ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಕರ್ನಾಟಕ
Kalaburagi News: ಶ್ರೀ ಡಾ. ಶರಣಬಸಪ್ಪ ಅಪ್ಪ ಆರೋಗ್ಯ ಸ್ಥಿರ, ವದಂತಿಗೆ ಕಿವಿಗೊಡದಂತೆ ಮನವಿ

ಶ್ರೀ ಡಾ. ಶರಣಬಸಪ್ಪ ಅಪ್ಪ ಆರೋಗ್ಯ ಸ್ಥಿರ, ವದಂತಿಗೆ ಕಿವಿಗೊಡದಂತೆ ಮನವಿ

Kalaburagi News: ಉಸಿರಾಟದ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗಿರುವ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಡಾ. ಅಪ್ಪಾಜಿ ಅವರನ್ನು ನೋಡಿಕೊಳ್ಳುತ್ತಿರುವ ವೈದ್ಯರ ತಂಡವು ಅವರ ಒಟ್ಟಾರೆ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಮತ್ತು ಉಸಿರಾಟದ ಸೋಂಕು ನಿಯಂತ್ರಣದಲ್ಲಿದೆ ಎಂದು ಹೇಳಿದೆ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Murder Case: ಸಹೋದರಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ಕೊಲೆ ಮಾಡಿದ ತಮ್ಮ

ಸಹೋದರಿಯೊಂದಿಗೆ ಅಕ್ರಮ ಸಂಬಂಧ ಕೊಲೆಯಲ್ಲಿ ಅಂತ್ಯ

ಸಹೋದರಿಯೊಂದಿಗೆ ಅನೈತಿಕ ಸಂಬಂಧ (Immoral relationship) ಹೊಂದಿದ್ದ ವ್ಯಕ್ತಿಯನ್ನು ತಮ್ಮ ಕೊಲೆ ಮಾಡಿರುವ ಘಟನೆ ಹಾವೇರಿ (Haveri) ಜಿಲ್ಲೆಯ ರಾಣೆಬೆನ್ನೂರು (Ranebennur) ತಾಲೂಕಿನ ಚಳಗೇರಿ ಗ್ರಾಮದಲ್ಲಿ ನಡೆದಿದೆ. ಬಳಿಕ ಆರೋಪಿಯು ಪೊಲೀಸರಿಗೆ ಶರಣಾಗಿದ್ದಾನೆ. ದಿಲೀಪ್ ಹಿತ್ತಲಮನಿ (47) ಎಂಬಾತನನ್ನು ರಾಜು ಅಲಿಯಾಸ್ ರಾಜಯ್ಯ ಕೊಲೆ ಮಾಡಿದ್ದಾನೆ.

Karnataka Rains: ನಾಳೆ ಕರಾವಳಿ, ದಕ್ಷಿಣ ಒಳನಾಡು ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್;‌ ಭಾರಿ ಮಳೆ ಸಾಧ್ಯತೆ!

ನಾಳೆ ಕರಾವಳಿ, ದಕ್ಷಿಣ ಒಳನಾಡು ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್

Weather Forecast: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳು ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಸಾಧಾರಣ ಮಳೆಯಾಗುವ ಸಂಭವವಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 27°C ಮತ್ತು 20°C ಇರಲಿದೆ.

CM Siddaramaiah: ಮೈಸೂರಿನ ಅಭಿವೃದ್ಧಿಗೆ ಬಿಜೆಪಿಗಿಂತ ಹೆಚ್ಚು ಕೆಲಸ ಮಾಡಿದ್ದೇವೆ- ಸಿಎಂ ಸಿದ್ದರಾಮಯ್ಯ

ಮೈಸೂರಿನ ಅಭಿವೃದ್ಧಿಗೆ ಬಿಜೆಪಿಗಿಂತ ಹೆಚ್ಚು ಕೆಲಸ ಮಾಡಿದ್ದೇವೆ: ಸಿಎಂ

CM Siddaramaiah: ಮೈಸೂರಿನ ಅಭಿವೃದ್ಧಿಗೆ ನಾಲ್ವಡಿ ಮಹಾರಾಜರಿಗಿಂತ ಹೆಚ್ಚು ಅನುದಾನ ಕೊಟ್ಟು ಅಭಿವೃದ್ಧಿ ಮಾಡಿದ್ದು ಸಿದ್ದರಾಮಯ್ಯ ಮಾತ್ರ ಎಂದು ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ನೀಡಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಹಾಸನದಲ್ಲಿ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕಾಂಗ್ರೆಸ್ ಸರ್ಕಾರ ಮೈಸೂರಿನ ಅಭಿವೃದ್ಧಿಗೆ ಬಿಜೆಪಿಗಿಂತ ಹೆಚ್ಚು ಕೆಲಸ ಮಾಡಿದೆ ಎಂದು ಹೇಳಿದ್ದಾರೆ.

