ಸ್ತನ ಕ್ಯಾನ್ಸರ್ ಜಾಗೃತಿಗಾಗಿ ಅಭಿಯಾನ
ಸ್ತನ ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಆರಂಭಿಕ ಪತ್ತೆ, ಸಕಾಲಿಕ ಚಿಕಿತ್ಸೆ, ಸಬಲೀಕರಣದ ಸಂದೇಶವನ್ನು ಸಾರಲು ನಗರದಾದ್ಯಂತ ಮಹಿಳಾ ಬೈಕ್ ಸವಾರರು ಮತ್ತು ಪಿಂಕ್ ಆಟೋ ಚಾಲಕರು ಮಣಿಪಾಲ್ ಆಸ್ಪತ್ರೆ ಯಶವಂತಪುರದಿಂದ ರ‍್ಯಾಲಿ ನಡೆಸಿದರು. ಇದೇ ಸಂದರ್ಭದಲ್ಲಿ ಆಸ್ಪತ್ರೆಯ ನೂತನ ಸ್ತನ ಕ್ಯಾನ್ಸರ್ ಕ್ಲಿನಿಕ್ ಉದ್ಘಾಟಿಸಲಾಯಿತು.
 
             
         
         
         
         
         
         
         
         
         
         
         
         
         
         
         
         
         
         
         
         
         
         
        