ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

ಬೆಂಗಳೂರಿನಲ್ಲಿ 7ನೇ ಮಹಡಿಯಿಂದ ಜಿಗಿದ ಪ್ರೇಮಿಗಳು; ಯುವತಿ ಸಾವು, ಯುವಕನ ಸ್ಥಿತಿ ಗಂಭೀರ

ಬೆಂಗಳೂರಿನಲ್ಲಿ 7ನೇ ಮಹಡಿಯಿಂದ ಜಿಗಿದ ಪ್ರೇಮಿಗಳು; ಯುವತಿ ಸಾವು

Bengaluru News: ಬೆಂಗಳೂರಿನ ವೈಟ್‌ಫೀಲ್ಡ್‌ನ ಕೋ ಲಿವಿಂಗ್ ಪಿಜಿ ಕಟ್ಟಡದಿಂದ ಪ್ರೇಮಿಗಳು ಜಿಗಿದಿದ್ದು, ಘಟನೆಯಲ್ಲಿ ಯುವತಿ ಮೃತಪಟ್ಟಿದ್ದಾಳೆ. ಗಾಯಗೊಂಡ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ವೈಟ್ ಫೀಲ್ಡ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಮುಖ್ಯಶಿಕ್ಷಕಿ ಜಿ.ವಿನುತಾ ಅವರ ನಿವೃತ್ತಿ ಜೀವನಕ್ಕೆ ಶುಭ ಹಾರೈಕೆ

ಮುಖ್ಯಶಿಕ್ಷಕಿ ಜಿ.ವಿನುತಾ ಅವರ ನಿವೃತ್ತಿ ಜೀವನಕ್ಕೆ ಶುಭ ಹಾರೈಕೆ

ಶಿಕ್ಷಣ ಕ್ಷೇತ್ರದಲ್ಲಿ ಹಲವು ವರ್ಷಗಳ ಕಾಲ ಸಲ್ಲಿಸಿದ ಅವರ ಸೇವೆ ಶ್ಲಾಘನೀಯವಾಗಿದ್ದು, ಅನೇಕ ವಿದ್ಯಾ ರ್ಥಿಗಳ ಬದುಕಿಗೆ ದಾರಿ ತೋರಿಸಿರುವುದು ಸ್ಮರಣೀಯವಾಗಿದೆ. ಅವರ ಮುಂದಿನ ನಿವೃತ್ತ ಜೀವನವು ಆಯುಷ್ಯ, ಉತ್ತಮ ಆರೋಗ್ಯ, ಸುಖ, ಸಂತೋಷ ಹಾಗೂ ನೆಮ್ಮದಿಯಿಂದ ಕೂಡಿರಲಿ ಎಂದು ಸಂದೀಪ ಬಿ. ರೆಡ್ಡಿ ಶುಭ ಹಾರೈಸಿದರು

ಪತಂಜಲಿ ಯೋಗ ಶಿಕ್ಷಣ ಸಂಸ್ಥೆಯಿಂದ ಶ್ರೀಕ್ಷೇತ್ರ ಕೈವಾರಕ್ಕೆ ಧಾರ್ಮಿಕ ಪ್ರವಾಸ; ತಾತಯ್ಯನವರ ದರ್ಶನ, ಸತ್ಸಂಗ ಹಾಗೂ ಸಾಮೂಹಿಕ ಪ್ರಾರ್ಥನೆ

ಕೈವಾರದಲ್ಲಿ ಮೈಸೂರಿನ 500ಕ್ಕೂ ಹೆಚ್ಚು ಯೋಗಬಂಧುಗಳು

ಮೈಸೂರು ಪತಂಜಲಿ ಯೋಗ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಂಜುಂಡಸ್ವಾಮಿ ಮಾತನಾಡಿ, ಪುಣ್ಯಕ್ಷೇತ್ರ ಗಳಿಗೆ ಭೇಟಿ ನೀಡುವುದರಿಂದ ಮನಸ್ಸಿಗೆ ಉಲ್ಲಾಸ ಹಾಗೂ ಚೈತನ್ಯ ದೊರೆಯುತ್ತದೆ. ಸಂಸ್ಥೆಯ ವತಿ ಯಿಂದ ಈಗಾಗಲೇ ಹಲವು ಪುಣ್ಯಕ್ಷೇತ್ರಗಳಿಗೆ ಪ್ರವಾಸ ಕೈಗೊಳ್ಳಲಾಗಿದೆ. ಕೈವಾರ ಕ್ಷೇತ್ರದಲ್ಲಿ ಯೋಗ ಬಂಧುಗಳಿಗೆ ಉತ್ತಮ ಸೌಕರ್ಯಗಳನ್ನು ಒದಗಿಸಿಕೊಟ್ಟಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು.

