ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕರ್ನಾಟಕ

South Indian Bank: ಸೌತ್‌ ಇಂಡಿಯನ್‌ ಬ್ಯಾಂಕ್‌ ಮೂಲಕ ಜಿಎಸ್‌ಟಿ ಪಾವತಿ ಇನ್ನಷ್ಟು ಸುಲಭ!

ಸೌತ್‌ ಇಂಡಿಯನ್‌ ಬ್ಯಾಂಕ್‌ ಮೂಲಕ ಜಿಎಸ್‌ಟಿ ಪಾವತಿ ಇನ್ನಷ್ಟು ಸುಲಭ!

ಭಾರತೀಯ ರಿಸರ್ವ್‌ ಬ್ಯಾಂಕ್‌ ಸರ್ಕಾರದ ವಹಿವಾಟುಗಳಿಗೆ ಏಜೆನ್ಸಿ ಬ್ಯಾಂಕ್‌ ಆಗಿ ಕಾರ್ಯ ನಿರ್ವಹಿ ಸಲು ಸೌತ್‌ ಇಂಡಿಯನ್‌ ಬ್ಯಾಂಕ್‌ಗೆ ಪರವಾನಿಗೆ ನೀಡಿದೆ. ಜೊತೆಗೆ ಪರೋಕ್ಷ ತೆರಿಗೆ ಸಂಗ್ರಹಿಸಲು ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ (CBIC) ಕೂಡ ಪರವಾನಿಗೆ ನೀಡಿದೆ.

ವಿಷ್ಣುವರ್ಧನ್‌ ಹುಟ್ಟುಹಬ್ಬದಂದೇ ಫ್ಯಾನ್ಸ್‌ಗೆ ಗುಡ್‌ನ್ಯೂಸ್‌ ನೀಡಿದ ಕಿಚ್ಚ ಸುದೀಪ್‌; ಅಭಿಮಾನ ಕ್ಷೇತ್ರದ ಮಾಡೆಲ್‌ ರಿಲೀಸ್‌

ವಿಷ್ಣುವರ್ಧನ್‌ ಅಭಿಮಾನ ಕ್ಷೇತ್ರದ ಮಾಡೆಲ್‌ ರಿಲೀಸ್‌ ಮಾಡಿದ ಕಿಚ್ಚ

Dr Vishnuvardhan: ಸಾಹಸಸಿಂಹ, ದಿವಂಗತ ಡಾ. ವಿಷ್ಣುವರ್ಧನ್‌ ಅವರ ಹುಟ್ಟುಹಬ್ಬದಂದು ನಟ ಕಿಚ್ಚ ಸುದೀಪ್‌ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಈ ಹಿಂದೆ ವಿಷ್ಣುವರ್ಧನ್‌ ಅಭಿಮಾನ ಕ್ಷೇತ್ರ ನಿರ್ಮಿಸುವುದಾಗಿ ಘೋಷಿಸಿದ್ದ ಅವರು ಅದರ ಮಾಡೆಲ್‌ ರಿಲೀಸ್‌ ಮಾಡಿದ್ದಾರೆ.

DK Shivakumar: ಮತದಾನದ ಹಕ್ಕು ಕಾಯೋದು ಆಯೋಗದ ಕರ್ತವ್ಯ, ಕಸಿಯುವುದಲ್ಲ ಎಂದ ಡಿ.ಕೆ. ಶಿವಕುಮಾರ್‌

ಮತದಾನದ ಹಕ್ಕು ಕಾಯೋದು ಆಯೋಗದ ಕರ್ತವ್ಯ, ಕಸಿಯುವುದಲ್ಲ: ಡಿಕೆಶಿ

DK Shivakumar: ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವಂತಹ ಪರಿಶಿಷ್ಟರು, ಅಲ್ಪಸಂಖ್ಯಾತರು, ಸಾಮಾನ್ಯ ವರ್ಗದವರು ಸೇರಿದಂತೆ ಎಲ್ಲ ಜನ ಸಾಮಾನ್ಯರ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಗಡಿ ಭಾಗದಲ್ಲಿರುವ ಬೇರೆ ರಾಜ್ಯದವರ ಹೆಸರನ್ನು ಸೇರಿಸಲಾಗಿತ್ತು. ಒಟ್ಟಾರೆ ಇದೆಲ್ಲವನ್ನೂ ಪೂರ್ವ ನಿಯೋಜಿತವಾಗಿ ಮಾಡಲಾಗಿತ್ತು. ಹೀಗಾಗಿ ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರು ಈ ವಿಚಾರವನ್ನು ಪ್ರಸ್ತಾಪಿಸಿದ್ದು, ಅವರು ಮಾಡಿರುವ ಆರೋಪಗಳೆಲ್ಲವೂ ನಿಜ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತಗಳ್ಳತನದ ಮೂಲಕ ಬಿಜೆಪಿ  ಬುಡಮೇಲುಗೊಳಿಸಿದೆ; ರಾಹುಲ್‌ ಗಾಂಧಿ ಆರೋಪಕ್ಕೆ ಸಿದ್ದರಾಮಯ್ಯ ಸಮರ್ಥನೆ

