ಸದಾಕಾಲ ಗುರುಚಿಂತನೆ ಮಾಡುವವರು ಸಹಜಯೋಗಿಗಳು
ಆಡಂಬರದಿಂದ ಮುಕ್ತಿಯನ್ನು ಸಾಧಿಸಲು ಸಾಧ್ಯವಿಲ್ಲ. ಮುಕ್ತಿಗೆ ಬೇಕಾದುದು ತತ್ವ ಚಿಂತನೆ, ಭಕ್ತಿಯ ಸಮರ್ಪಣೆ, ನಿರಂತರ ಸಾಧನೆ ಮಾತ್ರ. ಗುರು ಉಪದೇಶದಲ್ಲಿ ಧೃಡವಾದ ನಂಬಿಕೆ ಯುಳ್ಳ ಗುರುಭಕ್ತನು ಮಾತ್ರವೇ ಸಾಧನ ಮಾರ್ಗದಲ್ಲಿ ಮುಂದುವರಿದು ಮುಕ್ತಿಯನ್ನು ಪಡೆಯ ಬಲ್ಲ. ಪ್ರತಿನಿತ್ಯವೂ ಉಸಿರಾಟದಲ್ಲಿಯೇ ಗುರುಸ್ಮರಣೆ ಮಾಡುವಂತಹ ಸಾಧನೆ ಮಾಡಬೇಕು. ಗುರುಪಾದದ ಚಿಂತನೆ ಇರಬೇಕು.