ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

KCET Counselling 2026: ಎಂಜಿನಿಯರಿಂಗ್ ಸೇರಿ ಇತರ ಕೋರ್ಸ್‌ ಪ್ರವೇಶಾತಿ; 3ನೇ ಸುತ್ತಿನ ಸೀಟು ಹಂಚಿಕೆಗೆ ಆಪ್ಷನ್ಸ್ ದಾಖಲಿಸಲು ಲಿಂಕ್ ಬಿಡುಗಡೆ

ಎಂಜಿನಿಯರಿಂಗ್ ಸೀಟು ಹಂಚಿಕೆ; ಆಪ್ಷನ್ಸ್ ದಾಖಲಿಸಲು ಲಿಂಕ್ ಬಿಡುಗಡೆ

UGCET-2026: ಎಂಜಿನಿಯರಿಂಗ್‌ ಮತ್ತು ಇತರ ಕೋರ್ಸ್‌ಗಳ ಪ್ರವೇಶಕ್ಕೆ ಎರಡನೇ ಸುತ್ತಿನಲ್ಲಿ ಸೀಟು ಹಂಚಿಕೆ ನಂತರ ಕಾಲೇಜಿನಲ್ಲಿ ಪ್ರವೇಶ ಪಡೆದಿರುವ ಹಾಗೂ ಅಪ್ ಗ್ರೆಡೇಷನ್‌ಗೆ ಹೋಗಲು ಇಚ್ಛಿಸುವ ಅಭ್ಯರ್ಥಿಗಳಿಗೆ ಸೆ.2ರಂದು ಬೆಳಿಗ್ಗೆ 11ರಿಂದ ಸೆ.3ರ ಸಂಜೆ‌ 6 ಗಂಟೆವರೆಗೆ ಆಪ್ಷನ್ಸ್ ದಾಖಲಿಸಲು ಅವಕಾಶ‌ ನೀಡಲಾಗಿದೆ.

Tiptur News: ಕೆಐಟಿಯಲ್ಲಿ ನ್ಯಾಷನಲ್ ಇನ್ನೋವೇಶನ್ ಹ್ಯಾಕಥಾನ್- 2026; ವಿಜೇತ ತಂಡಗಳಿಗೆ ಬಹುಮಾನ ವಿತರಣೆ

ಕೆಐಟಿಯಲ್ಲಿ ನ್ಯಾಷನಲ್ ಇನ್ನೋವೇಶನ್ ಹ್ಯಾಕಥಾನ್- 2026

Tiptur News: ತಿಪಟೂರಿನ ಕಲ್ಪತರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಕೆಐಟಿ) ವತಿಯಿಂದ KIT SPOC ಇನ್ನೋವೇಶನ್ - 2026 ನ್ಯಾಷನಲ್ ಇನ್ನೋವೇಶನ್ ಹ್ಯಾಕಥಾನ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಹ್ಯಾಕಥಾನ್‌ನಲ್ಲಿ ವಿಜೇತ ತಂಡಗಳಿಗೆ ನಗದು ಬಹುಮಾನಗಳನ್ನು ನೀಡಲಾಯಿತು.

KEA Recruitment: ಸರ್ಕಾರಿ ಹುದ್ದೆ ಆಕಾಂಕ್ಷಿಗಳಿಗೆ ಸಿಹಿಸುದ್ದಿ; 4,744 ಹುದ್ದೆಗಳ ನೇಮಕಾತಿಗೆ ಕೆಇಎ ಸಿದ್ಧತೆ, ಇದೇ ತಿಂಗಳಲ್ಲಿ ಅಧಿಸೂಚನೆ!

4,744 ಹುದ್ದೆಗಳ ನೇಮಕಾತಿಗೆ ಕೆಇಎ ಸಿದ್ಧತೆ; ಇದೇ ತಿಂಗಳಲ್ಲಿ ಅಧಿಸೂಚನೆ!

Job News: ಪದವಿ ಹಾಗೂ ಪಿಯುಸಿ- ತತ್ಸಮಾನ ವಿದ್ಯಾರ್ಹತೆ ಹೊಂದಿರುವ ತಾಂತ್ರಿಕೇತರ ಹಾಗೂ ತಾಂತ್ರಿಕ- ಒಟ್ಟು 4,744 ಹುದ್ದೆಗಳ ನೇಮಕಾತಿಗೆ ಈ ತಿಂಗಳಲ್ಲಿ ಅಧಿಸೂಚನೆ ಹೊರಡಿಸಲಾಗುತ್ತದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಾಹಿತಿ ನೀಡಿದೆ.

ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ತುಮಕೂರು ನಗರ ಶಾಖೆಯಲ್ಲಿ ಅಪಘಾತ ವಿಮಾ ಪರಿಹಾರ ವಿತರಣೆ

ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಅಪಘಾತ ವಿಮಾ ಪರಿಹಾರ ವಿತರಣೆ

Tumkur News: ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ತುಮಕೂರು ನಗರದ ಶಾಖೆಯಲ್ಲಿ 9ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಯೋಜಿಸಲಾಯಿತು. ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

BJP Padayatra: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ರಣಕಹಳೆ; ಬಳ್ಳಾರಿ ಚಲೋ ಪಾದಯಾತ್ರೆಗೆ ಲಿಂಗಸುಗೂರಿನಲ್ಲಿ ಚಾಲನೆ

ಬಳ್ಳಾರಿ ಚಲೋ; ರಾಯಚೂರಿನ ಲಿಂಗಸುಗೂರಿನಲ್ಲಿ ಬಿಜೆಪಿ ಪಾದಯಾತ್ರೆಗೆ ಚಾಲನೆ

Ballari Chalo padayatra: ರಾಜ್ಯ ಸರ್ಕಾರದ ವಿರುದ್ಧ ಲಿಂಗಸುಗೂರಿನಲ್ಲಿ ಬಳ್ಳಾರಿವರೆಗೆ ಬಿಜೆಪಿ ಪಾದಯಾತ್ರೆ ನಡೆಯಲಿದೆ. ದುಷ್ಟ ಹಾಗೂ ಜನವಿರೋಧಿ ಕಾಂಗ್ರೆಸ್‌ ಸರ್ಕಾರದ ವೈಫಲ್ಯಗಳ ವಿರುದ್ಧ ಬಳ್ಳಾರಿ ಚಲೋ ಪಾದಯಾತ್ರೆ ಆರಂಭವಾಗಿದೆ. ತುಘಲಕ್‌ ಸರ್ಕಾರ ತೊಲಗುವವರೆಗೂ ಹೋರಾಟ ನಿರಂತರವಾಗಿರಲಿದೆ ಎಂದು ಬಿಜೆಪಿ ನಾಯಕರು ಆಕ್ರೋಶ ಹೊರಹಾಕಿದ್ದಾರೆ.

ಅಕ್ರಮದಲ್ಲಿ ಪಾತ್ರವಿದ್ದರೆ ರಾಜಕೀಯ ನಿವೃತ್ತಿ, ಬಿಜೆಪಿ-ಜೆಡಿಎಸ್‌ ಪಾತ್ರವಿದ್ದರೆ ಎಚ್‌ʼಡಿಕೆ ನಿವೃತ್ತಿ ಘೋಷಿಸುವರೇ ?: ಖರ್ಗೆ

ಕೆಪಿಎಸ್‌ಸಿ ನೇಮಕ: ಎಚ್‌ಡಿಕೆ-ಪ್ರಿಯಾಂಕ್ ಸಮರ

ಪಟ್ಟಿ ರದ್ದು ಅಧಿಕಾರ ಕೆಪಿಎಸ್‌ಸಿ ನೀಡಿದ ಅಂತಿಮ ಆಯ್ಕೆ ಪಟ್ಟಿಯ ಆಧಾರದ ಮೇಲೆ 2025ರ ಜನವರಿ 22ರಂದು ವಿಶ್ವನಾಥ್ ಎಂಬುವರಿಗೆ ಕೊನೆಯ ನೇಮಕಾತಿ ಆದೇಶ ನೀಡಲಾಯಿತು. ಇದರ ಮರುದಿನವೇ ಐದು ಸದಸ್ಯರ ಸಮಿತಿ ಅಂದಿನ ಮುಖ್ಯಮಂತ್ರಿಗೆ ವರದಿ ಸಲ್ಲಿಸಿತ್ತು. ನೇಮಕಾತಿಯಲ್ಲಿ ಲೋಪಗಳಾಗಿದ್ದರೆ ಆಯ್ಕೆ ಪಟ್ಟಿಯನ್ನು ತಡೆ ಹಿಡಿಯಲು ಅಥವಾ ರದ್ದುಗೊಳಿಸಲು ಕೆಪಿಎಸ್‌ಸಿಗೆ ಅಧಿಕಾರವಿದೆ. ಆದರೆ, ಅಂತಹ ಕ್ರಮ ಕೈಗೊಂಡಿರಲಿಲ್ಲ

ಕಂಪ್ಯೂಟರ್ ಸೈನ್ಸ್ ಮತ್ತು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ವಿಷಯದಲ್ಲಿ ಇ-ಪೋಸ್ಟ್‌ ಗ್ರ್ಯಾಜುಯೇಟ್ ಡಿಪ್ಲೊಮಾ ಕೋರ್ಸ್‌ ಆರಂಭಿಸಿದ ಐಐಟಿ ಬಾಂಬೆ