Empire Restaurant: ಎಂಪೈರ್ ಹೋಟೆಲ್‌ನ ಕಬಾಬ್ ಅಸುರಕ್ಷಿತ ಎಂದು ದೃಢ; ಬಿಬಿಎಂಪಿಯಿಂದ ನೋಟಿಸ್

ಎಂಪೈರ್ ಹೋಟೆಲ್‌ನ ಕಬಾಬ್ ಅಸುರಕ್ಷಿತ ಎಂದು ದೃಢ; ನೋಟಿಸ್ ಜಾರಿ

Chicken kebab: ಬೆಂಗಳೂರಿನ ಶಿವಾಜಿನಗರ, ಗಾಂಧಿನಗರ, ಮಹದೇವಪುರ, ಬೊಮ್ಮನಹಳ್ಳಿ, ಬಸವನಗುಡಿ, ಹೆಬ್ಬಾಳ ರೆಸ್ಟೋರೆಂಟ್‌ನಲ್ಲಿ ಸ್ಯಾಂಪಲ್ ಸಂಗ್ರಹಿಸಿ ಪರೀಕ್ಷೆ ಮಾಡಲಾಗಿದೆ. ಹೋಟೆಲ್‌ನಲ್ಲಿ ಕಬಾಬ್ ಅಸುರಕ್ಷಿತ ಎಂದು ವರದಿ ದೃಢಪಟ್ಟ ಹಿನ್ನೆಲೆಯಲ್ಲಿ ಬಿಬಿಎಂಪಿ ಆಹಾರ ಸುರಕ್ಷತಾಧಿಕಾರಿಯಿಂದ ನೋಟಿಸ್ ಜಾರಿ ಮಾಡಲಾಗಿದೆ.

DK Suresh: ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಸಂಸದರು, ಕೇಂದ್ರ ಸಚಿವರು ಹೋರಾಟ ಮಾಡಬೇಕು: ಡಿ.ಕೆ.ಸುರೇಶ್ ಆಗ್ರಹ

ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿಗೆ ಕರ್ನಾಟಕದ ಹಿತ ಬೇಕಿಲ್ಲ: ಡಿ.ಕೆ.ಸುರೇಶ್‌

DK Suresh: ಹುಬ್ಬಳ್ಳಿ- ಧಾರವಾಡ ಹಾಗೂ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಕುಡಿಯುವ ನೀರು ದೊರಕಿಸುವುದು, ಕನ್ನಡಿಗರಿಗೆ ನ್ಯಾಯ ದೊರಕಿಸಬೇಕು ಎಂದು ಇಚ್ಛಾಶಕ್ತಿ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಅವರಿಗೆ ಇದ್ದರೆ ಪ್ರಧಾನಮಂತ್ರಿಗಳಿಗೆ ಬಹಳ ಹತ್ತಿರವಿರುವ ಅವರು ಜಲಶಕ್ತಿ ಹಾಗೂ ಅರಣ್ಯ ಸಚಿವರಿಗೆ ಹೇಳಿ ಅನುಮತಿ ಕೊಡಿಸಬಹುದು. ಅವರು ಮನಸ್ಸು ಮಾಡಿದರೆ ಈ ವಿಚಾರ ದೊಡ್ಡದಲ್ಲ. ಅವರಿಗೆ ಕರ್ನಾಟಕದ ಹಿತ ಬೇಕಿಲ್ಲ. ಎಂದು ಮಾಜಿ ಸಂಸದ ಡಿ.ಕೆ. ಸುರೇಶ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Bagalkot Accident: ಬಾಗಲಕೋಟೆಯಲ್ಲಿ ಕಾರಿನ ಮೇಲೆ ಲಾರಿ ಬಿದ್ದು ಸ್ಥಳದಲ್ಲೇ ಇಬ್ಬರ ಸಾವು

ಬಾಗಲಕೋಟೆಯಲ್ಲಿ ಕಾರಿನ ಮೇಲೆ ಲಾರಿ ಬಿದ್ದು ಸ್ಥಳದಲ್ಲೇ ಇಬ್ಬರ ಸಾವು

Bagalokot News: ಬಾಗಲಕೋಟೆಯ ಸೀಮಿಕೇರಿ ಬೈ ಪಾಸ್ ಬಳಿ ಭೀಕರ ಅಪಘಾತ ಸಂಭವಿಸಿದೆ. ಬೈಕ್‌ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ ಕಾರಿನ ಮೇಲೆ ಲಾರಿ ಪಲ್ಟಿಯಾಗಿದೆ. ಇದರಿಂದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Koppala news: ಕೊಪ್ಪಳ ಗವಿಮಠದಲ್ಲಿ ನಾಗದೇವರ ಮುಂದೆ ಮುಸ್ಲಿಂ ಮಹಿಳೆಯ ಧ್ಯಾನ!

