ರಾಜ್ಯಕ್ಕೆ ಡಿಕೆಶಿ ಸೇವೆ ಸಿಗಲಿ; ಹರಸಿದ ಪುತ್ತಿಗೆ ಶ್ರೀ
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DCM DKS) ಅವರು ಉಡುಪಿಗೆ ಭೇಟಿ ನೀಡಿದ್ದು ಉಡುಪಿಯ ಪುತ್ತಿಗೆ ಮಠಕ್ಕೆ ಭೇಟಿ ನೀಡಿ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಆಶೀರ್ವಾದ ಪಡೆದುಕೊಂಡರು. ಈ ವೇಳೆ ಸ್ವಾಮೀಜಿ ಅವರು ಡಿಸಿಎಂಗೆ ಆಶೀರ್ವದಿಸಿದ್ದಾರೆ.
ಧರ್ಮಸ್ಥಳ ಕ್ಷೇತ್ರದ ವಿರುದ್ಧ ಅಪಪ್ರಚಾರ ಹಾಗೂ ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿ ಜೆಡಿಎಸ್ ಇಂದು ಸತ್ಯಯಾತ್ರೆಯನ್ನು ಹಮ್ಮಿಕೊಂಡಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ನಿಖಿಲ್ ಕುಮಾರ ಸ್ವಾಮಿ ಅವರ ನೇತೃತ್ವದಲ್ಲಿ ಬೆಳಿಗ್ಗೆ ಪ್ರಾರಂಭವಾಗಿದೆ. ಈಗಾಗಲೇ ಬೆಂಗಳೂರಿನಿಂದ ಹಾಸನಕ್ಕೆ ನಿಖಿಲ್ ಕುಮಾರಸ್ವಾಮಿವರು ಹೊರಟಿದ್ದಾರೆ.
ದೇವನಹಳ್ಳಿಯಿಂದ ಮೆಜೆಸ್ಟಿಕ್‌ಗೆ ಚಲಿಸುತ್ತಿದ್ದ ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ) ಬಸ್ (ನೋಂದಣಿ ಕೆಎ-57 ಎಫ್-4029) ನಲ್ಲಿ ಪ್ರಯಾಣಿಕ ಹಾಗೂ ಕಂಡಕ್ಟರ್‌ಗೆ ಟಿಕೆಟ್‌ಗೆ ಸಂಬಂಧಿಸಿದಂತೆ ಗಲಾಟೆ ನಡೆದಿದೆ. ಈಶಾನ್ಯ ರಾಜ್ಯದ ಪ್ರಯಾಣಿಕನೊಬ್ಬನಿಗೆ ಕಂಡಕ್ಟರ್ ಕಪಾಳಮೋಕ್ಷ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ನಗರದ ಎಲ್ಲೆಡೆ 4ನೇ ದಿನದ ಗಣೇಶ ಮೂರ್ತಿ ವಿಸರ್ಜನೆ ಮಾಡಲಾಗುತ್ತಿದೆ. ಪ್ರಮುಖ ಕೆರೆ, ಕಲ್ಯಾಣಿಗಳನಲ್ಲಿ ಗಣೇಶ ಮೂರ್ತಿಯನ್ನು ಬಿಡಲಾಗುತ್ತಿದೆ. ಈ ಹಿನ್ನಲೆಯಲ್ಲಿ ನಾಳೆ ಬೆಂಗಳೂರು ಜಿಲ್ಲೆಯಾಧ್ಯಂತ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಆಗಸ್ಟ್ 31ರ ಬೆಳಗ್ಗೆ 6ಗಂಟೆಯಿಂದ ಸೆಪ್ಟೆಂಬರ್ 1ರ ಬೆಳಗ್ಗೆ 6 ಗಂಟೆವರೆಗೆ ಪೂರ್ವ ವಿಭಾಗದಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ.
Karnataka Rain News: ಸೆ.1ರವರೆಗೆ ಕರಾವಳಿಯಲ್ಲಿ ಗಂಟೆಗೆ 60 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇದ್ದು, ಈ ಅವಧಿಯಲ್ಲಿ ಮೀನುಗಾರರು ಮೇಲಿನ ಸಮುದ್ರ ಪ್ರದೇಶಗಳಿಗೆ ಹೋಗದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇನ್ನು ಇಂದು ರಾಜ್ಯದ ಯಾವ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂಬ ಕುರಿತ ಹವಾಮಾನ ವರದಿ ಇಲ್ಲಿದೆ.