ಇ-ಪೋಸ್ಟ್‌ ಗ್ರ್ಯಾಜುಯೇಟ್ ಡಿಪ್ಲೊಮಾ ಕೋರ್ಸ್‌ ಆರಂಭಿಸಿದ ಐಐಟಿ ಬಾಂಬೆ

ಎಐ ತಂತ್ರಜ್ಞಾನ ವನ್ನು ಸಮರ್ಥವಾಗಿ ಬಳಸಿಕೊಳ್ಳಲು ಕಂಪ್ಯೂಟರ್ ಸೈನ್ಸ್‌ ನ ಮೂಲಭೂತ ಜ್ಞಾನ ಅತ್ಯಗತ್ಯ ಎಂಬುದನ್ನು ಮನಗಂಡು, ಪ್ರತಿಷ್ಠಿತ ಐಐಟಿ ಬಾಂಬೆ ಎಜುಕೇಷನಲ್ ಔಟ್‌ರೀಚ್ ಸಂಸ್ಥೆಯು ಕಂಪ್ಯೂಟರ್ ಸೈನ್ಸ್ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ನಲ್ಲಿ (ಸಿಎಸ್ & ಎಐ) ಇ-ಪೋಸ್ಟ್‌ ಗ್ರ್ಯಾಜು ಯೇಟ್ ಡಿಪ್ಲೊಮಾ (ಇ-ಪಿಜಿಡಿ) ಕೋರ್ಸ್ ಅನ್ನು ಆರಂಭಿಸಿದೆ.

ಗುರು ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವ : ರಾಯರ ರಥೋತ್ಸವ ಅದ್ದೂರಿಯಾಗಿ ಸಂಪನ್ನ

ರಾಯರ ರಥೋತ್ಸವ ಅದ್ದೂರಿಯಾಗಿ ಸಂಪನ್ನ

ರಥೋತ್ಸವದ ವೇಳೆ ವಿವಿಧ ಕಲಾ ತಂಡಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಭ್ರಮಕ್ಕೆ ಇನ್ನಷ್ಟು ಮೆರುಗು ನೀಡಿತು. ರಥೋತ್ಸವಕ್ಕೂ ಮುನ್ನ ಭಕ್ತರಿಗೆ ಆಶೀರ್ವಚನ ನೀಡಿದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು, ರಾಯರ ಆರಾಧನೆ ಉತ್ಸವದಲ್ಲಿ ಪಾಲ್ಗೊಳ್ಳುವವರ ಕಷ್ಟಗಳನ್ನು ರಾಯರು ಕಳೆಯುತ್ತಾರೆ. ಭಾಷೆ ಪ್ರಾಂತ್ಯದ ಎಲ್ಲಾ ಮೀರಿದ ಜಾತ್ಯತೀತದ ಏಕೈಕ ಗುರುಗಳು ರಾಯರು.

ಲಿಂಗಸುಗೂರಿನಿಂದ BJP 'ಬಳ್ಳಾರಿ ಚಲೋ' ಶುರು; ವಿಜಯೇಂದ್ರ ನೇತೃತ್ವದಲ್ಲಿ ಪಾದಯಾತ್ರೆಗೆ ಚಾಲನೆ

ಇಂದು ಲಿಂಗಸುಗೂರಿನಿಂದ BJP 'ಬಳ್ಳಾರಿ ಚಲೋ' ಶುರು

ಕಾಂಗ್ರೆಸ್‌ ಸರ್ಕಾರದ ವೈಫಲ್ಯಗಳನ್ನು ಖಂಡಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ನಡೆಯಲಿರುವ ಬಳ್ಳಾರಿ ಚಲೋʼ ಪಾದಯಾತ್ರೆಗೆ ಇಂದು ರಾಯಚೂರು ಜಿಲ್ಲೆಯ ಲಿಂಗಸುಗೂರಿನಲ್ಲಿ ಚಾಲನೆ ಸಿಗಲಿದೆ. ಇಂದು ಲಿಂಗಸುಗೂರಿನಿಂದ ಸಂತೆಕೆಲ್ಲೂರುವರೆಗೆ 12 ಕಿ.ಮೀ. ಪಾದಯಾತ್ರೆ ನಡೆಯಲಿದೆ.

