ಐಪಿಎಲ್​ ಸುನಿತಾ ವಿಲಿಯಮ್ಸ್​ ವಿದೇಶ ಫ್ಯಾಷನ್​ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಕರ್ನಾಟಕ
Wheat stock: ಏ.1ರಿಂದ ಗೋಧಿ ದಾಸ್ತಾನು ಘೋಷಣೆ ಕಡ್ಡಾಯ: ರಾಜ್ಯ-ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರದ ಸೂಚನೆ

ಏ.1ರಿಂದ ಗೋಧಿ ದಾಸ್ತಾನು ಘೋಷಣೆ ಕಡ್ಡಾಯ-ಕೇಂದ್ರದಿಂದ ಸೂಚನೆ

ಕೇಂದ್ರ ಸರ್ಕಾರ ಗೋಧಿ ದಾಸ್ತಾನು ಮೇಲೆ ನಿಗಾ ವಹಿಸಿದ್ದು, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಎಲ್ಲಾ ವರ್ತಕರು ಏಪ್ರಿಲ್‌ 1ರಿಂದ ಕಡ್ಡಾಯವಾಗಿ ಗೋಧಿ ದಾಸ್ತಾನು ವಿವರ ದಾಖಲಿಸಬೇಕು ಕೇಂದ್ರ ಆಹಾರ ಇಲಾಖೆ ಸೂಚನೆ ನೀಡಿದೆ. ಈ ಕುರಿತ ವಿವರ ಇಲ್ಲಿದೆ.

Dharmasthala: ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ವಿರುದ್ಧಅಪಪ್ರಚಾರ ಖಂಡಿಸಿ ನಾಳೆ ಪ್ರತಿಭಟನಾ ಸಮಾವೇಶ

ವೀರೇಂದ್ರ ಹೆಗ್ಗಡೆ ವಿರುದ್ಧಅಪಪ್ರಚಾರ ಖಂಡಿಸಿ ಪ್ರತಿಭಟನಾ ಸಮಾವೇಶ

Dharmasthala: ಸೌಜನ್ಯಾ ಕೊಲೆ ಪ್ರಕರಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅವಹೇಳನ ವಿರೋಧಿಸಿ ಕ್ಷೇತ್ರದ ಭಕ್ತರಿಂದ ಬೃಹತ್ ಸಭೆ ಆಯೋಜಿಸಲಾಗಿದೆ. ಧರ್ಮಸ್ಥಳ ಗ್ರಾಮ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ಈ ಸಭೆ ನಡೆಯಲಿದ್ದು, ಗ್ರಾಮಸ್ಥರು, ಭಕ್ತರು ಹಾಗೂ ಅಭಿಮಾನಿಗಳು ಸೇರಿ ಬೃಹತ್ ಹಕ್ಕೊತ್ತಾಯ ಸಭೆ ನಡೆಯಲಿದೆ. ವೀರೇಂದ್ರ ಹೆಗ್ಗಡೆ ಅವರ ಬಗ್ಗೆ ಅವಹೇಳನ ಮಾಡುವುದನ್ನು ಖಂಡಿಸಿದ್ದಾರೆ.

Murder case: ಖಾಸಗಿ ವಿಡಿಯೊ ತೋರಿಸಿ ಯುವತಿ ಜತೆ ಮದುವೆ, ಅತ್ತೆಯ ಮೇಲೂ ಕಣ್ಣು; ಉದ್ಯಮಿಯ ಕರಾಳ ಮುಖ ಬಯಲು

ಖಾಸಗಿ ವಿಡಿಯೊ ತೋರಿಸಿ ಯುವತಿ ಜತೆ ಮದುವೆ, ಅತ್ತೆಯ ಮೇಲೂ ಕಣ್ಣು

ಅಪ್ರಾಪ್ತ ವಯಸ್ಸಿನಲ್ಲಿದ್ದಾಗಲೇ ಯುವತಿಯ ಜತೆಗೆ ಸಲುಗೆ ಬೆಳೆಸಿದ್ದ ಉದ್ಯಮಿ, ಖಾಸಗಿ ವಿಡಿಯೊ ಮಾಡಿಟ್ಟುಕೊಂಡು ಯುವತಿಯ ಬ್ಲ್ಯಾಕ್‌ಮೇಲ್ ಮಾಡಿ ಮದುವೆಯಾಗಿದ್ದ. ಅಲ್ಲದೇ ಅತ್ತೆಯ ಮೇಲು ಕಣ್ಣು ಹಾಕಿದ್ದರಿಂದ ಪತ್ನಿ ಮತ್ತು ಅತ್ತೆ ಸೇರಿ ಕೊಲೆ ಮಾಡಿರುವುದು ವಿಚಾರಣೆ ವೇಳೆ ತಿಳಿದುಬಂದಿದೆ.