H D Kumaraswamy: ನೇಮಕಾತಿ ಅಕ್ರಮದ ಆರೋಪಗಳಿಂದ ಪ್ರಿಯಾಂಕ್ ಖರ್ಗೆ ಪಲಾಯನ: ಸಚಿವ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ

ನೇಮಕಾತಿ ಅಕ್ರಮದ ಆರೋಪಗಳಿಂದ ಪ್ರಿಯಾಂಕ್ ಖರ್ಗೆ ಪಲಾಯನ

​ಒಎಂಆರ್ ಶೀಟ್ ತಿದ್ದುಪಡಿ ಪ್ರಕರಣದಲ್ಲಿ ಸರ್ಕಾರದ ಹಂತದಲ್ಲೇ ಅಕ್ರಮ ಸಾಬೀತಾಗಿದ್ದು, ಕಾರ್ಯ ದರ್ಶಿಗಳ ಅಮಾನತಿಗೆ ಕೋರ್ಟ್ ಮೆಟ್ಟಿಲೇರುವ ಹಂತಕ್ಕೆ ತಲುಪಿತ್ತು. ಇತ್ತೀಚೆಗೆ ನಡೆದ ಪಶು ವೈದ್ಯಾಧಿಕಾರಿಗಳ ನೇಮಕಾತಿಯಲ್ಲೂ ಕಳಪೆ ಅಂಕ ಪಡೆದವರಿಗೆ ರ್ಯಾಂಕ್ ನೀಡಿ ಅರ್ಹರಿಗೆ ಅನ್ಯಾಯ ಎಸಗಲಾಗಿದೆ ಎಂದರು.

'Ganji Puja' performed: ಬರ ದೂರವಾಗಿ ಮಳೆ ಸುರಿಯಲೆಂದು ಓಂ ಶಕ್ತಿ ದೇವಿಗೆ ಗಂಜಿ ಪೂಜೆ ಆಚರಣೆ: 800ಕ್ಕೂ ಹೆಚ್ಚು ಮಹಿಳೆಯರಿಂದ ವಿಶೇಷ ಪೂಜೆ, ಮೆರವಣಿಗೆ

800ಕ್ಕೂ ಹೆಚ್ಚು ಮಹಿಳೆಯರಿಂದ ವಿಶೇಷ ಪೂಜೆ, ಮೆರವಣಿಗೆ

ಕೆ.ವಿ. ನವೀನ್ ಕಿರಣ್ ಮಾತನಾಡಿ, 8ನೇ ವಾರ್ಡಿನಲ್ಲಿ ಎರಡು ವರ್ಷಗಳ ಹಿಂದೆ ಓಂ ಶಕ್ತಿ ದೇವಸ್ಥಾನ ನಿರ್ಮಾಣವಾಗಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಜಿಲ್ಲೆಯ ಬರ ಪರಿಸ್ಥಿತಿ ದೂರವಾಗಿ ಉತ್ತಮ ಮಳೆಯಾಗಿ ಜನರ ಜೀವನ ಸಮೃದ್ಧಿಯಾಗಲಿ ಎಂಬ ಆಶಯದಿಂದ ಮಹಿಳೆಯರು ಪೂಜೆ ನೆರವೇರಿಸಿದ್ದಾರೆ

Chikkaballapur News: ಅಧಿಕಾರಿಗಳನ್ನು ಹೀಯಾಳಿಸುವ ಶಾಸಕರ ಪ್ರವೃತ್ತಿ ಖಂಡನೀಯ: ರಾಜ್ಯ ಉಪಾಧ್ಯಕ್ಷ ವೆಂಕಟರಮಣಪ್ಪ

ಅಧಿಕಾರಿಗಳನ್ನು ಹೀಯಾಳಿಸುವ ಶಾಸಕರ ಪ್ರವೃತ್ತಿ ಖಂಡನೀಯ

ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಪತ್ರಿಕಾ ರಂಗಗಳು ಪ್ರಜಾಪ್ರಭುತ್ವದ ಪ್ರಮುಖ ಆಧಾರ ಸ್ತಂಭಗಳಾಗಿವೆ. ಸಂವಿಧಾನದ ಆಶಯದಂತೆ ಪ್ರತಿಯೊಬ್ಬ ಪ್ರಜೆಯನ್ನೂ ಗೌರವದಿಂದ ಕಾಣುವ ಜವಾಬ್ದಾರಿ ಎಲ್ಲರ ಮೇಲಿದೆ. ಜನರ ಆಶಯ ಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಜಿಲ್ಲಾಧಿಕಾರಿಗಳು ಸೇರಿದಂತೆ ವಿವಿಧ ಹಂತದ ಅಧಿಕಾರಿಗಳು ಪ್ರಮುಖ ಪಾತ್ರ ವಹಿಸುತ್ತಾರೆ