ಜ್ಞಾನ ದೇಗುಲಕ್ಕೆ ಪುನಃ ಮರಳಿದ 2616 ಚಿಣ್ಣರು

ಜ್ಞಾನ ದೇಗುಲಕ್ಕೆ ಪುನಃ ಮರಳಿದ 2616 ಚಿಣ್ಣರು

ಸಮಗ್ರ ಶಿಕ್ಷಣ ಕರ್ನಾಟಕದಡಿ, 2021-22ರಿಂದ 2025-26ರವರೆಗೆ ನಡೆಸಿದ ವಿಶೇಷ ದಾಖಲಾತಿ ಹಾಗೂ ಗುರುತಿಸುವಿಕೆ ಅಭಿಯಾನದ ಮೂಲಕ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪತ್ತೆ ಹಚ್ಚಲಾಗಿದೆ. ಬಳಿಕ ಮಕ್ಕಳ ಮನೆಗಳಿಗೆ ತೆರಳಿ ಪೋಷಕರೊಂದಿಗೆ ಸಮಾಲೋಚನೆ ನಡೆಸಿ, ಶಿಕ್ಷಣದ ಮಹತ್ವವನ್ನು ಮನವರಿಕೆ ಮಾಡಿಕೊಟ್ಟು, ಮಕ್ಕಳನ್ನು ಮರಳಿ ಶಾಲೆಗೆ ಸೇರಿಸಲಾಗಿದೆ.

ಆಪರೇಷನ್ ಮುಕ್ತದಡಿ ಪ.ಬಂಗಾಳಕ್ಕೆ ರವಾನೆ: ಬೆಂಗ್ಳೂರಿನಿಂದ ಕೊನೆಗೂ 31 ಬಾಂಗ್ಲಾ ಪ್ರಜೆಗಳ ಗಡೀಪಾರು

ಬೆಂಗ್ಳೂರಿನಿಂದ ಕೊನೆಗೂ 31 ಬಾಂಗ್ಲಾ ಪ್ರಜೆಗಳ ಗಡೀಪಾರು

ಬೆಂಗಳೂರು ನಗರದಾದ್ಯಂತ ಅಕ್ರಮವಾಗಿ ವಾಸಿಸುತ್ತಿರುವ ವಿದೇಶಿ ಪ್ರಜೆಗಳನ್ನು ಪತ್ತೆ ಹಚ್ಚುವ ಉದ್ದೇಶದಿಂದ ಆ. 9ರಂದು ಪೊಲೀಸರು ಆಪರೇಷನ್ ಮುಕ್ತ ಎಂಬ ವಿಶೇಷ ಅಭಿಯಾನವನ್ನು ಪ್ರಾರಂ ಭಿಸಿದರು. ಈ ಕಾರ್ಯಾಚರಣೆಯು ಕೇವಲ ಒಂದು ಪ್ರದೇಶಕ್ಕೆ ಸೀಮಿತವಾಗದೆ, ವೈಟ್‌ಫೀಲ್ಡ್ ಮತ್ತು ಎಲೆಕ್ಟ್ರಾನಿಕ್ ಸಿಟಿಯಂತಹ ಜನನಿಬಿಡ ಪ್ರದೇಶಗಳಲ್ಲೂ ತೀವ್ರವಾಗಿ ನಡೆಯಿತು.

ರಾಜ್ಯದ 16 ಸಿಹಿ ಖಾದ್ಯ ತಯಾರಿಕಾ ಘಟಕದ ಮೇಲೆ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳ ದಾಳಿ; ಅವಧಿ ಮೀರಿದ ವಸ್ತುಗಳ ಜಪ್ತಿ

ಸಿಹಿ ಖಾದ್ಯ ತಯಾರಿಕಾ ಘಟಕದ ಮೇಲೆ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳ ದಾಳಿ

ರಾಜಧಾನಿ ಸೇರಿದಂತೆ ರಾಜ್ಯಾದ್ಯಂತ ಸಿಹಿ ಖಾದ್ಯ ತಯಾರಿಕಾ ಕೇಂದ್ರೀಕೃತ ಘಟಕಗಳ ಮೇಲೆ ದಾಳಿ ನಡೆಸಿರುವ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು, ಅವಧಿ ಮೀರಿದ, ಬ್ರಾಂಡಿಂಗ್‌ ಕಾನೂನು ಉಲ್ಲಂಘಿಸಿದ ಸುಮಾರು 5.99 ಲಕ್ಷ ರೂ. ಮೌಲ್ಯದ ಆಹಾರ ಪದಾರ್ಥ ಜಪ್ತಿ ಮಾಡಿದ್ದಾರೆ.