Self Harming: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲ್‌ ಆಗುವ ಭಯದಿಂದ ವಿದ್ಯಾರ್ಥಿನಿ ಆತ್ಮಹತ್ಯೆ

ಪರೀಕ್ಷೆಯಲ್ಲಿ ಫೇಲ್‌ ಆಗುವ ಭಯದಿಂದ ವಿದ್ಯಾರ್ಥಿನಿ ಆತ್ಮಹತ್ಯೆ

Self Harming: ವಿದ್ಯಾರ್ಥಿನಿ ಸೋಮವಾರ ಎಸ್‌ಎಸ್‌ಎಲ್‌ಸಿ ಎರಡನೇ ವಿಷಯದ ಪರೀಕ್ಷೆ ಬರೆದು ಬಂದಿದ್ದಳು. ಆದರೆ ಪರೀಕ್ಷೆಯಲ್ಲಿ ಫೇಲ್‌ ಆಗುವ ಭಯದಿಂದ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Rakshak Bullet: ವಿನಯ್‌ ಗೌಡ, ರಜತ್‌ ನಂತರ ಇನ್ನೊಬ್ಬ ಬಿಗ್‌ ಬಾಸ್‌ ಸ್ಪರ್ಧಿಗೂ ಕಾನೂನು ಸಂಕಷ್ಟ, ನಾಡದೇವಿಗೆ ಅವಹೇಳನ ದೂರು

ಇನ್ನೊಬ್ಬ ಬಿಗ್‌ ಬಾಸ್‌ ಸ್ಪರ್ಧಿಗೂ ಸಂಕಷ್ಟ, ನಾಡದೇವಿಗೆ ಅವಹೇಳನ ದೂರು

ಖಾಸಗಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ರಕ್ಷಕ್‌ ಹುಡುಗಿಯನ್ನು ಹೊಗಳುವ ಭರದಲ್ಲಿ ನಾಡದೇವಿ ಚಾಮುಂಡೇಶ್ವರಿಗೆ ಅವಹೇಳನಕಾರಿಯಾಗಿ ಮಾತನಾಡಿದ್ದು ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ. ರಕ್ಷಕ್ ಬುಲೆಟ್ ವಿರುದ್ಧ ಇಂದು ಹಿಂದೂ ಕಾರ್ಯಕರ್ತ ಮಹೇಶ್ ಎಂಬವರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಅವರಿಗೆ ದೂರು ಸಲ್ಲಿಸಿದ್ದಾರೆ.

Honey trap Case:  ಹನಿಟ್ರ್ಯಾಪ್‌ ತನಿಖೆಗೆ ಕೋರಿದ ಪಿಐಎಲ್‌ ವಜಾ ಮಾಡಿದ ಸುಪ್ರೀಂ ಕೋರ್ಟ್

ಹನಿಟ್ರ್ಯಾಪ್‌ ತನಿಖೆಗೆ ಕೋರಿದ ಪಿಐಎಲ್‌ ವಜಾ ಮಾಡಿದ ಸುಪ್ರೀಂ ಕೋರ್ಟ್

ರಾಜ್ಯ ಹಾಗೂ ದೇಶದ ರಾಜಕಾರಣದಲ್ಲಿ ಭಾರೀ ಸದ್ದು ಮಾಡುತ್ತಿರುವ ಹನಿಟ್ರ್ಯಾಪ್ ಪ್ರಕರಣ ಇಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಪ್ರಕರಣದ ವಿಚಾರಣೆಯನ್ನು ಕೂಡಲೇ ಕೈಗೆತ್ತಿಕೊಳ್ಳಬೇಕು ಹಾಗೂ ಸಿಬಿಐ ತನಿಖೆಗೆ ಕೋರಿ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗೆ ಮನವಿ ಸಲ್ಲಿಸಲಾಗಿತ್ತು.

