಳಕೆ ಅಡುಗೆ ಅನಿಲ ಸಿಲಿಂಡರ್‌ಗಳ ಪೂರೈಕೆಯಲ್ಲಿ ಬಾರೀ ವ್ಯತ್ಯಯವಾಗುತ್ತಿದೆ. ಒಂದು ಸಿಲಿಂಡರ್‌ಗೆ 1500-1700 ನೀಡಿದರು ದೊರೆಯುತ್ತಿಲ್ಲ ಎಂಬAತಹ ವದಂತಿಗಳು ಹರಿದಾಡುತ್ತಿರುತ್ತಾರೆ.

MP Dr. K. Sudhakar: ತೃತೀಯ ಹಂತದ ಸಂಸ್ಕರಣೆ ಯೋಜನೆ ತರಬೇಕು: ಇಲ್ಲದಿದ್ದರೆ ಸರ್ಕಾರದ ವಿರುದ್ಧ ಪಾದಯಾತ್ರೆ: ಸಂಸದ ಡಾ.ಕೆ.ಸುಧಾಕರ್ ಎಚ್ಚರಿಕೆ

ಎತ್ತಿನಹೊಳೆ ಯೋಜನೆಯ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ, ರೈತರ ಋಣ ತೀರಿಸಿ

ಎಚ್.ಎನ್ ವ್ಯಾಲಿ, ಕೆ.ಸಿ ವ್ಯಾಲಿ ಯೋಜನೆಯಡಿ ಚಿಕ್ಕಬಳ್ಳಾಪುರ, ಕೋಲಾರ ಭಾಗಕ್ಕೆ 2 ಹಂತ ಗಳಲ್ಲಿ ನೀರು ಸಂಸ್ಕರಣೆಯಾಗಿ ಬರುತ್ತಿದೆ. ಆದರೆ ಇತ್ತೀಚೆಗೆ ಈ ನೀರು ಸರಿಯಾಗಿ ಸಂಸ್ಕರಣೆ ಯಾಗುತ್ತಿಲ್ಲ ಎಂಬ ದೂರು ಬಂದಿದೆ. ಈ ಬಗ್ಗೆ ಜಲಮಂಡಳಿ ಅಧಿಕಾರಿಗಳಿಗೆ ಸರ್ಕಾರ ಕಟ್ಟು ನಿಟ್ಟಾದ ಸೂಚನೆ ನೀಡಬೇಕಿದೆ.

Chikkaballapur News: ಎಚ್‌ಎನ್ ವ್ಯಾಲಿ ನೀರಿನ 3ನೇ ಹಂತದ ಶುದ್ಧೀಕರಣ ಸರಕಾರದ ಜವಾಬ್ದಾರಿ: ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ

ಎಚ್‌ಎನ್ ವ್ಯಾಲಿ ನೀರಿನ 3ನೇ ಹಂತದ ಶುದ್ಧೀಕರಣ ಸರಕಾರದ ಜವಾಬ್ದಾರಿ

ರಾಜ್ಯ ಸರ್ಕಾರ ಜಿಲ್ಲೆಯ ಕೆರೆಗಳಿಗೆ ಹೆಚ್.ಎನ್ ವ್ಯಾಲಿಯ ಕೊಳಚೆ ನೀರನ್ನು 2ನೇ ಹಂತ ದಲ್ಲಿ ಶುದ್ಧೀಕರಿಸಿ ಹರಿಸುತ್ತಿದೆ. ಈ ಶುದ್ಧೀಕರಣದ ಬಗ್ಗೆಯೂ ನಾಗರೀಕರಿಗೆ ಅನುಮಾನವಿದೆ. ಆದರೂ ಕೂಡ ಸರಕಾರ ಎರಡನೇ ಹಂತದಲ್ಲಿ ಈ ಯೋಜನೆಗೆ ಚಾಲನೆ ನೀಡಿ ಇನ್ನೂ ಹಲವು ಕೆರೆಗಳಿಗೆ ವ್ಯಾಲಿಯ ನೀರು ಹರಿಸಲು ಅನುದಾನ ನೀಡಿದೆ.

