ನಾಯಿಗಳಿಂದ ಕಲಿಯಬೇಕಾದ ಪಾಠಗಳು ಇವು
ಆಚಾರ್ಯ ಚಾಣಕ್ಯರ ಪ್ರಕಾರ, ನಾಯಿ ಎಂಬ ನಿಷ್ಠಾವಂತ ಪ್ರಾಣಿಯಿಂದ ಮನುಷ್ಯರು ಹಲವು ಮಹತ್ವದ ಜೀವನ ಪಾಠಗಳನ್ನು ಕಲಿಯಬಹುದು. ನಿಷ್ಠೆ, ತೃಪ್ತಿ, ಜಾಗರೂಕತೆ ಮತ್ತು ಧೈರ್ಯ ಎಂಬ ಗುಣಗಳು ಜೀವನವನ್ನು ಯಶಸ್ವಿಯಾಗಿ ನಡೆಸಲು ಸಹಾಯ ಮಾಡುತ್ತವೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿ ಸಾಕಷ್ಟು ಸಮಸ್ಯೆಗಳನ್ನ ಎದುರಿಸು ತ್ತಿದ್ದಾರೆ. ಈ ಸಂಬಂಧ ನಮ್ಮ ಕರ್ನಾಟಕ ಸರ್ಕಾರಿ ವೈದ್ಯಕೀಯ ಅಧಿಕಾರಿಗಳ ಸಂಘದ ವತಿಯಿಂದ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಲಾಗಿತ್ತು. ಇಲಾಖೆಯ ಯಾವುದೇ ಅಧಿಕಾರಿ, ನೌಕರ ಸಿಬ್ಬಂದಿಗಳಿಗೆ 5 ವರ್ಷಗಳಿಂದ ಮುಂಬಡ್ತಿ ನೀಡಿಲ್ಲ.
ನಿವೃತ್ತ ನ್ಯಾ. ನಾಗಮೋಹನ್ ದಾಸ್ ವರದಿ(Retired Justice Nagamohan Das's report)ಯಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಲು ಜಾರಿ ಮಾಡಿರುವ ಕಾಯ್ದೆಯಲ್ಲಿ ಪರಿಶಿಷ್ಟ ಜಾತಿಗಳನ್ನು 3 ಗುಂಪುಗಳಾಗಿ ವಿಂಗಡಿಸಲಾಗಿದೆ. ಬಲಗೈ ಸಮುದಾಯವನ್ನು ಬಿ ಗುಂಪಿಗೆ ಸೇರಿಸಿ ರೋಸ್ಟರ್ ಬಿಂದುವಿನಲ್ಲಿ 9ನೇ ಸ್ಥಾನಕ್ಕೆ ಇಳಿಸಲಾಗಿದೆ.
ಯುವಕರು, ಪ್ರಜ್ಞಾವಂತರು, ರಾಜಕೀಯ ಹಿನ್ನೆಲೆ ಇಲ್ಲದ ಸಾಮಾನ್ಯನೊಬ್ಬ ಚುನಾವಣೆ ಯಲ್ಲಿ ಗೆದ್ದು ಬಂದಾಗ ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸಿದೆ ಎಂದು ತಿಳಿದಿದ್ದೆವು. ಆದರೆ ಶಾಸಕ ಪ್ರದೀಪ್ ಈಶ್ವರ್ ಜನತೆಯಿಟ್ಟಿ ನಂಬಿಕೆಯನ್ನು ಈ 3 ವರ್ಷಗಳಲ್ಲಿ ಹುಸಿ ಗೊಳಿಸಿದ್ದಾರೆ. ಶಾಸಕರಾಗುವುದಕ್ಕೂ ಮುನ್ನ ಹೆಚ್.ಎನ್.ವ್ಯಾಲಿ ನೀರಿನ ಅಪಾಯಗಳ ಬಗ್ಗೆ ವೀರಾವೇಶದಿಂದ ಆಡಿದ್ದ ಮಾತುಗಳೇಕೋ ಮರೆತಂತಿದೆ.