Toll hike: ವಾಹನ ಸವಾರರಿಗೆ ಶಾಕ್‌, ರಾಜ್ಯದಲ್ಲಿ ಟೋಲ್‌ ದರ ಏರಿಕೆ

ವಾಹನ ಸವಾರರಿಗೆ ಶಾಕ್‌, ರಾಜ್ಯದಲ್ಲಿ ಟೋಲ್‌ ದರ ಏರಿಕೆ

ರಾಜ್ಯದ 66 ಟೋಲ್ ಪ್ಲಾಜಾಗಳಲ್ಲಿ ಹೆಚ್ಚಿನ ಟೋಲ್​ಗಳಿಗೆ ಪರಿಷ್ಕೃತ ದರಗಳು ಅನ್ವಯವಾಗಲಿವೆ. ಗರಿಷ್ಠ ಶೇ 5 ರಷ್ಟು ಮತ್ತು ಕನಿಷ್ಠ ಶೇ 3 ರಷ್ಟು ಹೆಚ್ಚಳವಾಗಲಿದೆ ಎಂದು ಎನ್‌ಎಚ್‌ಎಐ ಯ ಬೆಂಗಳೂರಿನ ಯೋಜನಾ ನಿರ್ದೇಶಕ ಕೆಬಿ ಜಯಕುಮಾರ್ ಮಾಹಿತಿ ನೀಡಿದ್ದಾರೆ.

Gold Price Today: ಚಿನ್ನದ ದರದಲ್ಲಿ ಕೊಂಚ ಏರಿಕೆ; ಇಂದಿನ ರೇಟ್‌ ಹೀಗಿದೆ

ಇಂದು ಚಿನ್ನದ ದರ ಎಷ್ಟಿದೆ? ಇಲ್ಲಿ ಚೆಕ್‌ ಮಾಡಿ

ಬುಧವಾರ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 10 ರೂ. ಏರಿಕೆಯಾಗಿ 8,195 ರೂ. ತಲುಪಿದರೆ, 24 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯಲ್ಲಿ 11ರೂ. ಏರಿಕೆಯಾಗಿ 8,940ರೂ.ಗೆ ತಲುಪಿದೆ. ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನ 65,560 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 81,950 ರೂ. ಮತ್ತು 100 ಗ್ರಾಂಗೆ 8,19,500 ರೂ. ನೀಡಬೇಕಾಗುತ್ತದೆ.

Canara Bank: ಕೆನರಾ ಬ್ಯಾಂಕ್; ಕಾರ್ಯನಿರ್ವಾಹಕ ನಿರ್ದೇಶಕರಾಗಿ ಶೇಖರ್ ರಾವ್ ನೇಮಕ

ಕೆನರಾ ಬ್ಯಾಂಕ್ ಗೆ ಕಾರ್ಯನಿರ್ವಾಹಕ ನಿರ್ದೇಶಕರ ನೇಮಕ

ಎಸ್. ಕೆ. ಮಜುಂದಾರ್  ಅವರನ್ನು ಕೆನರಾ ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ. ಮಾ.24 ರಂದು ಎಸ್. ಕೆ. ಮಜುಂದಾರ್ ಅವರು ಅಧಿಕಾರ ವಹಿಸಿಕೊಂಡಿದ್ದು, ಈ ಹಿಂದೆ ಅವರು ಕೆನರಾ ಬ್ಯಾಂಕಿನ ಮುಖ್ಯ ಹಣಕಾಸು ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.

