ಅಂಬೇಡ್ಕರ್-ಗಾಂಧಿ ಪುತ್ಥಳಿ ಅನಾವರಣ
ಸರ್ವ ದಾರ್ಶನಿಕರ ಜಯಂತಿ ಕಾರ್ಯಕ್ರಮವು ಯಾವುದೇ ಒಂದು ನಿರ್ದಿಷ್ಟ ಸಮುದಾಯಕ್ಕೆ ಸೀಮಿತವಾಗದೆ, ಸಮಸ್ತ ದಾರ್ಶನಿಕರು, ಸಮಾಜ ಸುಧಾರಕರು ಮತ್ತು ಮಹಾತ್ಮರ ಜಯಂತಿ ಗಳನ್ನು ಒಟ್ಟಾಗಿ ಆಚರಿಸುವ ಒಂದು ವೇದಿಕೆಯಾಗಿದೆ. ಬುದ್ದ, ದೇವರ ದಾಸಿಮಯ್ಯ, ಬಸವಣ್ಣ, ಡಾ.ಬಿ.ಆರ್.ಅಂಬೇಡ್ಕರ್, ಮಹರ್ಷಿ ವಾಲ್ಮಿಕಿ, ಕನಕದಾಸರು ಸೇರಿದಂತೆ ಹಲವು ಮಹನೀಯರ ಆದರ್ಶ ಮತ್ತು ಸಂದೇಶಗಳನ್ನು ಈ ಸಂದರ್ಭದಲ್ಲಿ ಸ್ಮರಿಸಲಾಗುವುದು.