ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕರ್ನಾಟಕ

Adichunchan Giri Shri: ಮನಸ್ಸನ್ನು ನಿಗ್ರಹಿಸುವ ಪ್ರಬಲ ಮಾರ್ಗವೇ ಆಧ್ಯಾತ್ಮವಾಗಿದೆ: ಚುಂಚಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ

ಮನಸ್ಸನ್ನು ನಿಗ್ರಹಿಸುವ ಪ್ರಬಲ ಮಾರ್ಗವೇ ಆಧ್ಯಾತ್ಮವಾಗಿದೆ

ದೇಹ ಹಾಗೂ ಮನಸ್ಸನ್ನು ಸಕಾರಾತ್ಮಕವಾಗಿ ರೂಪಿಸಿಕೊಳ್ಳುವುದರ ಅಗತ್ಯವಿದೆ. ತಿಳಿಯಾದ ನೀರು ಕದಡುವಂತೆ, ಹಾಗೆಯೇ ಕಲ್ಮಶಗೊಂಡಿರುವ ನೀರನ್ನು ಶುದ್ದೀಕರಣ ಗೊಳಿಸುವ ಮಾದರಿಯಲ್ಲಿ ಆಂತರಿಕ ಬೌದ್ಧಿಕ ಪ್ರಜ್ಞೆಯು ಎಚ್ಚೆತ್ತುಕೊಳ್ಳುತ್ತಿರಬೇಕು. ಈ ನಿಟ್ಟಿನಲ್ಲಿ ಧಾರ್ಮಿಕ ಆಚರಣೆಗಳು ಹಾಗೂ ಸತ್ಕಾರ್ಯ ಚಟುವಟಿಕೆಯು ಒಳ್ಳೆಯ ಪ್ರಭಾವ ಬೀರುತ್ತದೆ

Gudibande News: ಗುಡಿಬಂಡೆಯಲ್ಲಿ ರಾಗಿ ಖರೀದಿ ಕೇಂದ್ರಕ್ಕೆ ಸಂಪ್ರದಾಯಬದ್ದವಾಗಿ ಚಾಲನೆ ನೀಡಿದ ಅಧಿಕಾರಿಗಳು

ರಾಗಿ ಖರೀದಿ ಕೇಂದ್ರಕ್ಕೆ ಸಂಪ್ರದಾಯಬದ್ದ ಚಾಲನೆ

ರಾಗಿ ಖರೀದಿಗೆ ಮಾರ್ಚ್ 31 ಕೊನೆಯ ದಿನಾಂಕವಾಗಿದ್ದು, ತಾಲೂಕಿನಾದ್ಯಂತ ಈಗಾಗಲೇ 37839 ಕ್ವಿಂಟಲ್ ರಾಗಿ ನೋಂದಣಿಯಾಗಿದ್ದಾರೆ. ದಿನಕ್ಕೆ 1,500 ರಿಂದ 2,000 ಕ್ವಿಂಟಲ್ ರಾಗಿ ಖರೀದಿ ಮಾಡುವ ಗುರಿ ಹೊಂದಲಾಗಿದೆ. ಮುಂದಿನ 40 ದಿನಗಳ ಅವಧಿಯಲ್ಲಿ ನೋಂದಾಯಿತ ಎಲ್ಲಾ ರೈತರಿಂದಲೂ ರಾಗಿ ಖರೀದಿಸಲಾಗುವುದು. ರೈತರ ಅನುಕೂಲಕ್ಕಾಗಿ ಖರೀದಿ ಕೇಂದ್ರಗಳ ಮುಂದೆ ನೋಡಲ್ ಅಧಿಕಾರಿಗಳ ಹೆಸರು ಮತ್ತು ದೂರವಾಣಿ ಸಂಖ್ಯೆಗಳನ್ನು ಒಳಗೊಂಡ ಬ್ಯಾನರ್‌ಗಳನ್ನು ಅಳವಡಿಸಲಾಗಿದೆ

Gudibande News: ವ್ಯಸನಮುಕ್ತಿಯಿಂದ ನೆಮ್ಮದಿಯ ಬದುಕಿನೆಡೆಗೆ: ಧರ್ಮಸ್ಥಳ ಯೋಜನೆಯಿಂದ ವಿಶೇಷ ಅಭಿಯಾನಕ್ಕೆ ಚಾಲನೆ

