ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕರ್ನಾಟಕ

Road Accident: ನೈಟ್‌ ಔಟ್‌ ಹೊರಟಿದ್ದ ವಿದ್ಯಾರ್ಥಿಗಳ ಬೈಕ್‌ಗೆ ಲಾರಿ ಡಿಕ್ಕಿ, ಮೂವರು ಸಾವು

ನೈಟ್‌ ಔಟ್‌ ಹೊರಟಿದ್ದ ವಿದ್ಯಾರ್ಥಿಗಳ ಬೈಕ್‌ಗೆ ಲಾರಿ ಡಿಕ್ಕಿ, ಮೂವರು ಸಾವು

ಪಿಜಿಯಲ್ಲಿ ವಾಸವಾಗಿದ್ದ ಮೂವರು ಇಂಜಿನಿಯರಿಂಗ್‌ ವಿದ್ಯಾರ್ಥಿಗಳು ಶುಕ್ರವಾರ (ಮಾ.27) ರಾತ್ರಿ ಬಿರಿಯಾನಿ ತಿನ್ನಲು ಒಂದೇ ಬೈಕ್‌ನಲ್ಲಿ ಕುಣಿಗಲ್ ಕಡೆ ಹೋಗುತ್ತಿದ್ದರು. ಈ ವೇಳೆ ಮಾಗಡಿ ತಾಲ್ಲೂಕಿನ ಮರೂರು ಹ್ಯಾಂಡ್ ಪೋಸ್ಟ್ ಬಳಿ ಬೈಕ್‌ಗೆ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

Gram Panchayat Employees: ಗ್ರಾಮ ಪಂಚಾಯಿತಿ ನೌಕರರ ವೇತನ ಎಷ್ಟು?; ಭತ್ಯೆ ಸೇರಿ ಏನೆಲ್ಲಾ ಸೌಲಭ್ಯ ಸಿಗುತ್ತದೆ?

ಗ್ರಾಮ ಪಂಚಾಯಿತಿ ನೌಕರರ ವೇತನ ಎಷ್ಟು?; ಏನೆಲ್ಲಾ ಸೌಲಭ್ಯ ಸಿಗುತ್ತೆ?

ಗ್ರಾಮ ಪಂಚಾಯಿತಿ ನೌಕರರು ಸರ್ಕಾರಿ ನೌಕರರಾಗಿರುವುದಿಲ್ಲ. ಸದರಿ ನೌಕರರಿಗೆ 'ಸಿ' ಮತ್ತು 'ಡಿ' ದರ್ಜೆ ನೌಕರರಂತೆ ವೇತನ ಶ್ರೇಣಿ ನಿಗದಿಪಡಿಸಲು ಆಡಳಿತಾತ್ಮಕವಾಗಿ ಸಾಧ್ಯವಾಗುವುದಿಲ್ಲ. ಸಿಬ್ಬಂದಿಗೆ ಸೇವಾ ಹಿರಿತನದ ವೇತನ ನಿಗದಿಪಡಿಸಲು ಮತ್ತು ವೇತನ ಹೆಚ್ಚಳ ಮಾಡುವ ಪ್ರಸ್ತಾವನೆ ಸರ್ಕಾರದ ಪರಿಶೀಲನೆಯಲ್ಲಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

Indi News: ಅಕ್ಷರ ಜಾತ್ರೆಗೆ ಇಂಡಿ ಸನ್ನದ್ಧ: ಏಪ್ರಿಲ್ 10ರಿಂದ ವಿಜಯಪುರದಲ್ಲಿ ಭವ್ಯ ಪುಸ್ತಕ ಮೇಳ

ಏಪ್ರಿಲ್ 10ರಿಂದ ವಿಜಯಪುರದಲ್ಲಿ ಭವ್ಯ ಪುಸ್ತಕ ಮೇಳ

ವಿಜಯಪುರದ ದರ್ಬಾರ್ ಹೈಸ್ಕೂಲ್ ಮೈದಾನದಲ್ಲಿ ಏಪ್ರಿಲ್ 10 ರಿಂದ 14 ರವರೆಗೆ ಆಯೋಜಿಸಲಾಗಿರುವ 'ಬಸವ-ಬಾಬಾ ಸಾಹೇಬ್ ಅಂಬೇಡ್ಕರ್ ಪುಸ್ತಕ ಮೇಳ'ದ ಪೂರ್ವ ಭಾವಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಜೆಡಿಎಸ್ ಮುಖಂಡ ಬಿ.ಡಿ. ಪಾಟೀಲ್ ಅವರು ಮಾತನಾಡಿ, "ಇಂಡಿ ತಾಲೂಕಿನ ಪ್ರತಿಯೊಬ್ಬ ನಾಗರಿಕರು, ಯುವಕರು ಮತ್ತು ವಿದ್ಯಾರ್ಥಿಗಳು ಈ ಜ್ಞಾನದ ಹಬ್ಬದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು

Golden Hour Network: ಭಾರತದ ತುರ್ತು ಚಿಕಿತ್ಸಾ ಕ್ಷೇತ್ರಕ್ಕೆ ಹೊಸ ಚೈತನ್ಯ: ಮೊದಲ ಬಾರಿಗೆ 'ಗೋಲ್ಡನ್ ಅವರ್ ನೆಟ್‌ ವರ್ಕ್' ಆರಂಭ

ಭಾರತದ ತುರ್ತು ಚಿಕಿತ್ಸಾ ಕ್ಷೇತ್ರಕ್ಕೆ ಹೊಸ ಚೈತನ್ಯ

ಆರ್ಥೊಪೆಡಿಕ್ಸ್ ಮತ್ತು ಟ್ರಾಮಾ ಕೇರ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ವೈದ್ಯಕೀಯ ಸಂಸ್ಥೆ ಹೊಸ್ಮಟ್ ಆಸ್ಪತ್ರೆಯು ಬೆಂಗಳೂರು ಆರ್ಥೊಪೆಡಿಕ್ ಸೊಸೈಟಿಯ ಸಹಯೋಗದೊಂದಿಗೆ ಮೊಟ್ಟಮೊದಲ ಬಾರಿಗೆ ಹಮ್ಮಿಕೊಂಡಿದ್ದ 'ಹೊಸ್ಮಟ್ ಟ್ರಾಮಾ ಕಾನ್ 2026' ಸಮಾವೇಶದಲ್ಲಿ ತನ್ನ ವಿನೂತನ 'ಗೋಲ್ಡನ್ ಅವರ್ ನೆಟ್‌ ವರ್ಕ್' (ಜಿಎಚ್ಎನ್) ಯೋಜನೆಗೆ ಅಧಿಕೃತ ಚಾಲನೆವಾಗಿ ನೀಡಿದೆ.

terrorist: ವಿದ್ಯಾರ್ಥಿಗೆ ʼಟೆರರಿಸ್ಟ್‌ʼ ಎಂದ ಪಿಇಎಸ್ ವಿವಿ ಉಪನ್ಯಾಸಕ ಅಮಾನತು

ವಿದ್ಯಾರ್ಥಿಗೆ ʼಟೆರರಿಸ್ಟ್‌ʼ ಎಂದ ಪಿಇಎಸ್ ವಿವಿ ಉಪನ್ಯಾಸಕ ಅಮಾನತು

ಈ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆಕ್ರೋಶಕ್ಕೆ ಕಾರಣವಾಗಿದೆ. ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ ಈ ಬಗ್ಗೆ ದೂರು ದಾಖಲಿಸಿದೆ. ಪ್ರಕರಣದ ಗಂಭೀರತೆಯನ್ನು ಗಮನಿಸಿದ ವಿಶ್ವವಿದ್ಯಾಲಯ ಆಡಳಿತವು ತಕ್ಷಣ ಕ್ರಮ ಕೈಗೊಂಡು ಪ್ರೊಫೆಸರ್ ಅವರನ್ನು ಅಮಾನತು ಮಾಡಿದೆ.

Road Accident: ತಿರುಪತಿಗೆ ಹೊರಟಿದ್ದ ಬೆಂಗಳೂರಿನ ಮೂವರು ಅಪಘಾತದಲ್ಲಿ ಸಾವು

ತಿರುಪತಿಗೆ ಹೊರಟಿದ್ದ ಬೆಂಗಳೂರಿನ ಮೂವರು ಅಪಘಾತದಲ್ಲಿ ಸಾವು

ಭೀಕರ ಅಪಘಾತದಲ್ಲಿ ಬೆಂಗಳೂರು ಮೂಲದ ದಂಪತಿ ಹಾಗೂ ಅವರ 4 ವರ್ಷದ ಹೆಣ್ಣು ಮಗು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರು ಚಾಲಕನ ಸ್ಥಿತಿ ಗಂಭೀರವಾಗಿದೆ. ಬೆಂಗಳೂರಿನಲ್ಲಿ ವಾಸವಿದ್ದ ಕುಟುಂಬ ಇಂದು ಮಧ್ಯಾಹ್ನ 12 ಗಂಟೆಗೆ ತಿರುಪತಿ ವೆಂಕಟೇಶ್ವರ ಸ್ವಾಮಿ ದರ್ಶನಕ್ಕೆ ಟಿಕೆಟ್‌ ಪಡೆದುಕೊಂಡಿತ್ತು.