ಜ್ಞಾನೇಂದ್ರ ಕುಮಾರ್‌ ಪ್ರಶ್ನೆ ಪತ್ರಿಕೆ ಸೋರಿಕೆ ರೂವಾರಿ: ಕೆಪಿಎಸ್ʼಸಿ ಹಗರಣ ಬಗೆದಷ್ಟೂ ಅಕ್ರಮ

ಕೆಪಿಎಸ್ʼಸಿ ಹಗರಣ ಬಗೆದಷ್ಟೂ ಅಕ್ರಮ

ಆಯೋಗಕ್ಕೆ ಅಧ್ಯಕ್ಷರಾಗಿ ನೇಮಕಗೊಂಡ ಶಿವಶಂಕರಪ್ಪ ಎಸ್. ಸಾಹುಕಾರ್ ಅವರಿಗ ಕೆಪಿಎಸ್‌ಸಿ ಅಧ್ಯಕ್ಷರಾಗಿ ನೇಮಕವಾಗಲು ಬೇಕಾಗಿದ್ದ ಕನಿಷ್ಠ ಅರ್ಹತೆ ಇರಲಿಲ್ಲ ಎನ್ನುವ ಅಂಶ ತನಿಖೆ ವೇಳೆ ಬಯಲಾಗಿದೆ. ರಾಷ್ಟ್ರೀಯ ಸಹಕಾರ ಯೂನಿಯನ್‌ನಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸು ತ್ತಿದ್ದಾಗ ಅವರ ಕೆಲಸ ತೃಪ್ತಿದಾಯಕ ವಾಗಿಲ್ಲವೆಂದು ಗುತ್ತಿಗೆ ನವೀಕರಿಸಿರಲಿಲ್ಲ ಎನ್ನುವ ಅಂಶ ತಿಳಿದುಬಂದಿದೆ.

Online Coaching: KAS, PDO, FDA, SDA ಪರೀಕ್ಷೆಗಳಿಗೆ ಆನ್ ಲೈನ್ ಮೂಲಕ ಉಚಿತ ತರಬೇತಿ

KAS, PDO, FDA ಪರೀಕ್ಷೆಗಳಿಗೆ ಆನ್ ಲೈನ್ ಮೂಲಕ ಉಚಿತ ತರಬೇತಿ

ನಗರದ ಕೆಆರ್ ಪುರಂ ನಲ್ಲಿರುವ ಇಂಡಿಯನ್ ಐಎಎಸ್ & ಕೆಎಎಸ್ ಕೋಚಿಂಗ್ ಅಕಾಡಮಿ ವತಿಯಿಂದ ಕೆಎಎಸ್ , ಪಿಎಸ್ಐ, ಪಿಡಿಒ, ಎಫ್ ಡಿಎ, ಎಸ್ ಡಿಎ, ಗ್ರೂಪ್ ಸಿ , ಪಿಸಿ ಹಾಗೂ ವಿಎಒ ಪರೀಕ್ಷೆಗಳಿಗೆ 6 ತಿಂಗಳುಗಳವರೆಗೆ ಉತ್ತಮ ಆನ್ ಲೈನ್ ತರಬೇತಿ ನೀಡಲಾಗುತ್ತಿದೆ. ಆನ್ ಲೈನ್ ಸೇರುವ ಅಭ್ಯರ್ಥಿಗಳು ಟೆಸ್ಟ್ ಸಿರೀಸ್ , ನೋಟ್ಸ್ ಹಾಗೂ ರೆಕಾರ್ಡೆಡ್ ತರಗತಿಗಳಿಗೆ ನಿರ್ವಹಣಾ ಶುಲ್ಕವನ್ನು ಮಾತ್ರ ಕಡ್ಡಾಯವಾಗಿ ಪಾವತಿಸಬೇಕಾಗಿರುತ್ತದೆ ಎಂದು ಸಂಸ್ಥೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಳ್ಳಾರಿಯಿಂದ ರಾಯಚೂರು ತನಕ 10 ದಿನಗಳ ಕಾಲ ಜಾಥಾ: ಇಂದಿನಿಂದ ಕಮಲಯಾತ್ರೆ

ಇಂದಿನಿಂದ ಕಮಲಯಾತ್ರೆ

ನಾಗೇಂದ್ರ ರಾಜೀನಾಮೆಯ ಬಳಿಕ ಪಾದಯಾತ್ರೆಯ ಬಗ್ಗೆ ಹಲವು ಪ್ರಶ್ನೆಗಳು ಎದ್ದಿದ್ದವು. ಆದ್ದರಿಂದ ಇದೀಗ ಪಾದ ಯಾತ್ರೆಯ ಸ್ವರೂಪದಲ್ಲಿ ವಿಸ್ತಾರಗೊಂಡಿದ್ದು, ದಲಿತರ ಅಭಿವೃದ್ಧಿ ನಿಧಿಯ ಬಳಕೆ, ಬರಗಾಲ, ಉತ್ತರ ಕರ್ನಾಟಕದ ಅಭಿವೃದ್ಧಿ, ನಿರುದ್ಯೋಗ, ಮೀಸಲಾತಿ, ಸರಕಾರಿ ನೇಮಕಾತಿ ಹಾಗೂ ಕಾಂಗ್ರೆಸ್ ಸರಕಾರದ ಆಡಳಿತ ವೈಫಲ್ಯ ಸೇರಿದಂತೆ ಹಲವು ವಿಚಾರ ಜನರ ಮುಂದಿಡಲು ಬಿಜೆಪಿ ಮುಂದಾಗಿದೆ.