ರಾಹುಲ್‌ ಗಾಂಧಿ ಮತಗಳ್ಳತನ ಆರೋಪಕ್ಕೆ ಸಿದ್ದರಾಮಯ್ಯ ಸಮರ್ಥನೆ

CM Siddaramaiah: ಕಲಬುರಗಿಯ ಆಳಂದ ಕ್ಷೇತ್ರದಲ್ಲೂ ಮತಗಳ್ಳತನ ನಡೆದಿದೆ ಎಂದು ಕಾಂಗ್ರೆಸ್‌ ನಾಯಕ, ಸಂಸದ ಆರೋಪಿಸಿದ್ದಾರೆ. ಈ ಬಗ್ಗೆ ಎಕ್ಸ್‌ನಲ್ಲಿ ಬರೆದುಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಹುಲ್‌ ಗಾಂಧಿ ಆರೋಪವನ್ನು ಸಮರ್ಥಿಸಿಕೊಂಡಿದ್ದಾರೆ. ಈ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು ಎನ್ನುವ ವಿರ ಇಲ್ಲಿದೆ.

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ನಾಳೆ ಕರೆಂಟ್‌ ಇರಲ್ಲ

ಬೆಂಗಳೂರಿನ ಈ ಪ್ರದೇಶಗಳಲ್ಲಿ ನಾಳೆ ಕರೆಂಟ್‌ ಇರಲ್ಲ

Bengaluru Power Cut: ಬೆಂಗಳೂರಿನ ಪದ್ಮನಾಭನಗರ ಉಪಕೇಂದ್ರ ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ನಗರದ ಹಲವೆಡೆ ಸೆ.19ರಂದು ಶುಕ್ರವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಈ ಕುರಿತ ವಿವರ ಇಲ್ಲಿದೆ.

Pralhad Joshi: ರಾಹುಲ್‌ ಗಾಂಧಿ ಮಾಲೂರು ವಿಧಾನಸಭಾ ಕ್ಷೇತ್ರದ ಬಗ್ಗೆ ಏಕೆ ಮಾತನಾಡಲ್ಲ? ಜೋಶಿ ಪ್ರಶ್ನೆ

ಕಾಂಗ್ರೆಸ್ಸೇ ನಿಜವಾದ ʼವೋಟ್‌ ಚೋರಿʼ: ಜೋಶಿ ಆರೋಪ

Pralhad Joshi: ಮಾತೆತ್ತಿದರೆ ʼವೋಟ್‌ ಚೋರಿʼ ಆರೋಪ ಮಾಡುವ ರಾಹುಲ್‌ ಗಾಂಧಿ ಈಗ ಮಾಲೂರು ವಿಧಾನಸಭಾ ಕ್ಷೇತ್ರದ ಬಗ್ಗೆ ಏಕೆ ಮಾತನಾಡಲಿಲ್ಲ? ಅಲ್ಲಿ ಕಾಂಗ್ರೆಸ್‌ ಪಕ್ಷವೇ ಗೆದ್ದಿದೆ. ಇಲ್ಲಿ ನಡೆದ ಚುನಾವಣಾ ದುಷ್ಕೃತ್ಯದ ಕಾರಣ ಎರಡು ದಿನಗಳ ಹಿಂದಷ್ಟೇ ಹೈಕೋರ್ಟ್‌ ಶಾಸಕತ್ವ ಅನರ್ಹಗೊಳಿಸಿ, ಹೊಸ ಮತ ಎಣಿಕೆಗೆ ಆದೇಶಿಸಲಾಗಿದೆ. ಇನ್ನಾದರೂ ರಾಹುಲ್‌ ಗಾಂಧಿ ಬುದ್ಧಿ ಕಲಿಯಲಿ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಚಾಟಿ ಬೀಸಿದ್ದಾರೆ.