ಕೊಪ್ಪಳ ಗವಿಮಠದಲ್ಲಿ ನಾಗದೇವರ ಮುಂದೆ ಮುಸ್ಲಿಂ ಮಹಿಳೆಯ ಧ್ಯಾನ!

ಆವರಣದಲ್ಲಿ ಮೊದಲ ಬಾರಿಗೆ ಮುಸ್ಲಿಂ ಮಹಿಳೆಯೊಬ್ಬರು ಧ್ಯಾನ ಮಾಡುವುದು ಕಂಡುಬರುತ್ತಿದೆ. ಗವಿಮಠದ ಶ್ರೀಗಳು ನಿತ್ಯ ಸಂಜೆ ಹೊತ್ತಲ್ಲಿ ಕುಳಿತುಕೊಳ್ಳುವ ಜಾಗದ ಮುಂದೆಯೇ ಮಹಿಳೆ ಧ್ಯಾನ ಮಾಡುತ್ತಿದ್ದಾರೆ. ಮಾನಸಿಕ ನೆಮ್ಮದಿಗಾಗಿ ಒಟ್ಟು 11 ದಿನ ಧ್ಯಾನ ಮಾಡುವುದಾಗಿ ಹಸೀನಾ ಬೇಗಂ ಹೇಳಿದ್ದಾರೆ.

POCSO case: ಪತ್ನಿ‌ ನದಿಗೆ ತಳ್ಳಿದ ಆರೋಪ ಮಾಡಿದ ತಾತಪ್ಪನ ವಿರುದ್ಧ ಪೋಕ್ಸೋ ಕೇಸ್

ಪತ್ನಿ‌ ನದಿಗೆ ತಳ್ಳಿದ ಆರೋಪ ಮಾಡಿದ ತಾತಪ್ಪನ ವಿರುದ್ಧ ಪೋಕ್ಸೋ ಕೇಸ್

Raichur News: ಬ್ರಿಡ್ಜ್ ಮೇಲಿನಿಂದ ಪತಿಯನ್ನು ನದಿಗೆ ತಳ್ಳಿದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪತಿ ತಾತಪ್ಪ ವಿರುದ್ಧ ರಾಯಚೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲಾಗಿದೆ. ತಾತಪ್ಪ ಬಾಲ್ಯವಿವಾಹವಾಗಿರುವುದು ದೃಢಪಟ್ಟ ಹಿನ್ನಲೆಯಲ್ಲಿ ಕೇಸ್ ದಾಖಲಾಗಿದೆ.

Gold Price Today: ಸ್ವರ್ಣಪ್ರಿಯರಿಗೆ ಗುಡ್‌ನ್ಯೂಸ್‌! ಚಿನ್ನದ ದರದಲ್ಲಿ ಮತ್ತೆ ಇಳಿಕೆ

ಇಂದು ಚಿನ್ನದ ದರ ಎಷ್ಟಿದೆ? ಇಲ್ಲಿ ಚೆಕ್‌ ಮಾಡಿ

Gold Price Today on 26th July 2025: ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 50 ರೂ ಇಳಿಕೆ ಕಂಡು ಬಂದಿದೆ. ಆ ಮೂಲಕ ಆ ಮೂಲಕ 22 ಕ್ಯಾರಟ್‌ 1 ಗ್ರಾಂ ಚಿನ್ನದ ದರ 9,160 ರೂ ಗೆ ಬಂದು ನಿಂತಿದೆ. 24 ಕ್ಯಾರಟ್‌ 1 ಗ್ರಾಂ ಚಿನ್ನ 55 ರೂ ಇಳಿಕೆ ಕಂಡಿದ್ದು, 9,993 ರೂ. ಆಗಿದೆ.

