ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕರ್ನಾಟಕ

ಆಮಿಷವೊಡ್ಡಿ 9 ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿ ಬಂಧನ

ಆಮಿಷವೊಡ್ಡಿ 9 ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ

ರಾಜ್ಯದಲ್ಲಿ ಮತ್ತೊಂದು ಬೆಚ್ಚಿ ಬೀಳಿಸುವಂತಹ ಘಟನೆ ನಡೆದಿದ್ದು, ಚಾಕೊಲೇಟ್ ನೀಡುವುದಾಗಿ ಬಾಲಕಿಯನ್ನು ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಬೆಂಗಳೂರಿನ ಆನೇಕಲ್ ಪೊಲೀಸ್ ಅಣಾ ವ್ಯಾಪ್ತಿಯಲ್ಲಿ ನಡೆದಿದೆ. ಆನೇಕಲ್ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಪೋಕ್ಸ್ ಕೇಸ್ ದಾಖಲಾಗಿದೆ.

​ಶಿರಸಿ: ಮಾರಿಕಾಂಬಾ ಜಾತ್ರಾ ಮಹೋತ್ಸವ: ಕಮತಗಿಯ ಶ್ರೀ ಗುರು ಹೊಳೆ ಹುಚ್ಚೇಶ್ವರ ನಾಟ್ಯ ಸಂಘ'ದಿಂದ ನಾಟಕ ಪ್ರದರ್ಶನ

ಕಮತಗಿಯ ಶ್ರೀ ಗುರು ಹೊಳೆ ಹುಚ್ಚೇಶ್ವರ ನಾಟ್ಯ ಸಂಘ'ದಿಂದ ನಾಟಕ ಪ್ರದರ್ಶನ

ಕಳೆದ ಬಾರಿ 'ಗಂಡನಿಗೆ ತಕ್ಕ ಹೆಂಡತಿ' ನಾಟಕದ ಮೂಲಕ ಜನಮನ ಗೆದ್ದಿದ್ದ ಈ ಸಂಸ್ಥೆಯು, ಈ ವರ್ಷ ವಿಕಾಸ ಆಶ್ರಮದ ಮೈದಾನದಲ್ಲಿ ನಿರ್ಮಿಸಲಾದ ಸುಸಜ್ಜಿತ ರಂಗಮಂದಿರದಲ್ಲಿ ತನ್ನ ಪ್ರದರ್ಶನಗಳನ್ನು ನೀಡಲಿದೆ ಎಂದು ನಾಟಕ ಸಂಘದ ಮಾಲೀಕ ಪಾಪು ಕಲ್ಲೂರ್ ಹಾಗೂ ವ್ಯವಸ್ಥಾಪಕ ಶರತ್ ತಿಳಿಸಿದರು.

ಮಗುವಿನ ಮೊದಲ ಮಾತೇ ಮಾತೃಭಾಷೆ: ತಾಲ್ಲೂಕು ಕಸಾಪ ಅಧ್ಯಕ್ಷ ಯಲುವಹಳ್ಳಿ ಸೊಣ್ಣೇಗೌಡ

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ವಿಶ್ವ ಮಾತೃಭಾಷಾ ದಿನಾಚರಣೆ

ಕನ್ನಡ ತಾಯಿ ತನ್ನ ಕಂದನೊಂದಿಗೆ ಸಂವಹನ ಮಾಡುವ ಭಾಷೆಯೇ ಮಾತೃಭಾಷೆ. ಜಗತ್ತಿನಲ್ಲಿ ಈಗ ಏಳು ಸಾವಿರಕ್ಕೂ ಹೆಚ್ಚಿನ ಭಾಷೆಗಳಿದ್ದು,ಪ್ರತಿ 30 ರಿಂದ 40 ಕಿಲೋ ಮೀಟರ್ ಗೆ ಭಾಷೆಯ ಶೈಲಿಯಲ್ಲಿ ವಿಭಿನ್ನತೆಯಿರುತ್ತದೆ. ನೂರಾರು ಭಾಷೆಗಳು ಅಳಿದು ಹೋಗಿದ್ದು, ಹಲವಾರು ಭಾಷೆಗಳು ಅಳಿವಿನಂಚಿನಲ್ಲಿವೆ.ಭಾಷೆಯೆAದೆರೆ ಅದು ಬದುಕು ಸಂಸ್ಕೃತಿಯ ಸಾರ