Chikkaballapur News: ಚಿಕ್ಕಬಳ್ಳಾಪುರದಲ್ಲಿ ಸುಡು ಬಿಸಿಲಿನಲ್ಲೂ ಸಿಲಿಂಡರ್‌ಗಾಗಿ ಕ್ಯೂ ನಿಂತ ಜನತೆ

ಸುಡು ಬಿಸಿಲಿನಲ್ಲೂ ಸಿಲಿಂಡರ್‌ಗಾಗಿ ಕ್ಯೂ ನಿಂತ ಜನತೆ

ಜಿಲ್ಲಾಡಳಿತ, ಆಹಾರ ಮತ್ತು ನಾಗರೀಕರ ಸರಬರಾಜು ಇಲಾಖೆ ಅಧಿಕಾರಿಗಳು ಗೃಹ ಬಳಕೆಯ ಸಿಲಿಂಡರ್‌ಗೆ ಕೊರತೆ ಇಲ್ಲ. ಜನರು ಆತಂಕಕ್ಕೊಳಗಾಗಬಾರದು ಎಂದು ಪದೇಪದೇ ಹೇಳು ತ್ತಿದ್ದರೂ ಸಹ ಜನತೆ ನಾ ಮುಂದು ತಾ ಮುಂದು ಎಂಬಂತೆ ಸಾಲುಗಟ್ಟಿ ನಿಲ್ಲುವುದನ್ನು ಬಿಟ್ಟಿಲ್ಲ. ದಶಕಗಳ  ಹಿಂದೆ ಸೀಮೆಎಣ್ಣೆಗಾಗಿ ಜನರು ಕ್ಯೂ ನಿಲ್ಲುವಂತೆ ಈಗ ಸಿಲಿಂಡರ್‌ಗಾಗಿ ಸರದಿ ಸಾಲಿನಲ್ಲಿ ನಿಲ್ಲುತ್ತಿರುವ ದೃಶ್ಯ ಸರ್ವೆಸಾಮಾನ್ಯವಾಗಿವೆ

ಮಹಿಳೆಯರನ್ನು ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ: ಜಿ.ಆರ್. ಪ್ರದೀಪ್ ಅಭಿಮತ

ಮಹಿಳೆಯರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ: ಜಿ.ಆರ್. ಪ್ರದೀಪ್

International Women's day 2026: ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘ ಬೆಂಗಳೂರು ದಕ್ಷಿಣ ಮಹಿಳಾ ಘಟಕದ ವತಿಯಿಂದ ಆಯೋಜಿಸಲಾಗಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದ ರಾಜ್ಯಾಧ್ಯಕ್ಷ ಜಿ.ಆರ್. ಪ್ರದೀಪ್ ಮಾತನಾಡಿದ್ದಾರೆ.

Chikkaballapur News: ಮಾ.15ರ ಬಂದ್‌ಗೆ ಶಾಶ್ವತ ನೀರಾವರಿ ಹೋರಾಟ ಸಮಿತಿ ಬೆಂಬಲ ಆರ್.ಆಂಜನೇಯರೆಡ್ಡಿ ಘೋಷಣೆ

ಮೂರನೇ ಹಂತದ ಶುದ್ದಿಕರಣ ಮಾಡಿಸಿ ಅವಳಿ ಜಿಲ್ಲೆಗಳ ಋಣ ತೀರಿಸಲಿ

ಬೆಂಗಳೂರು ತ್ಯಾಜ್ಯ ನೀರನ್ನು ಕೋಲಾರ ಚಿಕ್ಕಬಳ್ಳಾಪುರಕ್ಕೆ ಹರಿಸಲಾಗುತ್ತಿದೆ. ಈ ನೀರನ್ನು ಮೂರನೇ ಹಂತದ ಶುದ್ಧೀಕರಣ ಮಾಡಿಸಿ ಹರಿಸಬೇಕು. ಈ ನೀರಿನ ಬಳಕೆಯಲ್ಲಿರುವ ಜಿಲ್ಲೆಯ ಜನ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಈಗಾಗಲೇ ನಮ್ಮ ತರಕಾರಿ ಬೆಲೆ ಕುಸಿದಿದೆ. ಇದರ ಜತೆಗೆ ಜನತೆ ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ.