ಭಾರತದಲ್ಲಿ ಜೈಯೆನ್ಸ್ ಸ್ಕೈಪಾಯಿಂಟ್ ಬಿಡುಗಡೆ ಮಾಡಿರುವುದು ಹೃದಯ-ರಕ್ತನಾಳ ಸಂಬಂಧಿತ ರೋಗಗಳನ್ನು ಚಿಕಿತ್ಸೆ ನೀಡುವ ವೈದ್ಯರಿಗೆ ಮಹತ್ವದ ಪ್ರಗತಿಯನ್ನು ಸೂಚಿಸು ತ್ತದೆ. ಭಾರತದಲ್ಲಿ ಈ ರೋಗಗಳು ಇನ್ನೂ ಪ್ರಮುಖ ಸಾವಿನ ಕಾರಣಗಳಲ್ಲೊಂದಾಗಿವೆ. ಇಂದು ಅನೇಕ ರೋಗಿಗಳು ಹೆಚ್ಚುತ್ತಿರುವ ಹೈಪರ್ಟೆನ್ಷನ್, ಮಧುಮೇಹ, ಕೊಲೆಸ್ಟ್ರಾಲ್ ಮತ್ತು ಜೀವನ ಶೈಲಿ ಸಂಬಂಧಿತ ಅಪಾಯಗಳ ಕಾರಣದಿಂದ ಜೀವನದ ಆರಂಭಿಕ ಹಂತದಲ್ಲೇ ಗಂಭೀರ ತಡೆಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ
ಭಾರತ್ ಮಾತಾ ಅಭಿನಂದನ್ ಸಂಘಟನೆ ( ರಿ) ಹರಿಯಾಣ ಕರ್ನಾಟಕ ಘಟಕ ಮತ್ತು ಆಲ್ ರೌಂಡ್ ಸೋಶಿಯಲ್ ಡೆವಲಪ್ಮೆಂಟ್ ಅಸೋಸಿಯೇಷನ್ ಆರ್ಟ್ ಅಂಡ್ ಕಲ್ಚರ್ (ರಿ) ದೆಹಲಿ ಸಂಯೋಗದೊಂದಿಗೆ ಕಡಬಗೆರೆ ಕ್ರಾಸ್ ನ ಗಾಂಧಿ ವೃದ್ಧಾಶ್ರಮ ದಲ್ಲಿ, ಬೆಂಗಳೂರು ನಾರಿ ಶಕ್ತಿ ರಾಷ್ಟ್ರೀಯ ಪ್ರಶಸ್ತಿ 2026 ಮತ್ತು ಸ್ವಾಮಿ ವಿವೇಕಾನಂದ ರಾಷ್ಟ್ರೀಯ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು
DK Shivakumar: ದೇಶದ ವಿದೇಶಾಂಗ ನೀತಿ ಹಳ್ಳಹಿಡಿದಿದೆ. ಸರ್ಕಾರ ಇದರ ಬಗ್ಗೆ ತನ್ನ ನಿಲುವನ್ನು ವ್ಯಕ್ತಪಡಿಸಬೇಕು. ಸಂಸದರು ಸಹ ಇದರ ಬಗ್ಗೆ ಮಾತನಾಡಬೇಕು. ಕರ್ನಾಟಕ ಹೋಟೆಲ್ ಅಸೋಸಿಯೇಷನ್ ಅವರು ಹೋಟೆಲ್ಗಳನ್ನು ಮುಚ್ಚಲು ತೀರ್ಮಾನ ಮಾಡಿದ್ದಾರೆ. ಇದರಿಂದ ಆಸ್ಪತ್ರೆಗಳಿಗೂ ಹೊಡೆತ ಬೀಳಲಿದೆ. ಸರ್ಕಾರ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ.
ದಂತ ವೈದ್ಯರು, ಬ್ಯೂಟಿಷಿಯನ್ಗಳು, ಬ್ಯೂಟಿ ಪಾರ್ಲರ್ಗಳು, ನಕಲಿ ಕಾಸ್ಮೆಟಾಲಜಿಸ್ಟ್ಗಳು, ತರಬೇತಿ ಇಲ್ಲದ ತಂತ್ರಜ್ಞರು ಹಾಗೂ ಆಧುನಿಕ ವೈದ್ಯಕೀಯ ಪದ್ಧತಿಯಲ್ಲದ ಕೆಲವು ವೈದ್ಯರು ಕೂದಲು ಕಸಿ [ಕೂದಲು ಪ್ರತಿರೋಪಣ] ಲೇಸರ್ ಚಿಕಿತ್ಸೆ, ಇಂಜೆಕ್ಷನ್ಗಳು ಹಾಗೂ ಇತರ ಸೌಂದರ್ಯ ಚರ್ಮ ಚಿಕಿತ್ಸೆಗಳಂತಹ ಸಂಕೀರ್ಣ ವಿಧಾನಗಳನ್ನು ಸೂಕ್ತ ವೈದ್ಯಕೀಯ ತರಬೇತಿ ಇಲ್ಲದೇ ಮಾಡುತ್ತಿರುವುದು ಹೆಚ್ಚುತ್ತಿದೆ
ಕೋಮುವಾದಿ ಶಕ್ತಿಗಳನ್ನು ಸೋಲಿಸಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಪಕ್ಷದ ನಾಯಕರು ಮತ್ತು ಕಾರ್ಯಕರ್ತರ ಜೊತೆಯಲ್ಲಿ ಡಿ.ಕೆ. ಶಿವಕುಮಾರ್ ಹಗಲಿರುಳು ದುಡಿದಿದ್ದಾರೆ. ಶಿವಕುಮಾರ್ ಅವರ ಸಂಘಟನಾ ಚಾತುರ್ಯ, ಸೈದ್ಧಾಂತಿಕ ಬದ್ಧತೆ ಮತ್ತು ಕಠಿಣ ಶ್ರಮ ನಮ್ಮ ಪಕ್ಷದ ಎಲ್ಲ ಯುವನಾಯಕರಿಗೆ ಮಾದರಿಯಾದುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಅಂತರರಾಷ್ಟ್ರೀಯ ಮಹಿಳಾ ದಿನದ ಹಿನ್ನೆಲೆಯಲ್ಲಿ ಗುಣಮಟ್ಟದ ಆರೋಗ್ಯ ಮತ್ತು ಹಣಕಾಸು ಸಾಕ್ಷರತೆ ಕುರಿತು ಜನ ಜಾಗೃತಿ ಮೂಡಿಸಲಾಯಿತು. ಕ್ಯಾಮ್ಸ್ ಕರ್ನಾಟಕ ದಕ್ಷಿಣ ವಲಯ-1,2 ಮತ್ತು ಗ್ರೀನ್ಸ್ ಇನೋವೇಟರ್ ನೇತೃತ್ವದಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು ಆವಲಹಳ್ಳಿ ಯ ಕುವೆಂಪು ರಂಗ ಮಂದಿರದಲ್ಲಿ ದಕ್ಷಿಣ ವಲಯ-2ರ ಕ್ಷೇತ್ರ ಶಿಕ್ಷಣಾಧಿಕಾರಿ ಗಿರಿಜಮ್ಮ ಉದ್ಘಾಟಿಸಿದರು.