ಒಂದು ಇರುವೆಯಿಂದ ಹಿಡಿದು ಬ್ರಹ್ಮನವರೆಗೆ ಎಲ್ಲರೂ ಕೆಲಸಗಳನ್ನು ಮಾಡಲೇಬೇಕು. ಯಾವ ವಿಧದ ಕಾರ್ಯಗಳಲ್ಲಿ ನಾವು ತೊಡಗಿಕೊಳ್ಳಬೇಕು ಎನ್ನುವ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಈ ಪ್ರಶ್ನೆಗೆ ಇರುವ ಉತ್ತರವೆಂದರೆ; ನಿಮಗೆ ಎಲ್ಲ ಲೌಕಿಕ ಬಂಧಗಳಿಂದ ಮುಕ್ತಿಯನ್ನು ನೀಡುವ, ಸ್ವಾರ್ಥರಹಿತವಾಗಿ ನೆರವೇರಿಸಲ್ಪಟ್ಟ ಕರ್ಮಗಳು ಮಾತ್ರ ನಿಮಗೆ ಚಿತ್ತಶುದ್ಧಿಯನ್ನು ಸಂಪಾದಿಸಲು ನೆರವಾಗಿ ತ್ವರಿತವಾಗಿ ದೇವರ ದರ್ಶನವನ್ನು ನಿಮಗೆ ಅನುಗ್ರಹಿಸುತ್ತವೆ.
ಹಿಂದಿನ ಬಿಜೆಪಿ ಸರ್ಕಾರ ನ್ಯಾ.ಸದಾಶಿವ ಆಯೋಗ ಒಳಮೀಸಲಾತಿಯನ್ನು ಲಂಬಾಣಿ, ಭೋವಿ, ಕೊರಚ, ಕೊರಮ ಸಮುದಾಯಕ್ಕೆ ಶೇ.04.5 ಘೋಷಿಸಿತ್ತು. ಆದರೆ, ಈಗಿನ ಸರ್ಕಾರ 63 ಸಮುದಾಯ ಗಳನ್ನು ಪಟ್ಟಿ ಮಾಡಿ, ಶೇ.05 ಒಳಮೀಸ ಲಾತಿ ಘೋಷಿಸಿದೆ. ಇದಕ್ಕಿಂದ ಘೋರ ಅನ್ಯಾಯ ಬೇರೊಂ ದಿಲ್ಲ. ನಮ್ಮ ಸಮುದಾಯಗಳಿಗೆ ಅನ್ಯಾಯ ಮಾಡುವ ಪಕ್ಷ, ಸರ್ಕಾರಕ್ಕೆ ನಾವು ತಕ್ಕ ಪಾಠ ಕಲಿಸುತ್ತೇವೆ
ಎಷ್ಟೋ ಜನರು ಸುಧೀರ್ಘ ಅನೇಕ ಕ್ಷೇತ್ರಗಳಲ್ಲಿ ದೊಡ್ಡ ವ್ಯಕ್ತಿಯಾಗಬೇಕು ಪ್ರಶಸ್ತಿ ಪಡೆಯಬೇಕು ಎಂದು ಕೆಲಸ ಮಾಡಿದರೂ ಆಗುವುದಿಲ್ಲ. ಡಾಕ್ಟರೇಟ್ ಪದವಿ ಪಡೆಯದೆ ವಿಫಲರಾಗುತ್ತಾರೆ. ಸಮಾಜದ ಒಬ್ಬ ಚಿಕಿತ್ಸಕನಾಗಿ ಕೆಲಸ ಮಾಡಿರುವ ಇವರು ಉನ್ನತ ಪ್ರಶಸ್ತಿ ಸಿಕ್ಕಿರುವುದು ನಮ್ಮೆಲ್ಲರ ಭಾಗ್ಯ. ಮುಂಬರುವ ದಿನಗಳಲ್ಲಿ ಸಮಾಜ ಒಗ್ಗೂಡಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ನಮ್ಮ ಸಮಾಜದಲ್ಲಿ ಶಿಕ್ಷಣ ಕೊರತೆ ಇದೆ.