Building Collapse: ಧಾರವಾಡದಲ್ಲಿ ಕಾರ್ಖಾನೆ ಗೋಡೆ ಕುಸಿದು ಇಬ್ಬರು ಕಾರ್ಮಿಕರು ಸಾವು

ಧಾರವಾಡದಲ್ಲಿ ಕಾರ್ಖಾನೆ ಗೋಡೆ ಕುಸಿದು ಇಬ್ಬರು ಕಾರ್ಮಿಕರು ಸಾವು

ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಕಾಡನಕೊಪ್ಪ ಗ್ರಾಮದಲ್ಲಿ ನಿರ್ಮಾಣ ಹಂತದ ಕಾರ್ಖಾನೆ ಗೋಡೆ ಕುಸಿದು ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಮೃತ ಕಾರ್ಮಿಕರನ್ನು ದಾವೂದ್ ಸವಣೂರು (32) ಹಾಗೂ ಹಳೇಹುಬ್ಬಳ್ಳಿ ನೂರಾನಿ ಫ್ಲಾಟ್ ನಿವಾಸಿ ರಫಿಕ್ ಸಾಬ್ ಚನ್ನಾಪುರ (50) ಎಂದು ಗುರುತಿಸಲಾಗಿದೆ.

Geetha Shivarajkumar: ಗೀತಾ ಶಿವರಾಜ್‌ ಕುಮಾರ್‌ ಆಸ್ಪತ್ರೆಗೆ ದಾಖಲು, ಸರ್ಜರಿ

ಗೀತಾ ಶಿವರಾಜ್‌ ಕುಮಾರ್‌ ಆಸ್ಪತ್ರೆಗೆ ದಾಖಲು, ಸರ್ಜರಿ

ಶಿವಣ್ಣ ಚೇತರಿಸಿಕೊಳ್ಳುತ್ತಿದ್ದಂತೆ ಸಿನಿಮಾ ಕೆಲಸಗಳಲ್ಲಿ ವ್ಯಸ್ತರಾಗಿದ್ದು, ಗೀತಾ ಶಿವರಾಜ್‌ಕುಮಾರ್‌ (Geetha Shivaraj Kumar) ಕೂಡ ಅವರಿಗೆ ಸಾಥ್‌ ನೀಡುತ್ತಿದ್ದರು. ಶಿವಣ್ಣ ಅವರ ಜೊತೆ ಗೀತಕ್ಕ ಕೂಡ ಸಿನಿಮಾ ಹಾಗೂ ಇತರ ಶೂಟಿಂಗ್‌ನಲ್ಲಿ ಭಾಗಿಯಾಗುತ್ತಿದ್ದರು. ಇದೀಗ ಗೀತಕ್ಕ ಅವರಿಗೆ ಸರ್ಜರಿ ಆಗಿದೆ ಎನ್ನುವುದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.

Honey trap Case: ಸುಪ್ರೀಂ ಕೋರ್ಟ್‌ನಲ್ಲಿ ಇಂದು ಹನಿಟ್ರ್ಯಾಪ್ ಕೇಸ್‌ ವಿಚಾರಣೆ

ಸುಪ್ರೀಂ ಕೋರ್ಟ್‌ನಲ್ಲಿ ಇಂದು ಹನಿಟ್ರ್ಯಾಪ್ ಕೇಸ್‌ ವಿಚಾರಣೆ

ಪ್ರಕರಣದ ವಿಚಾರಣೆಯನ್ನು ಕೂಡಲೇ ಕೈಗೆತ್ತಿಕೊಳ್ಳಬೇಕು ಹಾಗೂ ಸಿಬಿಐ ತನಿಖೆಗೆ ಕೋರಿ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗೆ ಮನವಿ ಸಲ್ಲಿಸಲಾಗಿದೆ. ಬಿನಯ್ ಕುಮಾರ್ ಸಿಂಗ್ ಎಂಬವರ ಪರವಾಗಿ ವಕೀಲ ಬರುಣ್ ಕುಮಾರ್ ಅರ್ಜಿ ಸಲ್ಲಿಸಿದ್ದಾರೆ. ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿ‌ ವಿಚಾರಣೆ ಇಂದು ನಡೆಯಲಿದೆ. ಸುಪ್ರೀಂ ಕೋರ್ಟ್‌ನ ನ್ಯಾ. ವಿಕ್ರಂನಾಥ್, ನ್ಯಾ‌. ಸಂಜಯ್ ಕರೋಲ್, ನ್ಯಾ. ಸಂದೀಪ್ ಮೆಹ್ತಾ ಅವರನ್ನೊಳಗೊಂಡ ತ್ರಿ ಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಲಿದೆ.

