ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕರ್ನಾಟಕ

1 ರೂ.ಗೆ ಒಂದು ಲೀಟರ್ ಹಾಲು; ಫ್ಲಿಪ್‌ಕಾರ್ಟ್ ಸಂಸ್ಥೆ ವಿರುದ್ಧ ಡಿ.ಕೆ. ಸುರೇಶ್‌ ದೂರು, ಪ್ರಧಾನಿ ಮೋದಿಗೆ ಪತ್ರ

1 ರೂ.ಗೆ ಒಂದು ಲೀಟರ್ ಹಾಲು; ಫ್ಲಿಪ್‌ಕಾರ್ಟ್ ಸಂಸ್ಥೆ ವಿರುದ್ಧ ದೂರು

Milk selling in flipkart: ಹಣ ಮಾಡುವ ಭರದಲ್ಲಿ ಫ್ಲಿಪ್ ಕಾರ್ಟ್ ಎನ್ನುವ ಸಂಸ್ಥೆ ಒಂದು ರೂಪಾಯಿಗೆ ಒಂದು ಲೀಟರ್ ಹಾಲು ನೀಡಲು ಮುಂದಾಗಿದೆ. ರೈತ ಸಮುದಾಯವನ್ನ ಧ್ವಂಸ ಮಾಡುವಂತಹ ಕೃತ್ಯಕ್ಕೆ ಕೈ ಹಾಕಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಬಮುಲ್‌ ಅಧ್ಯಕ್ಷ ಡಿ.ಕೆ.ಸುರೇಶ್‌ ತಿಳಿಸಿದ್ದಾರೆ.

ಗ್ಯಾರಂಟಿಗಳಿಂದ ಅಭಿವೃದ್ಧಿಗೆ ಹಣವಿಲ್ಲವೆಂಬ ಬಿಜೆಪಿಯ ಆರೋಪ ಸತ್ಯಕ್ಕೆ ದೂರ: ಸಿಎಂ ಸಿದ್ದರಾಮಯ್ಯ

ಅಭಿವೃದ್ಧಿಗೆ ಹಣವಿಲ್ಲವೆಂಬ ಬಿಜೆಪಿಯ ಆರೋಪ ಸತ್ಯಕ್ಕೆ ದೂರ: ಸಿಎಂ

CM Siddaramaiah: ಗ್ಯಾರಂಟಿ ಯೋಜನೆಗಳಿಂದಾಗಿ ಸರ್ಕಾರದಲ್ಲಿ ಅಭಿವೃದ್ಧಿಗೆ ಹಣವಿಲ್ಲ ಎಂದು ಬಿಜೆಪಿಯವರು ಸುಳ್ಳು ಆರೋಪಗಳನ್ನು ಮಾಡುತ್ತಿರುವುದು ಸತ್ಯಕ್ಕೆ ದೂರವಾದ ಮಾತು. ನಮ್ಮ ಸರ್ಕಾರ ಗ್ಯಾರಂಟಿ ಹಾಗೂ ಅಭಿವೃದ್ಧಿಯನ್ನು ಸಮಾನ ಆದ್ಯತೆ ನೀಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

Ugadi-Ramzan Fashion 2026: ಯುಗಾದಿ-ರಂಜಾನ್ ಸೀಸನ್‌ನಲ್ಲಿ ಬ್ಯಾಂಗಲ್ಸ್ ಕಲರವ!

ಯುಗಾದಿ-ರಂಜಾನ್ ಸೀಸನ್‌ನಲ್ಲಿ ಬ್ಯಾಂಗಲ್ಸ್ ಕಲರವ!

ರಂಜಾನ್ ಮತ್ತು ಯುಗಾದಿ ಫೆಸ್ಟೀವ್ ಸೀಸನ್‌ನಲ್ಲಿ ಇದೀಗ ನಾನಾ ಬಗೆಯ ವಿನ್ಯಾಸದ ಬ್ಯಾಂಗಲ್ಸ್ ಲಗ್ಗೆ ಇಟ್ಟಿವೆ. ನಾನಾ ಕಲರ್‌ಗಳಲ್ಲಿ ಡಿಸೈನ್‌ಗಳಲ್ಲಿ ಲಭ್ಯ. ಲೆಹೆಂಗಾ, ಸೀರೆ, ಲಂಗ-ದಾವಣಿಗೆ ಮ್ಯಾಚ್ ಆಗುವಂತಹ, ಸೈಡ್‌ನಲ್ಲಿ, ಕಡದಂತಹ ಡಿಸೈನ್ ಹೊಂದಿರುವ ಬಳೆಗಳು ಇವುಗಳೊಂದಿಗೆ ಬಂದಿವೆ. ಇವನ್ನು ಮಿಕ್ಸ್ ಮಾಡಿ ಕೂಡ ಧರಿಸಬಹುದು ಎನ್ನುತ್ತಾರೆ ಸ್ಟೈಲಿಸ್ಟ್ಸ್. ಈ ಕುರಿತ ವರದಿ ಇಲ್ಲಿದೆ.