Bhatkal News: ಮುಸ್ಲಿಂ ಧ್ವಜ ತೆರವು: ಉದ್ರಿಕ್ತ ಪರಿಸ್ಥಿತಿ ನಿರ್ಮಾಣ

ಮುಸ್ಲಿಂ ಧ್ವಜ ತೆರವು: ಉದ್ರಿಕ್ತ ಪರಿಸ್ಥಿತಿ ನಿರ್ಮಾಣ

ಬಂದರ ರಸ್ತೆ ನ್ಯೂ ಇಂಗ್ಲೀಷ್ ಶಾಲೆಯ ಎದುರು ರಮ್ಜಾನ್ ಹಬ್ಬದ ಅಂಗವಾಗಿ ಸ್ಥಾಪಿಸಲಾದ ಮುಸ್ಲಿಂ ಧ್ವಜವನ್ನು ನಗರಸಭೆ ಅಧಿಕಾರಿಗಳು ತೆರವುಗೊಳಿಸಿದ ಹಿನ್ನೆಲೆ ಯಲ್ಲಿ ಸ್ಥಳದಲ್ಲಿ ಉದ್ರಿಕ್ತ ಪರಿಸ್ಥಿತಿ ನಿರ್ಮಾಣವಾಗಿದೆ. ಧ್ವಜ ತೆರವುಗೊಳಿಸಿದ ಕ್ರಮ ವಿರೋಧಿಸಿ ಮುಸ್ಲಿಂ ಸಮುದಾಯದ ಹಲವರು ಸ್ಥಳದಲ್ಲಿ ಜಮಾವಣೆಗೊಂಡು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಕೆಲಕಾಲ ಪರಿಸ್ಥಿತಿ ತೀವ್ರ ಗೊಂಡು ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.

Chief Minister's Medal : 2025ನೇ ಸಾಲಿನ ಮುಖ್ಯಮಂತ್ರಿ ಪದಕಕ್ಕೆ ಪಿ.ಎಸ್.ಐ ನವೀನ್ ನಾಯ್ಕ ಆಯ್ಕೆ

ಮುಖ್ಯಮಂತ್ರಿ ಪದಕಕ್ಕೆ ಪಿ.ಎಸ್.ಐ ನವೀನ್ ನಾಯ್ಕ ಆಯ್ಕೆ

ರಾಜ್ಯ ಸರ್ಕಾರವು 2025ಸಾಲಿನ ಮುಖ್ಯಮಂತ್ರಿ ಪದಕ ಪಟ್ಟಿ ಪ್ರಕಟಿಸಿದ್ದು, ಭಟ್ಕಳ ಶಹರಾ ಠಾಣೆಯ ಪಿ.ಎಸ್.ಐ ನವೀನ್ ಎಸ್ ನಾಯ್ಕ ಗೌರವಕ್ಕೆ ಭಾಜನರಾಗಿದ್ದಾರೆ. ಪೊಲೀಸ್ ಇಲಾಖೆ ಯಲ್ಲಿ ಅವರು ತೋರಿದ ಸಾಧನೆ ಹಾಗೂ ಕರ್ತವ್ಯ ನಿಷ್ಠೆಯನ್ನು ಗಮನಿಸಿ ಅವರಿಗೆ ಈ ಗೌರವವನ್ನು ನೀಡಲಾಗುತ್ತಿದೆ. ಈ ಕುರಿತಂತೆ ಸಾರ್ವಜನಿಕ ವಲಯ ದಲ್ಲಿ ಬಾರಿ ಪ್ರಶಂಸೆ ವ್ಯಕ್ತವಾಗಿದೆ. ಸಹೋದ್ಯೋಗಿಗಳು ಹಾಗೂ ಸಾರ್ವಜನಿಕರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Bomb threat: ದೇಶಾದ್ಯಂತ ಬಾಂಬ್‌ ಬೆದರಿಕೆ ಹಾಕಿ ಮೈಸೂರಿನಲ್ಲಿ ಕುಳಿತಿದ್ದ ಆರೋಪಿ ಆರೆಸ್ಟ್‌

ದೇಶಾದ್ಯಂತ ಬಾಂಬ್‌ ಬೆದರಿಕೆ ಹಾಕುತ್ತಿದ್ದ ಮೈಸೂರಿನ ಆರೋಪಿ ಆರೆಸ್ಟ್‌

ಮೈಸೂರು (Mysuru) ನಗರದಲ್ಲಿ ಅಡಗಿ ಕುಳಿತಿದ್ದ ಶ್ರೀನಿವಾಸ್ ಎಂಬಾತನನ್ನು ಬಂಧಿಸಲಾಗಿದ್ದು, ದೆಹಲಿ ಪೊಲೀಸರ ತಂಡ ಆತನನ್ನು ಹೆಚ್ಚಿನ ವಿಚಾರಣೆಗಾಗಿ ದೆಹಲಿಗೆ ಕರೆದೊಯ್ಯಲಿದೆ. ಆರೋಪಿಯು ಒಂದೇ ತಿಂಗಳಲ್ಲಿ ಅನೇಕ ಬಾರಿ ಬಾಂಬ್ ಬೆದರಿಕೆ ಸಂದೇಶ ರವಾನೆ ಮಾಡಿ ಸಾರ್ವಜನಿಕರಲ್ಲಿ ಭೀತಿ ಮೂಡಿಸಿದ್ದ ಎಂಬುದು ತಿಳಿದುಬಂದಿದೆ.