Caste Census: ರಾಜ್ಯ ಸರ್ಕಾರದ ಜಾತಿಗಣತಿಗೆ ಸಚಿವರಿಂದಲೇ ವಿರೋಧ

ಜಾತಿಗಣತಿಗೆ ಸಚಿವರಿಂದಲೇ ವಿರೋಧ

ಸಿದ್ದರಾಮಯ್ಯ ಸರ್ಕಾರದ ಮಹತ್ವಾಕಾಂಕ್ಷಿ ಜಾತಿಗಣತಿಗೆ ಸಚಿವರಿಂದಲೇ ವಿರೋಧ ವ್ಯಕ್ತವಾಗುತ್ತಿದೆ. ಗುರುವಾರ (ಸೆಪ್ಟೆಂಬರ್ 18) ನಡೆದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಮುಂದೆಯೇ ಕೆಲವು ಸಚಿವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. 331 ಹೊಸದಾಗಿ ಜಾತಿಗಳ ಸೇರ್ಪಡೆಗೆ ಆಕ್ಷೇಪ ವ್ಯಕ್ತಪಡಿಸಿದ ಕೆಲ ಸಚಿವರು, ಹೊಸ ಜಾತಿಗಳ ಸೇರ್ಪಡೆಯಿಂದ ಗೊಂದಲ ಸೃಷ್ಟಿಯಾಗಿದೆ ಎಂದಿದ್ದಾರೆ.

CT Ravi: ಚುನಾವಣಾ ಆಯೋಗಕ್ಕೆ ಪ್ರಮಾಣಪತ್ರದ ಮೂಲಕ ದೂರು ಕೊಡುತ್ತಿಲ್ಲವೇಕೆ?- ರಾಹುಲ್‌ ಗಾಂಧಿಗೆ ಸಿ.ಟಿ. ರವಿ ಪ್ರಶ್ನೆ

ರಾಹುಲ್‌ ಗಾಂಧಿಗೆ ಟಾಂಗ್‌ ಕೊಟ್ಟ ಸಿ.ಟಿ.ರವಿ

CT Ravi: ರಾಹುಲ್ ಗಾಂಧಿ ಅವರು 100ಕ್ಕೂ ಹೆಚ್ಚು ಚುನಾವಣೆಯ ನೇತೃತ್ವ ವಹಿಸಿ 8-9 ಕಡೆ ಯಶಸ್ಸು ಕಂಡಿದ್ದಾರೆ. ಸುಮಾರು ಶೇ 92ರಷ್ಟು ವೈಫಲ್ಯ ಅವರದು. ತಮ್ಮ ಚುನಾವಣಾ ವೈಫಲ್ಯವನ್ನು ಅವರು ಚುನಾವಣಾ ಆಯೋಗದ ಹೆಗಲಿಗೆ ಕಟ್ಟಲು ಹೊರಟಿದ್ದಾರಾ ಎಂದು ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಪ್ರಶ್ನಿಸಿದ್ದಾರೆ.

R Ashok: ದೇಶದಲ್ಲಿ ಅತಿ ಹೆಚ್ಚು ಅಪಹಾಸ್ಯಕ್ಕೆ ಒಳಗಾದ ವ್ಯಕ್ತಿ ರಾಹುಲ್ ಗಾಂಧಿ- ಆರ್.ಅಶೋಕ್

ರಾಹುಲ್ ಗಾಂಧಿ ಸಾಮಾನ್ಯ ಜ್ಞಾನ ಇಲ್ಲದ ವ್ಯಕ್ತಿ- ಆರ್.ಅಶೋಕ್

R Ashok: ರಾಹುಲ್ ಅವರು ಯಾರೋ ಬರೆದುಕೊಟ್ಟಿದ್ದನ್ನು ಪದೇ ಪದೇ ಹೇಳಿ ಕಳೆದ 4-5 ವರ್ಷಗಳಿಂದ ದೇಶದಲ್ಲಿ ಅತಿ ಹೆಚ್ಚು ಅಪಹಾಸ್ಯಕ್ಕೆ ಒಳಗಾದ ವ್ಯಕ್ತಿ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ.