ರಾಜ್ಯದಲ್ಲಿ ಭಾರೀ ಮಳೆ ಸಾಧ್ಯತೆ; ಹವಾಮಾನ ಇಲಾಖೆಯಿಂದ ಎಚ್ಚರಿಕೆ

ರಾಜ್ಯದಲ್ಲಿ ಭಾರೀ ಮಳೆ ಸಾಧ್ಯತೆ; ಹವಾಮಾನ ಇಲಾಖೆಯಿಂದ ಎಚ್ಚರಿಕೆ

Karnataka Weather: ಹಲವು ಕಡಿಮೆಯಾಗಿದ್ದ ಮಳೆಯ ಅಬ್ಬರ ಮತ್ತೆ ಶುರುವಾಗಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಮುಂದಿನ ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಸೆಪ್ಟೆಂಬರ್‌ 3ರ ವರೆಗೂ ರಾಜ್ಯದಲ್ಲಿ ಮಳೆ ಮುಂದುವರಿಯಲಿದೆ.

KAS Recruitment 2026: 319 ಕೆಎಎಸ್‌ ಹುದ್ದೆಗಳ ನೇಮಕಾತಿ; ಅರ್ಜಿ ಸಲ್ಲಿಕೆ ಅವಧಿ ಸೆ.7ರವರೆಗೆ ವಿಸ್ತರಣೆ

ಕೆಎಎಸ್‌ ಹುದ್ದೆಗಳ ನೇಮಕಾತಿ; ಅರ್ಜಿ ಸಲ್ಲಿಕೆ ಅವಧಿ ಸೆ.7ರವರೆಗೆ ವಿಸ್ತರಣೆ

Gazetted Probationers Recruitment 2026: ಗೆಜೆಟೆಡ್ ಪ್ರೊಬೇಷನರ್ ಗ್ರೂಪ್ 'ಎ' ಮತ್ತು 'ಬಿ' ವೃಂದದ ಒಟ್ಟು 319 ಹುದ್ದೆಗಳ ಭರ್ತಿ ಮಾಡಲು ಕೆಪಿಎಸ್‌ಸಿ ನಡೆಸುವ ಪೂರ್ವಭಾವಿ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಆ. 31ರವರೆಗೆ ಅವಕಾಶ ನೀಡಲಾಗಿತ್ತು. ಆದರೆ, ತಾಂತ್ರಿಕ ಕಾರಣಗಳಿಂದ ಇನ್ನೂ ಹಲವು ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ. ಹೀಗಾಗಿ ಅಭ್ಯರ್ಥಿಗಳ ಮನವಿ ಮೇರೆಗೆ ಆಯೋಗವು ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ ವಿಸ್ತರಿಸಿದೆ.

ವಂದೇ ಮಾತರಂ' ಗೀತೆಗೆ 150ರ ಸಂಭ್ರಮ: ಬೆಂಗಳೂರಿನ 'ಮಹಿಳಾ ಯಕ್ಷೋತ್ಸವ'ದಲ್ಲಿ ಆಕರ್ಷಕ ಯಕ್ಷ ನೃತ್ಯ ನಮನ

ಬೆಂಗಳೂರಿನ 'ಮಹಿಳಾ ಯಕ್ಷೋತ್ಸವ'ದಲ್ಲಿ ಆಕರ್ಷಕ ಯಕ್ಷ ನೃತ್ಯ

Bengaluru News: ಬೆಂಗಳೂರಿನ ಕನ್ನಡ ಭವನದ ನಯನ ಸಭಾಂಗಣದಲ್ಲಿ ಕರ್ನಾಟಕ ಮಹಿಳಾ ಯಕ್ಷಗಾನ ಸಂಸ್ಥೆಯ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಮಹಿಳಾ ಯಕ್ಷೋತ್ಸವ - 2026 ಸಮಾರಂಭದಲ್ಲಿ ಯಕ್ಷಕಲಾವಿದೆಯರು 'ವಂದೇ ಮಾತರಂ' ಗೀತೆಗೆ ಹೆಜ್ಜೆ ಇಡುವ ಮೂಲಕ ದೇಶಭಕ್ತಿ ಹಾಗೂ ಕಲೆಯ ಅಪೂರ್ವ ಸಂಗಮವನ್ನು ಅನಾವರಣಗೊಳಿಸಿದರು.