ಬೆಂಗಳೂರು ಉತ್ತರ ಮಹಾನಗರ ಪಾಲಿಕೆ: 4344 ಕೋಟಿ ರೂ. ವೆಚ್ಚದ ಚೊಚ್ಚಲ ಬಜೆಟ್ ಮಂಡನೆ

ಬೆಂಗಳೂರು ಉತ್ತರ ಮಹಾನಗರ ಪಾಲಿಕೆಯ ಚೊಚ್ಚಲ ಬಜೆಟ್ ಮಂಡನೆ

ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಅಡಿಯಲ್ಲಿ ಬರುವ ಐದು ಹೊಸ ಪಾಲಿಕೆಗಳಲ್ಲಿ ಒಂದಾಗಿರುವ ಬೆಂಗಳೂರು ಉತ್ತರ ಮಹಾನಗರ ಪಾಲಿಕೆಯ ಚೊಚ್ಚಲ ಬಜೆಟ್ ಮಂಡನೆಯಾಗಿದೆ. ಆಯವ್ಯಯವನ್ನು ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ಪ್ರಸ್ತುತಿ ಪಡಿಸಿದರು. ಮಹಿಳಾ ಸಬಲೀಕರಣ, ಆರೋಗ್ಯ, ಮೂಲಸೌಕರ್ಯ ಹಾಗೂ ನಗರಾಭಿವೃದ್ಧಿಗೆ ಈ ಬಾರಿ ಒತ್ತು ನೀಡಲಾಗಿದೆ.

ಐಪಿಎಲ್ ಟಿಕೆಟ್ ಕೇಳಿ ಮರ್ಯಾದೆ ಕಳೆದುಕೊಂಡ ಶಾಸಕರು

ಐಪಿಎಲ್ ಟಿಕೆಟ್ ಕೇಳಿ ಮರ್ಯಾದೆ ಕಳೆದುಕೊಂಡ ಶಾಸಕರು

ವಿಧಾನಸಭೆಯ ಕಲಾಪದಲ್ಲಿ ಪ್ರತಿಪಕ್ಷ ನಾಯಕ ಆರ್.ಅಶೋಕ್ ಸೇರಿದಂತೆ ಹಲವು ಶಾಸಕರು ಐಪಿಎಲ್ ನೋಡಲು ಐದು ಟಿಕೆಟ್ ಕೊಡಿಸಬೇಕು, ಶಾಸಕರಿಗಾಗಿ ವಿಐಪಿ ಜಾಗ ಮಾಡಬೇಕು ಎಂದು ಸ್ಪೀಕರ್‌ಗೆ ದುಂಬಾಲು ಬಿದ್ದ ಘಟನೆ ಹಾಗೂ ಐದು ಟಿಕೆಟ್ ಕೊಡಿಸುವಂತೆ ಸರಕಾರಕ್ಕೆ ಸೂಚನೆ ನೀಡಿರುವ ನಡೆ ತೀವ್ರ ಅಕ್ಷೇಪಕ್ಕೆ ಕಾರಣವಾಗಿದೆ.

V Somanna: ಕರ್ನಾಟಕಕ್ಕೆ ಹೊಸ ರೈಲು ಘೋಷಿಸಿದ ಸಚಿವ ಸೋಮಣ್ಣ, 4 ಜಿಲ್ಲೆಗಳ ನಡುವೆ ಸಂಚಾರ

ಕರ್ನಾಟಕಕ್ಕೆ ಹೊಸ ರೈಲು ಘೋಷಿಸಿದ ಸಚಿವ ಸೋಮಣ್ಣ, 4 ಜಿಲ್ಲೆಗಳ ನಡುವೆ ಸಂಚಾರ

ಬೆಂಗಳೂರಿನ ಯಲಹಂಕ - ಅರಸೀಕೆರೆ ನಡುವೆ ಭಾನುವಾರ ಹೊರತುಪಡಿಸಿ ವಾರದ 6 ದಿನ ಈ ರೈಲು ಸಂಚಾರ ನಡೆಸಲಿದೆ. ಹಾಸನ, ತುಮಕೂರು, ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಯಾಣಿಕರಿಗೆ ಇದರಿಂದ ಅನುಕೂಲವಾಗಲಿದೆ. ಇದು ಬೆಳಿಗ್ಗೆ 6:45ಕ್ಕೆ ಯಲಹಂಕದಿಂದ ಹಾಗೂ ಅರಸೀಕೆರೆಯಿಂದ ಮಧ್ಯಾಹ್ನ 02:15ಕ್ಕೆ ಹೊರಡುತ್ತದೆ.