Reels Case: ಲಾಂಗ್‌ ಹಿಡಿದು ರೀಲ್ಸ್‌ ಮಾಡಿದ ರಜತ್‌, ವಿನಯ್‌ಗೆ ನ್ಯಾಯಾಂಗ ಬಂಧನ

ಲಾಂಗ್‌ ಹಿಡಿದು ರೀಲ್ಸ್‌ ಮಾಡಿದ ರಜತ್‌, ವಿನಯ್‌ಗೆ ನ್ಯಾಯಾಂಗ ಬಂಧನ

ವಿನಯ್ ಹಾಗೂ ರಜತ್​ಗೆ ನ್ಯಾಯಾಂಗ ಬಂಧನ ವಿಧಿಸಿದ ಬಳಿಕ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗಿದೆ. ರಾತ್ರಿ ಇಡೀ ಇಬ್ಬರೂ ಜೈಲಿನಲ್ಲಿ ಕಳೆದಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಾಲ ಕಳೆದ ರಜತ್ ಹಾಗೂ ವಿನಯ್ ಇಂದು ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡುವ ಸಾಧ್ಯತೆ ಇದೆ.

Fraud Case: ನಕಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಅಂಕಪಟ್ಟಿ ನೀಡುತ್ತಿದ್ದ ಮೂವರ ಬಂಧನ

ನಕಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಅಂಕಪಟ್ಟಿ ನೀಡುತ್ತಿದ್ದ ಮೂವರ ಬಂಧನ

ಸ್ಟಡಿ ಸೆಂಟರ್​ನಲ್ಲಿ ಕರೆಸ್ಪಾಂಡಿಂಗ್ ವ್ಯಾಸಂಗ ಮಾಡುವವರನ್ನು ದಾಖಲಿಸಿಕೊಳ್ಳುತ್ತಿದ್ದರು. ನಂತರ ಕಲವೇ ದಿನಗಳಲ್ಲಿ ಇವರಿಗೆ ಕರ್ನಾಟಕ ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಮಂಡಳಿ ಹೆಸರಿನಲ್ಲಿ ಆರೋಪಿಗಳು ಅಂಕಪಟ್ಟಿಗಳನ್ನು ನೀಡುತಿದ್ದರು. ಆರೋಪಿಗಳು ಧಾರವಾಡದಲ್ಲಿ ಮತ್ತು ಬೆಂಗಳೂರಿನಲ್ಲಿ ಅಂಕಪಟ್ಟಿ ಪ್ರಿಂಟ್ ಮಾಡಿರುವುದು ಪತ್ತೆಯಾಗಿದೆ.

Honey Trap Case: ಕೊನೆಗೂ ಹನಿಟ್ರ್ಯಾಪ್‌ ದೂರು ನೀಡಿದ ಸಚಿವ ರಾಜಣ್ಣ

ಕೊನೆಗೂ ಹನಿಟ್ರ್ಯಾಪ್‌ ದೂರು ನೀಡಿದ ಸಚಿವ ರಾಜಣ್ಣ

ಹನಿಟ್ರ್ಯಾಪ್​ ಬಗ್ಗೆ ಕೆಲವು ಸುಳಿವುಗಳನ್ನು ಬಿಟ್ಟುಕೊಟ್ಟಿರುವ ರಾಜಣ್ಣ, ಗೃಹ ಸಚಿವ ಪರಮೇಶ್ವರ್ ಎಲ್ಲೇ ಇದ್ದರೂ ಹುಡುಕಿಕೊಂಡು ಹೋಗಿ ದೂರು ಕೊಡುತ್ತೇನೆ ಎಂದು ಹೇಳಿದ್ದರು. ಹೇಳಿದಂತೆಯೇ ರಾಜಣ್ಣ ಸದಾಶಿವನಗರದಲ್ಲಿರುವ ಪರಮೇಶ್ವರ್​ ಅವರ ನಿವಾಸಕ್ಕೆ ಭೇಟಿ ನೀಡಿ ದೂರು ನೀಡಿದ್ದಾರೆ.