ಅಧಿಕಾರಿಗಳ ನಿರ್ಲಕ್ಷ್ಯ, ಹದಗೆಟ್ಟ ಹೆದ್ದಾರಿ

ಅಧಿಕಾರಿಗಳ ನಿರ್ಲಕ್ಷ್ಯ, ಹದಗೆಟ್ಟ ಹೆದ್ದಾರಿ

ಕಳೆದ ಒಂದು ವರ್ಷದ ಹಿಂದೆ ರಾಷ್ಟ್ರೀಯ ಹೆದ್ದಾರಿ ಮಾಡಿದ ಮೇಲೂ ಏನು ಪ್ರಯೋಜನ ವಿಲ್ಲ. ಜನರು ಇಂಡಿ ವಿಜಯಪುರ ರಸ್ತೆ ಸಂಚಾರ ಬೇಡವೇ ಬೇಡ ಎನ್ನುತ್ತಿದ್ದಾರೆ. ಅಲ್ಲದೆ ಈ ರಸ್ತೆಯಲ್ಲಿ ಸಂಚಾರ ಮಾಡೋಕು ಆಗದೆ ವಾಹನ ಸವಾರರು ಪರದಾಡುವಂತಾಗಿದೆ. ಪ್ರತಿ ನಿತ್ಯ ಅಪಾರ ಸಂಖ್ಯೆಯ ವಾಹನಗಳು ಇದೇ ಮಾರ್ಗದಲ್ಲಿ ಸಂಚರಿಸುತ್ತವೆ, ಇನ್ನೂ ಗರ್ಭಿಣಿಯರಿಗೆ, ರೋಗಿಗಳಿಗೆ ಈ ರಸ್ತೆಯಲ್ಲಿ ಸಂಚಾರ ಮಾಡುವಂತಿಲ್ಲ ಎಂಬಂತಾಗಿದೆ, ಒಂದು ಕಡೆ ಹಾಳಾದ ರಸ್ತೆ.

Ranbir Kapoor: ಮನ ಪ್ರಾಜೆಕ್ಸ್ಟ್‌ ಗೆ ಬ್ಯ್ರಾಂಡ್‌ ಅಂಬಾಸಿಡರ್ ಆಗಿ ಕೈ ಜೋಡಿಸಿದ ರಣಬೀರ್ ಕಪೂರ್

ಮನ ಪ್ರಾಜೆಕ್ಸ್ಟ್‌ ಗೆ ಬ್ಯ್ರಾಂಡ್‌ ಅಂಬಾಸಿಡರ್ ಆಗಿ ರಣಬೀರ್ ಕಪೂರ್

ನವೀಕರಿಸಿದ ಬ್ರ್ಯಾಂಡ್ ಗುರುತು, ಸ್ಥಳ, ಡಿಸೈನ್‌, ಪ್ರಕೃತಿ, ಕಲ್ಪನೆ ಒಳಗೊಂಡ ವಸತಿ ಪರಿಸರವನ್ನು ಸೃಷ್ಟಿಸುವ ತತ್ವದೊಂದಿಗೆ ಅರ್ಥಪೂರ್ಣ ಜೀವನ ಅನುಭವ ನೀಡುವುದನ್ನು ಪ್ರತಿನಿಧಿಸುತ್ತದೆ. ಪ್ರಕೃತಿಯ ಜೊತೆ ಜೀವನ ಎಂಬ ನಂಬಿಕೆಯೊಂದಿಗೆ ಸಂಸ್ಥೆಯು ಚಿಂತನಶೀಲ ವಾಸ್ತುಶಿಲ್ಪ, ಪರಿಸರ ಸಂವೇದನೆ ಮತ್ತು ಸಮಕಾಲೀನ ಜೀವನ ಶೈಲಿಯ ಅಗತ್ಯಗಳನ್ನು ಸಂಯೋಜಿಸುವ ಸಮುದಾಯಗಳನ್ನು ಅಭಿವೃದ್ಧಿ ಪಡಿಸುವುದನ್ನು ಮುಂದುವರೆಸಿದೆ.

Raichur News: ಸೆಕೆ ಅಂತ ಮನೆ ಮುಂದೆ ಮಲಗಿದ್ದ ವೃದ್ಧೆಗೆ ಕಚ್ಚಿದ ಹಾವು!