ರ್ಮಸ್ಥಳ ಯೋಜನೆಯಿಂದ ವಿಶೇಷ ಅಭಿಯಾನಕ್ಕೆ ಚಾಲನೆ

ಧರ್ಮಸ್ಥಳ ಕ್ಷೇತ್ರದ ವತಿಯಿಂದ ಪ್ರತೀ ವರ್ಷ ಮದ್ಯಪಾನ ಹಾಗೂ ಮಾದಕ ವಸ್ತುಗಳ ಕುರಿತು ಜಾಗೃತಿ ಮೂಡಿಸುತ್ತಾ ಬರುತ್ತಿದೆ. ಈ ಹಾದಿಯಲ್ಲಿ ಕಡಿಮೆ ಖರ್ಚು ಹಾಗೂ ಸಮಯದಲ್ಲಿ ವ್ಯಕ್ತಿಯ ಅಂತರಂಗವನ್ನು ಭೇದಿಸಿ ಮನಃಪರಿವರ್ತನೆ ಮಾಡುವ ವಿಶೇಷ ಪ್ರಕ್ರಿಯೆ ಈ ಮದ್ಯವರ್ಜನ ಶಿಬಿರದ ಉದ್ದೇಶ ವಾಗಿದೆ.

Bagepally News: ಎಸ್.ಎನ್.ಸುಬ್ಬಾರೆಡ್ಡಿ ಬಗ್ಗೆ ಹಗುರ ಮಾತು ಅಪಪ್ರಚಾರ ನಿಲ್ಲಿಸಿ; ದಾಖಲೆಗಳೊಂದಿಗೆ ಚರ್ಚೆಗೆ ಬನ್ನಿ: ದಲಿತ ಸಂಘರ್ಷ ಸಮಿತಿ ಆಗ್ರಹ

ಎಸ್.ಎನ್.ಸುಬ್ಬಾರೆಡ್ಡಿ ಬಗ್ಗೆ ಹಗುರ ಮಾತು ಅಪಪ್ರಚಾರ ನಿಲ್ಲಿಸಿ

ನಮ್ಮ ನಾಯಕ ಎಸ್.ಎನ್.ಸುಬ್ಬಾರೆಡ್ಡಿ ಕೇವಲ ಉದ್ಯಮಿಯಲ್ಲ, ಜನಪರ ಕಾಳಜಿಯುಳ್ಳ ಸ್ನೇಹಜೀವಿ.25 ವರ್ಷಗಳಿಗೂ ಹೆಚ್ಚುಕಾಲ ಜನಸೇವೆಯೇ ಜನಾರ್ಧನ ಸೇವೆ ಎನ್ನುತ್ತಾ ಬಡ ಜನರ, ದಲಿತರ, ಕಾರ್ಮಿಕರ,ಹಾಗೂ ಸಾಮಾನ್ಯ ಜನತೆಯ ಕಷ್ಟಕ್ಕೆ ಸುಖಗಳಲ್ಲಿ ಜತೆಗಿದ್ದವರು. ಜನರ ಪ್ರೀತಿ ವಿಶ್ವಾಸದ ಕಾರಣವಾಗಿ ಮೂರು ಬಾರಿ ಶಾಸಕರಾಗಿ ಆಯ್ಕೆ ಯಾದವರು. ಇಂತಹ ವ್ಯಕ್ತಿ ಜನತೆಗೆ ಮತ್ತು ವ್ಯವಸ್ಥೆಗೆ ಮೋಸ ಮಾಡುತ್ತಾರೆಂದರೆ ದೇವರು ಕೂಡ ಮೆಚ್ಚುವುದಿಲ್ಲ

Special Revenue Village Campaign 2.0: ಫೆ.27ಕ್ಕೆ ಕಂದಾಯ ಸೇವೆಗಳ ಸಮರ್ಪಣಾ ಸಮಾವೇಶ: 25 ಸಾವಿರ ದಾಖಲೆಗಳ ವಿತರಣೆ : ಜಿ.ಪ್ರಭು ಹೇಳಿಕೆ

ಚಿಕ್ಕಬಳ್ಳಾಪುರದಲ್ಲಿ ಫೆ.27ಕ್ಕೆ ಕಂದಾಯ ಸೇವೆಗಳ ಸಮರ್ಪಣಾ ಸಮಾವೇಶ

ಚಿಕ್ಕಬಳ್ಳಾಪುರ ತಾಲೂಕು  ಚೊಕ್ಕಹಳ್ಳಿ ಬೆಂಗಳೂರು ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ-44ರ ಬಳಿ ನಿರ್ಮಿಸಿರುವ ಕಂದಾಯ ಸೇವೆಗಳ ಸಮರ್ಪಣಾ ಸಮಾವೇಶದ ಬೃಹತ್ ವೇದಿಕೆಯಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರಿಂದ ಕಂದಾಯ ಇಲಾಖೆಯಲ್ಲಿಯೇ ಐತಿಹಾಸಿಕ ವಾದ ಈ ಕಾರ್ಯಕ್ರಮ ನಡೆಯಲಿದೆ