Padmini Sahoo assumes charge: ಚಿಕ್ಕಬಳ್ಳಾಪುರಕ್ಕೆ ನೂತನ ಎಸ್‌ಪಿ ಪದ್ಮಿನಿ ಸಾಹೂ ಅಧಿಕಾರ ಸ್ವೀಕಾರ

ಚಿಕ್ಕಬಳ್ಳಾಪುರಕ್ಕೆ ನೂತನ ಎಸ್‌ಪಿ ಪದ್ಮಿನಿ ಸಾಹೂ ಅಧಿಕಾರ ಸ್ವೀಕಾರ

ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ (ಎಸ್‌ಪಿ) ಪದ್ಮಿನಿ ಸಾಹೂ ಅವರು ಭಾನುವಾರ ಅಧಿಕಾರ ಸ್ವೀಕರಿಸಿದರು. ರಾಜ್ಯ ಸರ್ಕಾರದ ಆದೇಶದಂತೆ ಅವರನ್ನು ಚಿಕ್ಕಬಳ್ಳಾಪುರ ಎಸ್‌ಪಿಯಾಗಿ ನೇಮಕ ಮಾಡಲಾ ಗಿದ್ದು, ಈ ಹಿಂದೆ ಎಸ್‌ಪಿಯಾಗಿದ್ದ ಕುಶಾಲ್ ಚೌಕ್ಸೆ ಅವರನ್ನು ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಯ ಆಡಳಿತ ವಿಭಾಗದ ಡಿಸಿಪಿಯಾಗಿ ವರ್ಗಾವಣೆ ಮಾಡಲಾಗಿದೆ.

ಬೆಂಗಳೂರಿನ ತ್ಯಾಜ್ಯ ಸಂಗ್ರಹಿಸುವ ಸಮುದಾಯಗಳ ನ್ಯಾನೋ ಉದ್ಯಮಿಗಳಿಗೆ ‘ಸಾಮೂಹಿಕ ಶಕ್ತಿ’ ಉಪಕ್ರಮದಿಂದ 2.5 ಪಟ್ಟು ಆದಾಯ ಹೆಚ್ಚಳ

‘ಸಾಮೂಹಿಕ ಶಕ್ತಿ’ ಉಪಕ್ರಮದಿಂದ 2.5 ಪಟ್ಟು ಆದಾಯ ಹೆಚ್ಚಳ

40 ಸಮುದಾಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಕಾರ್ಯಕ್ರಮವು ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವುದು, ಅಗತ್ಯ ಔಪಚಾರಿಕ ಅನುಸರಣೆಗಳನ್ನು ಪೂರ್ಣಗೊಳಿಸುವುದು, ಕಚ್ಚಾ ವಸ್ತುಗಳ ವೆಚ್ಚ ಕಡಿಮೆ ಮಾಡು ವುದು ಮತ್ತು ಹೊಸ ಮಾರುಕಟ್ಟೆಗಳಿಗೆ ಪ್ರವೇಶ ಕಲ್ಪಿಸುವ ಮೂಲಕ ನ್ಯಾನೋ ಉದ್ಯಮಗಳನ್ನು ಬಲಪಡಿಸುತ್ತಿದೆ

ದಿ ಸೊಲಿಟೇರ್ ಫೆಸ್ಟಿವಲ್ ಆಫ್ ಇಂಡಿಯಾ (TSFI) 2026 ಅಂತಿಮ ವಾರಕ್ಕೆ ಪ್ರವೇಶ: Divine Solitairesನಿಂದ ವಿಶೇಷ ಹಬ್ಬದ ಕೊಡುಗೆಗಳು

Divine Solitairesನಿಂದ ವಿಶೇಷ ಹಬ್ಬದ ಕೊಡುಗೆಗಳು

TSFI 2026ರ ಭಾಗವಾಗಿ, Divine Solitaires ಗ್ರಾಹಕರಿಗೆ ಮತ್ತಷ್ಟು ವಿಶೇಷ ಹಬ್ಬದ ಅನುಭವ ನೀಡಲು ಹೊಸ ಹಾಗೂ ಆಕರ್ಷಕ ಕೊಡುಗೆಗಳನ್ನು ಪರಿಚಯಿಸಿದೆ. ಖರೀದಿ ಮಾಡುವ ಗ್ರಾಹಕರಿಗೆ ಖಚಿತ ಉಡುಗೊರೆಗಳ ಅಪ್‌ಗ್ರೇಡ್ ದೊರೆಯಲಿದೆ. ಇದರ ಜೊತೆಗೆ, ತಮ್ಮ ಆಭರಣಗಳನ್ನು ವೈಯಕ್ತೀಕರಿಸಲು ಬಯಸುವ ಗ್ರಾಹಕರು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ತಮ್ಮ ಮೊದಲಕ್ಷರಗಳನ್ನು ಕೆತ್ತಿಸಿಕೊಳ್ಳ ಬಹುದು