ಸೆಕೆ ಅಂತ ಮನೆ ಮುಂದೆ ಮಲಗಿದ್ದ ವೃದ್ಧೆಗೆ ಕಚ್ಚಿದ ಹಾವು!

Snake Bite: ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಉಮಲೂಟಿ ಗ್ರಾಮದಲ್ಲಿ ಮನೆ ಮುಂದೆ ಮಲಗಿದ್ದ ವೃದ್ಧೆಗೆ ಹಾವು ಕಚ್ಚಿದೆ. ಮಾರ್ಚ್ 8ರಂದು ರಾತ್ರಿ ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಹಾವು ಕಡಿತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕರ್ನಾಟಕ, ತಮಿಳುನಾಡಿನ 10,000 ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯ ಶಿಕ್ಷಣ ಒದಗಿಸಲು ಕಾರ್ಯಾಗಾರ

10,000 ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯ ಶಿಕ್ಷಣ

ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಲ್ಲಿ ವೈಯಕ್ತಿಕ ಹಾಗೂ ಸಮುದಾಯ ಮಾನಸಿಕ ಆರೋಗ್ಯವನ್ನು ಉತ್ತೇಜಿಸುವ ಅಗತ್ಯವನ್ನು ಗುರುತಿಸಿ, ತಂತ್ರಜ್ಞಾನ ಸಂಸ್ಥೆ ಟೆಕಿಯಾನ್ ಮತ್ತು ಸರ್ಕಾರೇತರ ಸಂಸ್ಥೆ ಮೈಂಡ್ ಆ್ಯಂಡ್‌ ಮ್ಯಾಟರ್ ಸಹಭಾಗಿತ್ವದಲ್ಲಿ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ 10,000ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಉದ್ದೇಶ ಹೊಂದಿದೆ.

Ugadi Shopping Tips 2026: ಯುಗಾದಿ ಎಥ್ನಿಕ್‌ವೇರ್ಸ್ ಶಾಪಿಂಗ್‌ಗೆ 5 ಸಿಂಪಲ್‌ ಟಿಪ್ಸ್

ಯುಗಾದಿ ಎಥ್ನಿಕ್‌ವೇರ್ಸ್ ಶಾಪಿಂಗ್‌ಗೆ 5 ಸಿಂಪಲ್‌ ಟಿಪ್ಸ್

ಯುಗಾದಿ ಈ ಹಬ್ಬಕ್ಕೆ ಡಿಸೈನರ್‌ವೇರ್‌ ಅದರಲ್ಲೂ ಎಥ್ನಿಕ್‌ವೇರ್ಸ್ ಖರೀದಿಸುವವರು ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಈ ಸಿಂಪಲ್‌ 5 ಟಿಪ್ಸ್ ಫಾಲೋ ಮಾಡಿದಲ್ಲಿ ನಿಮ್ಮ ಶಾಪಿಂಗ್‌ ಅರ್ಥಪೂರ್ಣವಾಗುವುದು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಈ ಕುರಿತ ವಿವರ ಇಲ್ಲಿದೆ.

ರಾಜ್ಯದಲ್ಲಿ 4,824 ಕೋಟಿ ಮೊತ್ತದ ಬಂಡವಾಳ ಹೂಡಿಕೆಗೆ ಸಮ್ಮತಿ; 14,525 ಉದ್ಯೋಗ ಸೃಷ್ಟಿ ನಿರೀಕ್ಷೆ

₹4,824 ಕೋಟಿ ಮೊತ್ತದ ಬಂಡವಾಳ ಹೂಡಿಕೆಗೆ ಸಮ್ಮತಿ: ಎಂಬಿಪಿ

MB Patil: ಐಟಿ ಮೂಲಸೌಲಭ್ಯ, ಸಕ್ಕರೆ ಕಾರ್ಖಾನೆ, ಟೆಕ್ನಿಕಲ್‌ ಟೆಕ್ಸ್‌ಟೈಲ್‌, ಕಂಪ್ರೆಸ್ಡ್‌ ಗ್ಯಾಸ್‌, ವೈಮಾಂತರಿಕ್ಷ, ಚಿನ್ನಾಭರಣ ತಯಾರಿಕೆ, ಎಲೆಕ್ಟ್ರಾನಿಕ್ಸ್‌, ಸಾಫ್ಟ್‌ವೇರ್‌ ಹಾಗೂ ಪಂಚತಾರಾ ಹೋಟೆಲ್‌ ನಿರ್ಮಾಣ ಯೋಜನೆಗಳಿಗೆ ನೀಡಿರುವ ಅನುಮೋದನೆಗಳಿಂದ ರಾಜ್ಯದಲ್ಲಿ ಹೊಸದಾಗಿ 14,525 ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿವೆ ಎಂದು ಬೃಹತ್‌ ಹಾಗೂ ಮಧ್ಯಮ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.