HD Kumaraswamy: ಬೆಂಗಳೂರು ಈಗ ಗುಂಡಿಯೂರು ಆಗಿ ಕುಖ್ಯಾತಿ ಆಗುತ್ತಿರುವುದು ದುರ್ದೈವ; HDK ವಾಗ್ದಾಳಿ

ಬೆಂಗಳೂರು ಈಗ ಗುಂಡಿಯೂರು ಆಗಿ ಕುಖ್ಯಾತಿ ಆಗುತ್ತಿರುವುದು ದುರ್ದೈವ: HDK

HD Kumaraswamy: ಕಂಪನಿಗಳು ರಾಜ್ಯ ಸರ್ಕಾರದ ಮೇಲೆ ಭರವಸೆ ಕಳೆದುಕೊಂಡು ನೆರೆ ರಾಜ್ಯಗಳತ್ತ ವಲಸೆ ಹೋಗುತ್ತಿವೆ. ಆ ರಾಜ್ಯಗಳು ಇಂಥ ಸಮಯಕ್ಕೇ ಕಾಯುತ್ತಾ ರಿಯಾಯ್ತಿ ಮೇಲೆ ರಿಯಾಯ್ತಿಗಳನ್ನು ನೀಡುತ್ತಿವೆ. ಭಂಡ ಸರ್ಕಾರಕ್ಕೆ ಅರ್ಥವಾಗುತ್ತಿಲ್ಲ. ಈ ಸರ್ಕಾರದ ಪಂಚೇಂದ್ರಿಯಗಳು ನಿಷ್ಕ್ರಿಯವಾಗಿವೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Dharmasthala Case: ಬಯಲಾಯ್ತು ಬಂಗ್ಲೆಗುಡ್ಡ ರಹಸ್ಯ; ಅಸ್ಥಿಪಂಜರದ ಬಳಿ ಸಿಕ್ಕ ಐಡಿ ಕಾರ್ಡ್​​ ಗುರುತು ಪತ್ತೆ

ಬಂಗ್ಲೆಗುಡ್ಡ: ಅಸ್ಥಿಪಂಜರದ ಬಳಿ ಸಿಕ್ಕ ಐಡಿ ಕಾರ್ಡ್​​ ಗುರುತು ಪತ್ತೆ

Banglegudda Case: ಧರ್ಮಸ್ಥಳದ ಸಮೀಪದ ಬಂಗ್ಲೆಗುಡ್ಡ ಅರಣ್ಯ ಪ್ರದೇಶದಲ್ಲಿ ಮಾನವ ಅವಶೇಷ ಬಳಿ ಪತ್ತೆಯಾದ ಐಡಿ ಕಾರ್ಡ್‌ನ ರಹಸ್ಯ ಬಯಲಾಗಿದೆ. ಇದು ಯು.ಬಿ.ಅಯ್ಯಪ್ಪ (70) ಎಂಬುವರ ಐಡಿ ಕಾರ್ಡ್ ಎನ್ನುವುದು ಗೊತ್ತಾಗಿದೆ. ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಗೋಣಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮದ ನಿವಾಸಿ ಅಯ್ಯಪ್ಪ 2017ರಲ್ಲಿ ನಾಪತ್ತೆಯಾಗಿದ್ದರು.

Uttara Kannada News: ಭಟ್ಕಳ ಅರಣ್ಯದಲ್ಲಿ ಜಾನುವಾರು ಮೂಳೆ ಪತ್ತೆ ಪ್ರಕರಣ; ಇಬ್ಬರು ಆರೋಪಿಗಳ ಬಂಧನ

ಭಟ್ಕಳದಲ್ಲಿ ಜಾನುವಾರು ಮೂಳೆ ಪತ್ತೆ; ಇಬ್ಬರ ಬಂಧನ

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಬಳಿಯ ಗುಡ್ಡದಲ್ಲಿ ಜಾನುವಾರುಗಳ ರಾಶಿ ರಾಶಿ ಮೂಳೆ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಲಾಗಿದೆ. ಮಗ್ಗಂ ಕಾಲೋನಿ ನಿವಾಸಿ ಮೊಹಮ್ಮದ್ ಸಮಾನ್ ಹಾಗೂ ಚೌಥನಿ ನಿವಾಸಿ ಮೊಹಮ್ಮದ್ ರಾಹೀನ್ ಬಂಧಿತರು. ಇತರ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