‘ಸಿಗ್ಬತುಲ್ಲಾ ಹಠಾವೋ, ಗುಡಿಬಂಡೆ ಬಚಾವೋ’: ತಹಸೀಲ್ದಾರ್ ವಿರುದ್ಧ ಸಾಮಾಜಿಕ ಕಾರ್ಯಕರ್ತರ ಆಕ್ರೋಶ

ತಹಸೀಲ್ದಾರ್ ವಿರುದ್ಧ ಸಾಮಾಜಿಕ ಕಾರ್ಯಕರ್ತರ ಆಕ್ರೋಶ

ಸಂಘಟನೆಯ ರಾಜ್ಯಾಧ್ಯಕ್ಷ ಟಿ.ಎಸ್.ಸ್ವಾಮಿ ಮಾತನಾಡಿ, ಸಾರ್ವಜನಿಕರ ಸೇವೆಗಾಗಿ ನೇಮಕ ಗೊಂಡಿ ರುವ ಅಧಿಕಾರಿಗಳು ಜನರ ಅಹವಾಲುಗಳಿಗೆ ಸ್ಪಂದಿಸಿ ಸಮಸ್ಯೆಗಳನ್ನು ಪರಿಹರಿಸಬೇಕು. ಆದರೆ ಗುಡಿಬಂಡೆ ತಹಸೀಲ್ದಾರ್ ಕಚೇರಿಯಲ್ಲಿ ಸಾರ್ವಜನಿಕರಿಂದ ಸಲ್ಲಿಕೆಯಾಗುವ ಮನವಿಗಳಿಗೆ ಸೂಕ್ತ ಸ್ಪಂದನೆ ದೊರೆಯುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ. ಜನರ ತೆರಿಗೆ ಹಣದಿಂದ ವೇತನ ಪಡೆಯುವ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು ಎಂದು ಆಗ್ರಹಿಸಿದರು

ದಿಢೀರ್ ಬೆಲೆಯೇರಿಕೆ ಕಂಡ ಈರುಳ್ಳಿ: ಗ್ರಾಹಕರ ಜೇಬಿಗೆ ಭಾರದ ಹೊರೆ: ಗೌರಿ ಗಣೇಶ ಹಬ್ಬಕ್ಕೂ ಮುನ್ನವೇ ಕೆ.ಜಿಗೆ 100ರ ಗಡಿ ತಲುಪುವ ಆತಂಕ

ದಿಢೀರ್ ಬೆಲೆಯೇರಿಕೆ ಕಂಡ ಈರುಳ್ಳಿ: ಗ್ರಾಹಕರ ಜೇಬಿಗೆ ಭಾರದ ಹೊರೆ

ಈರುಳ್ಳಿ ಕತ್ತರಿಸುವಾಗ ಕಣ್ಣಲ್ಲಿ ನೀರು ಬರುವುದು ಸಾಮಾನ್ಯ. ಆದರೆ ಈಗ ಈರುಳ್ಳಿ ಬೆಲೆ ಕೇಳಿ ದರೂ ಗ್ರಾಹಕರ ಕಣ್ಣಲ್ಲಿ ನೀರು ಬರುತ್ತಿದೆ. ಚಿಕ್ಕಬಳ್ಳಾಪುರ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಯಲ್ಲಿ ಈರುಳ್ಳಿ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಗೌರಿ ಗಣೇಶ ಹಬ್ಬದ ವೇಳೆಗೆ ಕೆ.ಜಿಗೆ 100 ತಲುಪುವ ಸಾಧ್ಯತೆ ಇದೆ.

Kundapra Kannada Utsava: ರಾಜಧಾನಿಯಲ್ಲಿ ಕರಾವಳಿ ಸಂಸ್ಕೃತಿಯ ಮೆಲುಕು ಹಾಕಿದ ʼಕುಂದಾಪ್ರ ಕನ್ನಡ ಉತ್ಸವʼ

ರಾಜಧಾನಿಯಲ್ಲಿ ಅದ್ಧೂರಿಯಾಗಿ ನಡೆದ ʼಕುಂದಾಪ್ರ ಕನ್ನಡ ಉತ್ಸವʼ

ಬೆಂಗಳೂರು ನಗರದ ವಿಜಯನಗರದ ಬಿಜಿಎಸ್‌ ಮೈದಾನದಲ್ಲಿ 'ಟೀಮ್ ಕುಂದಾಪುರಿಯನ್ಸ್' ವತಿಯಿಂದ ಕುಂದಾಪ್ರ ಕನ್ನಡ ಉತ್ಸವ 2026 ಆಯೋಜಿಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ಜಾನಪದ ಕಲಾತಂಡಗಳೊಂದಿಗೆ ಕುಂದಾಪ್ರದ ಪಾರಂಪರಿಕ ವಸ್ತುಗಳ ಮೆರವಣಿಗೆ ಎಲ್ಲರ ಗಮನ ಸೆಳೆಯಿತು. ​

ರೌಡಿಗಳೊಂದಿಗೆ ಸಂಬಂಧ ಹೊಂದಿದರೆ ಸಹಿಸಲ್ಲ; ಪೊಲೀಸರಿಗೆ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ವಾರ್ನಿಂಗ್