Chikkamagaluru: ತಂದೆಯ ಶವಕ್ಕೆ ಮಗಳಿಂದಲೇ ಅಗ್ನಿಸ್ಪರ್ಶ, ಕಡೂರಿನಲ್ಲಿ ಮಾದರಿ ಘಟನೆ

ತಂದೆಯ ಶವಕ್ಕೆ ಮಗಳಿಂದಲೇ ಅಗ್ನಿಸ್ಪರ್ಶ, ಕಡೂರಿನಲ್ಲಿ ಮಾದರಿ ಘಟನೆ

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬೀರೂರಿನಲ್ಲಿ ಹೆಣ್ಣುಮಕ್ಕಳು ತಂದೆಯ ಅಂತ್ಯಸಂಸ್ಕಾರ ನೆರವೇರಿಸುವ ಮೂಲಕ ಲಿಂಗ ಸಮಾನತೆಯ ಸಂದೇಶ ಸಾರಿದ್ದಾರೆ. ಮೃತದೇಹದ ಸುತ್ತ ಹೆಗಲ ಮೇಲೆ ಕುಡಿಕೆ ಹೊತ್ತು ಸಂಪ್ರದಾಯದಂತೆ ವಿಧಿ ವಿಧಾನಗಳನ್ನು ನೆರವೇರಿಸಿದ ಹೆಣ್ಣುಮಗಳು ಎಲ್ಲರ ಗಮನ ಸೆಳೆದರು.

ಬಾಗಲಕೋಟೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಅಡಿಗಲ್ಲು; ಎಚ್.ವೈ.ಮೇಟಿಯವರ  ಕನಸು ನನಸು ಎಂದ ಸಿಎಂ

ಬಾಗಲಕೋಟೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಅಡಿಗಲ್ಲು

Government medical college in Bagalkot: ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ವೈದ್ಯಕೀಯ ಕಾಲೇಜಿಗೆ ಶಂಕುಸ್ಥಾಪನೆ ನೆರವೇರಿಸಲು ಬಾಗಲಕೋಟೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಬಾಗಲಕೋಟೆಯ ನವನಗರ ಹೆಲಿಪ್ಯಾಡ್‌ನಲ್ಲಿ ಮಾಧ್ಯಮದವರೊಂದಿಗೆ ಸಿಎಂ ಸಿದ್ದರಾಮಯ್ಯ ಅವರು ಮಾತನಾಡಿದ್ದಾರೆ.

Pravasi Prapancha: ಕರಾವಳಿಯ ಕಿರೀಟ – ಮೂಲ್ಕಿ ಅರಮನೆ: ಪ್ರತಿ ಪ್ರವಾಸಿಯೂ ಭೇಟಿ ನೀಡಲೇಬೇಕಾದ ಐತಿಹಾಸಿಕ ತಾಣ

ಕರಾವಳಿಯ ಕಿರೀಟ – ಮೂಲ್ಕಿ ಅರಮನೆ

Mulki Aramane: ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಮೂಲ್ಕಿ ಪ್ರದೇಶವು ಸಮುದ್ರ ತೀರದ ಸೌಂದರ್ಯಕ್ಕೆ ಮಾತ್ರವಲ್ಲ, ಶತಮಾನಗಳ ಇತಿಹಾಸವನ್ನು ಹೊತ್ತಿರುವ ರಾಜಪರಂಪರೆಗಾಗಿ ಸಹ ಪ್ರಸಿದ್ಧವಾಗಿದೆ. ಈ ಪ್ರದೇಶದ ಪ್ರಮುಖ ಐತಿಹಾಸಿಕ ಸ್ಮಾರಕಗಳಲ್ಲಿ ಒಂದು, ಮೂಲ್ಕಿ ಅರಮನೆ. ತುಳುನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ ಈ ಅರಮನೆ, ಸ್ಥಳೀಯ ಆಡಳಿತ, ಜೈನ ಧರ್ಮದ ಪ್ರಭಾವ, ಕಂಬಳ ಸಂಪ್ರದಾಯ ಇವೆಲ್ಲದರಿಂದ ಸಮೃದ್ಧಗೊಂಡಿರುವ ಒಂದು ತಾಣ.

ಬೆಂಗಳೂರಿನಲ್ಲಿ 15 ವರ್ಷದ ಮಗಳನ್ನೇ ವೇಶ್ಯಾವಾಟಿಕೆ ದಂಧೆಗೆ ದೂಡಿದ ತಾಯಿ; ಕೇಸ್‌ ದಾಖಲು

15 ವರ್ಷದ ಮಗಳನ್ನೇ ವೇಶ್ಯಾವಾಟಿಕೆ ದಂಧೆಗೆ ದೂಡಿದ ತಾಯಿ!