Sub Registrar Office: ರಾಜ್ಯದಲ್ಲಿ ಇಂದು, ನಾಳೆ ರಜೆ ಇದ್ದರೂ ಉಪನೋಂದಣಾಧಿಕಾರಿ ಕಚೇರಿ ಓಪನ್‌

ರಾಜ್ಯದಲ್ಲಿ ಇಂದು, ನಾಳೆ ರಜೆ ಇದ್ದರೂ ಉಪನೋಂದಣಾಧಿಕಾರಿ ಕಚೇರಿ ಓಪನ್‌

ಮಾರ್ಚ್ 28 ನಾಲ್ಕನೇ ಶನಿವಾರ ಹಾಗೂ ಮಾರ್ಚ್ 29 ಭಾನುವಾರವಾಗಿರುವ ಕಾರಣ ಕಚೇರಿಗಳಿಗೆ ನಿಯಮಾನುಸಾರ ಸರ್ಕಾರಿ ರಜೆ ಇರುತ್ತದೆ. ಆದರೆ, ಈ ಬಾರಿ ಸಾಲು ಸಾಲು ರಜೆಗಳಿರುವುದರಿಂದ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ತೊಂದರೆಯಾಗಬಾರದು ಹಾಗೂ ವರ್ಷಾಂತ್ಯದ ಆಡಳಿತಾತ್ಮಕ ಕಾರ್ಯಗಳನ್ನು ಪೂರ್ಣಗೊಳಿಸಬೇಕು ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

IPL cricket match: ಇಂದಿನಿಂದ ಐಪಿಎಲ್‌ ಪಂದ್ಯ, ನಮ್ಮ ಮೆಟ್ರೋದಿಂದ ರಾತ್ರಿ 2 ಗಂಟೆಯವರೆಗೆ ರೈಲು

ಇಂದಿನಿಂದ ಐಪಿಎಲ್‌ ಪಂದ್ಯ, ನಮ್ಮ ಮೆಟ್ರೋದಿಂದ ರಾತ್ರಿ 2 ಗಂಟೆಯವರೆಗೆ ರೈಲು

ಪಂದ್ಯದ ದಿನದಂದು ಎಲ್ಲಾ ಟರ್ಮಿನಲ್ ನಿಲ್ದಾಣಗಳಿಂದ ಕೊನೆಯ ಮೆಟ್ರೋ ಸೇವೆಯನ್ನು ರಾತ್ರಿ 11 ಗಂಟೆಯ ಬದಲಾಗಿ ತಡರಾತ್ರಿ 2 ಗಂಟೆಯವರೆಗೆ ವಿಸ್ತರಿಸಲಾಗಿದೆ. ಮೆಜೆಸ್ಟಿಕ್ ನಿಲ್ದಾಣದಿಂದ ನಾಲ್ಕೂ ದಿಕ್ಕುಗಳಿಗೆ ಕೊನೆಯ ರೈಲು ಮಧ್ಯರಾತ್ರಿ 1:30ಕ್ಕೆ ಹೊರಡಲಿದೆ. ಕ್ರೀಡಾಂಗಣಕ್ಕೆ ಬರುವವರು ಕಬ್ಬನ್ ಪಾರ್ಕ್ ಅಥವಾ ಮಹಾತ್ಮ ಗಾಂಧಿ ರಸ್ತೆ ಮೆಟ್ರೋ ನಿಲ್ದಾಣಗಳನ್ನು ಬಳಸಲು ಸೂಚಿಸಲಾಗಿದೆ.

ಇಂದು ಐಪಿಎಲ್‌ ಉದ್ಘಾಟನ ಪಂದ್ಯ; ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತ ವಾಹನ ನಿಲುಗಡೆ ನಿಷೇಧ

ಇಂದು ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತ ವಾಹನ ನಿಲುಗಡೆ ನಿಷೇಧ

IPL 2026 Bengaluru Traffic Advisory: ಈ ಬಾರಿ ಟೂರ್ನಿ ಬೆಂಗಳೂರು ಸೇರಿದಂತೆ ಒಟ್ಟು 13 ನಗರಗಳಲ್ಲಿ ನಡೆಯಲಿವೆ. ಅಹಮದಾಬಾದ್‌, ಚೆನ್ನೈ, ಮುಂಬೈ, ಕೋಲ್ಕತಾ, ನವದೆಹಲಿ, ಧರ್ಮಶಾಲಾ, ಗುವಾಹಟಿ, ಹೈದರಾಬಾದ್‌, ಜೈಪುರ, ಲಖನೌ, ಮುಲ್ಲಾನ್‌ಪುರ, ರಾಯ್ಪುರದಲ್ಲೂ ಪಂದ್ಯಗಳು ಆಯೋಜನೆಗೊಳ್ಳಲಿವೆ.

