ನಮ್ಮ ಮೆಟ್ರೋ ಪಿಂಕ್ ಲೈನ್ ಕಾರ್ಯಾರಂಭ ಸನಿಹ: ಡಿಕೆ ಶಿವಕುಮಾರ್ ಮಾಹಿತಿ
Namm Metro Pink Line: ಬೆಂಗಳೂರಿನ ಪಿಂಕ್ ಲೈನ್ ನಮ್ಮ ಮೆಟ್ರೋ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಇದರ ಕಾರ್ಯಾಚರಣೆ ಯಾವಾಗಿನಿಂದ ಎಂಬ ಮಾಹಿತಿಯನ್ನು ಡಿಸಿಎಂ ಡಿಕೆ ಶಿವಕುಮಾರ್ ನೀಡಿದ್ದಾರೆ. ಕಾಳೇನ ಅಗ್ರಹಾರ- ನಾಗವಾರ ನಡುವಿನ ಗುಲಾಬಿ ಮಾರ್ಗವು 21 ಕಿಮೀ ಉದ್ದ ಹೊಂದಿದ್ದು, ಇದರ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದೆ. ಇದರಲ್ಲಿ 13.76 ಕಿಮೀ ಸುರಂಗ ಮಾರ್ಗವಾಗಿದೆ. ಇದು ಅತಿ ಉದ್ದದ ಭೂಗತ ಮಾರ್ಗ. ಈ ಸುರಂಗದಲ್ಲಿ 12 ನಿಲ್ದಾಣಗಳು ಇವೆ. ಭೂಗತ ನಿಲ್ದಾಣಗಳಲ್ಲಿ ಮೆಟ್ಟಿಲು ನಿರ್ಮಾಣ, ಹಳಿ ಜೋಡಣೆ, ವಿದ್ಯುತ್ ಸಂಪರ್ಕ, ಎಲಿವೇಟರ್, ಎಸಿ, ಮತ್ತು ಅಗ್ನಿಶಾಮಕ ಸುರಕ್ಷತಾ ವ್ಯವಸ್ಥೆಗಳ ಅಳವಡಿಕೆ ಕಾರ್ಯ ಭರದಿಂದ ಸಾಗಿದೆ.