Ugadi Fashion: ಯುಗಾದಿ ಹಬ್ಬದ ಸಂಭ್ರಮಕ್ಕೆ ವೈವಿಧ್ಯಮಯ ರೇಷ್ಮೆ ಉಡುಗೆಗಳ ಸಾಥ್‌

ಯುಗಾದಿ ಹಬ್ಬದ ಸಂಭ್ರಮಕ್ಕೆ ವೈವಿಧ್ಯಮಯ ರೇಷ್ಮೆ ಉಡುಗೆಗಳ ಸಾಥ್‌

Ugadi Fashion: ಯುಗಾದಿ ಹಬ್ಬದ ಫ್ಯಾಷನ್‌ನಲ್ಲಿ ಇದೀಗ ನಾನಾ ಬಗೆಯ ರೇಷ್ಮೆಯ ಉಡುಗೆಗಳು ನಯಾ ರೂಪದಲ್ಲಿ ಕಾಲಿಟ್ಟಿವೆ. ಇವು ಎಥ್ನಿಕ್‌ ಲುಕ್‌ ಕಲ್ಪಿಸುವುದರೊಂದಿಗೆ ಹಬ್ಬದ ಸಂಭ್ರಮವನ್ನು ಹೆಚ್ಚಿಸಲು ಸಜ್ಜಾಗಿವೆ. ಯಾವ್ಯಾವ ಬಗೆಯವು ಟ್ರೆಂಡಿಯಾಗಿವೆ? ಆಯ್ಕೆ ಹೇಗೆ? ಈ ಬಗ್ಗೆ ಫ್ಯಾಷನ್‌ ಎಕ್ಸ್‌ಪರ್ಟ್‌ಗಳು ಒಂದಿಷ್ಟು ಮಾಹಿತಿ ಹಂಚಿಕೊಂಡಿದ್ದಾರೆ.

Bangles Fashion: ಯುಗಾದಿ-ರಂಜಾನ್‌ಗೆ ಎಂಟ್ರಿ ನೀಡಿದ ಮಿರ ಮಿರ ಮಿನುಗುವ ಬಳೆಗಳು

ಯುಗಾದಿ-ರಂಜಾನ್‌ಗೆ ಎಂಟ್ರಿ ನೀಡಿದ ಮಿರ ಮಿರ ಮಿನುಗುವ ಬಳೆಗಳು

Bangles Fashion: ಯುಗಾದಿ-ರಂಜಾನ್‌ ಈ ಎರಡೂ ಹಬ್ಬಗಳ ಈ ಸೀಸನ್‌ನಲ್ಲಿ ಮಾರುಕಟ್ಟೆಗೆ ನಾನಾ ಬಗೆಯ ಮಿರಮಿರ ಮಿನುಗುವ ಬಳೆಗಳು ಸೇರಿದಂತೆ ಲೆಕ್ಕವಿಲ್ಲದಷ್ಟು ಡಿಸೈನ್‌ನ ರಂಗುರಂಗಾದ ಬಳೆಗಳು ಎಂಟ್ರಿ ನೀಡಿವೆ. ಯಾವ್ಯಾವ ಡಿಸೈನ್‌ನವಕ್ಕೆ ಬೇಡಿಕೆ ಹೆಚ್ಚಿದೆ? ಆಯ್ಕೆ ಹೇಗೆ? ಎಂಬುದರ ಕುರಿತಂತೆ ಇಲ್ಲಿದೆ ಸಂಕ್ಷಿಪ್ತ ವರದಿ.

Weather forecast: ಇಂದು ರಾಜ್ಯದ ಕರಾವಳಿ ಜಿಲ್ಲೆಗಳಿಗೆ ಭಾರಿ ಮಳೆ ಮುನ್ಸೂಚನೆ

ಇಂದು ರಾಜ್ಯದ ಕರಾವಳಿ ಜಿಲ್ಲೆಗಳಿಗೆ ಭಾರಿ ಮಳೆ ಮುನ್ಸೂಚನೆ

Weather forecast: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳ ಕಾಲ ಭಾಗಶಃ ಮೋಡ ಕವಿದ ವಾತಾವರಣ ವಿರಲಿದ್ದು, ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 34°C ಮತ್ತು 22°C ಅಗುವ ಸಾಧ್ಯತೆ ಇದೆ.