ಗೃಹ ಬಳಕೆಯ ಅನಿಲ ಸಿಲಿಂಡರ್‌ಗಳನ್ನು ವಾಣಿಜ್ಯೋದ್ದೇಶಕ್ಕೆ ಬಳಸುವಂತಿಲ್ಲ: ಜಿಲ್ಲಾಧಿಕಾರಿ ಜಿ ಪ್ರಭು ಎಚ್ಚರಿಕೆ

ಗೃಹ ಬಳಕೆಯ ಅನಿಲ ಸಿಲಿಂಡರ್‌ಗಳನ್ನು ವಾಣಿಜ್ಯೋದ್ದೇಶಕ್ಕೆ ಬಳಸುವಂತಿಲ್ಲ

ಜಿಲ್ಲೆಯಲ್ಲಿ ಸರಾಸರಿ 10 ರಿಂದ 11 ಸಾವಿರ ಸಿಲೆಂಡರ್ ಗಳು ಪ್ರತಿ ದಿನ ದಾಸ್ತಾನು ಇರು ವಂತೆ ಇವರೆಗೆ ನಿರ್ವಹಣೆ ಮಾಡಲಾಗುತ್ತಿತ್ತು. ಪ್ರಸ್ತುತ 12 ಸಾವಿರಕ್ಕೂ ಹೆಚ್ಚು ಗೃಹ ಬಳಕೆ  ಸಿಲಿಂಡರ್  ದಾಸ್ತಾನು ಲಭ್ಯವಿರುವಂತೆ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಮುಂಜಾಗ್ರತೆ ಯಾಗಿ ಅನಿಲ ಸಿಲಿಂಡರ್ ಗಳನ್ನು ತರಿಸಿಕೊಳ್ಳುವ ಪ್ರಕ್ರಿಯೆಯು ನಿರಂತರವಾಗಿ ಚಾಲ್ತಿಯಲ್ಲಿರುವಂತೆ ನಿಗಾ ಇಡಲಾಗಿದೆ.

ಒಡಿಶಾದಲ್ಲಿ ರಾಜ್ಯಸಭಾ ಚುನಾವಣೆ; ನಮ್ಮ ಶಾಸಕರಿಗೆ ದೊಡ್ಡ ಆಫರ್‌ಗಳು ಬಂದಿವೆ ಎಂದ ಡಿ.ಕೆ. ಶಿವಕುಮಾರ್

ಒಡಿಶಾ ರಾಜ್ಯಸಭಾ ಚುನಾವಣೆ; ಕೈ ಶಾಸಕರಿಗೆ ಆಫರ್‌ಗಳು ಬಂದಿವೆ: ಡಿಕೆಶಿ

DK Shivakumar: ʼರಾಜಕೀಯ ಪಕ್ಷಗಳಿಗೆ ಕುದುರೆ ವ್ಯಾಪಾರದ ಭೀತಿ ಇರುತ್ತದೆ. ರಾಜಕೀಯ ರಂಗದಲ್ಲಿ ಎಲ್ಲಾ ಪಕ್ಷಗಳು ಎದುರಿಸುವ ವಿಚಾರ ಇದು. ಅವರು ಇಲ್ಲಿಗೆ ಬಂದಿರುವಾಗ ಅವರಿಗೆ ನೆರವು ನೀಡುವುದು ನಮ್ಮ ಕರ್ತವ್ಯ. ನಾನು ಹಾಗೂ ನಮ್ಮ ಶಾಸಕರು ಅವರನ್ನು ಭೇಟಿ ಮಾಡಿದ್ದೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಶತಮಾನಗಳ ಹಿಂದೆಯೇ ಭಾರತದಲ್ಲಿತ್ತು ಟೆಲಿಸ್ಕೋಪ್‌ ಬಳಕೆ; ಕರ್ನಾಟಕದ ದೇಗುಲದಲ್ಲಿ ಸಿಕ್ತು ಇದಕ್ಕೆ ಸಾಕ್ಷಿ

ಟೆಲಿಸ್ಕೋಪ್‌ ಕಂಡುಹಿಡಿದಿದ್ದು ಭಾರತೀಯರು; ಇಲ್ಲಿದೆ ಸಾಕ್ಷಿ

Viral Video: ಕರ್ನಾಟಕದ ಹೊಯ್ಸಳೇಶ್ವರ ದೇವಾಲಯದಲ್ಲಿನ ಕೆತ್ತನೆಯ ದೃಶ್ಯ ಮತ್ತೆ ಸುದ್ದಿಯಲ್ಲಿದೆ. ಆಸ್ಟ್ರೇಲಿಯಾದ ಪ್ರಯಾಣಿಕನೊಬ್ಬ ಟೆಲಿಸ್ಕೋಪ್‌ (ದೂರದರ್ಶಕ) ಅನ್ನು ಭಾರತದಲ್ಲಿ ಮೊದಲು ಕಂಡು ಹಿಡಿಯಲಾಗಿತ್ತು ಎಂದು ಹೇಳಿಕೊಂಡಿದ್ದು ಇದಕ್ಕೆ ಸಾಕ್ಷಿಯಾಗಿ ಹೊಯ್ಸಳೇಶ್ವರ ದೇವಾಲಯದಲ್ಲಿನ ಕೆತ್ತನೆಯನ್ನು ತೋರಿಸಿದ್ದಾರೆ.