ಕಳೆದ 3 ತಿಂಗಳಿಂದ ನೂತನ ಪುರಸಭೆಗೆ ಮುಖ್ಯಾಧಿಕಾರಿ ಬಂದಿದ್ದು ಯಾವ ಯಾವ ಕಾಮಗಾರಿ ಮಾಡಿದ್ದೀರಿ ಖರ್ಚು, ವೆಚ್ಚ ತಿಳಿಸಬೇಕು ಎಂದು ಪಟ್ಟು ಹಿಡಿದಾಗ ಮುಖ್ಯಾಧಿಕಾರಿ ಸಿದ್ದರಾಯ ಕಟ್ಟಿಮನಿ ಸಭೆಯ ನಂತರ ಖರ್ಚು, ವೆಚ್ಚ ಚುಕ್ತಾ ಲೆಕ್ಕಪತ್ರ ಎಲ್ಲ ತೋರಿಸುತ್ತೇನೆ. ಕೆಲ ಮುಖ್ಯ ವಿಷಯಗಳು ಚರ್ಚಿಸಿ ಠರಾವು ಮಾಡಬೇಕಾಗಿರುವದರಿಂದ ಅಡ್ಡಿಪಡಿಸಬೇಡಿ ಎಂದು ಸದಸ್ಯರಿಗೆ ಸಮಾಧಾನ ಪಡಿಸಿದರು
Snake Bite: ಬೆಂಗಳೂರು ಹೊರವಲಯದ ಬನ್ನೇರುಘಟ್ಟದ ರಂಗನಾಥ ಬಡಾವಣೆಯಲ್ಲಿ ನಡೆದಿದೆ. ಕ್ರಾಕ್ಸ್ ಚಪ್ಪಲಿಯಲ್ಲಿ ಕೊಳಕು ಮಂಡಲ ಹಾವು ಅಡಗಿರುವುದನ್ನು ಗಮನಿಸದೆ ಹಾಕಿಕೊಂಡಿದ್ದರಿಂದ ದುರಂತ ನಡೆದಿದೆ. ಮಲಗಿದ್ದ ಹಾಸಿಗೆಯ ಮೇಲೆಯೇ ಅಸ್ವಸ್ಥ ಸ್ಥಿತಿಯಲ್ಲಿ ವ್ಯಕ್ತಿ ಬಿದ್ದಿದ್ದಾಗ ಹಾವು ಕಚ್ಚಿರುವ ವಿಷಯ ಬೆಳಕಿಗೆ ಬಂದಿದೆ.
ಉಡುಪಿಯ ಬ್ರಹ್ಮಾವರ ತಾಲೂಕಿನ ಆರೂರು ಗ್ರಾಮದ ವಿದುಷಿ ದೀಕ್ಷಾ ವಿ. ನಿರಂತರ 216 ಗಂಟೆಗಳ ಕಾಲ (9 ದಿನ) ಭರತನಾಟ್ಯವನ್ನು ಪ್ರದರ್ಶಿಸಿ ಇದೀಗ ವಿಶ್ವ ದಾಖಲೆ ಬರೆದಿದ್ದಾರೆ. ಅವರಿಗೆ ಶನಿವಾರ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಪ್ರಮಾಣ ಪತ್ರವನ್ನು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನ ಏಷ್ಯಾ ಮುಖ್ಯಸ್ಥ ಮನೀಶ್ ಜಪ್ಲೊಯ್ ವಿತರಿಸಿದರು.
MB Patil: ಕನಕದಾಸರು ವೈಚಾರಿಕವಾಗಿ ರಾಮಾನುಜಾಚಾರ್ಯರ ಪ್ರಭಾವಕ್ಕೆ ಒಳಗಾಗಿ, ವ್ಯಾಸರಾಯರ ಶಿಷ್ಯರಾಗಿ ಸಾಧನೆ ಮಾಡಿದವರಾಗಿದ್ದಾರೆ. ಭಾಷೆಯ ಬಳಕೆಯಲ್ಲಿ ದಾಸಸಾಹಿತ್ಯವು ಹನ್ನೆರಡನೇ ಶತಮಾನದ ವಚನ ಸಾಹಿತ್ಯವನ್ನು ಮೇಲ್ಪಂಕ್ತಿಯಾಗಿ ಇಟ್ಟುಕೊಂಡಿದೆ. ಇದರಿಂದಾಗಿ ಸಾಮಾಜಿಕ ಪರಿವರ್ತನೆ ಸಾಧ್ಯವಾಯಿತು ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
Mysuru Dasara: ಹುಬ್ಬಳ್ಳಿಯಲ್ಲಿ ನಡೆದ ಗಣೇಶೋತ್ಸವದಲ್ಲಿ ಮಾತನಾಡಿರುವ ಮಾಜಿ ಸಂಸದ ಪ್ರತಾಪ್ ಸಿಂಹ ಅವರು, ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್‌ರಿಗೆ ಆಹ್ವಾನ ನೀಡಲಾಗಿದೆ. ಅವರ ಮೇಲೆ ನಮಗೆಲ್ಲ ಗೌರವ ಇದೆ. ಆದರೆ ಹಿಂದೂ ಧಾರ್ಮಿಕ ಶ್ರೇಷ್ಠ ಭಾವನೆಯ ಮುಕುಟವಾಗಿರುವ ದಸರಾ ಉದ್ಘಾಟನೆಯನ್ನು ಅವರ ಕೈಯ್ಯಲ್ಲಿ ಮಾಡಿಸುವ ಅವಶ್ಯಕತೆ ಇತ್ತಾ ಎಂದು ಪ್ರಶ್ನಿಸಿದ್ದಾರೆ.