Mysuru News: ಅಡಕೆ ಎಂಬ ಭಾವಿಸಿ ಜಜ್ಜಿದಾಗ ಸಿಡಿಮದ್ದು ಸ್ಫೋಟ, ಮಹಿಳೆಗೆ ತೀವ್ರ ಗಾಯ

ಅಡಕೆ ಎಂಬ ಭಾವಿಸಿ ಜಜ್ಜಿದಾಗ ಸಿಡಿಮದ್ದು ಸ್ಫೋಟ, ಮಹಿಳೆಗೆ ತೀವ್ರ ಗಾಯ

Blast: ಶುಕ್ರವಾರ ಜಮೀನಿನಿಂದ ಮನೆಗೆ ಬರುತ್ತಿದ್ದ ವೇಳೆ ರಸ್ತೆಯಲ್ಲಿ ಬಿದ್ದಿದ್ದ ವಸ್ತುವನ್ನು ಅಡಿಕೆ ಎಂದು ಭಾವಿಸಿ ಮನೆ ಮುಂದೆಯೇ ಕಲ್ಲಿನಿಂದ ಜಜ್ಜುತ್ತಿದ್ದಂತೆ ಸಿಡಿಮದ್ದು ಏಕಾಏಕಿ ಸ್ಫೋಟಗೊಂಡು ಮುಖ, ಕೈ, ಹೊಟ್ಟೆ ಭಾಗಕ್ಕೆ ತೀವ್ರ ಪೆಟ್ಟು ಬಿದ್ದು ಅಸ್ವಸ್ಥಗೊಂಡಿದ್ದಾರೆ.

Chakravarti Sulibele: ಮಲ್ಲಿಕಾರ್ಜುನ ಖರ್ಗೆಯವರನ್ನು ʼಅಯೋಗ್ಯʼ ಎಂದು ಕರೆದ ಸೂಲಿಬೆಲೆ ಮೇಲಿನ ಕೇಸ್‌ ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ಖರ್ಗೆಯವರನ್ನು ʼಅಯೋಗ್ಯʼ ಎಂದ ಸೂಲಿಬೆಲೆ ಮೇಲಿನ ಕೇಸ್‌ ಸುಪ್ರೀಂನಲ್ಲಿ ರದ್ದು

Supreme Court: ತಾನು ಅಯೋಗ್ಯ ಎಂದು ಕರೆದ ಪದವನ್ನು ಇಂಗ್ಲಿಷ್‌ನ ರ‍್ಯಾಸ್ಕಲ್‌ (ನೀಚ) ಎಂದು ಹೈಕೋರ್ಟ್‌ ತಪ್ಪಾಗಿ ಅರ್ಥೈಸಿಕೊಂಡಿದೆ. ಅಯೋಗ್ಯ ಎಂಬ ಪದ ಹಲವು ಸಮಾನಾರ್ಥಕ ಪದ ಹೊಂದಿದ್ದು ಅದಕ್ಕೆ ಸಮೀಪದ ಪದ ನಿಷ್ಪ್ರಯೋಜಕ ಎಂದು ಇದೆ ಎಂಬುದಾಗಿ ಸೂಲಿಬೆಲೆ ಸುಪ್ರೀಂ ಕೋರ್ಟ್‌ ಮುಂದೆ ವಾದಿಸಿದ್ದರು.

Self Harming: ಶಾಲೆಗೆ ಹೋಗಲು ಒತ್ತಾಯಿಸಿದ್ದಕ್ಕೆ ವಿದ್ಯಾರ್ಥಿ ಆತ್ಮಹತ್ಯೆ!

ಶಾಲೆಗೆ ಹೋಗಲು ಒತ್ತಾಯಿಸಿದ್ದಕ್ಕೆ ವಿದ್ಯಾರ್ಥಿ ಆತ್ಮಹತ್ಯೆ!

Belagavi Crime News: 8ನೇ ತರಗತಿ ಓದುತ್ತಿದ್ದ ಯಶರಾಜ ಕಳೆದ 8 ದಿನದಿಂದ ಶಾಲೆಗೆ ಹೋಗಿರಲಿಲ್ಲ. ಶಾಲೆಗೆ ಹೋಗುವಂತೆ ಒತ್ತಾಯಿಸಿದಾಗ ಕುಂಬಾರನಗರದಲ್ಲಿರುವ ಸಂಬಂಧಿಕರ ಮನೆಯಲ್ಲಿ ನೇಣು ಹಾಕಿಕೊಂಡಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Murder Case: ಅಕ್ಕನ ಪಕ್ಕಕ್ಕೆ ಬಂದು ಸಿಕ್ಕಿಹಾಕಿಕೊಂಡವನನ್ನು ಕಲ್ಲು ಎತ್ತಿ ಹಾಕಿ ಕೊಂದ ತಮ್ಮ