ಗ್ಯಾಲೇರಿಯಾ ಮಾಲ್‌ನಲ್ಲಿ ಈ ತಿಂಗಳಲ್ಲಿ ಪೋಷಕರಿಗೆ ಆಹ್ವಾನ

ಗ್ಯಾಲೇರಿಯಾ ಮಾಲ್‌ನಲ್ಲಿ ಈ ತಿಂಗಳಲ್ಲಿ ಪೋಷಕರಿಗೆ ಆಹ್ವಾನ

ಉತ್ತಮ ಗುಣಮಟ್ಟದ ರಿಯಲ್ ಎಸ್ಟೇಟ್ ಆಸ್ತಿಗಳ ಪ್ರಮುಖ ಜಾಗತಿಕ ಡೆವಲಪರ್ ಮತ್ತು ನಿರ್ವಾಹಕರಾದ ಬ್ರೂಕ್‌ಫೀಲ್ಡ್ ಪ್ರಾಪರ್ಟೀಸ್, ಯಲಹಂಕದಲ್ಲಿರುವ ತನ್ನ ಪ್ರೀಮಿಯಂ ಜೀವನಶೈಲಿ ಚಿಲ್ಲರೆ ತಾಣವಾದ ಗ್ಯಾಲೇರಿಯಾ ಮಾಲ್‌ನಲ್ಲಿ ಫೆಬ್ರವರಿಯನ್ನು ಅನುಭವಿಸಲು ಪೋಷಕರನ್ನು ಆಹ್ವಾನಿಸುತ್ತದೆ. ಸಕುರಾ ಹೂವುಗಳಿಂದ ಪ್ರೇರಿತವಾದ ಕ್ಯೋಟೋ ಲವ್ ಬ್ಲಾಸಮ್ ವಿಷಯದ ಅಲಂಕಾರದೊಂದಿಗೆ ಮಾಲ್ ಕನಸಿನ ಗುಲಾಬಿ ಸ್ವರ್ಗವಾಗಿ ರೂಪಾಂತರಗೊಳ್ಳುತ್ತದೆ

ಮಾಜಿ ಶಾಸಕ ಸುರೇಶ್ ಗೌಡ ಕಾರು ಅಪಘಾತ; ಮಣಿಪಾಲ ಆಸ್ಪತ್ರೆಗೆ  ದಾಖಲು

ಮಾಜಿ ಶಾಸಕ ಸುರೇಶ್ ಗೌಡ ಕಾರು ಅಪಘಾತ

ನಾಗಮಂಗಲದ ಜೆಡಿಎಸ್ ಮಾಜಿ ಶಾಸಕ ಸುರೇಶ್ ಗೌಡರು ಪ್ರಯಾಣಿಸುತ್ತಿದ್ದ ಕಾರು ಮಂಡ್ಯದ ಬೊಂತೆಕೊಪ್ಪಲು ಬಳಿ ಪಲ್ಟಿಯಾಗಿ ಅಪಘಾತಕ್ಕೀಡಾಗಿದೆ. ಅಪಘಾತದಲ್ಲಿ ಸುರೇಶ್ ಗೌಡರ ಕೈಗೆ ಹಾಗೂ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಕರಾವಳಿಯಲ್ಲಿ ಭಾರೀ ಮಳೆ ಎಚ್ಚರಿಕೆ; ಕೊಡಗು ಸೇರಿ 5 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​

ಕರಾವಳಿಯಲ್ಲಿ ಭಾರೀ ಮಳೆ ಎಚ್ಚರಿಕೆ

ರಾಜ್ಯದ ಹಲವೆಡೆ ಹವಾಮಾನದಲ್ಲಿ ಭಾರೀ ಬದಲಾವಣೆ ಉಂಟಾಗಿದೆ. ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಒಣಹವೆ ಇಂದೂ ಮುಂದುವರೆಯಲಿದ್ದು, ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಹಿನ್ನೆಲೆ 5 ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್​ ಸೂಚಿಸಿದೆ.