Phone-in program: ಆತಂಕ ತೊರೆಯಿರಿ, ಆತ್ಮವಿಶ್ವಾಸದಿಂದ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯಿರಿ: ಜಿಲ್ಲಾಧಿಕಾರಿ ಜಿ ಪ್ರಭು ಅಭಯ

ಆತಂಕ ತೊರೆಯಿರಿ ಆತ್ಮವಿಶ್ವಾಸದಿಂದ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯಿರಿ

ಪರೀಕ್ಷೆ ಎಂದರೆ ಆತಂಕವಾಗುವುದು ಸಹಜ. ಪರಿಶ್ರಮ ಮತ್ತು ಗುರುಗಳ ಮಾರ್ಗ ದರ್ಶನದಲ್ಲಿ ಅಭ್ಯಾಸ ಮಾಡಿದ್ದಲ್ಲಿ ಹೆಚ್ಚಿನ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಬಾಕಿ ಉಳಿದಿರುವ ಅವಧಿ ಯಲ್ಲಿ ಪರೀಕ್ಷಾ ಪೂರ್ವ ಸಿದ್ಧತೆ ಮಾಡಿಕೊಳ್ಳಿ. ಪುನರಾವರ್ತಿತ ಅಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡಿದರೆ ತಮ್ಮ ಪರಿಶ್ರಮಕ್ಕೆ ತಕ್ಕನಾದ ಫಲಿತಾಂಶ ಬಂದೇ ಬರಲಿದೆ

ಸಿ.ಜೆ. ರಾಯ್‌ ಆತ್ಮಹತ್ಯೆಗೆ ಕಾರಣ ರಿವೀಲ್‌; ರಿಯಲ್‌ ಎಸ್ಟೇಟ್‌ ಉದ್ಯಮಿಗೆ ಮುಳುವಾಯ್ತಾ ಹವಾಲಾ ಹಣ?

ರಿಯಲ್‌ ಎಸ್ಟೇಟ್‌ ಉದ್ಯಮಿ ಸಿ.ಜೆ.ರಾಯ್‌ ಆತ್ಮಹತ್ಯೆಗೆ ಕಾರಣ ರಿವೀಲ್‌

C.J. Roy's Death Case: ಸಿ.ಜೆ.ರಾಯ್ ವ್ಯವಹಾರದಲ್ಲಿ 500 ಕೋಟಿ ರೂ.‌ ಮಿಸ್ ಮ್ಯಾಚ್ ಆಗಿತ್ತು. ಹೀಗಾಗಿ ತನಿಖೆ ನಡೆಸಿದ್ದ ಐಟಿ ಇಲಾಖೆ ಈ ಹಣದ ಲೆಕ್ಕ ಕೇಳಿತ್ತು. ಈ ಹಣದ ಮೂಲದ ಬಗ್ಗೆ ಮಾಹಿತಿ ನೀಡಲಾಗದೆ ಉದ್ಯಮಿ ಸಂಕಷ್ಟಕ್ಕೊಳಗಾಗಿದ್ದರು ಎಂದು ತಿಳಿದುಬಂದಿದೆ.

ಕಾಂಕ್ರೀಟ್ ಡೆಮಿನಾರ್ - 2026ರಲ್ಲಿ ಮೂಲಸೌಕರ್ಯ ಉದ್ಯಮದ ಭವಿಷ್ಯದ ಅನ್ವೇಷಣೆ

ಕಾಂಕ್ರೀಟ್ ಡೆಮಿನಾರ್ʼನಲ್ಲಿ ಉದ್ಯಮದ ಭವಿಷ್ಯದ ಅನ್ವೇಷಣೆ

ಇದು ಉದ್ಯಮದ ನಾಯಕರು, ನಿರ್ಮಾಣ ಮತ್ತು ಮೂಲಸೌಕರ್ಯ ಕಂಪನಿಗಳು, ಡೆವಲ ಪರ್ಗಳು, ಎಂಜಿನಿಯರಿಂಗ್ ಸಲಹೆಗಾರರು, ತಂತ್ರಜ್ಞರು, ನೀತಿ ನಿರೂಪಕರು ಮತ್ತು ಶೈಕ್ಷಣಿಕ ಸಂಸ್ಥೆಗಳನ್ನು ನಿರ್ಮಾಣ ವಲಯದಲ್ಲಿ ನಾವೀನ್ಯತೆ, ಸುಸ್ಥಿರತೆ ಮತ್ತು ಶ್ರೇಷ್ಠತೆಯನ್ನು ಹೆಚ್ಚಿಸಲು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸುತ್ತದೆ.