ಅಕ್ಕನ ಪಕ್ಕಕ್ಕೆ ಬಂದು ಸಿಕ್ಕಿಹಾಕಿಕೊಂಡವನ ಕಲ್ಲಿನಿಂದ ಜಜ್ಜಿ ಕೊಂದ ತಮ್ಮ

Haveri news: ನನ್ನ ಅಕ್ಕನಿಗೆ ಮದುವೆಯಾಗಿದೆ ಆಕೆಯ ಸಹವಾಸ ಬಿಟ್ಟು ಬಿಡು ಎಂದು ದಿಳ್ಳೆಪ್ಪನಿಗೆ ರಾಜಯ್ಯ ಹೇಳುತ್ತಲೇ ಇದ್ದ. ಆದರೆ ದಿಳ್ಳೆಪ್ಪ ಮಾತ್ರ ಕೇಳಿರಲಿಲ್ಲ. ಹೀಗಾಗಿ ನಾನೇ ಕೊಲೆ ಮಾಡಿದ್ದೇನೆ ಎಂದು ರಾಜಯ್ಯ ಪೊಲೀಸರ ಮುಂದೆ ತಪ್ಪು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Star Fashion 2025: ನೋಡುಗರ ಕಣ್ಮನ ಸೆಳೆದ ಮುದ್ದು ಸೊಸೆ ಖ್ಯಾತಿಯ ನಟಿ ಪ್ರತಿಮಾ ವೈಟ್‌ ಲೆಹೆಂಗಾ

ನೋಡುಗರ ಕಣ್ಮನ ಸೆಳೆದ ಮುದ್ದು ಸೊಸೆ ಖ್ಯಾತಿಯ ನಟಿ ಪ್ರತಿಮಾ ವೈಟ್‌ ಲೆಹೆಂಗಾ

Star Fashion 2025: ಮುದ್ದು ಸೊಸೆ ಧಾರಾವಾಹಿಯ ಮೂಲಕ ಖ್ಯಾತಿ ಗಳಿಸಿರುವ ನಟಿ ಪ್ರತಿಮಾ ಥಾಕೂರ್‌ ಧರಿಸಿರುವ ವೈಟ್‌ ಲೆಹೆಂಗಾ ನೋಡುಗರ ಕಣ್ಮನ ಸೆಳೆದಿದೆ. ಹಾಗಾದಲ್ಲಿ, ಇದ್ಯಾವ ಬಗೆಯ ಡಿಸೈನರ್‌ವೇರ್‌? ಅವರ ಲುಕ್‌ ಹೇಗಿದೆ? ಇವರಂತೆಯೇ ಸ್ಟೈಲಿಂಗ್‌ ಮಾಡುವುದು ಹೇಗೆ? ಫ್ಯಾಷನ್‌ ವಿಮರ್ಶಕರು ವಿವರಿಸಿದ್ದಾರೆ.

Actor Darshan: ಜಾಮೀನು ಟೆನ್ಷನ್‌ನಲ್ಲಿ ಥಾಯ್ಲೆಂಡ್‌ನಿಂದ ವಾಪಸಾದ ದರ್ಶನ್‌

ಜಾಮೀನು ಟೆನ್ಷನ್‌ನಲ್ಲಿ ಥಾಯ್ಲೆಂಡ್‌ನಿಂದ ವಾಪಸಾದ ದರ್ಶನ್‌

Supreme Court: ಜುಲೈ 24ರಂದು ಸುಪ್ರೀಂ ಕೋರ್ಟ್​ನಲ್ಲಿ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿದಂತೆ 7 ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ನಡೆಯಿತು. ಜಾಮೀನು ಬಗ್ಗೆ ಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿದೆ. ನಿನ್ನೆ ರಾತ್ರಿ ದರ್ಶನ್‌ ಹಾಗೂ ವಿಜಯಲಕ್ಷ್ಮಿ ಥಾಯ್ಲೆಂಡ್‌ನಿಂದ ಹಿಂದಿರುಗಿದ್ದಾರೆ.