Virajpet MLA A S Ponnanna Interview: ನಾಯಕತ್ವದ ಬಗ್ಗೆ ಸಿಎಂ-ಡಿಸಿಎಂ ಮಧ್ಯೆ  ಚರ್ಚೆಯಾಗಿದೆ

ನಾಯಕತ್ವದ ಬಗ್ಗೆ ಸಿಎಂ-ಡಿಸಿಎಂ ಮಧ್ಯೆ ಚರ್ಚೆಯಾಗಿದೆ

ಕಾವೇರಿ, ಕೃಷ್ಣಾ, ಮುಡಾ, ವಾಲ್ಮೀಕಿ ಸೇರಿದಂತೆ ಅನೇಕ ಕಾನೂನು ಸಮಸ್ಯೆಗಳನ್ನು ಸುಲಭ ವಾಗಿ ಪರಿಹರಿಸಬೇಕು. ಕಠಿಣ ಮಾಡಬಾರದು. ಸಮಸ್ಯೆಗಳನ್ನು ಜನರ ಹಿತದೃಷ್ಟಿಯಿಂದ ಕಾನೂನಾತ್ಮಕಾಗಿ ನೋಡಬೇಕು. ಇದರಿಂದ ಯಾವುದೇ ಟ್ರಬಲ್ ಶೂಟ್ ಮಾಡಬಹುದು. ಆದ್ದರಿಂದ ಎಲ್ಲವನ್ನೂ ರಾಜಕೀಯವಾಗಿ ಯೋಚಿಸಬಾರದು.

ಒಗ್ಗಟ್ಟಿನ ಶಕ್ತಿ ತೋರಿಸೋಣ : ಕಾಂಗ್ರೆಸ್ ಕಾರ್ಯಕರ್ತರಿಗೆ ಪುಟು ಅಂಜಿನಪ್ಪ ಮನವಿ

ಒಗ್ಗಟ್ಟಿನ ಶಕ್ತಿ ತೋರಿಸೋಣ : ಕಾರ್ಯಕರ್ತರಿಗೆ ಪುಟು ಅಂಜಿನಪ್ಪ ಮನವಿ

ತಾಲೂಕಿನ ಎಲ್ಲಾ ಹೋಬಳಿ ಹಾಗೂ ಗ್ರಾಮಗಳ ಕಾಂಗ್ರೆಸ್ ಪದಾಧಿಕಾರಿಗಳು, ಪ್ರಮುಖರು ಮತ್ತು ಕಾರ್ಯಕರ್ತರು ಒಗ್ಗಟ್ಟಿನಿಂದ ಚಿಕ್ಕಬಳ್ಳಾಪುರಕ್ಕೆ ತೆರಳಿ ಹೋರಾಟಕ್ಕೆ ಬಲ ತುಂಬ ಬೇಕು. ಪಕ್ಷದ ತತ್ವ–ಸಿದ್ಧಾಂತಗಳ ರಕ್ಷಣೆ ಮತ್ತು ಜನಪರ ಹೋರಾಟಗಳಿಗೆ ಶಕ್ತಿ ತುಂಬುವುದು ಪ್ರತಿಯೊಬ್ಬ ಕಾರ್ಯಕರ್ತನ ಜವಾಬ್ದಾರಿ

Khadi clothing: ಸರಕಾರಿ ನೌಕರರು ತಿಂಗಳಲ್ಲಿ ಒಂದು ದಿನ ಖಾದಿ ಧರಿಸುವುದು ಕಡ್ಡಾಯ : ಜಿಲ್ಲಾಧಿಕಾರಿ ಜಿ.ಪ್ರಭು

ತಿಂಗಳಲ್ಲಿ ಒಂದು ದಿನ ಸರಕಾರಿ ನೌಕರರು ಖಾದಿ ಧರಿಸುವುದು ಕಡ್ಡಾಯ

ಕರ್ನಾಟಕ ಸರ್ಕಾರವು ತನ್ನ ನೌಕರರಿಗೆ ತಿಂಗಳಲ್ಲಿ ಒಂದು ದಿನ ಖಾದಿ ಉಡುಪು ಧರಿಸುವು ದನ್ನು ಕಡ್ಡಾಯಗೊಳಿಸಿದೆ. ಪ್ರತಿ ತಿಂಗಳ ಮೊದಲ ಶನಿವಾರ ಮತ್ತು ರಾಷ್ಟ್ರೀಯ ಹಬ್ಬ ಗಳಂದು ಖಾದಿ ಬಟ್ಟೆಗಳನ್ನು ಧರಿಸಬೇಕು. ಇದು ಸ್ವದೇಶಿ ಉತ್ಪನ್ನಗಳ ಬಗ್ಗೆ ಗೌರವ, ರಾಷ್ಟ್ರೀಯ ಭಾವನೆ ಮತ್ತು ಗ್ರಾಮೀಣ ಆರ್ಥಿಕತೆಯನ್ನು ಉತ್ತೇಜಿಸುವ ಗುರಿ ಹೊಂದಿದೆ.

