ಕೆಎಸ್‌ಆರ್‌ಟಿಸಿ ಹೊಸ 115 ಬಸ್‌ಗಳಿಗೆ ಸಚಿವರಿಂದ ಹಸಿರು ನಿಶಾನೆ
45 ಸಾಮಾನ್ಯ ಬಸ್ಸುಗಳ ಜತೆಗೆ 70 ಪಲ್ಲಕ್ಕಿ ಸ್ಲೀಪರ್ ಬಸ್ಸುಗಳನ್ನು ಬಿಡಲಾಗಿದೆ. ವಿಶೇಷವಾಗಿ ದೂರ ಪ್ರಯಾಣಿಸುವ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಆಧುನಿಕ ಸೌಲಭ್ಯಗಳೊಂದಿಗೆ ಈ ಪಲ್ಲಕ್ಕಿ ಬಸ್‌ಗಳನ್ನು ವಿನ್ಯಾಸಗೊಳಿಸಲಾಗಿದೆ. ಈ ನೂತನ ಸ್ಲೀಪರ್ ಬಸ್‌ಗಳಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ವಿಶೇಷ ವಿನ್ಯಾಸ ಮಾಡಲಾಗಿದೆ.