ಸಾಂಪ್ರದಾಯಿಕ ಪದವಿಯೆನಿಸಿರುವ ಕಲಾಭಾಗಕ್ಕೆ ದಾಖಲಾಗುವ ವಿದ್ಯಾರ್ಥಿಗಳ ಅನುಪಾತ ವರ್ಷಾನುವಷೆ ಕ್ಷೀಣಿಸುತ್ತಿದೆ.ಎಐ ತಂತ್ರಜ್ಞಾನದ ಈ ಹೊತ್ತಿನಲ್ಲಿ ಪದವಿ ಮತ್ತು ಉನ್ನತ ಶಿಕ್ಷಣವು ತನ್ನ ಸಾಂಸ್ಥಿಕ ಚೌಕಟ್ಟನ್ನು ಮೀರಿ ಮುನ್ನಡೆಯುತ್ತಿರುವುದನ್ನು ಮನಗಂಡು ವಿದ್ಯಾರ್ಥಿಗಳನ್ನು ಸಜ್ಜು ಗೊಳಿಸುವ ಕೆಲಸವನ್ನು ಅಧ್ಯಾಪಕರು ಮಾಡಬೇಕಿದೆ.
ದೇವರಾಜ್ ಅರಸು ಎಂದೇ ಖ್ಯಾತಿ ಪಡೆದಿರುವ ಕೆ.ಎನ್ ರಾಜಣ್ಣ ಅವರ ಏಳಿಗೆ ಸಹಿಸದೆ ಸಂಪುಟ ದಿಂದ ವಜಾ ಮಾಡಿರೋದು ವಿಷಾದನೀಯ. ಇದು ಅಹಿಂದ ವರ್ಗ, ಹಿಂದುಳಿದ ವರ್ಗ ದಲಿತ ಸಮುದಾಯ ಗಳಿಗೆ ಮಾಡಿದ ಅವಮಾನ ಆಗಿರುತ್ತದೆ. ಹೀಗಾಗಿಯೇ ಜಾತಿ ಮತ ಬೇಧವಿಲ್ಲದೆ ಎಲ್ಲ ಸಂಘಟನೆಗಳ ಪದಾಧಿಕಾರಿಗಳು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.
BBMP work irregularities: ರ‍್ಯಾಂಡಮ್ ಆಯ್ಕೆ ಮೂಲಕ ಆಯ್ಕೆಯಾದ 528 ಮತ್ತು ಇತರೆ 233, ಒಟ್ಟು 761 ಪೂರ್ಣಗೊಂಡ ಕಾಮಗಾರಿಗಳ ತನಿಖೆ ನಡೆಸಿ ವಿಚಾರಣಾ ಆಯೋಗವು ಹಲವು ನ್ಯೂನತೆಗಳನ್ನು ಪತ್ತೆ ಮಾಡಿದೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ತನಿಖಾ ವರದಿಯಲ್ಲಿ ಶಿಫಾರಸು ಮಾಡಲಾಗಿದೆ.
ಇವತ್ತಿಗೂ ಈ ಗಣೇಶ ಉತ್ಸವದ ವೈಭವ ಮತ್ತು ಸಂಭ್ರಮ ಒಂದಿಷ್ಟೂ ಖದರ್ ಕಳೆದುಕೊಂಡಿಲ್ಲ. ಇಡೀ ನಗರದಲ್ಲಿ ನೂರಾರು ಕಡೆ ಮಿನಿ ಗಣೇಶನನ್ನು ಸಾರ್ವಜನಿಕವಾಗಿ ಪ್ರತಿಷ್ಠಾಪಿಸಲಾಗುತ್ತದೆ. ಆದರೆ ಹಿಂದೂ ಮಹಾಸಭಾ ಗಣಪತಿಯ ಶಕ್ತಿಯದ್ದೇ ಒಂದು ತೂಕವಾದರೆ, ಇತರೆ ಗಣಪತಿ ಗಳೆಲ್ಲವೂ ಸೇರಿ ಒಂದು ತೂಕ. ಅಷ್ಟರಮಟ್ಟಿಗೆ ಇದು ಅದ್ದೂರಿ ಮತ್ತು ಜನಾಕರ್ಷಕ ಉತ್ಸವ.