ಬಜೆಟ್‌ ಬಳಿಕ ರಾಜ್ಯ ಸರ್ಕಾರ ಪತನವಾಗುವುದು ನಿಶ್ಚಿತ: ಶಾಸಕ ಯತ್ನಾಳ್‌ ಭವಿಷ್ಯ

ಬಜೆಟ್‌ ಬಳಿಕ ರಾಜ್ಯ ಸರ್ಕಾರ ಪತನವಾಗುವುದು ನಿಶ್ಚಿತ: ಶಾಸಕ ಯತ್ನಾಳ್‌

ಸಿಎಂ ಸಿದ್ದರಾಮಯ್ಯ ಅವರೇ ತಮಗೆ ಒಳಸಂಚು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಅವರಿಗೆ ಒಳಸಂಚು ಯಾರು ಮಾಡುತ್ತಾರೆ?, ಬಿಜೆಪಿಯವರು ಮಾಡುತ್ತಿದ್ದಾರಾ? ಕಾಂಗ್ರೆಸ್ ಪಾರ್ಟಿಯಲ್ಲಿಯೇ ಒಳ ಸಂಚು ಮಾಡುತ್ತಿದ್ದಾರೆ. ಡಿಕೆಶಿ ಅವರು ಎರಡೂವರೆ ವರ್ಷ ಸಿಎಂ ಆಗಬೇಕೆಂದು ಪ್ರಯತ್ನ ಮಾಡುತ್ತಿದ್ದಾರೆ ಎಂದು ಶಾಸಕ ಯತ್ನಾಳ್‌ ಟೀಕಿಸಿದ್ದಾರೆ.

Chikkaballapur News: 10 ಸಾವಿರ ಮಂದಿಗೆ ಉಚಿತ ಸೂರು ಕಲ್ಪಿಸುವ ಸಂಕಲ್ಪಕ್ಕೆ ಚಾಲನೆ ನೀಡಿದ ಸಮಾಜ ಸೇವಕ ಸಿ.ಎಂ. ಬೈರೇಗೌಡ

ಸೂರು ಕಲ್ಪಿಸುವ ಸಂಕಲ್ಪಕ್ಕೆ ಚಾಲನೆ ನೀಡಿದ ಸಿ.ಎಂ. ಬೈರೇಗೌಡ

ಅವರಿವರೆನ್ನದೆ ಮನುಷ್ಯ ಮನುಷ್ಯರಿಗೆ ನೆರವಾಗುವುದೇ ರಾಷ್ಟ್ರಕವಿ ಕುವೆಂಪು ಹೇಳುವ ಮನುಜ ಮತ ವಿಶ್ವಪಥದ ಸಂದೇಶವಾಗಿದೆ. ಇದನ್ನು ಅರ್ಥ ಅರಿತಿರುವ ನಾನು ಮತ್ತು ನಮ್ಮ ಸಮಿತಿ ಜಿಲ್ಲೆಯ 8 ತಾಲೂಕುಗಳಲ್ಲಿ ಸಂಚರಿಸಿ ಇಂದಿಗೂ ಗುಡಿಸಿಲುಗಳಲ್ಲಿ, ಟೆಂಟು ಗಳಲ್ಲಿ, ತಡಿಕೆಗಳಲ್ಲಿ, ಬಸ್ ತಂಗುದಾಣಗಳಲ್ಲಿ ಆಶ್ರಯ ಪಡೆದು ವಾಸ ಮಾಡುತ್ತಿರುವ ನಿರ್ಗತಿಕರಿಗೆ ನೆರವಾಗಲು ಮುಂದಾಗಿದ್ದೇವೆ

ಮಗಳನ್ನು ಪ್ರೀತಿಸಿ ಮದುವೆಯಾಗಿದ್ದಕ್ಕೆ ಯುವಕನ ಮನೆಗೆ ಬೆಂಕಿ ಇಟ್ಟ ಮಾವ!