ಆರೋಗ್ಯ ಮತ್ತು ಮನೆಗಳಲ್ಲಿ ಸಂತೋಷದ ಜಾಗತಿಕ ಆಂದೋಲನ ಆಚರಣೆ

ಆರೋಗ್ಯ ಮತ್ತು ಮನೆಗಳಲ್ಲಿ ಸಂತೋಷದ ಜಾಗತಿಕ ಆಂದೋಲನ ಆಚರಣೆ

1983ರಲ್ಲಿ ಅಪೋಲೋ ಪ್ರಾರಂಭವಾದಾಗ, ಅದು ಕೇವಲ ಆಸ್ಪತ್ರೆಯ ಹುಟ್ಟಾಗಿರಲಿಲ್ಲ, ಬದಲಾಗಿ ಒಂದು ಚಳುವಳಿಯ ಹುಟ್ಟಾಗಿತ್ತು. ನಾಲ್ಕು ದಶಕಗಳಲ್ಲಿ, ಆ ಚಳುವಳಿ 200 ಮಿಲಿಯನ್ ಜೀವಗಳನ್ನು ಮುಟ್ಟಿದ, 185 ರಾಷ್ಟ್ರಗಳಲ್ಲಿ ವಿಶ್ವಾಸವನ್ನು ಬೆಳೆಸಿದ ಮತ್ತು ಆರೋಗ್ಯ ರಕ್ಷಣೆಯಲ್ಲಿ ಸಾಧ್ಯವಾದ ದ್ದನ್ನು ಮರು ವ್ಯಾಖ್ಯಾನಿಸಿದ ಶಕ್ತಿಯಾಗಿ ಬೆಳೆದಿದೆ.

Dharmasthala Case: ಬಂಗ್ಲೆಗುಡ್ಡದಲ್ಲಿ ಸಿಕ್ಕ ಮಾನವ ಅವಶೇಷ ಯಾರದ್ದು? ಎಸ್‌ಐಟಿ ತಂಡ ಹೇಳಿದ್ದೇನು?

ಬಂಗ್ಲೆಗುಡ್ಡದಲ್ಲಿ ಸಿಕ್ಕ ಮಾನವ ಅವಶೇಷ ಯಾರದ್ದು?

ಧರ್ಮಸ್ಥಳ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು ವಿಶೇಷ ತನಿಖಾ ತಂಡ ಇದೀಗ ಬಂಗ್ಲೆಗುಡ್ಡೆಯಲ್ಲಿ ಶೋಧ ಕಾರ್ಯ ನಡೆಸಿದೆ. ಸೌಜನ್ಯಾ ಮಾವ ವಿಠ್ಠಲ್ ಗೌಡ ಅವರ ಹೇಳಿಕೆ ಹಿನ್ನೆಲೆಯಲ್ಲಿ ಎಸ್‌ಐಟಿ ಅಧಿಕಾರಿಗಳು 13 ಎಕ್ರೆ ವ್ಯಾಪ್ತಿಯ ಬಂಗ್ಲೆಗುಡ್ಡೆ ಕಾಡಿನಲ್ಲಿ ತನಿಖೆ ನಡೆಸಿದ್ದಾರೆ. ಈ ವೇಳೆ ಕೆಲವು ಮಾನವ ಶರೀರದ ಅವಶೇಷ, ವಿಷದ ಬಾಟಲ್‌, ಹಗ್ಗದ ತುಂಡು ಇತ್ಯಾದಿ ಪತ್ತೆಯಾಗಿದೆ.

ಟಿವಿಎಸ್ ಮೋಟಾರ್ ಕಂಪನಿ ಮತ್ತು ನಾಯ್ಸ್ ಪಯೋನೀರ್ ಭಾರತದ ಮೊದಲ ಇವಿ ಸ್ಮಾರ್ಟ್‌ವಾಚ್ ಸಂಯೋಜನೆ

ಭಾರತದ ಮೊದಲ ಇವಿ ಸ್ಮಾರ್ಟ್‌ವಾಚ್ ಸಂಯೋಜನೆ

ನೈಜ-ಸಮಯದ ಸವಾರಿ ಅಂಕಿ ಅಂಶಗಳನ್ನು ನೀಡುತ್ತದೆ: ಬ್ಯಾಟರಿ, ಟೈರ್ ಒತ್ತಡ, ಶ್ರೇಣಿ ಮತ್ತು ಸುರಕ್ಷತಾ ಎಚ್ಚರಿಕೆಗಳನ್ನು ಸರಳವಾಗಿ ವೀಕ್ಷಿಸಬಹುದಾದ ಸ್ವರೂಪದಲ್ಲಿ. ಸುರಕ್ಷಿತ ಏಪಿಐಗಳು ಮತ್ತು ಬಳಕೆದಾರರ ಅನುಮತಿಗಳ ಮೇಲೆ ನಿರ್ಮಿಸಲಾಗಿದೆ, ಭಾರತದಲ್ಲಿ ಬುದ್ಧಿವಂತ, ಸಂಪರ್ಕಿತ ಚಲನ ಶೀಲತೆಯ ಭವಿಷ್ಯವನ್ನು ಅನ್‌ಲಾಕ್ ಮಾಡುವಾಗ ಗೌಪ್ಯತೆಯನ್ನು ಖಚಿತಪಡಿಸುತ್ತದೆ.