AUMOVIO ಇಂಡಿಯಾ ಸಂಸ್ಥೆಯಿಂದ ದುಂತೂರು ಕೆರೆ ಪುನಶ್ಚೇತನ: ಜಲ ಭದ್ರತೆಗೆ ಹಾಗೂ ಸಮುದಾಯದ ವಿಕಾಸಕ್ಕೆ ಹೊಸ ಮೆರಗು

AUMOVIO ಇಂಡಿಯಾ ಸಂಸ್ಥೆಯಿಂದ ದುಂತೂರು ಕೆರೆ ಪುನಶ್ಚೇತನ

ಪುನಶ್ಚೇತನ ಕಾಮಗಾರಿ ಗಳ ಮೂಲಕ ಕೆರೆಯ ಪರಿಸರವನ್ನು ಬಲಪಡಿಸುವುದು, ನೀರು ಹಿಡಿದಿಟ್ಟು ಕೊಳ್ಳುವ ಸಾಮರ್ಥ್ಯ ವನ್ನು ಹೆಚ್ಚಿಸುವುದು ಮತ್ತು ಸ್ಥಳೀಯ ಸಸ್ಯ ಹಾಗೂ ಪ್ರಾಣಿ ಸಂಕುಲದ ಪುನರುಜ್ಜೀವನಕ್ಕೆ ಬೆಂಬಲ ನೀಡುವುದು AUMOVIO ಇಂಡಿಯಾದ ಮುಖ್ಯ ಉದ್ದೇಶವಾಗಿದೆ.

Kings Bazaar: ಹೆಚ್ಚಿನ ಲಾಭದ ಆಮಿಷ ಒಡ್ಡಿ ಅಕ್ರಮವಾಗಿ ಹಣ ಸಂಗ್ರಹ; ಹಾವೇರಿಯ ಕಿಂಗ್ಸ್ ಬಜಾರ್ ಸಂಸ್ಥೆಗೆ ನೋಟಿಸ್‌ ಜಾರಿ

ಅಕ್ರಮವಾಗಿ ಹಣ ಸಂಗ್ರಹ; ಕಿಂಗ್ಸ್ ಬಜಾರ್ ಸಂಸ್ಥೆಗೆ ನೋಟಿಸ್‌ ಜಾರಿ

ಕಿಂಗ್ಸ್‌ ಬಜಾರ್‌ಗೆ ಸೇರಿದ ಸ್ಥಳಗಳ ಮೇಲೆ ದಾಳಿ ವೇಳೆ 2 ಕೋಟಿ ಮೌಲ್ಯದ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ. ಇನ್ನು ಅಕ್ರಮವಾಗಿ ಹಣ ಸಂಗ್ರಹ ಮಾಡುತ್ತಿರುವ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ತನಿಖೆಗಾಗಿ ವಿಚಾರಣಾಧಿಕಾರಿಗಳನ್ನು ಜಿಲ್ಲಾಧಿಕಾರಿ ನೇಮಿಸಿದ್ದಾರೆ.

Former CM Siddaramaiah: ಇಂದಿನ ಚುನಾವಣಾ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಇಂದಿನ ಚುನಾವಣಾ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ

ವ್ಯವಸ್ಥೆ ಬಹಳಷ್ಟು ಹದಗೆಟ್ಟಿರುವ ಹಿನ್ನೆಲೆಯಲ್ಲಿ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ, ಆದರೆ ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯು ತ್ತೇನೆ. ವೀರಣ್ಣನವರ ಪ್ರಾಮಾಣಿಕತೆ, ಬದ್ಧತೆ ಮತ್ತು ಸರಳತೆಯನ್ನು ಇಂದಿನ ರಾಜಕಾರಣದಲ್ಲಿ ಅಳವಡಿಸಿ ಕೊಳ್ಳುವುದು ಕಷ್ಟವಿದ್ದು, ಚುನಾವಣಾ ವ್ಯವಸ್ಥೆ ಸುಧಾರಣೆಗೆ ಜನರು ಹೋರಾಟ ನಡೆಸಬೇಕು ಎಂದರು