ಖಾಲಿ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡ್ತೇವೆ: ಸಿಎಂ ಭರವಸೆ

ಖಾಲಿ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡ್ತೇವೆ: ಸಿಎಂ ಭರವಸೆ

ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಬುಧವಾರ ಆಯೋಜಿಸಿದ್ದ ಕಿಸಾನ್ ಸಭಾ ಟ್ರಸ್ಟ್‌ನ ಮಹಾತ್ಮ ಗಾಂಧಿ ವಸತಿ ಪ್ರೌಢಶಾಲೆಯ 35ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಹಾಗೂ ಕಿಸಾನ್ ಸಭಾ ಸಭಾಂಗಣದ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಭಾಗವಹಿಸಿದ್ದರು. ಇದಕ್ಕೂ ಮುನ್ನಾ ಮಾಧ್ಯಮದೊಂದಿಗೆ ಮಾತನಾಡಿದ್ದಾರೆ.

ಅಬಕಾರಿ ಅಧಿಕಾರಿಗಳೇ ಅಕ್ರಮ ಮದ್ಯ ಮಾರಾಟದ ರೂವಾರಿಗಳು: ಶಾಸಕ ಸಿ.ಬಿ. ಸುರೇಶ್‌ಬಾಬು ಗಂಭೀರ ಆರೋಪ

ಅಬಕಾರಿ ಅಧಿಕಾರಿಗಳೇ ಅಕ್ರಮ ಮದ್ಯ ಮಾರಾಟದ ರೂವಾರಿಗಳು: ಸಿ.ಬಿ. ಸುರೇಶ್‌ಬಾಬು

Chikkanayakanahalli News: ಚಿಕ್ಕನಾಯಕನಹಳ್ಳಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ ಜರುಗಿತು. ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಸಿ.ಬಿ. ಸುರೇಶ್‌ಬಾಬು, ತಾಲೂಕಿನಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟಕ್ಕೆ ಅಬಕಾರಿ ಇಲಾಖೆಯ ಅಧಿಕಾರಿಗಳೇ ನೇರ ಕಾರಣ ಎಂದು ಆರೋಪಿಸಿದ್ದಾರೆ.

BESCOM Recruitment: ಬೆಸ್ಕಾಂನಲ್ಲಿದೆ ಉದ್ಯೋಗಾವಕಾಶ; ಬಿಇ, ಡಿಪ್ಲೊಮಾ, ಪದವೀಧರರು ಅಪ್ಲೈ ಮಾಡಿ

ಬೆಸ್ಕಾಂನ 520 ಅಪ್ರೆಂಟಿಸ್ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತದಲ್ಲಿ ಒಂದು ವರ್ಷದ ಅವಧಿಗೆ ಒಟ್ಟು 520 ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ತಾಂತ್ರಿಕ, ಪದವೀಧರ ಹಾಗೂ ಡಿಪ್ಲೊಮಾ ಅರ್ಹತೆ ಹೊಂದಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆಯ್ಕೆ ಮೆರಿಟ್ ಆಧಾರದ ಮೇಲೆ ನಡೆಯಲಿದೆ. ಅರ್ಜಿ ಸಲ್ಲಿಕೆ ಫೆಬ್ರವರಿ 12ರಿಂದ ಆರಂಭವಾಗಿದ್ದು, ಮಾರ್ಚ್ 2 ಕೊನೆಯ ದಿನ. ಹೆಚ್ಚಿನ ಮಾಹಿತಿಗೆ bescom.karnataka.gov.inಗೆ ಭೇಟಿ ನೀಡಬಹುದು.

ಉರ್ದುವಿನಲ್ಲಿ ಸರ್ಕಾರಿ ಕಾರ್ಯಕ್ರಮದ ಆಹ್ವಾನ ಪತ್ರಿಕೆ; ರಾಜ್ಯ ಸರ್ಕಾರದ ವಿರುದ್ಧ ಭುಗಿಲೆದ್ದ ಆಕ್ರೋಶ

ಉರ್ದುವಿನಲ್ಲಿ ಆಹ್ವಾನ ಪತ್ರಿಕೆ; ಸರ್ಕಾರದ ವಿರುದ್ಧ ಭುಗಿಲೆದ್ದ ಆಕ್ರೋಶ

ಹಿಮೋಫಿಲಿಯಾ ರೋಗಿಗಳಿಗೆ ರೋಗ ನಿರೋಧಕ ಚಿಕಿತ್ಸೆ ಮತ್ತು ಉಚಿತ ಅಂಬುಲೆನ್ಸ್ ಸೇವೆಗೆ ಚಾಲನೆ ನೀಡುವ ಮಹತ್ವದ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಉರ್ದು ಭಾಷೆಯಲ್ಲೂ ಮುದ್ರಿಸಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಕನ್ನಡಪರ ಸಂಘಟನೆಗಳು ಹಾಗೂ ವಿಪಕ್ಷಗಳು ಆಕ್ರೋಶ ಹೊರಹಾಕಿವೆ.