ಮಗಳನ್ನು ಪ್ರೀತಿಸಿ ಮದುವೆಯಾಗಿದ್ದಕ್ಕೆ ಯುವಕನ ಮನೆಗೆ ಬೆಂಕಿ ಇಟ್ಟ ಮಾವ!

Mandya News: ಮದ್ದೂರು ತಾಲೂಕಿನ ಚುಂಚಗಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದ ಪರಿಣಾಮ ಪ್ರಾಣಾಪಾಯ ಸಂಭವಿಸಿಲ್ಲ. ಮನೆ ಸಂಪೂರ್ಣ ಭಸ್ಮವಾಗಿದ್ದು, ಮನೆಯಲ್ಲಿದ್ದ ಎಲೆಕ್ಟ್ರಾನಿಕ್ ವಸ್ತುಗಳು, ಬಟ್ಟೆ, ಅಡುಗೆ ಸಾಮಗ್ರಿಗಳು ಸುಟ್ಟು ಕರಕಲಾಗಿವೆ.

Kamalakar Bhat Case: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಜ್ಯೋತಿಷಿ ಕಮಲಾಕರ ಭಟ್ ವಿರುದ್ಧ ಮತ್ತೊಂದು ಕೇಸ್‌!

ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಕಮಲಾಕರ ಭಟ್ ವಿರುದ್ಧ ಮತ್ತೊಂದು ಕೇಸ್‌!

ವಸಂತ್ ನಾಯ್ಕ ಕೊಲೆ ಪ್ರಕರಣದಲ್ಲಿ ಜ್ಯೋತಿಷಿ ಕಮಲಾಕರ್‌ ಭಟ್, ಸುಚಿತ್ರಾ ಸೇರಿ ಐವರು ಜೈಲು ಸೇರಿದ್ದರು. ಈ ನಡುವೆ ಜ್ಯೋತಿಷಿ ವಿರುದ್ಧ ಮತ್ತೊಂದು ಕೇಸ್ ದಾಖಲಾಗಿದೆ. ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದೆ.

DK Shivakumar: ಬಿಜೆಪಿಯವರು ಅತ್ಯಂತ ಪ್ರಾಮಾಣಿಕರಲ್ಲವೇ: ಡಿ.ಕೆ. ಶಿವಕುಮಾರ್ ಲೇವಡಿ

ಬಿಜೆಪಿಯವರು ಅತ್ಯಂತ ಪ್ರಾಮಾಣಿಕರಲ್ಲವೇ: ಡಿಕೆಶಿ ಲೇವಡಿ

DK Shivakumar: ಬಿಜೆಪಿ ಶಾಸಕ ಲಂಚ ಪಡೆಯುವಾಗ ಲೋಕಾಯುಕ್ತರಿಗೆ ಸಿಕ್ಕಿ ಬಿದ್ದಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ಬಿಜೆಪಿಯವರು ಈ ದೇಶದಲ್ಲೇ ಅತ್ಯಂತ ಪ್ರಾಮಾಣಿಕರಲ್ಲವೇ ಎಂದು ಲೇವಡಿ ಮಾಡಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

ರಾಜ್ಯ ಸರ್ಕಾರದಿಂದ ಪ್ರಜಾಪ್ರಭುತ್ವದ ಕಗ್ಗೊಲೆ: ವಿಜಯೇಂದ್ರ ಕಿಡಿ

ರಾಜ್ಯ ಸರ್ಕಾರದಿಂದ ಪ್ರಜಾಪ್ರಭುತ್ವದ ಕಗ್ಗೊಲೆ: ವಿಜಯೇಂದ್ರ ಕಿಡಿ

BY Vijayendra: ಬಾಗಲಕೋಟೆಯಲ್ಲಿ ಶಿವಾಜಿ ಮಹಾರಾಜರ ಜಯಂತಿ ಸಂದರ್ಭದಲ್ಲಿ ಶಾಂತಿಯುತ ಮೆರವಣಿಗೆ ನಡೆಯುತ್ತಿತ್ತು. ಅಲ್ಲಿ ಒಂದು ಧರ್ಮದ ದೇಶದ್ರೋಹಿಗಳು ಕಲ್ಲೆಸೆದಿದ್ದಾರೆ. ಕೋಮುಗಲಭೆ ಸೃಷ್ಟಿಸುವ ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ.