BJP Karnataka: ಪಕ್ಷದ ಶಿಸ್ತು ಉಲ್ಲಂಘನೆ; ರಾಜ್ಯದ ಐವರು ಬಿಜೆಪಿ ನಾಯಕರಿಗೆ ಹೈಕಮಾಂಡ್‌ ನೋಟಿಸ್‌

ಐವರು ಬಿಜೆಪಿ ನಾಯಕರಿಗೆ ಹೈಕಮಾಂಡ್‌ ನೋಟಿಸ್‌

BJP Karnataka: ಸಾರ್ವಜನಿಕ ವೇದಿಕೆಗಳಲ್ಲಿ ಪಕ್ಷದ ಅಂತರಿಕ ವಿಚಾರಗಳನ್ನು ಬಹಿರಂಗವಾಗಿ ಮತ್ತು ಅನಗತ್ಯವಾಗಿ ಹೇಳಿಕೆ ನೀಡಿದ್ದೀರಿ. ಈ ನಿಟ್ಟಿನಲ್ಲಿ ನಿಮ್ಮ ವಿರುದ್ಧ ಯಾಕೆ ಕ್ರಮಕೈಗೊಳ್ಳಬಾರದು ಎಂದು ವಿವರಣೆ ನೀಡುವಂತೆ ರಾಜ್ಯದ ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ಮತ್ತು ಯಶವಂತಪುರ ಶಾಸಕ ಎಸ್‌.ಟಿ. ಸೋಮಶೇಖ‌ರ್ ಸೇರಿ ಐವರಿಗೆ ಬಿಜೆಪಿಯ ಕೇಂದ್ರ ಶಿಸ್ತು ಸಮಿತಿ ನೋಟಿಸ್‌ ನೀಡಿದೆ.

BAD Movie: ನಕುಲ್ ಗೌಡ - ಮಾನ್ವಿತ ಹರೀಶ್ ಅಭಿನಯದ ‘BAD’ ಚಿತ್ರ ಮಾ.28ಕ್ಕೆ ಬಿಡುಗಡೆ

ನಕುಲ್ ಗೌಡ - ಮಾನ್ವಿತ ಹರೀಶ್ ಅಭಿನಯದ ‘BAD’ ಚಿತ್ರ ಮಾ.28ಕ್ಕೆ ಬಿಡುಗಡೆ

BAD Movie: ಪಿ.ಸಿ. ಶೇಖರ್ ನಿರ್ದೇಶನದ, ಎಸ್.ಆರ್. ವೆಂಕಟೇಶ್ ಗೌಡ ನಿರ್ಮಿಸಿರುವ ಹಾಗೂ ನಕುಲ್ ಗೌಡ ನಾಯಕನಾಗಿ ನಟಿಸಿರುವ ಬಹು ನಿರೀಕ್ಷಿತ ʼBADʼ ಚಿತ್ರ ಈ ವಾರ ಮಾರ್ಚ್ 28 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಕುರಿತ ವಿವರ ಇಲ್ಲಿದೆ.

The Devil Movie: ರಾಜಸ್ಥಾನದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ʼದಿ ಡೆವಿಲ್ʼ ಚಿತ್ರದ ಶೂಟಿಂಗ್

ರಾಜಸ್ಥಾನದಲ್ಲಿ ದರ್ಶನ್ ಅಭಿನಯದ ʼದಿ ಡೆವಿಲ್ʼ ಚಿತ್ರದ ಶೂಟಿಂಗ್

The Devil Movie: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕರಾಗಿ ನಟಿಸುತ್ತಿರುವ ಬಹು ನಿರೀಕ್ಷಿತ ʼದಿ ಡೆವಿಲ್ʼ ಚಿತ್ರದ ಚಿತ್ರೀಕರಣ ರಾಜಸ್ಥಾನದಲ್ಲಿ ಬಿರುಸಿನಿಂದ ಸಾಗಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ. ಶ್ರೀ ಜೈ ಮಾತ ಕಂಬೈನ್ಸ್ ಲಾಂಛನದಲ್ಲಿಅದ್ಧೂರಿಯಾಗಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಪ್ರಕಾಶ್ ವೀರ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ.