Actor Ranjith: ಅಕ್ಕನ ವಿರುದ್ಧವೇ ಠಾಣೆ ಮೆಟ್ಟಿಲೇರಿದ ಬಿಗ್‌ ಬಾಸ್‌ ರಂಜಿತ್; ಏನಿದು ವಿವಾದ?

ಅಕ್ಕನ ವಿರುದ್ಧವೇ ಠಾಣೆ ಮೆಟ್ಟಿಲೇರಿದ ಬಿಗ್‌ ಬಾಸ್‌ ರಂಜಿತ್

ಬಿಗ್‌ ಬಾಸ್‌ ಕನ್ನಡ ರಿಯಾಲಿಟಿ ಶೋ ವೇಳೆ ದೊಡ್ಮನೆಯಲ್ಲಿ ಕಿರಿಕ್‌ ಮಾಡಿಕೊಂಡಿದ್ದ ನಟ ರಂಜಿತ್ ಇದೀಗ ತಮ್ಮ ಮನೆಯಲ್ಲೇ ಜಗಳವಾಡಿದ್ದಾರೆ. ಆಸ್ತಿ ವಿಚಾರಕ್ಕೆ ಸಂಬಂಧಿಸಿ ಗಲಾಟೆ ನಡೆದಿದೆ. ಸದ್ಯ ಅವರು ಮತ್ತು ಸಹೋದರಿ ಜಗಳ ಮಾಡುತ್ತಿರುವ ವಿಡಿಯೊ ಹೊರ ಬಂದಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಎಐ ತಂತ್ರಜ್ಞಾನದಿಂದ ಹಬ್ಬಗಳು ಇನ್ನಷ್ಟು ಸ್ಮಾರ್ಟ್ ಮತ್ತು ಸಿಹಿ!

ಎಐ ತಂತ್ರಜ್ಞಾನದಿಂದ ಹಬ್ಬಗಳು ಇನ್ನಷ್ಟು ಸ್ಮಾರ್ಟ್ ಮತ್ತು ಸಿಹಿ!

ಪಾರಂಪರಿಕ ಪೂಜೆಯಿಂದ ಹಿಡಿದು ಆಫೀಸ್ ಪಾರ್ಟಿಗಳವರೆಗೆ—ಹಬ್ಬದ ಉಡುಪು ಆಯ್ಕೆ ಕೆಲವೊಮ್ಮೆ ತಲೆಕೆಡಿಸಬಹುದು. ಎಐ ಉಪಕರಣಗಳು ನಿಮ್ಮ wardrobe ಅನ್ನು ವಿಶ್ಲೇಷಿಸಿ, ಮಿಕ್ಸ್ & ಮ್ಯಾಚ್ ಆಯ್ಕೆಗಳು ನೀಡಬಹುದು ಅಥವಾ ಟ್ರೆಂಡಿಂಗ್ ಸ್ಟೈಲ್‌ಗಳನ್ನು ಪುನರ್‌ಸೃಜಿಸಲು ಸಲಹೆ ನೀಡ ಬಹುದು. ನೀವು ಸಾಂಪ್ರದಾಯಿಕ ಸೀರೆ ಆಯ್ಕೆ ಮಾಡುತ್ತಿದ್ದೀರಾ ಅಥವಾ ಫ್ಯೂಷನ್ ಲುಕ್‌ಗಾಗಿ ಹೋಗುತ್ತಿದ್ದೀರಾ

Sirsi News: ಅತೀ ಹೆಚ್ಚು ಅಡಕೆ ವಿಕ್ರಿ: 20 ಕೋಟಿ ರೂ. ಅಧಿಕ ಲಾಭ

ಅತೀ ಹೆಚ್ಚು ಅಡಕೆ ವಿಕ್ರಿ: 20 ಕೋಟಿ ರೂಪಾಯಿಗೂ ಅಧಿಕ ಲಾಭ

ಈ ಸಾರಿ ನಮ್ಮ ಅಡಿಕೆ ಅಂಗಳದಲ್ಲಿ ಅತೀ ಹೆಚ್ಚು ಅಡಕೆ ವಿಕ್ರಿಯಾಗಿದ್ದು ದಾಖಲೆ ನಿರ್ಮಿಸಿದ್ದಲ್ಲದೇ 20 ರೋಟಿ ರೂಪಾಯಿಗೂ ಅಧಿಕ ಲಾಭವನ್ನು ಟಿ ಎಸ್ ಎಸ್ ಗಳಿಸಿದೆ ಎಂದು ಸಂಸ್ಥೆಯ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಹೇಳಿದರು. ಇಂದು ಟಿಎಸ್ ಎಸ್ ನ ಸಭಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಮಾಹಿತಿ ನೀಡಿದರು.

