ಶಬರಿಮಲೆಯಿಂದ ಮರಳುವಾಗ ಅಯ್ಯಪ್ಪ ಮಾಲಾಧಾರಿಗೆ ಹೃದಯಾಘಾತ
ಮೃತರನ್ನು ಕಲಬುರಗಿ ಜಿಲ್ಲೆಯ ಮಹಾದೇವ ಅಟ್ಟೂರು (56) ಎಂದು ಗುರುತಿಸಲಾಗಿದೆ. ಬಸಯ್ಯ ಸಾಲಿಮಠ ಗುರುಸ್ವಾಮಿ ಸನ್ನಿಧಾನದ ವತಿಯಿಂದ ಶಬರಿಮಲೆ ಯಾತ್ರೆಗೆ ತೆರಳಿದ್ದ ಭಕ್ತರ ತಂಡವು ಸೆ.20ರಂದು ಯಶವಂತಪುರದಿಂದ ಕಲಬುರಗಿಗೆ ವಾಪಸಾಗುತ್ತಿತ್ತು. ಈ ವೇಳೆ ಬಸವ ಎಕ್ಸ್‌ಪ್ರೆಸ್ (17307) ರೈಲಿನಲ್ಲಿ ಘಟನೆ ಸಂಭವಿಸಿದೆ.