Manada Kadalu Movie: ಯೋಗರಾಜ್ ಭಟ್ ನಿರ್ದೇಶನದ ಬಹು ನಿರೀಕ್ಷಿತ ʼಮನದ ಕಡಲುʼ ಚಿತ್ರ ಮಾ.28ಕ್ಕೆ ರಿಲೀಸ್‌

ಯೋಗರಾಜ್ ಭಟ್ ನಿರ್ದೇಶನದ ʼಮನದ ಕಡಲುʼ ಚಿತ್ರ ಮಾ.28ಕ್ಕೆ ರಿಲೀಸ್‌

Manada Kadalu Movie: ಯೋಗರಾಜ್ ಭಟ್ ನಿರ್ದೇಶನದ ಬಹು ನಿರೀಕ್ಷಿತ ʼಮನದ ಕಡಲುʼ ಚಿತ್ರ ಈ ವಾರ ರಾಜ್ಯಾದ್ಯಂತ (ಮಾರ್ಚ್ 28) ಬಿಡುಗಡೆಯಾಗುತ್ತಿದೆ. ಈ ಚಿತ್ರದ ನಾಯಕನಾಗಿ ಸುಮುಖ ಅಭಿನಯಿಸಿದ್ದಾರೆ. ನಾಯಕಿಯರಾಗಿ ರಾಶಿಕಾ ಶೆಟ್ಟಿ ಹಾಗೂ ಅಂಜಲಿ ಅನೀಶ್ ನಟಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

ಮಣ್ಣಿನ ಮಕ್ಕಳಾಗಲಿ-ಮೊಬೈಲ್ ಮಕ್ಕಳಾಗೋದು ಬೇಡ: ಕೆ.ವಿ.ಪ್ರಭಾಕರ್ ಕರೆ

ಮಣ್ಣಿನ ಮಕ್ಕಳಾಗಲಿ-ಮೊಬೈಲ್ ಮಕ್ಕಳಾಗೋದು ಬೇಡ: ಕೆ.ವಿ.ಪ್ರಭಾಕರ್ ಕರೆ

ಈಗಿನ ಮಕ್ಕಳಿಗೆ ರಾಜ್ಯದ ಮುಖ್ಯಮಂತ್ರಿ ಯಾರು, ದೇಶದ ಪ್ರಧಾನಮಂತ್ರಿ ಯಾರು ಅಂತ ಕೇಳಿದರೆ ಗೊತ್ತಿರುವುದಿಲ್ಲ. ಇವೆಲ್ಲಾ ಮಣ್ಣಿನ ಮಕ್ಕಳಿಗೂ, ಮೊಬೈಲ್ ಮಕ್ಕಳಿಗೂ ಇರುವ ವ್ಯತ್ಯಾಸ ಎಂದು ಮುಖ್ಯಮಂತ್ರಿಗಳ ಮಾಧ್ಯಮ‌ ಸಲಹೆಗಾರ ಕೆ.ವಿ. ಪ್ರಭಾಕರ್ ತಿಳಿಸಿದ್ದಾರೆ.

Book Release: ಲೇಖಕ ಎಂ.ಜಯಪ್ರಕಾಶ್ ಅವರ ʼನಾ ಕಂಡಂತೆʼ ಪುಸ್ತಕ ಬಿಡುಗಡೆ

ಲೇಖಕ ಎಂ.ಜಯಪ್ರಕಾಶ್ ಅವರ ʼನಾ ಕಂಡಂತೆʼ ಪುಸ್ತಕ ಬಿಡುಗಡೆ

Book release: ಲೇಖಕ ಎಂ. ಜಯಪ್ರಕಾಶ್ ಅವರ ಹೊಸ ಕೃತಿ ʼನಾ ಕಂಡಂತೆʼ ಪುಸ್ತಕ ಇತ್ತೀಚೆಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಮೀಡಿಯಾ ಕೇಂದ್ರದಲ್ಲಿ ಬಿಡುಗಡೆಗೊಂಡಿತು. ಲೇಖಕರು ತಮ್ಮ ಬರವಣಿಗೆಯ ಹಿನ್ನೆಲೆ, ಘಟನೆಗಳಿಗೆ ಸಂಬಂಧಿಸಿದ ತಮ್ಮ ಅನುಭವಗಳು ಮತ್ತು ಆ ಘಟನೆಗಳಿಂದ ತಾವು ಕಂಡುಕೊಂಡ ಒಳನೋಟಗಳನ್ನು ಹಂಚಿಕೊಂಡರು.