ಬೆಂಗಳೂರಿನಲ್ಲಿ ಖಾಸಗಿ ಬಸ್ ಕಂಡಕ್ಟರ್‌ನಿಂದ ಯುವ ಜೋಡಿಗೆ ಬೆದರಿಕೆ: ನೈತಿಕ ಪೋಲಿಸ್‌ಗಿರಿಗೆ ಬೇಸರ ಹೊರಹಾಕಿದ ಯುವಕ

ಖಾಸಗಿ ಬಸ್‌ನಲ್ಲಿ ಯುವಜೋಡಿಗೆ ಕಂಡಕ್ಟರ್‌ ಕಿರುಕುಳ

ಸಿಲಿಕಾನ್ ಸಿಟಿ ಬೆಂಗಳೂರಿನಿಂದ ಪ್ರಯಾಣಿಸುತ್ತಿದ್ದ ಯುವ ಜೋಡಿಗೆ ಬಸ್ ಕಂಡಕ್ಟರ್ ಬೆದರಿಕೆ ಹಾಕಿರುವ ಘಟನೆ ವರದಿಯಾಗಿದೆ. ಯುವಕ ಮತ್ತು ಯುವತಿ ಒಂದೇ ಬರ್ತ್‌ ಬುಕ್‌ ಮಾಡಿದ್ದು, ಅವರು ಪ್ರತ್ಯೇಕವಾಗಿ ಸೀಟ್‌ನಲ್ಲಿ ಕುಳಿತು ಕೊಳ್ಳಬೇಕೆಂದು ಕಂಡಕ್ಟರ್ ಒತ್ತಾಯಿಸಿದ್ದು ಪೊಲೀಸರಿಗೆ ಕರೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಬಗ್ಗೆ ಯುವಕ ರೆಡ್ಡಿಟ್‌ನಲ್ಲಿ ಬರೆದುಕೊಂಡಿದ್ದಾನೆ.

ನಾಳೆ ಹೊಸನಗರದ ರಾಮಚಂದ್ರಾಪುರಮಠ ಪುನರ್ನಿರ್ಮಾಣಕ್ಕೆ ಶಿಲಾನ್ಯಾಸ

ನಾಳೆ ಹೊಸನಗರದ ರಾಮಚಂದ್ರಾಪುರಮಠ ಪುನರ್ನಿರ್ಮಾಣಕ್ಕೆ ಶಿಲಾನ್ಯಾಸ

Ramachandrapura Mutt: ಹೊಸನಗರದ ರಾಮಚಂದ್ರಾಪುರ ಮಠದ ಪ್ರಧಾನಮಠ ಪುನರ್ನಿರ್ಮಾಣಕ್ಕೆ ಫೆ.26ರಂದು ಶಿಲಾನ್ಯಾಸ ನೆರವೇರಲಿದೆ. ಶರಾವತಿ ತೀರದ ಪ್ರಧಾನ ಮಠದ ಆವರಣದಲ್ಲಿ ಶ್ರೀರಾಮ ಸಾನ್ನಿಧ್ಯದ ಮಹಾ ನಿರ್ಮಾಣಕ್ಕೆ ಸಕಲ ಸಿದ್ಧತೆಯಾಗಿದೆ ಎಂದು ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ತಿಳಿಸಿದ್ದಾರೆ.

100 ರುಪಾಯಿ ಸ್ಕ್ರೀನ್ ಗಾರ್ಡ್ ವಿಚಾರಕ್ಕೆ ಹರಿಯಿತು ನೆತ್ತರು: ಚಿತ್ರದುರ್ಗದಲ್ಲಿ ಮೊಬೈಲ್ ಅಂಗಡಿ ಮಾಲಕನಿಗೆ ಇರಿದ ಆರೋಪಿ