ಹೇಮಾವತಿ ನಾಲೆ ಕೆಲಸ ಮುಗಿಸದಿದ್ರೆ ತಾಲೂಕಿನ ಇತರೆಲ್ಲಾ ಸರ್ಕಾರಿ ಕಾಮಗಾರಿಗಳಿಗೆ ಬ್ರೇಕ್: ಭಟ್ಟರಹಳ್ಳಿ ಮಲ್ಲಿಕಾರ್ಜುನ ಎಚ್ಚರಿಕೆ

ಹೇಮಾವತಿ ನಾಲಾ ಕಾಮಗಾರಿ ಪೂರ್ಣಗೊಳಿಸಲು ಆಗ್ರಹ

Chikkanayakanahalli News: ಹೇಮಾವತಿ ಯೋಜನೆಯಡಿ ಬಾಕಿ ಇರುವ 11 ಸೇತುವೆಗಳು ಮತ್ತು 8 ಕಿಲೋಮೀಟರ್ ಉದ್ದದ ಕಾಮಗಾರಿ ಪೂರ್ಣಗೊಂಡರೆ ಮಾತ್ರ ನವಿಲೆ ಕೆರೆಗೆ ನೀರು ಹರಿಯಲು ಸಾಧ್ಯ. ಈ ಕೆಲಸಗಳಿಗೆ ಅಗತ್ಯವಿರುವ ಅನುದಾನ ಲಭ್ಯವಿದ್ದರೂ ಹಾಗೂ ಭೂಮಿ ವಶಪಡಿಸಿಕೊಳ್ಳುವ ಪ್ರಕ್ರಿಯೆ ಪೂರ್ಣಗೊಂಡಿದ್ದರೂ ಯಾವುದೇ ತಾಂತ್ರಿಕ ಸಮಸ್ಯೆ ಇಲ್ಲದೆ ಕೆಲಸ ವಿಳಂಬವಾಗುತ್ತಿದೆ ಎಂದು ಭಟ್ಟರ ಹಳ್ಳಿ ಮಲ್ಲಿಕಾರ್ಜುನ ಆರೋಪಿಸಿದ್ದಾರೆ.

ಲಂಚ ಆರೋಪ; ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಕ್ಷಮೆ ಕೋರಿದ ಸ್ನೇಹಮಯಿ ಕೃಷ್ಣ

ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಕ್ಷಮೆ ಕೋರಿದ ಸ್ನೇಹಮಯಿ ಕೃಷ್ಣ

ಸಿಸಿಬಿ ವಿಚಾರಣೆ ಬಳಿಕ ಮಾತನಾಡಿರುವ ಸ್ನೇಹಮಯಿ ಕೃಷ್ಣ ಅವರು, ನಟೇಶ್‌ ಅವರಿಗೆ ಸಂಬಂಧಿಸಿ ಬಿಡುಗಡೆಯಾಗಿರುವ ಆಡಿಯೋ ನಿಜ, ಆದರೆ ಶಾಲಿನಿ ರಜನೀಶ್ ವಿರುದ್ಧದ ಆರೋಪ ಸುಳ್ಳು. ಮುಡಾ ಪ್ರಕರಣಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

ವಿವಿಧ ಇಲಾಖೆಗಳಲ್ಲಿನ 2.5 ಲಕ್ಷಕ್ಕೂ ಹೆಚ್ಚು ಖಾಲಿ ಹುದ್ದೆಗಳ ಭರ್ತಿಗೆ ಕ್ರಮ: ಸಿಎಂ ಭರವಸೆ

2.5 ಲಕ್ಷಕ್ಕೂ ಹೆಚ್ಚು ಖಾಲಿ ಹುದ್ದೆಗಳ ಭರ್ತಿಗೆ ಕ್ರಮ: ಸಿಎಂ ಭರವಸೆ

ಬೆಂಗಳೂರಿನ ವಸಂತ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ʼಅಭಯ ಹಸ್ತʼ ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ‌ ಕಲ್ಯಾಣ ಇಲಾಖೆ ಹಾಗೂ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ವೃಂದಗಳ ನೇಮಕಾತಿ ಆದೇಶಗಳನ್ನು ಸಿಎಂ ಸಿದ್ದರಾಮಯ್ಯ ವಿತರಿಸಿದರು.