Bengaluru News: ಬೆಂಗಳೂರಿನ ಚಂದ್ರಾಲೇಔಟ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಪೊಲೀಸರು ಕಾರ್ಯಾಚರಣೆ ನಡೆಸಿ ಸದ್ಯ ಬಾಲಕಿಯನ್ನು ರಕ್ಷಿಸಿದ್ದು, ಬಾಲಕಿಯ ತಾಯಿ, ಮಲತಂದೆ ಹಾಗೂ ಮಧ್ಯವರ್ತಿ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

Murder Case: ವೈರ್‌ನಿಂದ ಕುತ್ತಿಗೆ ಬಿಗಿದು ಪ್ರಿಯತಮೆಯ ಕೊಲೆ ಮಾಡಿದ ಪ್ರಿಯಕರ

ವೈರ್‌ನಿಂದ ಕುತ್ತಿಗೆ ಬಿಗಿದು ಪ್ರಿಯತಮೆಯ ಕೊಲೆ ಮಾಡಿದ ಪ್ರಿಯಕರ

ಕೊಡಗು ಮೂಲದ ರಂಜಿತಾಳನ್ನು (23) ಆರೋಪಿ ಅಯ್ಯಪ್ಪ ಎಂಬಾತ ಕೊಲೆ ಮಾಡಿದ್ದಾನೆ. ಇಬ್ಬರು ಲಿವ್‌ ಇನ್‌ ರಿಲೇಶನ್ಶಿಪ್‌ನಲ್ಲಿದ್ದರು ಎಂದು ತಿಳಿದುಬಂದಿದೆ. ಪತ್ನಿಗೆ ವಿಚ್ಛೇದನ ನೀಡದೆ ಅಯ್ಯಪ್ಪ ರಂಜಿತಾ ಜೊತೆಗೆ ವಾಸವಿದ್ದ. ಇದೀಗ ಮದುವೆ ವಿಚಾರಕ್ಕೆ ರಂಜಿತ ಹಾಗೂ ಅಯ್ಯಪ್ಪನ ನಡುವೆ ಜಗಳ ನಡೆದಿತ್ತು.

Sirsi News: ಸಮಾಜದ ಪ್ರಗತಿಯಲ್ಲಿ ಮಹಿಳೆಯರ ಪಾತ್ರ ಅನನ್ಯ: ಶಿರಸಿ ರಂಗಧಾಮದಲ್ಲಿ ಲೋಗೋ ಬಿಡುಗಡೆಗೊಳಿಸಿ ಶಾಸಕ ಭೀಮಣ್ಣ ನಾಯ್ಕ

ಸಮಾಜದ ಪ್ರಗತಿಯಲ್ಲಿ ಮಹಿಳೆಯರ ಪಾತ್ರ ಅನನ್ಯ

ಕಳೆದ ಐದು ದಶಕಗಳಿಂದ ಆದರ್ಶ ವನಿತಾ ಸಮಾಜವು ಮಹಿಳೆಯರನ್ನು ಸಂಘಟಿಸುವಲ್ಲಿ ಮತ್ತು ಅವರಲ್ಲಿನ ಸುಪ್ತ ಪ್ರತಿಭೆ ಗಳನ್ನು ಹೊರ ತರುವಲ್ಲಿ ಶ್ಲಾಘನೀಯ ಕೆಲಸ ಮಾಡುತ್ತಿದೆ. ಸುವರ್ಣ ಮಹೋತ್ಸವದ ಈ ಸಂಭ್ರಮವು ಸಂಸ್ಥೆಯ ಸುದೀರ್ಘ ಮತ್ತು ಅರ್ಥಪೂರ್ಣ ಪಯಣಕ್ಕೆ ಸಾಕ್ಷಿಯಾಗಿದೆ

Toll price hike: ವಾಹನ ಚಾಲಕರಿಗೆ ಶಾಕ್‌: ಏಪ್ರಿಲ್‌ನಿಂದ ಟೋಲ್‌ ದರ ಏರಿಕೆ, ನಗದು ಸಂಪೂರ್ಣ ರದ್ದು