Resort Politics: ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಭೀತಿ; ಒಡಿಶಾದ 8 ಕಾಂಗ್ರೆಸ್‌ ಶಾಸಕರನ್ನು ಬಿಡದಿ ರೆಸಾರ್ಟ್‌ಗೆ ಕರೆತಂದ ಡಿಕೆಶಿ!

ರೆಸಾರ್ಟ್‌ ರಾಜಕೀಯ; ಒಡಿಶಾದ 8 ಕೈ ಶಾಸಕರು ಬಿಡದಿ ರೆಸಾರ್ಟ್‌ಗೆ ಶಿಫ್ಟ್‌

Rajya Sabha Polls: ಒಡಿಶಾದಲ್ಲಿ ಮಾರ್ಚ್ 16 ರಂದು ರಾಜ್ಯಸಭಾ ಚುನಾವಣೆ ನಿಗದಿಯಾಗಿದೆ. ಚುನಾವಣೆಯಲ್ಲಿ ಅಡ್ಡ ಮತದಾನ ನಡೆಯುವ ಸಾಧ್ಯತೆ ಹಾಗೂ ಬಿಜೆಪಿಯ ‘ಆಪರೇಷನ್ ಕಮಲ’ ಪ್ರಯತ್ನವನ್ನು ತಡೆಯಲು ಕಾಂಗ್ರೆಸ್‌ನ ಎಂಟು ಶಾಸಕರನ್ನು ಬೆಂಗಳೂರು ಹೊರವಲಯದ ಬಿಡದಿ ರೆಸಾರ್ಟ್‌ಗೆ ಶಿಫ್ಟ್‌ ಮಾಡಲಾಗಿದ್ದು, ಇವರ ಜವಾಬ್ದಾರಿಯನ್ನು ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರಿಗೆ ವಹಿಸಲಾಗಿದೆ.

ಪೆಟ್ರೋಲ್, ಡೀಸೆಲ್, ಗ್ಯಾಸ್‌ ಕೊರತೆ ಇಲ್ಲ; ಜನರನ್ನು ಕಾಂಗ್ರೆಸ್ ದಾರಿ ತಪ್ಪಿಸುತ್ತಿದೆ ಎಂದು ಜೋಶಿ ಕಿಡಿ

ಪೆಟ್ರೋಲ್, ಡೀಸೆಲ್, ಗ್ಯಾಸ್‌ ಕೊರತೆ ಇಲ್ಲ: ಸಚಿವ ಪ್ರಲ್ಹಾದ್‌ ಜೋಶಿ

Pralhad Joshi: ಗ್ಯಾಸ್ ಸಿಲಿಂಡರ್ ಸಂಬಂಧ ಜನರನ್ನು ಗೊಂದಲಕ್ಕೀಡು ಮಾಡುವ ಪ್ರಯತ್ನವನ್ನು ಕಾಂಗ್ರೆಸ್ ಮಾಡುತ್ತಿದೆ. ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕೊರತೆ ಸಹ ಆಗುತ್ತದೆ ಎಂದು ರಾಹುಲ್ ಗಾಂಧಿ ಅವರು ನಿನ್ನೆ ಹೇಳಿದ್ದಾರೆ. ಇದು ಸುಳ್ಳು. ಇಡೀ ದೇಶದಲ್ಲಿ ಈಗಲೂ ಮತ್ತು ಮುಂದೆಯೂ ಪೆಟ್ರೋಲಿಯಂ ಉತ್ಪನ್ನಗಳ ಕೊರತೆ ಆಗುವುದಿಲ್ಲ. ಕೊರತೆ ಆಗದಂತೆ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.

Adigas Yatra: ಅಡಿಗಾಸ್‌ ಯಾತ್ರಾದಲ್ಲಿ ಉದ್ಯೋಗಾವಕಾಶ; ಅರ್ಜಿ ಸಲ್ಲಿಕೆ ಕುರಿತ ಮಾಹಿತಿ ಇಲ್ಲಿದೆ

ಅಡಿಗಾಸ್‌ ಯಾತ್ರಾದಲ್ಲಿ ಉದ್ಯೋಗಾವಕಾಶ; ಅರ್ಜಿ ಸಲ್ಲಿಕೆ ಹೇಗೆ?