ಸ್ಕ್ರೀನ್ ಗಾರ್ಡ್ ವಿಚಾರದಲ್ಲಿ ಜಗಳ: ಅಂಗಡಿ ಮಾಲೀಕನಿಗೆ ಇರಿತ

Mobile screen guard dispute: ಚಿತ್ರದುರ್ಗ ಜಿಲ್ಲೆಯಲ್ಲಿ ಸ್ಕ್ರೀನ್ ಗಾರ್ಡ್ ಬದಲಾವಣೆ ವಿಚಾರದಲ್ಲಿ ಜಗಳ ನಡೆದು ವ್ಯಕ್ತಿಯೊಬ್ಬ ಮೊಬೈಲ್ ಅಂಗಡಿ ಮಾಲೀಕನಿಗೆ ಚಾಕುವಿನಿಂದ ಇರಿದಿದ್ದಾನೆ. ಅಂಗಡಿ ಮಾಲಕ ಬೇರೆ ಮಾದರಿಯ ಸ್ಕ್ರೀನ್ ಗಾರ್ಡ್‌ಗೆ ಹೆಚ್ಚುವರಿಯಾಗಿ 100 ರುಪಾಯಿ ಕೇಳಿದ್ದಾರೆ ಎನ್ನಲಾಗಿದ್ದು, ನಂತರ ಜಗಳ ಆರಂಭವಾಗಿದೆ. ಆರೋಪಿಯು ಮಾಲಕನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ.

ಬೆಂಗಳೂರಿನಲ್ಲಿ ಘೋರ ದುರಂತ: ಐವಿ ಡ್ರಿಪ್ ತೆಗೆಯುವಾಗ  6 ತಿಂಗಳ ಮಗುವಿನ ಬೆರಳನ್ನೇ ಕತ್ತರಿಸಿದ ನರ್ಸ್

6 ತಿಂಗಳ ಮಗುವಿನ ಬೆರಳನ್ನೇ ಕತ್ತರಿಸಿದ ನರ್ಸ್

ಜ್ವರಕ್ಕೆಂದು ಆಸ್ಪತ್ರೆಗೆ ದಾಖಲಾಗಿದ್ದ ಮಗುವಿಗೆ ಹಾಕಿದ್ದ ಐವಿ ಡ್ರಿಪ್ ತೆಗೆಯುವಾಗ ನರ್ಸ್ ಒಬ್ಬರು ಮಗುವಿನ ಕಿರು ಬೆರಳನ್ನೇ ಕತ್ತರಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮಗುವಿಗೆ ತಕ್ಷಣ ತುರ್ತು ಚಿಕಿತ್ಸೆ ನೀಡಲಾಯಿತು ಆದರೂ ಮಗು ಬೆರಳನ್ನು ಕಳೆದುಕೊಂಡಿದೆ. ಈ ಕುರಿತು ಆಸ್ಪತ್ರೆ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಬಾಲಕಿ ಜತೆ ಅನುಚಿತ ವರ್ತನೆ; ಸ್ವಯಂ ಘೋಷಿತ ದೇವ ಮಾನವ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ದೂರು

ಸ್ವಯಂ ಘೋಷಿತ ದೇವ ಮಾನವ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ದೂರು

Mallikarjun Mutya Case: ಅಪ್ರಾಪ್ತ ಬಾಲಕಿಯ ಜತೆಗೆ ಅನುಚಿತ ವರ್ತನೆ ನಡೆಸಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಹಿನ್ನೆಲೆಯಲ್ಲಿ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ. ಪ್ರಕರಣದ ತನಿಖೆ ನಡೆಸಿ, ಕೈಗೊಂಡ ಕ್ರಮದಬಗ್ಗೆ ಆಯೋಗಕ್ಕೆ ವರದಿಯನ್ನು ಸಲ್ಲಿಸುವಂತೆ ಸೂಚಿಸಲಾಗಿದೆ.

ಶಿರಸಿಯಲ್ಲಿ ಅದ್ಧೂರಿಯಾಗಿ ನೆರವೇರಿದ  ಶ್ರೀ ಮಾರಿಕಾಂಬಾ ದೇವಿ ರಥೋತ್ಸವ

ಶಿರಸಿಯಲ್ಲಿ ಅದ್ಧೂರಿಯಾಗಿ ನಡೆದ ಶ್ರೀ ಮಾರಿಕಾಂಬಾ ದೇವಿ ರಥೋತ್ಸವ

Sirsi News: ಶಿರಸಿಯ ಅಧಿದೇವತೆ ಶ್ರೀ ಮಾರಿಕಾಂಬಾ ದೇವಿಯ ದ್ವೈವಾರ್ಷಿಕ ಮಾರಿಹಬ್ಬ ಬುಧವಾರ ಅತ್ಯಂತ ಸಡಗರ-ಸಂಭ್ರಮದಿಂದ ಆರಂಭಗೊಂಡಿದೆ. ಲಕ್ಷಾಂತರ ಭಕ್ತರ ಹರ್ಷೋದ್ಗಾರಗಳ ನಡುವೆ ಅದ್ಧೂರಿ ರಥೋತ್ಸವ ಜರುಗಿತು. ಇಂದಿನಿಂದ ಆರಂಭಗೊಂಡು ಮುಂದಿನ ಒಂಬತ್ತು ದಿನಗಳ ಕಾಲ ದೇವಿಯು ಗದ್ದುಗೆಯ ಮೇಲೆ ವಿರಾಜಮಾನಳಾಗಿ ಭಕ್ತರಿಗೆ ದರ್ಶನ ನೀಡಲಿದ್ದಾಳೆ.