ವಾಹನ ಚಾಲಕರಿಗೆ ಶಾಕ್‌: ಏಪ್ರಿಲ್‌ನಿಂದ ಟೋಲ್‌ ದರ ಏರಿಕೆ, ನಗದು ರದ್ದು

ಏಪ್ರಿಲ್ 1, 2026 ರಿಂದ ಹೊಸ ದರಗಳು ಜಾರಿಗೆ ಬರಲಿವೆ. ವಾರ್ಷಿಕ ಪಾಸ್ ದರವು ಸುಮಾರು ₹3,000 ರಿಂದ ₹3,075 ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ. ರಾಜ್ಯದ ಸುಮಾರು 66 ಟೋಲ್ ಪ್ಲಾಜಾಗಳಲ್ಲಿ ಶೇ. 3ರಿಂದ 5% ರಷ್ಟು ದರ ಏರಿಕೆಯಾಗುವ ಸಾಧ್ಯತೆಯಿದೆ. ಟೋಲ್ ಪ್ಲಾಜಾಗಳಲ್ಲಿ ನಗದು (Cash) ವ್ಯವಹಾರವನ್ನು ಸಂಪೂರ್ಣವಾಗಿ ನಿಲ್ಲಿಸಿ, ಕೇವಲ FASTag ಮತ್ತು UPI ಮೂಲಕ ಮಾತ್ರ ಪಾವತಿಗೆ ಅವಕಾಶ ನೀಡುವ ಪ್ರಸ್ತಾಪವಿದೆ.

Lokayukta Raid: ಉಡುಪಿ ಅಬಕಾರಿ ಡಿಸಿ ಮೇಲೆ ಲೋಕಾಯುಕ್ತ ದಾಳಿ: 6 ಮನೆ, 11 ನಿವೇಶನ, ಕೋಟಿ ಕೋಟಿ ಅಕ್ರಮ ಆಸ್ತಿ ಪತ್ತೆ!

ಉಡುಪಿ ಅಬಕಾರಿ ಡಿಸಿ ಮೇಲೆ ಲೋಕಾಯುಕ್ತ ದಾಳಿ: ಕೋಟಿ ಕೋಟಿ ಆಸ್ತಿ ಪತ್ತೆ!

ಪ್ರಸ್ತುತ, ದಾಳಿಯ ವೇಳೆ ಪತ್ತೆಯಾದ 31 ಎಕರೆ ಕೃಷಿ ಜಮೀನು, 6 ಮನೆಗಳು ಮತ್ತು 11 ನಿವೇಶನಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಅಧಿಕಾರಿಗಳು ಕೂಲಂಕಷವಾಗಿ ಪರಿಶೀಲಿಸುತ್ತಿದ್ದಾರೆ. ಈ ಆಸ್ತಿಗಳು ಅವರ ಮತ್ತು ಅವರ ಕುಟುಂಬದ ಹೆಸರಿನಲ್ಲಿ ಹೇಗೆ ಬಂತು ಎಂಬುದಕ್ಕೆ ಅಬಕಾರಿ ಡಿಸಿ ಶ್ರೀನಿವಾಸ್ ಅವರಿಂದ ವಿವರ ಕೇಳಲಾಗುತ್ತಿದೆ.

KSRTC buses: ಪ್ರಯಾಣಿಕರಿಗೆ ಗುಡ್ ನ್ಯೂಸ್: ಕೆಎಸ್‌ಆರ್‌ಟಿಸಿಯ ಹೊಸ 115 ಬಸ್‌ಗಳಿಗೆ ಹಸಿರು ನಿಶಾನೆ

ಕೆಎಸ್‌ಆರ್‌ಟಿಸಿ ಹೊಸ 115 ಬಸ್‌ಗಳಿಗೆ ಸಚಿವರಿಂದ ಹಸಿರು ನಿಶಾನೆ

45 ಸಾಮಾನ್ಯ ಬಸ್ಸುಗಳ ಜತೆಗೆ 70 ಪಲ್ಲಕ್ಕಿ ಸ್ಲೀಪರ್‌ ಬಸ್ಸುಗಳನ್ನು ಬಿಡಲಾಗಿದೆ. ವಿಶೇಷವಾಗಿ ದೂರ ಪ್ರಯಾಣಿಸುವ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಆಧುನಿಕ ಸೌಲಭ್ಯಗಳೊಂದಿಗೆ ಈ ಪಲ್ಲಕ್ಕಿ ಬಸ್‌ಗಳನ್ನು ವಿನ್ಯಾಸಗೊಳಿಸಲಾಗಿದೆ. ಈ ನೂತನ ಸ್ಲೀಪರ್ ಬಸ್‌ಗಳಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ವಿಶೇಷ ವಿನ್ಯಾಸ ಮಾಡಲಾಗಿದೆ.