ಸಂಗನಕಲ್ಲಿನ ಗುಡ್ಡಕ್ಕೆ ಜಿಲ್ಲಾಧಿಕಾರಿ ಚಾರಣ; ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡುವುದಾಗಿ ಭರವಸೆ

ಬಳ್ಳಾರಿಯ ಸಂಗನಕಲ್ಲಿನ ಗುಡ್ಡಕ್ಕೆ ಡಿಸಿ ನಾಗೇಂದ್ರ ಪ್ರಸಾದ್ ಚಾರಣ

Ballari News: ಬಳ್ಳಾರಿ ಜಿಲ್ಲೆಯ ಐತಿಹಾಸಿಕ ಹಾಗೂ ಸಾಂಪ್ರದಾಯಿಕ ಮಹತ್ವ ಹೊಂದಿರುವ ಪ್ರಸಿದ್ಧ ಪ್ರವಾಸಿ ತಾಣವಾದ ಸಂಗನಕಲ್ಲಿನ ಹೀರೆಗುಡ್ಡಕ್ಕೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ. ಚಾರಣ ಮಾಡಿ, ಪರಿಶೀಲನೆ ನಡೆಸಿದರು. ಈ ಕುರಿತ ವಿವರ ಇಲ್ಲಿದೆ.

5 ಲಕ್ಷ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ

ಲಂಚ ಸ್ವೀಕರಿಸುವ ವೇಳೆ ಸಿಕ್ಕಿಬಿದ್ದ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ

ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸಂಕಧಾಳ ಗ್ರಾಮದಲ್ಲಿ 1 ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆ ಬದಿಯ ತಡೆಗೋಡೆ ನಿರ್ಮಾಣ ಕಾಮಗಾರಿ ಮಂಜೂರಾಗಿದೆ. ಇದಕ್ಕಾಗಿ ಗುತ್ತಿಗೆದಾರನಿಂದ ‌ಶಾಸಕ ಚಂದ್ರು ಲಮಾಣಿ, 11 ಲಕ್ಷ ಕಮಿಷನ್‌ ನೀಡಲು ಬೇಡಿಕೆ ಇಟ್ಟಿದ್ದರು. ಈ ಪೈಕಿ 5 ಲಕ್ಷ ಹಣ ಪಡೆಯುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ.

ಎಟಿಎಂಗಳಿಗೆ ತುಂಬಬೇಕಿದ್ದ 3.40 ಕೋಟಿ ರೂ. ವಂಚನೆ; ಸಿಎಂಎಸ್ ಕಂಪನಿಯ ಇಬ್ಬರ ವಿರುದ್ಧ ಎಫ್‌ಐಆರ್‌

ಎಟಿಎಂಗೆ ತುಂಬಬೇಕಿದ್ದ 3.40 ಕೋಟಿ ರೂ. ವಂಚನೆ; ಇಬ್ಬರ ವಿರುದ್ಧ ಕೇಸ್‌

Hassan News: ಹಾಸನದಲ್ಲಿ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಎಟಿಎಂಗಳಿಗೆ ಹಣ ಹಾಕದೇ 3,40,28,200 ರೂ. ದುರುಪಯೋಗ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಸಿಎಂಎಸ್ ಕಂಪನಿಯ ಇಬ್ಬರು ಸಿಬ್ಬಂದಿ ವಿರುದ್ಧ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರೋಹಿಣಿ ಸಿಂಧೂರಿಗೆ ಹಿನ್ನಡೆ; ಮಾನನಷ್ಟ ಮೊಕದ್ದಮೆ ರದ್ದು ಕೋರಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್‌

ಮಾನನಷ್ಟ ಕೇಸ್‌ ರದ್ದು ಕೋರಿದ್ದ ರೋಹಿಣಿ ಸಿಂಧೂರಿ ಅರ್ಜಿ ವಜಾ

ಜವಾಬ್ದಾರಿಯುತ ಸ್ಥಾನದಲ್ಲಿರುವ ಐಪಿಎಸ್‌ ಅಧಿಕಾರಿ ರೂಪಾ ಅವರು ತನ್ನ ಮೇಲೆ ವೈಯಕ್ತಿಕ ಹಗೆ ಸಾಧಿಸಲು ಮಾನಸಿಕ ಸ್ಥಿಮಿತತೆ ಕಳೆದುಕೊಂಡಿರುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದನ್ನು ಆಧರಿಸಿ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಐಪಿಎಸ್‌ ಅಧಿಕಾರಿ ಡಿ ರೂಪಾ ಮೌದ್ಗಿಲ್‌ ಅವರು ಮಾನಹಾನಿ ಪ್ರಕರಣ ದಾಖಲಿಸಿದ್ದರು.