‘ಉತ್ಥಾನ' ಪ್ರಬಂಧ ಸ್ಪರ್ಧೆ-2025 ಫಲಿತಾಂಶ ಪ್ರಕಟ; ಪೂಜಾ ಮಹಾದೇವ ಸಾರವಾಡಗೆ ಪ್ರಥಮ ಬಹುಮಾನ

‘ಉತ್ಥಾನ' ಪ್ರಬಂಧ ಸ್ಪರ್ಧೆ-2025; ಪೂಜಾ ಮಹಾದೇವ ಸಾರವಾಡ ಪ್ರಥಮ

ಉತ್ಥಾನ ಮಾಸಪತ್ರಿಕೆಯಿಂದ ಕಾಲೇಜು ವಿದ್ಯಾರ್ಥಿಗಳಿಗಾಗಿ ರಾಜ್ಯಮಟ್ಟದ ವಾರ್ಷಿಕ ಪ್ರಬಂಧ ಸ್ಪರ್ಧೆ–2025 ಆಯೋಜಿಸಲಾಗಿತ್ತು. ಶತಮಾನ ಪೂರೈಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘ: ವಿಚಾರ, ವಿಶೇಷತೆ ಮತ್ತು ಕೊಡುಗೆ – ಎಂಬ ವಿಷಯದ ಕುರಿತು ನಡೆದ ಈ ಪ್ರಬಂಧ ಸ್ಪರ್ಧೆಯ ಫಲಿತಾಂಶವನ್ನು ಇದೀಗ ಪ್ರಕಟಿಸಲಾಗಿದೆ.

Sirsi Marikamba Jatre 2026: ಶಿರಸಿ ಮಾರಿಕಾಂಬಾ ಜಾತ್ರೆ ಹಿನ್ನೆಲೆ ಯಶವಂತಪುರ-ತಾಳಗುಪ್ಪ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು; ಇಲ್ಲಿದೆ ವೇಳಾಪಟ್ಟಿ

ಶಿರಸಿ ಜಾತ್ರೆ ಹಿನ್ನೆಲೆ ಯಶವಂತಪುರ-ತಾಳಗುಪ್ಪ ನಡುವೆ ವಿಶೇಷ ರೈಲು

ಯಶವಂತಪುರ ಮತ್ತು ತಾಳಗುಪ್ಪ ನಡುವೆ ಸಂಚರಿಸುವ ಈ ವಿಶೇಷ ರೈಲು (06587) ಫೆ.27ರಂದು ರಾತ್ರಿ 10.45ಕ್ಕೆ ಯಶವಂತಪುರದಿಂದ ಹೊರಟು ಮರುದಿನ ಬೆಳಗ್ಗೆ 5.05ಕ್ಕೆ ತಾಳಗುಪ್ಪ ತಲುಪಲಿದೆ. ಅದೇ ರೀತಿ ರೈಲು (06588) ಫೆ.28ರಂದು ಬೆಳಗ್ಗೆ 9.30ಕ್ಕೆ ತಾಳಗುಪ್ಪದಿಂದ ಹೊರಟು, ಅದೇ ದಿನ ಸಂಜೆ 5.15ಕ್ಕೆ ಯಶವಂತಪುರ ಸೇರಲಿದೆ.

ವಾಟರ್ ಬ್ಲಾಸ್ಟರ್ ಬ್ರ್ಯಾಂಡ್ SPYRA, ಹೋಳಿ ಹಬ್ಬದ ಮುನ್ನ ಭಾರತದಲ್ಲಿ Instamart ಮೂಲಕ ಪ್ರವೇಶ