Elevated Corridor: ಬೆಂಗಳೂರಿನ ಆಕಾಶದಲ್ಲಿ 110 ಕಿ.ಮೀ ಉದ್ದದ ಕಾರಿಡಾರ್!‌ 18,000 ಕೋಟಿ ವೆಚ್ಚದ ಯೋಜನೆಗೆ ಡಿಪಿಆರ್

ಬೆಂಗಳೂರಿನ ಆಕಾಶದಲ್ಲಿ 110 ಕಿ.ಮೀ ಉದ್ದದ ಕಾರಿಡಾರ್!‌ 18,000 ಕೋಟಿ ವೆಚ್ಚ

Bengaluru: ಬೆಂಗಳೂರಿನಾದ್ಯಂತ ಚಲಿಸುವ ಈ ಕಾರಿಡಾರ್‌ಗೆ ಭೂಸ್ವಾಧೀನಕ್ಕಾಗಿ ರೂ 3,000 ಕೋಟಿ ಸೇರಿದಂತೆ ರೂ 18,000 ಕೋಟಿ ವೆಚ್ಚವನ್ನು ಅಂದಾಜಿಸಲಾಗಿದೆ. ಡಿಪಿಆರ್ ಅನ್ನು ಸೆಪ್ಟೆಂಬರ್ 25ರೊಳಗೆ ಅನುಮೋದನೆಗಾಗಿ ರಾಜ್ಯ ಸರ್ಕಾರಕ್ಕೆ ಕಳುಹಿಸುವ ನಿರೀಕ್ಷೆಯಿದೆ. ಅನುಮೋದನೆ ಪಡೆದ ನಂತರ, ಯೋಜನೆಯು 25 ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

CM Siddaramaiah: ಸಿಎಂ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಕಮೆಂಟ್‌, ಭದ್ರಾವತಿ ವ್ಯಕ್ತಿ ಮೇಲೆ ದೂರು

ಸಿಎಂ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಕಮೆಂಟ್‌, ವ್ಯಕ್ತಿ ಮೇಲೆ ದೂರು

ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಿದ್ದ ವ್ಯಕ್ತಿಯೊಬ್ಬರ ವಿರುದ್ಧ ಭದ್ರಾವತಿ (Bhadravathi) ನಗರದಲ್ಲಿ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದಾರೆ. ಷಡಾಕ್ಷರಿ ಎಂಬವರ ಫೇಸ್‌ಬುಕ್ ಖಾತೆಯಿಂದ ಸಿದ್ದರಾಮಯ್ಯ ಅವರ ವಿಡಿಯೊವೊಂದಕ್ಕೆ ಕಮೆಂಟ್ ಮಾಡಲಾಗಿತ್ತು.

Banu mushtaq: ಬಾನು ಮುಷ್ತಾಕ್‌ರಿಂದ ಮೈಸೂರು ದಸರಾ ಉದ್ಘಾಟನೆ; ಹೈಕೋರ್ಟ್‌ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

ಬಾನು ಮುಷ್ತಾಕ್‌ರಿಂದ ಮೈಸೂರು ದಸರಾ ಉದ್ಘಾಟನೆ; ಸುಪ್ರೀಂ ಕೋರ್ಟ್‌ಗೆ ಅರ್ಜಿ

Mysuru Dasara: ದಸರಾ ಉತ್ಸವದ ಉದ್ಘಾಟನೆಗೆ ಹಿಂದೂಯೇತರ ವ್ಯಕ್ತಿಯನ್ನು ಆಹ್ವಾನಿಸುವ ಕರ್ನಾಟಕ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸುತ್ತಿದ್ದೇವೆ. ಈ ಕಾರ್ಯಕ್ರಮ ಸೆಪ್ಟೆಂಬರ್ 22ರಂದು ನಿಗದಿಯಾಗಿದ್ದು, ಅದಕ್ಕಾಗಿಯೇ ನಾವು ತುರ್ತು ವಿಚಾರಣೆಗೆ ವಿನಂತಿಸುತ್ತಿದ್ದೇವೆ ಎಂದು ವಕೀಲರು ಸುಪ್ರೀಂ ಪೀಠದ ಮುಂದೆ ವಾದಿಸಿದ್ದಾರೆ.