Raghaveshwara Sri: ಆಹಾರವೇ ಔಷಧವಾಗದಿದ್ದರೆ ಔಷಧವೇ ಆಹಾರವಾಗುತ್ತದೆ: ರಾಘವೇಶ್ವರ ಶ್ರೀ

ನಮ್ಮನ್ನು ನಾವು ಅರಿಯಲು ಸರಿಯಾದ ಆಹಾರವೇ ದಾರಿ: ರಾಘವೇಶ್ವರ ಶ್ರೀ

ಚರಕ ಮಹರ್ಷಿಗಳು ಯಾರು ಹಿತಭೋಜನವನ್ನು ಮಾಡುತ್ತಾನೋ ಅವನು 36 ಸಾವಿರ ರಾತ್ರಿಗಳ ಕಾಲ ರೋಗ ರಹಿತವಾಗಿ ಬದುಕುತ್ತಾನೆ ಎಂದಿದ್ದು, ಸರಿಯಾಗಿ ವಿಮರ್ಶೆ ಮಾಡಿ ಸಮರ್ಪಕವಾದ ಆಹಾರ ವನ್ನು ಮಾತ್ರ ಸ್ವೀಕರಿಸಬೇಕು. ಏಕೆಂದರೆ ದೇಹವೂ ಆಹಾರದಿಂದ ಹಾಗೂ ರೋಗವೂ ಆಹಾರದಿಂದ ಎಂದು ವಿವರಿಸಿದರು

B Nagendra Resignation: ವಾಲ್ಮೀಕಿ ನಿಗಮ ಹಗರಣ; ಬಿ. ನಾಗೇಂದ್ರ ರಾಜೀನಾಮೆ ಅಂಗೀಕರಿಸಿದ ರಾಜ್ಯಪಾಲರು

ಬಿ. ನಾಗೇಂದ್ರ ರಾಜೀನಾಮೆ ಅಂಗೀಕರಿಸಿದ ರಾಜ್ಯಪಾಲರು

ವಾಲ್ಮೀಕಿ ನಿಗಮ ಹಗರಣದಲ್ಲಿ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಬಿ.ನಾಗೇಂದ್ರ ರಾಜೀನಾಮೆ ನೀಡಬೇಕು ಎಂದು ವಿಪಕ್ಷಗಳು ಆಗ್ರಹಿಸಿದ್ದವು. ಇದರ ಬೆನ್ನಲ್ಲೇ ತಾವು ಸ್ವಯಂಪ್ರೇರಿತವಾಗಿ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದರು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ರಾಜೀನಾಮೆ ಅಂಗೀಕರಿಸುವಂತೆ ರಾಜ್ಯಪಾಲರಿಗೆ ಶಿಫಾರಸು ಮಾಡಿದ್ದರು.

Priyank Kharge: ಪ್ರೇಕ್ಷಕರು ಬದಲಾದಾಗ ಭಾಷೆಯಲ್ಲೂ ಬದಲಾವಣೆ; ಮೋಹನ್ ಭಾಗವತ್ ಅಮೆರಿಕ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ವ್ಯಂಗ್ಯ

ಪ್ರೇಕ್ಷಕರು ಬದಲಾದಾಗ ಭಾಷೆಯಲ್ಲೂ ಬದಲಾವಣೆ: ಪ್ರಿಯಾಂಕ್ ಖರ್ಗೆ ವ್ಯಂಗ್ಯ

ನ್ಯೂಯಾರ್ಕ್‌ನಲ್ಲಿ ನಡೆದ ‘ಒನ್ ವರ್ಲ್ಡ್ ಒನ್ ಹ್ಯುಮಾನಿಟಿ’ ಎಂಬ ಬಹುಧರ್ಮೀಯ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಮಾತನಾಡಿ, ಹಿಂದುತ್ವದ ಪರಿಕಲ್ಪನೆ ಮುಸ್ಲಿಮರಿಲ್ಲದ ಭಾರತವನ್ನು ಬಯಸುವುದಿಲ್ಲ ಎಂದು ಹೇಳಿದ್ದರು. ಇದಕ್ಕೆ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಪ್ರತಿಕ್ರಿಯಿಸಿದ್ದಾರೆ.

BOB Recruitment 2026: ಬ್ಯಾಂಕ್‌ ಆಫ್‌ ಬರೋಡದಲ್ಲಿದೆ ಬರೋಬ್ಬರಿ 2,482 ಹುದ್ದೆ; ಪದವಿ ವಿದ್ಯಾರ್ಹತೆ ಹೊಂದಿದವರು ಅಪ್ಲೈ ಮಾಡಿ

ಬ್ಯಾಂಕ್‌ ಆಫ್‌ ಬರೋಡದಲ್ಲಿದೆ ಬರೋಬ್ಬರಿ 2,482 ಹುದ್ದೆ

Bank Jobs: ಬ್ಯಾಂಕ್‌ ಆಫ್‌ ಬರೋಡ ದೇಶಾದ್ಯಂತ ಖಾಲಿ ಇರುವ ಬರೋಬ್ಬರಿ 2,482 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಲೋಕಲ್‌ ಬ್ಯಾಂಕ್‌ ಆಫೀಸರ್‌ ಹುದ್ದೆ ಇದಾಗಿದ್ದು, ಕರ್ನಾಟಕದಲ್ಲಿ 418 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಪದವಿ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು ಕೊನೆಯ ದಿನ ಸೆಪ್ಟೆಂಬರ್‌ 7.