Adigas Yatra recruitment: ಪ್ರವಾಸೋದ್ಯಮ ವಲಯದಲ್ಲಿ ಮುಂಚೂಣಿಯಲ್ಲಿರುವ ಅಡಿಗಾಸ್‌ ಯಾತ್ರಾ ಸಂಸ್ಥೆಯ ಬೆಂಗಳೂರಿನ ಬಸವನಗುಡಿ, ವಿಜಯನಗರ ಹಾಗೂ ರಾಜರಾಜೇಶ್ವರಿ ನಗರದಲ್ಲಿರುವ ಕಚೇರಿಯಲ್ಲಿನ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ನೇಮಕಾತಿ ಕುರಿತ ಸಂಪೂರ್ಣ ಮಾಹಿತಿ ಇಲ್ಲಿ ನೀಡಲಾಗಿದೆ.

ಹೋಟೆಲ್‌ಗಳಲ್ಲಿ ವಾಣಿಜ್ಯ ಎಲ್‌ಪಿಜಿ ಕೊರತೆ; 8-10 ದಿನದಲ್ಲಿ ಗ್ಯಾಸ್‌ ಸಮಸ್ಯೆ ಇತ್ಯರ್ಥವಾಗಲಿದೆ ಎಂದ ಸಚಿವ ಕೆ.ಎಚ್‌.ಮುನಿಯಪ್ಪ

8-10 ದಿನದಲ್ಲಿ ಗ್ಯಾಸ್‌ ಸಮಸ್ಯೆ ಇತ್ಯರ್ಥವಾಗಲಿದೆ: ಕೆ.ಎಚ್‌.ಮುನಿಯಪ್ಪ

LPG Cylinder Shortage: ಪ್ರಸ್ತುತ ಶಾಲೆಗಳು, ಹಾಸ್ಟೆಲ್, ಆಸ್ಪತ್ರೆ, ಇಂದಿರಾ ಕ್ಯಾಂಟೀನ್‌ ಸೇರಿ ಅಗತ್ಯವಿರುವ ಕಡೆ ಸಿಲಿಂಡರ್‌ ಪೂರೈಸಲು ಗಮನ ಹರಿಸುತ್ತಿದ್ದೇವೆ. ಆದರೆ, ಹೋಟೆಲ್ ಉದ್ಯಮಿಗಳು ಮುಂದಿನ ಎಂಟತ್ತು ದಿನ ತಾಳ್ಮೆಯಿಂದ ಕಾಯಬೇಕು ಎಂದು ಸಚಿವ ಕೆ.ಎಚ್‌.ಮುನಿಯಪ್ಪ ತಿಳಿಸಿದ್ದಾರೆ.

ನ್ಯಾ.‌ನಾಗಮೋಹನ್ ದಾಸ್ ವರದಿಯಂತೆ ಒಳ ಮೀಸಲಾತಿ ಜಾರಿ ಮಾಡದಿದ್ರೆ ರಾಜ್ಯಾದ್ಯಂತ ಹೋರಾಟ: ಬೊಮ್ಮಾಯಿ ಎಚ್ಚರಿಕೆ

ಒಳ ಮೀಸಲಾತಿ ಜಾರಿ ಮಾಡದಿದ್ರೆ ರಾಜ್ಯಾದ್ಯಂತ ಹೋರಾಟ: ಬೊಮ್ಮಾಯಿ

Basavaraj Bommai: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬದ್ದತೆ ಇದ್ದರೆ, ಸುಪ್ರೀಂ ಕೊರ್ಟ್ ನಿರ್ದೇಶನದಂತೆ ನ್ಯಾ.‌ ನಾಗಮೋಹನ್ ದಾಸ್ ವರದಿ ಆಧರಿಸಿ ಒಳಮೀಸಲಾತಿ ಜಾರಿ ಮಾಡಬೇಕು, ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ಕೈಗೊಳ್ಳಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಎಚ್ಚರಿಸಿದ್ದಾರೆ.