SSLC Exam: ಮಾ.18ರಿಂದ SSLC ಪರೀಕ್ಷೆ-1 ಆರಂಭ: ಬೆಂಗಳೂರಿನ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ನಿಷೇಧಾಜ್ಞೆ

ಮಾ.18ರಿಂದ SSLC ಪರೀಕ್ಷೆ: ಬೆಂಗಳೂರಿನ ಪರೀಕ್ಷಾ ಕೇಂದ್ರ ಸುತ್ತ ನಿಷೇಧಾಜ್ಞೆ

ಪರೀಕ್ಷೆಗಳನ್ನು ಸುಗಮವಾಗಿ ಹಾಗೂ ಸುವ್ಯವಸ್ಥಿತವಾಗಿ ನಡೆಸುವ ಸಲುವಾಗಿ ಪರೀಕ್ಷಾ ದಿನಗಳಂದು ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ್ ಪ್ರದೇಶವನ್ನು ನಿಷೇಧಿತ ಸ್ಥಳವೆಂದು ಘೋಷಿಸುವಂತೆ ಹಾಗೂ ನಿಷೇಧಿತ ಪ್ರದೇಶದಲ್ಲಿ ಜೆರಾಕ್ಸ್ / ಸೈಬರ್/ ಕಂಪ್ಯೂಟರ್ ಸೆಂಟರ್‌ಗಳನ್ನು ಮುಚ್ಚುವಂತೆ ಕೋರಲಾಗಿರುತ್ತದೆ.

LPG crisis: ಗ್ಯಾಸ್‌ ಬುಕ್ಕಿಂಗ್‌ಗೆ ಹೊಸ ನಿಯಮ: ಗ್ರಾಮೀಣ ಪ್ರದೇಶದಲ್ಲಿ 45 ದಿನ ಕಾಯಬೇಕು

ಗ್ಯಾಸ್‌ ಬುಕ್ಕಿಂಗ್‌ಗೆ ಹೊಸ ನಿಯಮ: ಗ್ರಾಮೀಣ ಪ್ರದೇಶದಲ್ಲಿ 45 ದಿನ ಕಾಯಬೇಕು

ದೇಶದಲ್ಲಿ ಎಲ್‌ಪಿಜಿ ದಾಸ್ತಾನು ಸಾಕಷ್ಟಿದೆ. ಆದರೆ ಅನಗತ್ಯವಾಗಿ ಜನರು ಬುಕ್ಕಿಂಗ್ ಮಾಡುತ್ತಿರುವುದರಿಂದ ವಿತರಣಾ ಜಾಲದ ಮೇಲೆ ಒತ್ತಡ ಬೀಳುತ್ತಿದೆ. ಈ ಹೊಸ ನಿಯಮದಿಂದಾಗಿ ನಿಜವಾದ ಅಗತ್ಯವಿರುವವರಿಗೆ ಸಕಾಲದಲ್ಲಿ ಗ್ಯಾಸ್ ತಲುಪಲಿದೆ ಎಂದು ಪೆಟ್ರೋಲಿಯಂ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರ ಕನ್ನಡವೀಗ ಬಿಸಿಲಿಗೆ ತತ್ತರ

ಉತ್ತರ ಕನ್ನಡವೀಗ ಬಿಸಿಲಿಗೆ ತತ್ತರ

ಹಸಿರು ಹೊದಿಕೆಯನ್ನು ಹೊದ್ದುಕೊಂಡಿರುವ ಪಶ್ಚಿಮ ಘಟ್ಟಗಳಲ್ಲಿ ತಾಪಮಾನ ಏರಿಕೆ ಯಾಗಿರುವುದು ಕೇವಲ ಮನುಷ್ಯರಿಗಷ್ಟೇ ಅಲ್ಲ, ಅಲ್ಲಿನ ಜೀವವೈವಿಧ್ಯಕ್ಕೂ ದೊಡ್ಡ ಹೊಡೆತ ನೀಡಿದೆ. ಮಲೆನಾಡಿನ ಪ್ರಮುಖ ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಮತ್ತು ಕೊಡಗಿನಲ್ಲಿ ಉಷ್ಣಾಂಶವು ಸಾಮಾನ್ಯಕ್ಕಿಂತ 2ಡಿಸೆ ನಿಂದ ೪ಡಿಸೆ ವರೆಗೆ ಏರಿಕೆಯಾಗಿದೆ.