Self Harming: ಕಿರುಕುಳ ಆರೋಪ, ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾದ ಹಾಲು ಉತ್ಪಾದಕರ ಮಹಿಳಾ ಸಂಘದ ಕಾರ್ಯದರ್ಶಿ

ಕಿರುಕುಳ, ಹಾಲು ಉತ್ಪಾದಕರ ಮಹಿಳಾ ಸಂಘ ಕಾರ್ಯದರ್ಶಿ ವಿಡಿಯೋ ಮಾಡಿ ಆತ್ಮಹತ್ಯೆ

2010ರಲ್ಲಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಆರಂಭವಾಗಿತ್ತು. ಅಲ್ಲಿಂದಲೂ ಉಷಾ ಸಂಘದ ಕಾರ್ಯದರ್ಶಿಯಾಗಿದ್ದರು. 2025ರಲ್ಲಿ ಸಂಘಕ್ಕೆ ಹೊಸ ಸದಸ್ಯರು ಸೇರ್ಪಡೆಗೊಂಡ ಬಳಿಕ ಎಲ್ಲಾ ಲೆಕ್ಕಪತ್ರ ಕೇಳಲು ಅವರು ಪ್ರಾರಂಭಿಸಿದ್ದರು. ಆ ವೇಳೆ ಉಷಾ ವಿರುದ್ಧ ಹಣ ದುರ್ಬಳಕೆ ಆರೋಪ ಮಾಡಲಾಗಿತ್ತು.

Drowned: ಒಂದೇ ಕುಟುಂಬದ ನಾಲ್ವರು ತುಂಗಭದ್ರಾ ನದಿಯಲ್ಲಿ ನೀರುಪಾಲು

ಒಂದೇ ಕುಟುಂಬದ ನಾಲ್ವರು ತುಂಗಭದ್ರಾ ನದಿಯಲ್ಲಿ ನೀರುಪಾಲು

ಆಂಧ್ರಪ್ರದೇಶದ ಕೋಸಗಿ ತಾಲೂಕಿನ ರಾಜಲಬಂಡ ಅಣೆಕಟ್ಟಿನ ಕೊನೆ ಭಾಗದಲ್ಲಿರುವ ಸಾತುನೂರು ಗ್ರಾಮದ ಬಳಿಯ ತುಂಗಭದ್ರಾ ನದಿಗೆ ಮಧ್ಯಾಹ್ನ ಸ್ನಾನಕ್ಕೆ ತೆರಳಿದ್ದರು. ಈ ವೇಳೆ ತಗ್ಗು ಪ್ರದೇಶದಲ್ಲಿ ಸಿಲುಕಿ ನಾಲ್ವರು ಸಾವನ್ನಪ್ಪಿದ್ದಾರೆ. ಮೃತರನ್ನು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕುರ್ಡಿ ಗ್ರಾಮದ ನಿವಾಸಿಗಳು ಎಂದು ಗುರುತಿಸಲಾಗಿದೆ.

Dr Sathish K Patil Column: ಮತ್ತೆ ಬಂಗಾಳದಲ್ಲಿ ದೀದಿ, ತಮಿಳುನಾಡಿನಲ್ಲಿ ಸ್ಟಾಲಿನ್‌ ಅಧಿಪತ್ಯವೇ ?

ಮತ್ತೆ ಬಂಗಾಳದಲ್ಲಿ ದೀದಿ, ತಮಿಳುನಾಡಿನಲ್ಲಿ ಸ್ಟಾಲಿನ್‌ ಅಧಿಪತ್ಯವೇ ?

ಇನ್ನು ತೀವ್ರವಾಗಿರುವ ಆಡಳಿತ-ವಿರೋಧಿ ಅಲೆಯನ್ನು ತಗ್ಗಿಸಲು 74 ಹಾಲಿ ಶಾಸಕರಿಗೆ ಈ ಸಲ ಟಿಕೆಟ್ ಕೊಡದೆ ಹೊಸ ಮುಖಗಳಿಗೆ ಆದ್ಯತೆ ನೀಡುವ ಮೂಲಕ ಚುನಾವಣಾ ತಂತ್ರಗಾರಿಕೆ ಮೆರೆದಿರುವ ಮಮತಾ, ಈ ಅಂಶವು ತಮಗೆ ಲಾಭ ತಂದುಕೊಡಬಹುದು ಎನ್ನುವ ಲೆಕ್ಕಾಚಾರ ವನ್ನು ಹಾಕಿಕೊಂಡಿದ್ದಾರೆ.