A Khata: ಆಸ್ತಿ ಮಾಲಿಕರಿಗೆ ಸಿಹಿ ಸುದ್ದಿ; ಬಿ ಖಾತಾ ಆಸ್ತಿಗಳಿಗೆ ಎ ಖಾತಾ ನೀಡಲು ಆದೇಶ

ಆಸ್ತಿ ಮಾಲಿಕರಿಗೆ ಸಿಹಿ ಸುದ್ದಿ; ಬಿ ಖಾತಾ ಆಸ್ತಿಗಳಿಗೆ ಎ ಖಾತಾ ನೀಡಲು ಆದೇಶ

2024ರ ಸೆ.30 ರವರೆಗೆ ಬಿಬಿಎಂಪಿ ನೀಡಿರುವ ಬಿ-ಖಾತಾಗಳಿಗೆ ಎ-ಖಾತಾ ಅಥವಾ ಅಧಿಕೃತ ಖಾತಾ ನೀಡುವ ಕುರಿತು ತಿಳಿಸಲಾಗಿದೆ. ಹಲವು ವರ್ಷಗಳಿಂದ ಕಾನೂನು ಮಾನ್ಯತೆ ಇಲ್ಲದೆ ಸಮಸ್ಯೆ ಅನುಭವಿಸುತ್ತಿದ್ದ ಬಿ-ಖಾತಾದಾರರ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ಬಿ ಖಾತಾಗಳನ್ನು ಎ-ಖಾತಾ ಎಂದು ಪರಿಗಣಿಸಲು ನಿರ್ಧರಿಸಿದೆ.

Pralhad Joshi: ರಸಗೊಬ್ಬರ ವಿಚಾರದಲ್ಲಿ ಸಿಎಂ ಬರೀ ಸುಳ್ಳು ಹೇಳಿಕೆ: ಜೋಶಿ ಕಿಡಿ

ರಸಗೊಬ್ಬರ ವಿಚಾರದಲ್ಲಿ ಸಿಎಂ ಬರೀ ಸುಳ್ಳು ಹೇಳಿಕೆ: ಜೋಶಿ ಕಿಡಿ

Pralhad Joshi: ರಾಜ್ಯದಲ್ಲಿ ಪ್ರಸ್ತುತ 7.08 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಮಾರಾಟ ದಾಖಲಾಗಿದೆ. ಕೇಂದ್ರ ಸರ್ಕಾರ ಸಕಾಲಕ್ಕೆ ಸಮರ್ಪಕವಾಗಿ ರಸಗೊಬ್ಬರ ಪೂರೈಸಿದ್ದರಿಂದಲೇ ಇಷ್ಟೊಂದು ಪ್ರಮಾಣದಲ್ಲಿ ರಸಗೊಬ್ಬರ ವಹಿವಾಟು ನಡೆದಿದೆ. ವಾಸ್ತವ ಹೀಗಿರುವಾಗ ಸಿಎಂ ಸಿದ್ದರಾಮಯ್ಯ ಅವರು‌ ವಿನಾಕಾರಣ ಕೇಂದ್ರ‌ದ ಮೇಲೆ ವೃಥಾ ಆರೋಪ ಮಾಡುತ್ತಿರುವುದು ನಿಜಕ್ಕೂ ಶೋಚನೀಯ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್‌ ಜೋಶಿ ಖಂಡಿಸಿದ್ದಾರೆ.

ನಗರಸಭೆ ಅಂಗಡಿ ಮಳಿಗೆಗಳ ಬಾಡಿಗೆ ಬಾಕಿ ಅಂಗಡಿಗಳಿಗೆ ಬೀಗ ಜಡೆದ ಮುನ್ಸಿಪಾಲ್ ಕಮಿಷನರ್

ವರ್ತಕರಿಗೆ ಬಿಸಿ ಮುಟ್ಟಿಸಿದ ಮುನ್ಸಿಪಾಲ್ ಕಮಿಷನರ್

ಚಿಂತಾಮಣಿ ನಗರದ ಜೋಡಿ ರಸ್ತೆಯ ಐ ಡಿ ಎಸ್ ಎಂ ಟಿ ಮಾರುಕಟ್ಟೆಯಲ್ಲಿರುವ ನಗರ ಸಭೆಯ ಅಂಗಡಿ ಮಳಿಗೆಗಳು ಸುಮಾರು ಜನರು ಹರಾಜಿಗೆ ಪಡೆದು ಬೇರೆ ವ್ಯಕ್ತಿಗಳಿಗೆ ದುಪಟ್ಟು ಬಾಡಿಗೆಗೆ ನೀಡಿದ್ದು ಅವರು ಸಮಯಕ್ಕೆ ಸರಿಯಾಗಿ ಲಕ್ಷಾಂತರ ರೂಪಾಯಿ ಬಾಡಿಗೆ ನೀಡದೆ ತೆರಿಗೆ ಕಟ್ಟದೆ ನಿರ್ಲಕ್ಷ ಮಾಡಿದ ಹಿನ್ನೆಲೆಯಲ್ಲಿ ಈಗಾಗಲೇ ಎರಡು ಮೂರು ಬಾರಿ ನಗರಸಭೆಯಿಂದ ಎಚ್ಚರಿಕೆ ಕೊಡಲಾಗಿತ್ತು.