ಮಂತ್ರಾಲಯದಲ್ಲಿ 335ನೇ ರಾಯರ ಆರಾಧನೆ ಸಂಭ್ರಮ

ಮಂತ್ರಾಲಯದಲ್ಲಿ 335ನೇ ರಾಯರ ಆರಾಧನೆ ಸಂಭ್ರಮ

ತಿಂಗಳ ಕೊನೆಯ ಶನಿವಾರ ಪೂರ್ವಾ ರಾಧನೆಯ ಸಡಗರವಿದ್ದು ಶನಿವಾರ ಬೆಳಗಿನ ಜಾವದಿಂದಲೇ ನಾನಾ ಪೂಜಾ ಕೈಂಕರ್ಯಗಳು ಆರಂಭಗೊಂಡವು. ವಿಶೇಷವಾಗಿ ಪೀಠಾಧಿಪತಿ ಸುಬುಧೇಂದ್ರ ತೀರ್ಥರಿಂದ ಮೂಲ ರಾಮದೇವರಿಗೆ ಪೂಜೆ, ಉತ್ಸವ ರಾಯರ ಪಾದಪೂಜೆ, ಪಂಚಾಮೃತ, ಅಲಂಕಾರ ಸಂತರ್ಪಣ, ಹಸ್ತೋದಕ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ನಡೆಯಿತು.

Kundapra Kannada Festival!: ಕುಂದಾಪ್ರ ಕನ್ನಡ ಉತ್ಸವಕ್ಕೆ ನೀವೇ ಅತಿಥಿ!

ಕುಂದಾಪ್ರ ಕನ್ನಡ ಉತ್ಸವಕ್ಕೆ ನೀವೇ ಅತಿಥಿ!

ಟೀಮ್ ಕುಂದಾಪುರಿಯ ಭಾನುವಾರ ವಿಜಯನಗರದ ಬಿಜಿಎಸ್ ಮೈದಾನದಲ್ಲಿ ಆಯೋಜಿಸಿರುವ ಕುಂದಾಪ್ರ ಕನ್ನಡ ಉತ್ಸವದಲ್ಲಿ ಭಾಗವಹಿಸಲು ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ವೇಗವಾಗಿ ಓಡುವ ಸಿಲಿಕಾನ್ ಸಿಟಿ ಬೆಂಗಳೂರಿನ ಬದುಕಿನ ಒತ್ತಡದಲ್ಲಿ ಭಾಷೆ-ಸಂಸ್ಕ್ರತಿ ಹಿಂದೆ ಉಳಿದುಬಿಟ್ಟಿದ್ಯೋ ಎನ್ನುವ ಭಾವ ಸಹಜ. ಹೀಗೆ ಆದಾಗೆಲ್ಲ ಮತ್ತೆ ಕೂಡಿಸಿ ಗುಣಿಸಿ ಬದುಕು-ಭಾಷೆ ಯನ್ನ ಸಂಭ್ರಮಿಸೋದು ಇಂದಿನ ತುರ್ತಾಗಿದೆ. ಇದರ ಭಾಗವಾಗಿಯೇ ಕುಂದಾಪ್ರ ಕನ್ನಡ ಉತ್ಸವ ಆಯೋಜನೆಗೊಂಡಿದೆ.

ರಾಜ್ಯಾದ್ಯಂತ 32 ಸ್ಟೇಡಿಯಂ ಅಭಿವೃದ್ಧಿ : ಡಿಸಿಎಂ ಪರಂ

ರಾಜ್ಯಾದ್ಯಂತ 32 ಸ್ಟೇಡಿಯಂ ಅಭಿವೃದ್ಧಿ : ಡಿಸಿಎಂ ಪರಂ

ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ಮಾಧ್ಯಮ ಪ್ರಕಟಣೆಯಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿರುವ ಅವರು, ಕ್ರೀಡಾಳುಗಳಿಗೆ ಪ್ರತಿ ಹಂತದಲ್ಲೂ ಉತ್ತಮ ಮೂಲಸೌಕರ್ಯ ಹಾಗೂ ಹೆಚ್ಚಿನ ಅವಕಾಶಗಳು ಲಭ್ಯವಾದರೆ ಅಸಾಧಾರಣ ಸಾಧನೆಗೈಯಲು ಸಾಧ್ಯವಾಗುತ್ತದೆ. ಈ ಹಿನ್ನೆಲೆ ನಮ್ಮ ಸರಕಾರವು 36 ಕೋಟಿ ವೆಚ್ಚದಲ್ಲಿ ರಾಜ್ಯಾದ್ಯಂತ 32 ಕ್ರೀಡಾಂಗಣಗಳನ್ನು ಅಭಿವೃದ್ಧಿಪಡಿಸುತ್ತಿದೆ.