ಸಾರ್ವಜನಿಕ ಉದ್ಯಾನವನಕ್ಕೆ ವಿಜ್ಞಾನದ ಸ್ಪರ್ಶ; ಬೆಂಗಳೂರಿನ ಧನ್ವಂತರಿ ಉದ್ಯಾನವನದಲ್ಲಿ ʼಪರಮ್ ಸೈನ್ಸ್ ಸಿಟಿʼ

ಬೆಂಗಳೂರಿನ ಧನ್ವಂತರಿ ಉದ್ಯಾನವನದಲ್ಲಿ ʼಪರಮ್ ಸೈನ್ಸ್ ಸಿಟಿʼ

Param Foundation: ಬೆಂಗಳೂರಿನ ಜೆ.ಪಿ. ನಗರದ 2ನೇ ಹಂತದಲ್ಲಿರುವ ಧನ್ವಂತರಿ ಉದ್ಯಾನವನದಲ್ಲಿ ʼಪರಮ್ ಸೈನ್ಸ್ ಸಿಟಿʼ ಸಾರ್ವಜನಿಕರ ಪ್ರವೇಶಕ್ಕೆ ಸಿದ್ಧಗೊಳ್ಳುತ್ತಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮತ್ತು ಪರಮ್ ಫೌಂಡೇಶನ್ ನಡುವಿನ ಒಪ್ಪಂದದ ಫಲವಾಗಿ ಈ ಯೋಜನೆ ರೂಪುಗೊಳ್ಳುತ್ತಿದೆ.

LPG Cylinder Theft: ಎಲ್‌ಪಿಜಿ ಕೊರತೆ ನಡುವೆ ಹೆಚ್ಚಾಯ್ತು ಸಿಲಿಂಡರ್ ಕಳ್ಳರ ಹಾವಳಿ; ಬೆಂಗಳೂರು ಸೇರಿ 2 ಕಡೆ ಸಿಲಿಂಡರ್ ಕಳವು, ವಿಡಿಯೊ ವೈರಲ್‌!

ಹೆಚ್ಚಾಯ್ತು ಸಿಲಿಂಡರ್ ಕಳ್ಳರ ಹಾವಳಿ; 2 ಕಡೆ ಕಳವು, ವಿಡಿಯೊ ವೈರಲ್‌!

LPG Cylinder Shortage: ವಾಣಿಜ್ಯ ಎಲ್‌ಪಿಜಿ ಕೊರತೆಯಿಂದ ರಾಜ್ಯಾದ್ಯಂತ ಹೋಟೆಲ್‌ಗಳಲ್ಲಿ ಅಡುಗೆ ಸಿದ್ಧಪಡಿಸಲು ಸಮಸ್ಯೆಯಾಗಿದೆ. ದರ ಇದೆಲ್ಲದರ ಮಧ್ಯೆ ಸಿಲಿಂಡರ್ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿರುವುದು ಜನರ ನಿದ್ದೆಗಡಿಸಿದೆ. ಬೆಂಗಳೂರು ಮತ್ತು ಚನ್ನಪಟ್ಟಣದಲ್ಲಿ ಸಿಲಿಂಡರ್‌ ಕಳ್ಳತನ ಪ್ರಕರಣ ನಡೆದಿವೆ.

Cooking oil prices rise: ಅಡುಗೆ ಎಣ್ಣೆ ಬೆಲೆ ಏರಿಕೆ, ಗ್ರಾಹಕರಿಗೆ ಬರೆ

ಅಡುಗೆ ಎಣ್ಣೆ ಬೆಲೆ ಏರಿಕೆ, ಗ್ರಾಹಕರಿಗೆ ಬರೆ

ಮಾರುಕಟ್ಟೆ ಮೂಲಗಳ ಪ್ರಕಾರ, ಪ್ರಮುಖ ಬ್ರ್ಯಾಂಡ್‌ಗಳ ಅಡುಗೆ ಎಣ್ಣೆಯ ಬೆಲೆಯಲ್ಲಿ ಪ್ರತಿ ಲೀಟರ್‌ಗೆ ಸರಾಸರಿ ಲೀ. ಸಗಟು ದರ 10 ರಿಂದ 12 ರು.ರಷ್ಟು ಏರಿಕೆಯಾಗಿದೆ. ಕಳೆದ ತಿಂಗಳು ರು.15 ಏರಿಕೆಯಾಗಿತ್ತು. ಹಾಗಾಗಿ ಹಿಂದಿನ ದರಕ್ಕೆ ಹೋಲಿಸಿದರೆ ಒಟ್ಟು 25 ರು. ಏರಿಕೆ ಯಾದಂತಾಯಿತು.

Loading...