Gold Rate Today: ಚಿನ್ನದ ದರದಲ್ಲಿ ಭಾರೀ ಇಳಿಕೆ; ಇಂದಿನ ರೇಟ್‌ ಚೆಕ್‌ ಮಾಡಿ

ಚಿನ್ನದ ದರದಲ್ಲಿ ಮತ್ತೆ ಇಳಿಕೆ; ಇಂದಿನ ರೇಟ್‌ ಚೆಕ್‌ ಮಾಡಿ

Gold price today on 18th Sep 2025: 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ ಇಂದು 50ರೂ ಇಳಿಕೆಯಾಗಿ , 10,190 ರೂ.ಗೆ ತಲುಪಿದೆ. ಇನ್ನು 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 54ರೂ. ಇಳಿಕೆಯಾಗಿ 11,117 ರೂ ಆಗಿದೆ. ಆ ಮೂಲಕ 22 ಕ್ಯಾರಟ್‌ನ 8 ಗ್ರಾಂ ಚಿನ್ನ81,520 ರೂ. ಬಾಳಿದರೆ, 10 ಗ್ರಾಂಗೆ ನೀವು 1,01,900 ರೂ. ಹಾಗೂ 100 ಗ್ರಾಂಗೆ 10,19,000 ರೂ. ನೀಡಬೇಕಾಗುತ್ತದೆ.

Murder Case: ಕೆಲಸ ನೀಡಿದ ಮಹಿಳೆಯನ್ನೇ ಕಲ್ಲಿನಿಂದ ಜಜ್ಜಿ ಸಾಯಿಸಿದ ಅಪ್ರಾಪ್ತ!

ಕೆಲಸ ನೀಡಿದ ಮಹಿಳೆಯನ್ನೇ ಕಲ್ಲಿನಿಂದ ಜಜ್ಜಿ ಸಾಯಿಸಿದ ಅಪ್ರಾಪ್ತ!

Hassan Crime: ಈಕೆಯನ್ನು ಹತ್ಯೆಗೈದ ಬಾಲಕ ಚಿಕ್ಕಂದಿನಲ್ಲಿದ್ದಾಗಲೇ ತಂದೆ-ತಾಯಿಯನ್ನು ಕಳೆದುಕೊಂಡು, ಮೀನಾಕ್ಷಮ್ಮ ಅವರ ಮನೆಯಲ್ಲಿ ಮನೆಗೆಲಸ ಮಾಡಿಕೊಂಡಿದ್ದ. ಸೆ.15ರಂದು ಬಾಲಕ ಮೀನಾಕ್ಷಮ್ಮ ಜೊತೆಗೆ ಜಗಳ ತೆಗೆದಿದ್ದಾನೆ. ನಂತರ ಆಕೆಯ ತಲೆಗೆ ಕಲ್ಲಿನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ.

ನವೆಂಬರ್‌ನಲ್ಲಿ 'ಸಮಾಜಮುಖಿ ಸಾಹಿತ್ಯ ಸಂಭ್ರಮ': ಸಾಹಿತ್ಯಾಸಕ್ತರಿಗೆ ಮುಕ್ತ ಆಹ್ವಾನ

'ಸಮಾಜಮುಖಿ ಸಾಹಿತ್ಯ ಸಂಭ್ರಮ':ಸಾಹಿತ್ಯಾಸಕ್ತರಿಗೆ ಮುಕ್ತ ಆಹ್ವಾನ

ಕಳೆದ ಎಂಟು ವರ್ಷಗಳಿಂದ 'ಸಮಾಜಮುಖಿ ಪ್ರಕಾಶನ' ಮತ್ತು ಅದರ ಸಹ ಸಂಸ್ಥೆಗಳು ಕನ್ನಡ ಸಾಹಿತ್ಯ, ಸಂಸ್ಕೃತಿ ಮತ್ತು ವೈಚಾರಿಕ ಚಿಂತನೆಗೆ ಮಹತ್ವದ ಕೊಡುಗೆ ನೀಡುತ್ತಾ ಬಂದಿವೆ. ಈ ಹಿನ್ನೆಲೆ ಯಲ್ಲಿ, ಪ್ರಚಲಿತ ಸಾಹಿತ್ಯ ಸಮ್ಮೇಳನಗಳ ರಾಜಕೀಯ ಹಸ್ತಕ್ಷೇಪ ಮತ್ತು ವಾಣಿಜ್ಯೀಕರಣದಿಂದ ಭಿನ್ನವಾದ, ಕೇವಲ ಸಾಹಿತ್ಯಿಕ ಮೌಲ್ಯಗಳಿಗೆ ಆದ್ಯತೆ ನೀಡುವ ಸಮ್ಮೇಳನ ಆಯೋಜಿಸಲಾಗುತ್ತಿದೆ.

Loading...