‘ನನ್ನೊಂದಿಗೆ ಈ ಕಲೆ ನಶಿಸಬಾರದು’ — 86ರ ಹರೆಯದಲ್ಲೂ ಅಪರೂಪದ ಕಲೆಯನ್ನು ಜೀವಂತವಾಗಿಟ್ಟಿರುವ ಮುಖವೀಣೆ ಅಂಜನಪ್ಪ

ಉಸಿರಿನೊಂದಿಗೆ ಮುಖವೀಣೆ; ಬದುಕಿನೊಂದಿಗೆ ಜಾನಪದ

“ಒಂಬತ್ತನೇ ವಯಸ್ಸಿನಲ್ಲೇ ತಂದೆಯಿಂದ ಮುಖವೀಣೆ ಕಲಿತೆ. ತಾತ ತಂದೆ ಭಿಕ್ಷಾಟನೆಗೆ ಹೋಗು ವಾಗಲೂ ಮುಖವೀಣೆ ನುಡಿಸುತ್ತಿದ್ದರು. ಅಲ್ಲಿಂದ ಈ ಕಲೆ ನನ್ನ ಬದುಕಿನ ಭಾಗವಾಯಿತು.  ಕಲೆ ಕಲಿಯಬಹುದೇ ವಿನಃ ಕದಿಯಲು ಸಾಧ್ಯವಿಲ್ಲ. ತಾಳ ಮತ್ತು ಶೃತಿ ಸಂಗೀತದ ತಾಯಿ-ತಂದೆ ಯಿದ್ದಂತೆ” ಎಂದು ತಮ್ಮ ಕಲಿಕೆಯ ದಿನಗಳನ್ನು ನೆನಪಿಸಿಕೊಂಡರು.

ಕನ್ನಡ ಸಾಹಿತ್ಯ ಲೋಕಕ್ಕೆ ಹೆಮ್ಮೆ:‌ ಪ್ರತಿಷ್ಠಿತ ಪೋಬ್ಸ್ ಪ್ರಭಾವಿ ಸೆಲೆಬ್ರಿಟಿ ಪಟ್ಟಿಯಲ್ಲಿ ಭಾನು ಮುಷ್ತಾಕ್, ದೀಪಾಭಾಸ್ತಿ, ರಿಷಬ್ ಶೆಟ್ಟಿಗೆ ಸ್ಥಾನ

ಕನ್ನಡ ಸಾಹಿತ್ಯ ಲೋಕಕ್ಕೆ ಹೆಮ್ಮೆ

2025ರ ಜನವರಿಯಿಂದ 2026ರ ಮಾ.31 ರವರೆಗೆ ಭಾರತೀಯರ ಮೇಲೆ ಗಣನೀಯ ಪ್ರಭಾವ ಬೀರಿದ 100 ಮಂದಿಯಲ್ಲಿ ಸಾಹಿತ್ಯ ಮತ್ತು ಕಲಾ ಕ್ಷೇತ್ರಕ್ಕೆ ಕರ್ನಾಟಕದಿಂದ ಮೂವರನ್ನು ಮಾತ್ರ ಆಯ್ಕೆ ಮಾಡಲಾಗಿದೆ. ಬಾನು ಮುಷ್ತಾಕ್ ಅವರ ಎದೆಯ ಹಣತೆಯನ್ನು ಇಂಗ್ಲೀಷ್ ಭಾಷೆಗೆ ಅನುವಾದಿಸಿ ವಿಶ್ವದ ಪ್ರತಿಷ್ಠಿತ ಸಾಹಿತ್ಯ ಪ್ರಶಸ್ತಿ ಬೂಕರ್‌ರನ್ನು 2025ನೇ ಸಾಲಿಗೆ ಪಡೆದುಕೊಂಡಿದ್ದ ದೀಪಾಭಾಸ್ತಿ ಈ ಮೂಲಕ ಮತ್ತೊಂದು ಸಾಧನೆಗೆ ಕಾರಣರಾಗಿದ್ದಾರೆ.