ಹೋಳಿ ಹಬ್ಬದ ಮುನ್ನ ಭಾರತದಲ್ಲಿ Instamart ಮೂಲಕ ಪ್ರವೇಶ

ಇನ್‌ಸ್ಟಾಮಾರ್ಟ್‌, ಹೋಳಿ ಹಬ್ಬಕ್ಕೂ ಮುನ್ನವೇ ವಾಟರ್‌ ಬ್ಲಾಸ್ಟರ್‌ ಸ್ಪೈರ ಬ್ರ್ಯಾಂಡ್ ಅನ್ನು ಭಾರತದಲ್ಲಿ ಪರಿಚಯಿಸುತ್ತಿದೆ. ಇದರ ಮೂಲಕ ವಿಶ್ವದ ಅತ್ಯಂತ ಶಕ್ತಿಶಾಲಿ ವಾಟರ್ ಬ್ಲಾಸ್ಟರ್‌ ಗಳಲ್ಲಿ ಒಂದನ್ನು ಹಬ್ಬದ ಸಂಭ್ರಮಕ್ಕೆ ಸರಿಯಾದ ಸಮಯ ದಲ್ಲಿ ಗ್ರಾಹಕರಿಗೆ ತಲುಪಿಸ ಲಾಗುತ್ತಿದೆ.

ಪ್ರಚೋದನಕಾರಿ ಭಾಷಣ; ಶಾಸಕ ಬಸನಗೌಡ ಯತ್ನಾಳ್‌ ವಿರುದ್ಧ ಕೇಸ್ ದಾಖಲು

ಪ್ರಚೋದನಕಾರಿ ಭಾಷಣ; ಶಾಸಕ ಬಸನಗೌಡ ಯತ್ನಾಳ್‌ ವಿರುದ್ಧ ಕೇಸ್ ದಾಖಲು

ಈ ದೇಶದಲ್ಲಿ ಇರಬೇಕಾದರೆ ಒಂದೇ ಮಾತರಂ ಹೇಳಬೇಕು, ಮಹಾತ್ಮ ಗಾಂಧೀಜಿ ಅವರು ಪಾಕಿಸ್ತಾನದ ಪಿತಾಮಹ ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಯಾದಗಿರಿ ಜಿಲ್ಲೆಯ ಗುರುಮಠಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಯನಗರದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 431ನೇ ವರ್ಧಂತಿ ಉತ್ಸವ; ‘ಲಕ್ಷ ಪುಷ್ಪಾರ್ಚನೆ’ಯಲ್ಲಿ ಸಹಸ್ರಾರು ಭಕ್ತರು ಭಾಗಿ

ಶ್ರೀ ರಾಘವೇಂದ್ರ ಸ್ವಾಮಿಗಳ 431ನೇ ವರ್ಧಂತಿ; ಸಹಸ್ರಾರು ಭಕ್ತರು ಭಾಗಿ

ಬೆಂಗಳೂರಿನ ಜಯನಗರದ 5ನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳವರ 431ನೇ ವರ್ಧಂತಿ ಉತ್ಸವದ (ಜನ್ಮದಿನೋತ್ಸವ) ಪ್ರಯುಕ್ತ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಅಷ್ಟೋತ್ತರ ಪಾರಾಯಣದೊಂದಿಗೆ ಫಲಪಂಚಾಮೃತ ಅಭಿಷೇಕ ಮತ್ತು "ಲಕ್ಷ ಪುಷ್ಪಾರ್ಚನೆ" ನೆರವೇರಿತು.

Puttur Love dokha: ಪುತ್ತೂರು ಬಿಜೆಪಿ ಮುಖಂಡನ ಪುತ್ರನ ಪ್ರೇಮ ವಂಚನೆ ಪ್ರಕರಣ: ಸಾಯಲು ಯತ್ನಿಸಿದ ಮಗುವಿನ ತಾಯಿ

ಪುತ್ತೂರು ಬಿಜೆಪಿ ಮುಖಂಡನ ಪುತ್ರನ ಪ್ರೇಮ ವಂಚನೆ: ಸಾಯಲು ಯತ್ನಿಸಿದ ಯುವತಿ

ಪುತ್ತೂರಿನ ಉಚ್ಚಾಟಿತ ಬಿಜೆಪಿ ನಾಯಕರೊಬ್ಬರ ಪುತ್ರ, ಜೆ. ಕೃಷ್ಣ ರಾವ್ ಎಂಬಾತ ತನ್ನ ಕ್ಲಾಸ್‌ಮೇಟ್ ಜೊತೆಗೆ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದ. ಘಟನೆಯ ಬಳಿಕ ಯುವತಿ ಗರ್ಭಿಣಿಯಾಗಿ ಮಗುವಿಗೆ ಜನ್ಮ ನೀಡಿದ್ದಳು. ಈ ಪ್ರಕರಣದಲ್ಲಿ ಡಿಎನ್‌ಎ ಪರೀಕ್ಷೆ ನಡೆದು ಜೆ. ಕೃಷ್ಣ ರಾವ್ ಮಗುವಿನ ತಂದೆ ಎಂಬುದು ಸಾಬೀತಾಗಿತ್ತು.

Loading...