Bagepally News: ತಾಲ್ಲೂಕಿನಾದ್ಯಂತ ಸಂಭ್ರಮದ ಶ್ರೀ ರಾಮನವಮಿ ಆಚರಣೆ: ಪಾನಕ, ಮಜ್ಜಿಗೆ, ಕೋಸಂಬರಿ ಹಂಚಿದ ಶ್ರೀರಾಮ ಭಕ್ತರು

ತಾಲ್ಲೂಕಿನಾದ್ಯಂತ ಸಂಭ್ರಮದ ಶ್ರೀ ರಾಮನವಮಿ ಆಚರಣೆ

ಪಟ್ಟಣದ ಬಯಲಾಂಜನೇಯ, ಹಳೆ ಎಸ್. ಬಿ.ಎಂ ರಸ್ತೆಯಲ್ಲಿರುವ ಕೋದಂಡ ರಾಮಸ್ವಾಮಿ, ದೇವರಗುಡಿಪಲ್ಲಿ ಒಂದು ಕಣ್ಣಿನ ಆಂಜನೇಯ ಸ್ವಾಮಿ, ಪಂಚಮುಖಿ ಆಂಜನೇಯ ಸ್ವಾಮಿ, ನಗರ್ಲ ಬಯಲು ಆಂಜನೇಯ ಸ್ವಾಮಿ, ಗೂಳೂರು ಆಂಜನೇಯ ಸ್ವಾಮಿ ಹಾಗೂ ವಿವಿಧ ಶ್ರೀರಾಮಮಂದಿರ ದಲ್ಲಿ ಮರ್ಯಾದಾ ಪುರಷೋತ್ತಮನಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.

Shidlaghatta News: ಕಾನೂನು ಉಲ್ಲಂಘಿಸಿದರೆ ಕಠಿಣ ಕ್ರಮ: ಡಿವೈಎಸ್ಪಿ ಮುರಳೀಧರ್

ಕಾನೂನು ಉಲ್ಲಂಘಿಸಿದರೆ ಕಠಿಣ ಕ್ರಮ: ಡಿವೈಎಸ್ಪಿ ಮುರಳೀಧರ್

ಸಮಾಜದಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವುದು ಪೊಲೀಸ್ ಇಲಾಖೆಯ ಮುಖ್ಯ ಉದ್ದೇಶವಾಗಿದ್ದು, ರೌಡಿಶೀಟರ್‌ಗಳು ತಮ್ಮ ನಡೆನುಡಿಯಲ್ಲಿ ಬದಲಾವಣೆ ತರಬೇಕು ಎಂದು ಸೂಚಿಸ ಲಾಯಿತು. ಮುಂದಿನ ದಿನಗಳಲ್ಲಿ ಯಾವುದೇ ಪ್ರಕರಣಗಳಲ್ಲಿ ಹೆಸರು ಬರುತ್ತದೆ ಎಂದರೆ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ

Bagepally News: ಶ್ರೀ ಕೋದಂಡರಾಮಸ್ವಾಮಿ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ

ಶ್ರೀ ಕೋದಂಡರಾಮಸ್ವಾಮಿ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ

ಬಾಗೇಪಲ್ಲಿ ತಾಲೂಕಿನ ಕಸಭಾ ಹೋಬಳಿಯ ತೀಮಾಕಲಪಲ್ಲಿ ಗ್ರಾಮದಲ್ಲಿ ಗ್ರಾಮಸ್ಥರಿಂದ ನಿರ್ಮಿಸಿ ರುವ ಶ್ರೀ ಸೀತಾ, ರಾಮ, ಲಕ್ಷ್ಮಣ ಹನುಮ ಸಮೇತ ದೇಗುಲ ಲೋಕಾರ್ಪಣೆ ಹಾಗೂ ಶ್ರೀ ಕೋದಂಡ ರಾಮಸ್ವಾಮಿ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ತೀಮಾಕಲಪಲ್ಲಿ ಗ್ರಾಮದಲ್ಲಿ ನಿರ್ಮಿಸಿರುವ ನೂತನ ದೇವಾಲಯ ಹಾಗೂ ಧ್ವಜ ಸ್ತಂಭ ಸ್ಥಾಪನೆ, ಕೋದಂಡರಾಮಸ್ವಾಮಿ ವಿಗ್ರಹ ಪ್ರತಿಷ್ಠಾಪನಾ ಕಾರ್ಯಕ್ಕೆ ಗ್ರಾಮಸ್ಥರು ಸೇರಿದಂತೆ ಹಲವು ಗಣ್ಯರ ಸಹಕಾರ ನೀಡಿದ್ದಾರೆ

Bagepally News: ಮಿಟ್ಟೇಮರಿ ಶ್ರೀ ಸೀತಾರಾಮ ಲಕ್ಷ್ಮಣ ದೇವಸ್ಥಾನಕ್ಕೆ ಗುಂಜೂರು ಶ್ರೀನಿವಾಸರೆಡ್ಡಿ ಭೇಟಿ: ಜನರ ಒಳಿತಿಗಾಗಿ ವಿಶೇಷ ಪೂಜೆ