ನಾಗೇಂದ್ರ ಸ್ಥಾನಕ್ಕೆ ಯಾರು ?: ಅನ್ನಪೂರ್ಣಗೆ ಒಲಿಯುವುದೇ ಮಂತ್ರಿಗಿರಿ?, ಡಿಕೆ, ಬಿಕೆ ಸೋಮವಾರ ದಿಲ್ಲಿಗೆ ಪ್ರಯಾಣ

ನಾಗೇಂದ್ರ ಸ್ಥಾನಕ್ಕೆ ಯಾರು ?

ಅನ್ನಪೂರ್ಣ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಮೂಲಕ ಮಹಿಳಾ, ಜಿಲ್ಲಾ ಹಾಗೂ ಸಮುದಾ ಯದ ಪ್ರಾತಿನಿಧ್ಯ ನೀಡಿದಂತಾಗುತ್ತದೆ. ಇದರಿಂದ ಮಹಿಳಾ ಕೋಟಾದಲ್ಲಿ ಉಳಿಯುವ ಒಂದು ಸ್ಥಾನವನ್ನು ಬೇರೆಯವರಿಗೆ ನೀಡುವ ಲೆಕ್ಕಾಚಾರ ದಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ ಎನ್ನಲಾಗಿದೆ. ಸಂಪುಟ ವಿಸ್ತರಣೆ ಬಗ್ಗೆ ತೀವ್ರ ಅಸಮಾಧಾನ ಶುರುವಾಗಿರುವುದರಿಂದ ಹಾಲಿ ಸಚಿವರಿಂದ ರಾಜೀನಾಮೆ ಪಡೆದು, ಬಂಡಾಯವೆದ್ದಿರುವ ಶಾಸಕರಿಗೆ ಆ ಸ್ಥಾನ ನೀಡುವ ಲೆಕ್ಕಾಚಾರದಲ್ಲಿ ನಾಯಕರಿದ್ದರು

ಹಾವೇರಿಯಲ್ಲಿ ಪ್ರೀತಿಸಿ ಮದುವೆಯಾದ ಜೋಡಿಗೆ ಹೆತ್ತವರೇ ವಿಲನ್; ರಕ್ಷಣೆ ಕೋರಿ ಪೊಲೀಸ್‌ ಠಾಣೆಗೆ ದೂರು

ಹಾವೇರಿಯಲ್ಲಿ ಪ್ರೀತಿಸಿ ಮದುವೆಯಾದ ಜೋಡಿಗೆ ಹೆತ್ತವರೇ ವಿಲನ್

ಹಾವೇರಿ ತಾಲೂಕಿನ ದೇವಗಿರಿ ಯಲ್ಲಾಪುರ ಗ್ರಾಮದ ಚೈತ್ರಾ ಮತ್ತು ವಿಕ್ರಮ ಎಂಬ ಜೋಡಿ ಪ್ರೀತಿಸಿ ಮದುವೆಯಾಗಿದ್ದಾರೆ. ಆದರೆ, ಇದೀಗ ನವಜೋಡಿಗೆ ಪೋಷಕರಿಂದಲೇ ಬೆದರಿಕೆ ಬರುತ್ತಿದ್ದು, ತಮ್ಮನ್ನು ಬದುಕಲು ಬಿಡುತ್ತಿಲ್ಲವೆಂದು ಹಾವೇರಿಯ ಮಹಿಳಾ ಠಾಣೆಗೆ ದೂರು ನೀಡಲಾಗಿದೆ.

KPSC Recruitment Scam: ಕೆಪಿಎಸ್‌ಸಿ ನೇಮಕಾತಿ ಅಕ್ರಮ; ಐಎಎಸ್‌ ಅಧಿಕಾರಿ ಗ್ಯಾನೇಂದ್ರ ಕುಮಾರ್ ಅರೆಸ್ಟ್

ಕೆಪಿಎಸ್‌ಸಿ ಅಕ್ರಮ; ಐಎಎಸ್‌ ಅಧಿಕಾರಿ ಗ್ಯಾನೇಂದ್ರ ಕುಮಾರ್ ಅರೆಸ್ಟ್

ಐಎಎಸ್‌ ಅಧಿಕಾರಿ ಗ್ಯಾನೇಂದ್ರ ಕುಮಾರ್ ಅವರು ಕೆಪಿಎಸ್‌ಸಿ ಪರೀಕ್ಷಾ ನಿಯಂತ್ರಕರಾಗಿದ್ದ ಅವಧಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತಂತೆ ಸಿಐಡಿ ವಿಶೇಷ ತನಿಖಾ ತಂಡ ತೀವ್ರ ತನಿಖೆ ನಡೆಸುತ್ತಿದೆ. ವಿಚಾರಣೆ ವೇಳೆ ಅಸಮಂಜಸ ಹೇಳಿಕೆ ನೀಡಿದ್ದರಿಂದ ಅವರನ್ನು ಸಿಐಡಿ ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.

Loading...