Chikkaballapur News: ಗ್ರಾಮ ಗ್ರಾಮಗಳಲ್ಲಿಯೂ ಮೊಳಗಿದ ಮಧುಸೂದನ ಸಾಯಿ ಜಯ ಘೋಷ

ಸದ್ಗುರು ಶ್ರೀ ಮಧುಸೂದನ ಸಾಯಿ ವರ್ಧಂತಿ ಉತ್ಸವದ ಪ್ರಯುಕ್ತ ಗ್ರಾಮ ಸೇವೆ

ನುಡಿದಂತೆ ನಡೆಯುತ್ತಾ ಪ್ರಪಂಚಕ್ಕೆ ಮಾದರಿಯಾಗಲು ತಮ್ಮ ವರ್ಧಂತಿ ಉತ್ಸವದ ಮೂಲಕ ಅನುಯಾಯಿಗಳಿಗೆ ಆದರ್ಶದ ಪಾಠವನ್ನು ಪ್ರೇಮ ಸಂದೇಶದ ಮೂಲಕ ಗ್ರಾಮ ಗ್ರಾಮಗಳಲ್ಲೂ ಬೋಧಿಸಿದರು. ಸುಮಾರು ೮೫೦ ಮಂದಿ ವಿದ್ಯಾರ್ಥಿಗಳು, ೧೫೦ ಮಂದಿ ಶಿಕ್ಷಕರು ಹಾಗೂ ಭಕ್ತರ ನ್ನೊಳಗೊಂಡ ವೃಂದವು ಗ್ರಾಮ ಸೇವೆಯನ್ನು ಅತ್ಯಂತ ಯಶಸ್ವಿಯಾಗಿ ನೆರವೇರಿಸಿತು.

Chikkaballapur News: ಡಿಸಿಸಿ- ಡಿ.ಎಲ್.ಆರ್.ಸಿ ಸಭೆಯಲ್ಲಿ ಆದ್ಯತೆ ಸಾಲ ನೀಡಬೇಕು: ಸಿ.ಇ.ಓ ಡಾ. ವೈ.ನವೀನ್ ಭಟ್

ಡಿಸಿಸಿ- ಡಿ.ಎಲ್.ಆರ್.ಸಿ ಸಭೆಯಲ್ಲಿ ಆದ್ಯತೆ ಸಾಲ ನೀಡಬೇಕು

೨೦೨೪- ೨೦೨೫ನೇ ಸಾಲಿನ ಕೃಷಿ ಸಾಲ ವಿತರಣೆಗೆ ೩೦೮೩.೫೩ ಕೋಟಿ ಗುರಿ ನೀಡಲಾಗಿದ್ದು ಆ ಪೈಕಿ ೩೮೦೮.೮೦ ಕೋಟಿ ಗುರಿ ತಲುಪಲಾಗಿದೆ. ಒಟ್ಟು  ಆದ್ಯತೆ ಸಾಲ ೪೦೪೧.೧೯ ಕೋಟಿ ಗುರಿ ನಿಗದಿ ಪಡಿಸಲಾಗಿದ್ದು ಅದರಲ್ಲಿ ೪೬೬೦.೬೭ ಕೋಟಿ ಗುರಿ ಮುಟ್ಟಲಾಗಿದೆ. ೨೦೨೫-೨೬ ನೇ ಸಾಲಿಗೆ ಕೃಷಿ ಸಾಲ ೪೨೦೮.೯೧ಕೋಟಿ ನೀಡಲು ಗುರಿ ನಿಗದಿಪಡಿಸಲಾಗಿದ್ದು ಒಟ್ಟು ಆದ್ಯತೆ ಸಾಲದ ಗುರಿಯಾಗಿ ೫೨೯೨.೭೬ ಕೋಟಿ ನೀಡುವಂತೆ ತಿಳಿಸಲಾಗಿದೆ.