ರೌಡಿಗಳೊಂದಿಗೆ ಸಂಬಂಧ ಹೊಂದಿದರೆ ಸಹಿಸಲ್ಲ: ಪ್ರಿಯಾಂಕ್‌ ಖರ್ಗೆ

Priyank Kharge: ಪ್ರಾಮಾಣಿಕವಾಗಿ ಕೆಲಸ ಮಾಡಿ; ಸರ್ಕಾರ ನಿಮ್ಮೊಂದಿಗಿದೆ. ಪೊಲೀಸ್‌ ಸಿಬ್ಬಂದಿ ಪ್ರಾಮಾಣಿಕವಾಗಿ, ಕಾನೂನುಬದ್ಧವಾಗಿ ಮತ್ತು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಕಾನೂನಿನ ಪ್ರಕಾರ ಕೆಲಸ ಮಾಡುವವರೆಗೆ ಗೃಹ ಸಚಿವರು ಮತ್ತು ಸರ್ಕಾರ ನಿಮ್ಮೊಂದಿಗಿರುತ್ತದೆ. ಆದರೆ ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡರೆ ಯಾವುದೇ ರೀತಿಯ ರಕ್ಷಣೆ ಇರುವುದಿಲ್ಲ ಎಂದು ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಎಚ್ಚರಿಕೆ ನೀಡಿದ್ದಾರೆ.

ಪಾರ್ಟಿ ವೇಳೆ ಹೆಚ್ಚು ಚಿಕನ್‌ ಪೀಸ್‌ ಸೇವಿಸಿದನೆಂದ ಸಹೋದ್ಯೋಗಿ ಎದೆಗೆ ಚೂರಿ ಇರಿದು ಕೊಲೆ ಮಾಡಿದ ಪಾಪಿ; ಬೆಳಗಾವಿಯಲ್ಲಿ ಅಮಾನುಷ ಘಟನೆ

ಹೆಚ್ಚು ಚಿಕನ್‌ ಪೀಸ್‌ ಸೇವಿಸಿದನೆಂದ ಸಹೋದ್ಯೋಗಿಯನ್ನೇ ಕೊಂದ ಪಾಪಿ

Belagavi News: ಪಾರ್ಟಿಯಲ್ಲಿ ಹೆಚ್ಚು ಚಿಕನ್ ಪೀಸ್ ತಿಂದಿದ್ದಾನೆ ಎನ್ನುವ ವಿಚಾರಕ್ಕೆ ಆರಂಭವಾದ ಕ್ಷುಲ್ಲಕ ಜಗಳ ಕೊಲೆಯಲ್ಲಿ ಅಂತ್ಯಗೊಂಡಿರುವ ದಾರುಣ ಘಟನೆ ಬೆಳಗಾವಿಯ ಮೂಡಲಗಿ ತಾಲೂಕಿನ ಹುಣಶ್ಯಾಳ ಪಿ.ಜಿ. ಗ್ರಾಮದಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಉತ್ತರ ಪ್ರದೇಶ ಮೂಲದ ಸೀತಾರಾಮ್ ಚಂದ್ರದೇವ್ ಎಂದು ಗುರುತಿಸಲಾಗಿದೆ.

ನಾನೂ ರೈತನ ಮಗ, ನಿಮ್ಮ ನೋವನ್ನು ಕಡಿಮೆ ಮಾಡುತ್ತೇನೆ: ಭೂಮಿ ಕಳೆದುಕೊಂಡವರಿಗೆ ಸಿಎಂ ಭರವಸೆ

ನಾನೂ ರೈತನ ಮಗ, ನಿಮ್ಮ ನೋವನ್ನು ಕಡಿಮೆ ಮಾಡುತ್ತೇನೆ: ಸಿಎಂ

CM D.K. Shivakumar: ಬೆಂಗಳೂರಿನ ನೆಹರು ತಾರಾಲಯದ ಯು.ಆರ್. ರಾವ್ ಭವನದಲ್ಲಿ ಹಮ್ಮಿಕೊಂಡಿದ್ದ ಡಾ. ಕೆ. ಶಿವರಾಮ ಕಾರಂತ ಬಡಾವಣೆಗೆ ಭೂಮಿ ನೀಡಿದ ಭೂಮಾಲೀಕರು, ರೈತರಿಗೆ ಭೂ ಪರಿಹಾರ ವಿತರಣೆ ಕಾರ್ಯಕ್ರಮದಲ್ಲಿ ಸಿಎಂ ಡಿ.ಕೆ.ಶಿವಕುಮಾರ್‌ ಅವರು ಮಾತನಾಡಿದ್ದಾರೆ.

Loading...