ಪೌರ ಕಾರ್ಮಿಕರ ನೇಮಕಾತಿ: ಅರ್ಜಿ ಆಹ್ವಾನ
ತುಮಕೂರು ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಒಟ್ಟು 238 ಪೌರ ಕಾರ್ಮಿಕರ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ತುಮಕೂರು, ತಿಪಟೂರು ಮತ್ತು ಶಿರಾ ನಗರಸಭೆಗಳಲ್ಲಿ ನೇಮಕಾತಿ ನಡೆಯಲಿದೆ. ಯಾವುದೇ ವಿದ್ಯಾರ್ಹತೆ ಅಗತ್ಯವಿಲ್ಲ. ಕನ್ನಡ ಮಾತನಾಡಲು ತಿಳಿದಿರಬೇಕು. ಅರ್ಜಿ ಸಲ್ಲಿಸಲು ಏಪ್ರಿಲ್ 9 ಕೊನೆಯ ದಿನಾಂಕ.