Vishwavani Pustaka: ವಿಶ್ವೇಶ್ವರ ಭಟ್ಟರ 100ನೇ ಕೃತಿ ಸೇರಿದಂತೆ ವಿಶ್ವವಾಣಿ ಪುಸ್ತಕದ 8 ಕೃತಿಗಳು ಇಂದು ಬಿಡುಗಡೆ

ವಿಶ್ವೇಶ್ವರ ಭಟ್ಟರ 100ನೇ ಕೃತಿ ಸೇರಿ 8 ಕೃತಿಗಳು ಇಂದು ಬಿಡುಗಡೆ

Book Release: ಜುಲೈ 26ರಂದು ಶನಿವಾರ ಸಂಜೆ 5 ಗಂಟೆಗೆ ಬೆಂಗಳೂರಿನ ಮೈಸೂರ್ ಬ್ಯಾಂಕ್ ಸರ್ಕಲ್‌‌ನಲ್ಲಿರುವ ಎಫ್‌‌ಕೆಸಿಸಿಐ ಸಭಾಂಗಣದಲ್ಲಿ 8 ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಮತ್ತು ರಾಜ್ಯಸಭಾ ಸದಸ್ಯರಾದ ಡಾ. ಡಿ ವೀರೇಂದ್ರ ಹೆಗ್ಗಡೆ ಅವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ.

ಮಲ್ಲೇಶ್ವರಂನಲ್ಲಿ ಜು.25 ರಿಂದ ಜೋಯಾಲುಕ್ಕಾಸ್ `ಬ್ರಿಲಿಯನ್ಸ್ ಡೈಮಂಡ್ ಜ್ಯುವೆಲ್ಲರಿ ಶೋ'

ಜು.೨೫ ರಿಂದ ಜೋಯಾಲುಕ್ಕಾಸ್ `ಬ್ರಿಲಿಯನ್ಸ್ ಡೈಮಂಡ್ ಜ್ಯುವೆಲ್ಲರಿ ಶೋ'

"ಮಲ್ಲೇಶ್ವರಂ ಯಾವಾಗಲೂ ಉತ್ತಮ ಆಭರಣಗಳ ಮೇಲೆ ವಿವೇಚನಾಶೀಲ ದೃಷ್ಟಿಯನ್ನು ಹೊಂದಿದೆ. `ಬ್ರಿಲಿಯನ್ಸ್ ಡೈಮಂಡ್ ಜ್ಯುವೆಲ್ಲರಿ ಶೋ'ನೊಂದಿಗೆ, ನಾವು ಸೌಂದರ್ಯ ಮತ್ತು ಕರಕುಶಲತೆಯನ್ನು ಒಳಗೊಂಡ ಅಪೂರ್ವ ಸಂಗ್ರಹವನ್ನು ಒಟ್ಟುಗೂಡಿಸಿದ್ದೇವೆ. ಈ ಪ್ರದರ್ಶನವು ಪ್ರತ್ಯೇಕತೆ, ಸೊಬಗು ಮತ್ತು ಭಾವನೆಯನ್ನು ಸಂಭ್ರಮಾಚರಿಸುತ್ತದೆ"

ಬೀದಿ ಬದಿ ವ್ಯಾಪಾರಿಗಳಿಗೆ ಅಂಗಡಿ ಮಳಿಗೆ ನಿರ್ಮಾಣ : ಉಪಾಧ್ಯಕ್ಷ ನಾಗರಾಜ್

ಬೀದಿ ಬದಿ ವ್ಯಾಪಾರಿಗಳಿಗೆ ಅಂಗಡಿ ಮಳಿಗೆ ನಿರ್ಮಾಣ

ಎಂ.ಜಿ.ರಸ್ತೆಯ ವಿಸ್ತರಣೆಯ ಹಿನ್ನೆಲೆಯಲ್ಲಿ ಖಾಸಗಿ ಬಸ್ ನಿಲ್ದಾಣ, ಚನ್ನಯ್ಯ ಉದ್ಯಾನಕ್ಕೆ ಹೊಂದಿಕೊಂಡಂತೆ ಇರುವ ತಾತ್ಕಾಲಿಕ ತಳ್ಳು ಗಾಡಿಗಳು, ಪೆಟ್ಟಿಗೆ ಅಂಗಡಿಗಳನ್ನಿಟ್ಟುಕೊಂಡಿರುವ ಬೀದಿಬದಿಯ  ವ್ಯಾಪಾರಸ್ಥರು ಹೂವು, ಹಣ್ಣು, ಎಲೆ ಅಡಕೆ, ಸಿಹಿ ತಿಂಡಿ ತಿನಿಸು ಸೇರಿದಂತೆ ಇತರ ಸಾಮಗ್ರಿಗಳ ವಹಿವಾಟಿನ ಆದಾಯವನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ.

Loading...