ಎಪಿಎಸ್ ಶಿಕ್ಷಣ ಸಂಸ್ಥೆಗಳಿಂದ ಅಂತರಾಷ್ಟ್ರೀಯ ಮಹಿಳಾ ದಿನವನ್ನು ಅಮಿತೋತ್ಸಾಹದಿಂದ ಆಚರಿಸಲಾಯಿತು. ಪ್ರೊ.ಎನ್.ಅನಂತಾ ಸಭಾಂಗಣದಲ್ಲಿ ಗಣ್ಯ ಅತಿಥಿಗಳು, ಟ್ರಸ್ಟಿಗಳು, ಅಧ್ಯಾ ಪಕರು ಮತ್ತು ವಿದ್ಯಾರ್ಥಿಗಳ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು. ಸಂಸ್ಕೃತ ವಿಶ್ವ ವಿದ್ಯಾಲಯದ ಕುಲಪತಿ ಅಹಲ್ಯ ಶರ್ಮಾ ಭಾಗವಹಿಸಿ ಮಹಿಳೆಯ ಸಾಧನೆಯ ಬಗ್ಗೆ ಬೆಳಕು ಚೆಲ್ಲಿದರು.
ಈಶಾನ್ಯ ಶಿಕ್ಷಕರ ಕ್ಷೇತ್ರ, ಪೂರ್ವ ಪದವೀಧರ ಕ್ಷೇತ್ರ ಹಾಗೂ ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟ ಮಾಡಿದೆ. ಇನ್ನುಳಿದ 1 ಬೆಂಗಳೂರು ಶಿಕ್ಷಕರ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಟ್ಟಿದೆ. ಯಾವ ಕ್ಷೇತ್ರ ಯಾರು ಅಭ್ಯರ್ಥಿ ಎಂಬ ಮಾಹಿತಿ ಇಲ್ಲಿ ನೀಡಲಾಗಿದೆ.
Belagavi Honey trap Case: ಆರೋಪಿ ಮಹಿಳೆಯು, ಶ್ರೀಮಂತ ವ್ಯಕ್ತಿಗಳನ್ನು ಪರಿಚಯ ಮಾಡಿಕೊಂಡು ಲಾಡ್ಜ್ಗೆ ಆಹ್ವಾನಿಸುತ್ತಿದ್ದಳು. ಲಾಡ್ಜ್ಗೆ ಬಂದ ವ್ಯಕ್ತಿಗಳಿಗೆ ಸ್ನಾನ ಮಾಡಿ ಬರುವಂತೆ ಹೇಳಿ, ಅವರು ಬಾತ್ರೂಮ್ಗೆ ಹೋದ ತಕ್ಷಣ ಹೊರಗಿನಿಂದ ಬಾಗಿಲು ಲಾಕ್ ಮಾಡಿ, ಅವರ ಹಣ, ಮೊಬೈಲ್ ಕದ್ದು ಎಸ್ಕೆಪ್ ಆಗುತ್ತಿದ್ದಳು.
DK Shivakumar: ದೇವೇಗೌಡರು ಮೇಕೆದಾಟು, ಎತ್ತಿನಹೊಳೆ ಬಗ್ಗೆ ಮಾತನಾಡುತ್ತಿದ್ದಾರೆ. ಅವರ ಪಕ್ಷದ ಸದಸ್ಯರು ಲೋಕಸಭೆಯಲ್ಲಿ ಮಾತನಾಡುವಂತೆ ಹೇಳಲಿ. ಈ ವಯಸ್ಸಿನಲ್ಲಿ ಅವರ ಮೇಲೆ ವಾಗ್ದಾಳಿ ಮಾಡುವುದು ಸರಿಯಲ್ಲ. ನನಗೆ ಇಷ್ಟವೂ ಇಲ್ಲ. ಈ ವಯಸ್ಸಿನಲ್ಲಿ ಮನಸ್ಸು ನೋಯಿಸುವುದು ಬೇಡ ಎಂದುಕೊಂಡಿರುವೆ. ಅವರೇ ಇವುಗಳಿಗೆ ಪರಿಹಾರ ಸೂಚಿಸಲಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.