ಮಿಟ್ಟೇಮರಿ ದೇವಸ್ಥಾನಕ್ಕೆ ಗುಂಜೂರು ಶ್ರೀನಿವಾಸರೆಡ್ಡಿ ಭೇಟಿ

ಧಾರ್ಮಿಕ ನಂಬಿಕೆಗಳು ಸಮಾಜದಲ್ಲಿ ಸೌಹಾರ್ದತೆ ಮತ್ತು ಮಾನವೀಯ ಮೌಲ್ಯಗಳನ್ನು ಬಲಪಡಿಸು ತ್ತವೆ ಎಂದು ಹೇಳಿದರು. ಗ್ರಾಮೀಣ ಭಾಗಗಳ ಅಭಿವೃದ್ಧಿಗೆ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸುವುದು ಅವಶ್ಯಕವಾಗಿದೆ. ಸೇವೆಯೇ ತಮ್ಮ ಪ್ರಮುಖ ಗುರಿಯಾಗಿದೆ. ಹಾಗೂ ದೇವಸ್ಥಾನಗಳು ಕೇವಲ ಪೂಜಾ ಸ್ಥಳಗಳಲ್ಲ, ಸಮಾಜವನ್ನು ಒಂದಾಗಿ ಕಟ್ಟಿ ಹಿಡಿಯುವ ಶಕ್ತಿಕೇಂದ್ರಗಳಾಗಿವೆ.

Chikkaballapur News: ಸಮಾಜ ಹಾಗೂ ರಾಜಕಾರಣದ ಅಂಕುಡೊಂಕುಗಳನ್ನು ವಿಮರ್ಶಿಸಿದ ಸಾಹಿತಿ ಹಾಗೂ ಪತ್ರಕರ್ತ ಪಿ.ಲಂಕೇಶ್ : ಕಾಗತಿ ನಾಗರಾಜಪ್ಪ

ಸಮಾಜದ ಅಂಕುಡೊಂಕುಗಳ ವಿಮರ್ಶಿಸಿದ ಸಾಹಿತಿ ಹಾಗೂ ಪತ್ರಕರ್ತ ಪಿ.ಲಂಕೇಶ್

ವಿದ್ಯಾರ್ಥಿಗಳಾದ ನೀವು ಸಮಾಜದಲ್ಲಿ ನಡೆಯುವ ಅನ್ಯಾಯ ಮತ್ತು ಅಕ್ರಮಗಳನ್ನು ಖಂಡಿಸು ವಂತಹ ಧೈರ್ಯ ತೋರಬೇಕಿದೆ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದ ಅವರು ಪಿ.ಲಂಕೇಶ್ ಅವರು ನೇರ ನಿಷ್ಟುರ ಬರಹಗಾರರಾದ್ದರು. ಇವರ ಸಾಹಿತ್ಯ ಬರಹಗಳಲ್ಲಿ ವೈಚಾರಿಕತೆ, ಮಾನವೀಯತೆ ಹಾಗೂ ಸಾಮಾಜಿಕ ಕಳಕಳಿ ತುಂಬಿರುತ್ತಿತ್ತು

Manchenahalli News: ನೀರಿನ ಸಂಗ್ರಹಣಾ ಸಾಮರ್ಥ್ಯ ಹೆಚ್ಚಿಸಿಕೊಂಡ ಕೆರೆ, ರೈತರ ಭೂಮಿಗೆ ಫಲವತ್ತಾದ ಮಣ್ಣು, ಗ್ರಾಮಸ್ಥರ ಮೊಗದಲ್ಲಿ ಮಂದಹಾಸ

ಕೆರೆಯ ಅಭಿವೃದ್ಧಿ ಮಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ

ಕೆರೆಗಳು ಗ್ರಾಮೀಣ ಜನತೆಯ ಜೀವನಾಡಿಗಳು, ಕೆರೆಗಳಲ್ಲಿ ನೀರು ಸಂಗ್ರಹವಾಗುವುದರಿಂದ ಅಂತರ್ಜಲ ಮಟ್ಟ ವೃದ್ಧಿಯಾಗಿ ರೈತರಿಗೆ ಅನುಕೂಲವಾಗಲಿದೆ. ಪ್ರಕೃತಿ ಚೆನ್ನಾಗಿದ್ದರೆ ನಮಗೆ ಉತ್ತಮ ಆರೋಗ್ಯ ನೀಡುತ್ತದೆ. ಆದರೆ ಪರಿಸರ ಮಾಲಿನ್ಯದಿಂದಾಗಿ ಇಂದು ಶುದ್ಧ ಗಾಳಿ, ನೀರು ಮತ್ತು ಆಹಾರ ಸಿಗುವುದು ಕಷ್ಟವಾಗಿದೆ.

Loading...