ಸಿಹಿ ಸುದ್ದಿ: ಪೊಲೀಸ್ ಇಲಾಖೆಯಲ್ಲಿ 8157 ಹುದ್ದೆ ಭರ್ತಿಗೆ ಸೂಚನೆ
ಒಟ್ಟು 8,157 ಹುದ್ದೆಗಳನ್ನು ನೇರ ನೇಮಕಾತಿ (Job recruitment) ಮೂಲಕ ಭರ್ತಿ ಮಾಡಲು ಸರ್ಕಾರ ಹಸಿರು ನಿಶಾನೆ ತೋರಿಸಿದೆ. ಒಟ್ಟು ಹುದ್ದೆಗಳಲ್ಲಿ ಶೇ. 6 ರಷ್ಟು ಹುದ್ದೆಗಳನ್ನು (ಪರಿಶಿಷ್ಟ ಜಾತಿಗೆ ಶೇ. 2 ಮತ್ತು ಪರಿಶಿಷ್ಟ ಪಂಗಡಕ್ಕೆ ಶೇ. 4) ಹೈಕೋರ್ಟ್‌ನ ಅಂತಿಮ ತೀರ್ಪಿಗೆ ಒಳಪಟ್ಟು ಕಾಯ್ದಿರಿಸಲಾಗುವುದು ಎಂದು ತಿಳಿಸಲಾಗಿದೆ.