ಪ್ರೀತಿ, ಬಾಂಧವ್ಯದ ಜತೆ ಸಹೋದರ ಭಾವನೆಯನ್ನು ಬೆಸೆಯುವುದೇ ಇಫ್ತಿಯಾರ್ ಕೂಟದ ಉದ್ದೇಶ : ನಗರಸಭೆ ಸದಸ್ಯ ನರಸಿಂಹಮೂರ್ತಿ

ಸಹೋದರ ಭಾವನೆ ಬೆಸೆಯುವುದೇ ಇಫ್ತಿಯಾರ್ ಕೂಟದ ಉದ್ದೇಶ

ಸಾಮಾಜಿಕ ಜೀವನದಲ್ಲಿ ಸೌಹಾರ್ದಯುತವಾಗಿ ಬದುಕುವುದು ಹೇಗೆ ಎಂಬುದನ್ನು ಇಫ್ತಿಯಾರ್ ಕೂಟ ಕಲಿಸಿ ಕೊಡಲಿದೆ. ಇಲ್ಲಿ ಬರುವ ಎಲ್ಲರೂ ಪರಸ್ಪರ ಪ್ರೀತಿ, ಬಾಂಧವ್ಯ, ಭ್ರಾತೃತ್ವ ಭಾವನೆ ಹೊಂದುವ ಮೂಲಕ ದೇವರ ಕೃಪೆಗೆ ಪಾತ್ರ ವಾಗುತ್ತಾರೆ ಎಂದು ನಗರಸಭಾ ಸದಸ್ಯ ನರಸಿಂಹಮೂರ್ತಿ ತಿಳಿಸಿದರು. ನಗರದ 20ನೇ ವಾರ್ಡಿನಲ್ಲಿ ರಂಜಾನ್ ಹಬ್ಬದ ಅಂಗವಾಗಿ ಉಪವಾಸವಿರುವ ಮುಸ್ಲಿಂ ಬಾಂಧವರಿಗಾಗಿ ಏರ್ಪಡಿಸಿದ್ದ ಸಾಮೂಹಿಕ ಇಪ್ತಿಯಾರ್ ಕೂಟದಲ್ಲಿ ಭಾಗವಹಿಸಿ ಮಾತನಾಡಿದರು.

ವತ್ತಿಕುಟಿ ಫೌಂಡೇಶನ್ ಬೆಂಗಳೂರಿನಲ್ಲಿ ಪಾರ್ಕಿನ್ಸನ್ ರೋಗ ಮತ್ತು ಕಂಪನಗಳಿಗೆ ನಾನ್-ಇನ್ವೇಸಿವ್ ಚಿಕಿತ್ಸೆ ಆಯ್ಕೆ

ITC ವಿಂಡ್ಸರ್ ಮ್ಯಾನರ್ ನಲ್ಲಿ ನ್ಯೂರೋನೆಕ್ಸ್ಟ್ ಫೋರಮ್ ಆಯೋಜನೆ

ಉದಯೋನ್ಮುಖ ನ್ಯೂರೋಲಾಜಿಕಲ್ ಚಿಕಿತ್ಸಾ ತಂತ್ರಜ್ಞಾನಗಳ ಕುರಿತು ಜಾಗೃತಿ ಮತ್ತು ಕ್ಲಿನಿಕಲ್ ಸಂವಾದ ಮುಂದುವರಿಸುವ ಪ್ರಯತ್ನಗಳನ್ನು ಮತ್ತಷ್ಟು ಬಲಪಡಿಸುವ ಉದ್ದೇಶ ದಿಂದ, ವತ್ತಿಕುಟಿ ಫೌಂಡೇಶನ್ ಮಾ.15ರಂದು ಬೆಂಗಳೂರಿನ ITC ವಿಂಡ್ಸರ್ ಮ್ಯಾನರ್ ನಲ್ಲಿ ನ್ಯೂರೋನೆಕ್ಸ್ಟ್ ಫೋರಮ್ಅನ್ನು ಆಯೋಜಿಸಲು ಸಜ್ಜಾಗಿದೆ.

Shiradi ghat accident: ಶಿರಾಡಿ ಘಾಟ್‌ನಲ್ಲಿ ಭೀಕರ ಅಪಘಾತ; ಕೆಎಸ್‌ಆರ್‌ಟಿಸಿ ಬಸ್‌-ಕಾರು ಡಿಕ್ಕಿಯಾಗಿ ಮೂವರ ದುರ್ಮರಣ

ಶಿರಾಡಿ ಘಾಟ್‌ನಲ್ಲಿ ಬಸ್‌-ಕಾರು ಡಿಕ್ಕಿಯಾಗಿ ಮೂವರ ದುರ್ಮರಣ

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಶಿರಾಡಿ ಘಾಟ್‌ನ ಗುಂಡ್ಯ ಸಮೀಪ ಶುಕ್ರವಾರ ಸಂಜೆ ಭೀಕರ ಅಪಘಾತ ನಡೆದಿದೆ. ಧರ್ಮಸ್ಥಳದಿಂದ ತಿರುಪತಿಗೆ ಹೋಗುತ್ತಿದ್ದ ರಾಜಹಂಸ ಬಸ್ ಹಾಗೂ ಎದುರಿನಿಂದ ಬರುತ್ತಿದ್ದ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ದುರಂತ ಸಂಭವಿಸಿದೆ.

Loading...