ಬಜಾಜ್ ಜನರಲ್ ಇನ್ಶೂರೆನ್ಸ್ನಿಂದ ‘ ಎನ್ಆರ್ ಇನ್ಷೂರ್ ' ಬಿಡುಗಡೆ

ಬಜಾಜ್ ಜನರಲ್ ಇನ್ಶೂರೆನ್ಸ್ನಿಂದ ‘ ಎನ್ಆರ್ ಇನ್ಷೂರ್ ' ಬಿಡುಗಡೆ

ವಿದೇಶದಲ್ಲಿ ವಾಸಿಸುತ್ತಿದ್ದರೂ, ಭಾರತದಲ್ಲಿ ಹೆಲ್ತ್ ಇನ್ಶೂರೆನ್ಸ್ ಕವರೇಜನ್ನು ನಿರ್ವಹಿಸುವುದನ್ನು ಮುಂದುವರಿಸುವ ಎನ್ಆರ್ಐಗಳಲ್ಲಿ ದೀರ್ಘಾವಧಿಯ ಅಗತ್ಯವನ್ನು ಪರಿಹರಿಸುವ ಗುರಿಯನ್ನು NRInsure ಹೊಂದಿದೆ. ಹೊಸ ಪಾಲಿಸಿಯನ್ನು ಖರೀದಿಸುವ ಸಮಯದಲ್ಲಿ ಆ್ಯಡ್-ಆನ್ ಅನ್ನು ಆಯ್ಕೆ ಮಾಡಬಹುದು, ಅರ್ಹ ಗ್ರಾಹಕರು ತಮ್ಮ ಎನ್ಆರ್ಐ/ಒಸಿಐ ಸ್ಟೇಟಸ್ ಘೋಷಿಸಿದ ನಂತರ ಮತ್ತು ನಿಗದಿತ ಡಾಕ್ಯುಮೆಂಟ್ಗಳನ್ನು ಸಲ್ಲಿಸಿದ ನಂತರ ರಿಯಾಯಿತಿ ಪಡೆಯಲು ಅನುವು ಮಾಡಿಕೊಡುತ್ತದೆ.

ಇಂಡಿಯಾವುಡ್: ವುಡ್ವರ್ಕಿಂಗ್ ಮತ್ತು ಫರ್ನಿಚರ್ ಉತ್ಪಾದನೆಯಲ್ಲಿ ಭಾರತದ ಬೆಳವಣಿಗೆಗೆ ಹೊಸ ವೇಗ

ಫರ್ನಿಚರ್ ಉತ್ಪಾದನೆಯಲ್ಲಿ ಭಾರತದ ಬೆಳವಣಿಗೆಗೆ ಹೊಸ ವೇಗ

ಇತಿಹಾಸದಲ್ಲೇ ಅತಿದೊಡ್ಡ ಆವೃತ್ತಿಯಾಗಿರುವ INDIAWOOD 2026ರಲ್ಲಿ 50ಕ್ಕೂ ಹೆಚ್ಚು ದೇಶಗಳಿಂದ 1,000ಕ್ಕೂ ಅಧಿಕ ಬ್ರಾಂಡ್ಗಳು ಭಾಗವಹಿಸಲಿವೆ. ಸುಮಾರು 90,000ಕ್ಕೂ ಹೆಚ್ಚು ಉದ್ಯಮ ವೃತ್ತಿಪರರ ಭಾಗವಹಿಸುವಿಕೆ ನಿರೀಕ್ಷಿಸಲಾಗಿದ್ದು, 85,000 ಚದರ ಮೀಟರ್ ವಿಸ್ತೀರ್ಣದಲ್ಲಿ ಪ್ರದರ್ಶನ ನಡೆಯಲಿದೆ.

Loading...